Tag: Kadri

  • ಚಂದ್ರಗ್ರಹಣ ಎಫೆಕ್ಟ್ – ಮಂಗಳೂರಿನ ಕದ್ರಿ ದೇಗುಲದಲ್ಲಿ ಭಕ್ತಸಾಗರ

    ಚಂದ್ರಗ್ರಹಣ ಎಫೆಕ್ಟ್ – ಮಂಗಳೂರಿನ ಕದ್ರಿ ದೇಗುಲದಲ್ಲಿ ಭಕ್ತಸಾಗರ

    ಮಂಗಳೂರು: ಇಂದು ಚಂದ್ರಗ್ರಹಣ (Lunar Eclipse) ಹಿನ್ನೆಲೆ ದೇವಸ್ಥಾನಗಳಲ್ಲಿ ಭಕ್ತಸಾಗರ ಹರಿದುಬರುತ್ತಿದೆ. ಅದೇ ರೀತಿ ಮಂಗಳೂರಿನ (Mangaluru) ಕದ್ರಿ (Kadri) ದೇಗುಲದಲ್ಲಿ ಗ್ರಹಣ ಹಿನ್ನೆಲೆ ದೇವರ ದರ್ಶನ ಮತ್ತು ವಿಶೇಷ ಪೂಜೆ ಸಲ್ಲಿಕೆಗಾಗಿ ಭಕ್ತರ ದಂಡೇ ಆಗಮಿಸುತ್ತಿದೆ.

    ಕದ್ರಿ ಶ್ರೀ ಮಂಜುನಾಥ ದೇಗುಲದ (Kadri Shree Manjunatha Temple) ಏಳು ಕೆರೆಗಳಲ್ಲಿ ತೀರ್ಥ ಸ್ನಾನ ಮಾಡಿ ಕಾಶಿ ತೀರ್ಥದಲ್ಲಿ ಮಿಂದು ದೇವರಿಗೆ ಪೂಜೆ ಸಲ್ಲಿಸುವ ಸಲುವಾಗಿ ಭಕ್ತರು ಆಗಮಿಸುತ್ತಿದ್ದಾರೆ. ವಾರಾಂತ್ಯ ಹಾಗೂ ಗ್ರಹಣ ಹಿನ್ನೆಲೆ ಭಕ್ತರು ಬರುತ್ತಿದ್ದು, ಗ್ರಹಣ ಪ್ರಾಯಶ್ಚಿತಕ್ಕಾಗಿ ದೇವರಿಗೆ ಎಣ್ಣೆ ಹಾಗೂ ಧಾನ್ಯವನ್ನು ಸಮರ್ಪಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಪ್ರತಿಯೊಬ್ಬರ ನಡೆ ಕೂಡ ನಮಗೆ ಗೊತ್ತಿದೆ- ಶಾಸಕರಿಗೆ ಡಿಕೆಶಿ ಖಡಕ್ ಎಚ್ಚರಿಕೆ

    ಕದ್ರಿ ಸೇರಿದಂತೆ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯದಲ್ಲೂ ಜನಜಂಗುಳಿ ಸೇರಿದ್ದು, ಧರ್ಮಸ್ಥಳದಲ್ಲಿ ದೇವರ ದರ್ಶನ ಯಥಾಸ್ಥಿತಿ ಇದ್ದರೂ ಭಕ್ತ ಸಾಗರ ಹರಿದುಬರುತ್ತಿದೆ. ಕುಕ್ಕೆಯಲ್ಲಿ ಮಾತ್ರ ಇಂದು ದೇವರ ದರ್ಶನ ಸಮಯದಲ್ಲಿ ಬದಲಾವಣೆ ಆಗಿದೆ. ರಾತ್ರಿಯ ಮಹಾಪೂಜೆ ಸಂಜೆ 6:30ಕ್ಕೆ ಮುಕ್ತಾಯವಾಗಲಿದೆ. ಇಂದು ಸಂಜೆ 6:30ರ ಬಳಿಕ ದೇವರ ದರ್ಶನ ಬಂದ್ ಆಗಲಿದ್ದು, ಸಂಜೆಯ ಆಶ್ಲೇಷಾ ಬಲಿ ಹಾಗೂ ರಾತ್ರಿಯ ಅನ್ನದಾನ ಸೇವೆಯೂ ಬಂದ್ ಮಾಡಲಾಗಿದೆ. ಇದನ್ನೂ ಓದಿ: ನೆಹರು ತಾರಾಲಯದಲ್ಲಿ ಬ್ಲಡ್ ಮೂನ್ ಗ್ರಹಣ ವೀಕ್ಷಣೆಗೆ ಅವಕಾಶ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕರಾವಳಿಯಲ್ಲಿ ಝಳಪಿಸಿದ ತಲ್ವಾರ್ – ಬೈಕಿನಲ್ಲಿ ಹೋಗ್ತಿದ್ದ ಯುವಕನ ಮೇಲೆ ದಾಳಿ

