Tag: Kabab

  • ನಾನ್‌ವೆಜ್ ಪ್ರಿಯರೇ ಎಚ್ಚರ – ಬೆಂಗ್ಳೂರಿನ ಪ್ರತಿಷ್ಠಿತ ಹೋಟೆಲ್‌ಗಳಿಗೆ ಆಹಾರ ಸುರಕ್ಷತಾ ಇಲಾಖೆ ನೋಟಿಸ್

    ನಾನ್‌ವೆಜ್ ಪ್ರಿಯರೇ ಎಚ್ಚರ – ಬೆಂಗ್ಳೂರಿನ ಪ್ರತಿಷ್ಠಿತ ಹೋಟೆಲ್‌ಗಳಿಗೆ ಆಹಾರ ಸುರಕ್ಷತಾ ಇಲಾಖೆ ನೋಟಿಸ್

    ಬೆಂಗಳೂರು: ನಗರದ ಪ್ರತಿಷ್ಠಿತ ಹೋಟೆಲ್‌ಗಳಿಗೆ ಆಹಾರ ಸುರಕ್ಷತಾ ಇಲಾಖೆ (Department of Food Safety) ನೋಟಿಸ್ ನೀಡಿದ್ದು, ಹೋಟೆಲ್‌ನಲ್ಲಿ ತಯಾರಿಸಲಾಗುವ ಕಬಾಬ್ (Kabab) ಅನ್‌ಸೇಫ್ ಎಂದು ತಿಳಿದು ಬಂದಿದೆ.

    ನಾನ್‌ವೆಜ್ ಪ್ರಿಯರೇ ಎಚ್ಚರವಾಗಿರಿ. ಬೆಂಗಳೂರಿನ ಆರು ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ತಯಾರಾಗುವ ಕಬಾಬ್ ಅನ್‌ಸೇಫ್ ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ ಆಹಾರ ಇಲಾಖೆ ಸುರಕ್ಷತಾ ಇಲಾಖೆ ಆರು ಹೋಟೆಲ್‌ಗಳಿಗೆ ನೋಟಿಸ್ ನೀಡಿದೆ.ಇದನ್ನೂ ಓದಿ: 12 ಮಹಡಿಯಿಂದ ಬಿದ್ದು 3 ವರ್ಷದ ಮಗು ಸಾವು

    ಈ ಮೊದಲು ಶಿವಾಜಿನಗರ, ಬಸವನಗುಡಿ, ಮಹಾದೇವಪುರ, ಬೊಮ್ಮನಹಳ್ಳಿ, ಮಲ್ಲೇಶ್ವರಂ ಮತ್ತು ಹೆಬ್ಬಾಳದ ಆರು ಹೋಟೆಲ್‌ಗಳಿಂದ ಕಬಾಬ್ ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಬಳಿಕ ಲ್ಯಾಬ್‌ನಿಂದ ವರದಿ ಬಂದಿದ್ದು, ಎಲ್ಲಾ ಹೋಟೆಲ್‌ಗಳಲ್ಲಿನ ಕಬಾಬ್ ಅನ್‌ಸೇಫ್ ಎಂದು ತಿಳಿದುಬಂದಿತ್ತು. ಕಬಾಬ್‌ಗೆ ಕಲರ್ ಬಳಕೆ ಹಾಗೂ ಕ್ಯಾನ್ಸರ್‌ಕಾರಕ ಸನ್‌ಸೆಟ್ ಯೆಲ್ಲೋ ಅಂಶ ಇರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಆಹಾರ ಸುರಕ್ಷತಾ ಇಲಾಖೆ ಹೋಟೆಲ್‌ಗಳಿಗೆ ಎಚ್ಚರಿಕೆ ನೀಡಿತ್ತು. ಆದರೆ ಅಧಿಕಾರಿಗಳ ಎಚ್ಚರಿಕೆಗೂ ಕಿವಿಗೊಡದೆ ಅದನ್ನೇ ಮುಂದುವರಿಸಿದ್ದರು.

