Tag: K P Srikanth

  • ಟಗರು 2 ಚಿತ್ರಕ್ಕೆ ನಿರ್ದೇಶಕರು ಯಾರು?: ಶಿವಣ್ಣ ಕೊಟ್ಟರು ಉತ್ತರ

    ಟಗರು 2 ಚಿತ್ರಕ್ಕೆ ನಿರ್ದೇಶಕರು ಯಾರು?: ಶಿವಣ್ಣ ಕೊಟ್ಟರು ಉತ್ತರ

    ಶಿವರಾಜ್ ಕುಮಾರ್ (Shivaraj Kumar) ಹುಟ್ಟು ಹಬ್ಬದ ದಿನದಂದು ‘ಟಗರು 2’ (Tagaru 2) ಸಿನಿಮಾದ ಪೋಸ್ಟರ್ ಹಂಚಿಕೊಂಡು ಅಚ್ಚರಿ ಮೂಡಿಸಿದ್ದರು ನಿರ್ಮಾಪಕ ಕೆ.ಪಿ ಶ್ರೀಕಾಂತ್ (KP Srikanth) . ಪೋಸ್ಟರ್ ನಲ್ಲಿ ಹೆಚ್ಚಿನ ಮಾಹಿತಿ ಇಲ್ಲದೇ ಇದ್ದರೂ, ಟಗರು 2 ಸಿನಿಮಾದ ಪೋಸ್ಟರ್ ಹಲವಾರು ಕುತೂಹಲಗಳನ್ನು ಹುಟ್ಟು ಹಾಕಿತ್ತು. ಕೇವಲ ನಿರ್ಮಾಪಕರ ಹೆಸರು ಇದ್ದ ಕಾರಣದಿಂದಾಗಿ ನಿರ್ದೇಶಕರು ಯಾರು ಎನ್ನುವ ಪ್ರಶ್ನೆ ಕೂಡ ಮೂಡಿತ್ತು.

    ಈ ಕುರಿತು ಸ್ವತಃ ಶಿವರಾಜ್ ಕುಮಾರ್ ಅವರ ಸ್ಪಷ್ಟನೆ ನೀಡಿದ್ದಾರೆ. ಟಗರು 2 ಸಿನಿಮಾ ಮಾಡಬೇಕು ಎನ್ನುವುದು ಈ ಹಿಂದೆಯೇ ನಿರ್ಧಾರವಾಗಿತ್ತು. ನಿರ್ದೇಶಕ ಸೂರಿ ಅವರು ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಬ್ಯುಸಿಯಾದರು. ಟಗರು ಕಾನ್ಸೆಪ್ಟ್ ಸೂರಿ (Suri) ಅವರ ಕಲ್ಪನೆ. ಅದನ್ನು ಅವರೇ ಮಾಡಬೇಕು. ಬ್ಯಾಡ್‌ ಮ್ಯಾನರ್ಸ್ ನಂತರ ಭೇಟಿ ಮಾಡುವುದಾಗಿ ಹೇಳಿದ್ದಾರೆ. ಅವರೇ ಆ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ:ಮಳೆ, ಕೊರೆವ ಚಳಿ ನಡುವೆ ಕಾಶ್ಮೀರದಲ್ಲಿ ಸಾನ್ಯ ಟ್ರೆಕ್ಕಿಂಗ್

    ಈ ಹಿಂದೆ ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಟಗರು ಸಿನಿಮಾ ಶಿವರಾಜ್ ಕುಮಾರ್ ವೃತ್ತಿ ಬದುಕಿಗೆ ವಿಭಿನ್ನ ಚಿತ್ರ ಎನಿಸಿತ್ತು. ಈ ಸಿನಿಮಾದಲ್ಲಿ ಶಿವಣ್ಣ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದರು. ಡಾಲಿ ಧನಂಜಯ್ ಮತ್ತು ವಸಿಷ್ಠ ಸಿಂಹ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದರು. ಇಂತಹ ಸಿನಿಮಾದ ಮುಂದುವರೆದ ಭಾಗ ಮುಂದೆ ಬರಲಿದೆ.

