Tag: kabaddi

  • ಪಂಜಾಬಿನಲ್ಲಿ ಕಬಡ್ಡಿ ಟೂರ್ನಿ | ತಮಿಳುನಾಡು ಆಟಗಾರ್ತಿಯರ ಮೇಲೆ ಹಲ್ಲೆ – ವಿಡಿಯೋ ವೈರಲ್‌

    ಪಂಜಾಬಿನಲ್ಲಿ ಕಬಡ್ಡಿ ಟೂರ್ನಿ | ತಮಿಳುನಾಡು ಆಟಗಾರ್ತಿಯರ ಮೇಲೆ ಹಲ್ಲೆ – ವಿಡಿಯೋ ವೈರಲ್‌

    ಚಂಡಿಗಢ: ಪಂಜಾಬಿನ (Punjab) ಭಟಿಂಡಾದಲ್ಲಿ ನಡೆದ ಅಂತರ ವಿಶ್ವವಿದ್ಯಾಲಯ (Inter-University) ಸ್ಪರ್ಧೆಯಲ್ಲಿ ಭಾಗವಹಿಸಿದ್ದ ತಮಿಳುನಾಡಿನ (Tamil Nadu) ಕಬಡ್ಡಿ ಆಟಗಾರ್ತಿಯರ (Kabaddi Players) ಮೇಲೆ ಹಲ್ಲೆ ನಡೆದಿದೆ.

    ಪಂದ್ಯದ ರೆಫ್ರೆ ನಿರ್ಧಾರದಿಂದ ಈ ಜಗಳ ಆರಭವಾಯಿತು ಎಂದು ವರದಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ (Social Media) ಪರಸ್ಪರ ಬಡಿದಾಡಿಕೊಳ್ಳುತ್ತಿರುವ ವಿಡಿಯೋ ವೈರಲ್‌ ಆಗಿದೆ.

    ತಮಿಳುನಾಡು ಮತ್ತು ದರ್ಭಾಂಗ ವಿಶ್ವವಿದ್ಯಾಲಯದ ಮಧ್ಯೆ ಕಬಡ್ಡಿ ಪಂದ್ಯ ನಡೆಯುತ್ತಿತ್ತು. ಈ ವೇಳೆ ರೆಫ್ರಿ ತೀರ್ಪು ನೀಡಿದ ತೀರ್ಪನ್ನು ತಮಿಳುನಾಡು ಆಟಗಾರ್ತಿಯರು ಪ್ರಶ್ನಿಸಿದ್ದಾರೆ. ಈ ವೇಳೆ ವಾಗ್ವಾದ ನಡೆದು ಪರಸ್ಪರ ಹಲ್ಲೆ ನಡೆದಿದೆ. ಇದನ್ನೂ ಓದಿ: ಕನ್ನಡದ ವಿಷ್ಣು ವಿಜಯದಲ್ಲಿ ನಟಿಸಿದ್ದ ಮಮತಾ ಕುಲಕರ್ಣಿ ಈಗ ಸನ್ಯಾಸಿನಿ

     

    ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಆಟಗಾರ್ತಿಯರು ಕೆಲವು ಪುರುಷರೊಂದಿಗೆ ಘರ್ಷಣೆ ನಡೆಸುತ್ತಿರುವುದನ್ನು ಕಾಣಬಹುದು. ಅವರು ಅಧಿಕಾರಿಗಳೋ ಅಥವಾ ಪ್ರೇಕ್ಷಕರೋ ಎಂಬುದು ವೀಡಿಯೋದಿಂದ ಸ್ಪಷ್ಟವಾಗಿಲ್ಲ. ಎರಡೂ ಕಡೆಯವರು ಪ್ಲಾಸ್ಟಿಕ್‌ ಚಯರ್‌ಗಳನ್ನು ಎಸೆಯುವುದನ್ನು ನೋಡಬಹುದು. ಇದನ್ನೂ ಓದಿ: ಡಿಕೆಶಿ ಕ್ಷೇತ್ರದಲ್ಲಿ ಗ್ರಾಮವನ್ನೇ ಖರೀದಿಸಿದ್ರಾ ಕಾಂಗ್ರೆಸ್‌ ಶಾಸಕ?

    ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ನಮ್ಮ ರಾಜ್ಯದ ಆಟಗಾರ್ತಿಯರು ಸುರಕ್ಷಿತವಾಗಿದ್ದು, ಶೀಘ್ರದಲ್ಲೇ ರಾಜ್ಯಕ್ಕೆ ಮರಳಲಿದ್ದಾರೆ ಎಂದು ಹೇಳಿದ್ದಾರೆ. ನಮ್ಮ ಆಟಗಾರ್ತಿಯರಿಗೆ ಯಾವುದೇ ದೊಡ್ಡ ಗಾಯಗಳು ಅಥವಾ ಏನೂ ಆಗಿಲ್ಲ. ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಅವರು ದೆಹಲಿಗೆ ಹಿಂತಿರುಗಲಿದ್ದಾರೆ. ಶೀಘ್ರದಲ್ಲೇ ಅವರು ಚೆನ್ನೈಗೆ ಬರಲಿದ್ದಾರೆ ಎಂದು ತಿಳಿಸಿದ್ದಾರೆ.

