Tag: K.Supraja

  • 13 ವರ್ಷದ ಬಾಲಕಿ ಮೇಲೆ 80 ಮಂದಿ 8 ತಿಂಗಳಿಂದ ಅತ್ಯಾಚಾರ

    ಹೈದರಾಬಾದ್: 13 ವರ್ಷದ ಬಾಲಕಿಯ ಮೇಲೆ 80 ಮಂದಿ ಕಾಮುಕರು 8 ತಿಂಗಳಿನಿಂದ ಅತ್ಯಾಚಾರ ಎಸಗಿರುವ ಘಟನೆ ಆಂಧ್ರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

    ಗುಂಟೂರಿನ ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದು, ವಿಜಯವಾಡ, ಹೈದರಾಬಾದ್, ಕಾಕಿನಾಡ ಮತ್ತು ನೆಲ್ಲೂರು ಸೇರಿದಂತೆ ವಿವಿಧೆಡೆಯಲ್ಲಿ ಬಿ.ಟೆಕ್ ವಿದ್ಯಾರ್ಥಿ ಸೇರಿದಂತೆ 10 ಮಂದಿ ಕಾಮುಕರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಪೊಲೀಸರು ಒಂದು ಕಾರು, 53 ಮೊಬೈಲ್‌ಗಳು, 3 ಆಟೋಗಳು ಮತ್ತು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ತವರಿನಲ್ಲಿ 1,300 ಕೋಟಿ ಮೌಲ್ಯದ ಹೆರಾಯಿನ್ ವಶ

    STOP RAPE

    ಏನಿದು ಘಟನೆ?: ಜೂನ್ 2021ರಲ್ಲಿ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಆಸ್ಪತ್ರೆಯಲ್ಲಿ ಬಾಲಕಿಯ ತಾಯಿಯೊಂದಿಗೆ ಸ್ನೇಹ ಬೆಳೆಸಿದ ಸವರ್ಣ ಕುಮಾರಿ ಎಂಬ ಮಹಿಳೆ ಆ ಬಾಲಕಿಯನ್ನು ದತ್ತು ಪಡೆದಿದ್ದಳು. ಹುಡುಗಿಯ ತಾಯಿ ಕೋವಿಡ್-19ನಿಂದ ಮೃತಪಟ್ಟನಂತರ ಆಕೆಯ ತಂದೆಗೆ ವಿಷಯ ತಿಳಿಸದೇ ಸ್ವರ್ಣಕುಮಾರಿಯೇ ಬಾಲಕಿಯನ್ನು ಕರೆದುಕೊಂಡು ಹೋಗಿದ್ದರು. ಇದನ್ನೂ ಓದಿ: ಲಾರಿಯಡಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ!

    crime

    ಆಗಸ್ಟ್ 2021ರಲ್ಲಿ ಹುಡುಗಿಯ ತಂದೆ ಪೊಲೀಸರನ್ನು ಸಂಪರ್ಕಿಸಿ ತಮ್ಮ ಮಗಳು ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದರು. ಇದರ ಆಧಾರದ ಮೇಲೆ ಪೊಲೀಸರು ಪ್ರಮುಖ ಆರೋಪಿ ಮಹಿಳೆ ಸವರ್ಣ ಕುಮಾರಿ ಎಂದು ಗುರುತಿಸಿದ್ದರು. 2022ರ ಜನವರಿ ಮಾಹೆಯಲ್ಲಿ ಈ ಪ್ರಕರಣದ ಮೊದಲ ಹಂತದ ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ ಇನ್ನಷ್ಟು ಆರೋಪಿಗಳನ್ನೂ ಬಂಧಿಸಿದ್ದು, ಬಾಲಕಿಯನ್ನು ರಕ್ಷಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರಿದಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಾಸ್ಟರ್ ಮೈಂಡ್ ನಾನಲ್ಲ, ಗಲಭೆಗೆ ನಾನು ಕಾರಣನಲ್ಲ – ಅಜ್ಞಾತ ಸ್ಥಳದಿಂದ ವೀಡಿಯೋ ಬಿಟ್ಟ ವಾಸಿಂ

    CRIME 2

    ತನಿಖೆ ವೇಳೆ ಬಾಲಕಿ ಹೇಳಿದ್ದೇನು?: ಅಪ್ರಾಪ್ತ ಬಾಲಕಿಯನ್ನು ವಿಚಾರಣೆಗೆ ಒಳಪಡಿಸಿದಾಗ ಭಯಾನಕ ಸತ್ಯಗಳು ಬೆಳಕಿಗೆ ಬಂದಿವೆ. ಕಳೆದ 8 ತಿಂಗಳಿನಿಂದ ಆಕೆಯನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳಲು ಆಂಧ್ರಪ್ರದೇಶ ಮತ್ತು ತೆಲಂಗಾಣದ ವಿವಿಧ ವೇಶ್ಯಾಗೃಹಗಳಿಗೆ ಕಳುಹಿಸಲಾಗಿತ್ತು. ಬಾಲಕಿಯನ್ನು ಕರೆದೊಯ್ದಿದ್ದ ಸವರ್ಣ ಕುಮಾರಿ ವೇಶ್ಯಾವಾಟಿಕೆಗೆ ಬಲವಂತಪಡಿಸಿದ್ದರು ಎಂದು ಬಾಲಕಿ ಹೇಳಿಕೊಂಡಿದ್ದಾರೆ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಪೊಲೀಸರು 80 ಆರೋಪಿಗಳನ್ನು ಗುರುತಿಸಿದ್ದು, ಅವರನ್ನು ಬಂಧಿಸಲು ಪ್ರಾರಂಭಿಸಿದ್ದಾರೆ. ಅವರಲ್ಲಿ ಕೆಲವರು ಕಿಂಗ್‌ಪಿನ್‌ಗಳು, 35 ಪಿಂಪ್‌ಗಳು ಮತ್ತು ಉಳಿದವರು ಗ್ರಾಹಕರಾಗಿದ್ದಾರೆ. ಪರಾರಿಯಾಗಿರುವ ಇನ್ನೂ ಕೆಲವು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಈ ಪ್ರಕರಣದ ಓರ್ವ ಆರೋಪಿ ಲಂಡನ್‌ನಲ್ಲಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಸುಪ್ರಜಾ ತಿಳಿಸಿದ್ದಾರೆ.