Tag: Kabini

  • ಕೆಆರ್ ಎಸ್ ಭರ್ತಿಗೆ ಇನ್ನು 13 ಅಡಿ ಬಾಕಿ -5 ದಿನಗಳ ಕಾಲ ರಾಜ್ಯಾದ್ಯಂತ ಮಳೆ

    ಕೆಆರ್ ಎಸ್ ಭರ್ತಿಗೆ ಇನ್ನು 13 ಅಡಿ ಬಾಕಿ -5 ದಿನಗಳ ಕಾಲ ರಾಜ್ಯಾದ್ಯಂತ ಮಳೆ

    ಮಂಡ್ಯ: ಮಡಿಕೇರಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಕೆಆರ್ ಎಸ್ ಜಲಾಶಯದ ಒಳ ಹರಿವು ಹೆಚ್ಚಳ ಆಗಿದೆ. ಈಗಾಗಲೇ ಕೆಆರ್ ಎಸ್ ನೀರಿನ ಮಟ್ಟ 110 ಅಡಿ ದಾಟಿದ್ದು, ಜಲಾಶಯ ಭರ್ತಿ ಆಗಲು ಇನ್ನು ಕೇವಲ 13 ಅಡಿಗಳಷ್ಟೇ ಬಾಕಿ ಇದೆ.

    ಮಡಿಕೇರಿಯಲ್ಲಿ ಮಳೆರಾಯನ ಅಬ್ಬರದಿಂದ ಕಾವೇರಿ ಕೊಳ್ಳದ ರೈತರಲ್ಲಿ ಸಂತಸ ಮನೆ ಮಾಡಿದೆ. ಇನ್ನು ಮಳೆಗಾಲ ಮುಗಿಯುವ ಒಂದು ತಿಂಗಳ ಮುಂಚಿತವಾಗಿಯೇ ಕಾವೇರಿ ಕೊಳ್ಳದ ಎಲ್ಲಾ ಜಲಾಶಯಗಳ ಭರ್ತಿ ಆಗಲಿದೆ.

    ಇಂದಿನಿಂದ 5 ದಿನಗಳ ಕಾಲ ರಾಜ್ಯಾದ್ಯಂತ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು, ಶಿವಮೊಗ್ಗದಲ್ಲಿ ಭಾರೀ ಮಳೆಯಾಗುತ್ತಿದ್ದು, ತೀರ್ಥಹಳ್ಳಿಯಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇತ್ತು ಉಡುಪಿ, ಕೊಡಗು, ಮಂಗೂರಿನಲ್ಲಿ ಜಿಟಿಜಿಟಿ ಮಳೆ ಹಾಗೆ ಮುಂದುವರಿದಿದ್ದು, ನೆರೆ ಕಡಿಮೆಯಾಗಿಲ್ಲ. ಇದನ್ನೂ ಓದಿ: ಕೆಆರ್ ಎಸ್ ಜಲಾಶಯದಲ್ಲಿ 100 ಅಡಿ ನೀರು ಸಂಗ್ರಹ- ರೈತರು ಫುಲ್ ಖುಷ್

    ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳ ಸದ್ಯದ ನೀರಿನ ಪ್ರಮಾಣ ಇಂತಿದೆ:

    ಕೆಆರ್ ಎಸ್ (ಮಂಡ್ಯ)
    * ಇಂದಿನ ಮಟ್ಟ – 110.40 ಅಡಿ (ಗರಿಷ್ಠ 124.80 ಅಡಿ)
    * ಒಳ ಹರಿವು – 22437 ಕ್ಯೂಸಕ್
    * ಹೊರ ಹರಿವು – 3499 ಕ್ಯೂಸಕ್

    ಕಬಿನಿ (ಮೈಸೂರಿನ ಎಚ್.ಡಿ.ಕೋಟೆಯ ಬೀಚನಹಳ್ಳಿಯಲ್ಲಿದೆ)
    * ಇಂದಿನ ಮಟ್ಟ – 2282 ಅಡಿ ( ಗರಿಷ್ಠ 2,284 ಅಡಿ)
    * ಒಳ ಹರಿವು – 32,635 ಕ್ಯೂಸೆಕ್
    * ಹೊರ ಹರಿವು – 36,000 ಕ್ಯೂಸೆಕ್

    ಹಾರಂಗಿ (ಕೊಡಗಿನ ಸೋಮವಾರಪೇಟೆಯ ಹುದ್ಗೂರು)
    * ಇಂದಿನ ಮಟ್ಟ – 2857.43 ಅಡಿ (ಗರಿಷ್ಠ 2,859 ಅಡಿ)
    * ಒಳ ಹರಿವು – 11675 ಕ್ಯೂಸೆಕ್
    * ಹೊರ ಹರಿವು – 8934 ಕ್ಯೂಸೆಕ್

