Tag: kadamba Navy base

  • ಯುದ್ಧ ನೌಕೆಗಳು ತಯಾರಾಗೋ ಮೂಲಕ ಮೋದಿ ಆತ್ಮನಿರ್ಭರ್ ಅಭಿಯಾನಕ್ಕೆ ಬಲ ಬಂದಿದೆ: ರಾಜನಾಥ್ ಸಿಂಗ್

    ಯುದ್ಧ ನೌಕೆಗಳು ತಯಾರಾಗೋ ಮೂಲಕ ಮೋದಿ ಆತ್ಮನಿರ್ಭರ್ ಅಭಿಯಾನಕ್ಕೆ ಬಲ ಬಂದಿದೆ: ರಾಜನಾಥ್ ಸಿಂಗ್

    ಕಾರವಾರ: ಇಂಡಿಯನ್ ನೇವಿಗಾಗಿ ತಯಾರಾಗುತ್ತಿರುವ 41 ಶಿಪ್ ಹಾಗೂ ಸಬ್ ಮರೀನ್‍ಗಳ ಪೈಕಿ 39 ಭಾರತದಲ್ಲೇ ತಯಾರಾಗುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

    ಎರಡು ದಿನದ ಕರ್ನಾಟಕ ನೇವಲ್ ಬೇಸ್‍ನ ಕಾರವಾರದ ಕದಂಬಾ ನೌಕಾನೆಲೆಗೆ ಆಗಮಿಸಿ ಸ್ವದೇಶಿ ನಿರ್ಮಿತ ಖಂಡೇರಿ ಜಲಂತರಗಾಮಿ ಹಡಗಿನಲ್ಲಿ ಇಂದು ಕೇಂದ್ರ ಸಚಿವರು ಚರಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಐಎನ್‍ಎಸ್ ಖಂಡೇರಿ ಭಾರತದ ಮೇಕ್ ಇಂಡಿಯಾ ಪ್ರಾಜೆಕ್ಟ್‍ನ ಅತ್ಯುತ್ತಮ ಉದಾಹರಣೆಯಾಗಿದೆ ಇಂದು ನಾನು ಪ್ರಯಾಣ ಬೆಳೆಸಿದ ಐಎನ್‍ಎಸ್ ಖಂಡೇರಿ ಸಬ್‍ಮರೀನ್‍ಗೆ 2019 ಸೆಪ್ಟೆಂಬರ್‍ನಲ್ಲಿ ನಾನೇ ಚಾಲನೆ ನೀಡಿದ್ದೆ. ಭಾರತದಲ್ಲಿ ಯುದ್ಧ ನೌಕೆಗಳು ತಯಾರಾಗೋ ಮೂಲಕ ಪ್ರಧಾನಿಯವರ ಆತ್ಮನಿರ್ಭರ್ ಅಭಿಯಾನಕ್ಕೆ ಹೆಚ್ಚು ಬಲ ಬಂದಿದೆ ಎಂದರು. ಇದನ್ನೂ ಓದಿ:  ವಿಮಾನದಲ್ಲಿ ಗುಟ್ಕಾ ಕಲೆ – ಸೂಪರ್‌ಸ್ಟಾರ್‌ಗಳ ಕಾಲೆಳೆದ ನೆಟ್ಟಿಗರು

