Tag: K. Virupakshappa

  • ಈಶ್ವರಪ್ಪ ರಾಯಣ್ಣ ಬ್ರಿಗೇಡ್ ಸದಸ್ಯತ್ವ ಪಡೆದಿಲ್ಲ: ಕೆ.ವಿರುಪಾಕ್ಷಪ್ಪ

    ಈಶ್ವರಪ್ಪ ರಾಯಣ್ಣ ಬ್ರಿಗೇಡ್ ಸದಸ್ಯತ್ವ ಪಡೆದಿಲ್ಲ: ಕೆ.ವಿರುಪಾಕ್ಷಪ್ಪ

    ರಾಯಚೂರು: ಕೆ.ಎಸ್.ಈಶ್ವರಪ್ಪನವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‍ನ ಸದಸ್ಯತ್ವವನ್ನೇ ಪಡೆದಿಲ್ಲ, ಅಭ್ಯಾಸ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಅಂತ ಬ್ರಿಗೇಡ್ ರಾಜ್ಯಾಧ್ಯಕ್ಷ ಕೆ.ವಿರುಪಾಕ್ಷಪ್ಪ ಹೇಳಿದ್ದಾರೆ.

    ರಾಯಚೂರಿನ ಹೊರವಲಯದ ಹರ್ಷಿತಾ ಗಾರ್ಡನ್‍ನಲ್ಲಿ ನಡೆಯುತ್ತಿರುವ ಬ್ರಿಗೇಡ್ ಅಭ್ಯಾಸ ವರ್ಗದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ ಏನ್ ಹೇಳಿದೆಯೋ ಗೊತ್ತಿಲ್ಲ. ಈಶ್ವರಪ್ಪನವರು ಕಾರ್ಯಕ್ರಮಕ್ಕೆ ಬರುವುದಿಲ್ಲ. ಬ್ರಿಗೇಡ್ ಯಾವುದೇ ಪಕ್ಷ, ವ್ಯಕ್ತಿಗೆ ಸಂಬಂಧಿಸಿದ್ದಲ್ಲ ಎಂದರು.

    ಇನ್ನೂ ಸಿಎಂ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಮೀಸಲಾತಿ ವಿರೋಧಿ. ಈಗ ಜನರಲ್ಲಿ ಗೊಂದಲ ಮೂಡಿಸಲು ಶೇಕಡಾ 70 ರಷ್ಟು ಮೀಸಲಾತಿಗಾಗಿ ಹೋರಾಟ ನಡೆಸುತ್ತೇನೆ ಅಂತಿದ್ದಾರೆ ಅಂತ ಆರೋಪಿಸಿದರು.

    ಇನ್ನೂ ಇದೇ ವೇಳೆ ಮಾತಾಡಿದ ಬ್ರಿಗೇಡ್ ರಾಜ್ಯ ಗೌರವಾಧ್ಯಕ್ಷ ಮುಕುಡಪ್ಪ ಯಡಿಯೂರಪ್ಪನವರು ಅಹಿಂದ ವರ್ಗವನ್ನ ಕಡೆಗಣಿಸಬಾರದು ಅಂತ ಹೇಳಿದರು. ಕಾಗಿನೆಲೆ ಕನಕ ಗುರುಪೀಠದ ಸಿದ್ದರಾಮನಂದಪುರಿ ಸ್ವಾಮಿ ಮಾತನಾಡಿ, ಸಂಗೊಳ್ಳಿರಾಯಣ್ಣ ಬ್ರಿಗೇಡ್ ಪಕ್ಷಾತೀತ ಸಂಘಟನೆ ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ ಎಂದರು.

    ಕೆ.ಎಸ್.ಈಶ್ವರಪ್ಪ ಗೈರು ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳ ಸಂಖ್ಯೆಯೂ ಕಡಿಮೆಯಾಗಿತ್ತು. ಎಲ್ಲಿ ನೋಡಿದ್ರೂ ಈಶ್ವರಪ್ಪ ಭಾವಚಿತ್ರಗಳು ರಾರಾಜಿಸುತ್ತಿದ್ದರೂ ಕೂಡ ಪ್ರತಿಯೊಬ್ಬ ಮುಖಂಡರು ಇದು ಪಕ್ಷಾತೀತ ಕಾರ್ಯಕ್ರಮ ಅಂತ ಹೇಳುತ್ತಿದ್ದರು.

