Tag: K.N Rajanna

  • ಸಿದ್ದರಾಮಯ್ಯ ಅಯೋಧ್ಯೆ ಭೇಟಿಯಲ್ಲಿ ತಪ್ಪೇನಿದೆ?: ಸಿಎಂ ಹೇಳಿಕೆ ಸಮರ್ಥಿಸಿದ ಸಚಿವ ಕೆ.ಎನ್ ರಾಜಣ್ಣ

    ಸಿದ್ದರಾಮಯ್ಯ ಅಯೋಧ್ಯೆ ಭೇಟಿಯಲ್ಲಿ ತಪ್ಪೇನಿದೆ?: ಸಿಎಂ ಹೇಳಿಕೆ ಸಮರ್ಥಿಸಿದ ಸಚಿವ ಕೆ.ಎನ್ ರಾಜಣ್ಣ

    ನವದೆಹಲಿ: ಜನವರಿ 22 ರ ಬಳಿಕ ಅಯೋಧ್ಯೆಯ ರಾಮಮಂದಿರಕ್ಕೆ (Ayodhya Ram Mandir) ಭೇಟಿ ನೀಡುವ ಸಿಎಂ ಸಿದ್ದರಾಮಯ್ಯ (Siddaramaiah) ಅವರ ಹೇಳಿಕೆ ಸರಿಯಾಗಿದೆ. ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿದರೆ ಏನು ತಪ್ಪು ಎಂದು ಸಚಿವ ಕೆ.ಎನ್.‌ರಾಜಣ್ಣ (K.N.Rajanna) ಪ್ರಶ್ನಿಸಿದ್ದಾರೆ.

    ಅಯೋಧ್ಯೆಗೆ ಭೇಟಿ ನೀಡುವ ಹೇಳಿಕೆ ಸಂಬಂಧ ದೆಹಲಿಯಲ್ಲಿ ಮಾತನಾಡಿದ ಅವರು, ಮಂದಿರಾ ಬಿಜೆಪಿ ನಾಯಕರ ಸ್ವತ್ತೆ. ಹಿಂದೆ ಹೇಳಿದ್ದು ಸರಿ, ಈಗ ಹೇಳುವುದು ಸರಿಯಾಗೇ ಇದೆ ಎಂದು ಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ವಿಜಯೇಂದ್ರ ಜೊತೆಗೆ ಮಂಪರು ಪರೀಕ್ಷೆಗೆ ಒಳಪಡಿಸುವುದಾದ್ರೆ ನಾನು ಸಿದ್ಧ: ಬಿ.ಕೆ ಹರಿಪ್ರಸಾದ್

    ಬಿಜೆಪಿ ಹಿಂದೂಗಳನ್ನು ಗುತ್ತಿಗೆ ತೆಗೆದುಕೊಂಡಿದ್ದಾರಾ? ಅಥವಾ ಅವರಿಗೆ ಜಾಗೀರು ಕೊಟ್ಟಿದ್ದೀವಾ? ನಾವು ಹಿಂದೂಗಳು ಅಲ್ಲದೇ ಇನ್ನೇನು? ವೋಟಿಗಾಗಿ ಬಿಜೆಪಿ ಪದೇ ಪದೆ ಹಿಂದೂ ಹಿಂದೂ ಅಂತ ಹೇಳುತ್ತಾರೆ. ಅಂಬೇಡ್ಕರ್ ಹಿಂದೂವಾಗಿ ಸಾಯುವುದಿಲ್ಲ ಎಂದ್ರು ಯಾಕೆ? ಈ ರೀತಿ ಹಿಂದುತ್ವ ಸ್ವಾರ್ಥಕ್ಕೆ ಬಳಕೆ ಮಾಡಿಕೊಂಡರು ಎನ್ನುವ ಕಾರಣಕ್ಕೆ ವಿಮುಖವಾದರು ಎಂದು ತಿಳಿಸಿದ್ದಾರೆ.

    ಈ ರೀತಿ ಮಾತನಾಡುವ ಬದಲು ಮೊದಲು ರಾಮಮಂದಿರಕ್ಕೆ ದಲಿತರನ್ನು ಬಿಡಲು ಹೇಳಿ. ಅಲ್ಲಿ ಒಬ್ಬ ದಲಿತ ಅರ್ಚಕನನ್ನು ನೇಮಕ ಮಾಡಲು ಹೇಳಿ. ಹಿಂದೂಗಳಿಗೆ ಅವರು ಏನು ಮಾಡಿದ್ದಾರೆ? ಬರೀ ಚುನಾವಣೆಗಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಸಿಎಂ ಅಯೋಧ್ಯೆಗೆ ಭೇಟಿ ನೀಡುವುದು ಸರಿಯಾಗಿದೆ ಎಂದು ಸಮರ್ಥಿಸಿದರು. ಇದನ್ನೂ ಓದಿ: ಕಾಂಗ್ರೆಸ್‌ನವ್ರು ಕೌರವರು, ರಾವಣನಂತೆ ವರ್ತಿಸುತ್ತಿದ್ದಾರೆ: ಯತ್ನಾಳ್ ಕಿಡಿ

    ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಭೇಟಿ ಬಗ್ಗೆ ಮಾತನಾಡಿ, ಖರ್ಗೆಯವರನ್ನು ನಾವು ಐವರು ಸಚಿವರು ಭೇಟಿಯಾಗಿದ್ವಿ. ಚುನಾವಣೆ ಕುರಿತು ಅವರ ಮಾತುಗಳು ನಮ್ಮ ಉತ್ಸಾಹ ಹೆಚ್ಚಿಸಿದೆ. ಚುನಾವಣೆಯಲ್ಲಿ ನಾವು ಹೆಚ್ಚು ಸ್ಥಾನಗಳು ಗೆಲ್ಲಬೇಕಿದೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದರು.

