Tag: Kaadadi

  • ‘ಕಾದಾಡಿ’ದಲ್ಲಿ ಐಟಂ ಹಾಡಿಗೆ ಕುಣಿದ  ಆದಿತ್ಯ ಶಶಿಕುಮಾರ್

    ‘ಕಾದಾಡಿ’ದಲ್ಲಿ ಐಟಂ ಹಾಡಿಗೆ ಕುಣಿದ ಆದಿತ್ಯ ಶಶಿಕುಮಾರ್

    ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಈಗ ಆದಿತ್ಯ ಶಶಿಕುಮಾರ್ ಅಂತ ಹೆಸರು ಬದಲಾಯಿಸಿಕೊಂಡಿದ್ದು, ’ಕಾದಾಡಿ’ ಎನ್ನುವ ಚಿತ್ರದಲ್ಲಿ ನಟಿಸಿದ್ದಾರೆ. ಕನ್ನಡ, ತೆಲುಗು,ಹಿಂದಿ ಮತ್ತು ತಮಿಳು ಭಾಷೆಯಲ್ಲಿ ಸಿದ್ದಗೊಂಡಿರುವ ಸಿನಿಮಾವನ್ನು ಸತೀಶ್ ಮಾಲೆಂಪಾಟಿ ನಿರ್ದೇಶಿಸಿ, ಅರುಣಂ ಫಿಲಿಂಸ್ ಮುಖಾಂತರ ನಿರ್ಮಾಣ ಮಾಡಿದ್ದಾರೆ. ಪ್ರಚಾರದ ಸಲುವಾಗಿ ಮೊನ್ನೆಯಷ್ಟೇ ಮೂರನೇ ಹಾಡು ಐಟಂ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಲಾಗಿದೆ.

    ಕೃಷ್ಣ ಸಾಹಿತ್ಯದ ’ನೂರು ಪುಟದ ಜೀವನ, ಒಂದು ಏಳೆಯ ಕಾಗದ. ಬರೆದುಕೋ ನಂದೇ ಜೀವನ, ತಪ್ಪು ತಿಳಿದುಕೋ, ತಿಳಿದ ಮೇಲೆ ಮರೆತು ತಪ್ಪು ಮಾಡಿದರೆ ಜನ್ಮ ಪಾವನ. ದಂ ಕಿರಿಕಿರಿ, ಗುಂಡಲ್ಲೂ ಕಿರಿಕಿರಿ’ ಹಾಡಿಗೆ ಅನನ್ಯ ಭಟ್ ಧ್ವನಿಯಾಗಿದ್ದು, ನಾಯಕನೊಂದಿಗೆ ಬಾಂಬೆ ನಟಿ  ಸೋನಿ ಚೇರಿಸ್ಟ ಹೆಜ್ಜೆ ಹಾಕಿದ್ದಾರೆ.

     

    ತ್ಯಾಗಮಯವಾಗುತ್ತಿರುವ ಜನರ ಜೀವನವು ದಿನದ ಅಂತ್ಯದಲ್ಲಿ ಪ್ರತಿಯೊಬ್ಬರು ತ್ಯಾಗಮಯಿರಾಗುತ್ತಾರೆ. ನಾವೆಲ್ಲರೂ ಕಾದಾಡುತ್ತಾ ಒಂದು ದಿನ ಸಾಯುತ್ತೇವೆ. ಆದರೆ ನಮ್ಮ ಜೀವನವನ್ನು ತ್ಯಾಗ ಮಾಡುವ ಮೂಲಕ ಸಮಾಜಕ್ಕೆ ಏನನ್ನಾದರೂ ಕೊಡಬೇಕು. ಮಕ್ಕಳಿಗೆ ಏನಾದರೂ ಆಗಬೇಕು. ನಾವು ದಿನದಿಂದ ದಿನಕ್ಕೆ ಹೋರಾಟ ನಡೆಸುತ್ತಿದ್ದೆವೆ. ಇಂತಹ ಅಂಶಗಳನ್ನು ಥ್ರಿಲ್ಲರ್ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ.

    ಲಾವಣ್ಯ ಸಾಹುಕಾರ, ಚಾಂದಿನಿತಮಿಳರಸನ್ ನಾಯಕಿಯರು. ಉಳಿದಂತೆ ಪೋಸಾನಿ, ರವಿಕಾಳೆ, ಮಾರಿಮುತ್ತು, ಪ್ರೇಮ್‌ಮನೋಹರ್, ಶ್ರವಣ್‌ರಾಘವೇಂದ್ರ ಮುಂತಾದವರು ನಟಿಸಿದ್ದಾರೆ. ಆರು ಹಾಡುಗಳಿಗೆ ಭೀಮ್ಸ್ ಸಿಸಿರಿಲಿಯೋ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಡಿ.ಯೋಗಿಪ್ರಸಾದ್, ಕಲೆ ಅರ್ಜುನ್‌ಸೂರಿಸೆಟ್ಟಿ, ಸಂಕಲನ ಪ್ರಕಾಶ್‌ತೋಟ, ನೃತ್ಯ ರಾಜ್‌ಪಿಡಿ-ರಾಜ್‌ಕೃಷ್ಣ, ಸಾಹಸ ಬಿ.ಎಲ್.ಸತೀಶ್-ವಿನ್‌ಚೇನ್‌ಆಂಜಿ-ಬಿಂಬಸಾರ-ರಾಮಕೃಷ್ಣ-ರಾಮಸುಂಕರ ಅವರದಾಗಿದೆ. ಗೋವಾ, ಚಿಕ್ಕಮಗಳೂರು, ಹೈದರಬಾದ್, ಚೆನ್ನೈ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅಂದಹಾಗೆ ಸಿನಿಮಾವು ಜುಲೈ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