     

  • ಈಶ್ವರಪ್ಪ ಹಾಗೂ ನನ್ನನ್ನ ಪಕ್ಷದಿಂದ ಉಚ್ಛಾಟಿಸಿದ್ರೂ ಬ್ರಿಗೇಡ್ ಮುಂದುವರೆಯುತ್ತೆ: ಕೆ. ವಿರೂಪಾಕ್ಷಪ್ಪ

    ಈಶ್ವರಪ್ಪ ಹಾಗೂ ನನ್ನನ್ನ ಪಕ್ಷದಿಂದ ಉಚ್ಛಾಟಿಸಿದ್ರೂ ಬ್ರಿಗೇಡ್ ಮುಂದುವರೆಯುತ್ತೆ: ಕೆ. ವಿರೂಪಾಕ್ಷಪ್ಪ

    ರಾಯಚೂರು: ಬೆಂಗಳೂರಿನಲ್ಲಿ ಗುರುವಾರ ನಡೆದ ಬಿಜೆಪಿ ಸಮಾವೇಶಕ್ಕೂ ಬ್ರಿಗೇಡ್‍ಗೂ ಸಂಬಂಧವಿಲ್ಲ. ಒಂದು ವೇಳೆ ಈಶ್ವರಪ್ಪ ಹಾಗೂ ನನ್ನನ್ನ ಪಕ್ಷದಿಂದ ಉಚ್ಛಾಟನೆ ಮಾಡಿದರೂ ಬ್ರಿಗೇಡ್ ಮುಂದುವರೆಯುತ್ತದೆ ಎಂದು ಸಂಗೊಳ್ಳಿರಾಯಣ್ಣ ಬ್ರಿಗೇಡ್ ರಾಜ್ಯಾಧ್ಯಕ್ಷ ಕೆ. ವಿರುಪಾಕ್ಷಪ್ಪ ಹೇಳಿದ್ದಾರೆ.

    ಬ್ರಿಗೇಡ್ ಯಾವ ಪಕ್ಷಕ್ಕೂ ಸೇರಿಲ್ಲ. ರಾಜಕೀಯೇತರ ವ್ಯಕ್ತಿಗಳು ಸಹ ಬ್ರಿಗೇಡ್‍ನಲ್ಲಿದ್ದಾರೆ. ರಾಜ್ಯದಲ್ಲಿ ರಾಜಕೀಯ ಸಂಚಲನಕ್ಕೆ ಬ್ರಿಗೇಡ್ ಕಾರಣವಾಗಿದೆ. ಆದ್ರೆ ಬಡವರಿಗೆ, ಹಿಂದುಳಿದವರಿಗೆ ನ್ಯಾಯ ಕೊಡಿಸುವುದು ಬ್ರಿಗೇಡ್ ಉದ್ದೇಶ. ಬ್ರಿಗೇಡ್ ಚಟುವಟಿಕೆಗಳನ್ನ ನಿಲ್ಲಿಸುವಂತೆ ಅಮಿತ್ ಷಾ ಎಲ್ಲೂ ಹೇಳಿಲ್ಲ. ಕೇವಲ ವದಂತಿ ಹಬ್ಬಿಸಲಾಗುತ್ತಿದೆ ಎಂದು ವಿರೂಪಾಕ್ಷಪ್ಪ ಹೇಳಿದ್ರು.

    ಬ್ರಿಗೇಡ್ ಬಲಗೊಳಿಸಲು ಮೇ 8ರಂದು ರಾಯಚೂರಿನಲ್ಲಿ ರಾಜ್ಯ ಕಾರ್ಯಕಾರಣಿ ಸಭೆ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ವಿಧಾನಸಭಾ ಕ್ಷೇತಗಳಲ್ಲಿ ಯುವ ಬ್ರಿಗೇಡ್ ಸ್ಥಾಪನೆ ಮಾಡುತ್ತೇವೆ. ಜೂನ್ 18ಕ್ಕೆ ಮೈಸೂರಿನಲ್ಲಿ ಬೃಹತ್ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ ಅಂದ್ರು .

    ಜುಲೈನಲ್ಲಿ ರಾಜ್ಯದ ಎಲ್ಲಾ ಪಿಯು ಕಾಲೇಜಿನ 10,026 ವಿದ್ಯಾರ್ಥಿಗಳಿಗೆ ಪುರಸ್ಕಾರ ಹಮ್ಮಿಕೊಂಡಿದ್ದು, ಕೇಂದ್ರ ಸಚಿವರಾದ ಅಮಿತ್ ಷಾ ಅಥವಾ ರಾಜನಾಥ್ ಸಿಂಗ್‍ರಿಂದ ಪ್ರತಿ ಕಾಲೇಜಿನ ಇಬ್ಬರು ಮೆರಿಟ್ ವಿದ್ಯಾರ್ಥಿಗಳಿಗೆ ಪುರಸ್ಕಾರ ಮಾಡಲಾಗುವುದು ಅಂತ ವಿರೂಪಾಕ್ಷಪ್ಪ ಹೇಳಿದರು.