Tag: K.Shivanagouda Naik

  • ಕೆ.ಶಿವನಗೌಡ ನಾಯಕ್ ಕೊರಳಲ್ಲಿ ನವಿಲುಗರಿ ಹಾರ – ವಿವಾದದಲ್ಲಿ ಸಿಲುಕಿದ ಮಾಜಿ ಸಚಿವ

    ಕೆ.ಶಿವನಗೌಡ ನಾಯಕ್ ಕೊರಳಲ್ಲಿ ನವಿಲುಗರಿ ಹಾರ – ವಿವಾದದಲ್ಲಿ ಸಿಲುಕಿದ ಮಾಜಿ ಸಚಿವ

    ರಾಯಚೂರು: ಮಾಜಿ ಸಚಿವ ಕೆ.ಶಿವನಗೌಡ ನಾಯಕ್ (K Shivanagouda Naik) ಈಗ ನವಿಲುಗರಿ  (Peacock Feather) ಹಾರ ವಿವಾದದಲ್ಲಿ ಸಿಲುಕಿದ್ದಾರೆ. ಜುಲೈ 14 ರಂದು ತಮ್ಮ ಹುಟ್ಟುಹಬ್ಬದ ಸಂಭ್ರಮದ ವೇಳೆ ನವಿಲುಗರಿಯ ಹಾರ ಧರಿಸಿದ ಫೋಟೋಗಳು ಎಲ್ಲೆಡೆ ವೈರಲ್ ಆಗಿವೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಆರೋಪದಲ್ಲಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಶಿವನಗೌಡ ನಾಯಕ್ ವಿರುದ್ಧ ದೂರು ನೀಡಿದ್ದಾರೆ.

    ಸಾಮಾಜಿಕ ಕಾರ್ಯಕರ್ತ ಕಲ್ಲಹಳ್ಳಿ ಇಮೇಲ್ ಮೂಲಕ ದೂರು ನೀಡಿದ್ದು, ರಾಷ್ಟ್ರಪಕ್ಷಿ ನವಿಲಿನ ಗರಿಯಿಂದ ತಯಾರಿಸಿದ ಹಾರವನ್ನ ಧರಿಸಿ ಸಾರ್ವಜನಿಕವಾಗಿ ಪ್ರದರ್ಶನ ಮಾಡಲಾಗಿದೆ. ಇದರಿಂದ ಸಾರ್ವಜನಿಕರಲ್ಲಿ ತಪ್ಪು ಸಂದೇಶ ಮೂಡಿ ಇತರರು ಕೂಡ ಪ್ರೇರಿತರಾಗುವ ಅಪಾಯವಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನ ಮಾಜಿ ಸಚಿವ ಶಿವನಗೌಡ ನಾಯಕ್ ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ನವಿಲು ಗರಿಯ ಮೂಲ ಪತ್ತೆ ಹಚ್ಚಿ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ತಮ್ಮೂರಿನ ರಸ್ತೆಗಾಗಿ ಪ್ರಧಾನಿ ಮೋದಿಗೆ ಪತ್ರ ಬರೆದ 8ನೇ ತರಗತಿ ವಿದ್ಯಾರ್ಥಿನಿ

    ಶಿವನಗೌಡ ನಾಯಕ್ ಆಪ್ತರಾದ ಬೆಂಗಳೂರಿನ ಕೆಲ ಯುವಕರು ನವಿಲುಗರಿಯ ಹಾರವನ್ನ ಹಾಕಿ ಸನ್ಮಾನಿಸಿದ್ದಾರೆ. ಪ್ರಕರಣ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೆ.ಶಿವನಗೌಡ ನಾಯಕ್, ಹುಟ್ಟುಹಬ್ಬ ಹಿನ್ನೆಲೆ ಶುಭಾಶಯ ಕೋರಲು ಮನೆಗೆ ಸುಮಾರು ಜನ ಬಂದಿದ್ದರು. ಆಗ ಬಹುಶಃ ಬೆಂಗಳೂರಿನ ಕೆಲ ಕಾರ್ಪೊರೇಟರ್‌ಗಳು ನವಿಲುಗರಿ ಹಾರ ಹಾಕಿದ್ದಾರೆ. ಆ ಸಮಯದಲ್ಲಿ ನಾನು ಅಷ್ಟಾಗಿ ಗಮನಿಸಿರಲಿಲ್ಲ. ಅಸಲಿ ನವಿಲು ಗರಿಯ ಹಾರ ಅದು. ಯಾರೋ ದೂರು ನೀಡಿದ್ದಾರೆ ಎಂದು ತಿಳಿಯಿತು. ಹಾರವನ್ನು ತೆಗೆದು ಇಟ್ಟಿದ್ದೇನೆ. ವಿಚಾರಣೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಬಂದಾಗ ಹಾರವನ್ನ ಮರಳಿಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉದ್ದೇಶಪೂರ್ವಕವಾಗಿ ಸಿಲುಕಿಸಲಾಗಿದೆ, ನನಗೂ ಕೊಲೆಗೂ ಯಾವುದೇ ಸಂಬಂಧವಿಲ್ಲ: ಬೈರತಿ ಬಸವರಾಜ್‌