    ಪೋಸ್ಟರ್ ನಲ್ಲಿ ಸೂರಿ ಹೆಸರು ಹಾಕದೇ ಇದ್ದರೂ, ಟಗರಿನೊಂದಿಗೆ ಶಿವಣ್ಣ ಇರುವ ಪೋಸ್ಟರ್ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ. ಟಗರು ಸಿನಿಮಾವನ್ನು ನಿರ್ಮಾಣ ಮಾಡಿದ್ದ ಕೆ.ಪಿ ಶ್ರೀಕಾಂತ್ ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದು, ಲಹರಿ ಫಿಲ್ಮ್ಸ್ ಕೂಡ ಕೈ ಜೋಡಿಸಿದೆ. ಮುಂದಿನ ದಿನಗಳಲ್ಲಿ ಈ ಚಿತ್ರದ ಕುರಿತು ಮತ್ತಷ್ಟು ಮಾಹಿತಿ ಸಿಗಬಹುದು.

     

    ಮೊನ್ನೆ ಶಿವರಾಜ್ ಕುಮಾರ್ ಹುಟ್ಟು ಹಬ್ಬಕ್ಕೆ (Birthday) ಹಲವಾರು ಚಿತ್ರಗಳು ಘೋಷಣೆ ಆಗಿವೆ. ಅದರಲ್ಲೂ ಮೂರು ಮಲ್ಟಿಸ್ಟಾರ್ ಚಿತ್ರಗಳು ಘೋಷಣೆ ಆಗುವ ಮೂಲಕ ಕುತೂಹಲ ಮೂಡಿಸುತ್ತಿವೆ.  ಶಿವರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಗಣೇಶ್, ಪ್ರಭುದೇವ, ಉಪೇಂದ್ರ, ರಾಜ್ ಬಿ ಶೆಟ್ಟಿ, ಅಜಯ್ ರಾವ್ ಅವರು ನಟಿಸುತ್ತಿರುವುದು ಮತ್ತಷ್ಟು ಕಾಯುವಂತೆ ಮಾಡಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುದೀಪ್ ಮನೆಯಿಂದ ಮತ್ತೊಬ್ಬ ಸ್ಟಾರ್: ಸಂಚಿತ್ ಚಿತ್ರಕ್ಕೆ ಮುಹೂರ್ತ

    ಸುದೀಪ್ ಮನೆಯಿಂದ ಮತ್ತೊಬ್ಬ ಸ್ಟಾರ್: ಸಂಚಿತ್ ಚಿತ್ರಕ್ಕೆ ಮುಹೂರ್ತ

    ಕಿಚ್ಚ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ (Sanchit Sanjeev) ಇಂದು ಅಧಿಕೃತವಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಸಂಚಿತ್ ಸಂಜೀವ ನಟಿಸಿ, ನಿರ್ದೇಶನ ಮಾಡಲಿರುವ ಚಿತ್ರಕ್ಕೆ ಇಂದು ಬೆಂಗಳೂರಿನ ಗವಿಪುರಂನ ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತ (Muhurta) ನಡೆಯಿತು. ಈ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅತಿಥಿಯಾಗಿ ಆಗಮಿಸಿದ್ದರು.

