Tag: K.N Rajanna

  • ‘ಹನಿಟ್ರ‍್ಯಾಪ್’ ಸದನದಲ್ಲಿ ಪ್ರಸ್ತಾಪ ಮಾಡಿದ್ದು ತಲೆತಗ್ಗಿಸುವ ವಿಚಾರ: ಪ್ರಿಯಾಂಕ್ ಖರ್ಗೆ

    ‘ಹನಿಟ್ರ‍್ಯಾಪ್’ ಸದನದಲ್ಲಿ ಪ್ರಸ್ತಾಪ ಮಾಡಿದ್ದು ತಲೆತಗ್ಗಿಸುವ ವಿಚಾರ: ಪ್ರಿಯಾಂಕ್ ಖರ್ಗೆ

    ಬೆಂಗಳೂರು: ಹನಿಟ್ರ‍್ಯಾಪ್ ವಿಚಾರವನ್ನ ಸದನದಲ್ಲಿ ಪ್ರಸ್ತಾಪ ಮಾಡಿದ್ದರು. ಇದು ಸಾರ್ವಜನಿಕರ ಮುಂದೆ ತಲೆ ತಗ್ಗಿಸುವ ವಿಚಾರ ಎಂದು ಸಚಿವ ಪ್ರಿಯಾಂಕ್ ಖರ್ಗೆ (Mallikarjun Kharge) ಬೇಸರ ವ್ಯಕ್ತಪಡಿಸಿದರು.

    ಹನಿಟ್ರ‍್ಯಾಪ್ ಯತ್ನದ ಕೆಸರೆರಚಾಟದ ವಿಚಾರವಾಗಿ ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಗೃಹ ಸಚಿವರಿಗೆ ರಾಜಣ್ಣ ಮನವಿ ಕೊಟ್ಟಿದ್ದಾರೆ. ಉನ್ನತ ಮಟ್ಟದ ತನಿಖೆ ಆಗಬೇಕು ಅಂದಿದ್ದಾರೆ. ಇದಕ್ಕೆ ಸರ್ಕಾರ ಕೂಡ ಸಿದ್ಧ ಇದೆ ಎಂದು ಹೇಳಿದರು. ಇದನ್ನೂ ಓದಿ: ಏ.2ಕ್ಕೆ ಸಿಎಂ ಡೆಲ್ಲಿಗೆ – ಹನಿಟ್ರ‍್ಯಾಪ್ ಬಗ್ಗೆ ಮಾಹಿತಿ ಕೊಡ್ತಾರಾ ಸಿದ್ದರಾಮಯ್ಯ?

    ಹನಿಟ್ರ‍್ಯಾಪ್ ವಿಚಾರವನ್ನ ಸದನದಲ್ಲಿ ಪ್ರಸ್ತಾಪ ಮಾಡಿದ್ದರು. ಪರಮೇಶ್ವರ್ ಅವರು ದೂರು ಕೊಡಲಿ ಎಂದು ಹೇಳಿದ್ದರು. ಗುರುವಾರದವರೆಗೂ ಸಮಯ ಕೇಳಿದ್ದರು. ನೋಡೋಣ ಎಂದಿದ್ದರು. ಇದು ಸಾರ್ವಜನಿಕರ ಮುಂದೆ ತಲೆ ತಗ್ಗಿಸುವ ವಿಚಾರವಾಗಿದೆ. ಕೋಟಿ ಜನರಲ್ಲಿ 224 ಜನರಿಗೆ ರಾಜಕೀಯಕ್ಕೆ ಬರಲು ಅವಕಾಶ ಇದೆ. ಆದರೆ ನಮ್ಮ ಕ್ರೆಡಿಬಿಲಿಟಿಯನ್ನು ನಾವೇ ಕಳೆದುಕೊಳ್ಳುವುದು ದುರಂತದ ಸಂಗತಿ ಎಂದರು. ಇದನ್ನೂ ಓದಿ: ಧಾರವಾಡ | ಮಳೆ, ಗಾಳಿಗೆ ಗೋಡೆ ಕುಸಿದು ಇಬ್ಬರು ಕೂಲಿ ಕಾರ್ಮಿಕರು ದುರ್ಮರಣ – ಓರ್ವ ಗಂಭೀರ

    ಅನೇಕರದ್ದು ಸಿಡಿ ಇದೆ ಎಂದು ಹೇಳಿದ್ದಾರೆ. ಅಂದರೆ ಸಿಎಂ, ಡಿಸಿಎಂ, ಸ್ಪೀಕರ್ ಅವರ ಸಿಡಿ ಇದೆ ಅಂತಾನಾ? ಇದು ನಿಜಕ್ಕೂ ತಲೆ ತಗ್ಗಿಸುವ ವಿಚಾರ. ನಾವು ಕುಟುಂಬಗಳಿಗೆ, ಸ್ನೇಹಿತರಿಗೆ ಹೇಗೆ ಮುಖ ತೋರಿಸುವುದು. ನಮಗೂ ನೈತಿಕತೆ ಇರಬೇಕಲ್ವಾ. ಮಾಡುವವರಿಗೆ ಮಾಡಿಸಿಕೊಂಡವರಿಗೂ ಇದೇ ಬೇಕು ಅಂದ್ರೆ ಏನು? ಯಾರು ಟ್ರಿಕ್ಸ್ ಮಾಡುತ್ತಿದ್ದಾರೆ ಎನ್ನುವುದು ನಮಗೇನು ಗೊತ್ತು. ಹೌದು, ಮುಜುಗರ ತಂದಿದೆ. ನಾವೇನಾದ್ರೂ ಉಳಿಸಿಕೊಂಡಿದ್ದೇವಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ವಿಶಿಷ್ಟ ಕಥಾ ಹಂದರದ ಮಕ್ಕಳ ಚಿತ್ರ ‘ಸೀಸ್ ಕಡ್ಡಿ’ ಬಿಡುಗಡೆಗೆ ರೆಡಿ!

