Tag: K.N Rajanna

  • ಡಿಕೆಶಿದು ಹೇಳಿಕೆ ಅಷ್ಟೇ, ಎಚ್ಚರಿಕೆ ಗಿಚ್ಚರಿಕೆ ಯಾರು ಕೇಳ್ತಾರೆ: ರಾಜಣ್ಣ ಗುಡುಗು

    ಡಿಕೆಶಿದು ಹೇಳಿಕೆ ಅಷ್ಟೇ, ಎಚ್ಚರಿಕೆ ಗಿಚ್ಚರಿಕೆ ಯಾರು ಕೇಳ್ತಾರೆ: ರಾಜಣ್ಣ ಗುಡುಗು

    – ಯಾರಿಂದಲೂ ಶಿಸ್ತಿನ ಪಾಠ ಬೇಕಿಲ್ಲ
    – ಜಿ.ಸಿ.ಚಂದ್ರಶೇಖರ್ ಪಕ್ಷಕ್ಕೆ ಹೊರೆ

    ಬೆಂಗಳೂರು: ಸಿಎಂ ಹೆಸರು ದುರ್ಬಳಕೆ ಮಾಡಿಕೊಳ್ಳೋದು ಬೇಡ ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಹೇಳಿಕೆಗೆ ಸಚಿವ ಕೆ.ಎನ್ ರಾಜಣ್ಣ (K.N Rajanna) ತಿರುಗೇಟು ನೀಡಿದ್ದಾರೆ. ಸಿಎಂ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ಹೇಳಿಕೆ ಅಷ್ಟೇ, ಎಚ್ಚರಿಕೆ ಅಲ್ಲ. ಎಚ್ಚರಿಕೆ ಗಿಚ್ಚರಿಕೆ ಎಲ್ಲಾ ನಡೆಯಲ್ಲ, ಎಚ್ಚರಿಕೆನಾ ಯಾರು ಕೇಳ್ತಾರೆ ಎಂದು ಗುಡುಗಿದ್ದಾರೆ.

    ಬೆಂಗಳೂರಿನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ನಾವು ಯಾರ ಹೆಸರನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಅವರು ಎಐಸಿಸಿ ಹೆಸರನ್ನ ದುರ್ಬಳಕೆ ಮಾಡಿಕೊಳ್ಳುವುದು ಬೇಡ. ಎಲ್ಲದಕ್ಕೂ ಎಐಸಿಸಿ ಹೇಳಿದೆ ಎಂದು ಎಐಸಿಸಿ ಹೆಸರನ್ನ ಅವರು ದುರ್ಬಳಕೆ ಮಾಡಿಕೊಳ್ಳಬಾರದು. ಇದು ಆರೋಪ ಅಲ್ಲ ವಾಸ್ತವ. ನಾನು ಯಾರಿಂದಲೂ ಶಿಸ್ತಿನ ಪಾಠ ಮಾಡಿಸಿಕೊಳ್ಳಬೇಕಿಲ್ಲ. 50 ವರ್ಷ ಪಕ್ಷಕ್ಕೆ ಕೆಲಸ ಮಾಡಿದ್ದೇನೆ. ನಾನು ಮಾತನಾಡಿದರೆ ಸತ್ಪರಿಣಾಮ ಬೀರುವ ಮಾತನಾಡುತ್ತೇನೆಯೇ ಹೊರತು ದುಷ್ಪರಿಣಾಮ ಬೀರುವ ಮಾತನಾಡಲ್ಲ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಉಡುಪಿ| ಹಳಿಯ ಕಬ್ಬಿಣ ಕದ್ದ ಬಾಲಕರಿಗೆ ಥಳಿಸಿದ್ದಕ್ಕೆ ರೈಲ್ವೇ ಸಿಬ್ಬಂದಿ ಮೇಲೆ ಕೇಸ್‌

    ಪೂರ್ಣಾವಧಿ ಸಿಎಂ ವಿಚಾರದಲ್ಲಿ ನಾನೇನು ಹಟಕ್ಕೆ ಬಿದ್ದಿಲ್ಲ. ಅಂತಿಮ ನಿರ್ಧಾರ ಹೈಕಮಾಂಡ್ ಮಾಡಲಿದೆ. ಹೈಕಮಾಂಡ್ ಹೇಳಿದಂತೆ ಲೋಕಸಭೆ ಚುನಾವಣೆಯವರೆಗೆ ಅಧ್ಯಕ್ಷ ಅನ್ನೋ ಕಾರಣಕ್ಕೆ ಕೇಳಿದ್ದೇವೆ. ಉಪ ಮುಖ್ಯಮಂತ್ರಿ ಸ್ಥಾನ ಹೆಚ್ಚುವರಿ ಕೊಟ್ಟಿದ್ದರೆ, ಲೋಕಸಭೆ ಚುನಾವಣೆಯಲ್ಲಿ ಸಹಾಯ ಆಗುತ್ತಿತ್ತು ಈಗ ಕೇಳಲ್ಲ. ಡಿಸಿಎಂ ಸ್ಥಾನ ಅಂದರೆ ಏನು ತಲೆ ಮೇಲೆ ಹೆಚ್ಚುವರಿ ಕಿರೀಟ ಇರಲ್ಲ ಎಂದು ಕಿಡಿಕಾರಿದ್ದಾರೆ.

    ಪೂರ್ಣಾವಧಿ ಅಲ್ಪಾವಧಿ ಏನೇ ಇದ್ದರೂ ಎಲ್ಲಾ ಹೈಕಮಾಂಡ್ ತೀರ್ಮಾನ ಮಾಡಲಿದೆ. ಸಿಎಲ್‍ಪಿ ಸಭೆಯಲ್ಲೇ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅವರೇ ಹೇಳಿದ ಮೇಲೆ ನಮ್ಮದೇನು ಎಂದಿದ್ದಾರೆ.

    ನನಗೂ ಡಿ.ಕೆ.ಶಿವಕುಮಾರ್ ಅವರಿಗೂ ವೈಯುಕ್ತಿಕವಾಗಿ ಏನೂ ಇಲ್ಲ. ವಿಚಾರ ಭಿನ್ನ ಇರಬಹುದು ಅಷ್ಟೇ, ವಿಧಾನಸೌಧಕ್ಕೆ ನಾನು ಒಂದು ರಸ್ತೆಯಲ್ಲಿ ಹೋಗೋಣ ಅಂದರೆ ಅವರು ಒಂದು ರಸ್ತೆಯಲ್ಲಿ ಹೋಗೋಣ ಎನ್ನಬಹುದು. ನಾನು ಅವರು ಸಾಕಷ್ಟು ವರ್ಷದ ಸ್ನೇಹಿತರು. ಒಟ್ಟಿಗೆ ವಿದೇಶ ಪ್ರವಾಸ ಮಾಡಿದ್ದೇವೆ. ಅವರನ್ನು ಮನೆಗೆ ಒಂದು ದಿನ ಊಟಕ್ಕೆ ಕರೆಯುತ್ತೇನೆ ಎಂದಿದ್ದಾರೆ.

    ಪಕ್ಷದ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ಎಚ್ಚರಿಕೆ ವಿಚಾರವಾಗಿ, ನಮಗೆ ಎಚ್ಚರಿಕೆ ನೀಡಲು ಜಿ.ಸಿ.ಚಂದ್ರಶೇಖರ್ ಯಾರು? ಕೆಪಿಸಿಸಿ ಕಾರ್ಯಾಧ್ಯಕ್ಷರಾದರೆ ಅವರಿಗೇನು ಎರಡು ಕೊಂಬು ಇದೆಯಾ? ಶಿಶುಪಾಲ ಕೃಷ್ಣ ಪುರಾಣ ಇದೆಲ್ಲಾ ನಾನು ನಂಬಲ್ಲ. ಪುರಾಣ ಎಲ್ಲಾ ಕಟ್ಟು ಕಥೆ ಅವರೇ ಶಿಶುಪಾಲ. ಇಂತವರು ಪಕ್ಷಕ್ಕೆ ಹೊರೆ, ಅವರ ಹಿನ್ನಲೆ ಏನು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅಪಾರ್ಟ್‌ಮೆಂಟ್‌ನಲ್ಲಿ ನಾಲ್ವರ ಶವ ಪತ್ತೆ – I Am Sorry ಎಂದು ಬರೆದು ಪ್ರಾಣಬಿಟ್ಟ ಕುಟುಂಬ!