    ಕರಾವಳಿಯಲ್ಲಿ ಝಳಪಿಸಿದ ತಲ್ವಾರ್ – ಬೈಕಿನಲ್ಲಿ ಹೋಗ್ತಿದ್ದ ಯುವಕನ ಮೇಲೆ ದಾಳಿ

    ಮಂಗಳೂರು: ರಾತ್ರಿ ಕುಟುಂಬದ ಜೊತೆ ಬೈಕಿನಲ್ಲಿ ಹೋಗುತ್ತಿದ್ದ ಯುವಕನ ತಲ್ವಾರ್ ನಿಂದ ದಾಳಿ ನಡೆಸಿರುವ ಘಟನೆ ಮಂಗಳೂರಿನ ಫಳ್ನೀರ್ ಬಳಿ ನಡೆದಿದೆ.

    30 ವರ್ಷದ ನೌಷಾದ್ ಹಲ್ಲೆಗೊಳಗಾದ ಯುವಕ. ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಕದ್ರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

    ನವೆಂಬರ್ 15ರಂದು ಗುರುಪುರದ ಕೈಕಂಬ ಬಳಿಯ ಕಂದಾವರ ಮಸೀದಿ ಹತ್ತಿರ ಅಬ್ದುಲ್ ಅಜೀಜ್ ಎಂಬವರ ಕೊಲೆಗೆ ಯತ್ನ ನಡೆದಿತ್ತು. ಮಸೀದಿಯ ಕಮಿಟಿ ವಿಚಾರದ ಹಿನ್ನೆಲೆ ಮೂವರು ಯುವಕರು ಅಬ್ದುಲ್ ಅಜೀಜ್ ಮೇಲೆ ಕೊಲೆ ಯತ್ನ ನಡೆದಿತ್ತು. ಇದೀಗ ಅಬ್ದುಲ್ ಅಜೀಜ್ ಅವರ ಮಗಳ ಪತಿಯಾಗಿರುವ ನೌಷಾದ್ ಮೇಲೆ ದುಷ್ಕರ್ಮಿಗಳು ತಲ್ವಾರ್ ಬೀಸಿದ್ದಾರೆ.

  • ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ- ನೆಲಕ್ಕೆ ಬಿದ್ದ ಯುವತಿಯನ್ನು ಧರಧರನೇ ಎಳೆದೊಯ್ದ!

    ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ- ನೆಲಕ್ಕೆ ಬಿದ್ದ ಯುವತಿಯನ್ನು ಧರಧರನೇ ಎಳೆದೊಯ್ದ!

    – ಯುವತಿಯನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಖಾದರ್
    – ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಮಂಗಳೂರು: ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ಕಾರಿನಡಿ ಸಿಲುಕಿದ ಯುವತಿಯನ್ನು ಧರಧರನೇ ಎಳೆದೊಯ್ದ ಭೀಕರ ಘಟನೆ ನಗರದ ಕದ್ರಿ ಕಂಬಳದಲ್ಲಿ ನಡೆದಿದೆ.

    ಅಪಘಾತದ ಭೀಕರತೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾರಿನಡಿ ಸಿಲುಕಿದ್ದ ಯುವತಿಯನ್ನು ಕೂಡಲೇ ಮಾಜಿ ಸಚಿವ ಯು.ಟಿ ಖಾದರ್ ಅವರು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮೆರೆದಿದ್ದಾರೆ.

