Tag: Kabzaa

  • 42ರ ಹರೆಯದಲ್ಲೂ ಬೋಲ್ಡ್ ಆಗಿ ಕಾಣಿಸಿಕೊಂಡ ಶ್ರೀಯಾ ಶರಣ್

    42ರ ಹರೆಯದಲ್ಲೂ ಬೋಲ್ಡ್ ಆಗಿ ಕಾಣಿಸಿಕೊಂಡ ಶ್ರೀಯಾ ಶರಣ್

    ನ್ನಡದ ‘ಕಬ್ಜ’ ಸಿನಿಮಾದ ನಟಿ ಶ್ರೀಯಾ ಶರಣ್ (Shriya Saran) ಅವರು ಹೊಸದೊಂದು ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಬಳುಕುವ ಬಳ್ಳಿಯಂತೆ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿದ್ದಾರೆ. ನಟಿಯ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

    ಸದಾ ಒಂದಲ್ಲಾ ಒಂದು ಫೋಟೋಶೂಟ್‌ನಲ್ಲಿ ಮಿಂಚುವ ಶ್ರೀಯಾ ಇದೀಗ ಪಡ್ಡೆಹುಡುಗರು ನಿದ್ದೆಗೆಡಿಸುವ ಕೆಲಸ ಮಾಡಿದ್ದಾರೆ. ಕಲರ್‌ಫುಲ್ ಡ್ರೆಸ್ ಧರಿಸಿ ನಟಿ ಮುದ್ದಾಗಿ ಕಾಣಿಸಿಕೊಂಡು ವಿವಿಧ ಭಂಗಿಯಲ್ಲಿ ಕ್ಯಾಮೆರಾಗೆ ನಟಿ ಪೋಸ್ ನೀಡಿದ್ದಾರೆ. ಇದನ್ನೂ ಓದಿ:ಖ್ಯಾತ ಗಾಯಕ ಹಿಮೇಶ್ ರೇಶಮಿಯಾಗೆ ಪಿತೃ ವಿಯೋಗ

    42ರ ಹರೆಯದಲ್ಲೂ ನಟಿಯ ಫಿಟ್‌ನೆಸ್ & ಬ್ಯೂಟಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಶೈನಿಂಗ್ ಡ್ರೆಸ್‌ನಲ್ಲಿ ಮಿಂಚಿರುವ ಶ್ರೀಯಾ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ- ತಂದೆಯಾದ ಖುಷಿಯಲ್ಲಿ ಚಂದನ್

    ಇನ್ನೂ ಕನ್ನಡದ ‘ಚಂದ್ರ’ (Chandra) ಚಿತ್ರದ ಮೂಲಕ ಬಹುಭಾಷಾ ನಟಿ ಶ್ರೀಯಾ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ನೆನಪಿರಲಿ ಪ್ರೇಮ್‌ಗೆ ನಾಯಕಿಯಾಗಿ ನಟಿಸಿದರು. ಈ ಚಿತ್ರಕ್ಕೆ ರೂಪ ಅಯ್ಯರ್ ನಿರ್ದೇಶನ ಮಾಡಿದ್ದರು.

    ‘ಕಬ್ಜ’ ಸಿನಿಮಾದಲ್ಲಿ ಉಪೇಂದ್ರ(Upendra), ಸುದೀಪ್, ಶಿವರಾಜ್‌ಕುಮಾರ್ ಜೊತೆ ಶ್ರೀಯಾ ನಟಿಸಿದರು. ಉಪೇಂದ್ರಗೆ ಶ್ರೀಯಾ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರವನ್ನು ಆರ್.ಚಂದ್ರು ನಿರ್ದೇಶನ ಮಾಡಿದ್ದರು. ‘ಕಬ್ಜ 2’ (Kabzaa 2) ಕೂಡ ಬರಲಿದೆ. ಆದರೆ ಅದ್ಯಾವಾಗಿನಿಂದ ಶೂಟಿಂಗ್ ಶುರು ಎಂಬುದನ್ನು ಚಿತ್ರತಂಡದಿಂದ ಅಧಿಕೃತ ಮಾಹಿತಿ ಸಿಗಬೇಕಿದೆ.

     

    View this post on Instagram

     

    A post shared by Shriya Saran (@shriya_saran1109)

    ಅಂದಹಾಗೆ, 2018ರಲ್ಲಿ ಆಂಡ್ರೇ ಕೊಸ್ಚೆವ್ ಜೊತೆ ಶ್ರೀಯಾ ಮದುವೆಯಾದರು. 2021ರಲ್ಲಿ ಹೆಣ್ಣು ಮಗುವಿಗೆ ನಟಿ ಜನ್ಮ ನೀಡಿದರು. ರಾಧಾ ಎಂಬ ಮುದ್ದಾದ ಮಗಳ ಆರೈಕೆಯಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಜೊತೆಗೆ ಸಿನಿಮಾ ಕೂಡ ಮಾಡುತ್ತಿದ್ದಾರೆ.

  • ಅಮೆಜಾನ್ ಪ್ರೈಮ್ ಭಾರತದ ಟ್ರೆಂಡಿಂಗ್ ಚಿತ್ರದಲ್ಲಿ ‘ಕಬ್ಜ’ಗೆ ಮೊದಲ ಸ್ಥಾನ

    ಅಮೆಜಾನ್ ಪ್ರೈಮ್ ಭಾರತದ ಟ್ರೆಂಡಿಂಗ್ ಚಿತ್ರದಲ್ಲಿ ‘ಕಬ್ಜ’ಗೆ ಮೊದಲ ಸ್ಥಾನ

    ರ್.ಚಂದ್ರು ನಿರ್ದೇಶನದಲ್ಲಿ ಮೂಡಿ ಬಂದಿರುವ ಕಬ್ಜ (Kabzaa) ಸಿನಿಮಾ ಏಪ್ರಿಲ್ 14 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಿದೆ. ಕನ್ನಡವೂ ಸೇರಿದಂತೆ ಹಿಂದಿ, ಮಲಯಾಳಂ, ತಮಿಳು ಹಾಗೂ ತೆಲುಗಿನಲ್ಲಿ ಈ ಚಿತ್ರ ರಿಲೀಸ್ ಆಗಿದ್ದು, ಬಿಡುಗಡೆಯಾದ ಒಂದೇ ದಿನಕ್ಕೆ ಭಾರತದ ಟ್ರೆಂಡಿಂಗ್ ಚಿತ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಬಾಲಿವುಡ್ ಸೇರಿದಂತೆ ಇತರ ಭಾಷೆಗಳ ಚಿತ್ರಗಳನ್ನು ಹಿಂದಿಕ್ಕಿ ದಾಖಲೆ ಬರೆದಿದೆ.