  • ಪಟಾಕಿ ಕಚ್ಚಿ ಕಾರ್ಯಕರ್ತರ ಸಂಭ್ರಮ- ಸಚಿವ ರಾಜಣ್ಣ ಕಣ್ಣಿಗೆ ಗಾಯ

    ಪಟಾಕಿ ಕಚ್ಚಿ ಕಾರ್ಯಕರ್ತರ ಸಂಭ್ರಮ- ಸಚಿವ ರಾಜಣ್ಣ ಕಣ್ಣಿಗೆ ಗಾಯ

    ತುಮಕೂರು: ಸಹಕಾರಿ ಸಚಿವ ಕೆ.ಎನ್ ರಾಜಣ್ಣ (Minister K N Rajanna) ಅವರ ಕಣ್ಣಿ (Eye) ಗೆ ಪಟಾಕಿ ಕಿಡಿ ಹಾರಿ ಗಾಯಗೊಂಡ ಘಟನೆ ಪಟ್ಟದ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.

    ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೆ.ಎನ್ ರಾಜಣ್ಣ ಅವರು ಇಂದು ಶಕ್ತಿ ಯೋಜನೆ (Shakti Yojana) ಗೆ ಚಾಲನೆ ನೀಡಲು ತುಮಕೂರಿನಿಂದ ಕುಣಿಗಲ್ ಮಾರ್ಗವಾಗಿ ಹಾಸನಕ್ಕೆ ತೆರಳುತ್ತಿದ್ದರು. ವಿಷಯ ತಿಳಿದ ಕೆಎನ್ ಆರ್ ಅಭಿಮಾನಿಗಳು ಹಿತೈಷಿಗಳು ಕಾಂಗ್ರೆಸ್ (Congress) ಕಾರ್ಯಕರ್ತರು ಕುಣಿಗಲ್ ಪಟ್ಟಣದ ಹುಚ್ಚಮಾಸ್ತಿಗೌಡ ಸರ್ಕಲ್ ಬಳಿ ಕಾರನ್ನು ತಡೆದು ಹೂಮಾಲೆ ಹಾಕಿ ಅಭಿನಂದಿಸಿದರು. ಬಳಿಕ ಸಮೀಪದಲ್ಲೇ ಪಟಾಕಿ ಸಿಡಿಸಿದರು. ಇದನ್ನೂ ಓದಿ: 14ರ ಹಿಂದೂ ಬಾಲಕಿ ಕಿಡ್ನ್ಯಾಪ್‌ ಮಾಡಿ ಇಸ್ಲಾಂಗೆ ಮತಾಂತರ – ಪೋಷಕರ ಜೊತೆ ಕಳುಹಿಸಲು ಪಾಕ್‌ ಕೋರ್ಟ್‌ ನಿರಾಕರಣೆ

    ಇತ್ತ ಯಾಕೋ ಸಚಿವರು ತಮ್ಮ ಕನ್ನಡಕವನ್ನೊಮ್ಮೆ ತೆಗೆದರು. ಇದೇ ವೇಳೆ ಪಟಾಕಿಯ ಕಿಡಿ ನೇರವಾಗಿ ಬಲಗಣ್ಣಿನತ್ತ ಹಾರಿದೆ. ಕೂಡಲೇ ಸಚಿವರನ್ನು ಎಂ.ಎಂ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ನೇತ್ರ ತಜ್ಞ ಡಾ.ರವಿಕುಮಾರ್ ಅವರಿಂದ ಚಿಕಿತ್ಸೆ ಕೊಡಿಸಲಾಯಿತು, ಬಳಿಕ ಅವರು ಹಾಸನಕ್ಕೆ ತೆರಳಿದರು.

     

  • ಡಿಕೆಶಿ ಟಾರ್ಗೆಟ್‌ ಮಾಡಿ ಸಿಬಿಐಗೆ ಪ್ರವೀಣ್ ಸೂದ್ ನೇಮಕ‌ – ಕೆ.ಎನ್ ರಾಜಣ್ಣ ಗಂಭೀರ ಆರೋಪ

    ಡಿಕೆಶಿ ಟಾರ್ಗೆಟ್‌ ಮಾಡಿ ಸಿಬಿಐಗೆ ಪ್ರವೀಣ್ ಸೂದ್ ನೇಮಕ‌ – ಕೆ.ಎನ್ ರಾಜಣ್ಣ ಗಂಭೀರ ಆರೋಪ

    ತುಮಕೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರವು ಪ್ರವೀಣ್ ಸೂದ್‌ ಅವರನ್ನು ಸಿಬಿಐ ನಿರ್ದೇಶಕರನ್ನಾಗಿ ನೇಮಕ ಮಾಡಿದೆ ಎಂದು ಕಾಂಗ್ರೆಸ್‌ ಶಾಸಕ ಕೆ.ಎನ್.‌ ರಾಜಣ್ಣ ಗಂಭೀರ ಆರೋಪ ಮಾಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆದರಿಸುವುದು, ಬ್ಲ್ಯಾಕ್‌ಮೇಲ್ ರಾಜಕಾರಣ ಮಾಡುವುದು ಬಿಜೆಪಿಗರ ಕೆಲಸ. 40% ಕಮಿಷನ್, ಬೆಲೆ ಏರಿಕೆಯಿಂದ ಬಿಜೆಪಿ ಸೋತಿದೆ. ಬಿಜೆಪಿ ರಾಜ್ಯ ನಾಯಕರಿಗೆ ಮತ ಸೆಳೆಯುವ ಶಕ್ತಿ ಇಲ್ಲ‌ ಎಂದು ಟೀಕಿಸಿದರು. ಇದನ್ನೂ ಓದಿ: ಇಷ್ಟು ದಿನ ಏಕೆ ಸುಮ್ಮನಿದ್ದರು?- ಸುಧಾಕರ್ ವಿರುದ್ಧವೇ ತಿರುಗಿ ಬಿದ್ದ ಎಂಟಿಬಿ

    ಕಾಂಗ್ರೆಸ್ ಹೈಕಮಾಂಡ್‌ ಒಲವು ಸಿದ್ದರಾಮಯ್ಯ ಪರವಾಗಿದ್ದು, ಅವರು ಮುಖ್ಯಮಂತ್ರಿ ಆಗುವುದು ಖಚಿತ. ಡಿ.ಕೆ. ಶಿವಕುಮಾರ್‌ ಕೂಡ ಸಿದ್ದರಾಮಯ್ಯ ಅವರಿಗೆ ಸಹಕಾರ ನೀಡುತ್ತಾರೆ ಎಂಬ ವಿಶ್ವಾಸ ಇದೆ. ಪ್ರಮಾಣ ವಚನ ಸ್ವೀಕರಿಸಿದ ನಂತರ 10 ಕೆ.ಜಿ ಅಕ್ಕಿ ಘೋಷಣೆ ಮಾಡುತ್ತಾರೆ ಎಂದರು.