    ಇದೀಗ ಆಹಾರ ಸುರಕ್ಷತಾ ಇಲಾಖೆ ಆರು ಹೋಟೆಲ್‌ಗಳಿಗೆ ನೋಟಿಸ್ ನೀಡಿದೆ.ಇದನ್ನೂ ಓದಿ:ಬಿಡುಗಡೆಗೂ ಮುನ್ನ ಓಂ ಸಾಯಿಪ್ರಕಾಶ್ ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ

  • ಗೋಬಿ ಬಳಿಕ ಕಬಾಬ್‍ಗೂ ಕಲರ್ ನಿಷೇಧ – ಬಳಸಿದ್ರೆ 7 ವರ್ಷ ಜೈಲು

    ಗೋಬಿ ಬಳಿಕ ಕಬಾಬ್‍ಗೂ ಕಲರ್ ನಿಷೇಧ – ಬಳಸಿದ್ರೆ 7 ವರ್ಷ ಜೈಲು

    ಬೆಂಗಳೂರು: ಕಬಾಬ್ (Kabab) ತಯಾರಿಕೆಯಲ್ಲಿ ಕೃತಕ ಬಣ್ಣಗಳ ಬಳಕೆಯನ್ನು ನಿಷೇಧಿಸಿ (Artificial colour Ban) ಸರ್ಕಾರ ಆದೇಶ ಹೊರಡಿಸಿದೆ. ನಿಯಮ ಉಲ್ಲಂಘಿಸಿದರೆ 7 ವರ್ಷಗಳವರೆಗೆ ಗರಿಷ್ಠ ಶಿಕ್ಷೆ ಹಾಗೂ 10 ಲಕ್ಷ ರೂ.ವರೆಗೆ ದಂಡ ವಿಧಿಸಲು ಸರ್ಕಾರ ಮುಂದಾಗಿದೆ.

    ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಇಲಾಖೆ ರಾಜ್ಯಾದ್ಯಂತ 39 ಕಬಾಬ್ ಮಾದರಿಯನ್ನು ಸಂಗ್ರಹಿಸಿ, ಕ್ವಾಲಿಟಿ ಚೆಕ್ ಮಾಡಿ 8 ಕಬಾಬ್ ಮಾದರಿಗಳಲ್ಲಿ ಕೃತಕ ಬಣ್ಣ ಬಳಕೆ ಮಾಡಿರುವುದನ್ನು ಪತ್ತೆ ಮಾಡಿತ್ತು. ಗುಣಮಟ್ಟ ಪರೀಕ್ಷೆಯಲ್ಲಿ ಸನ್‍ಸೆಟ್ ಯೆಲ್ಲೋ, ಕಾರ್ಮೋಸಕಿನ್‍ನಂತಹ ರಾಸಯನಿಕ ಅಂಶ ಇರುವುದು ಪತ್ತೆಯಾಗಿತ್ತು. ಈ ಎರಡು ಅಂಶಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಎಂದು ವರದಿ ಬಂದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನೂ ಓದಿ: ವಿದ್ಯಾರ್ಥಿನಿ ಪ್ರಬುದ್ಧಾ ಕೊಲೆ ಕೇಸ್ ಸಿಐಡಿ ಹೆಗಲಿಗೆ – ಸಿದ್ದರಾಮಯ್ಯ ಸೂಚನೆ

    ಇತ್ತೀಚೆಗೆ ಕಲರ್ ಕಾಟನ್ ಕ್ಯಾಂಡಿಯನ್ನು ನಿಷೇಧ ಮಾಡಿ ಆಹಾರ ಮತ್ತು ಸುರಕ್ಷತಾ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದರು. ಇದರ ಜೊತೆಗೆ ಗೋಬಿ ಮಂಚೂರಿಯಲ್ಲಿ ಕೂಡ ಕೃತಕ ಬಣ್ಣಗಳನ್ನು ಬಳಸುವುದನ್ನು ನಿಷೇಧಿಸಲಾಗಿತ್ತು. ಈ ಸಂದರ್ಭದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಮಾತನಾಡಿ, ಇತ್ತೀಚೆಗೆ ಕ್ಯಾನ್ಸರ್ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕೃತಕ ಬಣ್ಣಗಳು ಕಾರಣ ಎಂಬ ಮಾಹಿತಿ ಹಂಚಿಕೊಂಡಿದ್ದರು.