    ಹೇಮಾವತಿ (ಹಾಸನದ ಗೋರುರು)
    * ಇಂದಿನ ಮಟ್ಟ – 2908.91 ಅಡಿ (ಗರಿಷ್ಠ 2922.00 ಅಡಿ)
    * ಒಳ ಹರಿವು – 11001 ಕ್ಯೂಸೆಕ್
    * ಹೊರ ಹರಿವು – 2730 ಕ್ಯೂಸೆಕ್

    ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು Cubic feet per Second ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

  • ಕಬಿನಿ ಜಲಾಶಯ ಜೂನ್‍ನಲ್ಲೇ ಭರ್ತಿ- ಬಾಗಿನ ಅರ್ಪಣೆಗೆ ಎಚ್‍ಡಿಕೆಯಿಂದ ವಿಳಂಬ

    ಕಬಿನಿ ಜಲಾಶಯ ಜೂನ್‍ನಲ್ಲೇ ಭರ್ತಿ- ಬಾಗಿನ ಅರ್ಪಣೆಗೆ ಎಚ್‍ಡಿಕೆಯಿಂದ ವಿಳಂಬ

    ಮೈಸೂರ: ರಾಜ್ಯದಲ್ಲಿ ಮುಂಗಾರು ಸಾಕಷ್ಟು ಪ್ರಮಾಣದಲ್ಲಿ ಸುರಿದಿದ್ದರಿಂದ ಜಿಲ್ಲೆಯ ಪ್ರತಿಷ್ಠಿತ ಕಬಿನಿ ಜಲಾಶಯ ಭರ್ತಿಯಾಗಿದೆ.

    ರಾಜ್ಯದಲ್ಲೇ ಮೊದಲು ತುಂಬುವ ಜಲಾಶಯ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಜಿಲ್ಲೆಯ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯ ಪ್ರತಿಬಾರಿಯೂ ಜುಲೈನಲ್ಲಿ ಭರ್ತಿಯಾಗುತ್ತದೆ. ಆದರೆ ಈ ಬಾರಿ ಕೇರಳದ ವೈನಾಡ್ ಪ್ರದೇಶದಲ್ಲಿ ಸಾಕಷ್ಟು ಮಳೆಯಾದ್ದರಿಂದ ಒಳ ಹರಿವು ಹೆಚ್ಚಿದ್ದು ಜೂನ್ ವೇಳೆಯಲ್ಲೇ ಭರ್ತಿಯಾಗಿದೆ.

    ತಾರಕಾ ಜಲಾಶಯದಲ್ಲೂ 101 ಅಡಿ ನೀರಿದ್ದು, ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಸಧಿಕ ಮಳೆ ಬೀಳುತ್ತಿರುವುದರಿಂದ ಜಲಾಶಯಕ್ಕೆ 100 ರಿಂದ 150 ಅಡಿ ಹೆಚ್ಚಿನ ಒಳಹರಿವು ಬಂದು ಕಬಿನಿ ಜಲಾಶಯ ತುಂಬಿದೆ.

    ರಾಜ್ಯದಲ್ಲಿ ಮಳೆ ಹೆಚ್ಚಾಗಿದ್ದರಿಂದ ಡ್ಯಾಮ್ ನ ಹೊರಹರಿವನ್ನು 35 ಸಾವಿರ ಕ್ಯೂಸೆಕ್ ಹೆಚ್ಚಿಸಲಾಗಿತ್ತು. ಈಗ ಮಳೆ ಕ್ಷೀಣಿಸಿದ ಕಾರಣ ಹೊರಹರಿವನ್ನು 500 ಕ್ಯೂಸೆಕ್‍ಗೆ ಇಳಿಸಲಾಗಿದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ. ಜಲಾಶಯದ ಗರಿಷ್ಠ ಮಟ್ಟ 2284 ಅಡಿಗಳಾಗಿದ್ದು, ಈಗಾಗಲೇ 2282 ಅಡಿಗಳಷ್ಟು ನೀರನ್ನು ಸಂಗ್ರಹಿಸಲಾಗಿದೆ. ಡ್ಯಾಮ್ ನ ಸುರಕ್ಷತೆಯ ದೃಷ್ಟಿಯಿಂದ ಬಾಗಿನ ಅರ್ಪಿಸುವ ಮೊದಲೇ ನೀರನ್ನು ಹೊರಗೆ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಜಲಾಶಯ ನಿರ್ಮಾಣವಾದಾಗಿನಿಂದ ಇದುವರೆಗೂ ಡ್ಯಾಮ್ ಜೂನ್ ಮೂರನವೇ ವಾರದ ಒಳಗಡೆ ತುಂಬಿರುವ ಉದಾಹರಣೆಯೇ ಇಲ್ಲ. ರಾಜ್ಯದಲ್ಲಿಯೇ ಇದೇ ಮೊದಲ ಬಾರಿಗೆ ಜೂನ್ ನಲ್ಲಿ ಭರ್ತಿಯಾಗಿದೆ. ಕಳೆದ ಬಾರಿ ಸೆಪ್ಟೆಂಬರ್ ನಲ್ಲಿ ಜಲಾಶಯ ಭರ್ತಿಯಾಗಿದ್ದು ಸಿದ್ದರಾಮಯ್ಯನವರು ಬಾಗಿನ ಅರ್ಪಿಸಿದ್ದರು.