  • RSSನ ವ್ಯಕ್ತಿ ಕೃತ್ಯ ಮಾಡಿದ್ದಾನೆ.. ಮುಸ್ಲಿಂ ಏರಿಯಾ ಠಾಣೆಯಲ್ಲಿ ಯಾಕೆ ಇಡಬೇಕಿತ್ತು?: ಪೊಲೀಸರ ನಡೆಗೆ ರಾಜಣ್ಣ ಗರಂ

    RSSನ ವ್ಯಕ್ತಿ ಕೃತ್ಯ ಮಾಡಿದ್ದಾನೆ.. ಮುಸ್ಲಿಂ ಏರಿಯಾ ಠಾಣೆಯಲ್ಲಿ ಯಾಕೆ ಇಡಬೇಕಿತ್ತು?: ಪೊಲೀಸರ ನಡೆಗೆ ರಾಜಣ್ಣ ಗರಂ

    – ಮೈಸೂರಿನ ಉದಯಗಿರಿ ಗಲಾಟೆಗೆ ಸಚಿವರ ಬೇಸರ
    – ಅವಹೇಳನಕಾರಿ ಪೋಸ್ಟ್‌; ಆರೋಪಿ ಸುರೇಶ್‌ ಅರೆಸ್ಟ್‌

    ಬೆಂಗಳೂರು: ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ ಸಂಬಂಧ ಪೊಲೀಸರ ನಡೆಗೆ ಸಚಿವ ಕೆ.ಎನ್ ರಾಜಣ್ಣ ಗರಂ ಆಗಿದ್ದಾರೆ.

    ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಈ ಪೊಲೀಸರಿಗೆ ಏನಾಗಿದೆ? ಮಿನಿಮಮ್ ಕಾಮನ್ ಸೆನ್ಸ್ ಬೇಡ್ವಾ? ಯಾರೋ ಆರ್‌ಎಸ್‌ಎಸ್ ಅವನು ಕೃತ್ಯ ಮಾಡಿದ್ದಾನೆ. ಅವನ ಮೇಲೆ ಕೇಸ್ ಆಗಿದ್ದು, ಆರೆಸ್ಟ್ ಸಹ ಆಗಿದ್ದಾನೆ. ಆದರೆ ಆತನನ್ನ ಪೊಲೀಸರು ಏಕೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಇಟ್ಟರು? ಉದಯಗಿರಿ ಮುಸ್ಲಿಂ ಬಾಹುಳ್ಯ ಏರಿಯಾ ಎಂದು ತಿಳಿದಿದೆ. ಆದರೂ ಅಲ್ಲೇ ಯಾಕೆ ಆರೋಪಿಯನ್ನ ಇಡಬೇಕಿತ್ತು. ಈ ಪೊಲೀಸವರಿಗೆ ಬುದ್ಧಿ ಬೇಡ್ವ. ಸರ್ಕಾರದಲ್ಲಿ ನಾವಷ್ಟೇ ಅಲ್ಲ ಅಧಿಕಾರಿಗಳು ಸರಿಯಾದ ನಿರ್ಧಾರ ಮಾಡಬೇಕು ಎಂದು ಕಿಡಿಕಾರಿದ್ದಾರೆ.

    ಶಾಸಕರ ಮಗನ ರೌಡಿಸಂ ವಿಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರೇ ಆಗಲಿ ಅಧಿಕಾರಿಗಳ ವಿರುದ್ಧ ಆ ರೀತಿ ಮಾತನಾಡಬಾರದು. ಅಂತಹವರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಲೇಬೇಕು. ಮಿನಿಸ್ಟರ್ ಆಗಲಿ, ಶಾಸಕ ಆಗಲಿ ಅಥವಾ ಶಾಸಕರ ಮಗನೇ ಆಗಲಿ ಯಾರೂ ಹಾಗೆ ಮಾತನಾಡಬಾರದು. ಈ ರೀತಿ ಮಾತನಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಆಗಬೇಕು ಎಂದು ಆಗ್ರಹಿಸಿದರು.

    ಇವತ್ತು ದೆಹಲಿಗೆ ಹೋಗುತ್ತಿದ್ದೇನೆ. ಮೊದಲೇ ಹೇಳಿದ ಹಾಗೆ ನನ್ನದು ಮುಚ್ಚುಮರೆ ವ್ಯಾಪಾರ ಇಲ್ಲ. ಇಲಾಖೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವರನ್ನು ಹಾಗೂ ಅಮಿತ್ ಶಾ ಅವರನ್ನ ಭೇಟಿ ಆಗುತ್ತಿದ್ದೇನೆ. ಇನ್ನು ಹೈಕಮಾಂಡ್ ನಾಯಕರಾದ ವೇಣುಗೋಪಾಲ್, ಸುರ್ಜೇವಾಲಾರನ್ನ ಭೇಟಿ ಆಗುತ್ತೇನೆ. ಹೇಳಲು ಒಂದೆರಡಲ್ಲ ಬೇಕಾದಷ್ಟಿದೆ. ಪಕ್ಷ ಸಂಘಟನೆಗೆ ಸಮಾವೇಶಗಳ ಅಗತ್ಯ ಇದೆ. ಯಾವುದೇ ಸಮುದಾಯವೇ ಇರಲಿ, ಪಕ್ಷದ ಒಳಗೆ ಇರಲಿದೆ. ಗುಂಪುಗಾರಿಕೆ ಮಾಡುವುದಿಲ್ಲ. ಕೆಪಿಸಿಸಿ ಅಧ್ಯಕ್ಷರ ವಿಚಾರ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ಬಹಿರಂಗವಾಗಿ ಮಾತಾನಾಡುವುದಿಲ್ಲ ಎಂದರು.

  • ಸಿಎಂ ಬದಲಾವಣೆ ವಿಚಾರ| ಶಾಸಕರನ್ನು ಕೇಳಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಣಯ: ಕೆ.ಎನ್.ರಾಜಣ್ಣ

    ಸಿಎಂ ಬದಲಾವಣೆ ವಿಚಾರ| ಶಾಸಕರನ್ನು ಕೇಳಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಣಯ: ಕೆ.ಎನ್.ರಾಜಣ್ಣ

    ಬೆಂಗಳೂರು: ಸಿಎಂ ಬದಲಾವಣೆ ವಿಚಾರವಾಗಿ ಶಾಸಕರನ್ನು ಕೇಳಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಣಯ. ಶಾಸಕರ ಅಭಿಪ್ರಾಯ ಏನೇ ಇದ್ದರೂ, 138 ಜನ ಒಂದೇ ಅಭಿಪ್ರಾಯ ಹೇಳಲ್ಲ ಅಂತ ಕೆ.ಎನ್.ರಾಜಣ್ಣ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಅಂತಿಮವಾಗಿ ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದರು. ಏನ್ ಹೇಳ್ಬೇಕೊ ಹೇಳಿದ್ದೀನಿ ಎಂಬ ಖರ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ಹೇಳಿದ ಮೇಲೆ ಏನು ಮಾತಾಡೋದಕ್ಕೆ ಹೋಗೋದಿಲ್ಲ. ಪಕ್ಷ ನಾಯಕತ್ವದ ಬಗ್ಗೆ ಎಲ್ಲಾ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತೆ. ಒನ್ ಮ್ಯಾನ್ ಒನ್ ಪೋಸ್ಟ್ ವಿಚಾರವಾಗಿಯೂ ಯಾರಿಗೆ ಯಾವುದು ಅನ್ವಯ ಆಗುತ್ತೆ ಅಂತ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಅದನ್ನ ನಾವು ಒಪ್ಪಬೇಕಾಗುತ್ತೆ ಎಂದು ತಿಳಿಸಿದರು.

    ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಮಾತಾಡುವ ರಾಜಣ್ಣ ಅವರಿಂದ ಡ್ಯಾಮೇಜ್ ಆಗ್ತಿದೆ ಎಂಬ ಕಡೂರು ಶಾಸಕ ಆನಂದ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರವರ ಅಭಿಪ್ರಾಯ ಹೇಳಲು ಸರ್ವ ಸ್ವತಂತ್ರರು. ಅವರು ಹೇಳಿಕೊಂಡರೆ ನಮ್ಮ ಆಪೇಕ್ಷೆ ಇಲ್ಲ ಎಂದರು.

    ಸಿಎಂ ಪತ್ನಿ ಹಾಗೂ ಸಚಿವ ಸುರೇಶ್‌ಗೆ ಇ.ಡಿ ನೋಟಿಸ್ ವಿಚಾರವಾಗಿ ಪ್ರತಿಕ್ರಿಯಿಸಿದ ರಾಜಣ್ಣ, ಅದು ರಾಜಕೀಯ ಪ್ರೇರಿತರಾಗಿ ಕೊಟ್ಟಿರುವ ನೋಟಿಸ್. ಅದರ ಸತ್ಯಾಸತ್ಯತೆ ವಿಚಾರ ಕೋರ್ಟ್ ಮುಂದೆ ಬಂದಿದೆ. ಕೋರ್ಟ್‌ನಲ್ಲಿರುವ ವಿಚಾರದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ನೋಡ್ರಿ, ಕಾನೂನು ಎಲ್ಲರಿಗೂ ಒಂದೆ. ಅವರಿಗೆ ಒಂದು, ಇವರಿಗೊಂದು ಅಂತ ಎರಡು ಕಾನೂನು ಇರಲ್ಲ. ಸಿಬಿಐಗೆ ಯಾರ ಕೇಂದ್ರದ ಹೋಮ್ ಮಿನಿಸ್ಟರ್ ಅಧೀನದಲ್ಲಿ‌ ಇರುತ್ತೆ. ಒಂದೊಂದು‌ ತನಿಖಾ ಸಂಸ್ಥೆ ಒಬ್ಬೊಬ್ಬರ ಅಧೀನದಲ್ಲಿರುತ್ತೆ ಎಂದು ತಿಳಿಸಿದರು.

