Tag: kabbalamma

  • ಐಟಿ ದಾಳಿ ಬಳಿಕ ಕಬ್ಬಾಳಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಡಿಕೆಶಿ ತಾಯಿ

    ಐಟಿ ದಾಳಿ ಬಳಿಕ ಕಬ್ಬಾಳಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಡಿಕೆಶಿ ತಾಯಿ

    ರಾಮನಗರ/ ಮಂಡ್ಯ: ಇಂಧನ ಸಚಿವ ಡಿ ಕೆ ಶಿವಕುಮಾರ್ ಮನೆ ಮೇಲೆ ಸತತ ಮೂರು ದಿನಗಳ ಐಟಿ ದಾಳಿ ಬಳಿಕ ಅವರ ತಾಯಿ ಇಂದು ಜಿಲ್ಲೆಯ ಕನಕಪುರ ತಾಲೂಕಿನ ಕಬ್ಬಾಳಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

    ಬೆಳಗ್ಗೆ ಕೋಡಿಹಳ್ಳಿ ನಿವಾಸದಿಂದ ಕಬ್ಬಾಳಮ್ಮ ದೇವಾಲಯಕ್ಕೆ ಸಚಿವ ಡಿ ಕೆ ಶಿವಕುಮಾರ್ ತಾಯಿ ಗೌರಮ್ಮ ಭೇಟಿ ನೀಡಿ, ಕಬ್ಬಾಳಮ್ಮ ದೇವಿಗೆ ವಿಶೇಷ ಪೂಜೆ ಹಾಗು ಅರ್ಚನೆ ಮಾಡಿಸಿದ್ದಾರೆ. ಇನ್ನೂ ತಮ್ಮ ಇಷ್ಟದ ದೇವತೆ ಹಾಗೂ ತಾವು ನಂಬಿರುವ ದೇವರಿಗೆ ಸಚಿವ ಡಿ ಕೆ ಶಿವಕುಮಾರ್ ಸಹ ಪೂಜೆ ಸಲ್ಲಿಸಲು ಇಂದು ಆಗಮಿಸುತ್ತಿದ್ದಾರೆ.

    ಡಿಕೆಶಿ ತಾಯಿ ಗೌರಮ್ಮ ಪೂಜೆ ಸಲ್ಲಿಸಿದ ಬಳಿಕ ದೇವಾಲಯದ ಅರ್ಚಕ ಕಬ್ಬಾಳೇಗೌಡ ಮಾತನಾಡಿ, ಇಂದು ಬೆಳಗ್ಗೆ ಕಬ್ಬಾಳಮ್ಮ ದೇಗುಲಕ್ಕೆ ಡಿಕೆಶಿ ತಾಯಿ ಭೇಟಿ ನೀಡಿದ್ದರು. ಅವರು ಕಬ್ಬಾಳಮ್ಮ ದೇವರಲ್ಲಿ ಹರಕೆ ಕಟ್ಟಿಕೊಂಡಿದ್ದರು. ಕಬ್ಬಾಳಮ್ಮ ಬೇಡಿದವರಿಗೆ ಇಷ್ಟಾರ್ಥ ಈಡೇರಿಸುತ್ತಾರೆ. ಪೂಜೆಯ ವೇಳೆ ಕಬ್ಬಾಳಮ್ಮ ಬಲಗಡೆ ಹೂಕೊಟ್ಟರು ಅಂತ ಹೇಳಿದ್ರು.

    ತಾಯಿಯ ಪೂಜೆಯ ವೇಳೆ ಡಿಕೆಶಿ ಅಭಿಮಾನಿಗಳು ಕಬ್ಬಾಳಮ್ಮ ದೇವಾಲಯದ ಬಳಿ ನಿಂತು ಡಿಕೆಶಿಗೆ ಒಳ್ಳೆಯದಾಗಲಿ ಎಂದು ಹರಕೆ ಕಟ್ಟಿಕೊಂಡಿದ್ದಾರೆ. ಅವರಿಗೆ ಒಳ್ಳೆಯದಾದಲ್ಲಿ 18 ತೆಂಗಿನಕಾಯಿ ಹೊಡೆಯುತ್ತೇನೆ ಅಂತ ಡಿಕೆಶಿ ಅಭಿಮಾನಿ ಕೃಷ್ಣೇಗೌಡ ಹರಕೆ ಕಟ್ಟಿಕೊಂಡಿದ್ದಾರೆ ಅಂತ ಅವರು ಹೇಳಿದ್ರು.

