ಬಾಲಿವುಡ್ ಬೆಡಗಿ ಕೃತಿ ಸನೋನ್ (Kriti Sanon) ಸಿನಿಮಾಗಿಂತ ಆಗಾಗ ವೈಯಕ್ತಿಕ ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಉದ್ಯಮಿ ಕಬೀರ್ ಬಹಿಯಾ (Kabir Bahia) ಜೊತೆಗಿನ ಡೇಟಿಂಗ್ ಬಗ್ಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಕಬೀರ್ ಜೊತೆಗಿನ ರಿಲೇಷನ್‌ಶಿಪ್ ಸುದ್ದಿ ಸುಳ್ಳು ಎಂದು ಕೃತಿ ಸನೋನ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ದರ್ಶನ್ ನೋಡಲು ಜೈಲಿಗೆ ಬಂದ ನಟ ಅಭಿಷೇಕ್, ಧನ್ವೀರ್, ಚಿಕ್ಕಣ್ಣ

ಸುಳ್ಳು ಸುದ್ದಿ ವೈರಲ್ ಆದಾಗ ನನಗೆ ಮಾತ್ರವಲ್ಲದೇ ನಮ್ಮ ಕುಟುಂಬಕ್ಕೂ ನೋವಾಗುತ್ತದೆ. ಒಬ್ಬರ ಬಗ್ಗೆ ಕಟ್ಟುಕಥೆ ಹರಡುವುದಕ್ಕೂ ಮುನ್ನ ನಿಜವೇನು ಎಂಬುದು ತಿಳಿದುಕೊಳ್ಳಬೇಕು. ಇಂತಹ ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ ಬೇಗನೆ ವೈರಲ್ ಆಗುತ್ತದೆ. ಹೀಗೆ ಸುಳ್ಳು ಸುದ್ದಿ ಪ್ರತಿ ಬಾರಿ ಹಬ್ಬಿದಾಗ ಸ್ಪಷ್ಟನೆ ನೀಡುವುದು ಕಿರಿಕಿರಿ ಆಗುತ್ತದೆ. ಅದಕ್ಕಿಂತ ದೊಡ್ಡ ತಲೆನೋವು ಬೇರೊಂದಿಲ್ಲ ಎಂದು ಸಂದರ್ಶನವೊಂದರಲ್ಲಿ ಕೃತಿ ಸನೋನ್ ಮಾತನಾಡಿದ್ದಾರೆ. ಈ ಮೂಲಕ ಕಬೀರ್ ಜೊತೆಗಿನ ಡೇಟಿಂಗ್ ವಿಚಾರ ಸುಳ್ಳು ಎಂದು ಕ್ಲ್ಯಾರಿಟಿ ಕೊಟ್ಟಿದ್ದಾರೆ.

ಇತ್ತೀಚೆಗೆ ತನಗಿಂತ 10 ವರ್ಷ ಕಿರಿಯನಾಗಿರುವ ಕಬೀರ್ ಜೊತೆ ಕೃತಿ ಸನೋನ್ ಗ್ರೀಸ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ಎನ್ನಲಾದ ಕೆಲ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇಬ್ಬರ ಸಂಬಂಧದ ಬಗ್ಗೆ ಭಾರೀ ಚರ್ಚೆ ಶುರುವಾಗಿತ್ತು. ಈ ವಿಷ್ಯ ಕೃತಿ ಕಿವಿಗೂ ಬಿದ್ದಿದೆ. ಈ ಹಿನ್ನೆಲೆ ನಟಿ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ.
ಅಂದಹಾಗೆ, ‘ಕ್ರೀವ್’ (Crew Film) ಸಿನಿಮಾದ ಸಕ್ಸಸ್ ನಂತರ ‘ಕಣ್ಣಪ್ಪ’ (Kannappa) ಸಿನಿಮಾದಲ್ಲಿ ಕೃತಿ ಸನೋನ್ ಕಾಣಿಸಿಕೊಳ್ತಿದ್ದಾರೆ. ಬಾಲಿವುಡ್‌ನ ಹಲವು ಪ್ರಾಜೆಕ್ಟ್‌ಗಳು ನಟಿಯ ಕೈಯಲ್ಲಿವೆ.




ನಟಿ ಕೃತಿ ಸನೋನ್ ಶೂಟಿಂಗ್‌ಗೆ ಬ್ರೇಕ್ ಹಾಕಿ ಲಂಡನ್‌ಗೆ ಹಾರಿದ್ದಾರೆ. ಮಿಸ್ಟರಿ ಮ್ಯಾನ್ ಜೊತೆ ಸುಂದರ ಸಮಯ ಕಳೆಯುತ್ತಿದ್ದಾರೆ. ಲಂಡನ್ ಬೀದಿಗಳಲ್ಲಿ ನಿಗೂಢ ವ್ಯಕ್ತಿ ಜೊತೆ ಕೈ ಹಿಡಿದು ಓಡಾಡಿದ್ದಾರೆ. ಸದ್ಯ ಇಬ್ಬರು ಜೊತೆ ಇರುವ ಫೋಟೋ ವೈರಲ್ ಆಗಿದ್ದು, ಆ ಹುಡುಗ ಯಾರು ಎಂದು ಫ್ಯಾನ್ಸ್ ಕ್ಯೂರಿಯಸ್ ಆಗಿದ್ದಾರೆ.
ಕಬೀರ್ ಬಹಿಯಾ ಎಂಬುವರ ಜೊತೆ ಕೃತಿ ಲಂಡನ್ ಡೇಸ್ ಎಂಜಾಯ್ ಮಾಡುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರೀ ಚರ್ಚೆ ಆಗುತ್ತಿದ್ದು, ನಟಿಯ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಇದನ್ನೂ ಓದಿ:
ಕಬೀರ್ ಬಹಿಯಾ ಅವರು ಲೆಜೆಂಡರಿ ಕ್ರಿಕೆಟಿಗ ಎಂಎಸ್ ಧೋನಿ ಅವರೊಂದಿಗೆ ಆಪ್ತ ಎನ್ನಲಾಗಿದೆ, ಧೋನಿ ಪತ್ನಿ ಸಾಕ್ಷಿ ಆಗಾಗ್ಗೆ ಕಬೀರ್ ಜೊತೆಗಿನ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದರು. ಕಬೀರ್ ಅವರು ಎಂಎಸ್ ಧೋನಿ ಪತ್ನಿಯ ಸಂಬಂಧಿ ಎನ್ನಲಾಗಿದೆ. ಈ ಕಬೀರ್ ಬಹಿಯಾ ಯುಕೆ ಮೂಲದ ಮಿಲಿಯನೇರ್ ಉದ್ಯಮಿ ಎಂದು ಹೇಳಲಾಗುತ್ತಿದೆ.