    ಗೋಬಿ ಮಂಚೂರಿಗೆ ರಾಸಾಯನಿಕ ಬಣ್ಣ ನಿಷೇಧಕ್ಕೂ ಮುನ್ನ, ಬೀದಿ ಬದಿ, ಹೊಟೇಲ್‍ಗಳಲ್ಲಿ ಗೋಬಿಯ 171 ಮಾದರಿ ಸಂಗ್ರಹ ಮಾಡಲಾಯಿತು. ಇದರಲ್ಲಿ 107 ಕೃತಕ ಬಣ್ಣ ಬಳಕೆ ಆಗಿದೆ. ರೋಡಮೈನ್ ಬಿ, ಟಾರ್ ಟ್ರಾಸೈನ್ ಸ್ಯಾಂಪಲ್ ಅಂಶ ಪತ್ತೆಯಾಗಿತ್ತು. ರೋಡಮೈನ್ ಕ್ಯಾನ್ಸರ್‌ಗೆ ಕಾರಣವಾಗಿದೆ ಎಂದು ಅವರು ಹೇಳಿದ್ದರು. ಇದನ್ನೂ ಓದಿ: ಇನ್ಮೇಲೆ ರಾಜ್ಯದಲ್ಲಿ ಕಲರ್ ಕಾಟನ್ ಕ್ಯಾಂಡಿ ಬ್ಯಾನ್- ಗೋಬಿಗೂ ಕೃತಕ ಬಣ್ಣ ಬಳಸುವಂತಿಲ್ಲ

  • ಗೋಬಿ, ಕಾಟನ್ ಕ್ಯಾಂಡಿ ಆಯ್ತು ಈಗ ಕಬಾಬ್, ಪಾನಿಪುರಿ ಟೆಸ್ಟ್‌ಗೆ ಪ್ಲಾನ್!

    ಗೋಬಿ, ಕಾಟನ್ ಕ್ಯಾಂಡಿ ಆಯ್ತು ಈಗ ಕಬಾಬ್, ಪಾನಿಪುರಿ ಟೆಸ್ಟ್‌ಗೆ ಪ್ಲಾನ್!

    – ಕೆಮಿಕಲ್ ಬಳಕೆ ಪತ್ತೆಯಾದ್ರೆ ಬ್ಯಾನ್ ಫಿಕ್ಸ್

    ಬೆಂಗಳೂರು: ಗೋಬಿ ಆಯ್ತು, ಕಾಟನ್ ಕ್ಯಾಂಡಿ ಆಯ್ತು. ಈಗ ಕಬಾಬ್ (Kabab), ಪಾನಿಪುರಿಯನ್ನ ಟೆಸ್ಟ್‍ಗೆ ಒಳಪಡಿಸಲು ಆಹಾರ ಮತ್ತು ಸುರಕ್ಷತಾ ಇಲಾಖೆ ನಿರ್ಧರಿಸಿದೆ. ಬೆಂಗಳೂರಿನ ಹಲವು ಏರಿಯಾಗಳ ಕಬಾಬ್, ಪಾನಿಪುರಿ ಅಸುರಕ್ಷತೆಯನ್ನ ಪರಿಶೀಲಿಸಿ ಈ ತಿಂಗಳ ಅಂತ್ಯದಲ್ಲಿಯೇ ವರದಿ ಪ್ರಕಟಿಸಿ ಕ್ರಮಕ್ಕೆ ಮುಂದಾಗಲಿದೆ.

