Tag: Kabbadi

  • ಕಬ್ಬಡ್ಡಿ ಆಡೋ ವೇಳೆ ವಿದ್ಯಾರ್ಥಿ ದುರ್ಮರಣ

    ಕಬ್ಬಡ್ಡಿ ಆಡೋ ವೇಳೆ ವಿದ್ಯಾರ್ಥಿ ದುರ್ಮರಣ

    ಮೈಸೂರು: ಕಬ್ಬಡ್ಡಿ ಆಟ ಆಡುವ ವೇಳೆ ವಿದ್ಯಾರ್ಥಿ ಮೃತಪಟ್ಟ ಪ್ರಕರಣವೊಂದು ಮೈಸೂರಿನಲ್ಲಿ ನಡೆದಿದೆ.

    ಆಕಾಶ್(15) ಮೃತ ವಿದ್ಯಾರ್ಥಿ. ಈತ ಜನತಾನಗರ ನಿವಾಸಿಯಾಗಿದ್ದು, ಮೈಸೂರಿನ ಶಾರದಾ ದೇವಿ ನಗರದ ಶಾರದಾ ಶಾಲೆ ವಿದ್ಯಾಭ್ಯಾಸ ಮಾಡುತ್ತಿದ್ದನು. ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಕ್ಕೆ ಅಭ್ಯಾಸ ಮಾಡುವ ವೇಳೆ ಈ ಘಟನೆ ನಡೆದಿದೆ.

    ಆಕಾಶ್ ರೈಡಿಂಗ್ ಮಾಡಿ ತನ್ನ ಕೋರ್ಟ್ ಕಡೆ ಹೋಗುವ ವೇಳೆ ತಲೆ ಸಿಮೆಂಟ್ ಕಂಬಕ್ಕೆ ಬಡಿದಿದೆ. ಗುರುವಾರ ಅಭ್ಯಾಸ ಮಾಡುವ ವೇಳೆ ಆಕಾಶ್ ಗಾಯಗೊಂಡಿದ್ದನು. ಗಂಭೀರ ಗಾಯಗೊಂಡ ವಿದ್ಯಾರ್ಥಿ ಆಕಾಶ್‍ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಆಕಾಶ್ ಮೃತಪಟ್ಟಿದ್ದಾನೆ.

    ಆಕಾಶ್ ಮೃತದೇಹವನ್ನು ಕೆ.ಆರ್. ಆಸ್ಪತ್ರೆಗೆ ಶವಗಾರಕ್ಕೆ ರವಾನಿಸಲಾಗಿದೆ. ಈ ಬಗ್ಗೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏಷ್ಯನ್ ಗೇಮ್ಸ್ 2018: ಕಬ್ಬಡ್ಡಿಯಲ್ಲಿ ಬೆಳ್ಳಿ ಪದಕ ಪಡೆದ ಕನ್ನಡತಿ

    ಏಷ್ಯನ್ ಗೇಮ್ಸ್ 2018: ಕಬ್ಬಡ್ಡಿಯಲ್ಲಿ ಬೆಳ್ಳಿ ಪದಕ ಪಡೆದ ಕನ್ನಡತಿ

    -ಕಬ್ಬಡ್ಡಿಯ ಮಿಂಚು ಕನ್ನಡದ ಕುವರಿ ಉಷಾರಾಣಿ

    ಬೆಂಗಳೂರು: ಪ್ರಸಕ್ತ ಸಾಲಿನ ಏಷ್ಯಾನ್ ಗೇಮ್ಸ್‍ನಲ್ಲಿ ಭಾರತ ಮಹಿಳಾ ಕಬ್ಬಡ್ಡಿ ತಂಡವನ್ನು ಪ್ರತಿನಿಧಿಸಿ ಸಿಲ್ವರ್ ಮೆಡಲ್ ಪಡೆದ ಕನ್ನಡದ ಕುವರಿ ಉಷಾರಾಣಿಯ ಸಂಪೂರ್ಣ ವರದಿ ಇಲ್ಲಿದೆ.

    ಯಶವಂತಪುರ ನಿವಾಸಿ ಉಷಾರಾಣಿ ಅವರು ತಂಡ ಪ್ರತಿನಿಧಿಸಿರುವುದು ಇಡೀ ಕರ್ನಾಟಕವೇ ಹೆಮ್ಮೆ ಪಡುವ ವಿಚಾರವಾಗಿದೆ. ನರಸಿಂಹಯ್ಯ ಮತ್ತು ಪುಟ್ಟಮ್ಮನವರ ದಂಪತಿಯ ಎರಡನೇ ಪುತ್ರಿ. ಕಳೆದ 12 ವರ್ಷಗಳಿಂದ ಕಬ್ಬಡ್ಡಿಯಲ್ಲೇ ಜೀವನ ಕಂಡುಕೊಂಡಿರುವ ಉಷಾರಾಣಿ ಕರ್ನಾಟಕದ ತಂಡದ ಪ್ರತಿನಿಧಿಯಾಗಿ ಹಲವಾರು ಪಂದ್ಯಗಳನ್ನ ಆಡಿ ರಾಷ್ಟ್ರಮಟ್ಟದಲ್ಲಿ ಎರಡು ಬಾರಿ ಪ್ರತಿನಿಧಿಸಿದ್ದಾರೆ.

