ತುಮಕೂರಿನ ನಾಮದ ಚಿಲುಮೆಯಲ್ಲಿ ಅನುಮತಿ ಇಲ್ಲದೇ ಅರಣ್ಯ ಭೂಮಿಯಲ್ಲಿ ತರುಣ್ ಸುಧೀರ್ ಸಿನಿಮಾದ ಚಿತ್ರೀಕರಣ ನಡೆಸಿದ್ದು, ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಹಾಯಕ ಸಂರಕ್ಷಣಾಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ, ಸ್ಥಳದಲ್ಲಿದ್ದ ಶೂಟಿಂಗ್ ಲೈಟ್ ಸೇರಿದಂತೆ ಕೆಲ ಸಾಮಾಗ್ರಿಗಳನ್ನು ಸೀಜ್ ಮಾಡಲಾಗಿದೆ. ಇದನ್ನೂ ಓದಿ:ನನ್ನನ್ನು ‘ಲೇಡಿ ಸೂಪರ್‌ಸ್ಟಾರ್’ ಎಂದು ಕರೆಯಬೇಡಿ- ಫ್ಯಾನ್ಸ್‌ಗೆ ನಯನತಾರಾ ಮನವಿ
ತರುಣ್ ಸುಧೀರ್ ನಿರ್ಮಾಣದ ಇನ್ನೂ ಹೆಸರಿಡದ ಚಿತ್ರದ ಶೂಟಿಂಗ್ ಅರಣ್ಯ ಭೂಮಿಯಲ್ಲಿ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ. ತುಮಕೂರಿನ ಸಹಾಯಕ ಸಂರಕ್ಷಣಾಧಿಕಾರಿಗಳ ತಂಡ ದಾಳಿ ನಡೆಸಿದೆ. ಕಳೆದ 5 ದಿನಗಳಿಂದ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಸ್ಥಳದಲ್ಲಿದ್ದ ಶೂಟಿಂಗ್ ಲೈಟ್, ಅಡುಗೆ ಸಾಮಾಗ್ರಿಗಳು, ಚೇರ್‌ಗಳು, ಟಿಟಿ ವಾಹನವನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಅಂದಹಾಗೆ, ಈ ಚಿತ್ರವು ರಕ್ಷಿತಾ ಪ್ರೇಮ್ ಸಹೋದರ ರಾಣಾ ನಟನೆಯ ಹೊಸ ಸಿನಿಮಾ ಆಗಿದ್ದು, ತರುಣ್ ಸುಧೀರ್ ನಿರ್ಮಾಣ ಮಾಡುತ್ತಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣವಾಗಿ ದರ್ಶನ್ (Darshan) ಅರೆಸ್ಟ್ ಆಗಿದ್ದಾರೆ. ಈ ಪ್ರಕರಣದ ಬಗ್ಗೆ ಒಬ್ಬೊಬ್ಬರೇ ನಟ, ನಟಿಯರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈಗ ಡಿಂಗ್ರಿ ನಾಗರಾಜ್ ಪುತ್ರ ನಟ ರಾಜವರ್ಧನ್ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಗಾಯಕಿ ಕೆ.ಎಸ್.ಚಿತ್ರಾ ಕಂಠಸಿರಿಯಲ್ಲಿ ವಸಿಷ್ಠ ಸಿಂಹ ನಟನೆಯ ‘ವಿಐಪಿ’ ಚಿತ್ರದ ಸಾಂಗ್
ಈ ಪ್ರಕರಣದ ಬಗ್ಗೆ ಬೇಜಾರಿದೆ. ನ್ಯಾಯ ಸಿಕ್ಕೇ ಸಿಗುತ್ತೆ ಎಂಬ ನಂಬಿಕೆಯಿದೆ. ದರ್ಶನ್ ಅಣ್ಣ ಹೊರಗಡೆ ಬಂದೇ ಬರುತ್ತಾರೆ ಎಂಬ ನಂಬಿಕೆ ಇದೆ. ಸೋಷಿಯಲ್ ಮೀಡಿಯಾ ಅಂದ್ಮೇಲೆ ಪರ ಮತ್ತು ವಿರೋಧ ಇದ್ದೇ ಇರುತ್ತದೆ.ಫ್ಯಾಮಿಲಿ ಅವರಿಗೆ ಸಾಕಷ್ಟು ನೆಗೆಟಿವ್ ಕಾಮೆಂಟ್ಸ್ ಬಂದೇ ಬರುತ್ತದೆ. ಅದನ್ನು ನಾವು ಎದುರಿಸಬೇಕು ಎಂದು ರಾಜವರ್ಧನ್ (Actor Rajavardan) ಮಾತನಾಡಿದ್ದಾರೆ.