    ಪ್ರಿಯಾ ಸುದೀಪ್, ಲಹರಿ ಸಂಸ್ಥೆ ಹಾಗೂ ಕೆ.ಪಿ.ಶ್ರೀಕಾಂತ್ (K.P. Srikanth) ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ನಟನೆಯ ಜೊತೆ ಸಂಚಿತ್ ಆಕ್ಷನ್ ಕಟ್ ಹೇಳುತ್ತಿರುವುದು ವಿಶೇಷ. ಕ್ರೈಂ-ಡ್ರಾಮಾ ಆಧರಿಸಿದ ಸಿನಿಮಾದಲ್ಲಿ ತಂದೆ ಮಗನ ಸೆಂಟಿಮೆಂಟ್ ಇದೆಯಂತೆ. ಸುದೀಪ್ (Kichcha Sudeep) ಸಲಹೆಯಂತೆ ಸಂಚಿತ್ ಈ ಸಿನಿಮಾಗಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರಂತೆ. ಬಹುತೇಕ ಹೊಸಬರೇ ಕೂಡಿಕೊಂಡು ಈ ಸಿನಿಮಾವನ್ನು ತಯಾರಿಸುತ್ತಿದ್ದಾರೆ. ಇದನ್ನೂ ಓದಿ:‘ಗೀತಾ ಗೋವಿಂದಂ’ ತಂಡದಿಂದ ಹೊಸ ಚಿತ್ರ- ರಶ್ಮಿಕಾ ಬದಲು ವಿಜಯ್‌ಗೆ ನಾಯಕಿಯಾದ ಮೃಣಾಲ್

    ಸಾಕಷ್ಟು ಸಮಯದಿಂದ ಸಂಚಿತ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಬಗ್ಗೆ ಮಾತುಗಳು ಕೇಳಿಬರುತ್ತಿತ್ತು. ಇದೀಗ ಅದು ನೆರವೇರಿದೆ. ಹಾಗಂತ ಸಂಚಿತ್ ದಿಢೀರ್ ಅಂತ ಸಿನಿಮಾ ರಂಗಕ್ಕೆ ಬರುತ್ತಿಲ್ಲ. ಈಗಾಗಲೇ ಕಿಚ್ಚನ ‘ಅಂಬಿ ನಿಂಗೆ ವಯಸ್ಸಾಯ್ತೋ’, ‘ವಿಕ್ರಾಂತ್ ರೋಣ’ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ಕ್ಯಾಮೆರಾ ಮುಂದೆ ಅಲ್ಲ ಹಿಂದೆ ಗುರುತಿಸಿಕೊಂಡಿದ್ದರು. ಜೊತೆಗೆ ಮುಂಬೈನಲ್ಲಿ ನಟನೆಯನ್ನು ಕೂಡ ಕಲಿತು ಬಂದಿದ್ದಾರೆ.

     

    ಲಹರಿ ಸಂಸ್ಥೆಯ (Lahari Films) ಮನೋಹರ್ ನಾಯ್ಡು, ವೀನಸ್ ಮೂವಿಸ್‌ನ ಕೆ. ಪಿ ಶ್ರೀಕಾಂತ್ ಈಗಾಗಲೇ 2 ಸಿನಿಮಾ ನಿರ್ಮಿಸ್ತಿದ್ದಾರೆ. ಉಪೇಂದ್ರ ನಟನೆಯ ‘ಯುಐ’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇನ್ನು ಸೆಟ್ಟೇರಿ ನಿಂತೇ ಹೋಗಿದ್ದ ವಿನಯ್ ರಾಜ್‌ಕುಮಾರ್ ನಟನೆಯ ‘ಗ್ರಾಮಾಯಣ’ ಮರುಜೀವ ಕೊಟ್ಟಿದ್ದಾರೆ. ಈ ಜೋಡಿಯ ಯಾದಿಗೆ ಇದೊಂದು ಚಿತ್ರ ಸೇರ್ಪಡೆಯಾಗಿದೆ.

