Tag: kabban park

  • ಬೆಂಗ್ಳೂರಲ್ಲಿ ಫ್ರೀ ಕಾಶ್ಮೀರ ಕೂಗು – ಚರ್ಚ್ ಸ್ಟ್ರೀಟ್ ಗೋಡೆಗಳಲ್ಲಿ ಸಿಎಎ ವಿರೋಧಿ ಬರಹಗಳು!

    ಬೆಂಗ್ಳೂರಲ್ಲಿ ಫ್ರೀ ಕಾಶ್ಮೀರ ಕೂಗು – ಚರ್ಚ್ ಸ್ಟ್ರೀಟ್ ಗೋಡೆಗಳಲ್ಲಿ ಸಿಎಎ ವಿರೋಧಿ ಬರಹಗಳು!

    ಬೆಂಗಳೂರು: ಮೈಸೂರು ವಿಶ್ವವಿದ್ಯಾಲಯದ ಬಳಿಕ ಇದೀಗ ಸಿಲಿಕಾನ್ ಸಿಟಿಯಲ್ಲಿ ಕೂಡ ಫ್ರೀ ಕಾಶ್ಮೀರ ಕೂಗು ಎದ್ದಿದೆ.

    ಹೌದು. ನಗರದ ಚರ್ಚ್ ಸ್ಟ್ರೀಟ್ ರಸ್ತೆಯ ಗೋಡೆಗಳು ಮತ್ತು ಅಂಗಡಿ ಶೆಟರ್ ಗಳಲ್ಲಿ ಫ್ರೀ ಕಾಶ್ಮೀರ ಬರಹಗಳನ್ನು ಬರೆಯಲಾಗಿದೆ. ಅಲ್ಲದೆ ನೋ ಸಿಎಎ, ನೋ ಎನ್‍ಆರ್‍ಸಿ, ನೊ ಎನ್‍ಪಿಎ, ಬಿಜೆಪಿ ಈಸ್ ಕ್ಯಾನ್ಸರ್, ಮೋದಿ ಫ್ಯಾಸಿಸ್ಟ್ ಹೀಗೆ ಸಾಲು ಸಾಲು ಬರಹಗಳನ್ನು ಬರೆಯಲಾಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

    ಮೋದಿ ಹಾಗೂ ಆರ್ ಎಸ್‍ಎಸ್ ಖಂಡಿಸಿ ಸಹ ಸಾಕಷ್ಟು ಬರಹಗಳನ್ನ ಬರೆಯಲಾಗಿತ್ತು. ಇಡೀ ರಸ್ತೆ ಹಾಗೂ ಶೆಟರ್‍ಗಳು ಮೋದಿ ವಿರೋಧಿ ಬರಹಗಳಿಂದ ಕೂಡಿ ಹೋಗಿತ್ತು. ಇದರ ಜೊತೆಗೆ ಫ್ರೀ ಕಾಶ್ಮೀರ ಅಂತ ಸಹ ಬರೆಯಲಾಗಿದ್ದು, ಮತ್ತಷ್ಟು ವಿವಾದ ಪಡೆದುಕೊಳ್ಳುವಂತೆ ಮಾಡಲಾಗಿತ್ತು.