    ಸುದೀಪ್, ಉಪೇಂದ್ರ ಹಾಗೂ ಶಿವರಾಜ್ ಕುಮಾರ್ ಕಾಂಬಿನೇಷನ್ ನ ‘ಕಬ್ಜ’ ಟ್ರೆಂಡಿಂಗ್ ನಲ್ಲಿ ಪ್ರಥಮ ಸ್ಥಾನ ಪಡೆದಿದ್ದರೆ, ವಿಕ್ರಮಾದಿತ್ಯ ಮೊಟ್ಟಾನೆ ಅವರ ವೆಬ್ ಸರಣಿ ಜುಬಿಲಿ ಎರಡನೇ ಸ್ಥಾನದಲ್ಲಿದೆ. ಸಾವಿರಾರು ಕೋಟಿ ಬಾಚಿರುವ ಶಾರುಖ್ ಖಾನ್ ನಟನೆಯ ‘ಪಠಾಣ್’ ಮೂರನೇ ಸ್ಥಾನದಲ್ಲಿದ್ದರೆ, ತೆಲುಗಿನ ರಂಗಮಾರ್ತಾಂಡ ಸಿನಿಮಾ ಐದನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.

    ಆರನೇ ಸ್ಥಾನದಲ್ಲಿ ಅಮೆರಿಕಾದ ಸಿಟ್ ಕಾಮ್ ಯಂಗ್ ಶೆಲ್ಡನ್ ಸರಣಿ ಇದ್ದರೆ, ಏಳನೇ ಸ್ಥಾನದಲ್ಲಿ ವೇಣು ಟಿಲ್ಲು ನಿರ್ದೇಶನದ ಬಲಗಂ, ಎಂಟನೇ ಸ್ಥಾನದಲ್ಲಿ ಹ್ಯಾಪಿ ಫ್ಯಾಮಿಲಿ ಕಂಡೀಷನ್ಸ್ ಅಪ್ಲೈ ಹಿಂದಿ ವೆಬ್ ಸರಣಿ, ಒಂಬತ್ತನೇ ಸ್ಥಾನದಲ್ಲಿ ಅಮೆರಿಕನ್ ಸೂಪರ್ ಹೀರ್ ಚಿತ್ರ ಬ್ಲಾಕ್ ಆಡಂ, ಹತ್ತನೇ ಸ್ಥಾನದಲ್ಲಿ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ವಾರಿಸು’ ಪಡೆದುಕೊಂಡಿದೆ.

    ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡುವುದಾಗಿ ಮೊನ್ನೆಯಷ್ಟೇ  ನಿರ್ದೇಶಕ ಆರ್.ಚಂದ್ರು (R. Chandru) ತಿಳಿಸಿದ್ದರು. ಕಬ್ಜ ಸಿನಿಮಾ 25 ದಿನಗಳ ಪ್ರದರ್ಶನ ಕಂಡಿರುವ ಹಿನ್ನೆಲೆಯಲ್ಲಿ ಮತ್ತೊಂದು ಹೊಸ ಸುದ್ದಿಯನ್ನು ಹೇಳುವುದಾಗಿ ಮಾತನಾಡಿದ್ದರು. ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಚಂದ್ರು. ಪತ್ರಿಕಾಗೋಷ್ಠಿಯಲ್ಲಿ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ್ದು, ಇಂದಿನಿಂದ ‘ಕಬ್ಜ 2’ (Kabzaa 2 ) ಸಿನಿಮಾದ ಕೆಲಸದಲ್ಲಿ ತೊಡಗುವುದಾಗಿ ತಿಳಿಸಿದ್ದಾರೆ.

    ಕಬ್ಜಗಿಂತಲೂ ಕಬ್ಜ 2 ಬಜೆಟ್ ದೊಡ್ಡದಾಗಿಯೇ ಇರುತ್ತದೆಯಂತೆ. ಭಾರೀ ಬಜೆಟ್ ನಲ್ಲಿ ಕಬ್ಜ 2 ಮೂಡಿ ಬರಲಿದ್ದು, ಭಾರತೀಯ ಸಿನಿಮಾ ರಂಗದ ಖ್ಯಾತ ಕಲಾವಿದರು ತಾರಾಗಣದಲ್ಲಿ ಇರಲಿದ್ದಾರಂತೆ. ಸದ್ಯ ಕಥೆ ಬರೆಯುವುದರಲ್ಲಿ ತೊಡಗಿರುವ ಚಂದ್ರು, ಮುಂದಿನ ದಿನಗಳಲ್ಲಿ ತಾರಾಬಳಗದ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದರು.

    ‘ಕಥೆ, ಮೇಕಿಂಗ್, ತಾರಾಗಣ, ಬಜೆಟ್ ಯಾವುದರ ಬಗ್ಗೆಯೂ ಕಡಿಮೆ ಮಾಡುವುದಿಲ್ಲ. ಇನ್ನೂ ಅದ್ಧೂರಿಯಾಗಿ ಸಿನಿಮಾ ಮಾಡುವಂತಹ ಶಕ್ತಿಯನ್ನು ಕಬ್ಜ ನೀಡಿದೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಹುಮ್ಮಸ್ಸನ್ನು ಮತ್ತಷ್ಟು ಹೆಚ್ಚು ಮಾಡಿದೆ’ ಎಂದಿದ್ದಾರೆ ಚಂದ್ರು. ಸಿನಿಮಾ ಗೆಲ್ಲಿಸಿದ ಪ್ರತಿಯೊಬ್ಬರಿಗೂ ಅವರು ಧನ್ಯವಾದ ಹೇಳಿದರು.

    ಕಬ್ಜ ಸಿನಿಮಾ ರಿಲೀಸ್ ಆಗಿ ಎರಡನೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿತ್ತು. ನಾನಾ ಕಾರಣಗಳಿಂದಾಗಿ ಈ ಸಿನಿಮಾ ವಿಶೇಷತೆಯನ್ನೂ ಒಳಗೊಂಡಿತ್ತು, ರಿಯಲ್ ಸ್ಟಾರ್ ಉಪೇಂದ್ರ (Upendra), ಕಿಚ್ಚ ಸುದೀಪ್ (Sudeep) ಮತ್ತು ಶಿವರಾಜ್ ಕುಮಾರ್ (Shivaraj Kumar) ಇದೇ ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ನಟಿಸಿ, ಅಭಿಮಾನಿಗಳಿಗೆ ತ್ರಿಬಲ್ ಮನರಂಜನೆಯನ್ನು ನೀಡಿದ್ದರು.

  • ಓಟಿಟಿಗೆ ಬಂತು ಆರ್.ಚಂದ್ರು ನಿರ್ದೇಶನದ ‘ಕಬ್ಜ’: ಇಂದು ಮತ್ತೊಂದು ಸಿಹಿಸುದ್ದಿ

    ಓಟಿಟಿಗೆ ಬಂತು ಆರ್.ಚಂದ್ರು ನಿರ್ದೇಶನದ ‘ಕಬ್ಜ’: ಇಂದು ಮತ್ತೊಂದು ಸಿಹಿಸುದ್ದಿ

    ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ಆರ್.ಚಂದ್ರು (R. Chandru) ಅವರ ‘ಕಬ್ಜ’ (Kabzaa) ಚಿತ್ರವು ಓಟಿಟಿಯಲ್ಲಿ (OTT) ಲಭ್ಯವಿದೆ. ಇಂದಿನಿಂದ ಅಮೆಜಾನ್ ವಿಡಿಯೋ ಪ್ರೈಮ್ ನಲ್ಲಿ ಈ ಸಿನಿಮಾವನ್ನು ನೋಡಬಹುದಾಗಿದೆ. ಕಬ್ಜ ಸಿನಿಮಾ ರಿಲೀಸ್ ಆಗಿ 25 ದಿನಗಳನ್ನು ಪೂರೈಸಿ, 50ನೇ ದಿನದತ್ತ ಮುನ್ನುಗ್ಗುತ್ತಿರುವ  ಈ ಸಂದರ್ಭದಲ್ಲಿ ಚಿತ್ರತಂಡದಿಂದ ಇವತ್ತು ಮಹತ್ವದ ಘೋಷಣೆ ಆಗಲಿದೆ ಎನ್ನಲಾಗುತ್ತಿದೆ.