    ನಡೆದಿದ್ದೇನು?
    ಯುವತಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದು, ಕಾರು ಬಂದು ಡಿಕ್ಕಿಯಾಗಿದೆ. ಕಾರು ದ್ವಿಚಕ್ರ ವಾಹನಕ್ಕೆ ಗುದ್ದಿದ ರಭಸಕ್ಕೆ ಯುವತಿ ಹಾರಿ ಕಾರಿನ ಎದುರು ಬಿದ್ದಿದ್ದಾಳೆ. ಈ ವೇಳೆ ಕಾರು ಆಕೆಯನ್ನು ಧರಧರನೇ ಎಳೆದುಕೊಂಡು ಮುಂದೆ ಚಲಿಸಿದೆ.

    ಘಟನೆ ನಡೆದ ತಕ್ಷಣ ಸ್ಥಳೀಯರು ಮತ್ತು ಆ ಮಾರ್ಗವಾಗಿ ಬರುತ್ತಿದ್ದ ಪೊಲೀಸ್ ಸಿಬ್ಬಂದಿ ಕಾರನ್ನು ಮೇಲಕ್ಕೆತ್ತಿ ಅಡಿಗೆ ಬಿದ್ದಿದ್ದ ಯುವತಿಯನ್ನು ಹೊರಗಡೆ ತೆಗೆದಿದ್ದಾರೆ. ಯುವತಿಯ ತಲೆಗೆ ಮತ್ತು ಪಕ್ಕೆಲುಬುಗಳಿಗೆ ತೀವ್ರ ಗಾಯಗಳಾಗಿದೆ. ಇದೇ ಮಾರ್ಗವಾಗಿ ಬರುತ್ತಿದ್ದ ಶಾಸಕ ಯು.ಟಿ ಖಾದರ್ ಕೂಡಲೇ ಗಂಭೀರ ಗಾಯಗೊಂಡ ಯುವತಿಯನ್ನು ತಮ್ಮ ಕಾರಿನಲ್ಲಿ ಹಾಕಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

    ಯುವತಿ ಕಾರಿನಡಿಗೆ ಬಿದ್ದರೂ ಕಾರನ್ನು ಚಲಾಯಿಸಿದ ಕಾರು ಚಾಲಕನ ವಿರುದ್ಧ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವತಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಕಾರು ಚಾಲಕನ ವಿರುದ್ಧ ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅದ್ಧೂರಿಯಾಗಿ ನಡೆಯಿತು ಮಂಗಳೂರಿನ ಕದ್ರಿ ಜಾತ್ರಾ ಮಹೋತ್ಸವ!

    ಅದ್ಧೂರಿಯಾಗಿ ನಡೆಯಿತು ಮಂಗಳೂರಿನ ಕದ್ರಿ ಜಾತ್ರಾ ಮಹೋತ್ಸವ!

    ಮಂಗಳೂರು: ಕರಾವಳಿಯ ಪ್ರಸಿದ್ಧ ಕ್ಷೇತ್ರ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವರ್ಷಾವಧಿ ಉತ್ಸವವು ಸಡಗರದಿಂದ ನಡೆಯಿತು.

    ಉತ್ಸವ ಪ್ರಯುಕ್ತ ಕ್ಷೇತ್ರದ ಅಂಗಣದಲ್ಲಿ ವಿಶೇಷ ರಥೋತ್ಸವ ಜರಗಿತು. ದೇವಸ್ಥಾನದ ಪರಂಪರೆಯಂತೆ ಜೋಗಿ ಮಠದ ನಿರ್ಮಲಾನಂದ ಸ್ವಾಮೀಜಿ ಉತ್ಸವದ ನೇತೃತ್ವ ವಹಿಸಿದ್ದರು. ಮಂಜುನಾಥ ದೇವರನ್ನು ರಥದಲ್ಲಿ ಕೂರಿಸಿದರೆ, ಸ್ವಾಮೀಜಿ ಕುದುರೆಯಲ್ಲಿ ಕುಳಿತು ರಥೋತ್ಸವ ವೀಕ್ಷಣೆ ಮಾಡಿದರು.

    ಸಾವಿರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು. ಇಲ್ಲಿನ ಏಳು ಕೆರೆಗಳಲ್ಲಿ ಮಿಂದರೆ ಗಂಗೆಯಲ್ಲಿ ತೀರ್ಥ ಸ್ನಾನ ಮಾಡಿದಷ್ಟೇ ಶ್ರೇಷ್ಠ ಎಂಬ ಪ್ರತೀತಿ ಇರುವುದರಿಂದ ಕದ್ರಿ ಮಂಜುನಾಥ ಕ್ಷೇತ್ರ ತೀರ್ಥ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಂತೂರು ಸರ್ಕಲ್‍ನಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ- ಮುಂಜಾಗೃತಾ ಕ್ರಮವಾಗಿ ರಸ್ತೆ ಬಂದ್

    ನಂತೂರು ಸರ್ಕಲ್‍ನಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ- ಮುಂಜಾಗೃತಾ ಕ್ರಮವಾಗಿ ರಸ್ತೆ ಬಂದ್

    ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಘಟನೆ ಮಂಗಳೂರಿನ ನಂತೂರು ಸರ್ಕಲ್ ಬಳಿ ಇಂದು ಮುಂಜಾನೆ 3 ಗಂಟೆ ಸುಮಾರಿಗೆ ನಡೆದಿದೆ.

    ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಗ್ಯಾಸ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಟ್ಯಾಂಕರ್ ನಿಂದ ಗ್ಯಾಸ್ ಸೋರಿಕೆಯಾಗದ ಹಿನ್ನೆಲೆ ಯಾವುದೇ ಪ್ರಾಣಾಪಾಯವಾಗಿಲ್ಲ. ಘಟನೆಯಿಂದಾಗಿ ಚಾಲಕನಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಗ್ಯಾಸ್ ಸೋರಿಕೆಯಾಗಬಹುದು ಎಂದು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ರಸ್ತೆ ಬಂದ್ ಮಾಡಿಸಿದ್ದಾರೆ. ಕದ್ರಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಹೊಸ ವರ್ಷದ ಪಾರ್ಟಿಯಲ್ಲಿ ಮದ್ಯ ಸೇವಿಸಿ ಡ್ರೈವಿಂಗ್- ಮಂಗ್ಳೂರಲ್ಲಿ ಕಾರ್ ಪಲ್ಟಿ

    ಹೊಸ ವರ್ಷದ ಪಾರ್ಟಿಯಲ್ಲಿ ಮದ್ಯ ಸೇವಿಸಿ ಡ್ರೈವಿಂಗ್- ಮಂಗ್ಳೂರಲ್ಲಿ ಕಾರ್ ಪಲ್ಟಿ

    ಮಂಗಳೂರು: ಹೊಸವರ್ಷದ ಪಾರ್ಟಿಯ ಗುಂಗಿನಲ್ಲಿ ಅತಿ ವೇಗವಾಗಿ ಚಲಾಯಿಸಿಕೊಂಡು ಹೋದ ಕಾರು ಪಲ್ಟಿಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ನಗರದ ವಿವಿಧೆಡೆ ಹೊಸವರ್ಷದ ಪಾರ್ಟಿ ನಡೆದಿದ್ದು, ಮದ್ಯಪಾನ ಮಾಡಿ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಂಪ್ ವೆಲ್ ಬಳಿ ಪಲ್ಟಿಯಾಗಿದೆ.

    ಕಾರಿನಲ್ಲಿದ್ದ ಐದು ಜನರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೊಸ ವರ್ಷದ ಮೊದಲ ದಿನದ ಕೆಲವೇ ನಿಮಿಷಗಳಲ್ಲಿ ಅಪಘಾತ ನಡೆದಿರೋದು ವಿಪರ್ಯಾಸವಾಗಿದೆ.

    ಸ್ಥಳಕ್ಕೆ ಕದ್ರಿ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಪಲ್ಟಿಯಾದ ಕಾರನ್ನು ಪೊಲೀಸರು ಕ್ರೇನ್ ಮೂಲಕ ಮೇಲಕ್ಕೆ ಎತ್ತಿದ್ದಾರೆ.