  • ಸುರ್ಜೇವಾಲ ಮಹತ್ವದ ಸಭೆಗೆ ಪರಂ, ರಾಜಣ್ಣ ಗೈರು!

    ಸುರ್ಜೇವಾಲ ಮಹತ್ವದ ಸಭೆಗೆ ಪರಂ, ರಾಜಣ್ಣ ಗೈರು!

    ಬೆಂಗಳೂರು: ಕಾಂಗ್ರೆಸ್‌ ಸರ್ವ ಸದಸ್ಯರ ಸಭೆಗೆ ಗೃಹ ಸಚಿವ ಪರಮೇಶ್ವರ್‌ ಮತ್ತು ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಗೈರಾಗಿದ್ದಾರೆ.

    ಗೈರಾಗಿದ್ದಕ್ಕೆ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಗರಂ ಆಗಿದ್ದಾರೆ. ಈ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಬಳಿ ಅವರು ಮಾಹಿತಿ ಪಡೆದಿದ್ದಾರೆ.

    ಪಕ್ಷದ ಕೆಲಸಕ್ಕಿಂತ ದೊಡ್ಡ ಕಾರ್ಯಕ್ರಮ ಇತ್ತಾ? ಗೈರಾಗಲು ಅನುಮತಿ ಪಡೆದಿದ್ರಾ? ಎಂದು ಡಿಕೆಶಿ ಬಳಿ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಡಿಸಿಎಂ, ಅನುಮತಿ ಪಡೆದಿರುವ ವಿಚಾರ ಗೊತ್ತಿಲ್ಲ. ಸಭೆ ಬಗ್ಗೆ ಎಲ್ಲರಿಗೂ ಮಾಹಿತಿ ಇತ್ತು. ಹಾಜರಾಗುವಂತೆ ಸೂಚಿಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

    ಕಾಂಗ್ರೆಸ್‍ನಲ್ಲಿ ಹೆಚ್ಚಾಗಿರುವ ಪವರ್ ಶೇರಿಂಗ್ ಚರ್ಚೆ ಹಾಗೂ ಡಿನ್ನರ್ ಮೀಟಿಂಗ್ ವಿವಾದದ ಬೆನ್ನಲ್ಲಿ ಸುರ್ಜೇವಾಲಾ ರಾಜ್ಯಕ್ಕೆ ಆಗಮಿಸಿದ್ದಾರೆ. ಇನ್ನೂ ಈ ದಿನ ನಡೆಯಲಿರುವ ಶಾಸಕಾಂಗ ಸಭೆಯಲ್ಲಿ ಅವರು ಪಾಲ್ಗೊಳ್ಳಲಿದ್ದು, ಇದಕ್ಕೂ ಮುನ್ನ, ಕಾಂಗ್ರೆಸ್ ಶಾಸಕರು ಹಾಗೂ ಸಚಿವರ ಜೊತೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಪಕ್ಷದ ವಿಚಾರವನ್ನು ಬಹಿರಂಗವಾಗಿ ಮಾತಾಡದಂತೆ ಎಚ್ಚರಿಕೆ ನೀಡಿದ್ದಾರೆ.

    ಸಭೆಗೆ ಗೈರಾದ ಪರಮೇಶ್ವರ್, ಇತ್ತೀಚೆಗೆ ದಲಿತ ನಾಯಕರಿಗೆ ಡಿನ್ನರ್‌ ಮೀಟಿಂಗ್‌ ಆಯೋಜಿಸಿದ್ದರು. ಇದು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಬಳಿಕ ಹೈಕಮಾಂಡ್‌ ಸೂಚನೆ ಮೇರೆಗೆ ಮುಂದೂಡಿದ್ದರು. ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದರು.

    ಇತ್ತೀಚೆಗೆ ಸಚಿವ ಸತೀಶ್‌ ಜಾರಕಿಹೊಳಿ ಅವರ ಬೆಂಗಳೂರು ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಡಿನ್ನರ್‌ ಮೀಟಿಂಗ್‌ ನಡೆದಿತ್ತು. ಸಿಎಂ ಆಪ್ತರ ಜೊತೆ ನಡೆಸಿದ ಮೀಟಿಂಗ್‌ ಕಾಂಗ್ರೆಸ್‌ ಪಾಳಯದಲ್ಲಿ ಸಂಚಲನ ಸೃಷ್ಟಿಸಿತ್ತು. ಆ ಸಂದರ್ಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ವಿದೇಶ ಪ್ರವಾಸದಲ್ಲಿದ್ದರು.

  • ಅವ್ನೇನ್ ದೊಡ್ಡ ರೋಲ್ ಮಾಡೆಲ್ಲಾ? – ದರ್ಶನ್ ಬಗ್ಗೆ ಕೇಳಿದ್ದಕ್ಕೆ ಕೆ.ಎನ್ ರಾಜಣ್ಣ ಗರಂ

    ಅವ್ನೇನ್ ದೊಡ್ಡ ರೋಲ್ ಮಾಡೆಲ್ಲಾ? – ದರ್ಶನ್ ಬಗ್ಗೆ ಕೇಳಿದ್ದಕ್ಕೆ ಕೆ.ಎನ್ ರಾಜಣ್ಣ ಗರಂ

    ಹಾಸನ: ದೇಶದಲ್ಲಿ ದರ್ಶನ್‍ದ್ದು (Darshan) ಒಂದೇ ವಿಚಾರ ಇರೋದಾ? ಬೆಳಿಗ್ಗೆ ಎದ್ದರೆ ಟಿವಿಯಲ್ಲಿ ತೋರಿಸ್ತೀರಿ. ಅವನೇನು ಸಮಾಜಕ್ಕೆ ರೋಲ್ ಮಾಡೆಲ್ಲಾ? ಅದಕ್ಕಿಂತ ಒಳ್ಳೆಯದನ್ನ ತೋರಿಸಿ ಎಂದು ಮಾಧ್ಯಮಗಳ ಮೇಲೆ ಸಚಿವ ಕೆ.ಎನ್.ರಾಜಣ್ಣ (K.N Rajanna) ಗರಂ ಆಗಿದ್ದಾರೆ.

    ಹಾಸನದಲ್ಲಿ (Hassan) ಸುದ್ದಿಗಾರರು ದರ್ಶನ್ ಪ್ರಕರಣದ ಬಗ್ಗೆ ಕೇಳಿದ್ದಕ್ಕೆ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ, ಬರೀ ಅವನದ್ದೇ ತೋರಿಸುತ್ತೀರಿ. ಟಿವಿಯವರಿಗೆ ಬೇರೆ ಕೆಲಸ ಇಲ್ವಾ? ಒಳ್ಳೆಯ ಕಲಾವಿದ ಎಂದು ಎಲ್ಲರೂ ಒಪ್ಪುತ್ತೇವೆ. ಒಳ್ಳೆಯ ಕಲಾವಿದ ಜನರು ಇಷ್ಟ ಪಡ್ತಾರೆ ಎಂದ ಮಾತ್ರಕ್ಕೆ ಮಾಡಬಾರದ್ದನ್ನು ಮಾಡಿದ್ರೆ ಕಾನೂನು ಕ್ರಮ ತೆಗೆದುಕೊಳ್ಳತ್ತೆ. ಅದನ್ನು ಬೆಳಿಗ್ಗೆ, ಸಾಯಂಕಾಲ ಏನು ಮಾಹಿತಿ ಇಲ್ಲ ಎಂದು ತೋರಿಸುತ್ತಾ ಇದ್ರೆ ನೋಡಲು ಅಸಹ್ಯ ಆಗುತ್ತೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.

    ಹೇಮಾವತಿ ನದಿಗೆ ಬಾಗಿನ ಅರ್ಪಿಸುವ ವಿಚಾರವಾಗಿ ಮುಖ್ಯಮಂತ್ರಿಗಳ (CM Siddaramaiah) ಬಳಿ ಸಮಯ ಕೇಳಿದ್ದೇನೆ. ಅವರು ಸಮಯ ಕೊಟ್ಟ ಕೂಡಲೇ ಬಾಗಿನ ಅರ್ಪಿಸುತ್ತೇವೆ. ಹವಾಮಾನ ಸರಿ ಇಲ್ಲ. ಹೆಲಿಕಾಪ್ಟರ್‌ನಲ್ಲಿ ಓಡಾಡಲ್ಲ ಎಂದಿದ್ದಾರೆ. ಇವತ್ತು ಕೇಸ್ ಇದೆಯಲ್ಲ ಅವರು ಟೆನ್ಷನ್‍ನಲ್ಲಿ ಇರ್ತಾರೆ. ಇಂದು ಸಂಜೆ ಭೇಟಿ ಮಾಡಿ ದಿನಾಂಕ ನಿಗದಿ ಮಾಡ್ತೀವಿ ಎಂದಿದ್ದಾರೆ.