ತುಂಬಾ ಟ್ರಾವೆಲ್ ಮಾಡಿದ್ದೀನಿ ದರ್ಶನ್ ಅಣ್ಣ ಜೊತೆ ಬೆಸ್ಟ್ ದಿನಗಳನ್ನು ಕಳೆದಿದ್ದೇವೆ. ಆ್ಯಕ್ಷನ್ ಸೀನ್ಸ್ ಮಾಡುವ ಬಗ್ಗೆ ಸಲಹೆ ನೀಡಿದರು. ಒಂದು ಸಲ ನನಗೆ ಕಾಲಿಗೆ ಪೆಟ್ಟಾದಾಗ ಚೆನ್ನಾಗಿ ನೋಡಿಕೊಂಡಿದ್ದರು. ಲಾಕ್‌ಡೌನ್ ಆಗಿದ್ರು ಮನೆಗೆ ಡಾಕ್ಟರ್‌ನ ಕಳುಹಿಸಿದ್ದರು. ಈಗ ಅವರನ್ನು ನೋಡಿದ್ರೆ ನಿಜಕ್ಕೂ ಬೇಜಾರಾಗುತ್ತದೆ ಎಂದು ನಟ ಮಾತನಾಡಿದ್ದಾರೆ.
ನ್ಯಾಯಾಂಗದ (Court) ಮೇಲೆ ನಂಬಿಕೆಯಿದೆ. ಲಕ್ಷಾಂತರ ಅಭಿಮಾನಿಗಳ ಪ್ರಾರ್ಥನೆಯಿದೆ. 100% ದರ್ಶನ್ ಹೊರಗಡೆ ಬರುತ್ತಾರೆ. ಬಂದು ಇಂಡಸ್ಟ್ರಿ ಮೊದಲು ಹೇಗೆ ಇತ್ತೋ ಹಾಗೆ ಆಗುತ್ತದೆ. ದರ್ಶನ್ ಅಣ್ಣ ಇದ್ದಿದ್ರೆ ನನ್ನ ಸಿನಿಮಾಗೆ ತುಂಬಾ ಸಪೋರ್ಟ್ ಮಾಡ್ತಿದ್ದರು. ದರ್ಶನ್ ಅಣ್ಣನ ಸಾಕಷ್ಟು ಸಿನಿಮಾದಲ್ಲಿ ನಟಿಸುವ ಅವಕಾಶ ಇತ್ತು. ಮುಂದೆ ಅವರ ಜೊತೆ ನಟಿಸ್ತಿವೋ ಬಿಡ್ತಿವೋ ಗೊತ್ತಿಲ್ಲ ಆದರೆ ಆಚೆ ಬಂದರೆ ಅಷ್ಟೇ ಸಾಕು ಎಂದು ರಾಜವರ್ಧನ್ ಮಾತನಾಡಿದ್ದಾರೆ.
ರಾಬರ್ಟ್, ಕಾಟೇರ ಸಿನಿಮಾಗಳ ನಿರ್ದೇಶಕ ತರುಣ್ ಸುಧೀರ್ (Tharun Sudhir) ಇದೀಗ ಸೋನಲ್ (Sonal) ಜೊತೆಗಿನ ಮದುವೆ ವಿಚಾರವಾಗಿ ಸುದ್ದಿಯಾಗ್ತಿದ್ದಾರೆ. ಈಗ ಮೊದಲ ಬಾರಿಗೆ ಮದುವೆಯಾಗಲಿರುವ (Wedding) ಹುಡುಗಿ ಕ್ವಾಲಿಟಿ ಹೇಗಿರಬೇಕು ಎಂದು ಬಣ್ಣಿಸಿದ್ದಾರೆ.
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ತರುಣ್ ಸುಧೀರ್ ಭಾಗಿಯಾದಾಗ ಮದುವೆ ಹುಡುಗಿ ಹೇಗಿರಬೇಕು ಎಂದು ಪ್ರಶ್ನೆ ಎದುರಾಗಿದೆ. ಆಗ ತಾವು ಮದುವೆಯಾಗುವ ಹುಡುಗಿ ಹೇಗಿರಬೇಕು ಎಂದು ಹೇಳಿದ್ದಾರೆ. ನನಗೆ ಮದುವೆ ಆಗಬಾರದು ಅಂತೇನೂ ಇಲ್ಲ. ಇದರ ಕುರಿತು ಡಿಸಿಷನ್ ನಾನು ಮಾಡಿಲ್ಲ ಎನ್ನುತ್ತಲೇ ನಾನು ಇಷ್ಟಪಟ್ಟಂಥ ಹುಡುಗಿ ಸಿಕ್ಕಿರೆ ಖಂಡಿತವಾಗಿಯೂ ಮದುವೆಗೆ ರೆಡಿ ಎಂದಿದ್ದಾರೆ.