    ಹನಿಟ್ರ‍್ಯಾಪ್ ವಿಚಾರದಲ್ಲಿ ಸ್ವಯಂಪ್ರೇರಿತ ದೂರನ್ನ ಹೇಗೆ ತೆಗೆದುಕೊಳ್ಳಲು ಆಗುತ್ತದೆ. ಸದನದಲ್ಲಿ ಚರ್ಚೆ ಆಗಿರುವುದರಿಂದ ಅವರೇ ದೂರು ಕೊಡಬೇಕು. ಯಾರೆಲ್ಲಾ ಹನಿಟ್ರ‍್ಯಾಪ್ ಮಾಡುತ್ತಿದ್ದಾರೆ ಎಂದು ದೂರು ಕೊಡಲಿ. ಯುವಕ ಯುವತಿಯವರು ಯಾರೂ ರಾಜಕಾರಣಿ ಆಗಬೇಕು ಎಂದು ಹೇಳುತ್ತಿಲ್ಲ. ಡಾಕ್ಟರ್, ಇಂಜಿನಿಯರ್ ಆಗಬೇಕು ಎಂದು ಹೇಳುತ್ತಾರೆ ಎಂದರು. ಇದನ್ನೂ ಓದಿ: ಮೋದಿ ಹೆಸ್ರಲ್ಲಿ 32 ಲಕ್ಷ ಗಿಫ್ಟ್ ಕಿಟ್ ಕೊಡೋದು ಮುಸ್ಲಿಂ ಓಲೈಕೆ ಅಲ್ವಾ? – ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ಹಿಂದೆ ಇದೇ ಸದನದಲ್ಲಿ ಬಿಜೆಪಿಯವರು ಏಕಪತ್ನಿ ವ್ರತಸ್ಥರಲ್ಲ ಅಂದಿದ್ದರು. ಇವರು ಇರಬಹುದು ಆದರೆ ನಾವಲ್ಲ. ಜನ ಮತ ಹಾಕಿ ಇಲ್ಲಿಗೆ ಕಳುಹಿಸಿರುತ್ತಾರೆ. ಹೀಗೆ ಆದಾಗ ಮುಜುಗರ ಆಗೇ ಆಗುತ್ತದೆ. ಇತಿಹಾಸ ತೆಗೆದು ನೋಡಿ, ರಾಜಕಾರಣಿಯಿಂದ ಸಾಮಾಜ್ರ‍್ಯ ಬೆಳೆದದ್ದು ಇದೇ ಸಂಸ್ಕೃತಿಯಲ್ಲೇ. ಯಾರೋ ಬಂದು ನಮಗೆ ಏನೋ ಮಾಡುತ್ತಾರೆ ಅಂದರೆ ನಾವು ಅದಕ್ಕೆ ತಯಾರು ಇದ್ದೇವೆ ಅಂತಾನಾ? ಎಂದು ಕೇಳಿದರು. ಇದನ್ನೂ ಓದಿ: ಮಂಡ್ಯ ಜನರು ಛತ್ರಿ ಹೇಳಿಕೆ; ಡಿಕೆಶಿ ಜನರ ಕ್ಷಮೆ ಕೇಳಬೇಕು – ಅನ್ನದಾನಿ

  • ರಾಜಣ್ಣ ದೂರು ಕೊಡಬೇಕಲ್ಲವಾ? ನೀವು ಎಷ್ಟು ಬಾರಿ ತಿರುಗಿಸಿ ಮುರುಗಿಸಿ ಕೇಳಿದ್ರು ಅಷ್ಟೇ: ಪರಮೇಶ್ವರ್

    ರಾಜಣ್ಣ ದೂರು ಕೊಡಬೇಕಲ್ಲವಾ? ನೀವು ಎಷ್ಟು ಬಾರಿ ತಿರುಗಿಸಿ ಮುರುಗಿಸಿ ಕೇಳಿದ್ರು ಅಷ್ಟೇ: ಪರಮೇಶ್ವರ್

    ಬೆಂಗಳೂರು: ರಾಜಣ್ಣ (K.N.Rajanna) ದೂರು ಕೊಡಬೇಕಲ್ಲವಾ? ದೂರು ಕೊಟ್ಟರೆ ತನಿಖೆ ಮಾಡ್ತೇವೆ. ನೀವು ಎಷ್ಟು ಬಾರಿ ತಿರುಗಿಸಿ ಮುರುಗಿಸಿ ಕೇಳಿದ್ರು ಅಷ್ಟೇ ಎಂದು ಗೃಹ ಸಚಿವ ಪರಮೇಶ್ವರ್ (G.Parameshwar) ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ದೂರು ನೀಡದ ಬಗ್ಗೆ ನೀವು ರಾಜಣ್ಣರನ್ನ ಕೇಳಬೇಕು. ಅವರಿಗೆ ಯಾವಾಗ ಕೊಡಬೇಕು ಅನ್ನಿಸುತ್ತೆ ಕೊಡ್ತಾರೆ. ನಮ್ಮ‌ ಮೇಲೆ ಯಾವ ಒತ್ತಡವೂ ಇಲ್ಲ, ದೂರು ಕೊಡಲಿಲ್ಲ ಅಂದ್ರೆ ಅವರನ್ನೇ ಕೇಳಿ ಎಂದರು.

    ನನ್ನ ಕೆಲಸ ತನಿಖೆ ಘೋಷಣೆ ಮಾಡಿದ್ದೇನೆ. ಮುಖ್ಯಮಂತ್ರಿಗಳು ತನಿಖೆ ತೀರ್ಮಾನ ಮಾಡ್ತಾರೆ. ದೂರು ಬಂದರೆ ತನಿಖೆ ಮಾಡೋದು ಎಂದು ತಿಳಿಸಿದರು. ಇದೇ ವೇಳೆ, ರಾಜಣ್ಣ ಪುತ್ರ ರಾಜೇಂದ್ರ ಬೆದರಿಕೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

  • ʻಹನಿʼಟ್ರ್ಯಾಪ್‌ ಗದ್ದಲದ ನಡುವೆ ಕುತೂಹಲ ಹೆಚ್ಚಿಸಿದ ಸಿಎಂ – ಮಲ್ಲಿಕಾರ್ಜುನ ಖರ್ಗೆ ಭೇಟಿ

    ʻಹನಿʼಟ್ರ್ಯಾಪ್‌ ಗದ್ದಲದ ನಡುವೆ ಕುತೂಹಲ ಹೆಚ್ಚಿಸಿದ ಸಿಎಂ – ಮಲ್ಲಿಕಾರ್ಜುನ ಖರ್ಗೆ ಭೇಟಿ

    ಬೆಂಗಳೂರು: ರಾಜ್ಯದಲ್ಲಿ ಹನಿಟ್ರ್ಯಾಪ್‌ ಜಟಾಪಟಿ ಜೋರಾಗಿರುವ ಹೊತ್ತಿನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿಯಾಗಿದ್ದಾರೆ.

    ಸಿಎಂ ಅವರ ಅಧಿಕೃತ ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಿದ್ದಾರೆ. ಜೊತೆಗೆ ಸುಮಾರು 1 ಗಂಟೆಗೂ ಹೆಚ್ಚುಕಾಲ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಕೂಡ ಇದ್ದರು.

    ಕುತೂಹಲ ಹೆಚ್ಚಿಸಿದ ಭೇಟಿ:
    ಇತ್ತೀಚೆಗೆ ಮುಕ್ತಾಯಗೊಂಡ ಬಜೆಟ್‌ ಅಧಿವೇಶನದ ಕೊನೆಯ ದಿನ ಸಚಿವ ಕೆ.ಎನ್‌ ರಾಜಣ್ಣ ಅವರು, ತಮ್ಮ ವಿರುದ್ಧ ಹನಿಟ್ರ್ಯಾಪ್‌ (Honey Trap) ಯತ್ನ ನಡೆದಿರುವುದಾಗಿ ಹೇಳಿಕೆ ನೀಡಿದ್ದರು. ರಾಜಣ್ಣ ಅವರ ಈ ಹೇಳಿಕೆ ಬಳಿಕ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ಜಟಾಪಟಿ ಜೋರಾಗಿದೆ. ಈ ನಡುವೆ ಸಿಎಂ ಅವರನ್ನು ಖರ್ಗೆ ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ.

