Tag: Kaathu Vaakula Rendu Kadhal

  • ಮದುವೆಗೂ ಮುನ್ನ ನಯನತಾರಾ ಮತ್ತು ವಿಘ್ನೇಶ್ ಶಿವನ್ ಟೆಂಪಲ್ ರನ್

    ಮದುವೆಗೂ ಮುನ್ನ ನಯನತಾರಾ ಮತ್ತು ವಿಘ್ನೇಶ್ ಶಿವನ್ ಟೆಂಪಲ್ ರನ್

    ಕ್ಷಿಣ ಭಾರತದ ಕ್ಯೂಟೆಸ್ಟ್ ಜೋಡಿಗಳಲ್ಲಿ ನಟಿ ನಯನತಾರ ಮತ್ತು ವಿಘ್ನೇಶ್ ಶಿವನ್ ಕೂಡ ಒಬ್ಬರು. ಈ ಜೋಡಿ ತಮ್ಮ ಗುರಿಯನ್ನು ಸಾಧಿಸುವವರೆಗೂ ಎಂದಿಗೂ ಹಿಂದೆ ಸರಿಯುವುದಿಲ್ಲ. ಸದ್ಯ ಈ ಮುದ್ದಾದ ಜೋಡಿಯ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೌದು, ವಿಘ್ನೇಶ್ ಶಿವನ್ ಹಾಗೂ ನಯನತಾರಾ ತಿರುಪತಿಗೆ ಭೇಟಿ ನೀಡಿ ತಿಪ್ಪಮ್ಮನ ದರ್ಶನ ಪಡೆದಿದ್ದಾರೆ. ಈ ವೇಳೆ ದೇವಾಲಯದ ಬಳಿ ಇಬ್ಬರೂ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಈ ಫೋಟೋವನ್ನು ಅಭಿಮಾನಿಗಳೊಂದಿಗೆ ವಿಘ್ನೇಶ್ ಶಿವನ್ ಹಂಚಿಕೊಂಡಿದ್ದಾರೆ.

    ಇತ್ತೀಚೆಗಷ್ಟೇ ವಿಘ್ನೇಶ್ ಶಿವನ್ ಆ್ಯಕ್ಷನ್ ಕಟ್ ಹೇಳಿದ್ದ, ಕಾಮಿಡಿ ಕಮ್ ರೋಮ್ಯಾಂಟಿಕ್ ‘ಕಾತು ವಾಕುಲಾ ರೆಂಡು ಕಾದಲ್’ ಸಿನಿಮಾ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆ ವಿಘ್ನೇಶ್ ಶಿವನ್, ನಯನತಾರಾ ಜೊತೆಗೆ ತಿರುಪತಿಗೆ ತೆರಳಿ ತಿಮ್ಮಪ್ಪನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದೇ ಖುಷಿಯಲ್ಲಿ ದೇವಾಲಯದ ಆವರಣದಲ್ಲಿ ನಯನತಾರಾ ಕೈ ಹಿಡಿದು ವಿಘ್ನೇಶ್ ಶಿವನ್ ಫೋಟೋಗೆ ಮಗುಳುನಗೆ ಬೀರುತ್ತಾ ಪೋಸ್ ನೀಡಿದ್ದಾರೆ. ಇದನ್ನೂ ಓದಿ: ವಿಜಯ್ ಸೇತುಪತಿ ಒಲಿಯುವುದು ನಯನತಾರಾಗಾ ಅಥವಾ ಸಮಂತಗಾ?: ಹೆಚ್ಚಿದ ಕುತೂಹಲ

     

    View this post on Instagram

     

    A post shared by Vignesh Shivan (@wikkiofficial)

