Tag: kabali film

  • ಡ್ರಗ್ಸ್ ಮಾರಾಟ ಮಾಡುವಾಗ ಸಿಕ್ಕಿಬಿದ್ದ ‘ಕಬಾಲಿ’ ಚಿತ್ರದ ನಿರ್ಮಾಪಕನ ಬಂಧನ

    ಡ್ರಗ್ಸ್ ಮಾರಾಟ ಮಾಡುವಾಗ ಸಿಕ್ಕಿಬಿದ್ದ ‘ಕಬಾಲಿ’ ಚಿತ್ರದ ನಿರ್ಮಾಪಕನ ಬಂಧನ

    ಕಾಲಿವುಡ್ ಸೂಪರ್ ಸ್ಟಾರ್ ತಲೈವಾ(Rajanikanth)  ನಟನೆಯ ‘ಕಬಾಲಿ’ (Kabali Telagu Film) ಸಿನಿಮಾದ ತೆಲುಗು ವರ್ಷನ್‌ಗೆ ಬಂಡವಾಳ ಹೂಡಿದ್ದ ನಿರ್ಮಾಪಕ ಕೆ.ಪಿ. ಚೌದರಿ ಅವರನ್ನು ಅರೆಸ್ಟ್ ಮಾಡಲಾಗಿದೆ. ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಅವರ ಬಂಧನವಾಗಿದೆ. ಹೈದರಾಬಾದ್ ಪೊಲೀಸರು ಕೆ.ಪಿ. ಚೌದರಿ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಹೈದರಾಬಾದ್‌ನ ಕಿಸ್ಮತ್‌ಪುರದಲ್ಲಿರುವ ತಮ್ಮ ಮನೆಯಿಂದ ಹೊರಟ ಕೆ.ಪಿ. ಚೌದರಿ ಅವರನ್ನು ವಿಶೇಷ ತನಿಖಾ ತಂಡದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಜಾರಿ ನಿರ್ದೇಶನಾಲಯ, ಇನ್ನಿತರ ತನಿಖಾ ಸಂಸ್ಥೆಗಳು ಕೂಡ ತನಿಖೆ ನಡೆಸಲಿದ್ದು, ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಿದ್ದಾರೆ ಎನ್ನಲಾಗಿದೆ.

    ಡ್ರಗ್ಸ್ ಮಾರಾಟದ ಬಗ್ಗೆ ಸುಳಿವು ಕಾರಣ ಪೊಲೀಸರು ಕೆ.ಪಿ. ಚೌದರಿ ಅವರ ಮನೆ ಮೇಲೆ ದಾಳಿ ಮಾಡಿದಾಗ 90 ಪ್ಯಾಕೆಟ್ ಕೊಕೇನ್ ಪತ್ತೆ ಆಗಿದೆ. ಗೋವಾದಿಂದ ಅವರು 100 ಪ್ಯಾಕೆಟ್‌ಗಳಲ್ಲಿ ಮಾದಕ ವಸ್ತು ಖರೀದಿಸಿ ತಂದಿದ್ದರು ಎನ್ನಲಾಗಿದೆ. ಆದರೆ ಪೊಲೀಸರಿಗೆ ಸಿಕ್ಕಿರುವುದು 90 ಪ್ಯಾಕೆಟ್‌ಗಳು ಮಾತ್ರ. ಇದು 82.75 ಗ್ರಾಂ ಇದೆ ಎಂದು ವರದಿ ಆಗಿದೆ. ಕೆ.ಪಿ. ಚೌದರಿ ಅವರು ತಮ್ಮ ಗಿರಾಕಿಗಳಿಗೆ ಡ್ರಗ್ಸ್ ಮಾರಾಟ ಮಾಡಲು ಹೊರಟಿದ್ದಾಗಲೇ ಪೊಲೀಸರ ಕೈಗೆ ಸಿಕ್ಕಿಬಿದ್ದಾರೆ. ಇದನ್ನೂ ಓದಿ:ಟಾಪ್‌ಲೆಸ್ ಆಗಿ ಕಾಣಿಸಿಕೊಂಡ ತಮನ್ನಾ ಭಾಟಿಯಾ- ಹಾಟ್ ವೀಡಿಯೋ ವೈರಲ್

    ಕೆ.ಪಿ. ಚೌದರಿ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2016ರಲ್ಲಿ. ‘ಕಬಾಲಿ’ (Kabali) ಸಿನಿಮಾದ ತೆಲುಗು ವರ್ಷನ್‌ಗೆ ಅವರು ಬಂಡವಾಳ ಹೂಡಿದ್ದರು. ತೆಲುಗಿನ ಸಾಕಷ್ಟು ಸಿನಿಮಾ ವಿತರಣೆ ಮಾಡಿದ್ದರು. ಆದರೆ ಈ ವ್ಯವಹಾರದಿಂದ ಅವರಿಗೆ ಹೆಚ್ಚು ಲಾಭ ಆಗಲಿಲ್ಲ. ಗೋವಾದಲ್ಲಿ ಕೆ.ಪಿ ಚೌದರಿ ಅವರ ಕ್ಲಬ್‌ಗೆ ಅನೇಕ ಸೆಲೆಬ್ರಿಟಿಗಳು ಅಲ್ಲಿಗೆ ಆಗಾಗ ಭೇಟಿ ನೀಡುತ್ತಾರೆ ಎಂಬ ಸುದ್ದಿ ಇದೆ. ಇನ್ನೂ 2021ರಲ್ಲಿ ಡ್ರಗ್ಸ್ ಕೇಸ್, ಅಕ್ರಮ ಹಣ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ರಾಣಾ ದಗ್ಗುಭಾಟಿ, ರಾಕುಲ್, ರವಿತೇಜಾ ಸೇರಿದಂತೆ ಹಲವರು ವಿಚಾರಣೆ ಒಳಗಾಗಿದ್ರು.