  • ವಿಜಯದಶಮಿಗೆ ‘ಯುಐ’ ಪೋಸ್ಟರ್ ಮೂಲಕ ಮೆದುಳಿಗೆ ಹುಳು ಬಿಟ್ಟ ಉಪೇಂದ್ರ

    ವಿಜಯದಶಮಿಗೆ ‘ಯುಐ’ ಪೋಸ್ಟರ್ ಮೂಲಕ ಮೆದುಳಿಗೆ ಹುಳು ಬಿಟ್ಟ ಉಪೇಂದ್ರ

    ಪೇಂದ್ರ ನಟಿಸಿ, ನಿರ್ದೇಶನ ಮಾಡುತ್ತಿರುವ ‘ಯುಐ’ (UI) ಸಿನಿಮಾದ ಮತ್ತೊಂದು ಪೋಸ್ಟರ್ (poster) ವಿಜಯ ದಶಕಮಿಗಾಗಿ ಬಿಡುಗಡೆಗೊಂಡಿದ್ದು, ಈ ಪೋಸ್ಟರ್ ಮೂಲಕವೂ ಉಪೇಂದ್ರ ನೋಡುಗರ ಮೆದುಳಿಗೆ ಹುಳು ಬಿಟ್ಟಿದ್ದಾರೆ. ಈ ಪೋಸ್ಟರ್ ಕೂಡ ವಿಭಿನ್ನವಾಗಿದ್ದು ನಾನಾ ಅರ್ಥಗಳನ್ನು ನೀಡುತ್ತಿದೆ. ಕೈಯಲ್ಲಿ ರಕ್ತಸಿಕ್ತ ಖಡ್ಗ, ಸೂರ್ಯನಿಗೆ ಮರೆಮಾಡಿ ನಿಂತಿರುವ ವ್ಯಕ್ತಿ, ವಿಶೇಷ ವೇಷಭೂಷಣ ಸೇರಿದಂತೆ ಹತ್ತು ಹಲವು ಸಂಗತಿಗಳು ಅಲ್ಲಿವೆ.

    ವಿಭಿನ್ನ ಶೀರ್ಷಿಕೆಯಿಂದಾಗಿಯೇ ಈಗಾಗಲೇ ಗಮನ ಸೆಳೆದಿರುವ ಉಪೇಂದ್ರ,(Upendra) ಸಿನಿಮಾ ಟೈಟಲ್ ಏನನ್ನು ಧ್ವನಿಸುತ್ತದೆ ಎನ್ನುವ ಕುರಿತು ಈವರೆಗೂ ಹೇಳಿಲ್ಲ. ನೀವು ಟೈಟಲ್ ಅನ್ನು ಏನು ಬೇಕಾದರೂ ಕರೆದುಕೊಳ್ಳಿ ಎಂದು ನೋಡುಗರಿಗೆ ಅಂತಿಮ ಆಯ್ಕೆ ಬಿಟ್ಟಿದ್ದಾರೆ. ಹಲವು ದಿನಗಳಿಂದ ಭರದಿಂದ ಚಿತ್ರೀಕರಣವನ್ನೂ ಆರಂಭಿಸಿರುವ ಉಪ್ಪಿ, ಸಿನಿಮಾ ರಂಗದ ಅನೇಕ ಸಂಗತಿಗಳನ್ನೂ ಈ ಚಿತ್ರದಲ್ಲಿ ಹೇಳಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ನಾನು ಲವ್ ಮಾಡೋಕೆ ಬಂದಿಲ್ಲ: ಗೊಬ್ಬರಗಾಲಗೆ ಕಾವ್ಯಶ್ರೀ ವಾರ್ನಿಂಗ್

    ಸಮಾಜ, ಮಾಧ್ಯಮ, ಕಾನೂನು, ಆಡಳಿತ ವ್ಯವಸ್ಥೆ, ಧಾರ್ಮಿಕ ಆಚರಣೆಗಳು ಹೀಗೆ ಸಾಕಷ್ಟು ವಿಷಯಗಳನ್ನು ಚಿತ್ರಕಥೆಯಲ್ಲಿ ಬೆರೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಉಪ್ಪಿ ಮಾತ್ರ ಈವರೆಗೂ ಸಿನಿಮಾದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಜಿ.ಮನೋಹರನ್ ಮತ್ತು ಶ್ರೀಕಾಂತ್ ಕೆ.ಪಿ (K.P. Srikanth) ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಲಹರಿ ವೇಲು (Lahari Velu) ಅವರು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಿಕ್ ಕೊಡ್ತಿದೆ ‘ಸೂರಿ ಅಣ್ಣನ’ ಹಾಡು