  • ಶಶಿಕುಮಾರ್ ಪುತ್ರನ ‘ಕಾದಾಡಿ’ ಸಿನಿಮಾದ ಲಿರಿಕಲ್ ಸಾಂಗ್ ರಿಲೀಸ್

    ಶಶಿಕುಮಾರ್ ಪುತ್ರನ ‘ಕಾದಾಡಿ’ ಸಿನಿಮಾದ ಲಿರಿಕಲ್ ಸಾಂಗ್ ರಿಲೀಸ್

    ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ (Akshit Shashikumar) ಈಗ ಆದಿತ್ಯ ಶಶಿಕುಮಾರ್ ಅಂತ ಹೆಸರು ಬದಲಾಯಿಸಿಕೊಂಡಿದ್ದು, ’ಕಾದಾಡಿ’ (Kaadadi) ಎನ್ನುವ ಚಿತ್ರದಲ್ಲಿ ನಟಿಸಿದ್ದಾರೆ. ಕನ್ನಡ, ತೆಲುಗು,ಹಿಂದಿ ಮತ್ತು ತಮಿಳು ಭಾಷೆಯಲ್ಲಿ ಸಿದ್ದಗೊಂಡಿರುವ ಸಿನಿಮಾವನ್ನು ಸತೀಶ್ ಮಾಲೆಂಪಾಟಿ ನಿರ್ದೇಶಿಸಿ, ಅರುಣಂ ಫಿಲಿಂಸ್ ಮುಖಾಂತರ ನಿರ್ಮಾಣ ಮಾಡಿದ್ದಾರೆ. ಪ್ರಚಾರದ ಸಲುವಾಗಿ ಮೊನ್ನೆಯಷ್ಟೇ ನಾಯಕನ ಪರಿಚಯದ ಎರಡನೇ ಲಿರಿಕಲ್ ವಿಡಿಯೋ ಹಾಡನ್ನು ಬಿಡುಗಡೆ ಮಾಡಲಾಗಿದೆ.

    ಎನ್.ಮಾರುತಿ ಸಾಹಿತ್ಯದ ’ಕಲೆಯು ಇರಬೇಕು, ಮನೆಯು ಇರಬೇಕು, ಗುಡಿಯು ಇರಬೇಕು, ಕುಲವುನೂ ಇರಬೇಕು. ಸಹನೆಯು ಇರಬೇಕು, ಸಾಧನೆಯು ಇರಬೇಕು, ಗೆಲುವು ಇರಬೇಕು, ಸೋತರೂ ಗೆಲ್ಲುವ ಛಲವು ಇರಬೇಕು’ ಹಾಡಿಗೆ ಶಶಾಂಕ್ ಶೇಷಗಿರಿ ಧ್ವನಿಯಾಗಿದ್ದಾರೆ.

    ತ್ಯಾಗಮಯವಾಗುತ್ತಿರುವ ಜನರ ಜೀವನವು ದಿನದ ಅಂತ್ಯದಲ್ಲಿ ಪ್ರತಿಯೊಬ್ಬರು ತ್ಯಾಗಮಯಿರಾಗುತ್ತಾರೆ. ನಾವೆಲ್ಲರೂ ಕಾದಾಡುತ್ತಾ ಒಂದು ದಿನ ಸಾಯುತ್ತೇವೆ. ಆದರೆ ನಮ್ಮ ಜೀವನವನ್ನು ತ್ಯಾಗ ಮಾಡುವ ಮೂಲಕ ಸಮಾಜಕ್ಕೆ ಏನನ್ನಾದರೂ ಕೊಡಬೇಕು. ಮಕ್ಕಳಿಗೆ ಏನಾದರೂ ಆಗಬೇಕು. ನಾವು ದಿನದಿಂದ ದಿನಕ್ಕೆ ಹೋರಾಟ ನಡೆಸುತ್ತಿದ್ದೆವೆ. ಇಂತಹ ಅಂಶಗಳನ್ನು ಥ್ರಿಲ್ಲರ್ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ.

    ಲಾವಣ್ಯ ಸಾಹುಕಾರ, ಚಾಂದಿನಿ ತಮಿಳರಸನ್ ನಾಯಕಿಯರು. ಉಳಿದಂತೆ ಪೋಸಾನಿ, ರವಿಕಾಳೆ, ಮಾರಿಮುತ್ತು, ಪ್ರೇಮ್‌ಮನೋಹರ್, ಶ್ರವಣ್‌ರಾಘವೇಂದ್ರ ಮುಂತಾದವರು ನಟಿಸಿದ್ದಾರೆ. ಆರು ಹಾಡುಗಳಿಗೆ ಭೀಮ್ಸ್ ಸಿಸಿರಿಲಿಯೋ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಡಿ.ಯೋಗಿಪ್ರಸಾದ್, ಕಲೆ ಅರ್ಜುನ್‌ಸೂರಿಸೆಟ್ಟಿ, ಸಂಕಲನ ಪ್ರಕಾಶ್‌ತೋಟ, ನೃತ್ಯ ರಾಜ್‌ಪಿಡಿ-ರಾಜ್‌ಕೃಷ್ಣ, ಸಾಹಸ ಬಿ.ಎಲ್.ಸತೀಶ್-ವಿನ್‌ಚೇನ್‌ಆಂಜಿ-ಬಿಂಬಸಾರ-ರಾಮಕೃಷ್ಣ-ರಾಮಸುಂಕರ ಅವರದಾಗಿದೆ. ಗೋವಾ, ಚಿಕ್ಕಮಗಳೂರು, ಹೈದರಬಾದ್, ಚೆನ್ನೈ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.