    ಆಜಾದಿ ಕಾ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ನೇವಿಯ ಐಎನ್‍ಎಸ್ ವಿಕ್ರಾಂತ್ ಕಮಿಷನಿಂಗ್‍ಗೆ ತಯಾರಾಗಿದೆ. ವಿಕ್ರಾಂತ್ ಹಾಗೂ ವಿಕ್ರಮಾದಿತ್ಯ ಭಾರತದ ನೌಕಾಶಕ್ತಿಯನ್ನು ಹೆಚ್ಚು ಬಲಯುತಗೊಳಿಸಲಿದೆ. ಪ್ರಪಂಚದಲ್ಲಿ ಪ್ರಮುಖ ನೇವಿಗಳ ಸಾಲಿನಲ್ಲಿ ಇಂಡಿಯನ್ ನೇವಿ ಗುರುತಿಸಲ್ಪಡುತ್ತಿದೆ, ಪ್ರಪಂಚದ ದೊಡ್ಡ, ದೊಡ್ಡ ನೌಕಾಶಕ್ತಿಗಳು ಭಾರತದ ಜೊತೆ ಸಹಯೋಗ ಹೊಂದಲು ಇಚ್ಚುಕವಾಗಿದೆ. ಭಾರತದ ನೇವಿಯಲ್ಲಿ ನಡೆಯುತ್ತಿರುವ ತಯಾರಿಗಳು ಯಾರದ್ದೇ ವಿರುದ್ಧವಾಗಲ್ಲ, ಬದಲಾಗಿ ದೇಶದ ಕರಾವಳಿ ತೀರದ ಜನರ ಶಾಂತಿ, ನೆಮ್ಮದಿ, ಸಂಪದ್ಬರಿತ ಜೀವನಕ್ಕಾಗಿ ಈ ತಯಾರಿಗಳು ನಡೆಯುತ್ತಿವೆ ಎಂದು ತಿಳಿಸಿದರು. ಇದನ್ನೂ ಓದಿ:  ಮದುವೆ ಮನೆಯಲ್ಲೂ MES ಕಿರಿಕ್ – ಕನ್ನಡ ಸಾಂಗ್ ಹಾಕಿದ್ದಕ್ಕೆ ವಧು, ವರ, ಕನ್ನಡಿಗರ ಮೇಲೆ ಹಲ್ಲೆ

  • ಕದಂಬ ನೌಕಾನೆಲೆಯಲ್ಲಿ ಸ್ಫೋಟ – ಕಂಪಿಸುತ್ತಿದೆ ಕಾರವಾರ

    ಕದಂಬ ನೌಕಾನೆಲೆಯಲ್ಲಿ ಸ್ಫೋಟ – ಕಂಪಿಸುತ್ತಿದೆ ಕಾರವಾರ

    ಕಾರವಾರ: ನಗರದ ಹಲವು ಭಾಗಗಳಲ್ಲಿ ಭೂಕಂಪನದ ಅನುಭವ, ದೊಡ್ಡ ದೊಡ್ಡ ಸದ್ದುಗಳು. ಭೂಕಂಪವೇ ಆಯಿತೇನೋ ಎನ್ನುವಂತೆ ಮನೆಗಳು ಕಂಪಿಸುತ್ತಿವೆ. ಆರೇ ಏನಾಯಿತು ಎಂದು ಜನರು ಮನೆಯಿಂದ ಹೊರಗೆ ಬಂದು ನೋಡುವಷ್ಟರಲ್ಲಿ ಎಲ್ಲವೂ ಶಾಂತವಾಗಿದೆ.

    ಕಳೆದ ನಾಲ್ಕು ತಿಂಗಳಲ್ಲಿ ಮೂರು ಬಾರಿ ಕಾರವಾರ ನಗರದ ಜನರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಕೆಲವರು ಪೊಲೀಸರಿಗೆ ಸಹ ಕರೆ ಮಾಡಿ ಭೂಕಂಪವಾಗಿದೆ ಎಂದು ಹೇಳಿದ್ದಾರೆ. ಆದರೆ ಅದು ಯಾವ ಸದ್ದು? ಭೂಕಂಪನವೇ ಅಥವಾ ಇನ್ನೇನೋ ಆಗಿರಬಹುದೇ ಎಂಬ ಅನುಮಾನಗಳು ಜನರಲ್ಲಿ ಭಯ ಹುಟ್ಟಿಸಿತ್ತು.

    ಭೂಮಿ ಕಂಪಿಸಿದ್ದು ಹೇಗೆ?
    ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕದಂಬ ನೌಕಾನೆಲೆಯಲ್ಲಿ ಎರಡನೇ ಹಂತದ ಕಾಮಗಾರಿ ನಡೆಯುತ್ತಿದೆ. ನೌಕಾದಳದ ಹಡಗು ನಿಲ್ದಾಣ ಹಾಗೂ ಸಬ್‍ಮೆರಿನ್ ಗಳ ನಿಲ್ದಾಣಕ್ಕಾಗಿ ಅರಗಾ ಬಳಿ ಸಮುದ್ರ ತೀರದಲ್ಲಿ ದೊಡ್ಡ ಸುರಂಗಗಳನ್ನು ಕೊರೆಯಲಾಗುತ್ತಿದೆ. ಸುರಂಗಗಳಲ್ಲಿ ದೊಡ್ಡ ದೊಡ್ಡ ಬಂಡೆಗಳು ಇರುವುದರಿಂದಾಗಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆ ಕಂಪನಿ ಕಲ್ಲನ್ನು ತೆರವುಗೊಳಿಸಲು ದೊಡ್ಡ ಮಟ್ಟದ ಸ್ಫೋಟವನ್ನು ಮಾಡುತ್ತಿದೆ.