     \

  • ಮಂಡ್ಯ| ಕಬಡ್ಡಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಯುವಕ ಹೃದಯಾಘಾತದಿಂದ ಸಾವು

    ಮಂಡ್ಯ| ಕಬಡ್ಡಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಯುವಕ ಹೃದಯಾಘಾತದಿಂದ ಸಾವು

    ಮಂಡ್ಯ/ಉಡುಪಿ: ಹನುಮ ಜಯಂತಿ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಆಟಗಾರನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಜಿಲ್ಲೆಯ ನಾಗಮಂಗಲ ತಾಲೂಕಿನ ಸುಖಧರೆ ಗ್ರಾಮದಲ್ಲಿ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಪಂದ್ಯದಲ್ಲಿ ಪಾಲ್ಗೊಂಡಿದ್ದ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುಟ್ಲುಪಾಡಿಯ ಪ್ರೀತಂ ಶೆಟ್ಟಿ (24) ಸಾವಿಗೀಡಾದ ಯುವಕ.

    ತಡರಾತ್ರಿ ಆಟದ ವೇಳೆ ಹೃದಯಘಾತವಾಗಿತ್ತು. ನಾಗಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತದೇಹ ಇರಿಸಲಾಗಿದೆ. ನಾಗಮಂಗಲ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    ಸುಖಧರೆ ಗ್ರಾಮದಲ್ಲಿ ಹನುಮ ಜಯಂತಿ ಹಿನ್ನೆಲೆ ಪ್ರೊ ಕಬಡ್ಡಿ ಪಂದ್ಯಾಟ ಏರ್ಪಡಿಸಲಾಗಿತ್ತು. ಬಹುನಿರೀಕ್ಷಿತ ಆಟಗಾರನಾಗಿ ಬಂದಿದ್ದ ಪ್ರೀತಂ ಕಬಡ್ಡಿ ಪಂದ್ಯಾಟ ಮುಗಿಸಿ ರೆಸ್ಟ್‌ನಲ್ಲಿ ಇರುವಾಗ ಹೃದಯಾಘಾತಕ್ಕೊಳಗಾಗಿದ್ದಾರೆ. ಲೀಗ್, ಸೆಮಿ ಎಲ್ಲಾ ಆಟಗಳನ್ನು ಗೆದ್ದುಕೊಂಡು ಬಂದು ಫೈನಲ್ ಆಟ ಒಂದೇ ಬಾಕಿ ಇತ್ತು. ಅಂತಿಮ ಘಟ್ಟ ತಲುಪುವ ಮೊದಲೇ ಪ್ರೀತಮ್ ಇಹಲೋಕ ತ್ಯಜಿಸಿದ್ದಾರೆ.

    ಪ್ರೀತಂ ಪ್ರೊ ಕಬಡ್ಡಿ ಮತ್ತು ಟೀಮ್ ಇಂಡಿಯಾ ಕಬಡ್ಡಿಯಲ್ಲಿ ಆಡಿದ ಹಲವಾರು ಕ್ರೀಡಾಪಟುಗಳ ಜೊತೆ ಕೋರ್ಟ್ ಹಂಚಿಕೊಂಡಿದ್ದರು. ಪಂದ್ಯವೊಂದರಲ್ಲಿ ಬೆಂಗಾಲ್ ವಾರಿಯರ್ಸ್ ತಂಡದ ಮಣೀಂದರ್ ಅವರನ್ನು ಪ್ರೀತಂ ಕ್ಯಾಚ್ ಮಾಡಿದ್ದ ವೀಡಿಯೋ ಹಿಂದೆ ಬಹಳ ವೈರಲ್ ಆಗಿತ್ತು. ದೃಢಕಾಯದ ವ್ಯಕ್ತಿಯಾಗಿದ್ದ ಪ್ರೀತಂಗೆ ಕಬಡ್ಡಿ ನೆಲದಲ್ಲಿ ಬಹಳ ಬೇಡಿಕೆ ಇತ್ತು.

    ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಮುಟ್ಲುಪಾಡಿ ಗ್ರಾಮದ ನಿವಾಸಿಯಾಗಿರುವ ಪ್ರೀತಂ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದ. ವಿದೇಶದಲ್ಲಿ ಉದ್ಯೋಗವನ್ನು ಅರಸುತ್ತಿದ್ದು, ಎಲ್ಲಾ ತಯಾರಿ ಮಾಡಿಕೊಂಡಿದ್ದ. ಮೈದಾನದಲ್ಲಿ ಕುಸಿದು ಬಿದ್ದ ಕೂಡಲೇ ಪ್ರೀತಂನನ್ನು ಸ್ಥಳೀಯ ನಾಗಮಂಗಲ ಆಸ್ಪತ್ರೆಗೆ ರವಾನಿಸಲಾಯಿತು. ಅಷ್ಟರಲ್ಲೇ ಆತ ಕೊನೆಯುಸಿರೆಳೆದಿದ್ದ.