    ಶನಿವಾರ ನಡೆದ ಏಷ್ಯಾನ್ ಗೇಮ್ಸ್‍ನಲ್ಲಿ ಬೆಳ್ಳಿ ಪದಕ ಪಡೆದಿರೋದು ಪೋಷಕರಲ್ಲಿ ಸಂಭ್ರಮ ಮನೆಮಾಡಿದೆ. ವಲ್ರ್ಡ್ ಕಪ್‍ನಲ್ಲಿಯೂ ಮಗಳು ಭಾಗವಹಿಸಿ ಜಯಗಳಿಸಬೇಕೆಂಬ ಎಂಬುವುದು ನಮ್ಮ ಆಸೆ ಎಂದು ತಾಯಿ ಪುಟ್ಟಮ್ಮ ಹೇಳುತ್ತಾರೆ.

    ಉಷಾರಾಣಿಯವರು ವೃತ್ತಿಯಲ್ಲಿ ಪೋಲೀಸ್ ಅಧಿಕಾರಿಯಾಗಿದ್ದು, ಇಲಾಖೆಯ ಪ್ರೋತ್ಸಾಹದಿಂದಲೇ ಹಲವಾರು ಟೂರ್ನಿಗಳಲ್ಲಿ ಭಾಗವಹಿಸಿ ಜಯಗಳಿಸಿದ್ದಾರೆ. ಅಷ್ಟೇ ಅಲ್ಲದೇ ಉಷಾ ರಾಣಿಯವರಿಗೆ ಇಬ್ಬರು ತಮ್ಮಂದಿರು ಮೂವರು ತಂಗಿಯರಿದ್ದು ಅವರು ಸಹ ಕಬ್ಬಡ್ಡಿ ಆಟಗಾರರಾಗಿದ್ದಾರೆ. ತಮ್ಮ ಅಕ್ಕನ ಪ್ರತಿಭೆಯನ್ನು ಕಂಡು ಸ್ಫೂರ್ತಿಯಾಗಿ ಟೂರ್ನಿಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳಿಸಿದ್ದಾರೆ. ಆದರೆ ಇಂದು ಅಕ್ಕನ ಸಾಧನೆಯನ್ನ ಕಂಡು ಸಂತಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ಯಾಂಡಲ್‍ವುಡ್ ನಟನ ಮೇಲೆ ಕಬಡ್ಡಿ ಆಟಗಾರರಿಂದ ಹಲ್ಲೆ

    ಸ್ಯಾಂಡಲ್‍ವುಡ್ ನಟನ ಮೇಲೆ ಕಬಡ್ಡಿ ಆಟಗಾರರಿಂದ ಹಲ್ಲೆ

    ಬೆಂಗಳೂರು: ಕಬಡ್ಡಿ ಸೋತಿದ್ದಕ್ಕೆ ಹತಾಶೆಗೊಂಡು ಸ್ಯಾಂಡಲ್‍ವುಡ್ ನಟನಿಗೆ ಮತ್ತೊಂದು ತಂಡ ಥಳಿಸಿದ ಘಟನೆ ಅನ್ನಪೂರ್ಣೇಶ್ವರಿ ನಗರದ ಬಿಬಿಎಂಪಿ ಪಾರ್ಕ್ ನಲ್ಲಿ ನಡೆದಿದೆ.

    18 ಪ್ಲಸ್ ಸಿನಿಮಾದ ನಾಯಕ ನಟ ಭರತ್ ಮೇಲೆ ಹಲ್ಲೆ ನಡೆಸಲಾಗಿದೆ. ಕಬಡ್ಡಿ ಟೂರ್ನಿಯಲ್ಲಿ ಭಾಗವಹಿಸಿದ್ದ ಭರತ್ ತಂಡ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಫೈನಲ್ ಪಂದ್ಯದಲ್ಲಿ ಸೋತಿದ್ದಕ್ಕೆ ಸಿಟ್ಟಾಗಿ ಕಿಟ್ಟಿ, ಪ್ರೇಮ್, ನಂದು ಎಂಬವರು ನಟ ಭರತ್ ಹಾಗೂ ನವೀನ್ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ.

