Tag: Kabaddi Tournament

  • ಹಿಪ್ಪರಗಿ ಕಬಡ್ಡಿ ವೈಭವ – ಕಣ್ಮನ ಸೆಳೆದ ಅಂತರ್ ರಾಜ್ಯ ಮಹಿಳಾ ಟೂರ್ನಿ

    ಹಿಪ್ಪರಗಿ ಕಬಡ್ಡಿ ವೈಭವ – ಕಣ್ಮನ ಸೆಳೆದ ಅಂತರ್ ರಾಜ್ಯ ಮಹಿಳಾ ಟೂರ್ನಿ

    ಬಾಗಲಕೋಟೆ: ಜಿಲ್ಲೆಯ ಜಮಖಂಡಿ (Jamkhandi) ತಾಲ್ಲೂಕಿನ ಹಿಪ್ಪರಗಿಯಲ್ಲಿ (Hippargi) ಶ್ರೀ ಸಂಗಮೇಶ್ವರ ಮಹಾರಾಜರ 93ನೇ ಪುಣ್ಯಸ್ಮರಣೋತ್ಸವ ಸಪ್ತಾಹ ಸಮಾರಂಭ ಹಾಗೂ ಜಾತ್ರಾ ಮಹೋತ್ಸವ ಅಂಗವಾಗಿ ಹಿಪ್ಪರಗಿ ಕಬಡ್ಡಿ ವೈಭವ- 2ನೇ ಆವೃತ್ತಿಯು ಅಂತರ್ ರಾಜ್ಯ ಮಟ್ಟದ ಮಹಿಳೆಯರ ಮುಕ್ತ ಕಬಡ್ಡಿ ಪಂದ್ಯಾವಳಿಯನ್ನು (Kabaddi Tournament) ಹಮ್ಮಿಕೊಳ್ಳಲಾಗಿತ್ತು.

    ಈ ಪಂದ್ಯಾವಳಿಯಲ್ಲಿ ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ, ಗುಜರಾತ್, ತಮಿಳನಾಡು,ಆಂಧ್ರಪ್ರದೇಶ,ಕರ್ನಾಟಕ ಸೇರಿದಂತೆ 35 ತಂಡಗಳು ಭಾಗವಹಿಸಿದ್ದವು.

    ಕಬಡ್ಡಿ ಪಂದ್ಯಾವಳಿಯ ಸಮಾರೋಪ ಸಮಾರಂಭದ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಪದ್ಮಶ್ರೀ ಪುರಸ್ಕೃತ ಜೋಗತಿ ಮಂಜಮ್ಮ (Jogati Manjamma) ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟು ಅವರ ಭವಿಷ್ಯವನ್ನು ಹಾಳು ಮಾಡಬೇಡಿ. ಕಬಡ್ಡಿಯಂತಹ ದೇಶಿಯ ಆಟಗಳನ್ನು ಆಡಿಸಿ ಬಲಿಷ್ಠರನ್ನಾಗಿ ಮಾಡುವುದರ ಜೊತೆಗೆ ಒಳ್ಳೆಯ ಶಿಕ್ಷಣವನ್ನು ಕೊಡಿಸಬೇಕು ಎಂದು ಹೇಳಿದರು. ಹಿಪ್ಪರಗಿ ಕಬಡ್ಡಿ ವೈಭವ ಅತ್ಯಂತ ಅದ್ದೂರಿಯಾಗಿ ಜರುಗಿದೆ ಎಂದು ಹರ್ಷವನ್ನು ವ್ಯಕ್ತಪಡಿಸಿದರು. ಇದನ್ನೂ ಓದಿ: ನಾಲಗೆ ಕಚ್ಚಿ, ಜೋರು ಗದರಿ ಕೈ ಎತ್ತಿದ ಸಿದ್ದರಾಮಯ್ಯ

    ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಬಂಡಿಗಣಿ ನೀಲಮಾಣಿಕ ಮಠದ ದಾಸೋಹ ರತ್ನ ಚಕ್ರವರ್ತಿ ದಾನೇಶ್ವರ ಅಪ್ಪಾಜಿಯವರು ಹಿಪ್ಪರಗಿ ಗ್ರಾಮದ ಶಕ್ತಿ ಎಂತಹದ್ದು ಎಂದು ಈ ಕಬಡ್ಡಿ ವೈಭವವನ್ನು ನೋಡಿದರೆ ತಿಳಿಯುತ್ತದೆ. ಗಿರಿಮಲೇಶ್ವರರು, ಸಂಗಮನಾಥರು, ಮಾಧವಾನಂದರು, ಶ್ರೀಶೈಲ ಜಗದ್ಗುರುಗಳು ಹುಟ್ಟಿದ ಪುಣ್ಯಭೂಮಿ ಇದು. ಎಲ್ಲರೂ ಒಗಟ್ಟಾಗಿ ಬಾಳಿ ಎಂದು ಹಾರೈಸಿದರು.

    ಸಮಾರಂಭದ ಸಾನಿಧ್ಯವನ್ನು ವಹಿಸಿಕೊಂಡ ಶ್ರೀ ಸ.ಸ.ಪ್ರಭುಜೀ ಮಹಾರಾಜರು, ತರಹದ ದೇಶಿ ಆಟಗಳನ್ನು ಆಡಬೇಕೆಂದು ತಿಳಿಸಿದರು. ಸಮಾರಂಭದ ದಿವ್ಯ ಸಾನಿಧ್ಯವನ್ನ ವಹಿಸಿದ್ದ ಶ್ರೀಶೈಲ ಮಹಾಪೀಠದ ಜಗದ್ಗುರು ಮಹಾಸನ್ನಿಧಿಯವರು, ಈ ಕಬಡ್ಡಿ ವೈಭವ ಆಯೋಜನೆ ಮಾಡುವುದಕ್ಕಷ್ಟೇ ಸೀಮಿತವಾಗದೇ ಅಂತರರಾಜ್ಯ ಮಟ್ಟದಿಂದ ಆಗಮಿಸಿರುವ ಮಹಿಳಾ ತಂಡಗಳಂತೆ ಪ್ಪರಗಿ ಗ್ರಾಮದಿಂದಲೂ ಬಲಿಷ್ಠ ಕಬಡ್ಡಿ ತಂಡ ನಿರ್ಮಾಣವಾಗಬೇಕೆಂದು ಕರೆ ಕೊಡುವುದರ ಜೊತೆಗೆ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯವೆಂದು ತಮ್ಮ ಆಶೀರ್ವಚನ ನೀಡಿದರು.

    2ನೇ ಆವೃತ್ತಿಯಲ್ಲಿ ರತ್ನಗಿರಿ ಪ್ರಥಮ, ಉತ್ತರ ಪ್ರದೇಶ ದ್ವಿತೀಯ, ಸತಾರ ತೃತೀಯ, ಗುಜರಾತ್‌ ಚತುರ್ಥ ಸ್ಥಾನವನ್ನು ಗಳಿಸಿದವು.

     

  • ಬಾಲಕಿಯರ ಕಬಡ್ಡಿ ಪಂದ್ಯಾಟಕ್ಕೆ ಟಾಯ್ಲೆಟ್‌ನಲ್ಲಿ ಊಟ ತಯಾರಿ!

    ಬಾಲಕಿಯರ ಕಬಡ್ಡಿ ಪಂದ್ಯಾಟಕ್ಕೆ ಟಾಯ್ಲೆಟ್‌ನಲ್ಲಿ ಊಟ ತಯಾರಿ!