    ನಾನು ಸಹಕಾರ ಸಚಿವ ಸ್ಥಾನದ ಆಕಾಂಕ್ಷಿ. ಅದು ಬಿಟ್ಟು ಬೇರೆ ಏನು ಕೇಳುವುದಿಲ್ಲ. ಮುಂದಿನ ದಿನಗಳಲ್ಲಿ ಮಧುಗಿರಿ ಜಿಲ್ಲೆ ಮಾಡಲು ಪ್ರಯತ್ನಿಸಲಾಗುವುದು. ನುಡಿದಂತೆ ನಡೆಯುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷೆಗೆ ಕಿರುಕುಳ – ಬಿವಿ ಶ್ರೀನಿವಾಸ್‍ಗೆ ಸುಪ್ರೀಂ ಜಾಮೀನು

  • ದೇವೇಗೌಡ ಬಗ್ಗೆ ಮಾತಾಡಿದ್ರೆ ಹುಷಾರ್ – ಅವರ ಮಗ ನಾನು ಬದುಕಿದ್ದೇನೆ: ರಾಜಣ್ಣ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

    ದೇವೇಗೌಡ ಬಗ್ಗೆ ಮಾತಾಡಿದ್ರೆ ಹುಷಾರ್ – ಅವರ ಮಗ ನಾನು ಬದುಕಿದ್ದೇನೆ: ರಾಜಣ್ಣ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

    ಬೆಂಗಳೂರು: ಮಾಜಿ ಶಾಸಕ ಕೆ.ಎನ್. ರಾಜಣ್ಣ ಹೇಳಿಕೆ ವಿರುದ್ಧ ಸಿಡಿದೆದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಅತ್ಯಂತ ಅನಾಗರಿಕವಾಗಿ, ಒಂದು ವಿಕೃತವಾಗಿ ಮಾತನಾಡಿರುವ ರಾಜಣ್ಣ ಅವರಿಗೆ ತಕ್ಕ ಪಾಠ ಕಲಿಸುತ್ತೇನೆ ಎಂದು ಗುಡುಗಿದ್ದಾರೆ.

    ಪಕ್ಷದ ಕಚೇರಿ ಜೆಪಿ ಭವನದಲ್ಲಿ ಜನತಾಮಿತ್ರ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದ ವೇಳೆಯೇ ಆಕ್ರೋಶ ಹೊರ ಹಾಕಿದ ಹೆಚ್‍ಡಿಕೆ ಅವರು, ದೇವೇಗೌಡರ ಬಗ್ಗೆ ವಿಕೃತವಾಗಿ ಮಾತನಾಡಿರುವ ರಾಜಣ್ಣ ತನ್ನ ಹೀನ ಸಂಸ್ಕೃತಿಯನ್ನು ಪ್ರದರ್ಶನ ಮಾಡಿದ್ದಾರೆ. ಈ ದುರಹಂಕಾರದ ಮಾತುಗಳಿಗೆ ಅವರು ತಕ್ಕ ಶಾಸ್ತಿ ಅನುಭವಿಸಲಿದ್ದಾರೆ. ಕಳೆದ 2004ರಲ್ಲಿ ರಾಜಣ್ಣ ಅವರು ಬೆಳ್ಳಾವಿ ಜೆಡಿಎಸ್ ಅಭ್ಯರ್ಥಿಯಾಗಿದ್ದರು. ಚುನಾವಣೆಯ ಕೊನೆಯ ದಿನ ದೇವೇಗೌಡರು ಹೋಗಿ ಪ್ರಚಾರ ಮಾಡಿದ್ದರು. ಆಗ ಆ ವ್ಯಕ್ತಿ ವಿಧಾನಸೌಧದ ಮೆಟ್ಟಿಲು ಹತ್ತಲು ಸಾಧ್ಯವಾಯಿತು. ಇಲ್ಲದಿದ್ದರೆ ಅವರನ್ನು ಯಾರು ಕೇಳುತ್ತಿದ್ದರು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ದೇವೇಗೌಡ್ರು ಇಬ್ಬರ ಮೇಲೆ ಕೈ ಹಾಕ್ಕೊಂಡು ಹೋಗ್ತಾವ್ರೆ… ನಾಲ್ವರ ಮೇಲೆ ಹೋಗೋದು ಹತ್ತಿರದಲ್ಲೇ ಇದೆ: KN ರಾಜಣ್ಣ

    ದೇವೇಗೌಡರು ಅಂದು ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ತೆರಳಿ ಪ್ರಚಾರ ಮಾಡಿದ್ದರು. ಇಬ್ಬರು ದೇವೇಗೌಡರ ಹೆಗಲಿಗೆ ಹೆಗಲು ಕೊಡುತ್ತಾರೆ ನಿಜ. ರಾಜಣ್ಣನವರಿಗೆ ಅರಿವಿದ್ದಂತೆ ಇಲ್ಲ. ದೇವಸ್ಥಾನದ ಆವರಣದಲ್ಲಿ ಪೂಜೆ ಸಲ್ಲಿಸುತ್ತೇವೆ. ದೇವರ ಮೆರವಣಿಗೆಗೂ ಭುಜ ಕೊಡುತ್ತೇವೆ. ಭುಜ ಕೊಟ್ಟೇ ಮೆರವಣಿಗೆ ಮಾಡೋದಲ್ಲವೇ? ದೇವೇಗೌಡರು ಕೂಡ ಹಾಗೆಯೇ, ನಮ್ಮ ಪಾಲಿಗೆ ಅವರು ದೈವವೇ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಇದನ್ನೂ ಓದಿ: ಕೆ.ಎನ್.ರಾಜಣ್ಣ ಹೀಗೆ ಮಾತಾಡಿದ್ರೆ ಹುಚ್ಚು ನಾಯಿಗೆ ಹೊಡೆದಂಗೆ ಹೊಡಿತಾರೆ – ಪ್ರಜ್ವಲ್ ರೇವಣ್ಣ ಕಿಡಿ

