Tag: kadlekai parishe

  • ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ದಿನಾಂಕ ನಿಗದಿ

    ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ದಿನಾಂಕ ನಿಗದಿ

    ಬೆಂಗಳೂರು: ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ (Basavanagudi Kadlekai Parishe) ದಿನಾಂಕ ನಿಗದಿ ಆಗಿದೆ. ಮುಂದಿನ ತಿಂಗಳು ನವೆಂಬರ್ 17 ಮತ್ತು 18ರಂದು ಎರಡು ದಿನಗಳ ಕಾಲ ಪರಿಷೆ ನಡೆಯಲಿದೆ.

    ಶ್ರೀ ದೊಡ್ಡಗಣಪತಿ ದೇವಾಲಯದಲ್ಲಿ ನಡೆಯುವ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ತನ್ನದೇ ಆದ ವಿಶೇಷ ಇತಿಹಾಸ ಇದೆ. ಪ್ರತಿ ವರ್ಷದಂತೆ ಈ ವರ್ಷವು ಯಾವುದೇ ಅಹಿತಕರ ಘಟನೆ ಆಗದಂತೆ ಅದ್ಧೂರಿ ಆಗಿ ನಡೆಸಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ಗೋಲ್ಡನ್ ಪಾಸ್ ಪಡೆದು, ಸರತಿ ಸಾಲಿನಲ್ಲಿ ನಿಂತು ಹಾಸನಾಂಬೆ ದರ್ಶನ ಪಡೆದ ಧ್ರುವ ಸರ್ಜಾ

    ಇದೇ ಗುರುವಾರ ಕಡಲೆ ಕಾಯಿ ಪರಿಷೆ ಸಂಬಂಧ ಸಾರಿಗೆ ಸಚಿವ ಹಾಗೂ ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗಾರೆಡ್ಡಿ (Ramalinga Reddy) ನೇತೃತ್ವದಲ್ಲಿ ಸಭೆ ಕೂಡ ನಡೆಯಲಿದ್ದು, ಸಭೆಯಲ್ಲಿ ಸ್ಥಳೀಯ ಶಾಸಕರು ಭಾಗಿಯಾಗಲಿದ್ದಾರೆ. ಜೊತೆಗೆ ವ್ಯಾಪಾರಿಗಳಿಂದ ಯಾವುದೇ ಸುಂಕ ವಸೂಲಾತಿ ಯಾರು ಮಾಡಬಾರದು ಎಂಬುದುನ್ನ ನಿರ್ಧಾರ ಕೈಗೊಳ್ಳುವುದರ ಜೊತೆಗೆ ಏನೆಲ್ಲ ವಿಶೇಷತೆ ಇರುತ್ತೆ ಎಂಬುದನ್ನ ಬಹಿರಂಗ ಪಡಿಸಲಿದ್ದಾರೆ.  ಇದನ್ನೂ ಓದಿ: ರಷ್ಯಾದ ತೈಲ ಆಮದು ಕಡಿಮೆಯಾಗಲಿದೆ, ದೀಪಾವಳಿಯಂದು ಮೋದಿ ಜೊತೆ ಮಾತನಾಡಿದ್ದೇನೆ: ಟ್ರಂಪ್‌

  • ಕಡ್ಲೆಕಾಯಿ ಪರಿಷೆಯ ತುತ್ತೂರಿ ವಿರುದ್ಧ ಬಸವನಗುಡಿ ನಿವಾಸಿಗಳು ಗರಂ!

    ಕಡ್ಲೆಕಾಯಿ ಪರಿಷೆಯ ತುತ್ತೂರಿ ವಿರುದ್ಧ ಬಸವನಗುಡಿ ನಿವಾಸಿಗಳು ಗರಂ!