    ಕಬಿನಿ ತುಂಬಿದ ತಕ್ಷಣ ಅವಳಿಗೆ ಬಾಗಿನ ಅರ್ಪಿಸುವುದು ವಾಡಿಕೆ. ನೀರನ್ನು ಹೊರಗೆ ಬಿಡುವ ಮೊದಲೇ ಕಬಿನಿಗೆ ಬಾಗಿನ ಅರ್ಪಿಸಬೇಕು. ಆದರೆ ಜಲಾಶಯ ತುಂಬಿದ್ದರೂ ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ಬಾಗಿನ ಅರ್ಪಿಸಲು ವಿಳಂಬ ಮಾಡಿದ್ದಾರೆ. ಆದರೆ ಕಳೆದ ಬಾರಿ ಸಿದ್ದರಾಮಯ್ಯ ಮುಂಚಿತವಾಗಿಯೇ ಬಾಗಿನ ಅರ್ಪಿಸಿದ್ದರು.

    ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು ಕ್ಯೂಬಿಕ್ ಫೀಟ್ ಪರ್ ಸೆಕೆಂಡ್ ನ ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

  • ಕಬಿನಿ ಜಲಾಶಯದ ಸಂಪೂರ್ಣ ಭರ್ತಿಗೆ ಅರ್ಧ ಅಡಿ ಮಾತ್ರ ಬಾಕಿ

    ಕಬಿನಿ ಜಲಾಶಯದ ಸಂಪೂರ್ಣ ಭರ್ತಿಗೆ ಅರ್ಧ ಅಡಿ ಮಾತ್ರ ಬಾಕಿ

    ಮೈಸೂರು: ಹೆಚ್‍ಡಿ ಕೋಟೆ ತಾಲೂಕಿನ ಕಬಿನಿ ಜಲಾಶಯ ಸಂಪೂರ್ಣ ಭರ್ತಿಗೆ ಇನ್ನೂ ಅರ್ಧ ಅಡಿ ಮಾತ್ರ ಬಾಕಿ ಇದೆ. ಜಲಾಶಯ ತುಂಬಿದ್ದರಿಂದ ಅಚ್ಚುಕಟ್ಟು ಭಾಗದ ರೈತರು ಮತ್ತು ತಾಲ್ಲೂಕಿನ ಜನರ ಮುಖದಲ್ಲಿ ಸಂತಸ ಮೂಡಿಸಿದೆ. ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಗುರುವಾರ ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಿಸಲಿದ್ದಾರೆ.

    2284 ಅಡಿ ಸಾಮಥ್ರ್ಯವಿರುವ ಜಲಾಶಯದಲ್ಲಿ ಪ್ರಸ್ತುತ 2283.50 ಅಡಿ ನೀರು ಸಂಗ್ರಹವಾಗಿದ್ದು 20 ಸಾವಿರ ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದುಬರುತ್ತಿದೆ. 15 ಸಾವಿರ ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯದ ಹಿನ್ನೀರಿನ ಪ್ರದೇಶ ಮತ್ತು ಕೇರಳದ ವೈನಾಡಿನಲ್ಲಿ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಒಳಹರಿವಿನಲ್ಲಿ ಗಣನೀಯ ಏರಿಕೆಯಾಗಿದೆ.

    ಜಲಾಶಯ 19.50 ಟಿಎಂಸಿ ಅಡಿ ನೀರು ಸಂಗ್ರಹದ ಸಾಮಥ್ರ್ಯವಿದ್ದು, ಅದರಲ್ಲಿ 16.50 ಟಿಎಂಸಿ ಅಡಿ ನೀರನ್ನು ಮಾತ್ರ ಬಳಕೆ ಮಾಡಬಹುದಾಗಿದೆ.

    17 ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ, ನಾಲ್ಕು ವರ್ಷಗಳ ಬಳಿಕ ಕಬಿನಿ ಜಲಾಶಯ ಭರ್ತಿಯಾಗಿದೆ. ಪ್ರತಿವರ್ಷ ಬೆಳೆಗೆ ಸುಮಾರು 20 ಟಿಎಂಸಿ ಅಡಿ ಮತ್ತು ಕುಡಿಯಲು 7.86 ಟಿಎಂಸಿ ಅಡಿ ನೀರಿನ ಅವಶ್ಯಕತೆ ಇದೆ. ಬೆಂಗಳೂರು ಮಂಡ್ಯ ಮೈಸೂರು ನಗರಗಳು ಸೇರಿದಂತೆ ಪ್ರತಿ ತಿಂಗಳು ಕುಡಿಯಲು 0.655 ಟಿಎಂಸಿ ಅಡಿ ನೀರು ಬೇಕಿರುತ್ತದೆ.