Tag: K.S Bhagavan

  • ಶೂದ್ರರಿಗೆ ಮಾನ ಮರ್ಯಾದೆ ಇದ್ದರೆ ದೇವಸ್ಥಾನಕ್ಕೆ ಹೋಗಬಾರದು: ಪ್ರೊ.ಕೆ.ಎಸ್.ಭಗವಾನ್

    ಶೂದ್ರರಿಗೆ ಮಾನ ಮರ್ಯಾದೆ ಇದ್ದರೆ ದೇವಸ್ಥಾನಕ್ಕೆ ಹೋಗಬಾರದು: ಪ್ರೊ.ಕೆ.ಎಸ್.ಭಗವಾನ್

    – ಹಿಂದೂ ಎಂದರೆ ಹಿಂದಕ್ಕೆ ಹೋಗುವ ಜನ ಎಂದ ಚಿಂತಕ

    ಮೈಸೂರು: ಶೂದ್ರರು ದೇವಸ್ಥಾನಗಳಿಗೆ ಹೋಗುವುದನ್ನು ನಿಲ್ಲಿಸಬೇಕು ಎಂದು ಸಾಹಿತಿ, ಚಿಂತಕ ಪ್ರೊ.ಕೆ.ಎಸ್.ಭಗವಾನ್ (K.S.Bhagavan) ಹೇಳಿಕೆ ನೀಡಿದ್ದಾರೆ.

    ಮಹಿಷ ದಸರಾದಲ್ಲಿ ಮಾತನಾಡಿದ ಅವರು, ಜ್ಞಾನದ ಹಸಿವು ಇಲ್ಲದ ಕಾರಣ ಹಲವರು ಗುಲಾಮರಾಗಿದ್ದಾರೆ. ಹಿಂದೂ ಧರ್ಮ ಅಂದ್ರೆ ಅದು ಹಿಂದೂಗಳ ಧರ್ಮ ಅಲ್ಲ. ಹಿಂದೂ ಧರ್ಮ ಅಂದರೆ ಅದು ಬ್ರಾಹ್ಮಣರ ಧರ್ಮ. ಹಿಂದೂ ಎಂದರೆ ಹಿಂದಕ್ಕೆ ಹೋಗುವ ಜನ. ಹಿಂದೂಗಳು ಮುಂದಕ್ಕೆ ಬಾರದ ಜನ ಹಾಗೂ ಬೇರೆಯವರನ್ನು ಮುಂದಕ್ಕೆ ಬಿಡುವುದಿಲ್ಲ. ಗಂಡಸರನ್ನು ಮಾತ್ರ ಬ್ರಾಹ್ಮಣರು ಅಂತಾರೆ. ಹೆಂಗಸರನ್ನಾ ಬ್ರಾಹ್ಮಣರು ಎನ್ನಲ್ಲಾ, ಅವರನ್ನು ಶೂದ್ರರು ಅಂತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ನಂಬಿಕೆಗೆ ಧಕ್ಕೆಯಾಗದಂತೆ ಮಹಿಷ ದಸರಾ ಆಚರಿಸಿದ್ರೆ ನಮಗೂ ಸಂತೋಷ: ಯದುವೀರ್

    ದೇವಸ್ಥಾನ ಕಟ್ಟೋದು ಶೂದ್ರರು. ದೇವಸ್ಥಾನದ ಒಳಗೆ ಇರೋರು ಬ್ರಾಹ್ಮಣರು. ದೇವಸ್ಥಾನ ಕಟ್ಟಿದ ಶೂದ್ರರನ್ನೇ ಬಿಟ್ಟುಕೊಳ್ಳಲ್ಲ. ನಾವು ಶೂದ್ರರಲ್ಲಾ ಎಂದು ಹೇಳಬೇಕು. ಶೂದ್ರರು ದೇವಸ್ಥಾನಗಳಿಗೆ ಹೋಗೋದನ್ನು ನಿಲ್ಲಸಬೇಕು. ನಾನು 50 ವರ್ಷ ಆಯ್ತು ದೇವಸ್ಥಾನಕ್ಕೆ ಹೋಗಿ. ದೇವಸ್ಥಾಕ್ಕೆ ಹೋದ್ರೆ ಏನು ಆಗಲ್ಲ. ತಟ್ಟೆಗೆ ದುಡ್ಡು ಹಾಕ್ತೀರಾ, ಅರ್ಧ ಕಾಯಿ ಇಟ್ಟುಕೊಂಡು ಅರ್ಧ ಕೊಡ್ತಾರೆ ಅಷ್ಟೇ. ಶೂದ್ರರಿಗೆ ಮಾನ ಮರ್ಯಾದೆ ಇದ್ದರೆ ದೇವಸ್ಥಾನಕ್ಕೆ ಹೋಗಬಾರದು. ನಾವು ಶೂದ್ರರು ಎಂದು ಒಪ್ಪಿಕೊಳ್ಳಬೇಕಾ ಎಂದು ಪ್ರಶ್ನಿಸಿದರು.