    ಖರ್ಗೆ ಅವರು ಭೇಟಿ ಮಾಡಿದ ಸಂರ್ಭದಲ್ಲೇ ಮುಖ್ಯಮಂತ್ರಿಗಳು ಹನಿಟ್ರ್ಯಾಪ್‌ ಪ್ರಕರಣದ ಬಗ್ಗೆ ಚರ್ಚಿಸಿದ್ದಾರೆ. ಘಟನೆಯ ಎಲ್ಲಾ ವಿವರನ್ನು ಸಿಎಂ, ಎಐಸಿಸಿ ಅಧ್ಯಕ್ಷರಿಗೆ ನೀಡಿದ್ದಾರೆ. ಜೊತೆಗೆ ರಾಜಣ್ಣ ಅವರು ತಮ್ಮ ಬಳಿ ಹಂಚಿಕೊಂಡ ಮಾಹಿತಿಯನ್ನು ಖರ್ಗೆ ಅವರಿಗೆ ತಿಳಿಸಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

  • ಹನಿಟ್ರ್ಯಾಪ್ ಪ್ರಕರಣ – ಡಿಜಿಗೆ ದೂರು ಕೊಡಲು ರಾಜಣ್ಣ ಪುತ್ರಗೆ ಸಿಎಂ ಸೂಚನೆ

    ಹನಿಟ್ರ್ಯಾಪ್ ಪ್ರಕರಣ – ಡಿಜಿಗೆ ದೂರು ಕೊಡಲು ರಾಜಣ್ಣ ಪುತ್ರಗೆ ಸಿಎಂ ಸೂಚನೆ

    ಬೆಂಗಳೂರು: ರಾಜ್ಯದಲ್ಲಿ ಹನಿಟ್ರ್ಯಾಪ್ (Honeytrap case) ಹಂಗಾಮಾ ತೀವ್ರಗೊಳ್ಳುತ್ತಿದೆ. ಇದರ ನಡುವೆ ಸಚಿವ ರಾಜಣ್ಣ ಪುತ್ರ, ಎಂಎಲ್‍ಸಿ ರಾಜೇಂದ್ರ (Rajendra Rajanna) ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿ ಮಾಡಿ ಘಟನೆ ಬಗ್ಗೆ ವಿವರ ನೀಡಿದ್ರು. ಈ ಸಂಬಂಧ ಡಿಜಿಗೆ ದೂರು ಕೊಡಲು ಸಿಎಂ ಸೂಚಿಸಿದ್ದಾರೆ.

    ವಕೀಲರ ಜೊತೆ ಸಮಾಲೋಚನೆ ನಡೆಸಿ ಒಂದೆರಡು ದಿನದಲ್ಲಿ ದೂರು ಕೊಡ್ತೇನೆ. ಹನಿಟ್ರ್ಯಾಪ್ ಹಿಂದೆ ತುಂಬಾ ದೊಡ್ಡ ವ್ಯಕ್ತಿಗಳು ಇದ್ದಾರೆ ಅಂತ ರಾಜೇಂದ್ರ ಪುನರುಚ್ಛರಿಸಿದ್ರು. ಇನ್ನೂ ಹನಿಟ್ರ್ಯಾಪ್ ಪ್ರಕರಣದ ವಿಚಾರವಾಗಿ ಘರ್ಜಿಸುವ ಹುಲಿಗೆ ಸಿಡಿ ತೋರಿಸುವ ಕೆಲಸ ಆಗ್ತಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಡಿಕೆಶಿಯ ಹಲೋ ವ್ಯಂಗ್ಯಕ್ಕೆ ಅಷ್ಟೇ ವ್ಯಂಗ್ಯವಾಗಿ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.

    ಹನಿಟ್ರ್ಯಾಪ್ ಆರೋಪ ಇದು ಮೊದಲೂ ಅಲ್ಲ, ಕೊನೆಯೂ ಅಲ್ಲ, ಮುಂದೆನೂ ಬರಬಹುದು. ನನಗೆ ಹಿನ್ನೆಡೆ ಆಗಲ್ಲ. ನಾನೇನೂ ಕಳ್ಳತನ ಮಾಡಿಲ್ಲ. ಎರಡ್ಮೂರು ದಿನದಲ್ಲಿ ದೂರು ನೀಡ್ತೇನೆ ಎಂದು ಸಚಿವ ರಾಜಣ್ಣ ಹೇಳಿದ್ರು.

    ರಾಜಣ್ಣ (K.N Rajanna) ಅಗ್ರೆಸ್ಸಿವ್ ಧೋರಣೆ ಕಡಿಮೆ ಆಗಲ್ಲ ಎಂದು ಸಚಿವ ಮಹದೇವಪ್ಪ ಹೇಳಿದ್ದು, ನಾನು ಎಲ್ರಿಗೂ ಹಲೋ ಅಂತೇನೆ ಎಂದು ಡಿಸಿಎಂಗೆ ಟಾಂಗ್ ಕೊಟ್ರು. ಹನಿಟ್ರ್ಯಾಪ್ ಬೆಳವಣಿಗೆಗಳ ಬಗ್ಗೆ ಕೆ.ಸಿ ವೇಣುಗೋಪಾಲ್ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹನಿಟ್ರ್ಯಾಪ್ ಬಗ್ಗೆ ಸದನದಲ್ಲಿ ಚರ್ಚೆ ಮಾಡಬಾರದಿತ್ತು ಎಂದು ಮಾಜಿ ಸಿಎಂ ಮೊಯ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • ಹಾಸನಕ್ಕೆ ಬಜೆಟ್‌ನಲ್ಲಿ ಜೂಜು, ಎಣ್ಣೆ, ಮಟ್ಕಾ, ಗಾಂಜಾ ಗ್ಯಾರಂಟಿ: ರೇವಣ್ಣ ವ್ಯಂಗ್ಯ

    ಹಾಸನಕ್ಕೆ ಬಜೆಟ್‌ನಲ್ಲಿ ಜೂಜು, ಎಣ್ಣೆ, ಮಟ್ಕಾ, ಗಾಂಜಾ ಗ್ಯಾರಂಟಿ: ರೇವಣ್ಣ ವ್ಯಂಗ್ಯ

    ಹಾಸನ: ಬಜೆಟ್ (Budget 2025) ಪುಸ್ತಕದಲ್ಲಿ ನಮ್ಮ ಜಿಲ್ಲೆಯ (Hassan) ಹೆಸರೇ ಇರಲಿಲ್ಲ ಆದರೂ ನಮ್ಮ ಜಿಲ್ಲೆಗೆ ಹೆಚ್ಚುವರಿಯಾಗಿ ಜೂಜು, ಎಣ್ಣೆ, ಮಟ್ಕಾ, ಗಾಂಜಾ ಗ್ಯಾರಂಟಿ ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ (H.D Revanna) ವ್ಯಂಗ್ಯವಾಡಿದ್ದಾರೆ.

    ಹಾಸನದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ರಾಜ್ಯದ ಮುಖ್ಯಮಂತ್ರಿಗಳು 2025-26ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಮುಂದುವರಿಸಿದ್ದಾರೆ. ಜಿಲ್ಲೆಗೆ ತೋಟಗಾರಿಕೆ ಕಾಲೇಜು ಮಂಜೂರು ಮಾಡ್ತಾರೆ, ಫ್ಲೈಓವರ್‌ಗೆ ಅನುದಾನ, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಜಾರಿಗೆ ತಂದಿದ್ದ ಯೋಜನೆಗಳಿಗೆ ಹಣ ಬಿಡುಗಡೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನೂರು ಕೋಟಿ ರೂ. ಕೊಡ್ತಾರೆ ಎಂದು ನಿರೀಕ್ಷೆ ಮಾಡಿದ್ದೆ. ಜಿಲ್ಲೆಗೆ ಬಜೆಟ್‍ನಲ್ಲಿ ಯಾವುದೇ ಯೋಜನೆ ನೀಡಿಲ್ಲ. ಹಾಗಾಗಿ ಜಿಲ್ಲೆಯ ಜನ ಸರ್ಕಾರಕ್ಕೆ ಧನ್ಯವಾದಗಳನ್ನು ಹೇಳಬೇಕು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

    ದುದ್ದ ಪೊಲೀಸ್ ಠಾಣೆಯಲ್ಲಿ ಕತ್ಯವ್ಯದಲ್ಲಿದ್ದಾಗಲೇ ಪೊಲೀಸರು ಎಣ್ಣೆ ಹಾಕಿಕೊಂಡು ಬಂದು, ಕಂಪ್ಲೆಂಟ್ ಕೊಡಲು ಬಂದವರಿಗೆ ಬಾಯಿಗೆ ಬಂದಂತೆ ಮಾತಾಡುತ್ತಾರೆ. ಜಿಲ್ಲೆಯಲ್ಲಿ ಮಟ್ಕಾ, ಜೂಜು ದಂಧೆ ನಡೆಯುತ್ತಿದೆ. ಗೌರವಸ್ಥ ಕುಟುಂಬಗಳು ಬದುಕಲು ಆಗುತ್ತಿಲ್ಲ. ಮದ್ಯ ಚಟದಿಂದ ಅವರ ಮನೆಯ ಹೆಣ್ಣುಮಕ್ಕಳ ಒಡವೆ ಮಾರಿಕೊಳ್ಳುತ್ತಿದ್ದಾರೆ. ಕೆಳಗಿನ ಅಧಿಕಾರಿಗಳ ಮೇಲೆ ಎಸ್ಪಿಯವರಿಗೆ ನಿಯಂತ್ರಣ ಇಲ್ಲದಂತಾಗಿದೆ. ಯುವಕರು ಎಲ್ಲೆಂದರಲ್ಲಿ ವ್ಹೀಲಿಂಗ್ ಮಾಡುತ್ತಿದ್ದಾರೆ. ಎಸ್ಪಿ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

    ಜಿಲ್ಲಾ ಉಸ್ತುವಾರಿ ಬೇಡ ಎಂಬ ಸಚಿವ ಕೆ.ಎನ್.ರಾಜಣ್ಣ (K.N Rajanna) ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ದೊಡ್ಡವರ ಬಗ್ಗೆ ಮಾತನಾಡುವ ಶಕ್ತಿ ನನಗೆ ಇಲ್ಲ. ಅವರೆಲ್ಲ ದೊಡ್ಡವರು ನಾವು ಮಾತನಾಡಲ್ಲ ಎಂದಿದ್ದಾರೆ.

  • ನೌಕರರ ಖಾತೆಗೆ ಕನ್ನ – ಮಂಡ್ಯ ಡಿಸಿಸಿ ಬ್ಯಾಂಕ್ ವಿರುದ್ಧ ಗಂಭೀರ ಆರೋಪ

    ನೌಕರರ ಖಾತೆಗೆ ಕನ್ನ – ಮಂಡ್ಯ ಡಿಸಿಸಿ ಬ್ಯಾಂಕ್ ವಿರುದ್ಧ ಗಂಭೀರ ಆರೋಪ

    ಮಂಡ್ಯ: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಆಡಳಿತ ಮಂಡಳಿ ವಿರುದ್ಧ ನೌಕರರ ಖಾತೆಗೆ ಕನ್ನ ಹಾಕಿರುವ ಗಂಭೀರ ಆರೋಪ ಕೇಳಿ ಬಂದಿದೆ.

    ಬ್ಯಾಂಕ್‌ನ ಆಡಳಿತ ಮಂಡಳಿಯವರೇ ನೌಕರರ ಖಾತೆಗೆ ಕನ್ನ ಹಾಕಿರುವ ಆರೋಪ ಕೇಳಿಬಂದಿದೆ. ಎಲ್ಲಾ ನೌಕರರಿಗೂ 2017ರ ಸಾಲಿನಲ್ಲಿ ಅರಿಯರ್ಸ್ ಬಿಡುಗಡೆಯಾಗಿತ್ತು. ಆಡಳಿತ ಮಂಡಳಿ ಪ್ರತಿ ನೌಕರರ 9 ತಿಂಗಳ ಅರಿಯರ್ಸ್ ಹಣವನ್ನು ಲಂಚವಾಗಿ ವಸೂಲಿ ಮಾಡಿದ್ದಾರೆ. ಬ್ಯಾಂಕ್‌ನ ಸುಮಾರು 400 ನೌಕರರ ತಲಾ 78,264 ರೂ.ನಲ್ಲಿ 53,784 ರೂ.ಯನ್ನು ಲಂಚವಾಗಿ ಪಡೆದಿದ್ದಾರೆ. ಪ್ರತಿ ನೌಕರನ ಖಾತೆಗೆ ಡೆಪಾಸಿಟ್ ಆದ ದಿನವೇ ಸೆಲ್ಫ್ ಡ್ರಾ ಮೂಲಕ ಹಣ ಸಂಗ್ರಹಿಸಲಾಗಿದೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಮಹಾ ಕುಂಭ ಮೇಳ | ಡೇರೆಯಲ್ಲಿ ಅಗ್ನಿ ಅವಘಡ – ಓರ್ವನಿಗೆ ಗಾಯ