  • ಕದ್ರಿ ದೇವಸ್ಥಾನದ ಧ್ವನಿವರ್ಧಕದಲ್ಲಿ ಶ್ಲೋಕ ನಿಲ್ಲಿಸಲು ಸಿದ್ಧತೆ- ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ

    ಕದ್ರಿ ದೇವಸ್ಥಾನದ ಧ್ವನಿವರ್ಧಕದಲ್ಲಿ ಶ್ಲೋಕ ನಿಲ್ಲಿಸಲು ಸಿದ್ಧತೆ- ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ

    ಮಂಗಳೂರು: ಅನ್ಯಧರ್ಮೀಯರೊಬ್ಬರ ಮನವಿ ಮೇರೆಗೆ ಮಂಗಳೂರಿನ ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಧ್ವನಿವರ್ಧಕದಲ್ಲಿ ಹಾಕುವ ಶ್ಲೋಕವನ್ನು ನಿಲ್ಲಿಸಲು ಸಿದ್ಧತೆ ನಡೆಸುತ್ತಿರೋದು ಬೆಳಕಿಗೆ ಬಂದಿದೆ.

    ನಗರದ ಕದ್ರಿ ದೇವಸ್ಥಾನದಲ್ಲಿ ವಿಶೇಷ ದಿನಗಳಲ್ಲಿ ಶ್ಲೋಕ ಮತ್ತು ಭಕ್ತಿಗೀತೆಗಳನ್ನು ಹಾಕುತ್ತಿದ್ದು, ಇದರಿಂದ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಬ್ಲೇನಿ ಡಿಸೋಜಾ ಮಂಗಳೂರು ಮೇಯರ್ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಿಗೆ ಮನವಿ ಮಾಡಿದ್ದಾರೆ. ದೇವಸ್ಥಾನದ ಧ್ವನಿವರ್ಧಕದಿಂದ ಸ್ಥಳೀಯ ಫ್ಲ್ಯಾಟ್ ಗಳಲ್ಲಿ ನೆಲೆಸುವವರಿಗೆ ತೊಂದರೆಯಾಗುತ್ತಿದ್ದು, ದೇವಸ್ಥಾನದ ಒಳಭಾಗಕ್ಕೆ ಕೇಳಿಸುವಂತೆ ಮಾತ್ರ ಹಾಕಲು ಮನವಿ ಮಾಡಿದ್ದಾರೆ ಎನ್ನಲಾಗಿದೆ.

    ಆರು ತಿಂಗಳ ಹಿಂದೆ ಬ್ಲೇನಿ ಡಿಸೋಜಾ ಸೇರಿದಂತೆ ಕೆಲವರು ಸಲ್ಲಿಸಿದ್ದ ಮನವಿಗೆ ಇದೀಗ ಮುಜರಾಯಿ ಇಲಾಖೆಯಿಂದ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಇದು ಹಿಂದೂ ಸಂಘಟನೆಗಳನ್ನು ಕೆರಳಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

    ಜನರ ಶ್ರದ್ಧಾ ಭಕ್ತಿಯ ಕೇಂದ್ರವಾದ ಕದ್ರಿಯ ದೇವಸ್ಥಾನದಲ್ಲಿ ಹಾಕುವ ಶ್ಲೋಕ, ಭಕ್ತಿಗೀತೆಗಳಿಗೆ ಕಡಿವಾಣ ಹಾಕುವ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದೆ. ಅನ್ಯಧರ್ಮೀಯರ ಮನವಿಗೆ ಸ್ಪಂದಿಸಿ ಧ್ವನಿವರ್ಧಕದಲ್ಲಿ ಹಾಕುವ ಭಕ್ತಿ ಗೀತೆಗಳನ್ನು ನಿಲ್ಲಿಸಿದ್ರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದೆ. ಮಾತ್ರವಲ್ಲ ಚರ್ಚ್, ಮಸೀದಿಗಳಲ್ಲಿ ಹಾಕುವ ಧ್ವನಿವರ್ಧಕಗಳಿಗೂ ಕಡಿವಾಣ ಹಾಕಿ ಎಂಬ ಆಗ್ರಹ ಸಾಮಾಜಿಕ ಜಾಲತಣಗಳಲ್ಲಿ ಆರಂಭಗೊಂಡಿದೆ.