ಕನಸಿನ ಹುಡುಗಿಯಲ್ಲಿ ಎರಡೇ ಕ್ವಾಲಿಟಿ ಇದ್ದರೆ ಸಾಕು. ಮೊದಲನೆಯದ್ದು ತಮ್ಮ ಕೆಲಸವನ್ನು ಗೌರವಿಸಬೇಕು. ಇನ್ನೊಂದು ನನಗೆ ಅಮ್ಮನೇ ಎಲ್ಲ. ಆದ್ದರಿಂದ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಇಷ್ಟು ಇದ್ದರೆ ಸಾಕು. ಅಂಥ ಹುಡುಗಿಯನ್ನು ನಾನು ಮದುವೆಯಾಗುತ್ತೇನೆ. ಬೇಕಿದ್ದರೆ ನಾಲ್ಕು ಗೋಡೆಗಳ ನಡುವೆ ಕಾಲು ಹಿಡಿದುಕೊಳ್ಳಲೂ ರೆಡಿ ಎಂದು ತಮಾಷೆ ಮಾಡಿದ್ದಾರೆ ತರುಣ್ ಸುಧೀರ್. ಆದರೆ ಎಲ್ಲೂ ಸೋನಾಲ್ ಹೆಸರು ಬಳಸದೇ ಮಾತನಾಡಿದ್ದಾರೆ.
ಅಂದಹಾಗೆ, ತರುಣ್ ಸುಧೀರ್ ಶೀಘ್ರದಲ್ಲೇ ಮದುವೆಯಾಗುತ್ತಿದ್ದಾರೆ. ನಟಿ ಸೋನಾಲ್ ಜೊತೆ ತರುಣ್ ಕಲ್ಯಾಣ ನಡೆಯುತ್ತಿದೆ. ಖುಷಿ ಸುದ್ದಿ ಸದ್ಯದಲ್ಲೇ ಕೊಡ್ತೀವಿ ಎಂದು ಮಾಲತಿ ಸುಧೀರ್ ‘ಪಬ್ಲಿಕ್ ಟಿವಿ’ ಜೊತೆ ಹಂಚಿಕೊಂಡಿದ್ದಾರೆ. ಮಗನ ಮದುವೆ ದಿನಾಂಕ ಫಿಕ್ಸ್ ಆಗಿಲ್ಲ. ಆಷಾಢ ಮಾಸ ಅಲ್ವಾ? ಕನ್ಫರ್ಮ್ ಆದ್ಮೇಲೆ ಹೇಳ್ತೀವಿ ಎಂದಿದ್ದಾರೆ. ಮದುವೆ ಛತ್ರಗಳು ಅಷ್ಟು ಬೇಗ ಸಿಕ್ತಿಲ್ಲ. ಮಗನ ಕೈಲಿ ಸದ್ಯ ಜಾಸ್ತಿ ಪ್ರಾಜೆಕ್ಟ್ ಇದೆ. ಅದೆಲ್ಲಾ ನೋಡ್ಕೊಂಡು ಮದುವೆ ಮಾಡಿಕೊಳ್ತಾರೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ತಮಿಳಿನತ್ತ ನಟಿ- ಶಶಿಕುಮಾರ್‌ಗೆ ಚೈತ್ರಾ ಆಚಾರ್ ನಾಯಕಿ
ನಾನೇ ಸರಿಯಾಗಿ ಇನ್ನೂ ಆ ಹುಡ್ಗಿನಾ ನೋಡಿಲ್ಲ. ಮನೆಯವರೆಲ್ಲಾ ಕೂತು ಮಾತಾಡಬೇಕು. ಛತ್ರ ಬುಕ್ ಆದ್ಮೇಲೆ ನಾವೇ ಮಾತಾಡ್ತೀವಿ ಎಂದು ತರುಣ್ ಮತ್ತು ಸೋನಾಲ್ ಮದುವೆ ಸುದ್ದಿಯನ್ನು ಅಧಿಕೃತವಾಗಿ ಖಾತ್ರಿ ಮಾಡಿದ್ದಾರೆ ಮಾಲತಿ ಸುಧೀರ್.
ಚೌಕ, ರಾಬರ್ಟ್, ಕಾಟೇರ ಸಿನಿಮಾದ ಸಕ್ಸಸ್ ನಂತರ ತರುಣ್ ಹೊಸ ಸಿನಿಮಾದ ತಯಾರಿಯಲ್ಲಿದ್ದಾರೆ. ಇದರ ನಡುವೆ ತರುಣ್ ಶೋವೊಂದರ ಜಡ್ಜ್ ಆಗಿದ್ದಾರೆ. ಎಂಎಲ್‌ಎ, ಮದುವೆ ದಿಬ್ಬಣ, ರಾಬರ್ಟ್, ಗರಡಿ, ಶುಗರ್ ಫ್ಯಾಕ್ಟರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸೋನಾಲ್ ನಟಿಸಿದ್ದಾರೆ.