    ಲಕ್ನೋ: ಉತ್ತರಪ್ರದೇಶದ (Uttar Pradesh) ಸಹರಾನ್ ಪುರದಲ್ಲಿ ನಡೆದ ಬಾಲಕಿಯರ (Girls) ಕಬಡ್ಡಿ ಟೂರ್ನಿ (Kabaddi Tournament) ವೇಳೆ ಶೌಚಾಲಯದಲ್ಲಿ (Toilet) ಬೇಯಿಸಿದ ಆಹಾರವನ್ನೇ ಕ್ರೀಡಾಪಟುಗಳಿಗೆ ಬಡಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

    ಶೌಚಾಲಯ ನೆಲದ ಮೇಲೆ ಬೇಯಿಸಿದ ಅನ್ನದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದ್ದಂತೆ ವಿವಾದ ಬುಗಿಲೆದ್ದಿದೆ. ಇದನ್ನೂ ಓದಿ: ರಾಕೇಶ್ ‘ಕಿಸ್’ ಕೊಟ್ಟಿದ್ದು ನಿಜ. ಆದರೆ, ಅದು ಅಮ್ಮನ ಮುತ್ತಿನಂತಿತ್ತು: ಸೋನು ಶ್ರೀನಿವಾಸ್ ಗೌಡ

    ಶುಕ್ರವಾರ (ಸೆಪ್ಟೆಂಬರ್ 16) ದಿಂದ ಆರಂಭವಾದ ಮೂರು ದಿನಗಳ ರಾಜ್ಯಮಟ್ಟದ ಅಂಡರ್-17 ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ (Kabaddi Tournament) ಭಾಗವಹಿಸಿದ್ದ ಸುಮಾರು 200 ಕ್ರೀಡಾಪಟುಗಳಿಗೆ ಶೌಚಾಲಯದ ನೆಲದಲ್ಲಿ ಬೇಯಿಸಿದ ಆಹಾರವನ್ನೇ (Food) ನೀಡಲಾಗಿದೆ. ಜೊತೆಗೆ ಒಂದು ಕಾಗದದ ಮೇಲೆ ಪೂರಿಯನ್ನು ಇಡಲಾಗಿತ್ತು. ಅದನ್ನೇ ಆಟಗಾರರಿಗೆ ಬಡಿಸಲಾಗಿದೆ ಎಂದು ಕ್ರೀಡಾಪಟುಗಳು ಆರೋಪಿಸಿದ್ದಾರೆ.

    ಈ ಆರೋಪ ತಳ್ಳಿಹಾಕಿರುವ ಕ್ರೀಡಾಧಿಕಾರಿ ಅನಿಮೇಶ್ ಸಕ್ಸೇನಾ ಅವರು, ಇದು ಆಧಾರ ರಹಿತ ಆರೋಪ ಎಂದು ಹೇಳಿದ್ದಾರೆ. ಇದನ್ನೂ ಓದಿ: ಖಾತೆಗಳನ್ನು ಖಾಲಿ ಉಳಿಸಿಕೊಂಡು ಕಾಲಹರಣ ಮಾಡೋ ಬದ್ಲು, ಸಚಿವ ಸ್ಥಾನ ನೀಡಿ: ಬಿಜೆಪಿ MLC

    ಇಲ್ಲಿ ಆಟಗಾರರಿಗೆ ನೀಡಲಾಗುವ ಆಹಾರವು ಉತ್ತಮ ಗುಣಮಟ್ಟದ್ದಾಗಿದೆ. ಅಕ್ಕಿ, ದಾಲ್, ಸಬ್ಜಿ ಸೇರಿದಂತೆ ಎಲ್ಲ ರೀತಿಯ ಆಹಾರವನ್ನು ಈಜುಕೊಳದ (Swimming Pool) ಬಳಿಯೇ ಸಾಂಪ್ರದಾಯಿಕ ಇಟ್ಟಿಗೆ ಒಲೆಯಲ್ಲಿ ದೊಡ್ಡ ಪಾತ್ರೆಗಳಲ್ಲಿ ಸಿದ್ಧಪಡಿಸಿ ಕೊಡಲಾಗಿದೆ. ಸ್ಥಳದ ಕೊರತೆಯಿದ್ದರಿಂದಾಗಿ ಕ್ರೀಡಾಂಗಣದ ಪೂಲ್ ಬಳಿಯೇ ಅಡುಗೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