    ಈ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಅಂಕೋಲ ಭಾಗದಿಂದ ಕಾರವಾರ ಹಾಗೂ ಗೋವಾ ಗಡಿಯಲ್ಲೂ ಭೂಮಿ ಕಂಪಿಸಿದೆ. ಇಂದು ಕೂಡ ಸ್ಫೋಟ ನಡೆಸಿದ್ದು ಅರಗಾ ದಿಂದ ಕಾರವಾರದ ಬಳಿ ದಟ್ಟ ಮಣ್ಣು ಮಿಶ್ರಿತ ಹೊಗೆಯ ಆವರಿಸಿದ್ದು ಮತ್ತೊಮ್ಮೆ ಜನರಲ್ಲಿ ಭಯ ಹುಟ್ಟುವಂತೆ ಮಾಡಿದೆ. ಕಾರವಾರದ ಸುತ್ತಮುತ್ತ ಪ್ರಾಚೀನ ಕಾಲದ ಏಕ ಶಿಲೆಗಳಿದ್ದು ಇವು ರಸ್ತೆ ಅಗಲೀಕರಣ ಕಾಮಗಾರಿ ಸಂದರ್ಭದಲ್ಲಿ ಸ್ಫೋಟಿಸಿ ರಸ್ತೆ ಅಗಲೀಕರಣ ಮಾಡಲಾಗಿತ್ತು. ಆದರೆ ಈಗ ನೌಕಾದಳ ಕೂಡ ತನ್ನ ನೆಲೆಯನ್ನು ವಿಸ್ತರಿಸುವ ಕಾಮಗಾರಿ ಪ್ರಾರಂಭಿಸಿದೆ.

    ನೌಕನೆಲೆ ಸ್ಫೋಟ ನಡೆಸಲು ಅನುಮತಿ ಸಹ ಪಡೆದಿದ್ದು ಮುಂಜಾನೆ ವೇಳೆಯಲ್ಲಿ ಮಾತ್ರ ಸ್ಫೋಟಿಸಲು ಹಾಗೂ ಲಘು ಸಿಡಿತಲೆ ಮಾಡುವಂತೆ ಷರತ್ತುಬದ್ಧ ಮಂಜೂರು ನೀಡಲಾಗಿತ್ತು. ಆದರೆ ಗುತ್ತಿಗೆ ಕಂಪನಿ ಕಾಮಗಾರಿಗೆ ಚುರುಕು ನೀಡುವ ನೆಪದಲ್ಲಿ ಅತೀ ಹೆಚ್ಚು ಸಾಂದ್ರತೆಯುಳ್ಳ ಸಿಡಿತಲೆ ಬಳಸಿ ಸುರಂಗ ಮಾರ್ಗದಲ್ಲಿ ಸ್ಫೋಟ ನಡೆಸುತ್ತಿದೆ. ಇದರಿಂದಾಗಿ ಕಾರವಾರ, ಅಂಕೋಲ ಹಾಗೂ ಗೋವಾ ಗಡಿ ಭಾಗದಲ್ಲಿಯೂ ಕಂಪನದ ಅನುಭವ ಆಗುತಿದ್ದು ಜನರು ಭಯ ಪಡುವಂತೆ ಮಾಡಿದೆ.

    ಈ ಕುರಿತು ಜಿಲ್ಲಾಡಳಿತಕ್ಕೆ ದೂರು ನೀಡಲಾಗಿದೆ. ಆದರೆ ಇದ್ಯಾವುದಕ್ಕೂ ಜಿಲ್ಲಾಡಳಿತ ತಲೆ ಕೆಡಿಸಿಕೊಂಡಿಲ್ಲ. ಮತ್ತೆ ದೊಡ್ಡ ಸ್ಫೋಟವನ್ನು ಬಳಸಿ ಸುರಂಗ ನಿರ್ಮಾಣ ಮಾಡಿದರೆ ಕಾರವಾರ ನಗರದ ಹಲವು ಮನೆಗಳು ಬಿರುಕು ಬಿಡುವ ಸಾಧ್ಯತೆಗಳಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕೆಂಬುದು ಕಾರವಾರ ನಗರದ ಜನತೆ ಆಗ್ರಹಿಸಿದ್ದಾರೆ.