    ಮುಂಬಡ್ತಿ ಸಿಗುತ್ತದೆ ಎಂಬ ಗೃಹಸಚಿವ ಜಿ.ಪರಮೇಶ್ವರ್ ಹೇಳಿಕೆ ವಿಚಾರವಾಗಿ, ಅದರ ಬಗ್ಗೆ ಅವರನ್ನೇ ಕೇಳಿ. ಕಾಂಗ್ರೆಸ್ ಪಕ್ಷ ಎಂದರೆ ಹೈಕಮಾಂಡ್‍ನಿಂದ ನಿರ್ದೇಶನಗೊಳ್ಳುವ ಪಕ್ಷ. ರಾಹುಲ್‍ಗಾಂಧಿಯವರು ಅವರಿಗೆ ಬಡ್ತಿ ಕೊಡ್ತಿನಿ ಅಂದರೆ ನಾವು ತಪ್ಪಿಸಲು ಆಗುತ್ತಾ? ಬಡ್ತಿ ಇರಬಹುದು, ಯಾವುದೇ ಇರಬಹುದು ಅದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ. ಸಂಪುಟ ಪುನರ್‍ರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಎಲ್ಲವೂ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟ ವಿಚಾರ ಎಂದಿದ್ದಾರೆ.

    ಸಿಎಂ ವಿರುದ್ಧದ ಮುಡಾ ಪ್ರಕರಣದ (MUDA Case) ತೀರ್ಪಿನ ವಿಚಾರವಾಗಿ, ಅವರ ಪರ ವಕೀಲರು ಸಿಂಘ್ವಿ ಅವರು ವಾದ ಮಂಡಿಸಿದ್ದಾರೆ. ಅರ್ಜಿದಾರರ ಪರ ವಕೀಲರು ನ್ಯಾಯಾಧೀಶರ ಗಮನಕ್ಕೆ ತಂದಿದ್ದಾರೆ. ನ್ಯಾಯಾಲಯ 3 ಗಂಟೆಗೆ ವಿಚಾರಣೆಗೆ ತೆಗೆದುಕೊಳ್ಳಬಹುದು. ಇಂದೇ ತೀರ್ಪು ಬರಲ್ಲ, ಇನ್ನೂ ಸಮಯ ತೆಗೆದುಕೊಳ್ಳಲಿದೆ ಎಂಬ ಊಹೆ ನನ್ನದು ಎಂದು ಅವರು ಹೇಳಿದ್ದಾರೆ.

  • ಡಿಕೆಶಿ ವಾರ್ನಿಂಗ್ ನಾನ್ ಕೇಳ್ತೀನಾ? ನೋಟಿಸ್ ಕೊಡಲಿ ಅಮೇಲೆ ಮಾತಾಡ್ತೀನಿ: ಕೆ.ಎನ್.ರಾಜಣ್ಣ

    ಡಿಕೆಶಿ ವಾರ್ನಿಂಗ್ ನಾನ್ ಕೇಳ್ತೀನಾ? ನೋಟಿಸ್ ಕೊಡಲಿ ಅಮೇಲೆ ಮಾತಾಡ್ತೀನಿ: ಕೆ.ಎನ್.ರಾಜಣ್ಣ

    ಬೆಂಗಳೂರು: ಕಾಂಗ್ರೆಸ್‍ನಲ್ಲಿ (Congress) ಸಿಎಂ ಹಾಗೂ ಡಿಸಿಎಂ ಫೈಟ್ ಮತ್ತೊಂದು ಹಂತಕ್ಕೆ ತಲುಪಿದೆ. ಈ ವಿಚಾರದ ಬಗ್ಗೆ ಮಾತಾಡೋರಿಗೆ ನೋಟಿಸ್ ಕೊಡ್ತೀವಿ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ (D.K Shivakumar) ವಿರುದ್ಧ ಸಚಿವ ರಾಜಣ್ಣ (K.N Rajanna) ವಾಗ್ದಾಳಿ ನಡೆಸಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಡಿಕೆಶಿ ನೋಟಿಸ್ ಕೊಡಲಿ ಕೊಟ್ಟ ಮೇಲೆ ನಾನು ಮಾತಾಡ್ತೇನೆ. ಸಲಹೆ ನೀಡುವಾಗ ಸಾರ್ವಜನಿಕವಾಗಿ ವಿವಾದ ಆಗಬಾರದು ಎಂದು ಅವರು ಹೇಳಿರಬಹುದು. ಅದಕ್ಕೆ ನಾನು ಒಪ್ಪುತ್ತೇನೆ. ಬೇರೆಯವರು ಒಪ್ಪಬಹುದು. ನಾವು ಡಿಸಿಎಂ ಬಗ್ಗೆ ಹೇಳಿದ್ರೆ ಏನು ತಪ್ಪಾಗುತ್ತದೆ? ನಾವು ಕೇಳಬಾರದಾ? ನಾವು ಕೇಳಿದ್ದೇ ತಪ್ಪಾಗುತ್ತದೆಯೇ? ಕೇಳಿದ್ದೇ ತಪ್ಪು ಎಂದರೆ ಯಾವುದೇ ಕ್ರಮ ತೆಗೆದುಕೊಂಡರೂ ಎದುರಿಸಲು ನಾನು ತಯಾರಿದ್ದೇನೆ ಎಂದು ಅವರು ಡಿಸಿಎಂಗೆ ಸವಾಲು ಹಾಕಿದ್ದಾರೆ.

    ಡಿಕೆಶಿ ವಾರ್ನಿಂಗ್‌ಗೆ ನಾನು ಕೇಳ್ತೀನಾ? ನಾನು ನಾನೇ, ರಾಜಣ್ಣ ರಾಜಣ್ಣನೇ. ಅಧಿಕಾರಕ್ಕೆ ನಾನು ಅಂಟಿಕೊಳ್ಳೊಲ್ಲ. ಬಾಯಿಗೆ ಬೀಗ ಹಾಕಿಕೊಳ್ಳಬೇಕು ಎಂದು ಡಿಕೆಶಿ ಹೇಳಿದ್ರೆ ಎಲ್ಲರೂ ಬಾಯಿಗೆ ಬೀಗ ಹಾಕಿಕೊಳ್ಳಬೇಕು. ಅವರು ಹೇಳೋರನ್ನ ಹೇಳೋದಕ್ಕೆ ಬಿಟ್ಟು ಬರೀ ನಮಗೆ ಹೇಳಿದ್ರೆ ನಾನು ಕೇಳುವವನಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

    ಸಿಎಂ ಸಿದ್ದರಾಮಯ್ಯ ಅವರು (Siddaramaiah) ರಾಜೀನಾಮೆ ಕೊಟ್ಟು ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡಿ ಎಂದು ಒಬ್ಬರು ಅಭಿಪ್ರಾಯಪಟ್ಟರೆ, ಅದನ್ನ ಕೇಳಿಕೊಂಡು ನಾವು ಸುಮ್ಮನೆ ಇರೋಕೆ ಆಗುತ್ತಾ? ಸಿದ್ದರಾಮಯ್ಯರನ್ನ ಅವರು ಸಿಎಂ ಮಾಡಿದ್ರಾ? ಸಿದ್ದರಾಮಯ್ಯರನ್ನ ಸಿಎಂ ಮಾಡಿರೋದು ಕಾಂಗ್ರೆಸ್ ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ಮಾಡಿರೋದು. ಹಾಗೆ ಸಿಎಂ ಮಾಡೋದಾದ್ರೆ ಶಾಮನೂರು ಶಿವಶಂಕರಪ್ಪ ಅವರನ್ನ ಸಿಎಂ ಮಾಡಿ ಅಂತ ಸ್ವಾಮೀಜಿಗಳು ಹೇಳ್ತಾರೆ. ನಮ್ಮ ಸಮುದಾಯದ ಸ್ವಾಮೀಜಿಗಳು ಸತೀಶ್ ಜಾರಕಿಹೊಳಿ ಸಿಎಂ ಮಾಡಿ ಅಂತ ಹೇಳ್ತಾರೆ. ಸ್ವಾಮೀಜಿಗಳು ಹೇಳಿದ ಹಾಗೇ ಸಿಎಂಗಳನ್ನ ಮಾಡೋಕೆ ಆಗುತ್ತಾ? ಸ್ವಾಮೀಜಿ ಹೇಳಿರೋ ಹೇಳಿಕೆ ಹಿಂದುಳಿದ ವರ್ಗಗಳಿಗೆ ಮಾಡಿದ ಅವಮಾನ. ಪ್ರಜಾಪ್ರಭುತ್ವಕ್ಕೆ ಮಾಡಿರೋ ಅವಮಾನ ಎಂದು ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧವೂ ಅವರು ಕಿಡಿಕಾರಿದ್ದಾರೆ.

