Tag: K.S. Puttannaiah

  • ಹಸಿರು ಶಾಲು, ಬಾವುಟ ಇಟ್ಟು ರೈತನಾಯಕನಿಗೆ ಪೂಜೆ – 11ನೇ ದಿನದ ಪ್ರಯುಕ್ತ ಹಲವು ಕಾರ್ಯಕ್ರಮ

    ಹಸಿರು ಶಾಲು, ಬಾವುಟ ಇಟ್ಟು ರೈತನಾಯಕನಿಗೆ ಪೂಜೆ – 11ನೇ ದಿನದ ಪ್ರಯುಕ್ತ ಹಲವು ಕಾರ್ಯಕ್ರಮ

    ಮಂಡ್ಯ: ಅಕಾಲಿಕ ನಿಧನ ಹೊಂದಿದ ರೈತನಾಯಕ, ಹೋರಾಟಗಾರ ಮತ್ತು ಶಾಸಕ ಕೆ.ಎಸ್. ಪುಟ್ಟಣ್ಣಯ್ಯನವರ 11ನೇ ದಿನದ ಕಾರ್ಯಕ್ರಮ ಇಂದು ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಕ್ಯಾತನಹಳ್ಳಿ ಗ್ರಾಮದ ಅವರ ತೋಟದಲ್ಲಿನ ಪುಟ್ಟಣ್ಣಯ್ಯ ಸಮಾಧಿಯ ಬಳಿ ಪುಟ್ಟಣ್ಣಯ್ಯ ಪತ್ನಿ ಸುನಿತಾ ಪುಟ್ಟಣ್ಣಯ್ಯ, ಪುತ್ರ ದರ್ಶನ್ ಪುಟ್ಟಣ್ಣಯ್ಯ, ಪುತ್ರಿಯರಾದ ಸ್ಮಿತಾ, ಅಕ್ಷತಾ ಹಾಗೂ ಕುಟುಂಬಸ್ಥರು ತೆರಳಿ ಸಾಂಕೇತಿಕವಾಗಿ ಪೂಜೆ ಸಲ್ಲಿಸಿದ್ದಾರೆ. ಪುಟ್ಟಣ್ಣಯ್ಯ ಅವರ ಫೋಟೋವನ್ನು ಹಸಿರು ಶಾಲಿನ ಮೇಲೆ ಇಟ್ಟು, ಸಮಾಧಿ ಮೇಲೆ ಹಸಿರು ಬಾವುಟ ನೆಟ್ಟು ಪೂಜೆ ಸಲ್ಲಿಸಲಾಗಿದೆ. ಅಷ್ಟೇ ಅಲ್ಲದೇ ತಂದೆ ಸಮಾಧಿ ಬಳಿ ಅವರ ಮಗ ಮತ್ತು ಹೆಣ್ಣು ಮಕ್ಕಳು ಗಿಡ ನೆಟ್ಟು ಗೌರವ ಸಲ್ಲಿಸಿದ್ದಾರೆ.

    `ತಿಥಿ ಬಿಡಿ ಸಸಿ ನೆಡಿ’ ಎಂಬ ಪುಟ್ಟಣ್ಣಯ್ಯ ಅವರ ಮಾತಿನಂತೆ ನಡೆಯುವ ಸಲುವಾಗಿ ಇಂದು ಹನ್ನೊಂದನೇ ದಿನದ ಕಾರ್ಯದ ನಿಮಿತ್ತ ವಿವಿಧ ಸಾಮಾಜಿಕ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಕ್ಯಾತನಹಳ್ಳಿ ಗ್ರಾಮದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ರಕ್ತದಾನ ಶಿಬಿರದಲ್ಲಿ ಮಿಮ್ಸ್ ಆಸ್ಪತ್ರೆಯ ರಕ್ತನಿಧಿ ಕೇಂದ್ರದಿಂದ ರಕ್ತ ಪಡೆಯಲಾಯಿತು. ಇದನ್ನು ಓದಿ: ರಾಜ್ಯದ 30 ಜಿಲ್ಲೆಗಳ ಮಣ್ಣಿನಿಂದ ಪುಟ್ಟಣ್ಣಯ್ಯ ಅವರ ಅಂತ್ಯಕ್ರಿಯೆ