    ಕೆಲ ಆಟಗಾರರು ಕ್ರೀಡಾಂಗಣದ ಅಧಿಕಾರಿಗಳ ಮುಂದೆ ವಿಷಯ ಪ್ರಸ್ತಾಪಿಸಿದ ಬಳಿಕ ಅನಿಮೇಶ್ ಸಕ್ಸೇನಾ ಅಡುಗೆಯವರಿಗೆ ಛೀಮಾರಿ ಹಾಕಿದ್ದು, ಶಿಸ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅತ್ತ ರಣರೋಚಕ ಕಬಡ್ಡಿ ಫೈನಲ್ ಪಂದ್ಯಾಟ – ಇತ್ತ ಕಟ್ಟಿಗೆ ಹಿಡಿದು ಯುವಕರ ಬಡಿದಾಟ

    ಅತ್ತ ರಣರೋಚಕ ಕಬಡ್ಡಿ ಫೈನಲ್ ಪಂದ್ಯಾಟ – ಇತ್ತ ಕಟ್ಟಿಗೆ ಹಿಡಿದು ಯುವಕರ ಬಡಿದಾಟ

    ಬೆಳಗಾವಿ: ಕಬಡ್ಡಿ ಆಡುತ್ತಿದ್ದ ಎರಡು ತಂಡಗಳ ಬೆಂಬಲಿಗರ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಕೈಗೆ ಸಿಕ್ಕ ಕಟ್ಟಿಗೆಗಳಿಂದ ಯುವಕರು ಬಡಿದಾಡಿಕೊಂಡ ಘಟನೆ ರಾಮದುರ್ಗ ತಾಲೂಕಿನ ಚಂದರಗಿ ಗ್ರಾಮದಲ್ಲಿ ನಡೆದಿದೆ.

    ಜಿಲ್ಲೆಯ ರಾಮದುರ್ಗ ತಾಲೂಕಿನ ಚಂದರಗಿ ಕ್ರೀಡಾ ಶಾಲೆಯ ಆವರಣದಲ್ಲಿ ವಲಯಮಟ್ಟದ ಕ್ರೀಡಾ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು. ಚಂದರಗಿ ಹಾಗೂ ಕಟಕೋಳ ಶಾಲೆಯ ವಿದ್ಯಾರ್ಥಿಗಳ ತಂಡಗಳ ನಡುವೆ ಕಬಡ್ಡಿ ಫೈನಲ್ ಪಂದ್ಯ ನಡೆಯುತ್ತಿತ್ತು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಎರಡು ಯುವಕರ ಗುಂಪುಗಳ ನಡುವೆ ಆರಂಭವಾದ ಗಲಾಟೆ ವಿಕೋಪಕ್ಕೆ ತಿರುಗಿ ಬಡಿಗೆ ಹಿಡಿದು ಬಡಿದಾಡಿಕೊಂಡಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ

    ಈ ವೇಳೆ ಕೈಗೆ ಸಿಕ್ಕ ಸಿಕ್ಕ ಕಟ್ಟಿಗೆ ಹಿಡಿದು ಎರಡು ಗ್ರಾಮಗಳ ಯುವಕರ ಬಡಿದಾಟ ನೋಡಿದ ಸ್ಥಳೀಯರು ಶಾಲಾ ವಿದ್ಯಾರ್ಥಿಗಳು ಎದ್ದು ಬಿದ್ದು ಓಡಿಹೋಗಿದ್ದಾರೆ. ಸ್ಥಳಕ್ಕೆ ಕಟಕೋಳ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಇದನ್ನೂ ಓದಿ: ಮಧುಮಗ ಎಸ್ಕೇಪ್ – ಲಗ್ನಪತ್ರಿಕೆ, ಮದುವೆ ಸೀರೆ ಹಿಡಿದು ಠಾಣೆ ಮೆಟ್ಟಿಲೇರಿದ ವಧು