    ಹಿಂದೂ ಧರ್ಮ ನಮ್ಮದಲ್ಲ. ನಮಗೆ ಹಿಂದೂ ಧರ್ಮ ಬೇಕಿಲ್ಲ. ಎಲ್ಲರೂ ಬುದ್ಧ ಗುರುಗಳನ್ನು ನಂಬಿ. ನಾನು ಹೇಳಿದ್ದು ನಂಬಿ ಅಂತಾ ಬುದ್ಧ ಹೇಳಲ್ಲ. ನಾನು ಹೇಳಿದ್ದು ಕೇಳಬೇಕು ಅಂತಾ ಏಸು ಹೇಳ್ತಾರೆ. ನಾನು ಹೇಳದ್ದು ಕೇಳದಿದ್ರೆ ನರಕ್ಕೆ ಹೋಗ್ತೀರಾ ಅಂತಾ ಕೃಷ್ಣ ಹೇಳ್ತಾನೆ. ನಾವು ಬುದ್ಧ ಧರ್ಮಕ್ಕೆ ಹೋಗಬೇಕು. ಶೂದ್ರರು ಎಂಬ ಗುಲಾಮರನ್ನು ಎಚ್ಚರಿಸಬೇಕು. ಯಾರು ಹೀನನಾಗಿದ್ದಾನೆ ಅವನು ಹಿಂದೂ. ಹಿಂದೂ ಎಂದರೆ ಹೀನಾ ಎಂದು ಅರ್ಥ. ಯಾರು ಹಿಂದೂ ಆಗಬಾರದು ಎಂದು ತಿಳಿಸಿದರು. ಇದನ್ನೂ ಓದಿ: ಮೈಸೂರಿನಲ್ಲಿ ರೇವ್ ಪಾರ್ಟಿ? – ಪೊಲೀಸರು ದಾಳಿ ನಡೆಸಿ 50ಕ್ಕೂ ಹೆಚ್ಚು ಯುವಕರು ವಶಕ್ಕೆ

  • ಕುಸಿದು ಬಿದ್ದ ಪ್ರೊ. ಕೆ.ಎಸ್.ಭಗವಾನ್ – ಆಸ್ಪತ್ರೆಗೆ ದಾಖಲು

    ಕುಸಿದು ಬಿದ್ದ ಪ್ರೊ. ಕೆ.ಎಸ್.ಭಗವಾನ್ – ಆಸ್ಪತ್ರೆಗೆ ದಾಖಲು

    ಮೈಸೂರು: ಹಿರಿಯ ಸಾಹಿತಿ ಪ್ರೊ. ಕೆ.ಎಸ್.ಭಗವಾನ್ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಪ್ರೊ. ಕೆ.ಎಸ್.ಭಗವಾನ್ ಅವರು ಇಂದು ಸಂಜೆ ವಾಕಿಂಗ್ ಮಾಡುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಹಾಗೂ ಆಪ್ತರು ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಮೈಸೂರಿನ ಕುವೆಂಪು ನಗರದಲ್ಲಿ ವಾಸವಿರುವ ಪ್ರೊ. ಕೆ.ಎಸ್. ಭಗವಾನ್ ಅವರು ಒಬ್ಬ ವಿಮರ್ಶಕ, ಅನುವಾದಕ ಹಾಗೂ ಚಿಂತಕರಾಗಿದ್ದು ಮೈಸೂರಿನ ಮಹಾರಾಜ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದರು. ಸರಳ ಮದುವೆ ಚಳವಳಿಯಲ್ಲಿ ನೂರಾರು ವಿವಾಹಗಳನ್ನು ನೆರವೇರಿಸಿದ್ದಾರೆ.

    ಭಗವಾನ್ ಹಿಂದೂ ಧರ್ಮವನ್ನು, ಹಿಂದೂ ಧರ್ಮ ದೇವತೆಗಳನ್ನು, ಪುರಾಣಗಳನ್ನು, ಭಗವದ್ಗೀತೆಯನ್ನು, ಪೂಜಾಸ್ಥಳಗಳನ್ನು ಕಟುವಾಗಿ ಟೀಕಿಸಿ ಅನೇಕ ಬಾರಿ ವಿವಾದಕ್ಕೆ ಗುರಿಯಾಗಿದ್ದಾರೆ. “ಶ್ರೀರಾಮ ತಂದೆಗೆ ಹುಟ್ಟಿದ ಮಗನಲ್ಲ” ಎಂದು ಪ್ರೊ.ಭಗವಾನ್ ಅವರು ಹೇಳಿಕೆ ನೀಡಿ ಹಿಂದೂಗಳ ಕೋಪಕ್ಕೆ ಗುರಿಯಾಗಿದ್ದರು.