  • ಬೆವರು ಸುರಿಸದೇ ಜೀವನ ಮಾಡುವವರು ಸ್ವಾಮೀಜಿಗಳು: ರಾಜಣ್ಣ ಕಿಡಿ

    ಬೆವರು ಸುರಿಸದೇ ಜೀವನ ಮಾಡುವವರು ಸ್ವಾಮೀಜಿಗಳು: ರಾಜಣ್ಣ ಕಿಡಿ

    – ಇವರ ಪಿತೂರಿ ಮುಚ್ಚಿ ಹಾಕಲು ಡಿಕೆಶಿಗೆ ಸಿಎಂ ಸ್ಥಾನದ ಕೂಗು

    ತುಮಕೂರು: ಮಠ ಮಾಡಿ ಕೊಡುತ್ತೇವೆ ಎಂಬ ಸ್ವಾಮಿಜಿಗಳ ಸಲಹೆಯನ್ನು ಪರಿಶೀಲಿಸುತ್ತೇನೆ. ಬೆವರು ಸುರಿಸದೇ ಜೀವನ ಮಾಡೋವಂತಹದ್ದನ್ನ ಸ್ವಾಮೀಜಿಗಳು ಸಲಹೆ ಮಾಡಿದ್ದಾರೆ ಎಂದು ಸಚಿವ ಕೆ.ಎನ್ ರಾಜಣ್ಣ (K.N Rajanna) ಕಿಡಿಕಾರಿದ್ದಾರೆ.

    ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಣ್ಣಗೆ ಮಠ ಮಾಡಿಕೊಡ್ತೀವಿ ಎಂಬ ಚಂದ್ರಶೇಖರನಾಥ ಸ್ವಾಮೀಜಿ (Chandrashekaranatha Swamiji ) ಹೇಳಿಕೆ ವಿಚಾರವಾಗಿ ಅವರು ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ದೇಶದಲ್ಲಿ ಬಹಳ ಜನ ಸ್ವಾಮಿಗಳು ಇದ್ದಾರೆ. ಅವರೆಲ್ಲ ಸಲಹೆ ಕೊಡುತ್ತಾರೆ. ಅದೇ ರೀತಿ ಈ ಸಲಹೆಯನ್ನ ನಾನು ಪರಿಶೀಲನೆ ಮಾಡ್ತಿನಿ ಎಂದಿದ್ದಾರೆ.

    ಹೆಚ್ಚುವರಿ ಡಿಸಿಎಂ ವಿಚಾರವಾಗಿ ಸ್ವಾಮೀಜಿಗಳ ಹೇಳಿಕೆ ವಿಚಾರವಾಗಿ, ಅವರು ಹೇಳಿದ್ದರಲ್ಲಿ ತಪ್ಪೇನಿದೆ? ಈ ಬಗ್ಗೆ ಅಂತಿಮವಾಗಿ ನಿರ್ಣಯ ಮಾಡುವುದು ಕಾಂಗ್ರೆಸ್ ಹೈಕಮಾಂಡ್, ನಾವು ಕೇಳದೇ ಇದ್ದರೆ, ಅವರ ಗಮನಕ್ಕೆ ಹೇಗೆ ಹೋಗುತ್ತೆ? ಅಂತಿಮವಾಗಿ ಹೈಕಮಾಂಡ್‍ನವರು ಏನು ನಿರ್ಣಯ ತೆಗೆದುಕೊಳ್ತಾರೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದಿದ್ದಾರೆ.

    ಹೊಸಬರನ್ನು ಮಂತ್ರಿಗಳನ್ನಾಗಿ ಮಾಡೋದು, ಸಂಪುಟ ವಿಸ್ತರಣೆ ಮಾಡೋದು ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್‍ಗೆ ಬಿಟ್ಟಿದ್ದು. ಇವತ್ತು ಹೈಕಮಾಂಡ್ ಜೊತೆ ಹೆಚ್ಚುವರಿ ಡಿಸಿಎಂ ಸ್ಥಾನ ಪ್ರಸ್ತಾಪ ವಿಚಾರವನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಮಾಡ್ತಾರೋ ಇಲ್ವೋ ಗೊತ್ತಿಲ್ಲ. ಈ ವಿಚಾರವನ್ನು ಕೆಲವರು ಪದೇ ಪದೇ ಚರ್ಚಿಸುತ್ತಿದ್ದಾರೆ. ಈ ವಿಚಾರ ಹೈಕಮಾಂಡ್ ಎದುರು ಚರ್ಚೆಗೆ ಬಂದರೂ ಬರಬಹುದು, ಬರದೇ ಇದ್ದರು ಇರಬಹುದು ಎಂದು ಅವರು ಹೇಳಿದ್ದಾರೆ.

    ಡಿ.ಕೆ ಸುರೇಶ್ ಸೋಲಲಿಕ್ಕೆ ಇವರೆಲ್ಲ ಕಾರಣ. ಈ ಮಠ ಯಾರು ಮಾಡಿದ್ದು? ದೇವೇಗೌಡರು ಮಾಡಿದ್ದ ಮಠ ಇದು. ಬಾಲಗಂಗಾಧರನಾಥ್ ಸ್ವಾಮೀಜಿ ವಿರುದ್ಧ ದೇವೇಗೌಡರು ಈ ಮಠ ಮಾಡಿದ್ದರು. ಮಠ ಪ್ರಾರಂಭ ಮಾಡಿದ ದಿನದ ಭಾಷಣ ಯಾರ ಬಳಿಯಾದರೂ ಇದ್ರೆ ಕೇಳಿ. ಇವರು ದೇವೇಗೌಡರ ಕೃಪಾಶಿರ್ವಾದದಿಂದ ಮಠ ಮಾಡಿದ್ದು. ಈಗ ದೇವೇಗೌಡರ ಅಳಿಯನ ವಿರುದ್ಧ ಡಿ.ಕೆ ಸುರೇಶ್ ಸೋಲಲು ಇವರುಗಳೇ ಕಾರಣ. ಕ್ಷೇತ್ರದಲ್ಲಿ ಎಲ್ಲಾ ಎಂಪಿಗಳಿಂತ ಹೆಚ್ಚು ಕೆಲಸ ಮಾಡಿದವರು ಡಿ.ಕೆ ಸುರೇಶ್ ಅವರು, ಅಷ್ಟೇಲ್ಲಾ ಕೆಲಸ ಮಾಡಿದ್ರು ಸೋಲೋದು ಅಂದ್ರೆ ಪಿತೂರಿಗಳನ್ನ ಮಾಡಿದ್ದಾರೆ. ಇವರುಗಳೆಲ್ಲಾ ಮಾಡಿದ ಆ ಕ್ರಮ ಮುಚ್ಚಿ ಹಾಕಿಕೊಳ್ಳಲು, ಡಿಕೆಶಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಿ ಎಂದು ಇವಾಗ ಹೇಳೋದು ಅಷ್ಟೇ. ದೇವೇಗೌಡರು ಮಠ ಮಾಡಿದ್ದಕ್ಕೆ ಇದು ಉಪಕಾರ ಸ್ಮರಣೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

    ಸಿದ್ದರಾಮಯ್ಯನವರು ಎಲ್ಲಿಯವರೆಗೂ ಮುಂದುವರಿಯಲು ಅವಕಾಶ ನೀಡುತ್ತಾರೋ, ಅಲ್ಲಿಯವರೆಗೆ ಸಿಎಂ ಸ್ಥಾನದಲ್ಲಿ ಇರ್ತಾರೆ. ಯಾವಾಗ ಅವಕಾಶ ತಪ್ಪುತ್ತೋ ಅವಾಗ ಹೈಕಮಾಂಡ್‍ನವರು ಮಾತು ಕೇಳಬೇಕಾಗುತ್ತೆ. ಹೈಕಮಾಂಡ್ ಮಾತನ್ನು ಪಕ್ಷದಲ್ಲಿ ಅವರು ಕೇಳಬೇಕು, ಇನ್ನೊಬ್ಬರು ಕೇಳಬೇಕು ಎಂದಿದ್ದಾರೆ.