    ಬೆಂಗಳೂರು: : ಬೆಂಗಳೂರು ಬಸವನಗುಡಿ (Basavana Gudi) ಕಡ್ಲೆಕಾಯಿ ಪರಿಷೆ ಅಂದ್ರೆ ಸಿಕ್ಕಾಪಟ್ಟೆ ಫೇಮಸ್. ಪರಿಷೆಯಷ್ಟೇ ಫೇಮಸ್ ಜಾತ್ರೆಯ ತುತ್ತೂರಿ ಸೌಂಡ್. ಆದರೆ ಈ ವರ್ಷದ ಕಡ್ಲೆಕಾಯಿ ಪರಿಷೆಯ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

    ಹೌದು. ಸಿಲಿಕಾನ್ ಸಿಟಿಯ ಬಸವನಗುಡಿ ಪಾರಂಪರಿಕ ಕಡ್ಲೆಕಾಯಿ ಪರಿಷೆ (Kadale Kai Parishe) ಅಂದ್ರೆ ಬೆಂಗಳೂರಿಗೆ ಸಂಭ್ರಮ. ಪರಿಷೆಯಲ್ಲಿ ಕಡ್ಲೆಕಾಯಿ ಸಂಭ್ರಮದ ಜೊತೆಗೆ ಇಡಿ ಜಾತ್ರೆಯಲ್ಲಿ ಸಕತ್ ಸೌಂಡ್ ಮಾಡೋದು ಅಂದರೆ ತುತ್ತೂರಿ ಸೌಂಡ್. ಅದರಲ್ಲೂ ಕಾಲೇಜ್ ಹುಡುಗರಿಗಂತೂ ತುತ್ತೂರಿ ಹಾಟ್ ಫೇವರಿಟ್. ಅದರೆ ಈ ವರ್ಷ ಪರಿಷೆಯ ತುತ್ತೂರಿ ಸೌಂಡ್ ವಿರುದ್ಧ ಬಸವನಗುಡಿ ನಿವಾಸಿಗಳ ಹಿತರಕ್ಷಣಾ ವೇದಿಕೆ ಠಾಣೆಯ ಮೆಟ್ಟಿಲೇರಿದೆ. ತುತ್ತೂರಿ ಬಳಕೆಯಿಂದಾಗಿ ಶಬ್ಧಮಾಲಿನ್ಯವಾಗುತ್ತಿದೆ. ಈ ತುತ್ತೂರಿಯ ಸೌಂಡ್‍ನಿಂದ ಹೃದ್ರೋಗಿಗಳಿಗೆ ಬಿಪಿ ಸಮಸ್ಯೆ ಇರೋರಿಗೆ ತೊಂದರೆಯಾಗುತ್ತೆ ಅನ್ನೋದು ನಿವಾಸಿಗಳ ವಾದ.

    ಇನ್ನು ಈ ವರ್ಷ ತುತ್ತೂರಿ ಬಳಕೆಗೆ ಬ್ರೇಕ್ ಹಾಕೋದಾಗಿ ಪೊಲೀಸರು ಕೂಡ ಭರವಸೆ ನೀಡಿದ್ದಾರಂತೆ. ಒಂದು ವೇಳೆ ಈ ವರ್ಷವೂ ತುತ್ತೂರಿ ಸೌಂಡ್ ಕೇಳಿಸಿದ್ರೇ, ನ್ಯಾಯಲಯದ ಮೆಟ್ಟಿಲೇರೋದಾಗಿ ಸ್ಥಳೀಯರು ಹೇಳಿದ್ದಾರೆ. ಇದನ್ನೂ ಓದಿ: ತುಳುವನ್ನು ಹೆಚ್ಚುವರಿ ಭಾಷೆಯಾಗಿ ಮಾಡೋದಕ್ಕೆ ಪ್ರಯತ್ನಿಸುತ್ತೇವೆ: ಸಿಎಂ

    ಪರಿಷೆಗೆ ಮುಂಚಿತವಾಗಿ ತುತ್ತೂರಿ ಮಾರಾಟಕ್ಕೆ ಸಂಪೂರ್ಣ ನಿಷೇಧ ಹಾಕಬೇಕು ಅನ್ನೋದು ಸ್ಥಳೀಯರ ಒತ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ತುತ್ತೂರಿ ಬಗ್ಗೆ ಈ ಬಾರಿ ಏನಾಗಲಿದೆ ಅಂತಾ ಕಾದುನೋಡಬೇಕು.