    ನಿರ್ದೇಶಕ ಆರ್.ಚಂದ್ರು ಇಂದು ಮಹತ್ವದ ಪತ್ರಿಕಾಗೋಷ್ಠಿ ಆಯೋಜನೆ  ಮಾಡಿರುವುದರಿಂದ ಅಭಿಮಾನಿಗಳಿಗೆ ಯಾವ ರೀತಿಯ ಸುದ್ದಿಯನ್ನು ನೀಡಬಹುದು ಎನ್ನುವ ಕಾತುರ ಹೆಚ್ಚಾಗಿದೆ. ಮೂಲಗಳ ಪ್ರಕಾರ ಇಂದು ಅವರು ಕಬ್ಜ 2 ಸಿನಿಮಾದ ಘೋಷಣೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಚಂದ್ರು ಈ ಕುರಿತು ಯಾವುದೇ ಮಾಹಿತಿ ನೀಡದೇ ಇದ್ದರೂ, ಇಂದು ಸಂಜೆ ಸ್ಪಷ್ಟತೆ ಸಿಗಲಿದೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್‌ಗೆ ಜೋಡಿಯಾದ ಆಲಿಯಾ ಭಟ್

    ತನ್ನ ಜೊತೆಗೆ ಕೆಲಸ ಮಾಡಿದ ತಂತ್ರಜ್ಞರನ್ನು ಇಂದು ಗೌರವಿಸುವ ಕಾರ್ಯಕ್ರಮವನ್ನು ಚಂದ್ರು ಇಟ್ಟುಕೊಂಡಿದ್ದು ಜೊತೆಗೆ 25ನೇ ದಿನದ ಸಂಭ್ರಮವನ್ನೂ ಅವರು ಆಚರಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಹೊಸ ಯೋಜನೆಗಳನ್ನು ಅವರು ಮಾಧ್ಯಮದ ಮುಂದೆ ಹಂಚಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಜಿಎಫ್ 2 ಸಿನಿಮಾ ರಿಲೀಸ್ ಆದ ದಿನವೂ ಇಂದು ಆಗಿದ್ದರಿಂದ ಸ್ಯಾಂಡಲ್ ವುಡ್ ನಲ್ಲಿ ಡಬಲ್ ಸಂಭ್ರಮ ಮನೆ ಮಾಡಿದೆ.

    ಕಬ್ಜ ಸಿನಿಮಾ ರಿಲೀಸ್ ಆಗಿ ಎರಡನೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿತ್ತು. ನಾನಾ ಕಾರಣಗಳಿಂದಾಗಿ ಈ ಸಿನಿಮಾ ವಿಶೇಷತೆಯನ್ನೂ ಒಳಗೊಂಡಿತ್ತು, ರಿಯಲ್ ಸ್ಟಾರ್ ಉಪೇಂದ್ರ (Upendra), ಕಿಚ್ಚ ಸುದೀಪ್ (Sudeep) ಮತ್ತು ಶಿವರಾಜ್ ಕುಮಾರ್ (Shivaraj Kumar)ಇದೇ ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ನಟಿಸಿ, ಅಭಿಮಾನಿಗಳಿಗೆ ತ್ರಿಬಲ್ ಮನರಂಜನೆಯನ್ನು ನೀಡಿದ್ದರು.

  • Breaking-ಕಬ್ಜ@25:  ಯಶಸ್ಸಿನ ಬೆನ್ನಲ್ಲೇ ನಾಳೆ ಗುಡ್ ನ್ಯೂಸ್ ಕೊಡ್ತಾರಂತೆ ಆರ್.ಚಂದ್ರು

    Breaking-ಕಬ್ಜ@25: ಯಶಸ್ಸಿನ ಬೆನ್ನಲ್ಲೇ ನಾಳೆ ಗುಡ್ ನ್ಯೂಸ್ ಕೊಡ್ತಾರಂತೆ ಆರ್.ಚಂದ್ರು

    ಪೇಂದ್ರ (Upendra), ಕಿಚ್ಚ ಸುದೀಪ್ (Sudeep) ಹಾಗೂ ಶಿವರಾಜ್ ಕುಮಾರ್ (Shivraj Kumar) ಮೂವರು ಸ್ಟಾರ್ ಗಳ ಅಪರೂಪದ ಕಾಂಬಿನೇಷನ್ ಸಿನಿಮಾ ‘ಕಬ್ಜ’ (Kabzaa) ಯಶಸ್ವಿ 25 ದಿನಗಳನ್ನು ಪೂರೈಸಿ, 50ನೇ ದಿನದತ್ತ ಮುನ್ನುಗ್ಗಿದೆ. ಕಳೆದ ಎರಡು ವಾರಗಳಿಂದ ರಿಲೀಸ್ ಆದ ಚಿತ್ರಗಳಿಗೆ ಅಷ್ಟೇನೂ ಒಳ್ಳೆಯ ಪ್ರತಿಕ್ರಿಯೆ ಸಿಗದೇ ಇರುವ ಕಾರಣದಿಂದಾಗಿ ಕಬ್ಜ ಮತ್ತೆ ಚಿತ್ರಮಂದಿರಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಈ ಖುಷಿಯಲ್ಲೇ ನಾಳೆ ವಿಶೇಷ ಸುದ್ದಿಯೊಂದನ್ನು ನೀಡುವುದಾಗಿ ನಿರ್ದೇಶಕ ಆರ್.ಚಂದ್ರು (R. Chandru) ತಿಳಿಸಿದ್ದಾರೆ.

    ಪಬ್ಲಿಕ್ ಟಿವಿ ಡಿಜಿಟಲ್ ನೊಂದಿಗೆ ಮಾತನಾಡಿದ ಚಂದ್ರು, ‘ನನ್ನ ಕನಸಿನ ಸಿನಿಮಾ ಕಬ್ಜ 25 ದಿನಗಳ ಯಶಸ್ವಿ ಪ್ರದರ್ಶನ ಕಂಡಿದೆ. ಈ ಸಂದರ್ಭದಲ್ಲಿ ದೇಶದ ಸಮಸ್ತ ನೋಡುಗರಿಗೆ ಅದರಲ್ಲೂ ವಿಶೇಷವಾಗಿ ಕನ್ನಡಿಗರಿಗೆ ಮತ್ತು ನನ್ನ ಚಿತ್ರತಂಡಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಸಿನಿಮಾವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಅವರಿಗಾಗಿ ನಾಳೆ ವಿಶೇಷ ಸುದ್ದಿಯೊಂದನ್ನು ನೀಡಲಿದ್ದೇನೆ’ ಎಂದರು.