    ಕಳೆದ ಕೆಲದಿನಗಳ ಹಿಂದಷ್ಟೆ ಆಹಾರ ಮತ್ತು ಸುರಕ್ಷತಾ ಇಲಾಖೆ ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಯನ್ನ (Cotton Candy) ಪರೀಕ್ಷಿಸಿ ಅದರಲ್ಲಿ ಕ್ಯಾನ್ಸರ್ ಕಾರಕ ಅಂಶ ಇರೋದು ಪತ್ತೆ ಮಾಡಿ ಕಲರ್‍ಗಳ ಬಳಕೆ ಮಾಡೋದನ್ನ ನಿಷೇಧ ಮಾಡಿದೆ. ಆರೋಗ್ಯ ಸಚಿವರು ಸಹ ಗೋಬಿಗೆ ಮೂರು ಬಗೆಯ ಕಲರ್‍ಗಳನ್ನ ಬಳಕೆ ಮಾಡಬಾರದು ಅಂತಾ ಆದೇಶ ಮಾಡಿದ್ದಾರೆ. ಈ ಬೆನ್ನಲ್ಲೆ ಆಹಾರ ಮತ್ತು ಸುರಕ್ಷತಾ ಇಲಾಖೆ ಕಬಾಬ್ ಮತ್ತು ಪಾನಿಪುರಿ ಬಳಕೆ ಮಾಡುತ್ತಿರುವ ಕಲರ್ ಮತ್ತು ಕಲಬೆರಕೆಯ ಬಗ್ಗೆ ತಪಾಸಣೆ ಮಾಡಲು ಮುಂದಾಗಿದೆ.‌ ಇದನ್ನೂ ಓದಿ: PublicTV Explainer: ಕರ್ನಾಟಕದಲ್ಲಿ ಕಲರ್ ಕಾಟನ್ ಕ್ಯಾಂಡಿ ಬ್ಯಾನ್; ‘ಕಲರ್’ ಗೋಬಿ, ಪಾನಿಪುರಿ, ಕಬಾಬ್ ಖಾದ್ಯಗಳಿಗೂ ಬ್ರೇಕ್ – ಯಾಕೆ ಗೊತ್ತಾ?

    ಬೆಂಗಳೂರಿನ ಪ್ರಮುಖ ಏರಿಯಾಗಳು, ಹೋಟೆಲ್‍ಗಳು ಮತ್ತು ಬೀದಿಬದಿ ವ್ಯಾಪಾರಗಳಿಂದ ಕಬಾಬ್ ಮತ್ತು ಪಾನಿಪುರಿ ಸಂಗ್ರಹಿಸಿ ಲ್ಯಾಬ್‍ಗೆ ಕಳಿಸಲಿದ್ದಾರೆ. ಅಸುರಕ್ಷತೆನಾ ಅಂತಾ ತಪಾಸಣೆ ಮಾಡಿ ಹಾನಿಕಾರಕ ಅಂಶಗಳನ್ನ ಪತ್ತೆ ಮಾಡಲಿದ್ದಾರೆ. ಇದರಲ್ಲೂ ಕ್ಯಾನ್ಸರ್ ಕಾರಕ, ಹಾನಿಕಾರಕ ಅಂಶಗಳು ಇದ್ದರೆ ಕೂಡಲೇ ಕಲರ್ ಬಳಕೆ ನೀಷೇಧ ಹೇರಿ ಕ್ರಮ ವಹಿಸುತ್ತಾರಂತೆ. ಈ ತಿಂಗಳ ಅಂತ್ಯಕ್ಕೆ ಟೆಸ್ಟಿಂಗ್  ರಿಪೋರ್ಟ್  ಹೊರಬರುತ್ತೆ ಅಂತಾ ಪಬ್ಲಿಕ್ ಟಿವಿಗೆ ಆಹಾರ ಮತ್ತು ಸುರಕ್ಷತಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಕಬಾಬ್, ಪಾನಿಪೂರಿ ತಯಾರಿಕೆಯಲ್ಲಿ ಸ್ವಚ್ಛತೆ ಇರಲ್ಲ ಅಂತಾ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೂಡ ಬಂದಿವೆ. ಈ ಮಧ್ಯೆ ಆಹಾರ& ಸುರಕ್ಷತಾ ಇಲಾಖೆ ಪರೀಕ್ಷೆಗೆ ಒಳಪಡಿಸಲು ಮುಂದಾಗಿರೋದು ಒಳ್ಳೆಯ ನಿರ್ಧಾರ.