    ಸಿಸಿಟಿವಿಯಲ್ಲಿ ಸೆರೆ:
    ಬೆಳಗ್ಗಿನ ಜಾವ 3.8ರ ಸುಮಾರಿಗೆ ಬಂದ ಇಬ್ಬರು ಸ್ಕೂಟರ್ ನಿಲ್ಲಿಸಿ ಸ್ಪ್ರೇ ಬಳಸಿ, ಬರಹಗಳನ್ನ ಬರೆದಿದ್ದಾರೆ. ಇವರು ಬರೆಯೋ ಬರಹಗಳು ಎದುರುಗಿದ್ದ ಬಿಲ್ಡಿಂಗ್‍ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೆಲವೇ ನಿಮಿಷಗಳಲ್ಲಿ ಬರಹಗಳನ್ನ ಬರೆದು ಹೋಗಿದ್ದಾರೆ. ಯಾವಾಗ ಈ ವಿಚಾರ ವರದಿಯಾಯಿತೋ, ತಕ್ಷಣವೇ ಕಬ್ಬನ್ ಪಾರ್ಕ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಅಲ್ಲದೆ ಒಂದಷ್ಟು ಸಿಸಿಟಿವಿ ವಿಡಿಯೋಗಳನ್ನ ಸಂಗ್ರಹಿಸಿ ದೂರು ದಾಖಲಿಸಿಕೊಂಡು, ಆರೋಪಿಗಳಿಗಾಗಿ ಹುಡುಕಾಟ ನಡೆಸಲು ಆರಂಭಿಸಿದರು. ಇದನ್ನೂ ಓದಿ: ಮೈಸೂರು ವಿವಿ ಕ್ಯಾಂಪಸ್‍ನಲ್ಲೂ ಪ್ರತ್ಯೇಕ ಕಾಶ್ಮೀರ ಕೂಗು

    ಈ ಮಧ್ಯೆ ಕಬ್ಬನ್ ಪಾರ್ಕ್ ಪೊಲೀಸರು ಮೋದಿ ವಿರೋಧಿ ಬರಹಗಳಿಗೆ ಪೈಂಟ್ ಹಾಕಿಸಿದರು. ಇದೇ ವೇಳೆ ಚರ್ಚ್‍ಸ್ಟ್ರೀಟ್‍ಗೆ ಬಂದ ಕೆಲ ಹಿಂದೂಪರ ಸಂಘಟನೆಯ ಕಾರ್ಯಕರ್ತರು, ಘೋಷಣೆ ಕೂಗಿದರು. ಮೋದಿ ಪರ ಹಾಗೂ ಭಾರತ್ ಮಾತೆಗೆ ಜೈಕಾರ ಕೂಗಿ, ಸಿಎಎ ವಿರೋಧಿ ಬರಹಗಳಿಗೆ ಇವರು ಸಹ ಪೈಂಟ್ ಬಳಿಯೋ ಕೆಲಸ ಮಾಡಿದರು. ಸಿಎಎ ವಿರೊಧಿ ಬರಹ ಬರೆದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಘೋಷಣೆ ಕೂಗಿದರು. ನಂತರ ವಿ ಸಪೋರ್ಟ್ ಸಿಎಎ ಅಂತ ಹಿಂದೂ ಸಂಘಟನೆ ಕಾರ್ಯಕರ್ತರು ಬರೆದರು. ಕೊನೆಗೆ ಇದ್ಯಾವುದು ಬೇಡ ಅಂತ ಕಬ್ಬನ್‍ಪಾರ್ಕ್ ಪೊಲೀಸರು, ಸಿಎಎ ಪರ ಹಾಗೂ ವಿರೋಧದ ಬರಹಗಳಿಗೆ ಕೂಡ ಪೈಂಟ್ ಬಳಿಯೋ ಕೆಲಸ ಮಾಡಿದರು. ಇದನ್ನೂ ಓದಿ: ವಿವಾದಿತ ಪೋಸ್ಟರ್ ಹಿಡಿದಿದ್ದ ಮೈಸೂರು ಯುವತಿ ನಾಪತ್ತೆ

    ಸದ್ಯ ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಫ್ರೀ ಕಾಶ್ಮೀರ ಪೋಸ್ಟರ್ – ವಿಡಿಯೋ ಮೂಲಕ ಕ್ಷಮೆಯಾಚಿಸಿ ಸ್ಪಷ್ಟನೆ ನೀಡಿದ ಯುವತಿ

  • ಅಪ್ಪ ಹೇಳಿದ 1ಗಂಟೆಯಲ್ಲೇ ಮಗ ಸರೆಂಡರ್ – ನಲಪಾಡ್‍ಗೆ ಜ್ಯೂಸ್ ನೀಡಿ ರಾಜಮರ್ಯಾದೆ ಕೊಟ್ಟ ಪೊಲೀಸರು!