‘ಕಾಟೇರ’ (Kaatera) ಸಕ್ಸಸ್ ಸಂಭ್ರಮದಲ್ಲಿ ನಟ ದರ್ಶನ್ (Darshan) ನೀಡಿರುವ ಹೇಳಿಕೆ ಇದೀಗ ಭಾರೀ ಸದ್ದು ಮಾಡ್ತಿದೆ. ಅಯ್ಯೋ ತಗಡೇ ಎಂದು ಗುಮ್ಮಿದ ದರ್ಶನ್‌ಗೆ ಇದೀಗ ಎಷ್ಟು ವರ್ಷ ಇಲ್ಲಿ ಗೂಟ ಹೊಡ್ಕೊಂಡು ಇರುತ್ತಾರೆ ನೋಡ್ತೀನಿ ಎಂದು ಉಮಾಪತಿ ಕೌಂಟರ್ ಕೊಟ್ಟಿದ್ದಾರೆ. ಇದನ್ನೂ ಓದಿ:ಅಯ್ಯೋ ತಗಡೇ ಎಂದು ಉಮಾಪತಿಗೆ ಗುಮ್ಮಿದ ದರ್ಶನ್
‘ಕಾಟೇರ’ (Kaatera) ಟೈಟಲ್ ಕೊಟ್ಟಿದ್ದು ನಾನೇ ಎಂದು ಉಮಾಪತಿ ನೀಡಿರುವ ಹೇಳಿಕೆಯಿಂದ ಇಬ್ಬರ ನಡುವೆ ವಾಕ್ಸಮರ ಶುರುವಾಗಿದೆ. ದರ್ಶನ್ ಟಾಂಗ್‌ಗೆ ನಿರ್ಮಾಪಕ ಉಮಾಪತಿ ಉತ್ತರ ನೀಡಿದ್ದಾರೆ. ನಮ್ಮ ಜಗಳವನ್ನು ಕುಟುಂಬವು ಕೂಡ ನೋಡುತ್ತದೆ. ಫ್ಯಾಮಿಲಿಗೆ ಯಾವ ರೀತಿ ಎಫೆಕ್ಟ್ ಆಗುತ್ತೆ ಎಂಬುದರ ಬಗ್ಗೆ ಉಮಾಪತಿ ಮಾತನಾಡಿದ್ದಾರೆ.
ನಾನು ತಗಡು ವ್ಯಕ್ತಿ ಇರಬಹುದು ಆದರೆ ಅವರ ಲೈಫ್‌ಗೆ ನಾನು ವಾಚ್‌ಮ್ಯಾನ್ ಅಲ್ಲ. ಪದಗಳನ್ನು ಬಳಸುವಾಗ ಗಮನ ಇರಬೇಕು. ಸಾಯುವವರೆಗೂ ಯಾರು ನೋಡದೇ ಇರುವ ಸಕ್ಸಸ್ ಏನಲ್ಲ ಇದು. ಎಲ್ಲರೂ ನಾಳೆಗೆ ಮಣ್ಣಿಗೆ ಹೋಗಬೇಕು ಎಂದರು ಉಮಾಪತಿ. ಎಷ್ಟು ವರ್ಷ ಇಲ್ಲಿ ಗೂಟ ಹೊಡ್ಕೊಂಡು ಇರುತ್ತಾರೆ ನೋಡ್ತೀನಿ. ಸಿನಿಮಾ ಅಂತ ಬಂದಾಗ ನನ್ನ ಸಕ್ಸಸ್‌ನಲ್ಲಿ ದರ್ಶನ್, ಶ್ರೀಮುರಳಿ, ಚಿಕ್ಕಣ್ಣ, ಡೈರೆಕ್ಟರ್ ಕೃಷ್ಣ, ತರುಣ್ ಪಾಲಿದೆ. ಒಬ್ಬ ವ್ಯಕ್ತಿಯಿಂದ ಉಮಾಪತಿ ಬೆಳೆದಿಲ್ಲ. ನಾನು ಕಷ್ಟಪಟ್ಟು ಬೆಳೆದಿದ್ದೀನಿ. ಯಾಕೆಂದ್ರೆ ನಾನು ನಮ್ಮನೆ ದುಡ್ಡನ್ನು ಸಿನಿಮಾಗೆ ಹಾಕಿರೋದು. ಕಂಡವರ ದುಡ್ಡು ಹಾಕಿಲ್ಲ. ಗೌರವ ಅನ್ನೋದು ಪರಸ್ಪರ 2 ಕಡೆ ಇರಬೇಕು ಎಂದು ಉಮಾಪತಿ ಮಾತನಾಡಿದ್ದಾರೆ. ಈ ಮೂಲಕ ದರ್ಶನ್ ಅವರ ಪದಬಳಕೆಗೆ ಉಮಾಪತಿ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:ಮಾರ್ಚ್ 13ಕ್ಕೆ ‘ಗೂಗ್ಲಿ’ ನಟಿ ಕೃತಿ ಕರಬಂಧ ಮದುವೆ