  • ಪಿಯು ಕಬಡ್ಡಿ ಟೂರ್ನಿ ವೇಳೆ ಜಗಳ: ಮಚ್ಚು ಬೀಸಿದ ಅಪ್ರಾಪ್ತ ವಿದ್ಯಾರ್ಥಿ

    ಪಿಯು ಕಬಡ್ಡಿ ಟೂರ್ನಿ ವೇಳೆ ಜಗಳ: ಮಚ್ಚು ಬೀಸಿದ ಅಪ್ರಾಪ್ತ ವಿದ್ಯಾರ್ಥಿ

    ಹಾಸನ: ಕಬಡ್ಡಿ (Kabaddi) ಪಂದ್ಯದ ವೇಳೆ ಪಿಯು ವಿದ್ಯಾರ್ಥಿಗಳ ನಡುವೆ ಗಲಾಟೆ ಶುರುವಾಗಿ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿ ವಿದ್ಯಾರ್ಥಿಗಳು ಪರಸ್ಪರ ಬಡಿದಾಡಿಕೊಂಡು ಮಚ್ಚು ಬೀಸಿರುವ ಘಟನೆ ಹಾಸನ (Hassan) ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದೆ.ಇದನ್ನೂ ಓದಿ: ಹಾಸನದಲ್ಲಿ ನಕಲಿ ಆಧಾರ್ ತೋರಿಸಿ ಕೆಲಸ ಗಿಟ್ಟಿಸಿಕೊಳ್ಳುವ ಬಾಂಗ್ಲಾ ಅಕ್ರಮ ವಲಸಿಗರು – ತನಿಖೆ ವೇಳೆ ಬೃಹತ್ ಜಾಲ ಬಯಲು

    ಆ.30 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಪಿಯುಸಿ ಕಾಲೇಜುಗಳ ಕ್ರೀಡಾಕೂಟದಲ್ಲಿ ಕಬಡ್ಡಿ ಪಂದ್ಯ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಎರಡು ಕಾಲೇಜು ವಿದ್ಯಾರ್ಥಿಗಳ ಗುಂಪಿನ ನಡುವೆ ಜಗಳ ಶುರುವಾಗಿದೆ. ಈ ವೇಳೆ ಅಪ್ರಾಪ್ತ ವಿದ್ಯಾರ್ಥಿ ಮೇಲೆ ಮತ್ತೋರ್ವ ಅಪ್ರಾಪ್ತ ವಿದ್ಯಾರ್ಥಿ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದ ಮಚ್ಚು ತೆಗೆದು ಹಲ್ಲೆಗೆ ಮುಂದಾಗಿದ್ದು, ಕೂದಲೆಳೆ ಅಂತರದಲ್ಲಿ ಅಪ್ರಾಪ್ತ ವಿದ್ಯಾರ್ಥಿ ಪಾರಾಗಿದ್ದಾನೆ.

    ಇದರಿಂದ ಸಿಟ್ಟಿಗೆದ್ದ ಇತರೇ ವಿದ್ಯಾರ್ಥಿಗಳು ಮಚ್ಚು ಬೀಸಿದವನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹೊಡೆತ ತಾಳಲಾರದೇ ಅಪ್ರಾಪ್ತ ವಿದ್ಯಾರ್ಥಿ ನೆಲಕ್ಕುರಿಳಿದ್ದಾನೆ ಆದರೂ ಬಿಡದೇ ವಿದ್ಯಾರ್ಥಿಗಳು ಕಾಲಿನಿಂದ ಒದ್ದು ಮನಸ್ಸೋ ಇಚ್ಛೆ ಗೂಸಾ ಕೊಟ್ಟಿದ್ದಾರೆ. ಗಾಯಾಳು ವಿದ್ಯಾರ್ಥಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕೆ.ಆರ್.ಪುರಂ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಗೂಗಲ್‌, ಆಪಲ್‌ಗೆ ಜಿಯೋ ಠಕ್ಕರ್‌ – ಕ್ಲೌಡ್‌ ಸ್ಟೋರೇಜ್‌ನಲ್ಲೂ ದರ ಸಮರ ಆರಂಭ?

  • ಖೇಲೋ ಇಂಡಿಯಾಗೆ ಆಯ್ಕೆ – ಕ್ರೀಡಾಧಿಕಾರಿ, ವಿದ್ಯಾರ್ಥಿಗಳನ್ನು ಮೆರವಣಿಯೊಂದಿಗೆ ಬರಮಾಡಿಕೊಂಡ ಬೆಳ್ಳಾರೆ ಜನತೆ

    ಖೇಲೋ ಇಂಡಿಯಾಗೆ ಆಯ್ಕೆ – ಕ್ರೀಡಾಧಿಕಾರಿ, ವಿದ್ಯಾರ್ಥಿಗಳನ್ನು ಮೆರವಣಿಯೊಂದಿಗೆ ಬರಮಾಡಿಕೊಂಡ ಬೆಳ್ಳಾರೆ ಜನತೆ

    ಮಂಗಳೂರು: ಖೇಲೋ ಇಂಡಿಯಾ (Khelo India) ರಾಷ್ಟ್ರ ಮಟ್ಟದ ಕಬಡ್ಡಿ (Kabaddi) ಪಂದ್ಯಾಟಕ್ಕೆ ಆಯ್ಕೆಯಾದ ಬೆಳ್ಳಾರೆಯ (Bellare) ಕೆಪಿಎಸ್‌ನ ಇಬ್ಬರು ವಿದ್ಯಾರ್ಥಿಗಳು ಮತ್ತು ಕ್ರೀಡಾಧಿಕಾರಿಯನ್ನು ನಾಗರಿಕರು ಮೆರವಣಿಗೆಯ ಮೂಲಕ ಸಂಸ್ಥೆಗೆ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.