    ಅಪ್ಪ ಹೇಳಿದ 1ಗಂಟೆಯಲ್ಲೇ ಮಗ ಸರೆಂಡರ್ – ನಲಪಾಡ್‍ಗೆ ಜ್ಯೂಸ್ ನೀಡಿ ರಾಜಮರ್ಯಾದೆ ಕೊಟ್ಟ ಪೊಲೀಸರು!

    ಬೆಂಗಳೂರು: ಪ್ರಭಾವಿ ಶಾಸಕ ಹ್ಯಾರಿಸ್ ಗೂಂಡಾ ಪುತ್ರ ಮಹಮ್ಮದ್ ನಲಪಾಡ್ ನ ಗೂಂಡಾಗಿರಿ ಪ್ರಕರಣ ಸಂಬಂಧ ಕಳೆದ 36 ಗಂಟೆಗಳಿಂದ ತಲೆ ಮರೆಸಿಕೊಂಡಿದ್ದ ನಲಪಾಡ್‍ನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

    ಇಂದು ಬೆಳಗ್ಗೆ ಹ್ಯಾರಿಸ್‍ರ ಶಾಂತಿನಗರ ನಿವಾಸಕ್ಕೆ ಅಶೋಕನಗರ ಪೊಲೀಸರು ಭೇಟಿ ಹುಟುಕಾಟ ನಡೆಸಿದ್ರು. ಈ ವೇಳೆ ನನ್ನ ಮಗನಿಗೆ ಶರಣಾಗಲು ಹೇಳಿದ್ದೇನೆ ಅಂತ ಶಾಸಕರು ಹೇಳಿದ್ದರು. ಶಾಸಕರು ಮಾತನಾಡಿದ ಕೇವಲ 1 ಗಂಟೆಯಲ್ಲಿ ವಿವಿಐಪಿ ಗೂಂಡಾ ಮಗ ನಲಪಾಡ್‍ನನ್ನು ಕಬ್ಬನ್‍ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಆತನಿಗೆ ರಾಜ ಮರ್ಯಾದೆ ಕೊಟ್ಟು ಕರೆದುಕೊಂಡು ಬಂದಿದ್ದಾರೆ. ಬಳಿಕ ಠಾಣೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಎದುರೇ ಕುಳ್ಳಿರಿಸಿ ನೋಡಲು ಟಿವಿ, ಕುಡಿಯಲು ಜ್ಯೂಸ್ ವ್ಯವಸ್ಥೆ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಯುವಕನ ಮೇಲೆ ಹಲ್ಲೆ ನಡೆಸಿದ ಪ್ರಕರಣ: ಕೊನೆಗೂ ಪೊಲೀಸರಿಗೆ ಶರಣಾದ ಶಾಸಕ ಹ್ಯಾರಿಸ್ ಪುತ್ರ

    ಹ್ಯಾರಿಸ್ ಮನೆಯಿಂದ ಹೊರಬಂದ ಕಾರಿನಲ್ಲೇ ನಲಪಾಡ್ ಠಾಣೆ ಕಡೆ ತೆರಳಿದ್ದ ಎನ್ನಲಾಗಿದೆ. ಹಾಗಾದ್ರೆ ಬೆಳಗ್ಗೆ ಪೊಲೀಸರು ಮನೆಯಲ್ಲಿ ಹುಡುಕಾಟ ನಡೆಸಿದ್ದು ಸುಳ್ಳಾ..? ಮಗ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಬೆಳಗ್ಗೆ ಕಥೆ ಕಟ್ಟಿದ್ದ ಹ್ಯಾರಿಸ್ ಗುಟ್ಟಾಗಿ ಮಗನನ್ನು ಠಾಣೆಗೆ ಕಳಿಸಿ ಶರಣಾಗುವಂತೆ ಸೂಚಿಸಿದ್ರಾ..? ಎಂಬ ಅನುಮಾನ ಕಾಡ್ತಿದೆ. ಇದನ್ನೂ ಓದಿ: ಮಗನನ್ನು ನಾನೇ ಸರೆಂಡರ್ ಮಾಡಿಸ್ತೇನೆ- ಪೊಲೀಸರು ಬರ್ತಿದ್ದಂತೆ ಕಥೆ ಕಟ್ಟಿದ ಶಾಸಕ ಹ್ಯಾರಿಸ್