    ರಾಜಣ್ಣನ ಮಾತಿನ ದುರಹಂಕಾರ ಕೇಳಿದ್ದೇನೆ. ಆತ ಬ್ರಹ್ಮನಲ್ಲ. ಆತನೂ ಒಬ್ಬ ಹುಲು ಮಾನವ. ದೇವೇಗೌಡರು ಶತಾಯುಷಿಗಳಾಗಿ ನಾಡಿನಲ್ಲಿ ಬದುಕುತ್ತಾರೆ ಎಂಬ ನಂಬಿಕೆ ನನ್ನದು ಎಂದ ಅವರು, ಹಲವಾರು ಒತ್ತಡಗಳಿಂದ ತುಮಕೂರಿನಲ್ಲಿ ದೇವೇಗೌಡರನ್ನು ಚುನಾವಣೆಗೆ ನಿಲ್ಲಿಸಿ ಸೋಲಿಸಿದರು. ಅವರನ್ನು ಸೋಲಿಸಲು ಕುತಂತ್ರ ನಡೆಸಿದ್ದು ಇದೇ ರಾಜಣ್ಣ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಇನ್ನೆರಡು ಮೂರು ತಿಂಗಳು ನೋಡಲಿ. ದೇವೇಗೌಡರೇ ಸ್ವತಂತ್ರವಾಗಿ ಓಡಾಡುತ್ತಾರೆ. ದೇವೇಗೌಡರ ಹಣೆಬರಹ ಬರೆದವರು ಎಲ್ಲರೂ ಹೋಗಿದ್ದಾರೆ. ಕ್ಷಮೆ ಕೇಳಬೇಕು ಅಂತಾ ಹೇಳುವುದಿಲ್ಲ. ದೇವೇಗೌಡರ ಮಗ ನಾನು ಇನ್ನೂ ಬದುಕಿದ್ದೇನೆ. ಮಧುಗಿರಿಗೆ ಬಂದು ತೋರಿಸುತ್ತೇನೆ. ನಾನು ಉತ್ತರ ಕೊಡುವುದಿಲ್ಲ. ಅಲ್ಲಿನ ಜನರಿಂದಲೇ ಉತ್ತರ ಕೊಡಿಸುತ್ತೇನೆ ಎಂದು ರಾಜಣ್ಣ ವಿರುದ್ಧ ತೊಡೆತಟ್ಟಿದ್ದಾರೆ.

    Live Tv

  • ಮೈತ್ರಿ ಸರ್ಕಾರ ಪತನದ ಕುರಿತು ರಮೇಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ

    ಮೈತ್ರಿ ಸರ್ಕಾರ ಪತನದ ಕುರಿತು ರಮೇಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ

    ತುಮಕೂರು: ಮೈತ್ರಿ ಸರ್ಕಾರದ ಪತನ ಕುರಿತು ಸಚಿವ ರಮೇಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ತುಮಕೂರಿನ ಗೂಗಡನಹಳ್ಳಿ ಕೆರೆಯ ವೀಕ್ಷಣೆ ವೇಳೆ ರಮೇಶ್ ಜಾರಕಿಹೊಳಿ ಮತ್ತು ಕೆ.ಎನ್.ರಾಜಣ್ಣ ಭೇಟಿಯಾಗಿದ್ದರು. ಈ ವೇಳೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಬೀಳಿಸಿದ್ದು ನಾನೇ ಎಂದು ಸಚಿವ ರಮೇಶ್ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ. ಮೈತ್ರಿ ಸರ್ಕಾರ ಪತನಕ್ಕಾಗಿ ಕಾಂಗ್ರೆಸ್ ಮಾಜಿ ಶಾಸಕ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ನಮಗೆ ಬೆಂಬಲ ನೀಡಿದರು. ಸರ್ಕಾರ ಬೀಳಿಸಲು ಒಂದು ಉದ್ದೇಶವಿತ್ತು. ಹಾಗಾಗಿ ಸರ್ಕಾರ ಪತನವಾಯ್ತು ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

    ಈ ಹೇಳಿಕೆ ನೀಡುವಾಗ ಪಕ್ಕದಲ್ಲಿಯೇ ಕುಳಿತಿದ್ದ ಕೆ.ಎನ್.ರಾಜಣ್ಣ, ನಗುತ್ತಾ ನಾವು ಏನು ಅಂತ ಎಲ್ಲರಿಗೂ ಗೊತ್ತಿದೆ. ಯಾವುದೂ ಮುಚ್ಚುಮರೆ ಮಾಡುವ ಪ್ರಶ್ನೆ ಬರಲ್ಲ. ಸರ್ಕಾರ ಪತನದಲ್ಲಿ ಯಾರ ಕೈವಾಡ ಇದೆ ಅಂತ ಗೊತ್ತಿದೆ. ಮತ್ಯಾಕೆ ಆ ವಿಷಯವನ್ನ ಹೇಳ್ತೀರಿ ಎಂದರು.

