Tag: K.R.G.

  • ನವೀನ್-ದಾನಿಶ್ ಕಾಂಬಿನೇಷನ್ ಚಿತ್ರ ಘೋಷಿಸಿದ ಕೆ.ಆರ್.ಜಿ ಸ್ಟುಡಿಯೋಸ್

    ನವೀನ್-ದಾನಿಶ್ ಕಾಂಬಿನೇಷನ್ ಚಿತ್ರ ಘೋಷಿಸಿದ ಕೆ.ಆರ್.ಜಿ ಸ್ಟುಡಿಯೋಸ್

    ಮೊನ್ನೆಯಷ್ಟೇ ಇಂದು ಹೊಸ ಸುದ್ದಿಯನ್ನು ಕೊಡುವುದಾಗಿ ಕೆಆರ್.ಜಿ ಸ್ಟುಡಿಯೋಸ್ (K.R.G ) ಘೋಷಣೆ ಮಾಡಿತ್ತು. ಅದು ಹೇಳಿಕೊಂಡಂತೆ ಇಂದು ಹೊಸ ಚಿತ್ರವೊಂದನ್ನು ಘೋಷಣೆ ಮಾಡಿದೆ. ಈ ಸಿನಿಮಾದಲ್ಲಿ ವಿಶೇಷ ತಾರಾಗಣವೇ ಇರಲಿದೆ. ಚಿತ್ರಕ್ಕೆ ಕಿರಿಕ್ ‘ಇಟಿ’1  (Kirik ET 1) ಎಂದು ಹೆಸರಿಡಲಾಗಿದೆ.

    ಕಿರಿಕ್ ‘et’ 11 ಚಿತ್ರ ಒಂದು ನಗೆ ಹಬ್ಬವಾಗಿ ತಯಾರಾಗಲಿದೆ. ಒಂದಷ್ಟು ಯುವಕರು ಯಾವುದೇ ರೀತಿಯಲ್ಲೂ ಅದೃಷ್ಟ ದೇವತೆ ಒಲಿಯದೆ ಇದ್ದಾಗ ಇಡೀ ದೇಶ ಅತ್ಯಂತ ಹುಮ್ಮಸ್ಸಿನಿಂದ ಆಡುವ, ನೋಡುವ ಕ್ರಿಕೆಟ್ ನಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗುತ್ತಾರೆ. ಮುಂದೆ ಅವರು ಭವಿಷ್ಯ ಏನಾಗಲಿದೆ ಎನ್ನುವುದೇ ಸಿನಿಮಾವಂತೆ.

    ಗುಳ್ಟು ಖ್ಯಾತಿಯ ನವೀನ್  ಶಂಕರ್ (Naveen Shankar) ಮತ್ತು ದಾನಿಶ್ ಸೇಠ್ (Danish Sait) ಕಾಂಬಿನೇಷನ್ ನಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಈ ಚಿತ್ರಕ್ಕೆ ಮನೋಜ್ ಕುಮಾರ್ ಕಾಲಾವನನ್ ಕಥೆ ಹೆಣೆದಿದ್ದರೆ, ಸುಮನ್ ಕುಮಾರ್ (Suman Kumar) ನಿರ್ದೇಶಿಸಲಿದ್ದಾರೆ. ಇದನ್ನೂ ಓದಿ:ಕೆಂಪು ಬಣ್ಣದ ಸೀರೆಯಲ್ಲಿ ಗ್ಲ್ಯಾಮರಸ್ ಆಗಿ ಮಿಂಚಿದ ಮಾನ್ವಿತಾ

    ಸುಮನ್ ಕುಮಾರ್ ಅವರು ಈ ಹಿಂದೆ ರಘುತಾತ ಚಿತ್ರವನ್ನು ನಿರ್ದೇಶಿಸಿದ್ದು , ವೆಬ್ ಸೀರಿಸ್ ಲೋಕದಲ್ಲಿ ಬಹಳ ಜನಪ್ರಿಯ ಆಗಿದ್ದಾರೆ. ಅಲ್ಲದೇ The Family Man ಮತ್ತು Farzi ಯ ಕಥೆಯನ್ನು ಹೆಣೆದಿದ್ದಾರೆ. ಈ ಚಿತ್ರಕ್ಕೆ ಸಂಗೀತವನ್ನು ಬಡವ ರಾಸ್ಕಲ್ ಚಿತ್ರಕ್ಕೆ ಸಂಗೀತ ನೀಡಿದ್ದ ವಾಸುಕಿ ವೈಭವ್ ಅವರು ನೀಡಲಿದ್ದಾರೆ.

     

    ಈ ಚಿತ್ರವನ್ನು ಕಾರ್ತಿಕ್, ವಿಜಯ್ ಸುಬ್ರಮಣ್ಯಂ ಮತ್ತು ಯೋಗಿ ಜಿ ರಾಜ್ ಅವರು ನಿರ್ಮಿಸಲಿದ್ದಾರೆ. ಕೆ ಆರ್ ಜಿ ಸ್ಟುಡಿಯೋಸಿನ 6 ವರ್ಷಗಳ ಚಿತ್ರರಂಗದ ಪಯಣದಲ್ಲಿ ಇದು 4 ನೇ ಚಿತ್ರ ನಿರ್ಮಾಣವಾಗಲಿದೆ. ಕಿರಿಕ್ et 11 ಚಿತ್ರದ ಚಿತ್ರೀಕರಣ ಈ ವರ್ಷ ನಡೆಯಲಿರುವ ಕ್ರಿಕೆಟ್ ವಿಶ್ವಕಪ್ ಸಮಯದಲ್ಲೇ ಶುರುವಾಗಲಿದೆಯಂತೆ.