    ಎಲ್ಲಿದ್ದ ನಲಪಾಡ್?: ಹ್ಯಾರಿಸ್ ಪುತ್ರನ ಗೂಂಡಾಗಿರಿ ಪ್ರಕರಣ ಸಂಬಂಧ ಕೇಸ್ ದಾಖಲಾಗುತ್ತಿದ್ದಂತೆ ನಲಪಾಡ್ ಎಸ್ಕೇಪ್ ಆಗಿದ್ದು, ಕಬ್ಬನ್‍ಪಾರ್ಕ್ ಠಾಣೆ ಕೂಗಳತೆಯಲ್ಲೇ ಅಡಗಿಕೊಂಡಿದ್ದನು. ಯುಬಿ ಸಿಟಿ ಪಕ್ಕದಲ್ಲಿರುವ ಐಷಾರಾಮಿ 7 ಸ್ಟಾರ್ ಹೋಟೆಲ್‍ನ ರೂಂ ನಂಬರ್ 882 ನಲ್ಲಿ ಯಾವುದೇ ಭಯವಿಲ್ಲದೇ ಪಾರ್ಟಿಯೊಂದಲ್ಲಿ ಪಾಲ್ಗೊಂಡಿದ್ದನು. ಇದೀಗ ಅಪ್ಪ ಮಾಧ್ಯಮದ ಮುಂದೆ ಮಾತನಾಡಿದ ಕೇವಲ ಒಂದು ಗಂಟೆಯಲ್ಲಿಯೇ ಕಬ್ಬನ್ ಪಾರ್ಕ್ ಪೊಲೀಸರಿಗೆ ಶರಣಾಗಿರೋ ನಲಪಾಡ್ ವಿರುದ್ಧ ಸೆಕ್ಷನ್ 307 ಅಡಿ (ಕೊಲೆ ಯತ್ನ) ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ಇಂದು ಆರೋಪಿ ನಲಪಾಡ್ ನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಹ್ಯಾರಿಸ್ ಪುತ್ರನಿಂದ ಯುವಕನ ಮೇಲೆ ಹಲ್ಲೆ ಪ್ರಕರಣ- ಆರೋಪಿಗಳನ್ನು ಬಂಧಿಸದಿದ್ದರೆ ಪೊಲೀಸರೇ ನೇರ ಹೊಣೆ: ರಾಮಲಿಂಗಾ ರೆಡ್ಡಿ

    ಯುವಕನ ಮೇಲೆ ರೆಸ್ಟೊರೆಂಟ್ ನಲ್ಲಿ ಹಲ್ಲೆ ನಡೆಸಿದ ಬಳಿಕ ಹ್ಯಾರೀಸ್ ಪುತ್ರ ಮಹಮ್ಮದ್ ನಲಪಾಡ್ ತಲೆಮರೆಸಿಕೊಂಡಿದ್ದನು. ಈ ಕುರಿತು ಇಂದು ಬೆಳಗ್ಗೆ ಶಾಸಕ ಹ್ಯಾರಿಸ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನನ್ನ ಮಗ ಫೋನ್ ಸ್ವಿಚ್ ಆಫ್ ಮಾಡ್ಕೊಂಡಿದ್ದನು. ನಿನ್ನೆ ರಾತ್ರಿ ಅವ್ನ ಅಮ್ಮನಿಗೆ ಫೋನ್ ಮಾಡಿದ್ದನು. ಆಗ ಸರೆಂಡರ್ ಆಗುವಂತೆ ನಾನೇ ಮಗನಿಗೆ ಹೇಳಿರುವುದಾಗಿ ತಿಳಿಸಿದ್ದರು.

    https://www.youtube.com/watch?v=aQxY3U–B2g