    ನಮಗೆ ಸಚಿವರನ್ನು ಮಾಡ್ತಾರೆ, ನಾನು ಜಲಸಂಪನ್ಮೂಲ ಸಚಿವ ಆಗಬೇಕೆಂದು ಸರ್ಕಾರ ಬೀಳಿಸಲಿಲ್ಲ. ಒಂದು ಉದ್ದೇಶಕ್ಕಾಗಿ ಮೈತ್ರಿ ಸರ್ಕಾರ ಪತನವಾಯ್ತು. ಬಾಲ್ಯದಿಂದಲೂ ನಾವು ಅವ್ರು ಕಾಂಗ್ರೆಸ್ ನಲ್ಲಿದ್ದೀವಿ. ಬದಲಾದ ರಾಜಕಾರಣದಲ್ಲಿ ನಾವು ಬಿಜೆಪಿ ಸೇರಿದೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಕಾಲದಲ್ಲಿದ್ದ ಕಾಂಗ್ರೆಸ್ ಈಗ ಇಲ್ಲ. ರಾಜಣ್ಣ ಅವರು ಬಿಜೆಪಿಗೆ ಬನ್ನಿ ಅಂತಾ ಹೇಳಿದ್ದೀನಿ. ಆದ್ರೆ ಅವರು ಯಾವುದೇ ನಿರ್ಧಾರ ಪ್ರಕಟಿಸಿಲ್ಲ ಎಂದು ಬಹಿರಂಗವಾಗಿಯೇ ಪಕ್ಷಕ್ಕೆ ಆಹ್ವಾನಿಸಿದರು.

  • ಬಿಎಸ್‍ವೈ ಪ್ರಮಾಣವಚನ ಕಾರ್ಯಕ್ರಮಕ್ಕೆ ರೋಷನ್ ಬೇಗ್, ರಾಜಣ್ಣ ಹಾಜರ್

    ಬಿಎಸ್‍ವೈ ಪ್ರಮಾಣವಚನ ಕಾರ್ಯಕ್ರಮಕ್ಕೆ ರೋಷನ್ ಬೇಗ್, ರಾಜಣ್ಣ ಹಾಜರ್

    ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರ ಪ್ರಮಾಣವಚನ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಉಚ್ಛಾಟಿತ ಶಿವಾಜಿನಗರ ಶಾಸಕ ರೋಷನ್ ಬೇಗ್ ಹಾಜರಾಗಿದ್ದರು.

    ಮೈತ್ರಿ ಸರ್ಕಾರ ವಿಶ್ವಾಸಮತ ಕಳೆದುಕೊಂಡ ಮೂರು ದಿನಗಳ ನಂತರ ಬಿಜೆಪಿಯು ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯುತ್ತಿದೆ. ಈ ಸಂಭ್ರಮದಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು. ಆದರೆ ರಾಜೀನಾಮೆ ನೀಡಿದ ಕಾಂಗ್ರೆಸ್-ಜೆಡಿಎಸ್ ಶಾಸಕರ ಪೈಕಿ ರೋಷನ್ ಬೇಗ್ ಅವರು ಮಾತ್ರ ಆಗಮಿಸಿದ್ದರು.

    ಮಾಜಿ ಸಿಎಂ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಅವರು ಪ್ರಮಾಣವಚನ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ. ಕಾಂಗ್ರೆಸ್ ಮಧುಗಿರಿಯ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೊರಪಡಿಸಿ ಕಾಂಗ್ರೆಸ್‍ನ ಯಾವುದೇ ನಾಯಕರು ಆಗಮಿಸಿರಲಿಲ್ಲ. ಮಾಜಿ ಮುಖ್ಯಮಂತ್ರಿ ಎಸ್‍ಎಂ ಕೃಷ್ಣ ಆಗಮಿಸಿ ಯಡಿಯೂರಪ್ಪನವರಿಗೆ ಶುಭ ಕೋರಿದರು.

  • ಸಿಎಂರನ್ನು ಸಮರ್ಥಿಸಿಕೊಳ್ಳುವ ನಮ್ಮವರಿಗೆ ಬುದ್ಧಿ ಇಲ್ಲ – ಕೆ.ಎನ್.ರಾಜಣ್ಣ

    ಸಿಎಂರನ್ನು ಸಮರ್ಥಿಸಿಕೊಳ್ಳುವ ನಮ್ಮವರಿಗೆ ಬುದ್ಧಿ ಇಲ್ಲ – ಕೆ.ಎನ್.ರಾಜಣ್ಣ

    – ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ

    ತುಮಕೂರು: ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡು ನಾವು ನೆಲಕಚ್ಚಿದ್ದೇವೆ. ಹೀಗಿರುವಾಗ ಸಿಎಂ ಅವರನ್ನು ಸಮರ್ಥಿಸಿಕೊಳ್ಳುವ ನಮ್ಮವರಿಗೆ ಬುದ್ಧಿ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ, ಪಕ್ಷದ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಶಾಸನ ಸಭೆಯಲ್ಲಿ ಮಾತನಾಡುವುದು ಶಾಸಕರ ಹಕ್ಕು. ಹಾಗಂತ ಸುಖಾಸುಮ್ಮನೆ ಕಾಲ ಹರಣ ಮಾಡಬಾರದು. ಈಗ ಶಾಸಕರು ಮಾಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ. ಸರ್ಕಾರ ಉಳಿಯಬಾರದು. ಸರ್ಕಾರ ಉರುಳಬೇಕು ಎನ್ನುವುದು ನನ್ನ ಅಭಿಪ್ರಾಯ ಎಂದು ಹೇಳಿದರು.

    ಬಿಜೆಪಿಯವರಿಗೆ ಬೈದರೇ ಮಾತ್ರ ಮುಸ್ಲಿಮರು ಕಾಂಗ್ರೆಸ್‍ಗೆ ವೋಟ್ ಹಾಕುತ್ತಾರೆ. ಹಾಗಾಗಿ ಕಾಂಗ್ರೆಸ್-ಜೆಡಿಎಸ್ ಜಗಳ ಇದಾಗಿದ್ದರೂ ಬಿಜೆಪಿಗೆ ಬೈಯೋದು. ಯಾವುದೇ ಕಾರಣಕ್ಕೂ ಬಹುಮತ ಬರುವುದಿಲ್ಲ. ಈ ಸರ್ಕಾರ ಕಾಂಗ್ರೆಸ್‍ನ ಒಂದಿಬ್ಬರು ಶಾಸಕರು ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಕುಟುಂಬದವರಿಗೆ ಮಾತ್ರ ಬೇಕಾಗಿದೆ. ಇನ್ನೂ ಕೆಲವು ದೋಸ್ತಿ ಶಾಸಕರು ರಾಜೀನಾಮೆ ನೀಡಲಿದ್ದಾರೆ. ಹೆಸರು ಹೇಳಿದರೆ ಅವರು ಅಲರ್ಟ ಆಗುತ್ತಾರೆ. ಹೀಗಾಗಿ ಅವರ ಹೆಸರು ಹೇಳುವುದಿಲ್ಲ ಎಂದು ಹೊಸ ಬಾಂಬ್ ಸಿಡಿಸಿದರು.