  • ಇನ್ಸ್ ಪೆಕ್ಟರ್ ಮುಂದೆ ಮೇಜು ಕುಟ್ಟಿ ಸಂಸದ ನಳಿನ್ ಕುಮಾರ್ ಅವಾಜ್

    ಇನ್ಸ್ ಪೆಕ್ಟರ್ ಮುಂದೆ ಮೇಜು ಕುಟ್ಟಿ ಸಂಸದ ನಳಿನ್ ಕುಮಾರ್ ಅವಾಜ್

    ಮಂಗಳೂರು: ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲು ಪೊಲೀಸ್ ಇನ್ಸ್ ಪೆಕ್ಟರ್ ಜೊತೆಗೆ ದರ್ಪದಲ್ಲಿ ಮಾತನಾಡಿ ಅವಾಜ್ ಹಾಕಿರುವ ವಿಡಿಯೋ ವೈರಲ್ ಆಗಿದೆ.

    ಬಿಜೆಪಿ ಯುವ ಮೋರ್ಚಾದ ಬಿಜೆಪಿ ರ‍್ಯಾಲಿಯ ವೇಳೆ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿದ್ದರು. ಬಂಧಿಸಿದ ಬಳಿಕ ಕದ್ರಿಯ ಗೋರಕ್ಷನಾಥ ಸಭಾಂಗಣದಲ್ಲಿ ಇರಿಸಿದ್ದರು.

    ಕಾರ್ಯಕರ್ತರನ್ನು ಬಿಡುಗಡೆ ಮಾಡಲು ತಡಮಾಡಿದ್ದಕ್ಕೆ ಆಕ್ರೋಶಗೊಂಡ ನಳಿನ್ ಕುಮಾರ್ ಕಟೀಲು ಕದ್ರಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮಾರುತಿ ನಾಯಕ್ ಮೇಲೆ ಆಕ್ರೋಶವಾಗಿ ಮಾತನಾಡಿ ದರ್ಪವನ್ನು ತೋರಿಸಿದ್ದಾರೆ.

    ಈ ವೇಳೆ ಮಾರುತಿ ನಾಯಕ್ ಮೊಬೈಲ್ ಕರೆ ಮಾಡಲು ಮುಂದಾದಾಗ ಕಟೀಲು, ನಿಮ್ ಚಾರ್ಜ್, ನಮ್ಮ ಚಾರ್ಜ್ ಅಲ್ಲ. ಸಹಿ ಮಾಡಿ. ಜೋರು ಮಾಡಿದ್ರೆ ಈಗಲೇ ಬಂದ್ ಕಾಲ್ ಕೊಡ್ತೀನಿ, ನೀವೇ ಅನುಭವಿಸಬೇಕು. ಏನು ತಿಳ್ಕೊಂಡಿದ್ದಾರೆ ಕಮಿಷನರ್. ನೀವು ಏನು ತಿಳ್ಕೊಂಡಿದ್ದೀರಾ..? ಆಟ ಆಡ್ತೀರಾ ನಮ್ಮತ್ರ? ನಮ್ಮ ಸಂಘಟನೆಯವ್ರು ತೆಗೆದು ಬಿಸಾಕ್ತಾರೆ. ಕೊಡ್ರಿ ಈಚೆ. ಇನ್ನು ಅರ್ಧ ಗಂಟೆ ಲಾಕ್ ಮಾಡಿದ್ರೆ ಬಂದ್ ಕರೆ ಕೊಡ್ತೀನಿ. ನೀವೇ ಅನುಭವಿಸಬೇಕು. ಕೊಡ್ರಿ ಈಚೆ. ಇಲ್ಲಾಂದ್ರೆ ಬಂದ್ ಕರೆ ಕೊಡ್ತೀನಿ. ನೀವೇ ಜವಾಬ್ದಾರಿ ನಿನ್ನ ಹೆಸರಲ್ಲೇ ಬಂದ್ ಕಾಲ್ ಕೊಡ್ತೇನೆ. ಏನ್ ತಿಳ್ಕೊಂಡಿದ್ದಿ..? ಏನ್ ನಮ್ದು..? ಅರ್ಧ ಗಂಟೆ ಆಯ್ತು ಫೋನ್ ಮಾಡಿ ಎಂದು ಹೇಳಿ ದರ್ಪದಲ್ಲಿ ಮಾತನಾಡಿದ್ದಾರೆ.

    https://youtu.be/z0V_F1q5DDM