    ಈ ಫೋಟೋ ಜೊತೆಗೆ ಸಿನಿಮಾ ಬ್ಲಾಕ್‍ಬಾಸ್ಟರ್ ಆಗಲಿ ಎಂದು ಈ ಮುನ್ನ ತಿರುಪತಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೆವು. ಅದರಂತೆ ವೆಂಕಟೇಶ್ವರ ಸ್ವಾಮಿ, ತಿರುಮಲ, ತಿರುಪತಿ, ಏಳುಮಲೈಯಾನ್ ಕೋರಿದ್ದನ್ನು ನೀಡಿದ್ದಾನೆ. ನಿಮ್ಮ ಪ್ರೀತಿ, ಬೆಂಬಲ ಮತ್ತು ಆಶೀರ್ವಾದಕ್ಕೆ ಧನ್ಯವಾದಗಳು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಈ ಮುನ್ನ ಶಿರಡಿಗೆ ಭೇಟಿ ನೀಡಿದ್ದ ಈ ಜೋಡಿ ಅಲ್ಲೂ ಕೂಡ ಫೋಟೋ ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದನ್ನೂ ಓದಿ: ವಿಜಯ್ ಸೇತುಪತಿ, ಸಂದೀಪ್ ಕಿಶನ್ ‘ಮೈಕಲ್’ ಚಿತ್ರದ ಫಸ್ಟ್ ಲುಕ್ ರಿಲೀಸ್

     

    View this post on Instagram

     

    A post shared by Vignesh Shivan (@wikkiofficial)

    ಕಾತು ವಾಕುಲಾ ರೆಂಡು ಕಾದಲ್ ಸಿನಿಮಾದಲ್ಲಿ ಕಾಲಿವುಡ್ ನಟ ವಿಜಯ್ ಸೇತುಪತಿ ನಾಯಕನಾಗಿ ಕಾಣಿಸಿಕೊಂಡಿದ್ದು, ಲೇಡಿ ಸೂಪರ್ ಸ್ಟಾರ್ ನಟಿ ನಯನತಾರಾ ಹಾಗೂ ಟಾಲಿವುಡ್ ಕ್ಯೂಟ್ ನಟಿ ಸಮಂತಾ ರುತ್ ಪ್ರಭು ನಾಯಕಿಯರಾಗಿ ಮಿಂಚಿದ್ದಾರೆ. ಇದೊಂದು ತ್ರಿಕೋನ ಪ್ರೇಮಕಥೆ ಹೊಂದಿರುವ ಸಿನಿಮಾವಾಗಿದೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದು, ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಗ್ರಹಣವಿದೆ.

  • ‘ಕಾತುವಕುಲಾ ರೆಂಡು ಕಾದಲ್’ ರಿಲೀಸ್: ತಿರುಪತಿ ಆಶೀರ್ವಾದ ಪಡೆದ ನಯನತಾರಾ, ವಿಘ್ನೇಶ್ ಶಿವನ್

    ‘ಕಾತುವಕುಲಾ ರೆಂಡು ಕಾದಲ್’ ರಿಲೀಸ್: ತಿರುಪತಿ ಆಶೀರ್ವಾದ ಪಡೆದ ನಯನತಾರಾ, ವಿಘ್ನೇಶ್ ಶಿವನ್

    ವಿಘ್ನೇಶ್ ಶಿವನ್ ನಿರ್ದೇಶನ ಟಾಲಿವುಡ್ ಬಹುನಿರೀಕ್ಷಿತ ಸಿನಿಮಾ ‘ಕಾತುವಕುಲಾ ರೆಂಡು ಕಾದಲ್’ ಇಂದು ದೇಶದ್ಯಂತ ರಿಲೀಸ್ ಆಗಿದೆ. ಇದು ರೋಮ್ಯಾಂಟಿಕ್ ಮತ್ತು ಕಾಮಿಡಿ ಸಿನಿಮಾವಾಗಿದ್ದು, ಅಭಿಮಾನಿಗಳು ಸಿನಿಮಾವನ್ನು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಈ ಸಿನಿಮಾದಲ್ಲಿ ವಿಜಯ್ ಸೇತುಪತಿ, ನಯನತಾರಾ ಮತ್ತು ಸಮಂತಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿನ್ನೆಲೆ ವಿಘ್ನೇಶ್ ಶಿವನ್ ಮತ್ತು ನಯನತಾರಾ ನಿನ್ನೆ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