  • ಮೈಸೂರಿನಲ್ಲಿ ಪ್ರಗತಿಪರರಿಂದ ಮಹಿಷಾ ದಸರಾ!- ವಿಡಿಯೋ ನೋಡಿ

    ಮೈಸೂರಿನಲ್ಲಿ ಪ್ರಗತಿಪರರಿಂದ ಮಹಿಷಾ ದಸರಾ!- ವಿಡಿಯೋ ನೋಡಿ

    ಮೈಸೂರು: ದಸರಾ ತಯಾರಿ ದಿನದಿಂದಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಪ್ರಗತಿಪರ ಒಕ್ಕೂಟಗಳಿಂದ ಮಹಿಷ ದಸರಾವನ್ನು ಇಂದು ಅದ್ಧೂರಿಯಾಗಿ ಆಚರಿಸಿ, ಮಹಿಷ ಒಬ್ಬ ಜನಪರ ನಾಯಕ. ಆದರೆ ಇತಿಹಾಸಲ್ಲಿ ಆತನ ಬಗ್ಗೆ ತಪ್ಪಾಗಿ ಬಿಂಬಿಸಲಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

    ಮೈಸೂರಿನ ಪುರಭವನದಿಂದ ಆಕರ್ಷಕ ರಥದಲ್ಲಿ ಮಹಿಷಾಸುರ ಭಾವಚಿತ್ರ ಮೆರವಣಿಗೆ ಮಾಡಿದ ಪ್ರಗತಿಪರರು, ವಿವಿಧ ಕಲಾತಂಡಗಳೊಂದಿಗೆ ನಗರದ ರಸ್ತೆಗಳಲ್ಲಿ ಹೆಜ್ಜೆ ಹಾಕಿದರು. ಮೆರವಣಿಗೆಯಲ್ಲಿ ಮಾಜಿ ಸಚಿವ ಸತೀಶ್ ಜಾರಕಿಹೋಳಿ ಸೇರಿದಂತೆ ಸಾಹಿತಿಗಳಾದ ಪ್ರೊ.ಮಹೇಶ್‍ಚಂದ್ರ ಗುರು, ಪ್ರೊ.ಕೆ.ಎಸ್ ಭಗವಾನ್, ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಭಾಗಿಯಾದ್ದರು.

    ಪುರಭವನದಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ರಸ್ತೆಯ ಮೂಲಕ ಸಾಗಿ ಚಾಮುಂಡಿ ಬೆಟ್ಟ ತಲುಪಿ, ಮಹಿಷಾಸುರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

    ಮೆರವಣಿಗೆ ಚಾಮುಂಡಿ ಬೆಟ್ಟ ತಲುಪಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು, ಮಹಿಷ ಜನಪರವಾಗಿದ್ದ, ಆದರೆ ಇತಿಹಾಸದಲ್ಲಿ ಅವರ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಲಾಗಿದೆ. ಕಳೆದ 7 ವರ್ಷಗಳಿಂದ ಮಹಿಷ ದಸರಾವನ್ನು ಆಚರಿಸಲಾಗುತ್ತಿದೆ. ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಹಾಗೂ ಅನೇಕ ಚಿಂತಕರ ನೇತೃತ್ವದಲ್ಲಿ ವಿಶೇಷ ಕಾರ್ಯಕ್ರ ಆಯೋಜನೆ ಮಾಡಲಾಗಿದೆ. ಅವರ ವಿಚಾರಗಳನ್ನು ನಾನು ಪ್ರೋತ್ಸಾಹಿಸುತ್ತಾ ಬಂದಿರುವೆ ಎಂದು ಹೇಳಿದರು.

    ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ವಲಸೆ ಸಂಸ್ಕೃತಿಯವರು ಉದ್ದೇಶಪೂರ್ವಕವಾಗಿ ನಮ್ಮ ಸಂಸ್ಕೃತಿಯ ಮೂಲ ಪ್ರತಿಪಾದಕ ಮಹಿಷನನ್ನು ರಾಕ್ಷಸ ಅಂತಾ ಮಾಡಿ, ಇವರೇ ರಾಕ್ಷಸರಾದರು. ಮಹಿಷ ಕೆಟ್ಟ ಮನುಷ್ಯನಾಗಿದ್ದರೆ ಅವನ ಹೆಸರನ್ನು ಈ ಪ್ರದೇಶಕ್ಕೆ ಇಡುತ್ತಿರಲಿಲ್ಲ. ಕೆಟ್ಟ ವ್ಯಕ್ತಿಯ ಹೆಸರನ್ನು ಊರಿಗೆ, ಪ್ರದೇಶಕ್ಕೆ ಇಡುವುದನ್ನು ಎಲ್ಲಿಯೂ ಕೇಳಿಲ್ಲ. ಮಹಿಷ ರಾಜನಾಗಿದ್ದವನು, ಆದರೆ ಆತನ ಬಗ್ಗೆ ಇತಿಹಾಸದಲ್ಲಿ ತಪ್ಪಾಗಿ ಬಿಂಬಿಸಲಾಗಿದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/rCdHN3PwRNQ

  • ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ತನಿಖೆಯಲ್ಲಿ ಸ್ಫೋಟಕ ಸುದ್ದಿ ಬಹಿರಂಗ!

    ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ತನಿಖೆಯಲ್ಲಿ ಸ್ಫೋಟಕ ಸುದ್ದಿ ಬಹಿರಂಗ!

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಎಸ್‍ಐಟಿ ಶಂಕಿತ ಆರೋಪಿಯೊಬ್ಬನನ್ನು ವಶಪಡಿಸಿಕೊಂಡು ವಿಚಾರಣೆ ಮಾಡಲಾಗುತ್ತಿದೆ. ಆದರೆ ವಿಚಾರಣೆಯಲ್ಲಿ ಶಂಕಿತ ಆರೋಪಿ ಪದೇ ಪದೇ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದಾರೆ. ಹೀಗಾಗಿ ಆರೋಪಿಯ ಮಂಪರು ಪರೀಕ್ಷೆಗೆ ಕೋರ್ಟ್ ಆದೇಶಿಸಿದೆ.

    ವಿಚಾರಣೆಯಲ್ಲಿ ಮತ್ತೊಂದು ಸ್ಫೋಟಕ ಸ್ಟೋರಿ ಹೊರಗೆ ಬರುತ್ತಿದ್ದು, ಸಾಹಿತಿ ಕೆ.ಎಸ್.ಭಗವಾನ್ ಬಚಾವಾಗಿದ್ದು ಹೇಗೆ ಎಂದು ಬಾಯಿ ಬಿಟ್ಟಿದ್ದಾನೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಆದ್ರೆ ಭಗವಾನ್ ಕೊಲೆ ಮಾಡಲು ಸಾಧ್ಯವಾಗಿಲ್ಲ ಅಂತಾ ಹೇಳಿದ್ದಾನೆ ಎಂದು ತಿಳಿದು ಬಂದಿದೆ.

    ಭಗವಾನ್ ಅವರನ್ನು ಕೊಲೆ ಮಾಡಲು ಶ್ರೀರಂಗಪಟ್ಟಣದ ಅನಿಲ್ ಎಂಬುವನ ಮನೆಯಲ್ಲಿ ಟ್ರೈನಿಂಗ್ ಆಗಿತ್ತು. ಆದರೆ ಟ್ರೈನಿಂಗ್ ಮುಗಿಸಿಕೊಂಡಿದ್ದ ಆರೋಪಿಗಳು ಬೇರೊಂದು ವೆಪನ್ ಕೇಳಿದ್ದರು. ಭಗವಾನ್ ಕೊಲೆ ಮಾಡೋದಕ್ಕೆ ಈ ರಿವಾಲ್ವರ್ ಸೂಕ್ತ ಅಲ್ಲ ಎಂದು ಹೇಳಿ ಬೇರೆ ರಿವಾಲ್ವರ್ ಗಳನ್ನು ತರೋದಕ್ಕೆ ಸೂಚನೆ ನೀಡಿದ್ದರು. ಸರಿಯಾದ ಸಮಯದಲ್ಲಿ ರಿವಾಲ್ವರ್ ಅನ್ನು ಒದಗಿಸೋದಕ್ಕೆ ಆಗದೆ ಭಗವಾನ್ ಬಚಾವ್ ಆಗಿ ಹೋದ್ದರು. ಇನ್ನೂ ಗೋವಾದಲ್ಲಿ ಹಂತಕನನ್ನು ಸೆಲೆಕ್ಟ್ ಮಾಡಲಾಗಿತ್ತು ಎನ್ನಲಾಗಿದೆ.