    ನಾಳೆ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿರುವ ಚಂದ್ರು, ಈ ಸಂದರ್ಭದಲ್ಲಿ  ಹೊಸ ಯೋಜನೆ ಮತ್ತು ಯೋಚನೆ ಕುರಿತು ಮಾತನಾಡಲಿದ್ದಾರಂತೆ. ಹೊಸ ಸಿನಿಮಾ ಕುರಿತು ಮಾತನಾಡಲಿದ್ದಾರಾ ಅಥವಾ ಮತ್ತೇನಾದರೂ ವಿಶೇಷವಾದ ವಿಷಯವನ್ನು ಹಂಚಿಕೊಳ್ಳಲಿದ್ದಾರಾ ಕಾದು ನೋಡಬೇಕಿದೆ.

    ನಿರ್ದೇಶನದ ‘ಕಬ್ಜ’ ಸಿನಿಮಾ ಇನ್ನೂ ಹಲವಾರು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈ ನಡುವೆಯೂ ಓಟಿಟಿಯಲ್ಲಿ ಕಬ್ಜ ಲಭ್ಯವಾಗಲಿದೆ. ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬದಂದು ಸಿನಿಮಾ ರಿಲೀಸ್ ಆಗಿತ್ತು. ಮೊನ್ನೆಗೆ ಕಬ್ಜ ರಿಲೀಸ್ ಆಗಿ 25 ದಿನಗಳನ್ನು ಪೂರೈಸಿದೆ. 50ನೇ ದಿನದತ್ತ ಮುನ್ನುಗ್ಗಿದೆ. ಈ ಮಧ್ಯೆಯೂ ಸಿನಿಮಾ ಏಪ್ರಿಲ್ 14 ರಂದು ಅಮೆಜಾನ್ ಪ್ರೈಂ ವಿಡಿಯೋನಲ್ಲಿ ಲಭ್ಯವಾಗಲಿದೆ.

    ಕಬ್ಜ 25 ದಿನಗಳನ್ನು ಪೂರೈಸಿರುವ ಬೆನ್ನಲ್ಲೇ ‘ಕಬ್ಜ 2’ ಚಿತ್ರದ ಬಗ್ಗೆ ನಿರ್ದೇಶಕ ಆರ್.ಚಂದ್ರು ಏನಾದರೂ ಅಪ್ ಡೇಟ್ ಕೊಡಲಿದ್ದಾರಾ ಎಂದು ಅವರ ಅಭಿಮಾನಿಗಳು ಕಾದಿದ್ದರು. ಆದರೆ, ಯಾವುದೇ ಮಾಹಿತಿಯನ್ನು ಚಂದ್ರು ಹಂಚಿಕೊಂಡಿಲ್ಲ. ಕಾರಣ ಮಹತ್ವದ ದಿನಕ್ಕಾಗಿ ಅವರು ಕಾಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

  • ಓಟಿಟಿಗೆ ಲಗ್ಗೆ ಇಟ್ಟ ಆರ್.ಚಂದ್ರು ನಿರ್ದೇಶನದ ‘ಕಬ್ಜ’ : ದಿನಾಂಕ ಘೋಷಣೆ

    ಓಟಿಟಿಗೆ ಲಗ್ಗೆ ಇಟ್ಟ ಆರ್.ಚಂದ್ರು ನಿರ್ದೇಶನದ ‘ಕಬ್ಜ’ : ದಿನಾಂಕ ಘೋಷಣೆ

    ನ್ನಡದ ಪ್ರತಿಭಾವಂತ ನಿರ್ದೇಶಕ ಆರ್.ಚಂದ್ರು (R. Chandru) ನಿರ್ದೇಶನದ ‘ಕಬ್ಜ’ (Kabzaa) ಸಿನಿಮಾ ಇನ್ನೂ ಹಲವಾರು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈ ನಡುವೆಯೂ ಓಟಿಟಿಯಲ್ಲಿ (OTT) ಕಬ್ಜ ಲಭ್ಯವಾಗಲಿದೆ. ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬದಂದು ಸಿನಿಮಾ ರಿಲೀಸ್ ಆಗಿತ್ತು. ಮೊನ್ನೆಗೆ ಕಬ್ಜ ರಿಲೀಸ್ ಆಗಿ 25 ದಿನಗಳನ್ನು ಪೂರೈಸಿದೆ. 50ನೇ ದಿನದತ್ತ ಮುನ್ನುಗ್ಗಿದೆ. ಈ ಮಧ್ಯೆಯೂ ಸಿನಿಮಾ ಏಪ್ರಿಲ್ 14 ರಂದು ಅಮೆಜಾನ್ ಪ್ರೈಂ ವಿಡಿಯೋನಲ್ಲಿ ಲಭ್ಯವಾಗಲಿದೆ.

    ಕಬ್ಜ 25 ದಿನಗಳನ್ನು ಪೂರೈಸಿರುವ ಬೆನ್ನಲ್ಲೇ ‘ಕಬ್ಜ 2’ ಚಿತ್ರದ ಬಗ್ಗೆ ನಿರ್ದೇಶಕ ಆರ್.ಚಂದ್ರು ಏನಾದರೂ ಅಪ್ ಡೇಟ್ ಕೊಡಲಿದ್ದಾರಾ ಎಂದು ಅವರ ಅಭಿಮಾನಿಗಳು ಕಾದಿದ್ದರು. ಆದರೆ, ಯಾವುದೇ ಮಾಹಿತಿಯನ್ನು ಚಂದ್ರು ಹಂಚಿಕೊಂಡಿಲ್ಲ. ಕಾರಣ ಮಹತ್ವದ ದಿನಕ್ಕಾಗಿ ಅವರು ಕಾಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಆರ್.ಚಂದ್ರು ಅವರ ಆಪ್ತರ ಪ್ರಕಾರ ‘ಕಬ್ಜ 2’ ಸಿನಿಮಾ ಇನ್ನೂ ಅದ್ಧೂರಿಯಾಗಿ ಮತ್ತು ವಿಶೇಷ ಸಂಗತಿಗಳೊಂದಿಗೆ ರೆಡಿಯಾಗಲಿದೆಯಂತೆ. ಅಲ್ಲದೇ, ಬಾಲಿವುಡ್ ನಟರೊಬ್ಬರು ಈ ಸಿನಿಮಾದಲ್ಲಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಭಾರತೀಯ ಸಿನಿಮಾ ರಂಗದ ದಿಗ್ಗಜ ನಟರ ಸಮಾಗಮವೇ ಆಗಲಿದೆ ಎಂಬ ಮಾಹಿತಿ ಸಿಕ್ಕಿದೆ. ಆ ಕಲಾವಿದರನ್ನು ಮನಸ್ಸಲ್ಲಿ ಇಟ್ಟುಕೊಂಡೇ ಪಾತ್ರಗಳಿಗೆ ಜೀವ ತುಂಬಲಾಗುತ್ತದೆ ಎಂದು ಹೇಳಲಾಗುತ್ತಿದೆ.