    ಕಿಕ್ ಕೊಡ್ತಿದೆ ‘ಸೂರಿ ಅಣ್ಣನ’ ಹಾಡು

    ಸ್ಯಾಂಡಲ್‍ವುಡ್ ನಲ್ಲಿ ಸಖತ್ ಕ್ರೇಜ್ ಹುಟ್ಟಿಸಿರೋ ಸಿನಿಮಾ ಸಲಗ. ದುನಿಯಾ ವಿಜಿ ನಿರ್ದೇಶಿಸಿ ನಟಿಸುತ್ತಿರುವ ಈ ಚಿತ್ರದ ಫಸ್ಟ್ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಾಂಗ್ ರಿಲೀಸ್ ಮಾಡಿದ್ದಾರೆ. ಸದ್ಯ ‘ಸೂರಿ ಅಣ್ಣ’ ಹಾಡು ಸೆನ್ಸೇಷನಲ್ ಕ್ರಿಯೇಟ್ ಮಾಡಿದ್ದು ಸಖತ್ ಕಿಕ್ ಕೊಡುತ್ತಿದೆ. ಟಗರು ಚಿತ್ರದ ಟೈಟಲ್ ಟ್ರ್ಯಾಕ್ ಹಾಡಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಆಂಟೋನಿ ದಾಸ್ ‘ಸೂರಿ ಅಣ್ಣ’ ಸಾಂಗ್ ಗೆ ಧ್ವನಿಯಾಗಿ ಮತ್ತೆ ಸ್ಯಾಂಡಲ್‍ವುಡ್ ನಲ್ಲಿ ಮನೆ ಮಾತಾಗಿದ್ದಾರೆ.

    ಟಗರು ಖ್ಯಾತಿಯ ಚರಣ್ ರಾಜ್ ಮಾಸ್ ಮ್ಯೂಸಿಕ್ ಮತ್ತೆ ಮ್ಯಾಜಿಕ್ ಕ್ರಿಯೇಟ್. ಅಲ್ಲದೇ ಚರಣ್ ರಾಜ್ ಹಾಗೂ ಆಂಟೋನಿ ದಾಸ್ ಕಾಂಬಿನೇಷನ್ ಮತ್ತೊಂದು ಹಿಟ್ ಸಾಂಗ್ ನೀಡುವಲ್ಲಿ ಯಶಸ್ವಿಯಾಗಿದೆ.

    ‘ಸಲಗ’ ಮೂಲಕ ನಿರ್ದೇಶಕನಾಗಿ ಬಡ್ತಿ ಹೊಂದಿರುವ ಬ್ಲ್ಯಾಕ್ ಕೋಬ್ರಾ ಮೇಕಿಂಗ್ ನಲ್ಲಿ ತಮ್ಮ ನಿರ್ದೇಶನದ ಝಲಕ್ ತೋರಿಸಿದ್ರು. ಈಗ ಚಿತ್ರದ ಹಾಡು ಕೂಡ ಹಿಟ್ ಆಗಿದ್ದು ಮೊದಲ ನಿರ್ದೇಶನದಲ್ಲೆ ಜಯಭೇರಿ ಬಾರಿಸೋ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಒಟ್ನಲ್ಲಿ ಚಿತ್ರಕ್ಕೆ ಹುಟ್ಟಿರೋ ಕ್ರೇಜ್ ನೋಡಿ ವಿಜಿ ಅಭಿಮಾನಿಗಳು ಹಾಗೂ ಚಿತ್ರತಂಡ ಸಖತ್ ಥ್ರಿಲ್ ಆಗಿದ್ದಾರೆ.