    ಪುಟ್ಟಣ್ಣಯ್ಯ ಅಭಿಮಾನಿಗಳು, ಕಾರ್ಯಕರ್ತರು ಸ್ವಯಂ ಪ್ರೇರಿತವಾಗಿ ಆಗಮಿಸಿ ರಕ್ತದಾನ ಮಾಡಿದ್ದಾರೆ. ಸಂಜೆ ಪುಟ್ಟಣ್ಣಯ್ಯ ಅವರ ಗೌರವಾರ್ಥ ಹಲವು ಜನ ಸಾಧಕರಿಗೆ ಸನ್ಮಾನ ಕಾರ್ಯಕ್ರಮ, ನಾಟಕ ಹಾಗೂ ಸಸಿ ವಿತರಣೆ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ. ಇದನ್ನು ಓದಿ: ರೈತ ಮುಖಂಡ, ಮೇಲುಕೋಟೆ ಶಾಸಕ ಪುಟ್ಟಣ್ಣಯ್ಯ ವಿಧಿವಶ- ಅಂತಿಮ ದರ್ಶನ ಪಡೆದ ನಟ ದರ್ಶನ್

  • ಚಿತ್ರದಲ್ಲಿಯೂ ನಟಿಸಿ ಸೈ ಎನ್ನಿಸಿಕೊಂಡಿದ್ದ ರೈತ ಬಂಧು – ರೈತರ ಪರ ಖಡಕ್ ಡೈಲಾಗ್ ಹೊಡೆದಿದ್ದ ಪುಟ್ಟಣ್ಣಯ್ಯ

    ಚಿತ್ರದಲ್ಲಿಯೂ ನಟಿಸಿ ಸೈ ಎನ್ನಿಸಿಕೊಂಡಿದ್ದ ರೈತ ಬಂಧು – ರೈತರ ಪರ ಖಡಕ್ ಡೈಲಾಗ್ ಹೊಡೆದಿದ್ದ ಪುಟ್ಟಣ್ಣಯ್ಯ

    ಮಂಡ್ಯ: ರೈತ ಬಂಧು, ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ಚಿತ್ರದಲ್ಲಿಯೂ ನಟಿಸಿ ಸೈ ಎನ್ನಿಸಿಕೊಂಡಿದ್ದರು.

    ‘ಮಂಡ್ಯ ಸ್ಟಾರ್’ ಚಿತ್ರದಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಅವರು ನಟಿಸಿದ್ದಾರೆ. “ರೈತರಿಗೆ ಅನ್ಯಾಯ ಆದರೆ ಪ್ರಾಣ ಕೊಡೋಕು ಸಿದ್ಧ ಇದ್ದೇವೆ, ಪ್ರಾಣ ತೆಗೆಯೋಕು ಸಿದ್ಧ ಇದ್ದೇವೆ” ಎಂದು ಸಿನಿಮಾದಲ್ಲಿ ರೈತರ ಪರ ಖಡಕ್ ಡೈಲಾಗ್ ಹೊಡೆದಿದ್ದು, ಜನರ ಮನಸ್ಸು ಗೆದ್ದಿದ್ದರು. ಪರ್ವ ಎಂಆರ್‍ಕೆ ಅವರ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದ್ದು, ಲೋಕೇಶ್ ಅರ್ಚನಾ ಮತ್ತು ರಂಜಿತಾ ಲೀಡ್ ರೋಲ್ ನಲ್ಲಿ ಅಭಿನಯಿಸಿದ್ದರು. ಚಿತ್ರಕ್ಕೆ ಎಸ್ ಮನೋಜ್ ಸಂಗೀತ ನೀಡಿದ್ರು.

    ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ಭಾನುವಾರ ರಾತ್ರಿ ಕಬಡ್ಡಿ ಪಂದ್ಯ ವೀಕ್ಷಣೆ ವೇಳೆ ಹೃದಯಾಘಾತವಾಗಿ ವಿಧಿವಶರಾಗಿದ್ದಾರೆ. ರೈತರಿಗಾಗಿಯೇ ಬದುಕು ಸವೆಸಿದ ಮಾಣಿಕ್ಯವೊಂದು ಮರೆಯಾಗಿದೆ. ಮಕ್ಕಳು ವಿದೇಶದಿಂದ ಆಗಮಿಸುವ ಹಿನ್ನೆಲೆಯಲ್ಲಿ ಬುಧವಾರ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಕೆ.ಎಸ್ ಪುಟ್ಟಣ್ಣಯ್ಯ ಕರ್ನಾಟಕ ರೈತ ಸಂಘ ಕಂಡಂತಹ ಧೀಮಂತ ಹೋರಾಟಗಾರ. ರಾಜಕಾರಣಿಯಾಗಿದ್ದರೂ ಸರಳ ಜೀವಿಯಾಗಿ ಬದುಕನ್ನು ಸವೆಸಿದವರು. ಸ್ವತಃ ಕಬಡ್ಡಿ ಆಟಗಾರರಾಗಿದ್ದ ಪುಟ್ಟಣ್ಣಯ್ಯ ಅದನ್ನೇ ನೋಡುತ್ತಾ ಕೊನೆಯುಸಿರೆಳೆದಿದ್ದಾರೆ.

    ರೈತ ಚಳವಳಿಯ ಕೊಂಡಿಯೊಂದು ಅಸ್ತಂಗತವಾಗಿದೆ. ಶಾಸಕನಾಗಿದ್ದರೂ ಸರಳಜೀವಿಯಾಗಿಯೇ ಬದುಕ ಸವೆಸಿದ ಮಾಣಿಕ್ಯವೊಂದು ನಮ್ಮನ್ನಗಲಿದೆ. ರೈತರ ಬಗ್ಗೆ ಕಾಳಜಿಯಳ್ಳವರಾಗಿದ್ದ ಪುಟ್ಟಣ್ಣಯ್ಯ, ಎಸ್.ಡಿ. ಜಯರಾಂರ ಮಾರ್ಗದರ್ಶನದಲ್ಲಿ 1983ರಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಸಾಮಾನ್ಯ ಕಾರ್ಯಕರ್ತನಾಗಿ ಪಾದಾರ್ಪಣೆ ಮಾಡಿದರು. ಬಳಿಕ ಪಾಂಡವಪುರ ತಾಲೂಕು ರೈತ ಸಂಘದ ಅಧ್ಯಕ್ಷರಾಗಿ, ಮಂಡ್ಯ ಜಿಲ್ಲಾ ರೈತ ಸಂಘದ ಅಧ್ಯಕ್ಷರಾಗಿ ಹಾಗೂ ಮೈಸೂರು ವಿಭಾಗ ಮಟ್ಟದ ಸಂಘಟನಾ ಕಾರ್ಯದರ್ಶಿಗಳಾಗಿ ಆಯ್ಕೆಯಾದ್ರು. ನಂತರ 1999 ರಿಂದ 2012ರವರೆಗೆ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾಗಿ ದುಡಿದರು. ಬಳಿಕ `ಸರ್ವೋದಯ ಕರ್ನಾಟಕ ಪಕ್ಷ’ದಿಂದ ಪಾಂಡವಪುರ ಶಾಸಕರಾಗಿ ಆಯ್ಕೆಯಾಗಿದ್ದರು. ಇದನ್ನು ಓದಿ: ರೈತ ಮುಖಂಡ, ಮೇಲುಕೋಟೆ ಶಾಸಕ ಪುಟ್ಟಣ್ಣಯ್ಯ ವಿಧಿವಶ- ಅಂತಿಮ ದರ್ಶನ ಪಡೆದ ನಟ ದರ್ಶನ್