Tag: kadale salad

  • ಮಕ್ಕಳಿಗೆ ಇಷ್ಟವಾಗುವ ಕಡಲೆ ಸಲಾಡ್ ಮಾಡಿ

    ಮಕ್ಕಳಿಗೆ ಇಷ್ಟವಾಗುವ ಕಡಲೆ ಸಲಾಡ್ ಮಾಡಿ

    ರುಚಿಕರವಾದ ಅಡುಗೆಯನ್ನು ಮಾಡುವುದರ ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರ. ಅಮ್ಮ ಮಕ್ಕಳಿಗೆ ಇಷ್ಟವಾಗುವ ತಿಂಡಿಗಳನ್ನು ಹೆಚ್ಚಾಗಿ ಮನೆಯಲ್ಲಿ ಮಾಡುತ್ತಾಳೆ. ಮಕ್ಕಳಿಗೆ ಹೆಚ್ಚು ಖಾರವಾಗಿಯೂ ಇರಬಾರದು, ಆದರೆ ರುಚಿಯಾಗಿ ಪೋಷಕಾಂಶವುಳ್ಳ ಆಹಾರವನ್ನು ನೀವು ನಿಮ್ಮ ಮಕ್ಕಳಿಗೆ ನೀಡಬೇಕು ಎಂದಾದರೆ ನೀವು ಇಂದು ಮನೆಯಲ್ಲಿ ಕಡಲೆ ಸಲಾಡ್ ಮಾಡಿ.

    ಬೇಕಾಗುವ ಸಾಮಗ್ರಿಗಳು:
    * ಕಡಲೆ- 1ಕಪ್
    * ಹಸಿ ಮೆಣಸಿನಕಾಯಿ- 4
    * ಈರುಳ್ಳಿ- 2
    * ಬೆಳ್ಳುಳ್ಳಿ- 1
    * ಕೊತ್ತಂಬರಿಸೊಪ್ಪು
    * ಶುಂಠಿ
    * ರುಚಿಗೆ ತಕ್ಕಷ್ಟು ಉಪ್ಪು
    * ಅಡುಗೆ ಎಣ್ಣೆ- 3 ಟೀ ಸ್ಪೂನ್
    * ಕ್ಯಾರೆಟ್- ಅರ್ಧ ಕಪ್
    * ಟೊಮೆಟೋ- ಅರ್ಧ ಕಪ್
    * ಲಿಂಬೆ ಹಣ್ಣು
    * ಸಾಸಿವೆ
    * ಜೀರಿಗೆ- 1 ಟೀ ಸ್ಪೂನ್

    ಮಾಡುವ ವಿಧಾನ:
    * ಮೊದಲು ಮೂರು ಗಂಟೆಗಳ ಕಾಲ ನೆನಸಿದ ಕಡಲೆ ಕಾಳನ್ನು 3 ವಿಜಿಲ್‍ನಲ್ಲಿ ಬೇಯಿಸಿಟ್ಟುಕೊಳ್ಳಿ.

    * ಬಳಿಕ ಹಸಿ ಮೆಣಸಿನಕಾಯಿ, ಈರುಳ್ಳಿ, ಬೆಳ್ಳುಳ್ಳಿ, ಕೊತ್ತಂಬರಿಸೊಪ್ಪು, ಶುಂಠಿ ಹಾಕಿ ರುಬ್ಬಿ ಕೊಳ್ಳಬೇಕು.

    * ಒಂದು ಪಾತ್ರೆಗೆ ಎಣ್ಣೆ ಹಾಕಿ ಅದು ಕಾದ ಮೇಲೆ, ಸಾಸಿವೆ, ಜೀರಿಗೆ, ಬೇಯಿಸಿದ ಕಡಲೆ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ, ಬಳಿಕ ರುಬ್ಬಿದ ಹಸಿ ಮೆಣಸಿನಕಾಯಿ ಮಿಶ್ರಣ ಹಾಕಿ ಫ್ರೈ ಮಾಡಿಕೊಳ್ಳಬೇಕು.

    * ನಂತರ ಉಪ್ಪು ಹಾಕಿ. ಈರುಳ್ಳಿ, ಕ್ಯಾರೆಟ್, ಟೊಮೆಟೋ ಹಾಕಿ ಚೆನ್ನಾಗಿ ಕಲಸಿಕೊಳ್ಳಿ, ನಂತರ ಲಿಂಬೆ ಹಣ್ಣಿನ ರಸ ಹಾಕಿದರೆ ರುಚಿಕರವಾದ ಕಡಲೆ ಸಲಾಡ್ ಸವಿಯಲು ಸಿದ್ಧವಾಗುತ್ತದೆ.