    ಟಗರು ಖ್ಯಾತಿಯ ಕೆ.ಪಿ.ಶ್ರೀಕಾಂತ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಸಂಜನಾ ಆನಂದ್ ನಾಯಕಿಯಾಗಿ ವಿಜಿ ಜೊತೆ ಸ್ಕೀನ್ ಶೇರ್ ಮಾಡಿದ್ದಾರೆ. ಫಸ್ಟ್ ಲುಕ್, ಮೇಕಿಂಗ್ ಮತ್ತು ಹಾಡುಗಳು ಮೂಲಕ ಬಝ್ ಕ್ರಿಯೇಟ್ ಮಾಡಿರೋ ಸಲಗ ಸದ್ಯದಲ್ಲೆ ಟೀಸರ್, ಟ್ರೇಲರ್ ಮೂಲಕ ಮಾಸ್ ಪ್ರಿಯರ ಮನತಣಿಸಲಿದೆ.

  • ಘೀಳಿಡಲು ಸಜ್ಜಾದ ಸಲಗ ಗೆಲ್ಲುವ ಸೂಚನೆ!

    ಘೀಳಿಡಲು ಸಜ್ಜಾದ ಸಲಗ ಗೆಲ್ಲುವ ಸೂಚನೆ!

    ಬೆಂಗಳೂರು: ದುನಿಯಾ ವಿಜಯ್ ಅಭಿನಯಿಸಿ ನಿರ್ದೇಶನವನ್ನೂ ಮಾಡುತ್ತಿರೋ ಚಿತ್ರ ಸಲಗ. ಬಂಡಿಮಾಕಾಳಮ್ಮ ದೇವಸ್ಥಾನದಲ್ಲಿ ಮುಹೂರ್ತ ಸಮಾರಂಭ ನಡೆಯೋ ಮೂಲಕ ಈ ಸಿನಿಮಾಗೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಸಲಗ ಎಂಬುದೇ ಪಕ್ಕಾ ಮಾಸ್ ಟೈಟಲ್. ದುನಿಯಾ ವಿಜಯ್ ಮೊದಲ ಹೆಜ್ಜೆಯಲ್ಲಿ ನಿರ್ದೇಶಕರಾಗಿ ಈ ಚಿತ್ರವನ್ನ ಹೇಗೆ ಸಂಭಾಳಿಸಲಿದ್ದಾರೆ, ಇದರ ಕಥೆ ಎಂಥಾದ್ದೆಂಬುದೂ ಸೇರಿದಂತೆ ಪ್ರೇಕ್ಷಕರಲ್ಲಿರೋ ಕುತೂಹಲ ಒಂದೆರಡಲ್ಲ. ಸಲಗ ಪ್ರೇಕ್ಷಕರ ನಡುವೆ ಈ ಪಾಟಿ ಘೀಳಿಟ್ಟು ಸದ್ದು ಮಾಡುತ್ತಿರೋದಕ್ಕೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರೋದು ಕೆ.ಪಿ ಶ್ರೀಕಾಂತ್ ಅನ್ನೋದೂ ಕೂಡಾ ಕಾರಣ!

    ಕೆಪಿ ಶ್ರೀಕಾಂತ್ ಹಿಟ್ ಸಿನಿಮಾ ನಿರ್ಮಾಪಕರೆಂದೇ ಖ್ಯಾತರಾಗಿರುವವರು. ಸಿನಿಮಾವನ್ನು ವ್ಯವಹಾರದಾಚೆಗೆ ಪ್ರೀತಿಸುವ ಅವರು ಕಥೆಗೆ ಎಲ್ಲ ಕೋನದಿಂದಲೂ ಕಸುವಿದೆ ಅಂತ ಗೊತ್ತಾಗದೆ ಯಾವ ಚಿತ್ರವನ್ನೂ ನಿರ್ಮಾಣ ಮಾಡಲು ಮುಂದಾಗುವವರಲ್ಲ. ಹೆಚ್ಚೂಕಮ್ಮಿ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಚಿತ್ರರಂಗದ ಭಾಗವಾಗಿರುವ ಶ್ರೀಕಾಂತ್ ಬತ್ತಳಿಕೆಯಲ್ಲಿ ಈ ಮಾತಿಗೆ ಪೂರಕವಾದ ವಿಚಾರಗಳೇ ಇವೆ. ಇಂಥಾ ಶ್ರೀಕಾಂತ್ ಮತ್ತು ದುನಿಯಾ ವಿಜಯ್ ಸಲಗದ ಮೂಲಕ ಭಾರೀ ಯಶಸ್ಸೊಂದನ್ನು ತಮ್ಮದಾಗಿಸಿಕೊಳ್ಳಲಿದ್ದಾರೆಂಬ ಸೂಚನೆಗಳೇ ಎಲ್ಲ ದಿಕ್ಕಿನಿಂದಲೂ ಕಾಣಿಸುತ್ತಿವೆ.