ಅವರೆಲ್ಲಾ ದೊಡ್ಡವರು, ನಾವು ಚಿಕ್ಕವರು ಬಿಡಿ ಹೇಳಿಕೊಂಡು ಹೋಗಲಿ ಬಿಡಿ. ದರ್ಶನ್ ಅವರನ್ನು ಎದುರು ಹಾಕಿಕೊಂಡು ಬದುಕೋಕೆ ಆಗುತ್ತಾ? ಎಂದು ಉಮಾಪತಿ ಮಾತನಾಡಿದ್ದಾರೆ. ಕಾಟೇರ ರಿಜಿಸ್ಟರ್ ಮಾಡಿದ್ದೆ ನಾನು. ‘ಮದಗಜ’ ಸಮಯದಲ್ಲಿ ಎಲ್ಲರೂ ನನ್ನ ಮಿಸ್ ಲೀಡ್ ಮಾಡಿಬಿಟ್ಟರು. ಸಮಯ ಬಂದಾಗ ಎಲ್ಲದ್ದಕ್ಕೂ ನಾನು ಉತ್ತರ ಕೊಡುತ್ತೇನೆ. ನಾನು ಒಂದು ಜವಾಬ್ದಾರಿಯುತ ಸಮುದಾಯದ ನಾಯಕ. ನನ್ನನ್ನು ಇಲ್ಲಿಯವರೆಗೂ ಜನ ಬೆಳೆಸಿದ್ದಾರೆ ಎಂದು ಉಮಾಪತಿ ಮಾತನಾಡಿದ್ದಾರೆ.
‘ಕಾಟೇರ’ (Kaatera) ಐಡಿಯಾ ಕೊಟ್ಟಿದ್ದು ದರ್ಶನ್ (Darshan) ಆದರೆ ಅದು ನನ್ನ ಬ್ಯಾನರ್‌ನಲ್ಲಿ ರಿಜಿಸ್ಟರ್ ಆಗಿದ್ದು ಎಂದು ಉಮಾಪತಿ ಮಾತನಾಡಿದ್ದಾರೆ. ಇವತ್ತು ಇವರು ಏನೇ ಹೇಳಬಹುದು ಮುಂದೊಂದು ದಿನ ಸಮಯ ಪಾಠ ಕಲಿಸುತ್ತದೆ. ಜನ ನನಗೆ ಒಳ್ಳೆಯ ಸ್ಥಾನಮಾನ ಕೊಟ್ಟಿದ್ದಾರೆ. ಹೌದು ನಾನು ತಗಡೆ ಆದರೆ ಗುಮ್ಮಿಸಿಕೊಳ್ಳುವವನಲ್ಲ ಎಂದು ದರ್ಶನ್ ಉತ್ತರಕ್ಕೆ ಉಮಾಪತಿ ತಿರುಗೇಟು ನೀಡಿದ್ದಾರೆ. ದರ್ಶನ್ ಪದ ಬಳಕೆ ಮಾಡುವಾಗ ಜೋಪಾನವಾಗಿರಬೇಕು ಎಂದು ಉಮಾಪತಿ ಉತ್ತರ ಕೊಟ್ಟಿದ್ದಾರೆ.
ತರುಣ್ ಸುಧೀರ್ ನಿರ್ದೇಶನದ ‘ಕಾಟೇರ’ ಸಿನಿಮಾ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಈ ವೇಳೆ, ಹಿರಿಯ ನಟಿ ಶ್ರುತಿ, ನಾಯಕಿ ಆರಾಧನಾ ಸೇರಿದಂತೆ ತಂಡದ ಹಲವರಿಗೆ ಇಂದು (ಫೆ.20) ಪ್ರಶಸ್ತಿ ನೀಡಿ ಚಿತ್ರತಂಡ ಗೌರವಿಸಿದೆ. ಈ ವೇಳೆ, ಕಾಟೇರ ಟೈಟಲ್ ಕೊಟ್ಟಿದ್ದು ನಾನೇ ಎಂದ ನಿರ್ಮಾಪಕ ಉಮಾಪತಿಗೆ ದರ್ಶನ್ ಟಾಂಗ್ ಕೊಟ್ಟಿದ್ದಾರೆ. ಉಮಾಪತಿ ಆರೋಪಕ್ಕೆಲ್ಲಾ ದರ್ಶನ್ ಸ್ಪಷ್ಟನೆ ನೀಡಿದ್ದಾರೆ.