    ಟಾಲಿವುಡ್ ಕ್ಯೂಟ್ ಕಪಲ್ ನಯನತಾರಾ ಮತ್ತು ವಿಘ್ನೇಶ್ ಶಿವನ್ ‘ಕಾತುವಕುಲಾ ರೆಂಡು ಕಾದಲ್’ ಸಿನಿಮಾ ಬಿಡುಗಡೆಯ ಖುಷಿಯಲ್ಲಿ ಇದ್ದಾರೆ. ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಈ ಜೋಡಿ ತಿರುಪತಿ ವೆಂಕಟೇಶ್ವರನ ದರ್ಶನ ಪಡೆದಿದ್ದು, ಅಭಿಮಾನಿಗಳಿಗೆ ಸಿನಿಮಾವನ್ನು ಅರ್ಪಿಸಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ವಿಶೇಷ ಫೋಟೋ ಶೇರ್ ಮಾಡಿದ್ದಾರೆ. ಇದನ್ನೂ ಓದಿ:  90 ವರ್ಷದ ಬುದ್ಧಿಮಾಂದ್ಯ ತಾಯಿ, ಮಗನನ್ನು ಗುರುತಿಸುವ ಭಾವನಾತ್ಮಕ ವೀಡಿಯೋ ವೈರಲ್ 

     

    View this post on Instagram

     

    A post shared by Vignesh Shivan (@wikkiofficial)

    ಇನ್‍ಸ್ಟಾಗ್ರಾಮ್‍ನಲ್ಲಿ ವಿಘ್ನೇಶ್ ಫೋಟೋ ಶೇರ್ ಮಾಡಿದ್ದು, ತಿರುಪತಿಯಿಂದ 2.22 ಕ್ಕೆ ವರದಿ ಮಾಡಲಾಗುತ್ತಿದೆ. ‘ಕಾತುವಕುಲಾ ರೆಂಡು ಕಾದಲ್’ ಸಿನಿಮಾ ಇವತ್ತಿನಿಂದ ನಿಮ್ಮ ಮುಂದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಅವರು ಪ್ರೇಕ್ಷಕರಿಗೆ ಸಿನಿಮಾ ಜವಾಬ್ದಾರಿ ಕೊಟ್ಟಿದ್ದಾರೆ.

    ನಿನ್ನೆ ಸಹ ವಿಘ್ನೇಶ್ ಅವರು, ವಿಜಯ್ ಸೇತುಪತಿ, ನಯನತಾರಾ ಮತ್ತು ಸಮಂತಾ ಅವರ ಸೆಲ್ಫಿ ಕ್ಲಿಕಿಸಿಕೊಂಡಿದ್ದ ಫೋಟೋವನ್ನು ಇನ್‍ಸ್ಟಾದಲ್ಲಿ ಶೇರ್ ಮಾಡಿದ್ದರು. ಈ ವೇಳೆ ಅವರು, ನಾಳೆಯಿಂದ ಕಾತುವಾಕುಲಾ ರೆಂಡು ಕಾದಲ್! ಈ ಚಿತ್ರವು ಥಿಯೇಟರ್‌ಗಳಿಗೆ ಬರಬೇಕೆಂದು ಬಯಸಿದೆ, ನೀವೆಲ್ಲರೂ ನಟ ವಿಜಯ್ ಸೇತುಪತಿ ರಾಂಬೋ, ಅದ್ಭುತವಾದ ನಟಿ ನಯನತಾರಾ ಕಣ್ಮಣಿಯಾಗಿ ಮತ್ತು ಮಿನುಗುವ ಸಮಂತಾ ಖತೀಜಾ ಆಗಿ ಬರುತ್ತಿದ್ದಾರೆ.

     

    View this post on Instagram

     

    A post shared by Vignesh Shivan (@wikkiofficial)

    ಈ ಸಿನಿಮಾ ಮಾಡಲು ತುಂಬಾ ಸುಲಭಗೊಳಿಸಿದ್ದಕ್ಕಾಗಿ ಈ ನಟರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರೆಲ್ಲರೂ ಸೆಟ್‍ನಲ್ಲಿ ಇದ್ದಾಗ ಕೊಡುತ್ತಿದ್ದ ಶಕ್ತಿಯನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಈ ಅನುಭವವು ನನ್ನೊಂದಿಗೆ ದೀರ್ಘಕಾಲ ಉಳಿಯುತ್ತದೆ. ಈ ಅದ್ಭುತ ನಟರ ನಟನೆಯನ್ನು ಚಿತ್ರಮಂದಿರದಲ್ಲಿ ಆನಂದಿಸಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಸರಿಸುಮಾರು 19,500 ಮಾತೃಭಾಷೆಗಳಿವೆ: ಡಿಕೆಶಿ