    ಸಲಗ ಆರಂಭದಲ್ಲಿಯೇ ಎಂಥಾ ಸೆನ್ಸೇಷನ್ ಕ್ರಿಯೇಟ್ ಮಾಡಿದೆ ಅನ್ನೋದಕ್ಕೆ ಚಿತ್ರರಂಗದ ಗಣ್ಯರ ಪ್ರತಿಕ್ರಿಯೆಗಳಿಗಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಯುವ ನಿರ್ದೇಶಕ ಸಂತೋಷ್ ಆನಂದ್‍ರಾಮ್ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿರೋ ವಿಜಯ್ ಸೇರಿದಂತೆ ಇಡೀ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ. ತರುಣ್ ಸುಧೀರ್ ಕೂಡಾ ತಮ್ಮ ಬಹುಕಾಲದ ಗೆಳೆಯನ ಈ ಸಾಹಸಕ್ಕೆ ಶುಭ ಕೋರಿದ್ದಾರೆ. ಕಾರ್ತಿಕ್ ಗೌಡ, ರಿಯಲ್ ಸ್ಟಾರ್ ಉಪೇಂದ್ರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕರು ಸಲಗಕ್ಕೆ ಶುಭ ಕೋರಿದ್ದಾರೆ.

    ಇದು ಸಲಗ ಚಿತ್ರದ ಬಗ್ಗೆ ತಾನೇ ತಾನಾಗಿ ಹುಟ್ಟಿಕೊಂಡಿರೋ ಪಾಸಿಟಿವ್ ವಾತಾವರಣ. ದುನಿಯಾ ವಿಜಯ್ ಅವರೇನು ಏಕಾಏಕಿ ನಿರ್ದೇಶಕರಾಗಿ ಅವತರಿಸಿಲ್ಲ. ನಿರ್ದೇಶನಕ್ಕೆ ಬೇಕಾಗುವಂಥಾ ಎಲ್ಲ ಪಟ್ಟುಗಳನ್ನೂ ಕರಗತ ಮಾಡಿಕೊಂಡು ಎಲ್ಲದರಲ್ಲಿಯೂ ಪಕ್ಕಾ ಅನ್ನಿಸಿದ ನಂತರವಷ್ಟೇ ಅಖಾಡಕ್ಕಿಳಿದಿದ್ದಾರೆ. ವಿಜಯ್ ಅವರ ಇಂಥಾ ಶ್ರದ್ಧೆಯ ಯಾನಕ್ಕೆ ನಿರ್ಮಾಪಕ ಕೆ ಪಿ ಶ್ರೀಕಾಂತ್ ಕೂಡಾ ಸಾಥ್ ನೀಡಿದ್ದಾರೆ. ಇವರಿಬ್ಬರ ಕಾಂಬಿನೇಷನ್ನಿನಲ್ಲಿ ಕನ್ನಡ ಚಿತ್ರರಂಗದಲ್ಲೊಂದು ಮೈಲಿಗಲ್ಲೆನ್ನಬಹುದಾದ ಕಮಾಲ್ ನಡೆಯೋ ಲಕ್ಷಣಗಳೇ ಎಲ್ಲೆಡೆ ದಟ್ಟೈಸಿದೆ.