    ಇನ್ನು ಆಡಳಿತ ಮಂಡಳಿಯವರ ನಡೆಗೆ ಆರಂಭದಲ್ಲಿ ಹಲವು ನೌಕರರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗೆ, ವಿರೋಧ ವ್ಯಕ್ತಪಡಿಸುವ ನೌಕರರನ್ನ ದೂರಕ್ಕೆ ವರ್ಗಾವಣೆ ಮಾಡುವುದಾಗಿ ಅಥವಾ ಇಲ್ಲಸಲ್ಲದ ಆರೋಪ ಹೊರಿಸಿ ಅಮಾನತು ಮಾಡುವ ಶಿಕ್ಷೆ ನೀಡಿತ್ತಿದ್ದರು. ಇದ್ಯಾವುದಕ್ಕೂ ಬಗ್ಗದ ಇಬ್ಬರು ನೌಕರರನ್ನ ಆಡಳಿತ ಮಂಡಳಿ ಅಮಾನತು ಮಾಡಲಾಗಿದೆ. ಈ ಎಲ್ಲಾ ಬೆದರಿಕೆಯಿಂದ ಮನನೊಂದ ನೌಕರರು ವಿಧಿ ಇಲ್ಲದೆ ಆಡಳಿತ ಮಂಡಳಿಯವರಿಗೆ ಲಂಚ ಕೊಟ್ಟು ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಇದನ್ನೂ ಓದಿ: 28 ವಿವಿಗಳ ನಕಲಿ ಅಂಕಪಟ್ಟಿ ತಯಾರಿಕಾ ಜಾಲ ಪತ್ತೆ – ದೆಹಲಿ ಮೂಲದ ಪ್ರಮುಖ ಆರೋಪಿ ಅರೆಸ್ಟ್‌

    ನೌಕರರಿಂದ ಹಣ ವಸೂಲಿಗೆ ಎಂದು ತಾಲೂಕಿಗೆ ಇಬ್ಬರನ್ನ ನೇಮಿಸಲಾಗಿತ್ತು. ಆ 7 ತಾಲೂಕುಗಳಿಂದ ವಸೂಲಿ ಮಾಡಿದ ಹಣವನ್ನ ಕೆ.ಶಂಕರ್ ಎಂಬಾತ ಸಂಗ್ರಹಿಸಿದ್ದ. ಶಂಕರ್ ಎಂಬಾತ 2024ರ ಮೇ 16ರಂದು ಅಮರಾವತಿ ಹೋಟೆಲ್‌ನಲ್ಲಿ ಆಡಳಿತ ಮಂಡಳಿಯವರಿಗೆ ಹಸ್ತಾಂತರ ಮಾಡಿದ್ದ. ಇದರ ಹಿಂದೆ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರ ಪಾತ್ರ ಇರುವ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಸಂಬಂಧಪಟ್ಟ ಕೆಲವು ದಾಖಲೆಗಳು ನನ್ನ ಬಳಿ ಇವೆ. ದಾಖಲೆ ಸಹಿತ ಲೋಕಾಯುಕ್ತಕ್ಕೆ ದೂರು ಕೊಡುತ್ತೇನೆ. ಸೂಕ್ತ ತನಿಖೆ ಮಾಡಿ ಇದರಲ್ಲಿ ಯಾರು ಯಾರು ಪಾತ್ರಧಾರಿಗಳು ಎಂಬುದು ಬಹಿರಂಗ ಆಗಬೇಕು ಎಂದು ಡಾ.ಹೆಚ್.ಎನ್.ರವೀಂದ್ರ ಆಗ್ರಹಿಸಿದ್ದಾರೆ.

    ಒಂದೆಡೆ ಡಾ.ರವೀಂದ್ರ ಡಿಸಿಸಿ ಬ್ಯಾಂಕ್ (DCC Bank) ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದರೆ, ಮತ್ತೊಂದೆಡೆ ನೌಕರರ ಸಂಘದ ಕೆಲವರು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರನ್ನ ಭೇಟಿ ಮಾಡಿರುವ ಜೊತೆಗೆ ರಾಜ್ಯ ಸರ್ಕಾರಕ್ಕೆ ಸುಧೀರ್ಘ ಪತ್ರ ಬರೆದು ತಮ್ಮ ನೋವು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ರಸ್ತೆ ದಾಟುವಾಗ ಬಿಎಂಟಿಸಿ ಬಸ್ ಡಿಕ್ಕಿ – ಮಹಿಳೆ ಸಾವು

    ಡಾ.ರವೀಂದ್ರ ಅವರ ಆರೋಪ ಈ ಸಂಬಂಧ ಪ್ರತಿಕ್ರಿಯಿಸಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ರವೀಂದ್ರ ಒಬ್ಬ ಫ್ರಾಡ್. ಆ ರೀತಿಯ ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ದಾಖಲೆಗಳಿದ್ದರೆ ಲೋಕಾಯುಕ್ತಕ್ಕಲ್ಲ, ಯಾವುದೇ ತನಿಖೆಗೂ ಸಿದ್ಧ. ಅವರು ಮಾಡಿರುವ ಆರೋಪ ಸಾಬೀತಾದರೆ ರಾಜೀನಾಮೆ ಕೊಡಲು ಸಿದ್ಧರಿದ್ದೇವೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ʻಕೈʼಮುಖಂಡನ ಹತ್ಯೆ ಕೇಸ್‌ – ಶಿವಮೊಗ್ಗದಿಂದ ಗಡಿಪಾರಾಗಿದ್ದ ಆರೋಪಿಗಳಿಗೆ ಸುಪಾರಿ ಕೊಟ್ಟು ಕೊಲೆ

  • ಬಾಯಿ ಮುಚ್ಚಿಕೊಂಡಿರಿ ಅಂತ ಖರ್ಗೆ ಹೇಳಿದ್ದಾರೆ, ಅದನ್ನು ಅರ್ಥ ಮಾಡ್ಕೋಬೇಕು: ಟಿ.ಬಿ.ಜಯಚಂದ್ರ

    ಬಾಯಿ ಮುಚ್ಚಿಕೊಂಡಿರಿ ಅಂತ ಖರ್ಗೆ ಹೇಳಿದ್ದಾರೆ, ಅದನ್ನು ಅರ್ಥ ಮಾಡ್ಕೋಬೇಕು: ಟಿ.ಬಿ.ಜಯಚಂದ್ರ

    ಬೆಂಗಳೂರು: ಖರ್ಗೆ ಅವರು ಬಾಯಿ ಮುಚ್ಚಿಕೊಂಡು ಇರಿ ಎಂದಿದ್ದಾರೆ. ಅವರೇ ಹೈಕಮಾಂಡ್ ಆಗಿರೋದ್ರಿಂದ ಅವರ ಸಂದೇಶ ಅರ್ಥ ಮಾಡಿಕೊಳ್ಳಬೇಕು. ಬಾಯಿ ಮುಚ್ಚಿಕೊಂಡು ಇರಿ ಅಂದರೆ ಸುಮ್ಮನಿರಬೇಕು ಎಂದು. ಅವರ ಈ ಹೇಳಿಕೆಯು ಎಲ್ಲದಕ್ಕೂ ತೆರೆ ಎಳೆದಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ (T B Jayachandra) ಸ್ಪಷ್ಟನೆ ನೀಡಿದರು.