ಅಯ್ಯೋ ತಗಡೆ ಅಂದು ‘ರಾಬರ್ಟ್’ ಕತೆ ಕೊಟ್ಟಿದ್ದೆ ನಾವು. ಆದರೂ ಬುದ್ಧಿ ಕಲಿಯುತ್ತಿಲ್ಲ ಅಂದರೆ ಏನು ಹೇಳೋಣ. ಕಾಟೇರ ಎಂತಹ ಒಳ್ಳೆಯ ಕಥೆ ಯಾಕೆ ಈ ಸಿನಿಮಾ ಬಿಟ್ಟೆ ಎಂದು ದರ್ಶನ್ ಪ್ರಶ್ನಿಸಿದ್ದಾರೆ. ಬಳಿಕ ‘ಕಾಟೇರ’ ಟೈಟಲ್ ಹೇಳಿದ್ದು ಕೂಡ ನಾನು ಎಂದು ದರ್ಶನ್ ಮಾತನಾಡಿದ್ದಾರೆ. ಅಂದು ಚಿತ್ರದ ಟೈಟಲ್ ರಿಜಿಸ್ಟರ್ ಮಾಡಿಸುವಂತೆ ತರುಣ್ ಸುಧೀರ್‌ಗೆ ಹೇಳಿದ್ದೆ ಎಂದರು. ಬಳಿಕ ತರುಣ್ ಬಳಿಯೇ ದರ್ಶನ್ ಸ್ಪಷ್ಟನೆ ಕೊಡಿಸಿದ್ದರು.
ಯಾಕಪ್ಪ, ಯಾವಾಗಲೂ ಬಂದು ನಮ್ಮ ಕೈಯಲ್ಲೇ ಗುಮ್ಮಿಸಿಕೊಳ್ತಿಯಾ? ಅಂತ ಉಮಾಪತಿಗೆ ದರ್ಶನ್ ಕುಟುಕಿದ್ದರು. ಈಗ ಎಲ್ಲೋ ಇದ್ದೀಯಾ ಚೆನ್ನಾಗಿ ಇರು. ತಪ್ಪು ಇದು ಅಂತ ದರ್ಶನ್ ಹೇಳಿದರು.
ಹಲವು ಸಂದರ್ಶನಗಳಲ್ಲಿ ದರ್ಶನ್ ಚಿತ್ರಕ್ಕೆ ‘ಕಾಟೇರ’ ಟೈಟಲ್ ಕೊಟ್ಟಿದ್ದು ನಾನೇ ಎಂದು ಉಮಾಪತಿ ಹೇಳಿದ್ದರು. ಇದಕ್ಕೆಲ್ಲ ಈಗ ದರ್ಶನ್ ಸಖತ್ ಆಗಿ ಟಾಂಗ್ ಕೊಟ್ಟಿದ್ದಾರೆ.
ಸ್ಯಾಂಡಲ್‌ವುಡ್ ಡಿ ಬಾಸ್ ದರ್ಶನ್- ಕಿಚ್ಚ ಸುದೀಪ್ (Kichcha Sudeep) ಒಂದಾಗುವ ಸುದ್ದಿ ಬೆನ್ನಲ್ಲೇ ದಚ್ಚು ಜೋಡೆತ್ತುಗಳ ಜೊತೆಯಿರುವ ಪೋಸ್ಟ್ ಶೇರ್ ಮಾಡಿ, ಅಭಿಮಾನಿಗಳಿಗೆ ಕುತೂಹಲ ಕೆರಳಿಸಿದ್ದಾರೆ. ಎಲ್ಲವನ್ನೂ ಕಾಲವೇ ನಿರ್ಧರಿಸುತ್ತದೆ ಎನ್ನುವ ಪೋಸ್ಟ್ ಮೂಲಕ ಸಂಧಾನದ ಬಗ್ಗೆ ಸುಳಿವು ನೀಡಿದ್ರಾ? ಎಂದು ಫ್ಯಾನ್ಸ್ ಲೆಕ್ಕಚಾರ ಹಾಕ್ತಿದ್ದಾರೆ.
ಸುಮಲತಾ ಬರ್ತ್‌ಡೇ ಪಾರ್ಟಿಯಲ್ಲಿ ಸುದೀಪ್- ದರ್ಶನ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಇಬ್ಬರನ್ನು ಸುಮಲತಾ ಸಂಧಾನ ಮಾಡಿಸಿದ್ದಾರೆ ಎಂಬ ಚರ್ಚೆ ಬೆನ್ನಲ್ಲೇ ದರ್ಶನ್ ನಯಾ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಕಾಲಾಯ ತಸ್ಮಯ್ ನಮಃ ಎನ್ನುವ ಸಂಸ್ಕೃತ ಸಾಲಿನ ಅರ್ಥ ಏನು ಎಂದು ಹುಡುಕುತ್ತಿದ್ದಾರೆ. ಆ ಸಾಲಿಗೆ ಕಾಲವೇ ಎಲ್ಲವನ್ನೂ ಕಲಿಸುತ್ತದೆ, ಮರೆಸುತ್ತದೆ ಎಂದು ಧೈರ್ಯ ಮಾಡಿ ಮುಂದೆ ಸಾಗುತ್ತೇವೆ ಎನ್ನುವ ಅರ್ಥವಿದೆ.