  • ಚಿಕನ್ ಬಿರಿಯಾನಿ, ಕಬಾಬ್ ತಯಾರಿಸಿ ಫೋಟೋ ಶೇರ್ ಮಾಡಿದ ರಾಗಿಣಿ

    ಚಿಕನ್ ಬಿರಿಯಾನಿ, ಕಬಾಬ್ ತಯಾರಿಸಿ ಫೋಟೋ ಶೇರ್ ಮಾಡಿದ ರಾಗಿಣಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಗಿಣಿ ಚಿಕನ್ ಬಿರಿಯಾನಿ ಮತ್ತು ಕಬಾಬ್ ತಯಾರಿಸಿ ಕುಟುಂಬದೊಂದಿಗೆ ಸಮಯವನ್ನು ಕಳೆಯುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Ragini dwivedi (@rraginidwivedi)

    ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣದಲ್ಲಿ ಜಾಮೀನು ಪಡೆದು ಮನೆಗೆ ಮರಳಿದ ನಂತರ ನಟಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದಾರೆ. ರಾಗಿಣಿ ಮನೆಯಲ್ಲೇ ಅಪ್ಪ-ಅಮ್ಮನೊಂದಿಗೆ ಪ್ರೇಮಿಗಳ ದಿನ ಆಚರಿಸಿದ್ದಾರೆ. ಅಪ್ಪ-ಅಮ್ಮನಿಗೆ ರುಚಿಯಾದ ಅಡುಗೆ ಮಾಡಿಕೊಟ್ಟು, ಅಮ್ಮನ ಕೈಯಿಂದ ಕೇಕ್ ಕತ್ತರಿಸಿದ್ದಾರೆ. ಈ ಫೋಟೋವನ್ನು ಹಂಚಿಕೊಂಡು ನನ್ನ ಯಾವ ಜನ್ನದ ಪುಣ್ಯವೋ ನಿಮ್ಮನ್ನು ನನ್ನ ಪೋಷಕರಾಗಿ ಪಡೆದಿದ್ದೆನೆ. ಅಡುಗೆ ಮಾಡಲು ಖುಷಿಯಾಗುತ್ತದೆ. ಈ ದಿನ ನನಗೆ ತುಂಬಾನೆ ವಿಶೇಷವಾಗಿದೆ ಎಂದು ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Ragini dwivedi (@rraginidwivedi)

    ಅವರಿಗೆ ಇಷ್ಟವಾದ ಬೃಹತ್ ಗಾತ್ರದ ಗೊಂಬೆಯನ್ನು ತಬ್ಬಿಕೊಂಡು ನಿಮ್ಮ ಹಾದಿ ನಿಮಗೆ ತಿಳಿದಿದ್ದರೆ ಯಾರು ತಡೆಯಲು ಸಾಧ್ಯವಿಲ್ಲ. ಗೊಂಬೆಗಳನ್ನು ನೋಡುತ್ತಿದ್ದಂತೆ ನನ್ನ ವಯಸ್ಸು ಚಿಕ್ಕದಾಗುತ್ತದೆ. ಈ ಸೈಜ್ ಗೊಂಬೆ ಸಿಗುವುದು ತುಂಬಾನೇ ಕಡಿಮೆ ಎಂದು ಬರೆದುಕೊಂಡು ಫೋಟೋವನ್ನು ಶೇರ್ ಮಾಡಿದ್ದಾರೆ.