  • ವಿಜಯೇಂದ್ರ ಸಿಎಂ ಆಗೋದನ್ನ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ – ಕೆ.ಶಿವನಗೌಡ ನಾಯಕ್

    ವಿಜಯೇಂದ್ರ ಸಿಎಂ ಆಗೋದನ್ನ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ – ಕೆ.ಶಿವನಗೌಡ ನಾಯಕ್

    ರಾಯಚೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಈ ರಾಜ್ಯದ ಮುಖ್ಯಮಂತ್ರಿ ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ವಿಜಯೇಂದ್ರ ಮುಂದೆ ಸಿಎಂ ಆಗೇ ಆಗುತ್ತಾರೆ ಎಂದು ಮಾಜಿ ಸಚಿವ ಕೆ.ಶಿವನಗೌಡ ನಾಯಕ್ (K Shivanagouda Naik) ಹೇಳಿದ್ದಾರೆ.ಇದನ್ನೂ ಓದಿ: ವಿಶೇಷ ಕಾರ್ಯಾಚರಣೆ – ರಾತ್ರಿ ಕುಡುಕರಿಗೆ ಚಳಿ ಬಿಡಿಸಿದ ಗದಗ್‌ ಎಸ್‌ಪಿ

    ರಾಯಚೂರಿನ (Raichuru) ಮಾನ್ವಿಯಲ್ಲಿ (Manvi) ಆಯೋಜಿಸಲಾಗಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಈಗ ರಾಜ್ಯಾಧ್ಯಕ್ಷರಾಗಿದ್ದಾರೆ. ಮುಂದೆ ಒಂದು ದಿನ ಸಿಎಂ ಆಗಬೇಕು. ಅಧಿಕಾರದ ಕತ್ತಿ ಹಿಡಿದು ಸರ್ಕಾರವನ್ನು ತರಬೇಕಿದೆ. ನೀವು ಅಧಿಕಾರಕ್ಕೆ ಬಂದು ನಮಗೆ ನವಲಿ ಜಲಾಶಯ ಮಾಡಿ, ಹತ್ತಾರು ಕೆರೆಗಳನ್ನ ಮಾಡಿ ನೀರು ತುಂಬಿಸಬೇಕು ಎಂದರು.

    ಜಿಲ್ಲೆಯಲ್ಲಿ ಜನ ಏಮ್ಸ್ ಹೋರಾಟ ನಿರಂತರವಾಗಿ ಮಾಡುತ್ತಿದ್ದಾರೆ. ವಿಜಯೇಂದ್ರ ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi), ಜೆ.ಪಿ ನಡ್ಡಾ, ಅಮಿತ್ ಶಾ ಅವರ ಮನವೊಲಿಸಿ ಏಮ್ಸ್ ತರಬಹುದು. ಅದು ವಿಜಯೇಂದ್ರ ಅವರಿಂದ ಸಾಧ್ಯವಿದೆ ಎಂದು ಹೇಳಿದರು.ಇದನ್ನೂ ಓದಿ: Bihar | ಗಂಗಾ ನದಿಯಲ್ಲಿ ದೋಣಿ ಮಗುಚಿ ಮೂವರು ಸಾವು – ನಾಲ್ವರು ನಾಪತ್ತೆ

  • ಪಕ್ಷ ಬಿಟ್ಟ ಕಾರ್ಯಕರ್ತನಿಗೆ ನಯವಾದ ಬೆದರಿಕೆ ಹಾಕಿ ಮನವೊಲಿಸಿದ ಶಿವನಗೌಡ ನಾಯ್ಕ್

    ಪಕ್ಷ ಬಿಟ್ಟ ಕಾರ್ಯಕರ್ತನಿಗೆ ನಯವಾದ ಬೆದರಿಕೆ ಹಾಕಿ ಮನವೊಲಿಸಿದ ಶಿವನಗೌಡ ನಾಯ್ಕ್

    ರಾಯಚೂರು: ರಾಯಚೂರು (Raichur) ಜಿಲ್ಲೆಯ ದೇವದುರ್ಗ (Devadurga) ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರ ಪಕ್ಷಾಂತರ ಪರ್ವ ನಡೆದಿದೆ. ಪ್ರತಿನಿತ್ಯ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಕಾರ್ಯಕರ್ತರ ಸೇರ್ಪಡೆ ನಿರಂತರ ನಡೆಯುತ್ತಿದೆ. ಬಿಜೆಪಿ ಬಿಡಲು ಮುಂದಾಗಿರುವ ಕಾರ್ಯಕರ್ತರ ಮನವೊಲಿಸಲು ಶಾಸಕ ಕೆ.ಶಿವನಗೌಡ ನಾಯ್ಕ್ (K.Shivanagouda Naik) ನಯವಾಗಿ ಬೆದರಿಕೆ (Threat) ಹಾಕಿದ್ದಾರೆ ಎನ್ನಲಾದ ಆಡಿಯೋ ಈಗ ವೈರಲ್ ಆಗಿದೆ.