    ತೆಲಂಗಾಣದಲ್ಲಿ ನಡೆದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ (Karnataka) ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ರಾಜ್ಯದ ಕಬಡ್ಡಿ ತಂಡವನ್ನು ಪ್ರತಿನಿಧಿಸಿದ ಕಿಶನ್ ದ್ರಾವಿಡ್ ಹಾಗೂ ಹೇಮಂತ ಕೆ. ವಿ ಇವರು ಖೇಲೋ ಇಂಡಿಯಾ ರಾಷ್ಟ್ರೀಯ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆ ಆಗಿದ್ದಾರೆ. ಇವರ ಜೊತೆ ಖೇಲೋ ಇಂಡಿಯಾ ಕ್ರೀಡಾಧಿಕಾರಿಯಾಗಿ ಬೆಳ್ಳಾರೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪಾವತಿ ಆಯ್ಕೆಗೊಂಡಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ – ಯುಪಿ ಮೂಲದ ಹೊಸ ಆಟಗಾರನಿಗೆ ಚಾನ್ಸ್

    ಸುಳ್ಯ ತಾಲೂಕಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕೆಪಿಎಸ್‌ ಶಾಲಾ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಖೇಲೋ ಇಂಡಿಯಾಗೆ ಆಯ್ಕೆಯಾಗಿ ಬೆಳ್ಳಾರೆಗೆ ಕೀರ್ತಿ ತಂದಿದ್ದಾರೆ. ಈ ವಿಶೇಷ ಸಾಧನೆಗೆ ಊರಿನ ನಾಗರಿಕರು ತೆಲಂಗಾಣದಿಂದ ಬೆಂಗಳೂರು ಮೂಲಕ ಸುಬ್ರಹ್ಮಣ್ಯ ಮಾರ್ಗವಾಗಿ ಆಗಮಿಸಿದ ಇಬ್ಬರು ಆಟಗಾರರನ್ನು ಮತ್ತು ಕ್ರೀಡಾಧಿಕಾರಿ ಪುಷ್ಪಾವತಿ ಇವರನ್ನು ಬರಮಾಡಿಕೊಂಡು ಸನ್ಮಾನಿಸಿ ಮೆರವಣಿಗೆಯ ಮೂಲಕ ಸಂಸ್ಥೆಗೆ ಬರಮಾಡಿದ್ದಾರೆ.

  • PKL 10: ಪ್ರೊ ಕಬಡ್ಡಿ ಲೀಗ್: ಗುಜರಾತ್ ಜೈಂಟ್ಸ್‌ಗೆ ಭರ್ಜರಿ ಜಯ

    PKL 10: ಪ್ರೊ ಕಬಡ್ಡಿ ಲೀಗ್: ಗುಜರಾತ್ ಜೈಂಟ್ಸ್‌ಗೆ ಭರ್ಜರಿ ಜಯ

    ಅಹಮದಾಬಾದ್: ಇಲ್ಲಿನ ಟ್ರಾನ್ಸ್‌ಸ್ಟೇಡಿಯಾ ಅರೆನಾ ಸ್ಟೇಡಿಯಂನಲ್ಲಿ ನಡೆದ ಪ್ರೊ ಕಬಡ್ಡಿ (Kabaddi) ಲೀಗ್‍ನ 10ನೇ ಸೀಸನ್‍ನ ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟಾನ್ಸ್ (Telugu Titans) ವಿರುದ್ಧ ಗುಜರಾತ್ ಜೈಂಟ್ಸ್ (Gujarat Giants) ಭರ್ಜರಿ ಗೆಲುವು ಸಾಧಿಸಿತು.

    ಗುಜರಾತ್ ತಂಡದ ರೈಡರ್ ಸೋನು ಜಗ್ಲಾನ್ ಉತ್ತಮ ಪ್ರದರ್ಶನ ನೀಡಿದ್ದು, ಒಟ್ಟು 11 ಬಾರಿ ದಾಳಿ ಮಾಡಿ 11 ಪಾಯಿಂಟ್ಸ್ ತಂದುಕೊಟ್ಟು ಯಶಸ್ವಿಯಾದರು. ರಾಕೇಶ್ ಸುಂಗ್ರೋಯಾ 5 ರೈಡ್‍ಗಳಲ್ಲಿ 5 ಅಂಕಗಳಿಸಿದರು. ಈ ಮೂಲಕ ಆತಿಥೇಯ ಗುಜರಾತ್ ಜೈಂಟ್ಸ್ ತಂಡವು ತೆಲುಗು ಟೈಟಾನ್ಸ್ ವಿರುದ್ಧ 38-32 ಅಂಕಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿತು. ಇದನ್ನೂ ಓದಿ: WPL 2024 ಹರಾಜಿಗೆ 165 ಪ್ಲೇಯರ್ಸ್‌ ನೋಂದಣಿ – ಯಾರಾಗ್ತಾರೆ ಈ ಬಾರಿಯ ಟಾಪ್‌ ಪ್ಲೇಯರ್‌?