     

    View this post on Instagram

     

    A post shared by Ragini dwivedi (@rraginidwivedi)

    ಜೈಲಿನಿಂದ ಹೊರ ಬಂದ ಬಳಿ ರಾಗಿಣಿ ಅಭಿಮಾನಿಗಳೊಂದಿಗೆ ಸೋಷಿಯಲ್ ಮೀಡಿಯಾ ಮೂಲಕವಾಗಿ ಹೆಚ್ಚು ಬೆರೆಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಲೈವ್ ವೀಡಿಯೋ ಮೂಲಕ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದು, ಗಳಗಳನೆ ಅತ್ತಿದ್ದರು. ಅನೇಕರು ಕೆಟ್ಟ ಕಮೆಂಟ್‍ಗಳನ್ನು ಸಹ ಮಾಡಿದ್ದು, ಅವುಗಳನ್ನೂ ಸಕಾರಾತ್ಮಕವಾಗಿ ಸ್ವೀಕರಿಸಿ ಸಮಾಧಾನದಿಂದಲೇ ಉತ್ತರಿಸಿದ್ದರು.

    ಸದ್ಯ ಚಿಕನ್ ಬಿರಿಯಾನಿ ಹಾಗೂ ಕಬಾಬ್ ತಯಾರಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಲಾಕ್‍ಡೌನ್ ವೇಳೆ ರಾಗಿಗೆ ಅಡುಗೆ ಮಾಡುವುದನ್ನು ಕಲಿತುಕೊಂಡಿದ್ದರು. ವಿವಿಧ ಬಗೆಯ ನಾನ್‍ವೆಜ್ ಅಡುಗೆಯನ್ನು ಮಾಡುತ್ತಾರೆ.

  • ಕಬಾಬ್‌ಗೆ ಹಾಕಲಾಗುತ್ತೆ ಕಿಲ್ಲರ್ ಕೆಮಿಕಲ್ – ಕಲರ್‌ಗಾಗಿ ಡೇಂಜರ್ ಪೌಡರ್ ಮಿಕ್ಸ್

    ಕಬಾಬ್‌ಗೆ ಹಾಕಲಾಗುತ್ತೆ ಕಿಲ್ಲರ್ ಕೆಮಿಕಲ್ – ಕಲರ್‌ಗಾಗಿ ಡೇಂಜರ್ ಪೌಡರ್ ಮಿಕ್ಸ್

    ಬೆಂಗಳೂರು: ಚಿಕನ್ ಕಬಾಬ್ ಕಂಡ ತಕ್ಷಣ ಅಹಾ ಎಂದು ತಿನ್ನುವವರು ಈ ಸುದ್ದಿಯನ್ನು ನೋಡಲೇ ಬೇಕು. ಏಕೆಂದರೆ ರಸ್ತೆ ಬದಿಯಲ್ಲಿ ತಿನ್ನುವ ಕಲರ್‌ಫುಲ್ ಕಬಾಬ್ ಅನ್ನು ಕೊಳಕು ಜಾಗದಲ್ಲಿ ತಯಾರಿಸುತ್ತಾರೆ.

    ಹಣ ಕೊಟ್ಟು ಸಿಕ್ಕ ಸಿಕ್ಕ ಕಡೆ ಕಬಾಬ್ ತಿಂದರೆ ಫ್ರೀಯಾಗಿ ಕಾಯಿಲೆಗಳು ಕೂಡ ಬರುತ್ತದೆ. ಏಕೆಂದರೆ ಕಬಾಬ್ ತಯಾರಿಸುವ ವ್ಯಕ್ತಿ ಸಿಗರೇಟ್ ಸೇದಿಕೊಂಡು ಅದರ ಹೊಗೆಯನ್ನು ಕಬಾಬ್ ಮಸಾಲೆ ಪಕ್ಕ ಉಫ್ ಉಫ್ ಎಂದು ಉದುತ್ತಾನೆ. ಅಲ್ಲದೆ ಸಿಗರೇಟಿನ  ವೇಸ್ಟ್ ಅನ್ನು ಕಬಾಬ್ ಮಸಾಲೆಯ ಪಕ್ಕವೇ ಹಾಕುತ್ತಾನೆ.