ಜೋಡೆತ್ತುಗಳ ದರ್ಶನ್ (Darshan) ನಿಂತಿರುವ ಪೋಸ್ಟ್ ವೈರಲ್ ಆಗ್ತಿದ್ದಂತೆ, ಈ ಜೋಡೆತ್ತುಗಳನ್ನ ದರ್ಶನ್- ಸುದೀಪ್ ಹೋಲಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಈ ಜೋಡೆತ್ತುಗಳ ಹಾಗೆ ಮತ್ತೆ ಜೊತೆಯಾಗಿ ಎಂದು ವಿಶ್ ಮಾಡ್ತಿದ್ದಾರೆ. ಇದನ್ನೂ ಓದಿ:ಕಟುಮಸ್ತಾದ ದೇಹ ಪ್ರದರ್ಶಿಸಿದ ಸುದೀಪ್- K 46 ಬಗ್ಗೆ ಕಿಚ್ಚ ಅಪ್‌ಡೇಟ್
ನಟಿ ಸುಮಲತಾ ಮಾತನಾಡಿ, ಇದು ನಮ್ಮ ವೈಯಕ್ತಿಕ ಕಾರ್ಯಕ್ರಮವಾಗಿದೆ. ಫ್ಯಾಮಿಲಿ ಅಂದ ಮೇಲೆ ಎಲ್ಲರೂ ಒಂದೇ. ಇದು ತೀರಾ ಪರ್ಸನಲ್ ವಿಚಾರ. ಈ ಬಗ್ಗೆ ನಾನು ಹೆಚ್ಚು ಮಾತನಾಡೋಕೆ ಇಷ್ಟಪಡಲ್ಲ ಎಂದಿದ್ದಾರೆ. ಒಟ್ನಲ್ಲಿ ಇಬ್ಬರೂ ಆದಷ್ಟು ಬೇಗ ಕೈ ಜೋಡಿಸುತ್ತಾರೆ ಅಂತಲೇ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೆಲ್ಲದರ ನಡುವೆ ದರ್ಶನ್ ಪೋಸ್ಟ್ ಕುತೂಹಲ ಮೂಡಿಸಿದೆ.
ಡಿ ಬಾಸ್(D Boss) ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ವರಮಹಾಲಕ್ಷ್ಮಿ ಹಬ್ಬದಂದು ಬಹುನಿರೀಕ್ಷಿತ ‘ಕಾಟೇರ’ (Kaatera) ಸಿನಿಮಾದ ಪೋಸ್ಟರ್ ರಿಲೀಸ್ ರಿವೀಲ್ ಮಾಡಿದ್ದಾರೆ. ದರ್ಶನ್- ಆರಾಧನಾ ಜೊತೆಯಾಗಿರುವ ಫೋಟೋ ರಿವೀಲ್ ಮಾಡಲಾಗಿದೆ. ಡಿ ಬಾಸ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ:ಕುಟುಂಬದೊಂದಿಗೆ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ನಿಖಿಲ್
ರಾಕ್‌ಲೈನ್ ವೆಂಕಟೇಶ್ (Rockline Venkatesh) ನಿರ್ಮಾಣದ ‘ಕಾಟೇರ’ ಸಿನಿಮಾದ ಪೋಸ್ಟರ್ ಲುಕ್‌ನಿಂದಲೇ ಕುತೂಹಲ ಮೂಡಿಸುತ್ತಿದೆ. ಕಾಟೇರ ಸೈಕಲ್ ಏರಿ ಪ್ರಭಾವತಿಯನ್ನು ಮುಂದೆ ಕೂರಿಸಿಕೊಂಡಿದ್ದಾನೆ. ಆಕೆಯ ಕೈಯಲ್ಲಿ ಲೇಖನಿ ಪುಸ್ತಕ ಇದೆ. ಮತ್ತೊಂದು ಕಡೆ ಸೈಕಲ್ ಹ್ಯಾಂಡಲ್‌ನಲ್ಲಿ ರಕ್ತ ಸುರಿಸುತ್ತಿರುವ ಮಚ್ಚು ತೂಗಾಡುತ್ತಿದೆ. ಈ ಪೋಸ್ಟರ್ ಮೂಲಕ ಒಂದೊಳ್ಳೆ ಸಂಗತಿಯನ್ನು ತಂಡ ತೋರಿಸಲು ಹೊರಟಿರುವುದು ಸ್ಪಷ್ಟವಾಗಿ ತಿಳಿಯುತ್ತಿದೆ.
ಖಡ್ಗಕ್ಕಿಂತ ಹರಿತವಾದ ಆಯುಧ ಲೇಖನಿ ಅಂತಾರೆ..
‘ಪೆನ್ನೂ ಇರಲಿ ಮಚ್ಚೂ ಇರಲಿ!’