    ತೆಲುಗು ಟೈಟಾನ್ಸ್ ತಂಡದ ಸ್ಟಾರ್ ರೈಡರ್ ಪವನ್ ಸೆಹ್ರಾವತ್ ಈ ಪಂದ್ಯದಲ್ಲಿ ಸೂಪರ್ 10 ಪಡೆದರು. ಪಂದ್ಯದ ನಿರ್ಣಾಯಕ ಘಟ್ಟಗಳಲ್ಲಿ ತೆಲುಗು ಟೈಟಾನ್ಸ್ ಎಡವಿದ ಕಾರಣ ಗೆಲುವಿಗೆ ಆ ಅಂಕಗಳು ಸಾಕಾಗಲಿಲ್ಲ. ಇದನ್ನೂ ಓದಿ: T20I ಕ್ರಿಕೆಟ್‌ನಲ್ಲಿ ಪಾಕ್‌ ದಾಖಲೆ ನುಚ್ಚುನೂರು – ಟೀಂ ಇಂಡಿಯಾ ಯುವಪಡೆಗೆ ಮೆಚ್ಚುಗೆ

  • ಕಬಡ್ಡಿಯಲ್ಲಿ ಪಾಯಿಂಟ್‌ಗಾಗಿ ಕಿತ್ತಾಟ, 1 ಗಂಟೆ ಆಟ ಸ್ಥಗಿತ – ಕೊನೆಗೂ ಚಿನ್ನ ಗೆದ್ದ ಭಾರತ

    ಕಬಡ್ಡಿಯಲ್ಲಿ ಪಾಯಿಂಟ್‌ಗಾಗಿ ಕಿತ್ತಾಟ, 1 ಗಂಟೆ ಆಟ ಸ್ಥಗಿತ – ಕೊನೆಗೂ ಚಿನ್ನ ಗೆದ್ದ ಭಾರತ

    ಹ್ಯಾಂಗ್‌ಝೋ: ಹಲವು ನಾಟಕೀಯ ಬೆಳವಣಿಗೆಗಳಿಗೆ ಕಾರಣವಾಗಿದ್ದ ಏಷ್ಯನ್‌ ಗೇಮ್ಸ್‌ (Asian Games 2023) ಕಬಡ್ಡಿ ಫೈನಲ್‌ನಲ್ಲಿ (Kabaddi Final) ಇರಾನ್‌ (Iran) ತಂಡವನ್ನು29 -33 ಅಂಕಗಳಿಂದ ಸೋಲಿಸಿ ಭಾರತ ಚಿನ್ನದ ಪದಕವನ್ನು (Gold Medal) ಗೆದ್ದುಕೊಂಡಿದೆ.

    ಈ ಮೂಲಕ ಈ ಕ್ರೀಡಾಕೂಟದ ಮಹಿಳೆಯರ ಮತ್ತು ಪುರುಷರ ಎರಡೂ ಕಬಡ್ಡಿಯಲ್ಲಿ ಭಾರತ (India) ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಇದನ್ನೂ ಓದಿ: Asian Games 2023: ಚಿನ್ನದ ಮಳೆ – ಚೊಚ್ಚಲ ಚಾಂಪಿಯನ್‌ ಕಿರೀಟ ಧರಿಸಿದ ಭಾರತ

    https://twitter.com/TheCrickFun/status/1710574840963600783

    ಆಗಿದ್ದೇನು?
    ಎರಡು ತಂಡಗಳು 28 ಅಂಕಗಳಿಸಿದ್ದಾಗ ಭಾರತದ ಪವನ್‌ ಶೆರಾವತ್‌ (Pawan Sehrawat) ರೈಡ್ ಮಾಡುತ್ತಿದ್ದರು. ಡು-ಆರ್‌-ಡೈ ರೈಡ್‌ ವೇಳೆ ಇರಾನ್‌ ಆಟಗಾರನ್ನು ಟಚ್‌ ಮಾಡಲು ಪ್ರಯತ್ನಿಸಿ ವಿಫಲರಾಗಿ ಲಾಬಿ ಗೆರೆಯನ್ನು ಟಚ್‌ ಮಾಡಿದರು. ಈ ವೇಳೆ ಇರಾನಿನ 4 ಆಟಗಾರರು ಲಾಬಿಯಲ್ಲಿ ಪವನ್‌ ಅವರನ್ನು ಹಿಡಿದರು.

    ಪವನ್‌ ಔಟಾದ ಬೆನ್ನಲ್ಲೇ ಇರಾನ್‌ ತಂಡಕ್ಕೆ 1 ಅಂಕವನ್ನು ನೀಡಲಾಯಿತು. ಈ ತೀರ್ಪು ಬಂದ ಕೂಡಲೇ ಭಾರತದ ತಂಡ ಆಟಗಾರರು, ಕೋಚ್‌ ಅಂಪೈರ್‌ ಜೊತೆ ಅಂಕ ನೀಡುವುಂತೆ ಚರ್ಚೆ ನಡೆಸಿದರು.

    ನಂತರ ರಿವ್ಯೂ ನೋಡಿದಾಗ ಪವನ್‌ ಇರಾನ್‌ ಆಟಗಾರರನ್ನು ಟಚ್‌ ಮಾಡದೇ ಇರುವ ವಿಷಯ ದೃಢಪಟ್ಟಿತ್ತು. ರಿವ್ಯೂ ನಂತರ ಭಾರತ ತಂಡಕ್ಕೆ 4 ಅಂಕಗಳನ್ನು ನೀಡಲಾಯಿತು. ಭಾರತಕ್ಕೆ 4 ಅಂಕ ನೀಡಿದ್ದಕ್ಕೆ ಇರಾನ್‌ ತಂಡ ಭಾರೀ ವಿರೋಧ ವ್ಯಕ್ತಪಡಿಸಿತು. ಎರಡು ತಂಡಗಳು ಅಂಕದ ವಿಷಯದ ಬಗ್ಗೆ ವಾದ ಮುಂದುವರಿಸುತ್ತಿದ್ದಂತೆ ಪಂದ್ಯವನ್ನೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