    ಇದೇ ವೇಳೆ ಕಬ್ಬಾಳಮ್ಮ ದೇವರ ಸನ್ನಿಧಿಯಲ್ಲಿ ತಲೆ ಬೋಳಿಸಿಕೊಂಡು ಡಿಕೆಶಿ ಅಭಿಮಾನಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ದಂಡು ಹುಚ್ಚಯ್ಯ ಹರಕೆ ತೀರಿಸಿದ್ದಾರೆ. ಅಲ್ಲದೇ ದೇವಾಲಯದಲ್ಲಿ ಅಭಿಮಾನಿಗಳು ಉರುಳು ಸೇವೆ ಸಲ್ಲಿಸಿದ್ದಾರೆ.

    ಐಟಿ ಅಧಿಕಾರಿಗಳ ವಿಚಾರಣೆ ಮುಗಿಸಿದ ಡಿಕೆ ಶಿವಕುಮಾರ್ ತಾವು ನಂಬಿದ ದೇವಸ್ಥಾನ ಹಾಗೂ ಮಠಕ್ಕೆ ಭೇಟಿಕೊಟ್ಟು ಆಶೀರ್ವಾದ ಪಡೆಯುತಿದ್ದಾರೆ. ಅದೇ ರೀತಿ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆ ಕಾಡುಸಿದ್ದೇಶ್ವರ ಮಠಕ್ಕೆ ಭೇಟಿ ಕೊಡುವ ಸಾಧ್ಯತೆ ಇದೆ. ಡಿಕೆಶಿ ಈ ಹಿಂದೆ ಹಲವು ಬಾರಿ ಕಾಡು ಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಶಿವಯೋಗೇಶ್ವರ ಕರಿಬಸವ ಸ್ವಾಮಿಗಳು ಶಾಸ್ತ್ರ ಹೇಳೋದ್ರಲ್ಲಿ ಪರಿಣತಿ ಹೊಂದಿದ್ದು ಡಿಕೆಶಿ ಗೆ ಹಲವು ಬಾರಿ ಶಾಸ್ತ್ರ ಹೇಳಿದ್ರು ಎನ್ನಲಾಗಿದೆ.

  • ಡಿಕೆ ಶಿವಕುಮಾರ್ ವಿದೇಶಕ್ಕೆ ತೆರಳದಂತೆ ನಿರ್ಬಂಧ!

    ಡಿಕೆ ಶಿವಕುಮಾರ್ ವಿದೇಶಕ್ಕೆ ತೆರಳದಂತೆ ನಿರ್ಬಂಧ!

    ಬೆಂಗಳೂರು: ಕಳೆದ ಮೂರು ದಿನಗಳಿಂದ ಇಂಧನ ಸಚಿವ ಡಿಕೆ ಶಿವಕುಮಾರ್ ಮನೆ ಮೇಲೆ ನಡೆಯುತ್ತಿದ್ದ ಐಟಿ ದಾಳಿ ಇದೀಗ ಅಂತ್ಯವಾಗಿದ್ದು, ಯಾವುದೇ ಕಾರಣಕ್ಕೂ ವಿದೇಶಕ್ಕೆ ತೆರಳದಂತೆ ಐಟಿ ಸೂಚನೆ ನೀಡಿದೆ.

    ಸಚಿವ ಡಿಕೆಶಿ ಮೇಲೆ ನಿಗಾ ಇಡುವಂತೆ ಹಾಗೂ ಎಲ್ಲಾ ವಿಮಾನ ನಿಲ್ದಾಣಗಳಿಗೂ ಆದಾಯ ತೆರಿಗೆ ಇಲಾಖೆ ಖಡಕ್ ಸೂಚನೆ ನೀಡಿದೆ.