ನಾಡಿನ ಸಮಸ್ತ ಜನತೆಗೆ #ಕಾಟೇರ ಚಿತ್ರತಂಡದಿಂದ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ದೇವಿ ನಿಮ್ಮೆಲ್ಲಾ ಸಕಲ ಇಷ್ಟಾರ್ಥಗಳನ್ನು ಈಡೇರಿಸಿ ಸದಾ ಕಾಪಾಡಲಿ ????
ಕೆಂಪು ಬಣ್ಣದ ಚೂಟಿದಾರ್ ತೊಟ್ಟು ಎರಡು ಜಡೆ ಹಾಕಿಕೊಂಡು ಪ್ರಭಾವತಿಯಾಗಿ ಆರಾಧನಾ ಮಿಂಚಿದ್ದಾರೆ. ಇನ್ನು ಗೀಟು ಶರ್ಟ್, ಪ್ಯಾಂಟ್ ತೊಟ್ಟು ಹಣೆಗೆ ಕುಂಕುಮ ಇಟ್ಟುಕೊಂಡು ಕಾಟೇರನಾಗಿ ದರ್ಶನ್ (Darshan) ಕಾಣಿಸಿಕೊಂಡಿದ್ದಾರೆ. 70ರ ದಶಕದ ಕಥೆ ಚಿತ್ರದಲ್ಲಿದೆ. ಉಳುವವನೆ ಭೂಮಿಯ ಒಡೆಯ ಕಾಯ್ದೆ ಜಾರಿಯಾದಾಗ ಹಳ್ಳಿಗಳಲ್ಲಿ ನಡೆದ ಸಂಘರ್ಷಗಳನ್ನು ಸೇರಿಸಿ ಸಿನಿಮಾ ಕಟ್ಟಿಕೊಡಲಾಗ್ತಿದೆ. ಅನ್ಯಾಯದ ವಿರುದ್ಧ ತನ್ನದೇ ಹಾದಿಯಲ್ಲಿ ಹೋರಾಡುವ ನಾಯಕ ಕಾಟೇರನ ನೋವು ನಲಿವಿನ ಕಥೆ ಚಿತ್ರದಲ್ಲಿದೆ. ರಾಬರ್ಟ್ ಬಳಿಕ ಮತ್ತೆ ಕಾಟೇರಗೆ ತರುಣ್ ಸುಧೀರ್ (Tharun Sudhir) ನಿರ್ದೇಶನ ಮಾಡ್ತಿದ್ದಾರೆ.
ನಾಯಕಿ ಪ್ರಭಾವತಿ ಓದಿಕೊಂಡ ಹುಡುಗಿ. ಮಚ್ಚು ಗಿಚ್ಚು ಬೇಡ, ಅದರಿಂದ ಸಾಧಿಸುವುದು ಏನು ಇಲ್ಲ ಎನ್ನುವುದು ಆಕೆಯ ಅನಿಸಿಕೆ. ಕಾಟೇರ ಕೂಡ ಅದನ್ನು ಒಪ್ಪುತ್ತಾನೆ. ಖಡ್ಗಕ್ಕಿಂತ ಹರಿತವಾದ ಆಯುಧ ಲೇಖನಿ ಅನ್ನೋದು ನಿಜವೇ. ಆದರೂ ಕೂಡ ಪೆನ್ನಿನ ಜೊತೆಗೆ ಮಚ್ಚೂ ಇರಲಿ ಬೇಕಾಗುತ್ತದೆ. ಎಲ್ಲವನ್ನು ಓದಿನಿಂದಲೇ ಸಾಧಿಸಲು ಸಾಧ್ಯವಿಲ್ಲ, ಕೆಲವೊಮ್ಮೆ ದಂಡಂ ದಶಗುಣಂ ಮಾತನ್ನು ಪಾಲಿಸಬೇಕು ಅನ್ನೋದು ಕಾಟೇರ ಮಾರ್ಗವಾಗಿರುತ್ತದೆ.
ಈ ಚಿತ್ರದ ಮೂಲಕ ಕನಸಿನ ರಾಣಿ ಮಾಲಾಶ್ರೀ (Malashree) ಪುತ್ರಿ ಆರಾಧನಾ ರಾಮ್ (Aaradhan Ram) ಸ್ಯಾಂಡಲ್‌ವುಡ್‌ಗೆ ಪರಿಚಿತರಾಗುತ್ತಿದ್ದಾರೆ. ದರ್ಶನ್‌ಗೆ ನಾಯಕಿಯಾಗಿ ಚಂದನವನಕ್ಕೆ ನವನಟಿ ಪರಿಚಯವಾಗುತ್ತಿದ್ದಾರೆ. ಕ್ರಾಂತಿ ಬಳಿಕ ‘ಕಾಟೇರ’ ಅದೆಷ್ಟರ ಮಟ್ಟಿಗೆ ಮೋಡಿ ಮಾಡುತ್ತೆ ಕಾದುನೋಡಬೇಕಿದೆ.