    ಕಾಂತಾರ ಚಿತ್ರದ ನಂತರ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿರುವ ಕಬ್ಜ ಚಿತ್ರ, ಈ ಮೂಲಕ ಆರ್.ಚಂದ್ರುಗೆ ಮತ್ತೊಂದು  ಹಂತದ ಗೆಲುವನ್ನು ತಂದುಕೊಟ್ಟಿದೆ. ಭಾರತೀಯ ಸಿನಿಮಾ ರಂಗವೇ ಮಾತಾಡುವಂತಹ ನಿರ್ದೇಶಕರ ಪಟ್ಟಿಯಲ್ಲಿ ಚಂದ್ರು ಕಾಣಿಸಿಕೊಂಡಿದ್ದಾರೆ. ಈ ಕಾರಣದಿಂದಾಗಿಯೇ ಕಬ್ಜ 2 ಬಗ್ಗೆ ಈಗಾಗಲೇ ಮಾತುಗಳು ಶುರುವಾಗಿವೆ. ಈ ಚಿತ್ರದಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವ ಕುತೂಹಲ ಕೂಡ ಮೂಡಿದೆ.

    ಕಬ್ಜ ಚಿತ್ರದಲ್ಲಿ ಉಪೇಂದ್ರ (Upendra), ಸುದೀಪ್ (Sudeep)  ಮತ್ತು ಶಿವರಾಜ್ ಕುಮಾರ್ (Shivraj Kumar) ಕಾಂಬಿನೇಷನ್ ಅನ್ನು ಮೊದಲ ಬಾರಿಗೆ ತಂದಿದ್ದ ಚಂದ್ರು, ಕಬ್ಜ 2 ನಲ್ಲಿ ಯಾರೆಲ್ಲ ಕಲಾವಿದರನ್ನು ಕೂಡಿಸಲಿದ್ದಾರೆ ಮತ್ತು ಮುಂದಿನ ಕಥೆಯ ಕಟ್ಟುವಿಕೆ ಹೇಗಿರಲಿದೆ ಎನ್ನುವ ಚರ್ಚೆ ಈಗಿನಿಂದಲೇ ಗಾಂಧಿನಗರದಲ್ಲಿ ಶುರುವಾಗಿದೆ.

  • ‘ಕಬ್ಜ 2’ ದೊಡ್ಡದಾಗಿ, ಇನ್ನೂ ಅದ್ಧೂರಿಯಾಗಿ ಇರುತ್ತೆ : ನಿರ್ದೇಶಕ ಆರ್.ಚಂದ್ರು

    ‘ಕಬ್ಜ 2’ ದೊಡ್ಡದಾಗಿ, ಇನ್ನೂ ಅದ್ಧೂರಿಯಾಗಿ ಇರುತ್ತೆ : ನಿರ್ದೇಶಕ ಆರ್.ಚಂದ್ರು

    ಳೆದ ವಾರ ದೇಶಾದ್ಯಂತ ಬಿಡುಗಡೆಯಾದ ‘ಕಬ್ಜ’ (Kabzaa) ಸಿನಿಮಾಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ ‘ಕಬ್ಜ 2’ ಸಿನಿಮಾದ ಬಗ್ಗೆ ನಿರ್ದೇಶಕ ಆರ್.ಚಂದ್ರು (R. Chandru) ಮಾತನಾಡಿದ್ದಾರೆ. ಅತೀ ಶೀಘ್ರದಲ್ಲೇ ಕಬ್ಜ 2 ಸಿನಿಮಾದ ಕೆಲಸದಲ್ಲಿ ತೊಡಗುವುದಾಗಿ ಅವರು ಹೇಳಿದ್ದಾರೆ. ಅಲ್ಲದೇ, ಪಾರ್ಟ್ 2 ಸಿನಿಮಾ ಇನ್ನೂ ದೊಡ್ಡದಾಗಿ ಬರುತ್ತದೆ ಮತ್ತು ಇನ್ನೂ ಅದ್ಧೂರಿಯಾಗಿ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿರುವ ಚಂದ್ರು, ‘ ಕಬ್ಜ ಸಿನಿಮಾ ಕೇವಲ ಕರ್ನಾಟಕ ಕಬ್ಜ ಮಾಡಿಲ್ಲ. ಸಾಕಷ್ಟು ದೇಶಗಳಲ್ಲಿ ಟ್ರೆಂಡ್ ಆಗ್ತಿದೆ. ಬಿಡುಗಡೆಯಾದ ಎಲ್ಲ ಚಿತ್ರಮಂದಿರಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ನನ್ನ ಮೊದಲ ಪ್ಯಾನ್ ಇಂಡಿಯಾ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಈ ಹಿಂದೆ ತಾಜ್ ಮಹಲ್ ರೀತಿಯ ಸಿನಿಮಾ ಕೂಡ ಮಾಡಿದ್ದೆ, ಈಗ ಕಬ್ಜ ಕೂಡ ಮಾಡಿದೀನಿ’ ಎಂದಿದ್ದಾರೆ. ಇದನ್ನೂ ಓದಿ: ಕರದಂಟು ಉದ್ಯಮಿ ಬೆನ್ನಿಗೆ ನಿಂತ ಅಶ್ವಿನಿ ಪುನೀತ್ ರಾಜ್ ಕುಮಾರ್

    ಪುನೀತ್ ರಾಜ್ ಕುಮಾರ್ (Puneeth Rajkumar) ಹುಟ್ಟು ಹಬ್ಬದಂದು ತಮ್ಮ ಚಿತ್ರವನ್ನು ರಿಲೀಸ್ ಮಾಡಿದ್ದ ಚಂದ್ರು, ಈ ಸಿನಿಮಾವನ್ನು ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸುವುದಾಗಿ ಹೇಳಿದ್ದಾರೆ. ಗೆಲುವು ಕೂಡ ಅಪ್ಪು ಅವರಿಗೆ ಅರ್ಪಿತವಾಗಿದ್ದು ಎಂದು ತಿಳಿಸಿರುವ ನಿರ್ದೇಶಕರು, ಅತೀ ಶೀಘ್ರದಲ್ಲೇ ಶಿವರಾಜ್ ಕುಮಾರ್ ಕಬ್ಜ ಸಿನಿಮಾ ನೋಡಲಿದ್ದಾರೆ ಎಂದು ವಿವರಿಸಿದರು. ಶಿವರಾಜ್ ಕುಮಾರ್ ಶೂಟಿಂಗ್ ನಲ್ಲಿ ಇರುವುದರಿಂದ ಸಿನಿಮಾ ನೋಡಲು ಆಗಿಲ್ಲವೆಂದರು.

    ಕಬ್ಜ ಕಲೆಕ್ಷನ್ ವಿಚಾರವಾಗಿ ಗಾಂಧಿನಗರದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಚಿತ್ರತಂಡವೇ ಅಧಿಕೃತ ಮಾಹಿತಿಯನ್ನೂ ಈ ಹಿಂದೆ ಹಂಚಿಕೊಂಡಿದೆ. ಸಿನಿಮಾ ರಿಲೀಸ್ ಆದ ಎರಡನೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿದ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಈವರೆಗಿನ ಒಟ್ಟು ಕಲೆಕ್ಷನ್ ಬಗ್ಗೆ ಮುಂದಿನ ದಿನಗಳಲ್ಲಿ ಹೇಳುವುದಾಗಿ ಚಂದ್ರು ವಿವರ ಹಂಚಿಕೊಂಡಿದ್ದಾರೆ.

