Tag: K S Eshwrappa

  • ಬಿಜೆಪಿಯವರ ಮೇಲೆಯೂ ಕೇಸ್ ಹಾಕಲಿ ಬೇಡ ಅನ್ನಲ್ಲ: ಕೆ.ಎಸ್ ಈಶ್ವರಪ್ಪ

    ಬಿಜೆಪಿಯವರ ಮೇಲೆಯೂ ಕೇಸ್ ಹಾಕಲಿ ಬೇಡ ಅನ್ನಲ್ಲ: ಕೆ.ಎಸ್ ಈಶ್ವರಪ್ಪ

    ಶಿವಮೊಗ್ಗ: ಬಿಜೆಪಿಯವರ ಮೇಲೆಯೂ ಕೇಸ್ ಹಾಕಲಿ ಬೇಡ ಅನ್ನುವುದಿಲ್ಲ. ಮೇಕೆದಾಟು ಯೋಜನೆ ಪಾದಯಾತ್ರೆಯಿಂದಲೇ ಕೋವಿಡ್ ಆರಂಭವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

    ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಶಾಲೆಗಳಿಗೆ 20 ದಿನ ರಜೆ ನೀಡುವಂತೆ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಆಗ್ರಹಿಸಿದ್ದರು. ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರೇ ಒಂದೇ ಸರಿ 20 ದಿನ ರಜೆ ತೆಗೆದುಕೊಂಡು ಏನು ಮಾಡುತ್ತೀರಿ. ನಿಮಗೆ ಗೊತ್ತಾ ಮಕ್ಕಳಿಗೆ ಎಷ್ಟರಮಟ್ಟಿಗೆ ತೊಂದರೆ ಆಗುತ್ತದೆ. ನಾನು ಶಾಲಾ ಮಕ್ಕಳನ್ನೇ ಈ ಬಗ್ಗೆ ವಿಚಾರಿಸಿದ್ದೇನೆ. ಅವರು ಶಾಲೆಯಲ್ಲಿ ಹಾಜರಾತಿ ಕಡಿಮೆ ಆಗುತ್ತಿದ್ದು, ಓದಿಗೆ ತೊಂದರೆ ಆಗುತ್ತದೆ. ಶಾಲೆ ಬೇಕು ಎನ್ನುವ ಮಾತನ್ನು ಮಕ್ಕಳೇ ಹೇಳುತ್ತಿದ್ದಾರೆ. ಎಲ್ಲಿ ಕೊರೊನಾ ಜಾಸ್ತಿ ಇದೆಯೋ ಅಲ್ಲಿ ರಜೆ ಕೊಟ್ಟಿದ್ದೇವೆ. ನಗರದ ವ್ಯಾಪ್ತಿಯಲ್ಲಿ ಜಾಸ್ತಿ ಇರುವ ಕಾರಣ 3 ದಿನ ರಜೆ ನೀಡಿದ್ದೇವೆ ಎಂದರು. ಇದನ್ನೂ ಓದಿ: ಹಿಂದೂ ಮಹಿಳೆ, ಮುಸ್ಲಿಂ ವ್ಯಕ್ತಿ ರೈಲಿನಲ್ಲಿ ಪ್ರಯಾಣ – ಲವ್ ಜಿಹಾದ್ ಅಂತ ಠಾಣೆಗೆ ಎಳೆದೊಯ್ದ ಭಜರಂಗದಳ ಸದಸ್ಯರು

