Tag: K. Shadakshari

  • ಈ 5 ಗ್ಯಾರಂಟಿಗಳು ನಮ್ಮನ್ನು ಮಲಗಿಸಿ ಬಿಟ್ಟಿವೆ: ಕಾಂಗ್ರೆಸ್ ಶಾಸಕ ಅಸಮಾಧಾನ

    ಈ 5 ಗ್ಯಾರಂಟಿಗಳು ನಮ್ಮನ್ನು ಮಲಗಿಸಿ ಬಿಟ್ಟಿವೆ: ಕಾಂಗ್ರೆಸ್ ಶಾಸಕ ಅಸಮಾಧಾನ

    ತುಮಕೂರು: ಈ 5 ಗ್ಯಾರಂಟಿಗಳು (Guarantee) ನಮ್ಮನ್ನು ಮಲಗಿಸಿ ಬಿಟ್ಟಿವೆ ಎಂದು ಸ್ವತಃ ತಿಪಟೂರು ಕಾಂಗ್ರೆಸ್ (Congress) ಶಾಸಕ ಕೆ ಷಡಕ್ಷರಿ (K Shadakshari) ಬೇಸರ ವ್ಯಕ್ತಪಡಿಸಿದ್ದಾರೆ.

    ತಿಪಟೂರಿನಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಿಪಟೂರು ಜಿಲ್ಲೆ ಮಾಡಬೇಕು ಎಂಬ ಹೋರಾಟ ನನ್ನದು. ಆದರೆ ಮುಂದಿನ ಬಜೆಟ್ ವರೆಗೆ ಸರ್ಕಾರದ ಬಳಿ ಹಣ ಇಲ್ಲ. ಈ 5 ಗ್ಯಾರಂಟಿಗಳು ನಮ್ಮನ್ನು ಮಲಗಿಸಿ ಬಿಟ್ಟಿವೆ ಎಂದು ಬೇಸರಿಸಿದರು. ಇದನ್ನೂ ಓದಿ: ಇರುವುದೊಂದೇ ಸನಾತನ ಧರ್ಮ, ಉಳಿದೆಲ್ಲವೂ ಪಂಥಗಳು: ಯೋಗಿ

    ನಾನು ಮುಖ್ಯಮಂತ್ರಿಗಳ ಬಳಿ ತಿಪಟೂರು ಜಿಲ್ಲೆ ಮಾಡುವ ಬೇಡಿಕೆ ಇಟ್ಟಿದ್ದೆ. ಆದರೆ ಮುಖ್ಯಮಂತ್ರಿಗಳು ಅದನ್ನು ಒಪ್ಪಿಕೊಂಡಿಲ್ಲ. ಹೊಸದಾಗಿ ಮಾಡಿದ ಜಿಲ್ಲೆಗಳಿಗೆ ಕುರ್ಚಿ, ಮೇಜು ಕೊಡೋದಕ್ಕೆನೇ ದುಡ್ಡಿಲ್ಲ. ಇನ್ನೂ ಹೊಸ ಜಿಲ್ಲೆ ಮಾಡೋಕಾಗುತ್ತಾ? ಎಂದು ನನ್ನನ್ನು ಸುಮ್ಮನಿರಿಸಿದ್ದಾರೆ. ಎಲ್ಲದಕ್ಕೂ ಈ 5 ಗ್ಯಾರಂಟಿಗಳೇ ಕಾರಣ ಎಂದು ವೇದಿಕೆ ಮೇಲೆ ಶಾಸಕ ಷಡಕ್ಷರಿ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ ವಿರುದ್ಧ ತನಿಖೆಗೆ ಆದೇಶ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಪ್ಪ.. ಅಪ್ಪ.. ನಂಗೆ ನೀನು ಬೇಕಪ್ಪ ಅಂತಾ ಫೇಸ್‍ಬುಕ್ ಮೊರೆ ಹೋದ ಶಾಸಕ ಕೆ. ಷಡಕ್ಷರಿ ಪುತ್ರ

    ಅಪ್ಪ.. ಅಪ್ಪ.. ನಂಗೆ ನೀನು ಬೇಕಪ್ಪ ಅಂತಾ ಫೇಸ್‍ಬುಕ್ ಮೊರೆ ಹೋದ ಶಾಸಕ ಕೆ. ಷಡಕ್ಷರಿ ಪುತ್ರ

    ತುಮಕೂರು: ಜಿಲ್ಲೆಯ ತಿಪಟೂರು ಶಾಸಕ ಕೆ. ಷಡಕ್ಷರಿ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಷಡಕ್ಷರಿ ಎರಡನೇ ಪತ್ನಿ ಮಗ ಆಕರ್ಷಣ್ ಷಡಕ್ಷರಿ, ತನಗೆ ಅಪ್ಪ ಬೇಕು ಎಂದು ಫೇಸ್‍ಬುಕ್ ಮೊರೆ ಹೋಗಿದ್ದಾರೆ.

    ಆಕರ್ಷಣ್ ತಮ್ಮ ಫೇಸ್‍ಬುಕ್ ಅಕೌಂಟ್‍ನಲ್ಲಿ ಶಾಸಕ ಷಡಕ್ಷರಿ ಜೊತೆಗೆ ಇರುವ ಫೋಟೋದೊಂದಿಗೆ ಅಪ್ಪ..ಅಪ್ಪ.. ನನಗೆ ನೀನು ಬೇಕಪ್ಪ ಎಂಬ ಹಾಡನ್ನು ರಿಮಿಕ್ಸ್ ಮಾಡಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋವನ್ನು ವಾಟ್ಸಪ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಪುತ್ರ ಆಕರ್ಷಣ್ ವಿಡಿಯೋದಿಂದಾಗಿ ಶಾಸಕ ಷಡಕ್ಷರಿ ಮುಜುಗರಕ್ಕೆ ಒಳಗಾಗಿದ್ದಾರೆ.

    ಷಡಕ್ಷರಿ ಅವರು ಮಧು ಎಂಬವರೊಂದಿಗೆ ಎರಡನೇ ಮದುವೆಯಾಗಿದ್ದು, ಆಕರ್ಷಣ್ ಷಡಕ್ಷರಿ ಇವರ ಮಗನಾಗಿದ್ದಾನೆ. ಆದ್ರೆ ಷಡಕ್ಷರಿ ಇದನ್ನು ಬಹಿರಂಗವಾಗಿ ಒಪ್ಪಿಕೊಳ್ಳುತ್ತಿಲ್ಲ. ಹಾಗಾಗಿ ಮಗ ಆಕರ್ಷಣ್ ತನಗೆ ಅಪ್ಪ ಬೇಕು ಎಂದು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಈಗ ಮತ್ತೆ ಫೇಸ್ ಬುಕ್ ಮೂಲಕ ಅಪ್ಪ ಬೇಕು ಎಂದು ಹೇಳುತ್ತಿದ್ದಾರೆ.