  • ಫ್ಯಾಮಿಲಿ ಆಡಿಯನ್ಸ್ ನ ಮತ್ತೆ ಥಿಯೇಟರ್ ಒಳಗೆ ಕರೆಯಿಸಿದ ‘ಕಬ್ಜ’

    ಫ್ಯಾಮಿಲಿ ಆಡಿಯನ್ಸ್ ನ ಮತ್ತೆ ಥಿಯೇಟರ್ ಒಳಗೆ ಕರೆಯಿಸಿದ ‘ಕಬ್ಜ’

    ನ್ನಡದ ಪ್ರತಿಭಾವಂತ ನಿರ್ದೇಶಕ ಆರ್.ಚಂದ್ರು (R. Chandru) ಅವರ ‘ಕಬ್ಜ’ (Kabzaa) ಸಿನಿಮಾ ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಈ ವೀಕೆಂಡ್ ನಲ್ಲೂ ಚಿತ್ರ ಬಾಕ್ಸ್ ಆಫೀಸ್ ಭರ್ತಿ ಮಾಡಿದೆ. ಅದರಲ್ಲೂ ಫ್ಯಾಮಿಲಿ ಆಡಿಯನ್ಸ್ ಮತ್ತೆ ಚಿತ್ರಮಂದಿರಕ್ಕೆ ಬರುವಂತೆ ಮಾಡಿದ ಹೆಗ್ಗಳಿಕೆ ಈ ಸಿನಿಮಾದ್ದು. ಈ ಚಿತ್ರದಲ್ಲಿ ಬರುವ ‘ನಮಾಮಿ ನಮಾಮಿ’ (Namami) ಹಾಡು ಮಹಿಳೆಯರಿಗೆ ಹೆಚ್ಚು ಇಷ್ಟವಾಗಿದ್ದು ಶ್ರಿಯಾ ಶರಣ್ (Shriya Sharan) ಅವರ ಫಾಲೋವರ್ಸ್ ಸಂಖ್ಯೆ ಕೂಡ ಹೆಚ್ಚಾಗಿದೆಯಂತೆ. ಈ ಮಾತನ್ನು ಸ್ವತಃ ಶ್ರಿಯಾ ಹೇಳಿಕೊಂಡಿದ್ದಾರೆ.

    ನಾಳೆ ಯುಗಾದಿ ಹಬ್ಬ. ಹಾಗಾಗಿ ಮತ್ತಷ್ಟು ಶೋಗಳ ಸಂಖ್ಯೆ ಹೆಚ್ಚಿಗೆ ಆಗುವ ಸಾಧ್ಯತೆ ಇದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಅದರಲ್ಲೂ ನಾಳೆ ಫ್ಯಾಮಿಲಿ ಆಡಿಯನ್ಸ್ ಹೆಚ್ಚಾಗಿ ಬರುವ ಸಾಧ್ಯತೆಯನ್ನೂ ತಿಳಿಸಿದೆ. ‘ನಮಾಮಿ’ ಹಾಡಿನಲ್ಲಿ ಶ್ರಿಯಾ ಹಾಕಿರುವ ಕಾಸ್ಟ್ಯೂಮ್, ಜ್ಯುವೆಲರಿಸ್ , ಕಾಲ್ಗೆಜ್ಜೆ ಹೀಗೆ ಮಹಿಳೆಯರನ್ನು ಗಮನ ಸೆಳೆದಿದ್ದು ಸುಳ್ಳಲ್ಲ. ಇದನ್ನೂ ಓದಿ: ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ : ನಟನ ನಿವಾಸಕ್ಕೆ ಫುಲ್ ಸೆಕ್ಯೂರಿಟಿ

    ಸಿನಿಮಾ ರಿಲೀಸ್ ಆಗಿ ಎರಡನೇ ದಿನಕ್ಕೆ ಕಬ್ಜ ಸಿನಿಮಾ 100 ಕೋಟಿ ಕ್ಲಬ್ ಸೇರಿರುವ ಕುರಿತು ಅಧಿಕೃತವಾಗಿಯೇ ಚಿತ್ರತಂಡ ಮಾಹಿತಿ ನೀಡಿತ್ತು. ಇದೀಗ 250 ಕೋಟಿಯ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಥಿಯೇಟರ್ ಹಾಗೂ ಡಿಜಿಟಲ್, ಡಬ್ಬಿಂಗ್ ರೈಟ್ಸ್ ಇವೆಲ್ಲವೂ ಸೇರಿ 200 ಕೋಟಿ ರೂಪಾಯಿಗೂ ಅಧಿಕ ಹಣ ಬಂದಿದೆ ಎಂದು ಅಂದಾಜಿಸಲಾಗುತ್ತಿದೆ.

    ನಾನಾ ಕಾರಣಗಳಿಂದಾಗಿ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡುತ್ತಿದೆ. ಉಪೇಂದ್ರ (Upendra), ಸುದೀಪ್ ಮತ್ತು ಶಿವರಾಜ್ ಕುಮಾರ್ ಮೂವರು ಸ್ಟಾರ್ ನಟರು ಇದೇ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ. ಅಚ್ಚರಿ ಎನ್ನುವಂತೆ ಚಂದ್ರು ಮೇಕಿಂಗ್ ಮಾಡಿದ್ದಾರೆ. ಅದ್ಧೂರಿಯಾಗಿ ಸಿನಿಮಾ ಮೂಡಿ ಬಂದಿದೆ. ನುರಿತ ತಂತ್ರಜ್ಞರ ತಂಡವೇ ಈ ಚಿತ್ರದಲ್ಲಿ ಒಂದಾಗಿದೆ.

  • ಕತಾರ್ ನಲ್ಲೂ ‘ಕಬ್ಜ’ ಅಬ್ಬರ : ಅಲ್ಲಿ ಮಾಡಿದ ದಾಖಲೆ ಯಾವುದು?

    ಕತಾರ್ ನಲ್ಲೂ ‘ಕಬ್ಜ’ ಅಬ್ಬರ : ಅಲ್ಲಿ ಮಾಡಿದ ದಾಖಲೆ ಯಾವುದು?

    ನಾಯಕ ನಟ ಉಪೇಂದ್ರ (Upendra), ಕಿಚ್ಚ ಸುದೀಪ್ ಹಾಗೂ ಶಿವರಾಜ್ ಕುಮಾರ್ ನಟಿಸಿರುವ, ಆರ್ ಚಂದ್ರು (R. Chandru) ನಿರ್ದೇಶನದ  ಕಬ್ಜ (Kabzaa) ಚಿತ್ರವು  ದೋಹ ಕತಾರ್ ನಲ್ಲಿ (Qatar) ಕರ್ನಾಟಕ ಸಂಘ ಕತಾರ್ ಹಾಗೂ ಕೋರ್ಸಿಸ್ ಕನ್ನಡ ಮೂವೀಸ್ ಸಂಯೋಗದೊಂದಿಗೆ ಸ್ಪೆಷಲ್ ಶೋ ಆಯೋಜಿಸಿದರು. ಚಿತ್ರವು ಕತಾರ್ ನಲ್ಲಿ ಮೊಟ್ಟಮೊದಲ ಬಾರಿಗೆ 11 ಕಿಂತ ಹೆಚ್ಚು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ.  ಪೂರ್ಣವಾಗಿ ಸ್ಕ್ರಿಪ್ಟ್, ಸ್ಕ್ರೀನ್ ಪ್ಲೇ, ಚಿತ್ರಕಥೆ ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ.