    ಸ್ವಾಮೀಜಿಗಳು ಪದೇ ಪದೇ ರಾಜಕೀಯದಲ್ಲಿ ಮೂಗು ತೂರಿಸುವ ವಿಚಾರವಾಗಿ, ಸಮಾಜಕ್ಕೆ ಒಳಿತನ್ನು ಮಾಡುವಂತಹದ್ದು ಸ್ವಾಮಿಗಳ ಕೆಲಸ. ಸಮಾಜ ಅಂದ್ರೆ ಜಾತಿಗಲ್ಲ, ಇಡೀ ಮಾನವ ಕುಲಕ್ಕೆ ಒಳಿತನ್ನ ಮಾಡುವಂತಹದ್ದು. ಆ ಸಮಾಜದಲ್ಲಿ ಸಾಮಾಜಿಕ ಪಿಡುಗನನ್ನು ದೂರ ಮಾಡುವಂತಹದ್ದು, ಮಕ್ಕಳಿಗೆ ವಿದ್ಯಾಭ್ಯಾಸವನ್ನ ಕೊಡುವಂತಹದ್ದು ಶತಮಾನಗಳಿಂದ ನಡೆದುಕೊಂಡು ಬಂದಿರುವಂತಹ ಪದ್ದತಿ. ಒಂದಷ್ಟು ಜನ ಸ್ವಾಮೀಜಿಗಳು ಲೆಟೆಸ್ಟ್ ಆಗಿ ಹೈಟೆಕ್ ಸ್ವಾಮೀಜಿಗಳು ಬಹಳ ಜನ ಬಂದಿದ್ದಾರೆ. ಅವರುಗಳ ಥಿಂಕಿಂಗ್ ಒಂದೊಂದು ರೀತಿ ಇರುತ್ತೆ. ಅದಕ್ಕೆ ನಾವೇನು ಹೇಳೊಕೆ ಆಗಲ್ಲ, ಅದು ಅವರಿಗೆ ಸೇರಿರುವಂತಹದ್ದು. ಇದನ್ನು ಬ್ಲಾಕ್‍ಮೈಲ್ ಎಂದು ನಾನು ಹೇಳುವುದಿಲ್ಲ ಎಂದಿದ್ದಾರೆ.

    ನಾವು ಸ್ವಾಮೀಜಿಗಳು ಎಂದರೆ ದೇವರ ಅಪರವತಾರ ಎಂದು ಹೇಳಿ ಕಾಲಿಗೆ ಬಿದ್ದು, ನಮಸ್ಕಾರ ಮಾಡಿ ಆಶೀರ್ವಾದ ಪಡೆಯಬೇಕು ಎಂಬಂತೆ ನಡೆದುಕೊಂಡಿದ್ದೇವೆ. ಅವರು ಒಬ್ಬ ಮನುಷ್ಯನ ಮಟ್ಟಕ್ಕೆ ಇಳಿದರೆ, ಅದು ಅವರಿಗೆ ಸೇರಿರುವಂತಹದ್ದು ಎಂದು ಅವರು ಕುಟುಕಿದ್ದಾರೆ.

  • ನನ್ನನ್ನು ಕೆಪಿಸಿಸಿ ಅಧ್ಯಕ್ಷ ಮಾಡಿದ್ರೆ ಸಚಿವ ಸ್ಥಾನ ಬಿಡೋಕೆ ಸಿದ್ಧ: ಕೆ.ಎನ್.ರಾಜಣ್ಣ

    ನನ್ನನ್ನು ಕೆಪಿಸಿಸಿ ಅಧ್ಯಕ್ಷ ಮಾಡಿದ್ರೆ ಸಚಿವ ಸ್ಥಾನ ಬಿಡೋಕೆ ಸಿದ್ಧ: ಕೆ.ಎನ್.ರಾಜಣ್ಣ

    ಬೆಂಗಳೂರು: ನನ್ನನ್ನು ಕೆಪಿಸಿಸಿ ಅಧ್ಯಕ್ಷನನ್ನಾಗಿ ಮಾಡಲಿ. ನಾನು ಸಚಿವ ಸ್ಥಾನ ಬಿಡೋಕೆ ಸಿದ್ಧನಿದ್ದೇನೆ ಎಂದು ಸಚಿವ ಕೆ.ಎನ್.ರಾಜಣ್ಣ (K.N.Rajanna) ಹೇಳಿದರು.

    ಸರ್ಕಾರಕ್ಕೆ ಒಂದು ವರ್ಷ ಪೂರ್ಣ ಹಿನ್ನೆಲೆ ನಗರದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಒಬ್ಬರೇ ಇರ್ತಾರೆ ಅಂದಿದ್ರು. ಕೆ.ಸಿ.ವೇಣುಗೋಪಾಲ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ರು. ಚುನಾವಣೆ ಫಲಿತಾಂಶ ಬರಲಿ. ಆಮೇಲೆ ಪೊಲರೈಸೇಷನ್ ಆಗಬಹುದು. ಅದು ಇಲ್ಲಷ್ಟೇ ಅಲ್ಲ ಎಲ್ಲಾ ಕಡೆಯೂ ಆಗಬಹುದು. ನನ್ನನ್ನ ಕೆಪಿಸಿಸಿ ಅಧ್ಯಕ್ಷನನ್ನಾಗಿ ಮಾಡಲಿ. ನಾನು ಮಂತ್ರಿ ಸ್ಥಾನ ಬಿಡೋಕೆ ಸಿದ್ಧನಿದ್ದೇನೆ. ಅಧ್ಯಕ್ಷರ ಬದಲಾವಣೆ ಸನ್ನಿವೇಶ ಎದುರಾದರೆ ನಾನು ಸಿದ್ಧ. ಮುಂದೆ ನಾನು ಯಾವ ಚುನಾವಣೆಗೆ ನಿಲ್ಲಲ್ಲ. ಪಕ್ಷಕ್ಕಾಗಿ ತನು ಮನ ಅರ್ಪಿಸಿ ಸಂಘಟನೆ ಮಾಡುತ್ತೇನೆ. ನನ್ನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಅಲ್ಪಸಂಖ್ಯಾತರು ಗಲಭೆ ಮಾಡಿದ್ರೆ ಯಾಕೆ ಖಂಡನೆ ಮಾಡೋದಿಲ್ಲ – ಸಿಎಂಗೆ ಜೋಶಿ ಪ್ರಶ್ನೆ!

    ಲೋಕಸಭಾ ಚುನಾವಣೆ ಕುರಿತು ಮಾತನಾಡಿ, 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಒಲವಿದೆ. ಹಾಸನ ನನ್ನ ಉಸ್ತುವಾರಿ ಜಿಲ್ಲೆ. ತುಮಕೂರು ನನ್ನ ತವರು ಜಿಲ್ಲೆ. ಹಾಸನದಲ್ಲಿ ಒಂದೇ ಕುಟುಂಬವಿತ್ತು. 25 ವರ್ಷಗಳಿಂದ ಅವರೇ ಇದ್ರು. ಈ ಭಾರಿ ನಮ್ಮ ಅಭ್ಯರ್ಥಿಗೆ ಅವಕಾಶವಿದೆ. ಪೆನ್‌ಡ್ರೈವ್ ಪ್ರಕರಣ ಇದಕ್ಕೆ ಪರಿಣಾಮ ಬೀರಲ್ಲ. ಪುಟ್ಟಸ್ವಾಮಿ ಗೌಡರು ರಾಜಕೀಯದಲ್ಲಿದ್ದವರು. ಶ್ರೇಯಸ್ ಪಟೇಲ್ 3,000 ಮತಗಳಿಂದ ಸೋತಿದ್ರು. ಹೊಳೆನರಸೀಪುರದಲ್ಲಿ ಹೆಚ್ಚಿನ ಮತ ಪಡೆದಿದ್ರು. ಅವರ ತಾಯಿ ಕೂಡ ಸೋತಿದ್ದರು. ಹೀಗಾಗಿ ಎಲ್ಲರ ಶ್ರೀರಕ್ಷೆ ನಮ್ಮ ಅಭ್ಯರ್ಥಿಗೆ ಗೆಲುವಾಗಲಿದೆ. ಪ್ರಜ್ವಲ್ ಕೇಸ್ ವಿಚಾರ ಪ್ರಜ್ವಲ್ ವಿರುದ್ಧ ಕ್ರಮ ಕೈಗೊಳ್ತಾರೆ. ಅವರ ಮೂವ್‌ಮೆಂಟ್ ಎಲ್ಲರಿಗೆ ಗೊತ್ತಿದೆ. ಪಾಸ್‌ಪೋರ್ಟ್ ರದ್ದು ಏಕಾಏಕಿ ಆಗಲ್ಲ. ಅವಕಾಶ ಮಾಡಿಕೊಡಬೇಕು. ಕಾನೂನಿನ ಲೋಪವಾಗದಂತೆ ನೋಡಿಕೊಳ್ತಿದ್ದಾರೆ. ಅವರೆಲ್ಲಿದ್ದಾರೆ ಎಲ್ಲರಿಗೂ ಗೊತ್ತಿರುತ್ತದೆ. ಕೇಂದ್ರಕ್ಕೂ ಗೊತ್ತು, ರಾಜ್ಯಕ್ಕೂ ಗೊತ್ತು. ಎಸ್‌ಐಟಿಯವರಿಗೂ ಗೊತ್ತಿರುತ್ತೆ. ಕಾನೂನಿನ ಪ್ರಕಾರವೇ ಮಾಡಬೇಕು. ಪೆನ್‌ಡ್ರೈವ್ ತೋರಿಸಿದ್ದು ಯಾರು? ಪೆನ್‌ಡ್ರೈವ್ ಪಿತಾಮಹನೇ ಕುಮಾರಸ್ವಾಮಿ. ಅವರ ಪೆನ್‌ಡ್ರೈವ್‌ನಲ್ಲಿದ್ದು ಅದೇ. ಪೆನ್‌ಡ್ರೈವ್ ಪಿತಾಮಹನೇ ಕುಮಾರಸ್ವಾಮಿ ಎಂದು ಆರೋಪಿಸಿದರು.