    ಪಕ್ಷದ ನಾಯಕರು ದೆಹಲಿಗೆ ಹೋಗ್ತಿರೋ ವಿಚಾರ ಮತ್ತು ಸಿಎಂ ಹಾಗೂ ಕೆಪಿಸಿಸಿ (KPCC) ಬದಲಾವಣೆ ವಿಚಾರದ ಬಗ್ಗೆ ಬೆಂಗಳೂರಿನಲ್ಲಿ (Bengaluru) ಮಾತನಾಡಿದರು. ಖರ್ಗೆ ಅವರು ಕರ್ನಾಟಕದ ಬಗ್ಗೆ ಅಧ್ಯಕ್ಷರ ಬದಲಾವಣೆ ಕುರಿತು ಹೇಳಿಲ್ಲ. ಕೆ.ಎನ್.ರಾಜಣ್ಣ ಪದೇ ಪದೇ ಹೇಳಿಕೆಯ ವಿಚಾರದಲ್ಲಿ ಯಾರು ಏನು ಹೇಳ್ತಾರೆ ಅನ್ನೋದಕ್ಕೆ ನಾನೇನು ಹೇಳಲ್ಲ. ನಾವೆಲ್ಲ ಹಿರಿಯರು, ನಾವು ಅರ್ಥ ಮಾಡಿಕೊಳ್ಳಬೇಕು. ಪದೇ ಪದೇ ಎಲ್ಲದಕ್ಕೂ ಉತ್ತರ ಕೊಡೋಕೆ ಆಗಲ್ಲ ಎಂದು ಹೇಳಿದರು. ಇದನ್ನೂ ಓದಿ: ಸಿನಿಮೀಯ ಶೈಲಿಯಲ್ಲಿ ಮೂವರು ಪಾದಚಾರಿಗಳ ಮೇಲೆ ಹರಿದ ಕಾರು – ಓರ್ವ ಸಾವು

    ರಾಜಕಾರಣ ಒಂದೊಂದು ಸಂದರ್ಭದಲ್ಲಿಯೂ ಬದಲಾವಣೆ ಆಗುತ್ತಿರುತ್ತದೆ. ಆದರೆ ಬಿಜೆಪಿಯವರು ನಮ್ಮ ಸಿಎಂ ಮೇಲೆ ಆರೋಪ ಮಾಡಿದ್ದಾರೆ. ಅಪಪ್ರಚಾರ ಮಾಡಿ, ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದರು. ಆದರೆ ಇಂದು ಸಿಎಂ ನಿರ್ದೋಷಿ ಎಂದು ತೀರ್ಪು ಬಂದಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಜಣ್ಣ ಮಾತಾಡಿದ್ದು ತಪ್ಪು – ಹಿರಿಯರು ತಪ್ಪು ಹಾದಿಯಲ್ಲಿ ಹೋದ್ರೆ ನಾವು ದಾರಿ ತಪ್ತೀವಿ: ಶಿವಗಂಗಾ ಬಸವರಾಜ್

    ಸ್ಥಳೀಯ ಸಂಸ್ಥೆ ಚುನಾವಣೆ ಆಗಿಲ್ಲ. ಪಂಚಾಯತ್ ಚುನಾವಣೆ ಆಗಿಲ್ಲ. ಹೀಗಾಗಿ ಸ್ಥಳೀಯ ಆಡಳಿತದ ಮೇಲೆ ಹೆಚ್ಚು ಗಮನ ಹರಿಸಬೇಕು. ನಾವು ಸ್ಥಳೀಯ ಚುನಾವಣೆ ಮೇಲೆ ಗಮನ ಹರಿಸಬೇಕು. ಆದರೆ ಈ ವೇಳೆ ಹೈಕಮಾಂಡ್‌ನವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಎನ್ನುವುದು ಅವರಿಗೆ ಬಿಟ್ಟಿದ್ದು. ಈಗ ಯಾವುದೇ ಬದಲಾವಣೆ ಆಗಲ್ಲ ಅಂತ ಅನ್ನಿಸುತ್ತಿದೆ ಎಂದರು. ಇದನ್ನೂ ಓದಿ: Champions Trophy: ಟಿವಿಯಲ್ಲಿ ಭಾರತ-ಪಾಕಿಸ್ತಾನ ಹೈವೋಲ್ಟೇಜ್‌ ಪಂದ್ಯ ವೀಕ್ಷಿಸಿದ ಹೆಚ್‌ಡಿಕೆ

  • ರಾಜಣ್ಣ ಮಾತಾಡಿದ್ದು ತಪ್ಪು – ಹಿರಿಯರು ತಪ್ಪು ಹಾದಿಯಲ್ಲಿ ಹೋದ್ರೆ ನಾವು ದಾರಿ ತಪ್ತೀವಿ: ಶಿವಗಂಗಾ ಬಸವರಾಜ್

    ರಾಜಣ್ಣ ಮಾತಾಡಿದ್ದು ತಪ್ಪು – ಹಿರಿಯರು ತಪ್ಪು ಹಾದಿಯಲ್ಲಿ ಹೋದ್ರೆ ನಾವು ದಾರಿ ತಪ್ತೀವಿ: ಶಿವಗಂಗಾ ಬಸವರಾಜ್

    ದಾವಣಗೆರೆ: ರಾಜಣ್ಣನವರು (K.N Rajann) ಮಾತನಾಡಿದ್ದು ತಪ್ಪು, ನಾವೇಲ್ಲ ಮೊದಲ ಸಲ ಗೆದ್ದಿದ್ದೇವೆ. ಹಿರಿಯರ ಹಾದಿಯಲ್ಲಿ ನಡೆಯುತ್ತೇವೆ. ಅವರು ತಪ್ಪು ಹಾದಿಯಲ್ಲಿ ಹೋದರೆ ನಾವು ಕೂಡ ತಪ್ಪು ದಾರಿಯಲ್ಲಿ ಹೋದಂತಾಗುತ್ತದೆ ಎಂದು ಶಾಸಕ ಶಿವಗಂಗಾ ಬಸವರಾಜ್ (Shivaganga Basavaraj) ಹೇಳಿದ್ದಾರೆ.

    ಚನ್ನಗಿರಿಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಹೈಕಮಾಂಡ್ ಎಚ್ಚರಿಕೆ ನೀಡಿದರೂ ಪವರ್ ಶೇರಿಂಗ್ ಬಗ್ಗೆ ಮಾತನಾಡುವುದು ತಪ್ಪು. ಒಬ್ಬರ ಕೈಯಿಂದ ಬದಲಾವಣೆ ಆಗೋದಾದ್ರೆ ಮಾಡಬಹುದಿತ್ತು. ಆದರೆ ಇದು ಹೈಕಮಾಂಡ್ ನಿರ್ಧಾರ, ಅದ್ದರಿಂದ ಯಾರೂ ಮಾತನಾಡಬಾರದು. ಹೀಗೆ ಮಾತನಾಡುತ್ತಾ ಹೋದರೆ ಕಾರ್ಯಕರ್ತರಲ್ಲಿ ಗೊಂದಲವಾಗುತ್ತದೆ. ಪವರ್ ಶೇರಿಂಗ್ ಹೈಕಮಾಂಡ್‍ಗೆ ಬಿಟ್ಟ ವಿಚಾರ ಎಂದಿದ್ದಾರೆ.