    ಉಪೇಂದ್ರ ಹಾಗೂ ಕಿಚ್ಚ ಸುದೀಪ್  ಅಭಿಮಾನಿಗಳು ಕೇಕ್ ಕತ್ತರಿಸಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರು. ವಿಶೇಷ ಪ್ರದರ್ಶನಕ್ಕೆ ಕರ್ನಾಟಕ ಸಂಘ ಕತಾರ್ ಅಧ್ಯಕ್ಷ ಮಹೇಶ್ ಗೌಡ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಮತ್ತು ಶ್ರೀ ಪ್ರಭುರಾಜ್ ಅವರು ಏರ್ಪಡಿಸಿದ್ದರು.

    ಶ್ರೀಯುತ ಮಹೇಶ್ ಗೌಡರವರ ಮಾತನಾಡಿ ಕಬ್ಜ ಚಿತ್ರವು 100ದಿನಗಳು ಸಸಿಯಾಗಿ ಸಾಗಲಿ ಎಂದು ಹಾರೈಸಿದರು, ಶ್ರೀಯುತ ಸುಬ್ರಮಣ್ಯ ಹೆಬ್ಬಾಗಿಲು ಅವರು ಮಾತನಾಡಿ ಕನ್ನಡ ಸಿನಿಮಾಗಳು ಕತಾರ್ ನಲ್ಲಿ ಇದೇ ರೀತಿ ಅದ್ದೂರಿಯಾಗಿ ತೆರೆ ಗೊಳ್ಳಲು  ಪ್ರಯತ್ನ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅನೇಕ ಕನ್ನಡ ಚಿತ್ರ ಪ್ರೇಮಿಗಳು ಕಬ್ಜ 2 ಕ ಚಿತ್ರವು ಇನ್ನು ಅದ್ದೂರಿಯಾಗಿ ಬರುತ್ತಿರುವ ನಿರೀಕ್ಷೆಯಲ್ಲಿದ್ದಾರೆ.

    ಕೆಜಿಎಫ್, ಕಾಂತಾರ ಸಿನಿಮಾದ ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕಬ್ಜ ಸಖತ್ ಸದ್ದು ಮಾಡುತ್ತಿದೆ. ಆರ್.ಚಂದ್ರು ಅವರ ಆಪ್ತರ ಮಾಹಿತಿಯಂತೆ, ಹಲವು ಸಿನಿಮಾ ರಂಗಗಳಿಂದ ಚಂದ್ರು ಅವರಿಗೆ ಆಫರ್ ಕೂಡ ಬರುತ್ತಿವೆಯಂತೆ. ಅದರಲ್ಲೂ ಬಾಲಿವುಡ್ ನ ಹೆಸರಾಂತ ಸಂಸ್ಥೆಯೊಂದು ಕಬ್ಜ ಸಿನಿಮಾ ವೀಕ್ಷಿಸಿದ ನಂತರ ಚಂದ್ರು ಅವರನ್ನು ಕಾಂಟ್ಯಾಕ್ಟ್ ಮಾಡಿದೆ ಎಂದು ಹೇಳಲಾಗುತ್ತಿದೆ.

    ಕರ್ನಾಟಕದಲ್ಲೇ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕಬ್ಜ ಸಿನಿಮಾ ರಿಲೀಸ್ ಆಗಿದ್ದು, ವೀಕೆಂಡ್ ನಲ್ಲಿ ಬಹುತೇಕ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ ಎಂದು ವಿತರಕ ಮೋಹನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು, ಮತ್ತಷ್ಟು ಪ್ರದರ್ಶನಗಳ ಬೇಡಿಕೆ ಬರುತ್ತಿದೆ ಎಂದು ಅವರು ಹೇಳಿದರು. ಕಳೆದ ಮೂರು ದಿನಗಳಿಂದ ಭಾರತದಾದ್ಯಂತ ಕಬ್ಜ ಕ್ರೇಜ್ ಕ್ರಿಯೇಟ್ ಮಾಡಿದ್ದು, ಕನ್ನಡದ ಮತ್ತೊಂದು ಚಿತ್ರ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಿದೆ.

  • ‘ಕಬ್ಜ’ 100 ಕೋಟಿ ಕ್ಲಬ್ ಸೇರ್ಪಡೆ: ವೀಕೆಂಡ್ ನಲ್ಲಿ ಇನ್ನೂ ಹೆಚ್ಚಿದ ಕಲೆಕ್ಷನ್

    ‘ಕಬ್ಜ’ 100 ಕೋಟಿ ಕ್ಲಬ್ ಸೇರ್ಪಡೆ: ವೀಕೆಂಡ್ ನಲ್ಲಿ ಇನ್ನೂ ಹೆಚ್ಚಿದ ಕಲೆಕ್ಷನ್

    ಆರ್.ಚಂದ್ರು (R. Chandru) ನಿರ್ದೇಶನದಲ್ಲಿ ಮೂಡಿ ಬಂದ ‘ಕಬ್ಜ’ (Kabzaa) ಸಿನಿಮಾ ರಿಲೀಸ್ ಆದ ಎರಡೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದೆ. ನಿನ್ನೆ ಚಿತ್ರತಂಡವು ಪತ್ರಿಕಾಗೋಷ್ಠಿ ಮಾಡಿ ಅಧಿಕೃತವಾಗಿಯೇ ಮಾಹಿತಿಯನ್ನು ಹಂಚಿಕೊಂಡಿದೆ. ಕಬ್ಜ ನೂರು ಕೋಟಿ ಕ್ಲಬ್ (100 Crore Club) ಸೇರುತ್ತಿದ್ದಂತೆಯೇ ಚಿತ್ರೋದ್ಯಮದಲ್ಲಿ ಹುಮ್ಮಸ್ಸು ಹೆಚ್ಚಿದೆ. ಸ್ಯಾಂಡಲ್ ವುಡ್ ಅನೇಕ ಕಲಾವಿದರು ಹಾಗೂ ತಂತ್ರಜ್ಞರು ಚಿತ್ರಕ್ಕೆ ಶುಭಾಶಯಗಳನ್ನು ತಿಳಿಸಿ, ಚಂದ್ರು ಬೆನ್ನಿಗೆ ನಿಂತಿದ್ದಾರೆ.