    2 ದಿನಗಳ ಹಿಂದೆ ನಟನ ಮೇಲೆ ಹಲ್ಲೆ ನಡೆದಿದೆ. ಹಲ್ಲೆಯ ನಂತರ ಭರತ್ ಮುಖ ಊದಿಕೊಂಡಿದೆ. ಅನ್ನಪೂರ್ಣೆಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಕೊನೆ ಗಳಿಗೆಯಲ್ಲಿ `ಕಬಡ್ಡಿ’ಯಿಂದ ಹೊರ ಬಂದ ಹೃತಿಕ್ ರೋಶನ್

    ಕೊನೆ ಗಳಿಗೆಯಲ್ಲಿ `ಕಬಡ್ಡಿ’ಯಿಂದ ಹೊರ ಬಂದ ಹೃತಿಕ್ ರೋಶನ್

    ಮುಂಬೈ: ಬಾಲಿವುಡ್ ನಟ ಹೃತಿಕ್ ರೋಶನ್ ಯಾವಾಗಲ್ಲೂ ಸುದ್ದಿಯಲ್ಲಿಯೇ ಇರುತ್ತಾರೆ. ಆದರೆ ಹೃತಿಕ್ ತಾವು ನಟಿಸುತ್ತಿರುವ ಚಿತ್ರಗಳ ಬಗ್ಗೆ ಸಾಕಷ್ಟು ಖುಷಿ ಹಂಚಿಕೊಳ್ಳುತ್ತಿದ್ದಾರೆ. ಈಗ ಸದ್ಯ ರಾಕೇಶ್ ಓಂ ಪ್ರಕಾಶ್ ಮೆಹೆರಾ ಚಿತ್ರದಿಂದ ಹೊರ ಬಂದಿದ್ದಾರೆ.

    ರಾಕೇಶ್ ಓಂ ಪ್ರಕಾಶ್ ಮೆಹೆರಾ ಮತ್ತು ರಾಣಿ ಸಕ್ರುವಾಲಾ ಅವರ ಕಬ್ಬಡಿ ಚಿತ್ರದಿಂದ ಹೃತಿಕ್ ಹೊರ ಬಂದಿದ್ದಾರೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ. ಈ ಚಿತ್ರದ ಎಲ್ಲಾ ಫಾರ್ಮಾಲಿಟಿಗಳನ್ನು ಹೃತಿಕ್ ಒಪ್ಪಿಕೊಂಡಿದ್ದರು. ಕಬಡ್ಡಿ ಆಡುವ ಸ್ಥಿತಿಯಲ್ಲಿ ನಾನು ಇಲ್ಲ. ಒಂದು ವೇಳೆ ಕಬಡ್ಡಿ ಚಿತ್ರವನ್ನು 2018 ಏಪ್ರಿಲ್ ವರೆಗೆ ಹೃತಿಕ್ ಕೆಲಸ ಮಾಡಬೇಕಾಗುತ್ತದೆ. ಆದರೆ ಈಗ ಈ ಚಿತ್ರಕ್ಕಾಗಿ ಸಮಯ ಇಲ್ಲ ಎಂದು ಹೃತಿಕ್ ಚಿತ್ರತಂಡಕ್ಕೆ ತಿಳಿಸಿದ್ದಾರೆ.

    ಯಶ್ ರಾಜ್ ಚಿತ್ರ ಮತ್ತು ಕಬಡ್ಡಿ ಚಿತ್ರವನ್ನು ಕೂಡ ಹೃತಿಕ್ ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ. ಈ ಚಿತ್ರದಲ್ಲಿ ಟೈಗರ್ ಶ್ರಾಫ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಇನ್ ಟ್ರಸ್ಟಿಂಗ್ ಇಲ್ಲ ಎಂದು ಚಿತ್ರದ ಕಥೆಯನ್ನು ಬದಲಿಸೋಕೆ ಹೇಳಿದ್ದಾರೆ. ನಂತರ ಈ ಚಿತ್ರವನ್ನು ಕೂಡ ನಿರಾಕರಿಸಿದ್ದಾರೆ.

    ಹೃತಿಕ್ ಚಿತ್ರವನ್ನು ನಿರಾಕರಿಸುತ್ತಿರುವುದು ಇದು ಮೊದಲ ಬಾರಿ ಅಲ್ಲ. ಈ ಮೊದಲು ವಿಕಾಸ್ ಬಹಲ್ ಜೊತೆ ಈ ರೀತಿ ನಡೆದುಕೊಂಡಿದ್ದಾರೆ. ಈಗ ಹೃತಿಕ್ ಆನಂದ್ ಕುಮಾರ್ ಅವರ ಸೂಪರ್-30 ಚಿತ್ರದಲ್ಲಿ ನಟಿಸುತ್ತಿದ್ದಾರೆ.