    ದೇವರಾಜೇಗೌಡ, ಡಿಕೆಶಿ ಮಾತುಕತೆ ವಿಚಾರವಾಗಿ ಮಾತನಾಡಿ, ಯಾರೋ ಮಾಡಿರ್ತಾರೆ ಮಾತನಾಡಬೇಕಲ್ಲ. ಮಾತನಾಡೋಕೆ ಆಗಲ್ಲ ಅಂತಾ ಹೇಳೋಕೆ ಆಗುತ್ತಾ? ನಮ್ಮನ್ನ ಸಿಕ್ಕಿಸಲು ಪ್ರಯತ್ನ ಮಾಡ್ತಾರೆ. ಹೆಣ್ಣುಮಕ್ಕಳು ಮಾಡಿದ್ರೆ ನಾನೇ ಬ್ಲಾಕ್ ಮಾಡ್ತೇನೆ. ಯಾಕೆ ಬೇಕಪ್ಪ ಇದು ಅಂತಾ ಬ್ಲಾಕ್ ಮಾಡ್ತೀನಿ. ನಾನು ಮೊಬೈಲ್ ಎಕ್ಸ್ಪರ್ಟ್ ಅಲ್ಲ. ಫೋನ್ ಮಾಡೋದು ಅಷ್ಟೇ ನನಗೆ ಗೊತ್ತಿರೋದು. ಹನಿಟ್ರ‍್ಯಾಪ್ ಯಾಕೆ ಆಗುತ್ತದೆ? ಪ್ರಜ್ವಲ್ ಮಾಡಿರೋದು ಘೋರ ಅಪರಾಧ. ರಿಲೀಸ್ ಆಗಿರೋದು ಅಪರಾಧವೇ. ರಮೇಶ್ ಜಾರಕಿಜೊಳಿ ಕೇಸ್‌ನಲ್ಲಿ ಏನಾಯ್ತು? ಅವನಿಗೂ ಇದೇ ಟ್ರ‍್ಯಾಪ್ ತಾನೇ ಮಾಡಿದ್ದು. ಅದರ ಮೇಲೆ ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬಿಜೆಪಿಯಿಂದ ಮಾಜಿ ಶಾಸಕ ರಘುಪತಿ ಭಟ್ ಉಚ್ಚಾಟನೆ

    ರಮೇಶ್ ಜಾರಕಿಹೊಳಿ ಕೇಸ್ ಅಲ್ಲೂ ಕ್ರಮವಿಲ್ಲ. ಯಾರು ಮಾಡಿದ್ರು ಅದು ತಪ್ಪೇ ಅಲ್ವೇ. ಪ್ರೈವಸಿಗೆ ಅಲ್ಲೂ ಹೊಡೆತ ಬಿದ್ದಿಲ್ವೇ. ಯಾಕೆ ಆಗ ಕ್ರಮ ಜರುಗಿಸಲಿಲ್ಲ. ರೇವಣ್ಣ ಕಿಡ್ನ್ಯಾಪ್ ಕೇಸ್‌ನಲ್ಲಿ ಏನಾಗಿದ್ಯೋ? ಜೆಸಿಗೆ ಕಳಿಸ್ತಾರೆ ಅಂದ್ರೆ ಏನೋ ಇರಬೇಕು. ಕುಮಾರಸ್ವಾಮಿ ನಮ್ಮ ಕುಟುಂಬ ಬೇರೆ, ಅವರದ್ದು ಬೇರೆ ಅಂದಿದ್ದಾರಲ್ಲಾ. ದೇವೇಗೌಡರ ಪತ್ರಕ್ಕೆ ಇನ್ನೇನಿದೆ ಮಾನ್ಯತೆ. ನಮ್ಮ ಕುಟುಂಬ ಅಂದ್ರೆ ಹೇಗೆ? ಕುಮಾರಸ್ವಾಮಿ ಎರಡು ಬೇರೆ ಬೇರೆ ಅಂತಾರಲ್ಲ. ಯಾವ ಕುಟುಂಬಕ್ಕೆ ಅಗೌರ ಆಗ್ತಿದೆ ಹೇಳಬೇಕಲ್ಲ. ರೇವಣ್ಣನದೋ, ಕುಮಾರಸ್ವಾಮಿದೋ ಹೇಳಬೇಕಲ್ಲ ಎಂದರು.

    ತಲೆ ಹಿಡಿಯೋರು ಅವರೇ ಎಂಬ ಕುಮಾರಸ್ಚಾಮಿ ಟೀಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಸುತ್ತ ಇರೋರು ಯಾರು? ಅಲ್ಲಿರುವವರು ಅವರೇ ತಾನೇ. ಅದರ ಬಗ್ಗೆ ಕುಮಾರಸ್ವಾಮಿ ಕೇಳಿ. ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಸರಿಯಿದೆ. ವಿಪಕ್ಷದಲ್ಲಿರೋರು ಅರೋಪ ಮಾಡೋಕೆ ಇರೋರು. ಅವರ ಪರವಾಗಿ ಮಾತನಾಡೋಕೆ ಅಂತಾ ಹೇಳೋಕೆ ಆಗುತ್ತಾ. ಕುಮಾರಸ್ವಾಮಿಗೆ ಬುದ್ಧಿಭ್ರಮಣೆ ಆಗಿದೆ ಅದಕ್ಕೆ ಹೀಗೆ ಮಾತಾಡ್ತಿದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹರೀಶ್ ಪೂಂಜಾ ಎಂಎಲ್‍ಎ ಅಂತಾ ಬಿಟ್ಟು ಬಿಡೋಕೆ ಆಗುತ್ತಾ: ಪ್ರತಿಪಕ್ಷಗಳಿಗೆ ಸಿಎಂ ಪ್ರಶ್ನೆ

    ಕುಟುಂಬನೇ ಬೇರೆ ಬೇರೆ ಆಗಿದೆ ಅಲ್ವಾ? ಕುಮಾರಸ್ವಾಮಿನೇ ನಮ್ಮದು ಬೇರೆ ಕುಟುಂಬ ಎಂದಿದ್ದಾರೆ. ಈಗ ರೇವಣ್ಣ ಕುಟುಂಬಕ್ಕೆ ತೊಂದರೆಯಾಗಿದ್ಯಾ? ಹೆಚ್‌ಡಿಕೆ ಕುಟುಂಬಕ್ಕಾ? ಯಾವ ಕುಟುಂಬಕ್ಕೆ ಅಗೌರವ ಆಗ್ತಿದೆ ಅದನ್ನ ಹೇಳಲಿ. ಎಲ್ಲಾ ಗೊಂದಲ ಬಗೆಹರಿಯುತ್ತೆ. ರಾಕೇಶ್ ವಿಚಾರದಲ್ಲಿ ಯಾರಿಗೂ ಏನ್ ಗೊತ್ತಿಲ್ಲ. ನಾವ್ ಹೇಳಿದ್ರೆ ನೂರ್ ಇದೆ ಹೇಳೋಕೆ. ಬೇರೆಯವರ ಮನಸ್ಸನ್ನ ನೋಯಿಸೋದು ಸರಿಯಲ್ಲ ಎಂದು ಹೆಚ್‌ಡಿಕೆಗೆ ಟಾಂಗ್ ಕೊಟ್ಟರು.

  • ಪಾಕ್ ಪರ ಘೋಷಣೆ ಕೂಗಿದ್ರಲ್ಲಿ ನಾಸೀರ್ ಹುಸೇನ್ ಪಾತ್ರವಿದ್ದರೆ ಪ್ರಮಾಣವಚನ ಸ್ವೀಕಾರಕ್ಕೆ ಬಿಡಬಾರದು: ಸಚಿವ ಕೆ.ಎನ್.ರಾಜಣ್ಣ

    ಪಾಕ್ ಪರ ಘೋಷಣೆ ಕೂಗಿದ್ರಲ್ಲಿ ನಾಸೀರ್ ಹುಸೇನ್ ಪಾತ್ರವಿದ್ದರೆ ಪ್ರಮಾಣವಚನ ಸ್ವೀಕಾರಕ್ಕೆ ಬಿಡಬಾರದು: ಸಚಿವ ಕೆ.ಎನ್.ರಾಜಣ್ಣ

    ತುಮಕೂರು: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ (Pro-Pak Slogan) ಕೂಗಿದ್ರಲ್ಲಿ ನಾಸೀರ್ ಹುಸೇನ್ ಪಾತ್ರ ಇದ್ದರೆ ಅವರನ್ನು ಪ್ರಮಾಣ ವಚನ ಮಾಡದಂತೆ ಬಿಪಿಯವರು ತಡೆಯಬೇಕು ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ (K.N.Rajanna) ಆಗ್ರಹಿಸಿದ್ದಾರೆ.