    ನಿಮಯ ಏನು ಹೇಳುತ್ತೆ?
    ರೈಡರ್‌ ಎದುರಾಳಿ ಆಟಗಾರನನ್ನು ಟಚ್‌ ಮಾಡದೇ ಲಾಬಿಯನ್ನು ಟಚ್‌ ಮಾಡಿದಾಗ ಎದುರಾಳಿ ಆಟಗಾರರು ರೈಡರ್‌ ಅನ್ನು ಹಿಡಿದರೆ ಆಗ ಆ ಎಲ್ಲಾ ಡಿಫೆಂಡರ್‌ಗಳು ಔಟ್‌ ಎಂದು ಅಂತಾರಾಷ್ಟ್ರೀಯ ಕಬಡ್ಡಿಯ ನಿಯಮ ಹೇಳುತ್ತದೆ. ಆದರೆ ಭಾರತದಲ್ಲಿ ನಡೆಯುವ ಪ್ರೊ ಕಬಡ್ಡಿಯಲ್ಲಿ ಈ ನಿಯಮವನ್ನು ಬದಲಾಯಿಸಲಾಯಿಸಲಾಗಿದ್ದು, ಸಂದರ್ಭದಲ್ಲಿ ರೈಡರ್‌ ಮಾತ್ರ ಔಟ್‌ ಎಂದು ಘೋಷಿಸಲಾಗುತ್ತದೆ.

    ಅಂತಾರಾಷ್ಟ್ರೀಯ ಕಬಡ್ಡಿ ನಿಯಮದ ಪ್ರಕಾರ 4 ಮಂದಿಯೂ ಔಟ್‌ ಎಂದು ಭಾರತ ವಾದಿಸಿತ್ತು. ಕೊನೆಗೆ ಯಾವ ತಂಡಕ್ಕೆ ಅಂಕ ನೀಡಬೇಕೆಂದು ಎಂದು ನಿರ್ಧಾರ ತೆಗೆದುಕೊಳ್ಳಲು ಸುಮಾರು ಒಂದು ಗಂಟೆ ಕಾಲ ಆಟವನ್ನು ಸ್ಥಗಿತಗೊಳಿಸಲಾಗಿತ್ತು. ಅಂತಿಮವಾಗಿ ವಿಡಿಯೋ ರಿಪ್ಲೈ ನೋಡಿ ರೆಫ್ರಿಗಳು ಚರ್ಚೆ ಮಾಡಿ ಭಾರತಕ್ಕೆ 4 ಅಂಕ ನೀಡಿದರು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೇಣು ಬಿಗಿದುಕೊಂಡು ಮಂಗಳೂರಿನ ಕಬಡ್ಡಿ ಆಟಗಾರ ಆತ್ಮಹತ್ಯೆ

    ನೇಣು ಬಿಗಿದುಕೊಂಡು ಮಂಗಳೂರಿನ ಕಬಡ್ಡಿ ಆಟಗಾರ ಆತ್ಮಹತ್ಯೆ

    ಮಂಗಳೂರು: ಕಬಡ್ಡಿ (Kabaddi) ಆಟಗಾರನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುದುವೆಟ್ಟುನಲ್ಲಿ ನಡೆದಿದೆ.

    ಪುದುವೆಟ್ಟು ನಿವಾಸಿ ಸ್ವರಾಜ್ (24) ಆತ್ಮಹತ್ಯೆ ಮಾಡಿಕೊಂಡ ಯುವಕ. ಉಜಿರೆಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಸ್ವರಾಜ್ ಕಬಡ್ಡಿ ಕ್ರೀಡೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದ. ಇದನ್ನೂ ಓದಿ: 7,000 ರಾಖಿ ಕಟ್ಟಿಸಿಕೊಂಡು ವಿಶ್ವ ದಾಖಲೆ ಬರೆದ ಜನಪ್ರಿಯ ಆನ್‌ಲೈನ್ ಬೋಧಕ ಖಾನ್ ಸರ್

    ಗುರುವಾರ (ಇಂದು) ತನ್ನ ಮನೆಯ ಸ್ನಾನದ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ (Dharmastala Police Station) ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದೇಶದಲ್ಲಿ ಲ್ಯಾಪ್‌ಟಾಪ್‌ ತಯಾರಿಸಲು 32 ಕಂಪನಿಗಳಿಂದ ಅರ್ಜಿ – 75 ಸಾವಿರ ಉದ್ಯೋಗ ಸೃಷ್ಟಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜೈಪುರಕ್ಕೆ ಹೋಗಿ ಕೈ ಮುರಿದುಕೊಂಡಿದ್ದೆ – ಕಬಡ್ಡಿ ಆಡಿ ನೆನಪು ಹಂಚಿಕೊಂಡ ಹೊರಟ್ಟಿ

    ಜೈಪುರಕ್ಕೆ ಹೋಗಿ ಕೈ ಮುರಿದುಕೊಂಡಿದ್ದೆ – ಕಬಡ್ಡಿ ಆಡಿ ನೆನಪು ಹಂಚಿಕೊಂಡ ಹೊರಟ್ಟಿ

    ಧಾರವಾಡ: ನಾನು ರಾಷ್ಟ್ರಮಟ್ಟದಲ್ಲಿ ಕಬಡ್ಡಿ (Kabaddi) ಆಟ ಆಡಿದ್ದೇನೆ. ಎರಡು ಬಾರಿ ಯೂನಿವರ್ಸಿಟಿ ಬ್ಲೂ ಆಗಿದ್ದೆ. ಅದರಲ್ಲಿ ಒಂದು ಬಾರಿ ಕಬಡ್ಡಿ ಆಟದಲ್ಲಿ‌ ನಾನು ಜೈಪುರಕ್ಕೆ ಹೋಗಿದ್ದಾಗ ಕೈಮುರಿದುಕೊಂಡು ಬಂದಿದ್ದೆ ಎಂದು ಪರಿಷತ್ ಸಭಾಪತಿ (Vidhan Parishad Chairman) ಬಸವರಾಜ ಹೊರಟ್ಟಿ (Basavaraj Horatti) ಹೇಳಿದರು.

    ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಕಬಡ್ಡಿ ಆಟಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ನಾನು ರಾಷ್ಟ್ರಮಟ್ಟದಲ್ಲಿ ಕಬಡ್ಡಿ ಆಡಿದ್ದೇನೆ. 25 ವರ್ಷದ ನಂತರ ಇವತ್ತು ಆಡಿದ್ದು ಬಹಳ ಖುಷಿಯಾಗಿದೆ ಎಂದರು.

    ಪ್ರತಿವರ್ಷ ಶಾಸಕರ ದಿನಾಚರಣೆಯಲ್ಲಿ ನಾವು ಕಬಡ್ಡಿ ಅಡುತ್ತಿದ್ದೆವು. ಆದರೆ ಈಗ ಅದು ಬಂದ್ ಆಗಿದೆ. ಕಬಡ್ಡಿಯಲ್ಲಿ ಸಂಪೂರ್ಣವಾದ ವ್ಯಾಯಾಮ ಸಿಗುತ್ತದೆ. ಎಷ್ಟೋ ವರ್ಷದ ನೆನಪು ಇಂದು ಆಗಿದೆ. ನಾನು ಜೈಪುರಕ್ಕೆ ಹೋಗಿ ಕಬಡ್ಡಿ ಆಡಿ ಕೈ ಮುರಿದುಕೊಂಡು ಬಂದಿದ್ದೆ ಎಂದು ಹಳೆಯ ನೆನಪನ್ನು ಹಂಚಿಕೊಂಡರು. ಇದನ್ನೂ ಓದಿ: ಗಣರಾಜ್ಯೋತ್ಸವಕ್ಕೆ ಒಂದೇ ವಾರದಲ್ಲಿ ಕರ್ನಾಟಕದ ಟ್ಯಾಬ್ಲೋ ರೆಡಿ

    ನಾವು ಚಿಕ್ಕವರಿದ್ದಾಗ ಮಣ್ಣಿನಲ್ಲೇ ಅಡುತ್ತಿದ್ದೆವು. ಆದರೆ ಈಗ ಸುಧಾರಣೆಯಾಗಿದ್ದು, ಶಾಸಕರ ದಿನಾಚರಣೆ ಮಾಡುವಾಗ ರಾಮಕೃಷ್ಣ ಹೆಗಡೆ ಹಾಗೂ ಜೆ ಹೆಚ್ ಪಟೇಲ್ ಇದ್ದಾಗ ಕ್ರೀಡೆ ಇತ್ತು. ಅವಾಗ ಸಿಎಂ ತಂಡ ಹಾಗೂ ಎದುರಾಳಿ ಪ್ರತಿಪಕ್ಷದ ತಂಡದ ನಡುವೆ ಪಂದ್ಯ ಇರುತ್ತಿದ್ದವು. ಕಬಡ್ಡಿ, ರನ್ನಿಂಗ್ ಎಲ್ಲವೂ ಆಗ ಇರುತ್ತಿತ್ತು.‌ ಆದರೆ ಈಗ ರಾಜಕೀಯ ಹೊಲಸು ಆಗಿದ್ದಕ್ಕೆ ಎಲ್ಲವೂ ನಿಂತಿದೆ ಎಂದು ಹೊರಟ್ಟಿ ಹೇಳಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಜಕೀಯ ಜಂಜಾಟದ ನಡುವೆ ಯುವಕರೊಂದಿಗೆ ಕಬಡ್ಡಿ ಆಡಿದ ಶಾಸಕ ಶಿವಲಿಂಗೇಗೌಡ

    ರಾಜಕೀಯ ಜಂಜಾಟದ ನಡುವೆ ಯುವಕರೊಂದಿಗೆ ಕಬಡ್ಡಿ ಆಡಿದ ಶಾಸಕ ಶಿವಲಿಂಗೇಗೌಡ

    ಹಾಸನ: ಅಧಿವೇಶನ, ಬಿಡುವಿಲ್ಲದ ಕಾರ್ಯಕ್ರಮ, ರಾಜಕೀಯ ಜಂಜಾಟದ ನಡುವೆ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಕೆಎಂ ಶಿವಲಿಂಗೇಗೌಡ (KM Shivalinge Gowda) ಯುವಕರೊಂದಿಗೆ ಕಬಡ್ಡಿ (Kabaddi) ಆಡಿ ನಲಿದಿದ್ದಾರೆ.