    Live Tv
    [brid partner=56869869 player=32851 video=960834 autoplay=true]

  • ಮಧ್ಯರಾತ್ರಿ ಯುವಕರೊಂದಿಗೆ ಕಬಡ್ಡಿ ಆಡಿದ ಬಿಜೆಪಿ ಶಾಸಕ ರಾಜುಗೌಡ

    ಮಧ್ಯರಾತ್ರಿ ಯುವಕರೊಂದಿಗೆ ಕಬಡ್ಡಿ ಆಡಿದ ಬಿಜೆಪಿ ಶಾಸಕ ರಾಜುಗೌಡ

    ಯಾದಗಿರಿ: ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಸ್ವಲ್ಪ ದಿನ ಮಂಕಾಗಿದ್ದ ಯಾದಗಿರಿ ಜಿಲ್ಲೆಯ ಸುರಪುರದ ಬಿಜೆಪಿ ಶಾಸಕ ರಾಜುಗೌಡ ಈಗ ಫುಲ್ ಜೋಶ್‌ನಲ್ಲಿದ್ದಾರೆ. ಶನಿವಾರ ತಮ್ಮ ಕ್ಷೇತ್ರದಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಯುವಕರೊಂದಿಗೆ ಕಬಡ್ಡಿ ಕಣದಲ್ಲಿ ರಾಜುಗೌಡ ಮಿಂಚಿದ್ದಾರೆ.

    ಸುರಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಡದರಾಳದಲ್ಲಿ ಶನಿವಾರ ಶ್ರೀ ಬಸವೇಶ್ವರ ಯುವ ಬಳಗ ರಾಜ್ಯ ಮಟ್ಟದ ಪುರುಷರ ಹೊನಲು ಬೆಳಕಿನ, ಮುಕ್ತ ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಿತ್ತು. ಈ ಪಂದ್ಯಾವಳಿಯನ್ನು ಶಾಸಕ ರಾಜುಗೌಡ ಅವರು ಉದ್ಘಾಟಿಸಿದರು. ಅಷ್ಟೇ ಅಲ್ಲದೆ ಯುವಕರೊಂದಿಗೆ ಸ್ವತಃ ತಾವೇ ಕಬಡ್ಡಿ ಕಣಕ್ಕಿಳಿದು ಆಟವಾಡಿ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ಕೆ ಮುಂದಾದರು.

    ಮೂಲತಃ ಕ್ರೀಡಾಪಟುವಾಗಿರುವ ರಾಜುಗೌಡ ಅವರು ಯುವಕರೊಂದಿಗೆ ನುರಿತ ಕಬಡ್ಡಿ ಆಟಗಾರರಂತೆ ಆಟವಾಡುವ ಮೂಲಕ ನೆರೆದಿದ್ದ ಕ್ರೀಡಾಭಿಮಾನಿಗಳನ್ನು ರಂಜಿಸಿ, ಅವರ ಮನಗೆದ್ದಿದ್ದಾರೆ. ಕಾರ್ಯಕ್ರಮ ಉದ್ಘಾಟನೆ ಮಾಡಿ ಭಾಷಣದ ಮೂಲಕ ಯುವಕರಿಗೆ ಪ್ರೋತ್ಸಾಹಿಸಿದ್ದಲ್ಲದೆ, ಸ್ವತಃ ತಾವೇ ಯುವಕರೊಂದಿಗೆ ಕಬಡ್ಡಿ ಆಟವಾಡಿರುವುದು ವಿಶೇಷವಾಗಿದ್ದು, ಶಾಸಕರ ಕಾರ್ಯಕ್ಕೆ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.