  • ರಮ್ಯಾ ಮನೆಯಲ್ಲೇ ಕಥೆ ಹೇಳಿದ್ರಂತೆ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ : ಪದ್ಮಾವತಿ ಕಮ್ ಬ್ಯಾಕ್ ಕನ್ಫರ್ಮ್

    ರಮ್ಯಾ ಮನೆಯಲ್ಲೇ ಕಥೆ ಹೇಳಿದ್ರಂತೆ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ : ಪದ್ಮಾವತಿ ಕಮ್ ಬ್ಯಾಕ್ ಕನ್ಫರ್ಮ್

    ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮತ್ತೆ ಸಿನಿಮಾ ರಂಗಕ್ಕೆ ಬರುವ ವಿಚಾರ ಹಲವು ವರ್ಷಗಳಿಂದ ಚರ್ಚೆ ಆಗುತ್ತಲೇ ಇದೆ. ಈ ತಿಂಗಳು, ಮುಂದಿನ ತಿಂಗಳು ಅಂತ ಮುಂದೂಡುತ್ತಲೇ ಬಂದಿದೆ. ಆದರೆ, ಈ ಬಾರಿ ರಮ್ಯಾ ಚಿತ್ರರಂಗಕ್ಕೆ ವಾಪಸ್ಸಾಗುವುದು ನಿಕ್ಕಿಯಾಗಿದೆ. ರಮ್ಯಾ ಅವರ ಚಿತ್ರಕ್ಕೆ ರಾಜ್ ಬಿ ಶೆಟ್ಟಿ ನಿರ್ದೇಶನ ಮಾಡಲಿದ್ದು, ಈಗಾಗಲೇ ಸಿನಿಮಾದ ಕಥೆಯನ್ನೂ ನಿರ್ದೇಶಕರು ರಮ್ಯಾ ಅವರಿಗೆ ಹೇಳಿದ್ದಾರೆ ಎನ್ನಲಾಗುತ್ತಿದೆ.

    ಮೂಲಗಳ ಪ್ರಕಾರ ರಾಜ್ ಬಿ ಶೆಟ್ಟಿ ಅವರು ರಮ್ಯಾ ಮನೆಗೆ ತೆರಳಿ, ಸಿನಿಮಾದ ಸಂಪೂರ್ಣ ಕಥೆಯನ್ನು ಮತ್ತು ಚಿತ್ರಕಥೆಯನ್ನು ಹೇಳಿದ್ದಾರೆ ಎನ್ನಲಾಗುತ್ತಿದ್ದು, ಕಥೆ ಕೇಳಿ ರಮ್ಯಾ ಕೂಡ ಸಖತ್ ಇಂಪ್ರೆಸ್ ಆಗಿದ್ದಾರಂತೆ. ಮತ್ತೊಂದು ಮೂಲಗಳ ಪ್ರಕಾರ ಈ ಸಿನಿಮಾವನ್ನು ರಮ್ಯಾ ಅವರೇ ನಿರ್ಮಾಣ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಕೆ.ಆರ್.ಜಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಈ ಸಿನಿಮಾ ಮೂಡಿ ಬರಲಿದೆ ಎನ್ನುವ ಸುದ್ದಿಯಿದೆ. ಇದನ್ನೂ ಓದಿ:ಸಾನ್ಯ-ಜಶ್ವಂತ್ ಬಗ್ಗೆ ಕೆಟ್ಟದಾಗಿ ಮಾತನಾಡಿ, ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಉದಯ್ ಸೂರ್ಯ

    ಈಗಾಗಲೇ ರಮ್ಯಾ ಅವರು ಕೆ.ಆರ್.ಜಿ ಸ್ಟುಡಿಯೋ ಭೇಟಿ ನೀಡಿದ್ದಾರೆ. ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಜೊತೆಯೂ ಒಂದು ಹಂತದ ಮಾತುಕತೆ ಕೂಡ ಆಡಿದ್ದಾರೆ. ಕೆಆರ್.ಜಿ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಹೊಯ್ಸಳ ಶೂಟಿಂಗ್ ಸೆಟ್ ಗೂ ರಮ್ಯಾ ಹೋಗಿದ್ದರು. ಹೀಗಾಗಿ ಈ ಸಿನಿಮಾ ಕೆ.ಆರ್.ಜಿ. ಬ್ಯಾನರ್ ನಿಂದ ಮೂಡಿ ಬಂದರೆ ಅಚ್ಚರಿ ಪಡಬೇಕಿಲ್ಲ.

    Live Tv
    [brid partner=56869869 player=32851 video=960834 autoplay=true]