    1989ರಲ್ಲಿ 20 ಜನ ಶಾಸಕರಿಗೆ ರಾಜೀನಾಮೆ ಕೊಡಿಸಿ ಎಚ್.ಡಿ.ದೇವೇಗೌಡ ಅವರು ಎಸ್.ಆರ್. ಬೊಮ್ಮಯಿಯವರ ಸರ್ಕಾರ ಉರುಳಿಸಿದರು. ಆಗ ದೇವೇಗೌಡರಿಗೆ ಪ್ರಜಾಪ್ರಭುತ್ವದ ಕಗ್ಗೊಲೆ ಆಗಿರಲಿಲ್ಲ. ಇವತ್ತು ಪ್ರಜಾಪ್ರಭುತ್ವದ ಕಗ್ಗೊಲೆ ಎನ್ನುತ್ತಾರೆ ಎಂದು ವಾಗ್ದಾಳಿ ನಡೆಸಿದರು.

  • ರಾವಣ ಅಂತ ಇಡ್ಬೇಕಿತ್ತು, ಅದ್ಯಾಕೋ ಅವ್ರಪ್ಪ ರೇವಣ್ಣ ಎಂದು ಹೆಸ್ರಿಟ್ಟಿದ್ದಾರೆ: ಕೆ.ಎನ್.ರಾಜಣ್ಣ

    ರಾವಣ ಅಂತ ಇಡ್ಬೇಕಿತ್ತು, ಅದ್ಯಾಕೋ ಅವ್ರಪ್ಪ ರೇವಣ್ಣ ಎಂದು ಹೆಸ್ರಿಟ್ಟಿದ್ದಾರೆ: ಕೆ.ಎನ್.ರಾಜಣ್ಣ

    -ಬಹುಮತ ಸಾಬೀತಿನ ಬಗ್ಗೆ ಸಾವಿತ್ರಮ್ಮ ಚೌಲ್ಟ್ರಿ ಹತ್ರ ಗಿಣಿ ಶಾಸ್ತ್ರ ಕೇಳಿ
    – ನಾನು ಲಕ್ಷ್ಮಣ ಸವದಿ 25 ವರ್ಷದ ಸ್ನೇಹಿತರು

    ತುಮಕೂರು: ಹೆಸರು ಮಾತ್ರ ರೇವಣ್ಣ, ಅವರ ಕಾರ್ಯಕ್ರಮವೆಲ್ಲ ರಾವಣನ ರೀತಿ. ರಾವಣ ಎಂದು ಹೆಸರು ಇಡಬೇಕಿತ್ತು. ಅದು ಯಾಕೋ ಅವರಪ್ಪ ರೇವಣ್ಣ ಎಂದು ಇಟ್ಬಿಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕ ಕೆ.ಎನ್.ರಾಜಣ್ಣ ವ್ಯಂಗ್ಯವಾಡಿದ್ದಾರೆ.

    ಬಿಜೆಪಿ ನಾಯಕ ಲಕ್ಷ್ಮಣ ಸವದಿ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಚಿವ ರೇವಣ್ಣ ಅವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ರೇವಣ್ಣನ ಕಾಟಕ್ಕೆ ಯಾವ ಅತೃಪ್ತ ಶಾಸಕರು ವಾಪಸ್ ಬರೋದಿಲ್ಲ. ಯಾಕೆಂದರೆ ಅವರಿಗೆಲ್ಲ ರೇವಣ್ಣ ಅಷ್ಟೊಂದು ಕಾಟ ಕೊಟ್ಟಿದ್ದಾರೆ. ಅವರ ಹೆಸರು ಮಾತ್ರ ರೇವಣ್ಣ, ಅವರ ಕಾರ್ಯಕ್ರಮ ಎಲ್ಲಾ ರಾವಣನ ರೀತಿ. ಅವರ ಅಪ್ಪ ರಾವಣ ಎಂದು ಇಡ್ಬೇಕಿತ್ತು ಆದರೆ ರೇವಣ್ಣ ಎಂದು ಇಟ್ಟುಬಿಟ್ಟಿದ್ದಾರೆ. ಸರ್ಕಾರ ಬೀಳೋಕೆ ರೇವಣ್ಣನೇ ಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.

    ಸಿಎಂ ಬಹುಮತ ಸಾಬೀತು ವಿಚಾರವಾಗಿ ಮಾತನಾಡಿ, ರಾಜ್ಯದಲ್ಲಿ ಸರ್ಕಾರವೇ ಇಲ್ಲ. ವಿಶ್ವಾಸ ಮತ ಸಾಬೀತು ಹೇಗೆ? ಸರ್ಕಾರವೇ ಇಲ್ಲ ಅಂದ ಮೇಲೆ ಬಹುಮತ ಸಾಬೀತು ಫಲಿತಾಂಶ ಯಾಕೆ ಕೇಳ್ತೀರಾ? ಚುನಾವಣೆಯಲ್ಲಿ ನಿಲ್ಲೋ ಎಲ್ಲರೂ ಗೆಲುತ್ತೇವೆ ಅಂತಲೇ ಹೇಳೋದು. ಸೋಲುತ್ತೇವೆ ಎಂದು ಯಾರೂ ಹೇಳಲ್ಲ. ಫಲಿತಾಂಶ ಬಂದ ಮೇಲೆ ಯಾರು ಸೋಲ್ತಾರೆ, ಯಾರು ಗೆಲ್ತಾರೆ ಎಂದು ಗೊತ್ತಾಗುತ್ತದೆ. ನಮಗೆ ಯಾವತ್ತೂ ಸುಳ್ಳು ಹೇಳಿ ಅಭ್ಯಾಸ ಇಲ್ಲ, ನಿಜ ಹೇಳೋದಾದರೆ ಸರ್ಕಾರವೇ ಇಲ್ಲ. ಬಹುಮತ ಸಾಬೀತಿನ ಬಗ್ಗೆ ಸಾವಿತ್ರಮ್ಮ ಚೌಲ್ಟ್ರಿ ಹತ್ರ ಗಿಣಿ ಶಾಸ್ತ್ರ ಕೇಳಿ ಎಂದು ಕಿಡಿಕಾರಿದರು.