    ಸಿಗರೇಟು ಸೇದಿದ ಹಾಗೂ ಪದೇಪದೇ ಬಾಯಿಯೊಳಗೆ ಕೈಹಾಕಿರುವ ಅದೇ ಕೈಯಲ್ಲಿ ವ್ಯಕ್ತಿ ಮಸಾಲೆ ರುಬ್ಬುತ್ತಾನೆ. ಇರೋ ಬರೋ ಕೆಮಿಕಲ್ ಜೊತೆಗೆ ಸಿಗರೇಟಿನ ಹೊಗೆ, ಅಳಿದುಳಿದ ಸಿಗರೇಟಿನ ಅವಶೇಷವೂ ಕೂಡ ಮಸಾಲೆಯ ಕಬಾಬ್‌ನೊಳಗೆ ಚಂದಗೆ ಬೆರೆತು ಹೋಗುತ್ತೆ.

    ರಸ್ತೆ ಬದಿಯಲ್ಲಿ ಕೊಂಚವೂ ಸ್ವಚ್ಛತೆಯಂತೂ ಇಲ್ಲ. ಗಲೀಜು ಗಲೀಜಾಗಿರುವ ಜಾಗದಲ್ಲಿ ಈ ಕಬಾಬ್‌ಗಳು ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ತಯಾರಾಗುತ್ತೆ. ಅಲ್ಲಲ್ಲಿ ನೊಣಗಳು ಹಾರಾಡುವ ಗಲೀಜು ಜಾಗದಲ್ಲಿ ಚೆಲ್ಲಿರುವ ಚಿಕನ್ ತುಂಡುಗಳು, ತೊಳೆಯದ ಕೈಯಲ್ಲಿ ಮಸಾಲೆ ಬೆರೆಸುವ ಕೈಗಳು, ಕಬಾಬ್ ಕರಿಯುವ ಬಾಣಲೆ ನೋಡಿದ್ದರೆ ಜನರು ಕಬಾಬ್ ತಿನ್ನುವುದನ್ನು ಬಿಟ್ಟು ಬಿಡುತ್ತಾರೆ.

    ಸಿಕ್ಕ ಸಿಕ್ಕ ಲೋಕಲ್ ಕೆಮಿಕಲ್‌ಗಳನ್ನು ಈ ಕಬಾಬ್‌ಗೆ ಬಳಕೆ ಮಾಡುತ್ತಾರೆ. ಅಲ್ಲದೆ ಈ ಕಬಾಬ್ ಟೇಸ್ಟ್ ಬರುವುದಕ್ಕೆ ಅಜಿನಾಮೋಟೋ ಎನ್ನುವ ಡೇಂಜರಸ್ ಪೌಡರ್‌ಗಳ ಬಳಕೆಯನ್ನು ಮಾಡಲಾಗುತ್ತೆ. ಇಂತಹ ಕಬಾಬ್ ಸೇವಿಸಿದ್ದರೆ ಹೊಟ್ಟೆಯ ಸಮಸ್ಯೆಯ ಜೊತೆಗೆ ಕಲರ್ ಬರುವುದ್ದಕ್ಕೆ ಪೌಡರ್, ಟೇಸ್ಟಿಂಗ್ ಪೌಡರ್ ಹಾಕುವುದರಿಂದ ಕ್ಯಾನ್ಸರ್, ಕರುಳು ಬೇನೆಯಂತಹ ಕಾಯಿಲೆನೂ ಬರುತ್ತೆ.