    ಕೊರೊನಾ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಂತಾ ಹುಡುಕಿಕೊಂಡು ಬರುವುದಿಲ್ಲ. ಯಾರೂ ಯಾರೂ ದೊಡ್ಡ ಸಂಖ್ಯೆಯಲ್ಲಿ ಸೇರುತ್ತಾರೋ ಅಲ್ಲಿ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಯಾರಿಗೆ ಕೇಸ್ ಹಾಕಬೇಕು, ಬಿಡಬೇಕು ಎಂಬುದನ್ನು ಸಂಬಂಧಪಟ್ಟ ಇಲಾಖೆಯವರು ನೋಡಿಕೊಳ್ಳುತ್ತಾರೆ. ಬಿಜೆಪಿಯವರ ಮೇಲೆಯೂ ಕೇಸ್ ಹಾಕಲಿ ಬೇಡ ಅನ್ನುವುದಿಲ್ಲ. ಮೇಕೆದಾಟು ಯೋಜನೆ ಪಾದಯಾತ್ರೆಯಿಂದಲೇ ಕೋವಿಡ್ ಆರಂಭವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ತಜ್ಞರು ಗ್ರೀನ್ ಸಿಗ್ನಲ್ ಕೊಟ್ರೆ ಬೆಂಗಳೂರಿನಲ್ಲಿ ಮರು ದಿನವೇ ಶಾಲೆ ಪ್ರಾರಂಭ: ಬಿಸಿ ನಾಗೇಶ್

    ಸಾವಿರಾರು ಜನ ಒಟ್ಟಿಗೆ ಸೇರಿ ಪಾದಯಾತ್ರೆ ನಡೆಸಿದ್ದರಿಂದ ಸಮಸ್ಯೆ ಆಗಿದೆ. ಕೈ ನಾಯಕರು ಯಾರೂ ಮಾಸ್ಕ್ ಹಾಕಿಲ್ಲ, ಅವರೆಲ್ಲರ ಮೇಲೆ ಕೇಸ್ ಹಾಕಿ ಜನರಿಗೆ ತೊಂದರೆ ಆಗದಿರುವಂತಹ ದಿಕ್ಕಿನಲ್ಲಿ ಗಮನಿಸಲಿ. ನಾವು ತಪ್ಪು ಮಾಡಿದರೇ ನಮ್ಮ ಮೇಲೆಯೂ ಕೇಸ್ ಹಾಕಲಿ ಯಾರೂ ಬೇಡ ಅಂತಾರೆ. ಇವತ್ತು ಎಲ್ಲಾ ಮಕ್ಕಳಿಗೂ ಕೋವಿಡ್ ಹರಡುತ್ತಿದೆ. ಕಾಂಗ್ರೆಸ್, ಬಿಜೆಪಿ ಮೇಲೆ ಬಿಜೆಪಿ, ಕಾಂಗ್ರೆಸ್ ಮೇಲೆ ಆಪಾದನೆ ಮಾಡಲು ಮೊದಲು ಎಲ್ಲರೂ ಜಾಗೃತರಾಗಿರಬೇಕು ಎಂದು ಸಿಡಿದರು.

  • ಡಿಕೆ ಶಿವಕುಮಾರ್ ಎಲ್ಲೆಲ್ಲೋ ಮಲಗಿಕೊಂಡು ಬಂದವರು: ಕೆ.ಎಸ್.ಈಶ್ವರಪ್ಪ

    ಡಿಕೆ ಶಿವಕುಮಾರ್ ಎಲ್ಲೆಲ್ಲೋ ಮಲಗಿಕೊಂಡು ಬಂದವರು: ಕೆ.ಎಸ್.ಈಶ್ವರಪ್ಪ

    -ಲೂಟಿ ಮಾಡೋದರಲ್ಲಿ ಡಿಕೆಶಿ ಅನುಭವಸ್ಥರು

    ಚಿಕ್ಕಬಳ್ಳಾಪುರ: ಗ್ರಾಮೀಣಾಭಿವೃದ್ದಿ ಇಲಾಖೆಯಲ್ಲಿ ಅವ್ಯವಹಾರ ಆಗಿದೆ. ನರೇಗಾ ಯೋಜನೆಯಲ್ಲಿ ಅಕ್ರಮ ನಡೆದಿದೆ ಅಂತ ಬಹಿರಂಗ ಸವಾಲು ಹಾಕಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

    ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ನರೇಗಾ ಕಾಮಗಾರಿಗಳನ್ನ ಪರಿಶೀಲಿಸಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ ಡಿಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ ಕೆ.ಎಸ್.ಈಶ್ವರಪ್ಪ, ನಾನು ಹಾಗೂ ನಮ್ಮ ಇಲಾಖೆ ಮಲಗಿದೆ ಅಂತ ಡಿಕೆಶಿ ಹೇಳಿದ್ದಾರೆ. ಆದರೆ ಡಿಕೆಶಿ ಎಲ್ಲೆಲ್ಲೋ ಹೋಗಿ ಮಲಗಿ ಬಂದಿದ್ರು. ನಾನು ಅದರ ಸುದ್ದಿಗೆ ಹೋಗಲ್ಲ. ನಮ್ಮ ಇಲಾಖೆ ಮಲಗಿಲ್ಲ ಅನ್ನೋದಕ್ಕೆ ನಮ್ಮ ಇಲಾಖಾಧಿಕಾರಿಗಳು ಮತ್ತು ನಾನು ಓಡಾಡ್ತಿರೋದೆ ಸಾಕ್ಷಿ, ಸುಮ್ನೆ ಏನೇನೋ ಹೇಳಿಕೆ ನೀಡಿ ಉತ್ತರ ಕುಮಾರನ ಪೌರುಷ ತೋರಿಸಬೇಡಿ ಎಂದು ವ್ಯಂಗ್ಯ ಮಾಡಿದರು.

    ಡಿಕೆ ಶಿವಕುಮಾರ್ ಲೂಟಿ ಮಾಡಿದೊರಲ್ಲಿ ಅನುಭವಸ್ಥರು. ನಾನು ಅವರ ಜೊತೆ ಚರ್ಚೆಗೆ ಎಲ್ಲಿಗೆ ಬರಲಿ? ಎಲ್ಲೆಲ್ಲಿ ಲೂಟಿ ಮಾಡಿ ನಿಮಗೆ ಅಭ್ಯಾಸ ಇದೆಯಲ್ಲಾ ನನಗೆ ಹೇಳಿಕೊಡಿ. ನಾನು ಬಿಗಿ ಮಾಡ್ತೀನಿ. ನಾನು ಹೊಸದಾಗಿ ಈ ಇಲಾಖೆಗೆ ಬಂದಿದ್ದೀನಿ. ನನ್ನ ಇಲಾಖೆಯ ನರೇಗಾದಲ್ಲಿ ಎಲ್ಲೆಲ್ಲಿ ಲೂಟಿ ಆಗಿದೆ ಅಂತ ಹೇಳಿ, ನನ್ನ ಗಮನಕ್ಕೆ ಬಂದು ಒಂದು ಪೈಸೆ ಏನಾದ್ರೂ ದುರಪಯೋಗ ಆಗಿದ್ರೆ ನಾನು ನಿಮ್ಮ ಚಾಲೆಂಜ್ ಸ್ವೀಕರಿಸುತ್ತೇನೆ ಎಂದರು.

    ಎಲ್ಲೆಲ್ಲಿ ಲೂಟಿ ಆಗಿದೆ ಅಂತ ಹೇಳಿ ಬಿಗಿ ಮಾಡ್ತೀನಿ ಅದು ಬಿಟ್ಟು ರಾಜಕಾರಣ ಮಾಡಬೇಡಿ. ಹೊಸದಾಗಿ ಕೆಪಿಸಿಸಿ ಅಧ್ಯಕ್ಷರಾಗಿದ್ದೀನಿ ಅಂತ ತೋರಿಸಿಕೊಳ್ಳೋಕೆ ನಾಟಕ ಮಾಡಬೇಡಿ. ನರೇಗಾದಲ್ಲೂ ಯಾಕೆ ರಾಜಕೀಯ ಮಾಡ್ತೀರಿ? ಜನರಿಗೆ ಕೆಲಸ ಕೊಡಬೇಕು ಅಂತ ತೀರ್ಮಾನ ಮಾಡಿದ್ದೀವಿ, ಜನ ಖುಷಿಯಿಂದ ಕೆಲಸ ಮಾಡ್ತಿದ್ದಾರೆ ಎಂದು ತಿರುಗೇಟು ನೀಡಿದರು.