    ದೆಹಲಿಯಲ್ಲೂ ಕೂಡ ಐಟಿ ದಾಳಿ ಅಂತ್ಯವಾಗಿದ್ದು, ಆಂಜನೇಯ ಮನೆಯಲ್ಲಿ ಕೂಡ ಐಟಿ ಅಧಿಕಾರಿಗಳು ದಾಳಿ ಅಂತ್ಯಗೊಳಿಸಿದ್ದಾರೆ. ಕಳೆದ ಮೂರು ದಿನಗಳಿಂದ ದೆಹಲಿಯ ಮೂರು ಮನೆಯ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಕಡತಗಳ ತಪಾಸಣೆ ಮಾಡಿದ್ದಾರೆ. ನಿನ್ನೆಯೇ ಎರಡು ಮನೆಯ ಮೇಲಿನ ದಾಳಿ ಅಂತ್ಯಗೊಳಿಸಿದ್ದ ಅಧಿಕಾರಿಗಳು ಇಂದು ಆಂಜನೇಯ ಮನೆ ಮೇಲೆ ದಾಳಿಯಲ್ಲಿ ಅಂತ್ಯಗೊಳಿಸಿದ್ದಾರೆ.

    ದೇವಸ್ಥಾನಕ್ಕೆ ಭೇಟಿ: ಐಟಿ ದಾಳಿ ಬಳಿಕ ಇಂಧನ ಸಚಿವ ಡಿಕೆ ಶಿವಕುಮಾರ್ ತುಮಕೂರು ಜಿಲ್ಲೆ, ನೊಣವಿಕೆರೆಯಕಲ್ಲಿರುವ ಕೆರೆಯ ಕಾಡು ಸಿದ್ದೇಶ್ವರ ಅವರ ವಿಜಯನಗರದಲ್ಲಿರೋ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿದ್ದಾರೆ.

    ಆತ್ಮದೊಂದಿಗಿನ ಸಂವಾದವನ್ನು ಹಾಳೆಯಲ್ಲಿ ಬರೆದುಕೊಡುವ ಕಾಡು ಸಿದ್ದೇಶ್ವರ ಅಜ್ಜನ ಅಣತಿಯಂತೆ ನಡೆದುಕೊಳ್ಳುವ ಡಿಕೆಶಿ, ಅಜ್ಜಯ್ಯ ಹಾಳೆಯಲ್ಲಿ ಬರೆದಿದ್ದು ಫಲಿಸುತ್ತದೆ ಎಂಬುದು ಅವರ ನಂಬಿಕೆ. ಹೀಗಾಗಿ ಅಜ್ಜಯ್ಯನ ಭಕ್ತರಾಗಿರೋ ಡಿಕೆಶಿ ಸದ್ಯ ಅವರನ್ನು ಭೇಟಿ ಮಾಡಿ ಪಾದ ಪೂಜೆ ಮಾಡಿದ್ದಾರೆ. ಈ ವೇಳೆ ನಿನಗೆ ಯಾವುದೇ ಸಂಕಷ್ಟ ಎದುರಾಗುವುದಿಲ್ಲ. ನೀನು ನೆಮ್ಮದಿಯಿಂದಿರು ಅಂತ ಅಜ್ಜಯ್ಯ ಆಶೀರ್ವದಿಸಿದ್ದಾರೆ. ಈ ಹಿಂದೆಯೂ ಅಜ್ಜಯ್ಯನನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು. ಈ ವೇಳೆ ಸಚಿವರಿಗೆ ನರೇಂದ್ರಬಾಬು ಸಾಥ್ ನೀಡಿದ್ದಾರೆ.

    ಬಳಿಕ ಅಲ್ಲಿಂದ ನೇರವಾಗಿ ರಾಜಭವನಕ್ಕೆ ತೆರಳಿರುವ ಡಿಕೆಶಿ, ಇದೀಗ ಗುಜರಾತ್ ಶಾಕೆ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಈ ಮಧ್ಯೆ ಕುಟುಂಬಸ್ಥರು ಕನಕಪುರ ತಾಲೂಕಿನಲ್ಲಿರುವ ಶಕ್ತಿದೇವತೆ ಕಬ್ಬಾಳಮ್ಮನಿಗೆ ಪೂಜೆ ಸಲ್ಲಿಸಿದ್ದಾರೆ.