    ಜಾತಿ ಜನಗಣತಿ ವಿಚಾರವಾಗಿ, ಯಾವುದೇ ಕಾರಣಕ್ಕೂ ಜಾತಿಗಣತಿ ವರದಿ ಬಿಡುಗಡೆ ಆಗಲು ಬಿಡೋದಿಲ್ಲ. ನಾನು ಹಿಂದಿನಿಂದಲೂ ಹೇಳುತ್ತಾ ಬಂದಿದ್ದೇನೆ. ನಮ್ಮ ಮನೆಗೆ ಬಂದು ಜಾತಿ ಗಣತಿ ಮಾಡಿಲ್ಲ. ಎಲ್ಲೋ ಕೂತು ಜಾತಿಗಣತಿ ಮಾಡಿದರೆ ಹೇಗೆ ಒಪ್ಪೋದು ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಜಾತಿ ಜನಗಣತಿ ವರದಿ ಬಿಡುಗಡೆ ಮಾಡುತ್ತೇವೆ ಎಂದು ಸಿಎಂ ಹೇಳಿದ್ದಾರೆ. ನಮ್ಮ ಗಮನಕ್ಕೆ ತಂದೇ ಬಿಡುಗಡೆ ಮಾಡ್ಬೇಕಲ್ವಾ? ಆಗ ನೋಡೋಣ ಎಂದಿದ್ದಾರೆ.

  • ಸಚಿವ ರಾಜಣ್ಣ ಹೇಳಿಕೆ ಸರಿಯಿದೆ, ನನಗೆ ಕೊಂಬು ಇಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್

    ಸಚಿವ ರಾಜಣ್ಣ ಹೇಳಿಕೆ ಸರಿಯಿದೆ, ನನಗೆ ಕೊಂಬು ಇಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್

    ಬೆಂಗಳೂರು: ರಾಜಣ್ಣ ಅವರ ಹೇಳಿಕೆ ಸರಿ ಇದೆ. ನನಗೆ ಕೊಂಬು ಇಲ್ಲ. ನಾನು ಒಬ್ಬ ಕಾರ್ಯಕರ್ತ ಅಷ್ಟೇ ಎಂದು ಕೆಪಿಸಿಸಿ (KPCC) ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್ (G C Chandrashekar) ಹೇಳಿದರು.

    ಬೆಂಗಳೂರಿನಲ್ಲಿ ಸಚಿವ ರಾಜಣ್ಣ (K N Rajanna) ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಕಾರ್ಯಾಧ್ಯಕ್ಷನಾಗಿ ನಾನು ಇದನ್ನು ಬೆಳೆಸಿಕೊಂಡು ಹೋಗುವುದಿಲ್ಲ. ಆದರೆ ನಾನು ಏನು ಹೇಳಬೇಕೋ ಹೇಳಿದ್ದೇನೆ. ನಾನು ಯಾರದೋ ಹೆಸರು ಹೇಳಿಲ್ಲ. ರಾಜಣ್ಣ ಅವರು ಹಿರಿಯ ನಾಯಕರು ಅವರ ಹೇಳಿಕೆಯನ್ನು ಗೌರವಿಸುತ್ತೇನೆ ಎಂದರು. ಇದನ್ನೂ ಓದಿ : ನ್ಯಾಟ್ ಸ್ಕೀವರ್ ಸ್ಫೋಟಕ ಫಿಫ್ಟಿ – ಗುಜರಾತ್ ವಿರುದ್ಧ ಮುಂಬೈಗೆ 5 ವಿಕೆಟ್‌ಗಳ ಭರ್ಜರಿ ಜಯ

    ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡಲ್ಲ. ಪಕ್ಷದಲ್ಲಿ ಶಿಸ್ತು ಇದೆಯಾ ಅಂದರೆ ಪಕ್ಷದಲ್ಲಿ ಇವೆಲ್ಲಾ ಸರ್ವೇಸಾಮಾನ್ಯ. ನಾವು ಮಿಲಿಟರಿಯಲ್ಲಿ ಇಲ್ಲ, ಮಿಲಿಟರಿ ಆಡಳಿತ ಇಲ್ಲ. ಅವರ ಮಾತನ್ನು ಗೌರವಿಸುತ್ತೇನೆ. 25 ವರ್ಷದ ಹಿಂದೆ ನನ್ನ 25ನೇ ವಯಸ್ಸಿನಲ್ಲಿ ಕಾರ್ಪೊರೇಷನ್‌ಗೆ ನಿಂತಿದ್ದೇನೆ. ಆ ನಂತರ ಸಾಕಷ್ಟು ಬೆಳವಣಿಗೆ ಆಗಿದೆ. ಅವರ ಹೇಳಿಕೆಯನ್ನು ನಾನು ಪಾಸಿಟಿವ್ ಆಗಿ ತೆಗೆದುಕೊಂಡಿದ್ದೇನೆ. ಹಿರಿಯರು 50 ವರ್ಷ ಸೇವೆ ಸಲ್ಲಿಸಿದ್ದಾರೆ. ಹಿರಿಯರು ಹೇಳಿದ್ದಾರೆ ಎಂದುಕೊಳ್ಳುತ್ತೇನೆ ಎಂದು ಹೇಳಿದರು. ಇದನ್ನೂ ಓದಿ : ಮುಂದಿನ 5-6 ತಿಂಗಳಲ್ಲಿ ಮಹಿಳೆರಿಗೆ ಕ್ಯಾನ್ಸರ್‌ ಲಸಿಕೆ ಲಭ್ಯ: ಕೇಂದ್ರ ಸಚಿವ ಜಾಧವ್‌

    ಕ್ರಿಯೆಗೆ ಪ್ರತಿಕ್ರಿಯೆ ಕೊಡೋದು ಪಕ್ಷದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆ ಕಾರಣಕ್ಕೆ ಅವರ ಹಿರಿತನಕ್ಕೆ ನಾನು ಬೆಲೆ ಕೊಡುತ್ತೇನೆ. ಅವರು ಏನು ಹೇಳಿದರೂ ನನ್ನ ಒಳ್ಳೆಯದಕ್ಕೆ ಹೇಳಿದ್ದಾರೆ ಎಂದು ತಿಳಿದುಕೊಳ್ಳುತ್ತೇನೆ. ನಾನು ಯಾರನ್ನು ಉದ್ದೇಶಿಸಿ ಹೇಳಿಕೆ ನೀಡಿದ್ದಲ್ಲ. ರಾಜಣ್ಣ ಹೇಳಿಕೆಯನ್ನು ನಾನು ಮುಂದುವರಿಸಲು ಹೋಗಲ್ಲ ಎಂದು ತಿಳಿಸಿದರು. ಇದನ್ನೂ ಓದಿ : ಪಿಜಿ ಮೆಡಿಕಲ್: ಸ್ಟ್ರೇ ವೇಕೆನ್ಸಿ ಸುತ್ತಿಗೆ ಅರ್ಜಿ ಸಲ್ಲಿಸಲು ಫೆ.19ರವರೆಗೆ ಅವಕಾಶ: ಕೆಇಎ