    ಸಿನಿಮಾದ ಯಶಸ್ಸಿನ ಕುರಿತು ಮಾತನಾಡಿರುವ ಉಪೇಂದ್ರ (Upendra), ‘ಇದು ನಿರೀಕ್ಷೆಗೂ ಮೀರಿ ಬಂದ ಪ್ರತಿಕ್ರಿಯೆ. ಒಂದು ಸಿನಿಮಾ ಗೆದ್ದರೆ ಉದ್ಯಮ ಉಸಿರಾಡುತ್ತದೆ’ ಎಂದಿದ್ದಾರೆ. ಪರೋಕ್ಷವಾಗಿ ಕಬ್ಜ ಮತ್ತೆ ಚಿತ್ರೋದ್ಯಮವನ್ನು ಉಸಿರಾಡುವಂತೆ ಮಾಡಿದೆ ಎಂದು ಹೆಮ್ಮೆಯಿಂದ ಮಾತನಾಡಿದ್ದಾರೆ. ಈ ಸಿನಿಮಾದ ಗೆಲುವಿನ ಬೆನ್ನಲ್ಲೇ ಕಬ್ಜ 2 ಸಿನಿಮಾದ ಕುರಿತು ಹಲವು ಚರ್ಚೆಗಳು ನಡೆದಿರುವ ಕುರಿತು ಮಾತನಾಡಿದರು. ಇದನ್ನೂ ಓದಿ: ನಟ ಅಭಿಷೇಕ್ – ಮಹೇಶ್ ಕಾಂಬಿನೇಷನ್ ಚಿತ್ರದಲ್ಲಿ ನಟಿ ಅಮೂಲ್ಯ

    ಕೆಜಿಎಫ್, ಕಾಂತಾರ ಸಿನಿಮಾದ ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕಬ್ಜ ಸಖತ್ ಸದ್ದು ಮಾಡುತ್ತಿದೆ. ಆರ್.ಚಂದ್ರು ಅವರ ಆಪ್ತರ ಮಾಹಿತಿಯಂತೆ, ಹಲವು ಸಿನಿಮಾ ರಂಗಗಳಿಂದ ಚಂದ್ರು ಅವರಿಗೆ ಆಫರ್ ಕೂಡ ಬರುತ್ತಿವೆಯಂತೆ. ಅದರಲ್ಲೂ ಬಾಲಿವುಡ್ ನ ಹೆಸರಾಂತ ಸಂಸ್ಥೆಯೊಂದು ಕಬ್ಜ ಸಿನಿಮಾ ವೀಕ್ಷಿಸಿದ ನಂತರ ಚಂದ್ರು ಅವರನ್ನು ಕಾಂಟ್ಯಾಕ್ಟ್ ಮಾಡಿದೆ ಎಂದು ಹೇಳಲಾಗುತ್ತಿದೆ.

    ಕರ್ನಾಟಕದಲ್ಲೇ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕಬ್ಜ ಸಿನಿಮಾ ರಿಲೀಸ್ ಆಗಿದ್ದು, ವೀಕೆಂಡ್ ನಲ್ಲಿ ಬಹುತೇಕ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ ಎಂದು ವಿತರಕ ಮೋಹನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು, ಮತ್ತಷ್ಟು ಪ್ರದರ್ಶನಗಳ ಬೇಡಿಕೆ ಬರುತ್ತಿದೆ ಎಂದು ಅವರು ಹೇಳಿದರು. ಕಳೆದ ಮೂರು ದಿನಗಳಿಂದ ಭಾರತದಾದ್ಯಂತ ಕಬ್ಜ ಕ್ರೇಜ್ ಕ್ರಿಯೇಟ್ ಮಾಡಿದ್ದು, ಕನ್ನಡದ ಮತ್ತೊಂದು ಚಿತ್ರ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಿದೆ.

  • ಪವನ್ ಕಲ್ಯಾಣ್‌ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಆರ್.ಚಂದ್ರು

    ಪವನ್ ಕಲ್ಯಾಣ್‌ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಆರ್.ಚಂದ್ರು

    ರ್.ಚಂದ್ರು (R.Chandru) ಮತ್ತು ರಿಯಲ್ ಸ್ಟಾರ್ ಉಪೇಂದ್ರ (Upendra) ಕಾಂಬಿನೇಷನ್‌ನಲ್ಲಿ ಮೂಡಿ ಬಂದ `ಕಬ್ಜ’ 3ನೇ (Kabzaa) ಸಿನಿಮಾ ಇದಾಗಿದ್ದು, ಅಪ್ಪು ಹುಟ್ಟುಹಬ್ಬದ ದಿನ ಮಾರ್ಚ್ 17ಕ್ಕೆ ತೆರೆಗೆ ಅಪ್ಪಳಿಸಿದೆ. ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಕೂಡ ಬಂದಿದೆ. ಹೀಗಿರುವಾಗ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ತೆಲುಗಿನ ಸೂಪರ್ ಸ್ಟಾರ್‌ಗೆ ಆರ್.ಚಂದ್ರು ನಿರ್ದೇಶನ ಮಾಡಲಿದ್ದಾರೆ.

    ಮಾರ್ಚ್ 16ರಂದು ಉಪ್ಪಿ, ಕೆ.ಪಿ ಶ್ರೀಕಾಂತ್ ಜೊತೆ ಆರ್.ಚಂದ್ರು ತಿರುಪತಿಗೆ ಭೇಟಿ ಕೊಟ್ಟಿದ್ದರು. `ಕಬ್ಜ’ ಸಿನಿಮಾ ರಿಲೀಸ್‌ಗೂ ಮುನ್ನವೇ ವಿಶೇಷ ಪೂಜೆ ಮಾಡಿಸಿದ್ದರು. ದೇವರ ದರ್ಶನ ಪಡೆದ ನಂತರ ಪವನ್ ಕಲ್ಯಾಣ್ (Pawan Kalyan)  ಅವರನ್ನ ಆರ್.ಚಂದ್ರು ಭೇಟಿಯಾಗಿದ್ದಾರೆ. `ಕಬ್ಜ’ ಸಿನಿಮಾವನ್ನ ಅವರಿಗೆ ತೋರಿಸಿದ್ದಾರೆ. ಪವನ್ ಕಲ್ಯಾಣ್ ಕೂಡ `ಕಬ್ಜ’ ಚಿತ್ರವನ್ನ ನೋಡಿ ಇಷ್ಟಪಟ್ಟಿದ್ದಾರೆ. ಹಾಗಾಗಿ ಆರ್.ಚಂದ್ರು ಜೊತೆ ಸಿನಿಮಾ ಮಾಡುವ ಆಸಕ್ತಿ ತೋರಿಸಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಇಂದು ಜಿನಿವಾ ನಗರದಲ್ಲಿ ‘ಕಾಂತಾರ’ ಚಿತ್ರದ ಪ್ರದರ್ಶನ

    ಪವನ್ ಕಲ್ಯಾಣ್ ಅವರು ಮಾಸ್, ರಗಡ್ ಪಾತ್ರದ ಮೂಲಕ ಈಗಾಗಲೇ ಮನಗೆದ್ದಿದ್ದಾರೆ. ಈಗ ಆರ್.ಚಂದ್ರು ಕೂಡ ಅಂತಹದ್ದೇ ಮಾಸ್ ಚಿತ್ರ ಮಾಡಲು ಹೊರಟಿದ್ದಾರೆ. ಇಬ್ಬರ ಕಾಂಬಿನೇಷನ್ ತೆರೆಯ ಮೇಲೆ ಅದೆಷ್ಟರ ಮಟ್ಟಿಗೆ ಕಮಾಲ್ ಮಾಡಲಿದೆ ಎಂಬುದನ್ನ ಕಾದುನೋಡಬೇಕಿದೆ.

    ಸದ್ಯ `ಕಬ್ಜ’ (Kabzaa) ಮೂಲಕ ಮಲ್ಟಿಸ್ಟಾರ್ ಸಿನಿಮಾ ಮಾಡಿ ಗಮನ ಸೆಳೆದಿರುವ ಆರ್.ಚಂದ್ರು, ಇದೀಗ ಹೊಸ ಬಗೆಯ ಸಿನಿಮಾ ಮಾಡಲು ಮುಂದಾಗಿದ್ದಾರೆ.