    ಬಿಜೆಪಿ (BJP) ಕಾರ್ಯಕರ್ತ ಶಿವು (Shivu) ಮತ್ತು ಶಾಸಕ ಕೆ.ಶಿವನಗೌಡ ನಾಯ್ಕ್ ನಡುವಿನ 8 ನಿಮಿಷ 56 ಸೆಕೆಂಡ್‌ಗಳ ಸಂಭಾಷಣೆಯ ಆಡಿಯೋ ಜಿಲ್ಲೆಯ ತುಂಬಾ ಹರಿದಾಡುತ್ತಿದೆ. ಇದನ್ನೂ ಓದಿ: ಬಿಜೆಪಿ ನನ್ನ ಬಾಡಿಗೆ ಮನೆ, ಸ್ವಂತ ಮನೆಯಾದ ಕಾಂಗ್ರೆಸ್‌ಗೆ ಮರಳುವೆ- ಗೋಪಾಲಕೃಷ್ಣ 

    ಬಿಜೆಪಿಗೆ ಬರೀ ರಾಜೀನಾಮೆ ಅಷ್ಟೇ ನೀಡಿದ್ದೀಯಾ. ಬೇರೆ ಪಾರ್ಟಿಗೆ ಇನ್ನೂ ಸೇರಿಲ್ಲ. ನಮ್ಮಲ್ಲಿಯೇ ಉಳಿದುಕೊಳ್ಳಿ. ಒಂದು ತಪ್ಪು ಮಾಡಿದ್ದೀರಿ, ಎರಡನೇ ತಪ್ಪು ಮಾಡಬೇಡಿ. ನಿಮಗೆ ಒಳ್ಳೆಯದಾಗುವುದಿಲ್ಲ. ಹಿಂದೆಯೂ ಒಳ್ಳೆಯದಾಗಿಲ್ಲ ಅಂದರೆ ಮುಂದೆಯೂ ನಿಮಗೆ ಒಳ್ಳೆಯದಾಗುವುದಿಲ್ಲ. ಆ ಕೆಲಸ ಮಾಡಬೇಡಿ. ಇಲ್ಲೇ ಇದ್ದು ಏನಾದರೂ ಸರಿ ಮಾಡಿಕೊಂಡು ಹೋಗೋಣ ಎಂದು ಮನವೊಲಿಸಿದ್ದಾರೆ. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಸೋಲಿಸಲು ಜಿದ್ದಿಗೆ ಬಿದ್ದಿರುವ ಬಿಜೆಪಿಗೆ ಅಭ್ಯರ್ಥಿ ಆಯ್ಕೆಯ ಟೆನ್ಶನ್

    ನಾನು ನಿಮಗಾಗಿ ಕಾಯುವುದಾ ಬೇಡವಾ? ನಮ್ಮನ್ನು ಬಿಟ್ಟು ಮುಂದಕ್ಕೆ ಹೋಗ್ತೀರಾ? ನಮ್ಮನ್ನು ಬಿಟ್ಟು ಹೋದ ಬಹಳ ಮಂದಿ ಏನೇನಾಗಿದ್ದಾರೆ ನೋಡಿಕೊಳ್ಳಿ ಎಂದು ನಯವಾಗಿ ಬೆದರಿಕೆ ಹಾಕಿದ್ದಾರೆ. ಎಲ್ಲಾ ಪಕ್ಷಗಳಲ್ಲಿ  ಹೀಗೆ ಇರುತ್ತವೆ. ಆ ತಪ್ಪು ನೀವೂ ಮಾಡಬೇಡಿ ಎಂದು ಶಾಸಕ ಕೆ.ಶಿವನಗೌಡ ನಾಯ್ಕ್ ಕಾರ್ಯಕರ್ತನ ಜೊತೆ ಮಾತನಾಡಿದ್ದಾರೆ. ಇದನ್ನೂ ಓದಿ: ಕ್ಲೈಮ್ಯಾಕ್ಸ್ ಹಂತ ತಲುಪಿದ ಹಾಸನ ಟಿಕೆಟ್ ದಂಗಲ್ – ಇಂದು ಹೆಚ್‌ಡಿಕೆ, ರೇವಣ್ಣ ಸಂಧಾನ