    ತುಮಕೂರಿನಲ್ಲಿ (Tumakuru) ಮಾತನಾಡಿದ ಅವರು, ಪಾಕ್ ಪರ ಘೋಷಣೆ ಕೂಗಿರೋದ್ರಲ್ಲಿ ನಾಸೀರ್ ಹುಸೇನ್ (Naseer Hussain) ಪಾತ್ರ ಸಾಭೀತಾದರೆ ಅವರನ್ನು ರಾಜ್ಯಸಭಾ ಸದಸ್ಯರಾಗಿ ಮಾಡಬಾರದು. ಅಷ್ಟೇ ಅಲ್ಲ ಸಂಸತ್‌ನಲ್ಲಿ ಪ್ರಮಾಣ ವಚನ ಮಾಡದಂತೆ ಬಿಜೆಪಿಯವರು ತಡೆಯಬೇಕು. ಇದು ನನ್ನ ಆಗ್ರಹ ಎಂದಿದ್ದಾರೆ. ಇದನ್ನೂ ಓದಿ: ಸರ್‌, ನಾನು ನೂರಾರು ಕೋಟಿಗೆ ಬಾಳ್ತೀನಿ: ಪಾಕ್‌ ಪರ ಘೋಷಣೆ ಕೂಗಿದ್ದ ನಾಶಿಪುಡಿ ಯಾರು?

    ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರಾಜಣ್ಣ, ಸಮಾಜಘಾತುಕ ಕೆಲಸ ಮಾಡುವವರ ವಿರುದ್ಧ ಶೂಟ್‌ಡೌನ್ ಕಾನೂನು ತರಬೇಕು. ಯಾರೇ ಒಬ್ಬರು ಸಮಾಜಘಾತುಕ ಕೆಲಸ ಮಾಡಿದ್ರೆ ಖಂಡಿಸಲೇಬೇಕು ಎಂದು ತಿಳಿಸಿದ್ದಾರೆ.

    ದೇಶದ್ರೋಹಿ ಕೆಲಸ ನಾನೇ ಮಾಡಲಿ, ಇನ್ನೊಬ್ಬನೇ ಮಾಡಲಿ, ಬೇರೆ ದೇಶಗಳಲ್ಲಿ ಹೇಗೆ ತಕ್ಷಣ ಶೂಟ್‌ಡೌನ್ ಮಾಡುತ್ತಾರೋ ಇಲ್ಲಿಯೂ ಶೂಟ್‌ಡೌನ್ ಕಾನೂನು ಜಾರಿಯಾಗಬೇಕು ಎಂದು ಬಲವಾಗಿ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಪಾಕ್‌ ಪರ ಘೋಷಣೆ ಕುರಿತು ಕ್ಲೀನ್‌ ಚಿಟ್‌ ಕೊಟ್ಟ ಪ್ರಿಯಾಂಕ್‌ ಖರ್ಗೆ ಕ್ಷಮೆಯಾಚಿಸ್ಬೇಕು: ಸಿ.ಟಿ ರವಿ ಆಗ್ರಹ

  • ಟೂರಿಂಗ್‌ ಟಾಕೀಸ್‌ನಲ್ಲಿ ಗೊಂಬೆ ಇಟ್ಟಿದ್ದಾರೆ ಅನ್ನಿಸ್ತು: ಶ್ರೀರಾಮನ ಕುರಿತು ಸಚಿವ ರಾಜಣ್ಣ ಹೇಳಿಕೆ

    ಟೂರಿಂಗ್‌ ಟಾಕೀಸ್‌ನಲ್ಲಿ ಗೊಂಬೆ ಇಟ್ಟಿದ್ದಾರೆ ಅನ್ನಿಸ್ತು: ಶ್ರೀರಾಮನ ಕುರಿತು ಸಚಿವ ರಾಜಣ್ಣ ಹೇಳಿಕೆ

    – ಬಿಜೆಪಿ ಟೀಕಿಸುವ ಭರದಲ್ಲಿ ಭಗವಾನ್ ರಾಮನ ಅಪಮಾನಿಸುವ‌ ಮಾತು

    ತುಮಕೂರು: ಅಯೋಧ್ಯೆ ರಾಮಮಂದಿರ (Ram Mandir) ವಿಚಾರವಾಗಿ ಬಿಜೆಪಿ ನಡೆಯನ್ನು ಟೀಕಿಸುವ ಭರದಲ್ಲಿ ಭಗವಾನ್‌ ಶ್ರೀರಾಮನನ್ನು (Sri Ram) ಕಾಂಗ್ರೆಸ್‌ ಸಚಿವ ಕೆ.ಎನ್.ರಾಜಣ್ಣ (K.N.Rajanna) ಅವಮಾನಿಸಿದ್ದಾರೆ.

    ತುಮಕೂರಿನಲ್ಲಿ ಮಂಗಳವಾರ ನಡೆದ ಹಿಂದುಳಿದ ವರ್ಗಗಳ ಒಕ್ಕೂಟ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಬಾಬ್ರಿ ಮಸೀದಿ ಬೀಳಿಸಿದ್ದಾಗ ಅಲ್ಲಿಗೆ ಹೋಗಿದ್ದೆ. ಒಂದು ಟೆಂಟ್‌ ಅಲ್ಲಿ ಎರಡು ಗೊಂಬೆ ಇಟ್ಟು ಇದೇ ಶ್ರೀರಾಮ ಅಂತಾ ಹೇಳ್ತಿದ್ರು. ಟೂರಿಂಗ್ ಟಾಕೀಸ್ ಅಲ್ಲಿ ಗೊಂಬೆ ಇಟ್ಟಿದ್ದಾರೆ ಅನಿಸ್ತು ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆ ಗೆದ್ದರೇ ಸಿದ್ದರಾಮಯ್ಯರೇ ಪೂರ್ಣಾವಧಿ ಸಿಎಂ – ಯತೀಂದ್ರ ಹೊಸ ಬಾಂಬ್!

    ಈಗೆಲ್ಲಾ ಶ್ರೀರಾಮನ ದೇವಸ್ಥಾನ ಕಟ್ಟಿಸ್ತಿದ್ದಾರೆ ಅಲ್ಲಿ. ಇನ್ನೊಂದು ಐದಾರು ತಿಂಗಳು ಕಳೀಲಿ ಏನೇನ್ ಬರ್ತವೆ, ಏನೇನು ಅಂತೇಳಿ. ಯಾವತ್ತೂ ಕೂಡ ಶ್ರೀರಾಮ ಎಲ್ಲಾ ಜನರನ್ನ ಆಶೀರ್ವದಿಸುವ ದೇವರು. ಅದಕ್ಕೋಸ್ಕರ ರಾಮರಾಜ್ಯದ ಕಲ್ಪನೆ ಬಂದಿದ್ದು ಎಂದು ತಿಳಿಸಿದ್ದಾರೆ.

    ಈಗ ಅದು ಬಿಜೆಪಿ ಶ್ರೀರಾಮನೋ, ಮೋದಿ ಶ್ರೀರಾಮನೋ ನೋಡೋಣ. ಅದು ಏನಾಗುತ್ತೆ ಅಂತಾ. ನಮ್ಮೂರಲ್ಲಿ ನೂರಾರು ವರ್ಷ ಇತಿಹಾಸ ಇರುವಂತಹ, ಪಾವಿತ್ರ್ಯವಾಗಿರುವ ಶ್ರೀರಾಮನ ದೇವಸ್ಥಾನಗಳಿವೆ. ಈಗ ಅದನ್ನ ಬಿಟ್ಟು ಇವರು ಚುನಾವಣೆಗೋಸ್ಕರ ದೇವಸ್ಥಾನಗಳನ್ನ ಕಟ್ಟಿ, ಜನರಿಗೆ ಮೋಸ ಮಾಡೋ ಕೆಲಸ ಮಾಡ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಪೂರ್ಣ ತೋಳಿನ ಅಂಗಿ, ಶೂ ಧರಿಸುವುದು ನಿಷೇಧ – PSI ಪರೀಕ್ಷಾ ಅಭ್ಯರ್ಥಿಗಳಿಗೆ ಮಾರ್ಗಸೂಚಿ ಪ್ರಕಟ