    ಅರಸೀಕೆರೆ ತಾಲೂಕಿನ ತಾಂಡ್ಯ ಗ್ರಾಮ ಹಾಗೂ ಪಟ್ಟಣದಲ್ಲಿ ನಡೆದ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟದಲ್ಲಿ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಲು ಶಿವಲಿಂಗೇಗೌಡರು ಆಗಮಿಸಿದ್ದರು. ಪಂದ್ಯಾವಳಿಗೆ ಚಾಲನೆ ನೀಡಿದ ಬಳಿಕ ಶಿವಲಿಂಗೇಗೌಡ ಪಂಚೆಯಲ್ಲಿಯೇ ಎರಡು ಕಡೆ ರೈಡ್ ಮಾಡಿದರು. ಎರಡು ಕಡೆಗಳಲ್ಲೂ ಯುವಕರು ಶಾಸಕರನ್ನು ಟ್ಯಾಕಲ್ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಸೆಡ್ಡು ಹೊಡೆದು ಹೊಸ ಪಕ್ಷ ಸ್ಥಾಪಿಸಿದ ರೆಡ್ಡಿ

    ಶಾಸಕರು ಕಬಡ್ಡಿ ಆಡಿರುವುದಕ್ಕೆ ಯುವಕರು ಫಿದಾ ಆಗಿ ಶಿಳ್ಳೆ, ಚಪ್ಪಾಳೆ ಹೊಡೆದು ಸಂತಸಪಟ್ಟಿದ್ದಾರೆ. ಬ್ಯುಸಿ ಶೆಡ್ಯೂಲ್ ನಡುವೆ ರಿಲಾಕ್ಸ್ ಮೂಡ್‌ನಲ್ಲಿ ಶಾಸಕ ಕೆಎಂ ಶಿವಲಿಂಗೇಗೌಡ ಆಡುವ ಮೂಲಕ ಇತರ ಶಾಸಕರಿಗಿಂತ ಭಿನ್ನ ಎನಿಸಿಕೊಂಡರು. ಇದನ್ನೂ ಓದಿ: ಜಲೀಲ್ ಯಾವುದೇ ಗಲಾಟೆಗೆ ಹೋಗದ ಬಡಪಾಯಿ : ಸಹೋದರ ಮಹಮ್ಮದ್

    Live Tv
    [brid partner=56869869 player=32851 video=960834 autoplay=true]

  • ಕಬಡ್ಡಿ ಆಡುತ್ತಲೇ ಕೋರ್ಟ್‍ನಲ್ಲಿ ಕೊನೆಯುಸಿರೆಳೆದ ಕ್ರೀಡಾಪಟು!

    ಕಬಡ್ಡಿ ಆಡುತ್ತಲೇ ಕೋರ್ಟ್‍ನಲ್ಲಿ ಕೊನೆಯುಸಿರೆಳೆದ ಕ್ರೀಡಾಪಟು!

    ಆನೇಕಲ್/ಚೆನ್ನೈ: ಕಬಡ್ಡಿ ಆಟಗಾರನೊಬ್ಬ ಮೈದಾನದಲ್ಲೇ ಸಾವನ್ನಪ್ಪಿದ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ಪಂರುತಿ ಎಂಬಲ್ಲಿ ನಡೆದಿದೆ.

    ಮೃತನನ್ನು ವಿಮಲ್ ರಾಜ್ ಎಂದು ಗುರುತಿಸಲಾಗಿದ್ದು, ಇವರು ಪರಂತಿ ಪಕ್ಕದ ಕಾಟಂಪಲಿಯೂರಿನ ಪೆರಿಯಪುರಾಂಗಣಿ ನಿವಾಸಿಯಾಗಿದ್ದು, ಖಾಸಗಿ ಕಾಲೇಜಿನಲ್ಲಿ ಬಿಎಸ್‍ಸಿ 2ನೇ ವರ್ಷ ಓದುತ್ತಿದ್ದರು. ನಿನ್ನೆ ಪರುಂತಿ ಸಮೀಪದ ಮಂಡಿಕುಪ್ಪಂನಲ್ಲಿ ತಮಿಳುನಾಡಿನ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿ ರೈಡ್‍ನಲ್ಲಿದ್ದ ವೇಳೆ ವಿಮಲ್‍ರಾಜ್‍ಗೆ ಹೃದಯಾಘಾತವಾಗಿದೆ.

    ಎದುರಾಳಿ ಆಟಗಾರನೊಬ್ಬ ಹಿಡಿಯಲು ಹೋದಾಗ ವಿಮಲ್ ರಾಜ್ ಎದೆ ಮೇಲೆ ಬಿದ್ದಿದ್ದ. ಈ ವೇಳೆ ಕೆಳಗೆ ಬಿದ್ದ ವಿಮಲರಾಜ್ ಮೇಲೇಳಲು ಯತ್ನಿಸಿದ್ದಾರೆ. ಆದರೆ ಆಟ ಆಡುತ್ತಲೇ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಕೂಡಲೇ ಆಘಾತಗೊಂಡ ಸಹ ಆಟಗಾರರು ವಿಮಲರಾಜ್ ರಕ್ಷಣೆ ಮಾಡಲು ಯತ್ನಿಸಿದ್ದಾರೆ. ಇದನ್ನೂ ಓದಿ: ಒಪ್ಪಿಗೆಯಿಲ್ಲದೆ ಮದುವೆಯಾಗಿದ್ದ ಅಳಿಯ-ಮಗಳನ್ನ ಕುಡುಗೋಲಿನಿಂದ ಕೊಚ್ಚಿದ ತಂದೆ

    ಸಮೀಪದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ಹೋಗುವಷ್ಟರಲ್ಲಿ ಕ್ರೀಡಾಪಟು ಕೊನೆಯುಸಿರೆಳೆದಿದ್ದಾರೆ. ವಿಮಲರಾಜ್ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]