Tag: kabbaddi

  • ಕಬಡ್ಡಿ ಅಂಗಳಕ್ಕಿಳಿದು ತೊಡೆ ತಟ್ಟಿದ ಶಾಸಕ ಪುಟ್ಟರಾಜು

    ಕಬಡ್ಡಿ ಅಂಗಳಕ್ಕಿಳಿದು ತೊಡೆ ತಟ್ಟಿದ ಶಾಸಕ ಪುಟ್ಟರಾಜು

    ಮಂಡ್ಯ: ಕಬಡ್ಡಿ ಅಂಗಳಕ್ಕಿಳಿದು ಮೇಲುಕೋಟೆ ಶಾಸಕ ಪುಟ್ಟರಾಜು (MLA Puttaraju) ತೊಡೆ ತಟ್ಟಿದ್ದಾರೆ.

    ಹೌದು. ಮೈದಾನಕ್ಕಿಳಿದು ಶಾಸಕರು ಕಬಡ್ಡಿ (Kabaddi) ಆಡಿ ಎಲ್ಲರನ್ನು ಮನರಂಜಿಸಿದ್ದಾರೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಜಕ್ಕನಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ಗ್ರಾಮದಲ್ಲಿ ಗ್ರಾಮೀಣ ಕ್ರೀಡಾಕೂಟ ಆಯೋಜನೆ ಮಾಡಲಾಗಿತ್ತು. ಕ್ರೀಡಾಕೂಟಕ್ಕೆ ಚಾಲನೆ ನೀಡಿ ಶಾಸಕರು ಕಬಡ್ಡಿ ಮೈದಾನಕ್ಕಿಳಿದರು. ಇದನ್ನೂ ಓದಿ: ಮೋರ್ಬಿ ಸೇತುವೆ ದುರಂತದ ಬಗ್ಗೆ ಟ್ವೀಟ್ ಮಾಡಿದ TMC ವಕ್ತಾರ ಅರೆಸ್ಟ್ – ಮೋದಿ ವಿರುದ್ಧ ಮಮತಾ ಗರಂ

    ಅಲ್ಲದೆ ಯುವಕರೊಂದಿಗೆ ಕಬಡ್ಡಿ ಆಡುವ ಮೂಲಕ ಕ್ರೀಡಾಸ್ಪೂರ್ತಿ ಮೆರೆದರು. ತೊಡೆ ತಟ್ಟಿ ಅಂಗಳಕ್ಕಿಳಿದರೂ ರೇಡ್ ನಲ್ಲಿ ಪಾಯಿಂಟ್ಸ್ ಗಳಿಸಲು ಶಾಸಕರು ವಿಫಲರಾದರು. ಶಾಸಕರ ಕಬಡ್ಡಿ ಆಟಕ್ಕೆ ಶಿಳ್ಳೆ, ಚಪ್ಪಾಳೆಗಳ ಸುರಿಮಳೆಯೇ ಸರಿಯಿತು. ಈ ಮೂಲಕ ಶಾಸಕರು ರಾಜಕೀಯಕ್ಕೂ ಸೈ, ಕಬಡ್ಡಿಗೂ ಸೈ ಎನ್ನುವಂತೆ ಆಟವಾಡಿದರು.

    Live Tv
    [brid partner=56869869 player=32851 video=960834 autoplay=true]

  • ಹಂಪಿ ಉತ್ಸವದಲ್ಲಿ ಮೈನವಿರೇಳಿಸಿದ ಸಾಹಸ, ಗ್ರಾಮೀಣ ಕ್ರೀಡೆಗಳು

    ಹಂಪಿ ಉತ್ಸವದಲ್ಲಿ ಮೈನವಿರೇಳಿಸಿದ ಸಾಹಸ, ಗ್ರಾಮೀಣ ಕ್ರೀಡೆಗಳು

    -ಕಬಡ್ಡಿ ಆಡಿದ ಡಿಸಿ, ಸಿಇಓ

    ಬಳ್ಳಾರಿ: ಎರಡು ದಿನಗಳ ಕಾಲ ನಡೆಯುವ ವಿಶ್ವ ವಿಖ್ಯಾತ ಹಂಪಿ ಉತ್ಸವ ಇಂದಿನಿಂದ ಆರಂಭವಾಗಿದ್ದು, ಉತ್ಸವದ ಮೊದಲ ದಿನವಾದ ಇಂದು ಮೈನವಿರೇಳಿಸುವ ಸಾಹಸ ಕ್ರೀಡೆಗಳು, ಜಲ ಕ್ರೀಡೆ ಹಾಗೂ ಗ್ರಾಮೀಣ ಕ್ರೀಡೆಗಳು ಜನರ ಗಮನ ಸೆಳೆದಿದೆ.