  • ಪರಿಷೆಯಲ್ಲಿ ಕಡ್ಲೆಕಾಯಿ ಭಿಕ್ಷೆ ಬೇಡುತ್ತಿದ್ದ ಪೊಲೀಸ್ ಪೇದೆ ಅಮಾನತು

    ಪರಿಷೆಯಲ್ಲಿ ಕಡ್ಲೆಕಾಯಿ ಭಿಕ್ಷೆ ಬೇಡುತ್ತಿದ್ದ ಪೊಲೀಸ್ ಪೇದೆ ಅಮಾನತು

    ಬೆಂಗಳೂರು: ಬಸವನಗುಡಿಯ ಕಡಲೇಕಾಯಿ ಪರಿಷೆಯಲ್ಲಿ ವ್ಯಾಪಾರಿಗಳಿಂದ ಅಕ್ರಮವಾಗಿ ಕಡ್ಲೆಕಾಯಿಯನ್ನು ಸಂಗ್ರಹಿಸುತ್ತಿದ್ದ ಪೇದೆಯನ್ನು ಅಮಾನತು ಮಾಡಲಾಗಿದೆ.

    ಸಿಎಆರ್ ಪೇದೆ ಎಸ್ ಪಿ ಮಂಡಕ್ಕಿ ಅಮಾನತುಗೊಂಡಿರುವ ಪೇದೆ. ಎಸ್ ಪಿ ಮಂಡಕ್ಕಿ ಅವರನ್ನು ಸಿಎಆರ್ ಡಿಸಿಪಿ ತಿಮ್ಮಣ್ಣನವರ್ ಅಮಾನತು ಮಾಡಿರುವುದಾಗಿ ಆದೇಶ ಹೊರಡಿಸಿದ್ದಾರೆ.

    ಸೋಮವಾರದಿಂದ ಆರಂಭವಾಗಿರುವ ನಗರದ ದೊಡ್ಡ ಜಾತ್ರೆ ಬಸವನಗುಡಿಯ ಕಡ್ಲೆಕಾಯಿ ಪರಿಷೆ ವೇಳೆ ಪೊಲೀಸ್ ಪೇದೆ ಸಣ್ಣದಾದ ಚೀಲವೊಂದನ್ನು ಹಿಡಿದುಕೊಂಡು ಕಡ್ಲೆಕಾಯಿ ಬೇಡುತ್ತಿರುವುದನ್ನು ನೆರೆದವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜನರು ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್ ಪೇದೆಯ ವಿರುದ್ಧ ಕಿಡಿ ಕಾರಿ ಕ್ರಮಕ್ಕೆ ಆಗ್ರಹಿಸಿದ್ದರು.

    https://youtu.be/BDrCNJk5Fho

  • ವಿಡಿಯೋ- ಬೆಂಗ್ಳೂರು ಪರಿಷೆಯಲ್ಲಿ ಕಡ್ಲೆಕಾಯಿ ಭಿಕ್ಷೆ ಬೇಡಿದ ಪೇದೆ!

    ವಿಡಿಯೋ- ಬೆಂಗ್ಳೂರು ಪರಿಷೆಯಲ್ಲಿ ಕಡ್ಲೆಕಾಯಿ ಭಿಕ್ಷೆ ಬೇಡಿದ ಪೇದೆ!

    ಬೆಂಗಳೂರು: ಕೆಲ ಪೊಲೀಸರು ವಸೂಲಿ ರಾಜರು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷ್ಯ. ಆದ್ರೆ ಕಡ್ಲೆಕಾಯನ್ನೂ ಬಿಡಲ್ಲ ಅಂತಾ ಬಯಲಾಗಿದ್ದು ಇವತ್ತು ಬಯಲಾಗಿದೆ.

