Tag: kaabza

  • ದೀಪಿಕಾ ಪಡುಕೋಣೆ ಜೊತೆ ನಟಿಸಿದ್ದಕ್ಕೆ ಲಕ್ಕಿ ಎಂದ ಉಪೇಂದ್ರ

    ದೀಪಿಕಾ ಪಡುಕೋಣೆ ಜೊತೆ ನಟಿಸಿದ್ದಕ್ಕೆ ಲಕ್ಕಿ ಎಂದ ಉಪೇಂದ್ರ

    ರಿಯಲ್ ಸ್ಟಾರ್ ಉಪೇಂದ್ರ (Upendra) ಸದ್ಯ `ಕಬ್ಜ’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಮುಂಬೈನಲ್ಲಿ ಚಿತ್ರತಂಡ ಬೀಡು ಬಿಟ್ಟಿದ್ದಾರೆ. ಸಿನಿಮಾದ ಸುದ್ದಿಗೋಷ್ಠಿಯಲ್ಲಿ ದೀಪಿಕಾ ಪಡುಕೋಣೆ (Deepika Padukone) ಬಗ್ಗೆ ನಟ ಉಪ್ಪಿ ಮೆಚ್ಚುಗೆಯ ಮಾತುಗಳನ್ನ ಹೇಳಿದ್ದಾರೆ.

    ಆರ್.ಚಂದ್ರು (R.Chandru) ನಿರ್ದೇಶನದ `ಕಬ್ಜ’ ಸಿನಿಮಾ ಬಹುಭಾಷೆಗಳಲ್ಲಿ ತೆರೆಗೆ ಅಪ್ಪಳಿಸುತ್ತಿದೆ. ಕಿಚ್ಚ ಮತ್ತು ಉಪ್ಪಿ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಉಪ್ಪಿ, ದೀಪಿಕಾ ಜೊತೆ ನಟಿಸಿದ್ದನ್ನು ನೆನಪಿಸಿಕೊಂಡಿದ್ದಾರೆ.

    ದೀಪಿಕಾ ಪಡುಕೋಣೆ ಜೊತೆ ನಟಿಸಿದ್ದಕ್ಕೆ ನಾನು ʻಲಕ್ಕಿʼ ಎಂದು ನಟ ಉಪೇಂದ್ರ ಅವರು `ಕಬ್ಜ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ದೀಪಿಕಾ ಬಗ್ಗೆ ಉಪ್ಪಿ ಮೆಚ್ಚುಗೆಯ ಮಾತುಗಳನ್ನ ಆಡಿದ್ದಾರೆ. ಇದನ್ನೂ ಓದಿ: ರೆಟ್ರೋ ಲುಕ್‌ನಲ್ಲಿ ಕಂಗೊಳಿಸಿದ ರಕ್ಷಿತ್ ಶೆಟ್ಟಿ ನಾಯಕಿ

    ದೀಪಿಕಾ ಪಡುಕೋಣೆ ಮೂಲತಃ ಕರ್ನಾಟಕದವರು. ಅವರು ಕನ್ನಡದ `ಐಶ್ವರ್ಯಾ’ ಚಿತ್ರದ ಮೂಲಕ ಉಪೇಂದ್ರ ಅವರಿಗೆ ನಾಯಕಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಬಳಿಕ ಬಾಲಿವುಡ್‌ನಲ್ಲಿ ಸಕ್ಸಸ್ ಕಂಡರು. ಇತ್ತೀಚಿನ `ಪಠಾಣ್’ ಚಿತ್ರದ ಮೂಲಕ ದೀಪಿಕಾ ಗಮನ ಸೆಳೆದಿದ್ದಾರೆ.

  • ಮಗಳನ್ನು ಮುದ್ದಾಡಿದ `ಕಬ್ಜ’ ಸುಂದರಿ ಶ್ರೀಯಾ ಶರಣ್

    ಮಗಳನ್ನು ಮುದ್ದಾಡಿದ `ಕಬ್ಜ’ ಸುಂದರಿ ಶ್ರೀಯಾ ಶರಣ್

    ಹುಭಾಷಾ ನಟಿ ಶ್ರೀಯಾ ಶರಣ್ ಕನ್ನಡಕ್ಕೆ ಹೊಸಬರಲ್ಲ. ಸದ್ಯ ಉಪ್ಪಿಗೆ ಜೋಡಿಯಾಗಿ `ಕಬ್ಜ’ ಚಿತ್ರದ ಮೂಲಕ ನಟಿ ಹವಾ ಕ್ರಿಯೇಟ್ ಮಾಡಿದ್ದಾರೆ. ಸದ್ಯ ತಮ್ಮ ಮಗಳು ರಾಧಾ ಜೊತೆಗಿನ ಮುದ್ದಾದ ಫೋಟೋಶೂಟ್ (Photoshoot) ಮೂಲಕ ನಟಿ ಸೌಂಡ್ ಮಾಡ್ತಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿ ಗಂಗವ್ವಗೆ ಮನೆ ಕಟ್ಟಲು ಸಹಾಯ ಮಾಡಿದ ನಟ ನಾಗಾರ್ಜುನ

     

    View this post on Instagram

     

    A post shared by Shriya Saran (@shriya_saran1109)

    ರೂಪಾ ಅಯ್ಯರ್ ನಿರ್ದೇಶನದ `ಚಂದ್ರ’ ಸಿನಿಮಾ ಮೂಲಕ ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ನಾಯಕಿಯಾಗಿ ಪರಿಚಿತರಾಗಿದ್ದಾರೆ. ಮಲ್ಟಿಸ್ಟಾರ್ ಸಿನಿಮಾ‌, ʻಕಬ್ಜʼಗೆ ನಾಯಕಿಯಾಗಿ ಶ್ರೀಯಾ ಶರಣ್ ಸಾಥ್ ನೀಡಿದ್ದಾರೆ.

     

    View this post on Instagram

     

    A post shared by Shriya Saran (@shriya_saran1109)

    `ಕಬ್ಜ’ ಸಿನಿಮಾ ಪ್ರಚಾರದ ನಡುವೆ ಶ್ರೀಯಾ ಹೊಸ ಫೋಟೋಶೂಟ್‌ವೊಂದನ್ನ ಮಾಡಿಸಿದ್ದಾರೆ. ಮಗಳು ರಾಧಾ ಜೊತೆ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಶ್ರೀಯಾ ಮಾಡ್ರನ್ ಲುಕ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಸಂತೂರ್ ಮಮ್ಮಿ ಎಂದು ಕಾಮೆಂಟ್ ಮಾಡ್ತಿದ್ದಾರೆ.

    ಆರ್.ಚಂದ್ರು ನಿರ್ದೇಶನದ `ಕಬ್ಜ’ ಪ್ಯಾನ್ ಇಂಡಿಯಾ ಸಿನಿಮಾ ಇದೇ ಮಾರ್ಚ್ 17ಕ್ಕೆ ತೆರೆಗೆ ಅಪ್ಪಳಿಸುತ್ತಿದೆ. ಅಪ್ಪು ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಸಿನಿಮಾ ಮೂಲಕ ಕಮಾಲ್ ಮಾಡಲು ಚಿತ್ರತಂಡ ಮುಂದಾಗಿದ್ದಾರೆ.