    ಲಕ್ಷ್ಮಣ ಸವದಿ ನನ್ನನ್ನು ಬಿಜೆಪಿಗೆ ಕರೀಲಿಲ್ಲ. ನಾನು ಅವರನ್ನ ಕಾಂಗ್ರೆಸ್ಸಿಗೆ ಕರೆದಿಲ್ಲ. ಅವರು ನಾನು 25 ವರ್ಷಗಳ ಸ್ನೇಹಿತರು. ಕಾರ್ಯಕ್ರಮದ ನಿಮಿತ್ತ ತುಮಕೂರಿಗೆ ಬಂದು ನನ್ನನ್ನ ಭೇಟಿ ಮಾಡಿದ್ದಾರೆ. ಸೌಜನ್ಯಯುತ ಭೇಟಿಗೆ ಯಾವುದೇ ರಾಜಕೀಯ ಲೇಪನ ಬೇಡ. ಲೂಟಿಕೋರರು ಹೋಗಲಿ ಅನ್ನೋ ಅವರ ಉದ್ದೇಶಕ್ಕೆ ನನ್ನ ಸಹಮತ ಇದೆ ಎಂದರು.

  • ಜೆಡಿಎಸ್ ಬೆಂಬಲಿಸಿದವರಿಗೆ ಡಿಸಿಸಿ ಬ್ಯಾಂಕ್‍ನಲ್ಲಿ ಸಿಗಲ್ಲ ಲೋನ್

    ಜೆಡಿಎಸ್ ಬೆಂಬಲಿಸಿದವರಿಗೆ ಡಿಸಿಸಿ ಬ್ಯಾಂಕ್‍ನಲ್ಲಿ ಸಿಗಲ್ಲ ಲೋನ್

    ತುಮಕೂರು: ಜಿಲ್ಲೆಯ ಮಧುಗಿರಿ ತಾಲೂಕು ಕೊಡಿಗೇನಹಳ್ಳಿ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ಆರಂಭವಾದ ನಂತರ ಹೊಸ ವರಸೆ ಶುರುವಾಗಿದೆ. ಇಲ್ಲಿನ ಜನರು ಜೆಡಿಎಸ್‍ಗೆ ವೋಟ್ ಹಾಕಿದವರಾದರೆ ಅಂತಹವರಿಗೆ ಲೋನ್ ಕ್ಯಾನ್ಸಲ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

    ಮಧುಗಿರಿ ತಾಲೂಕಿನ ಡಿಸಿಸಿ ಬ್ಯಾಂಕ್‍ನಲ್ಲಿ ಲೋನ್ ಬೇಕು ಎಂದು ಯಾರಾದರೂ ಹೋದರೆ ಅವರ ಪೂರ್ವಾಪರ ವಿಚಾರಿಸಲಾಗುತ್ತಿದೆಯಂತೆ. ಒಂದು ವೇಳೆ ಅವರು ಜೆಡಿಎಸ್‍ಗೆ ವೋಟ್ ಹಾಕಿದವರಾದರೆ ಅಂತಹವರಿಗೆ ಲೋನ್ ನೀಡಲು ಬ್ಯಾಂಕ್ ಸಿಬ್ಬಂದಿ ನಿರಾಕರಿಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

    ಕಳೆದ ವಿಧಾಸಭಾ ಚುನಾವಣೆಯಲ್ಲಿ ತುಮಕೂರಿನ ಮಧುಗಿರಿ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದ ಮಾಜಿ ಶಾಸಕ ಕೆ.ಎನ್. ರಾಜಣ್ಣ ಸೋಲಿನ ಪ್ರತಿಕಾರವನ್ನು ಮತದಾರರ ಮೇಲೆ ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಮಧುಗಿರಿಯ ಅಪೆಕ್ಸ್ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕ್‍ನ ಅಧ್ಯಕ್ಷರಾಗಿರೋ ಕೆ.ಎನ್.ರಾಜಣ್ಣ ಜೆಡಿಎಸ್ ಬೆಂಬಲಿಸಿದವರಿಗೆ ಡಿಸಿಸಿ ಬ್ಯಾಂಕಲ್ಲಿ ಸಾಲ ಕೊಡದಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

    ಮಧುಗಿರಿ ತಾಲೂಕು ಗುಟ್ಟೆ ಗ್ರಾಮದ ಮಹಿಳಾ ಸಂಘದ ಸದಸ್ಯೆಯರಿಗೆ ಕೊಡಿಗೇನಹಳ್ಳಿಯ ಡಿಸಿಸಿ ಬ್ಯಾಂಕ್‍ನಲ್ಲಿ ಸಾಲ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಬಳಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ರಾಜಣ್ಣ ಪತ್ನಿ ಶಾಂತಲಾ ಕೂಡ ನೀವು ನಮಗೆ ಬೆಂಬಲಿಸಿಲ್ಲ, ಜೆಡಿಎಸ್‍ಗೆ ಬೆಂಬಲಿಸಿದ್ದೀರಿ ಹೀಗಾಗಿ ನಿಮಗೆ ಸಾಲ ಕೊಡಲು ಸಾಧ್ಯವಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ ಎಂದು ಮಹಿಳಾ ಸಂಘದ ಸದಸ್ಯೆಯರು ಆರೋಪಿಸಿದ್ದಾರೆ.