    ಹೌದು. ನಗರದ ದೊಡ್ಡ ಜಾತ್ರೆ ಬಸವನಗುಡಿಯ ಕಡ್ಲೆಕಾಯಿ ಪರಿಷೆ ನಿನ್ನೆಯಿಂದ ಆರಂಭವಾಗಿದೆ. ಈ ಜಾತ್ರೆಗೆ ನಗರದ ಹಲವೆಡೆಗಳಿಂದ ಜನರು ಹರಿದುಬರುತ್ತಾರೆ. ಹೀಗೆ ತುಂಬಿ ತುಳುಕುತ್ತಿರೋ ಜನರ ಮಧ್ಯೆ ಪೊಲೀಸ್ ಪೇದೆಯೊಬ್ಬರು ಕಡ್ಲೆಕಾಯಿ ಭಿಕ್ಷೆ ಬೇಡುತ್ತಿರುವುದು ಜನಸಾಮಾನ್ಯರ ಗಮನಕ್ಕೆ ಬಂದಿದೆ.

    ಕಾನ್ಸ್ ಸ್ಟೇಬಲ್ ಸಣ್ಣದಾದ ಚೀಲವೊಂದನ್ನು ಹಿಡಿದುಕೊಂಡು ಕಡ್ಲೆಕಾಯಿ ಬೇಡುತ್ತಿರುವುದುನ್ನು ನೆರೆದವರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಬೆಂಗಳೂರು ದೊಡ್ಡ ಬಸವಣ್ಣ ದೇವಸ್ಥಾನದ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಮಿಠಾಯಿ, ಫ್ಯಾನ್ಸಿ ವಸ್ತುಗಳು, ಭಾವಚಿತ್ರಗಳು, ಕಸೂತಿ ಮಾಡಿದ ಬುಟ್ಟಿ, ಗೃಹ ಬಳಕೆ ವಸ್ತು, ಅಲಂಕಾರಿಕ ವಸ್ತುಗಳು, ಪ್ಲಾಸ್ಟಿಕ್ ಮಾಲೆಗಳು, ಹೂಗುಚ್ಛ ಸೇರಿದಂತೆ ಸುಮಾರು 35ಕ್ಕೂ ಹೆಚ್ಚು ಅಂಗಡಿಗಳು ಬಸವನಗುಡಿ ದೊಡ್ಡ ಬಸವಣ್ಣ ದೇವಸ್ಥಾನ ಎದುರು, ಅಕ್ಕಪಕ್ಕದ ರಸ್ತೆಗಳಲ್ಲಿ ಬಿಡಾರ ಹೂಡಿರುವುದನ್ನು ಕಾಣಬಹುದು.

    ಕೋಲಾರ, ಚಿಕ್ಕಬಳ್ಳಾಪುರ, ಕೋಲಾರ, ಶ್ರೀನಿವಾಸಪುರ, ಮಾಗಡಿ, ಮಂಡ್ಯ, ಮೈಸೂರು, ಚಿಂತಾಮಣಿ, ತುಮಕೂರು, ಕುಣಿಗಲ್ ಸೇರಿದಂತೆ ನೆರೆಯ ಆಂಧ್ರ ಪ್ರದೇಶದಿಂದಲೂ ವರ್ತಕರು ಬಂದು ಕಡ್ಲೆಕಾಯಿ ಮಾರುತ್ತಾರೆ. ಉಳಿದ ವಸ್ತುಗಳ ವ್ಯಾಪಾರಿಗಳು ಬೇರೆ ಬೇರೆ ರಾಜ್ಯದಿಂದಲೂ ಆಗಮಿಸಿದ್ದಾರೆ.

    https://www.youtube.com/watch?v=BDrCNJk5Fho