    ಹಲವು ಗೊಂದಲಗಳ ನಡುವೆ ಕೊನೆಗೂ ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ಅಧಿಕೃತವಾಗಿ ಇಂದು ಸಂಜೆ ಉದ್ಘಾಟನೆಯಾಗಲಿದೆ ವಿಜೃಂಭಣೆಯಿಂದ ಉತ್ಸವ ನಡೆಯಲಿದ್ದು, ಇಂದು ಬೆಳಗ್ಗಿನಿಂದಲೇ ಹಂಪಿ ಉತ್ಸವ ಆರಂಭವಾಗಿದೆ. ಕಬಡ್ಡಿ ಆಟ ಆಡುವ ಮೂಲಕ ಜಿಲ್ಲಾಧಿಕಾರಿ ಹಾಗೂ ಸಿಇಓ ಚಾಲನೆ ನೀಡಿದರು.

    ಉತ್ಸವದಲ್ಲಿ ಈ ಭಾರಿ ಸಾಹಸ ಕ್ರೀಡೆಗಳು, ಜಲ ಕ್ರೀಡೆಗಳನ್ನು ಸಹ ಆಯೋಜಿಸಲಾಗಿದೆ. ಜಲ ಕ್ರೀಡೆಗಳಲ್ಲಿ ಜನರು ಉತ್ಸಾಹದಿಂದ ಭಾಗವಹಿಸಿ ಎಂಜಾಯ್ ಮಾಡಿದ್ದಾರೆ. ರಾಕ್ ಕ್ಲೇಮಿಂಗ್, ಗುಡ್ಡ ಹತ್ತುವ ಸ್ಪರ್ಧೆಗಳನ್ನ ಹಾಗೂ ಇತರೆ ಕ್ರೀಡಾಕೂಟಗಳನ್ನ ನೋಡಿ ಜನರು ಸಂಭ್ರಮಿಸಿದ್ದಾರೆ.

    ಉತ್ಸವದಲ್ಲಿ ಈ ಭಾರಿ ಫಲಪುಪ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ. ಹಾಗೆಯೇ ಮರಳಿನಲ್ಲಿ ನಿರ್ಮಾಣವಾಗಿರುವ ಹಂಪಿ ಶಿಲ್ಪಕಲಾಕೃತಿಗಳು ಎಲ್ಲರ ಗಮನ ಸೆಳೆದಿದೆ. ಇಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಮೂಲಕ ಅಧಿಕೃತವಾಗಿ ಉತ್ಸವ ಉದ್ಘಾಟನೆ ನಡೆಯಲಿದ್ದು, ಉದ್ಘಾಟನಾ ಸಮಾರಂಭದಲ್ಲಿ ನಟ ದರ್ಶನ ಸೇರಿದಂತೆ ಹಲವು ಕಲಾವಿದರು ಭಾಗವಹಿಸಿ ಜನರನ್ನ ರಂಜಿಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಬಡ್ಡಿ ಪಂದ್ಯಾಟದ ವೇಳೆ ಗುಂಪುಗಳ ಮಧ್ಯೆ ಮಾರಾಮಾರಿ- ಮೂವರು ಆಟಗಾರರಿಗೆ ಗಾಯ

    ಕಬಡ್ಡಿ ಪಂದ್ಯಾಟದ ವೇಳೆ ಗುಂಪುಗಳ ಮಧ್ಯೆ ಮಾರಾಮಾರಿ- ಮೂವರು ಆಟಗಾರರಿಗೆ ಗಾಯ

    ಗದಗ: ಕಬ್ಬಡ್ಡಿ ಪಂದ್ಯದ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಮೂವರಿಗೆ ಗಾಯಗಳಾದ ಘಟನೆ ಗದಗ್ ನಲ್ಲಿ ನಡೆದಿದೆ.

    ಘಟನೆಯಲ್ಲಿ ಗಾಯಗೊಂಡವರನ್ನು ಜಗದೀಶ್ ರಾಥೋಡ್(32), ಕೃಷ್ಣ ಲಮಾಣಿ(20), ಡಮ್ಮುರ(26) ಎಂದು ಗುರುತಿಸಲಾಗಿದ್ದು, ಈ ಮೂವರು ಸ್ಥಳೀಯ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಗದಗ ತಾಲೂಕಿನ ಕಳಸಾಪುರ ಗ್ರಾಮದಲ್ಲಿ ಈಶ್ವರ ದೇವಸ್ಥಾನದ ಜಾತ್ರೆ ನಿಮಿತ್ತ ಆಯೋಜನೆ ಮಾಡಿದ್ದ ಕಬ್ಬಡ್ಡಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕ್ಲುಲ್ಲಕ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದೆ. ಮಾತಿನ ಚಕಮನಿ ತಾರಕಕ್ಕೇರಿ ಎರಡೂ ಗುಂಪುಗಳು ಪರಸ್ಪರ ಕೈ ಕೈ ಮಿಲಾಯಿಸಿಕೊಂಡಿವೆ. ಘಟನೆಯಲ್ಲಿ ಮೂವರಿಗೆ ಗಾಯಗಳಾಗಿದ್ದು, ಅವರನ್ನು ಗದಗ್ ನ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.