    ಮಧುಗಿರಿ ಕ್ಷೇತ್ರದಲ್ಲಿ ಯಾರೇ ಡಿಸಿಸಿ ಬ್ಯಾಂಕಲ್ಲಿ ಲೋನ್ ಕೇಳಲು ಹೋದರೂ ಮೊದಲು ಆ ವ್ಯಕ್ತಿಯ ಫೋಟೋವನ್ನು ವಾಟ್ಸಾಪ್ ಮೂಲಕ ಅಧ್ಯಕ್ಷ ರಾಜಣ್ಣ ಅವರಿಗೆ ಕಳುಹಿಸಬೇಕಂತೆ. ಆಗ ರಾಜಣ್ಣ ಆ ವ್ಯಕ್ತಿಯ ಪೂರ್ವಾಪರ ವಿಚಾರಿಸಿ, ಯಾವ ಬೂತ್ ಹಾಗೂ ಆ ಬೂತಲ್ಲಿ ಎಷ್ಟು ಮತ ತಮಗೆ ಬಂದಿದೆ ಎಂಬುದನ್ನು ತಾಳೆ ಹಾಕುತ್ತಾರೆ. ಬಳಿಕ ಆ ಊರಿನ ತಮ್ಮ ಮುಖಂಡರ ಬಳಿ ಚರ್ಚಿಸಿ ಬಳಿಕ ಲೋನ್ ಮಂಜೂರು ಮಾಡುತ್ತಿದ್ದಾರೆ. ಜೆಡಿಎಸ್‍ಗೆ ಮತ ಹಾಕಿದ್ದಾರೆ ಅನ್ನೋದು ಗೊತ್ತಾದರೆ ಅವರಿಗೆ ಲೋನ್ ಸಿಗಲ್ಲ. ಬಳಿಕ ಮನೆಗೆ ಕರೆಯಿಸಿಕೊಂಡು ನೀವು ಜೆಡಿಎಸ್ ಪರ ಕೆಲಸ ಮಾಡಿದ್ದೀರಾ? ಲೋನ್ ಕೋಡೊಕೆ ಮಾತ್ರ ನಾವು ಬೇಕಾ ಎಂದು ಅವಮಾನಿಸುತ್ತಾರೆ ಎನ್ನುವ ದೂರುಗಳು ಕೇಳಿ ಬಂದಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ರಾಜಣ್ಣ ನೀನೊಬ್ಬನೇ ಗಂಡಸಲ್ಲ, ತಾಕತ್ತಿದ್ರೆ ಯುದ್ಧಕ್ಕೆ ಬಾ : ಶಾಸಕ ಗೌರಿಶಂಕರ್ ಕಿಡಿ

    ರಾಜಣ್ಣ ನೀನೊಬ್ಬನೇ ಗಂಡಸಲ್ಲ, ತಾಕತ್ತಿದ್ರೆ ಯುದ್ಧಕ್ಕೆ ಬಾ : ಶಾಸಕ ಗೌರಿಶಂಕರ್ ಕಿಡಿ

    – ಕಾಂಗ್ರೆಸ್ ಜೊತೆಗೆ ಮೈತ್ರಿಯೇ ಬೇಡ

    ತುಮಕೂರು: ರಾಜಣ್ಣ ನೀನೊಬ್ಬನೇ ಗಂಡಸಲ್ಲ, ತಾಕತ್ತಿದ್ದರೆ ಬಹಿರಂಗವಾಗಿ ಯುದ್ಧ ಮಾಡೋಣ ಬಾ ಎಂದು ಜೆಡಿಎಸ್ ಶಾಸಕ ಗೌರಿಶಂಕರ್, ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಪಂಥಾಹ್ವಾನ ನೀಡಿದ್ದಾರೆ.

    ನಗರದಲ್ಲಿ ಇಂದು ನಡೆದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿ ಶಾಸಕರು, ರಾಜಕಾರಣದಲ್ಲಿ ಕೆ.ಎನ್.ರಾಜಣ್ಣ ಅವರು ಜಾತಿಯನ್ನು ಪ್ರಸ್ತಾಪಿಸುತ್ತಾರೆ. 2008ರ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ನನ್ನನ್ನು ಗೋಲಿ ಆಡುವ ಹುಡುಗ ಎಂದು ಗೇಲಿ ಮಾಡಿದ್ದರು. ಆದರೆ ನಾನು ನಿಮ್ಮನ್ನು ಸೋಲಿಸಿ ಮನೆಗೆ ಕಳುಹಿಸಿದೆ. ಮಾತನಾಡುವಾಗ ಯೋಚನೆ ಮಾಡಿ ರಾಜಣ್ಣ ಅವರೇ ಎಂದು ಗುಡುಗಿದರು.

    ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇಲ್ಲದೇ ಇದ್ದರೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತಿದ್ದರು. ಸಿಎಂ ಕುಮಾರಸ್ವಾಮಿ, ದೇವೇಗೌಡರು ನನ್ನ ಪಕ್ಷದಿಂದ ಹೊರಹಾಕಿದರೂ ಪರವಾಗಿಲ್ಲ. ಈ ಮೈತ್ರಿ ಸಹವಾಸ ನಮಗೆ ಬೇಡ ಎಂದು ನೇರವಾಗಿ ಅಸಮಾಧಾನ ಹೊರ ಹಾಕಿದ್ದಾರೆ.

    ಅಲ್ಲಿ ಆಪರೇಷನ್, ಅವರು ಗೋವಾಗೆ ಹೋದರು, ದೆಹಲಿಗೆ ಹೋದರು, ಸರ್ಕಾರ ಬಿದ್ದೊಯ್ತು ಎಂದು ಕೇಳುವುದೇ ಆಗಿದೆ. ಇದರಿಂದ ಜನರು ಬೇಸತ್ತು ಹೋಗಿದ್ದಾರೆ. ಇದರಿಂದಾಗಿ ಎಚ್.ಡಿ.ದೇವೇಗೌಡ ಅವರು ತುಮಕೂರಿನಲ್ಲಿ ಸೋತರು ಎಂದು ಮೈತ್ರಿ ಪಕ್ಷ ಕಾಂಗ್ರೆಸ್ ವಿರುದ್ಧ ಗುಡುಗಿದರು.