    ಈ ಸ್ಥಾನಕ್ಕೆ ಘನತೆ ತರಬೇಕು ಅನ್ನುವ ಕಾರಣಕ್ಕೆ ಏನು ಮಾತನಾಡಲ್ಲ. ರಾಜಣ್ಣ ಅವರ ಹೇಳಿಕೆಯನ್ನು ನಾನು ಗೌರವಿಸುತ್ತೇನೆ. ದೊಡ್ಡವರು ಒಂದು ಮಾತು ಹೇಳ್ತಾರೆ ಅದನ್ನು ನೋಡಿಕೊಂಡು ಅನುಸರಿಸಿಕೊಂಡು ಹೋಗಬೇಕು. ನನ್ನಿಂದ ಪಕ್ಷಕ್ಕಾಗಲೀ, ನಾಯಕರಿಗಾಗಲೀ, ಪಕ್ಷದ ಕಾರ್ಯಕರ್ತರಿಗಾಗಲೀ ಚಂದ್ರಶೇಖರ್ ಈ ರೀತಿ ಮಾಡಬಾರದಿತ್ತು ಎನ್ನುವ ಭಾವನೆ ಬರಬಾರದು. ಪಕ್ಷದ ಶಿಸ್ತಿನ ಸಿಪಾಯಿಯಾಗಿ ನಾನು ಇದನ್ನು ಗೌರವಿಸುತ್ತೇನೆ ಎಂದು ನುಡಿದರು. ಇದನ್ನೂ ಓದಿ : ಡಿ.ಕೆ ಶಿವಕುಮಾರ್‌ಗೆ ನೋವಾಗುವಂತೆ ಮಾತನಾಡಬಾರದು: ಕುಣಿಗಲ್ ಶಾಸಕ ರಂಗನಾಥ್

    ನನ್ನನ್ನು ರಾಜ್ಯಸಭಾ ಸದಸ್ಯನನ್ನಾಗಿ ಮಾಡಿರೋದು ಕಾಂಗ್ರೆಸ್ ಪಕ್ಷ. ಯಾರಿಗೆಲ್ಲ ಟಿಕೆಟ್ ಕೊಟ್ಟಿರುವುದು, ಯಾರನ್ನೆಲ್ಲ ಮಂತ್ರಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಇದು ಸರಿ ಅಂದಮೇಲೆ ಅದೂ ಸರಿ ಅಲ್ಲವೇ. ನಮ್ಮನ್ನ ಎಲ್ಲಿ ಗುರುತಿಸಬೇಕು ಅಲ್ಲಿ ಗುರುತಿಸಿರುತ್ತಾರೆ. ಸರಿ ಇಲ್ಲ ಅಂತ ಅನಿಸಿದರೆ ನೀವು ಆ ರೀತಿ ಅಂದುಕೊಳ್ಳಬಹುದು. ನನ್ನ ಸಾಮರ್ಥ್ಯ ಏನು ಅಂತ ನಿಮಗೆ ಗೊತ್ತಿದೆ. ನನಗೆ ಏನು ಜವಾಬ್ದಾರಿ ಕೊಟ್ಟಿದ್ದಾರೆ. ಏನು ನಿರ್ವಹಣೆ ಮಾಡಿದ್ದೇನೆ ಅದನ್ನು ನೀವು ಬರೆಯಬಹುದು. ಅವರ ಹೇಳಿಕೆಯಿಂದ ನನ್ನ ಮಾನದಂಡ ನಿರ್ಣಯ ಆಗಲ್ಲ ಎಂದರು.

  • ಡಿ.ಕೆ.ಶಿವಕುಮಾರ್‌ಗೆ ಒಳ್ಳೆಯದಾಗಲಿ ಅಂತ ರಾಜಣ್ಣ ಮಾತಾಡ್ತಿದ್ದಾರೆ: ಡಿ.ಕೆ.ಸುರೇಶ್

    ಡಿ.ಕೆ.ಶಿವಕುಮಾರ್‌ಗೆ ಒಳ್ಳೆಯದಾಗಲಿ ಅಂತ ರಾಜಣ್ಣ ಮಾತಾಡ್ತಿದ್ದಾರೆ: ಡಿ.ಕೆ.ಸುರೇಶ್

    ಬೆಂಗಳೂರು: ಸಚಿವ ರಾಜಣ್ಣ ಅವರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಮೇಲೆ ಪ್ರೀತಿ ಇರುವುದರಿಂದ ಅವರಿಗೆ ಒಳ್ಳೆಯದಾಗಲಿ ಎಂದು ರಾಜಣ್ಣ ಮಾತನಾಡುತ್ತಿದ್ದಾರೆ ಅಷ್ಟೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಂಸದ, ಶಿವಕುಮಾರ್ ಅವರಿಗೆ ಒಳ್ಳೆಯದಾಗಲಿ ಎಂಬ ಭಾವನೆ ಎಲ್ಲರಿಗೂ ಇದೆ. ರಾಜಣ್ಣ ಅವರಿಗೆ ಡಿ.ಕೆ.ಶಿವಕುಮಾರ್ ಅವರ ಮೇಲೆ‌ ಪ್ರೀತಿ ಇದೆ. ಅದಕ್ಕೆ ಮಾತನಾಡ್ತಾರೆ. ಕಲ್ಲಿಗೆ ಏಟು ಬಿದ್ದಾಗಲೇ ಶಿಲೆ ಆಗುವುದು, ತಟ್ಟುತ್ತಿದ್ದಾರೆ ಎಂದು ತಿಳಿಸಿದ್ದಾರೆ.

    ಕೆಪಿಸಿಸಿ ಕಾರ್ಯಾಧ್ಯಕ್ಷರಿಗೆ ಕೊಂಬು ಇದೆಯಾ, ಇಲ್ವಾ ಅನ್ನೋದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಹೀಗೆ ಬಹಿರಂಗವಾಗಿ ಮಾತನಾಡುವುದರಿಂದ ಡ್ಯಾಮೇಜ್ ಆಗುತ್ತೋ ಇಲ್ವೋ ಅನ್ನೋದನ್ನ ಸಿಎಂರನ್ನ ಕೇಳಿ, ಎಐಸಿಸಿ ಅಧ್ಯಕ್ಷರನ್ನು ಕೇಳಿ, ರಾಜ್ಯ ಉಸ್ತುವಾರಿಯನ್ನು ಕೇಳಿ. ಯಾರಿಗಾದರೂ ಒಳ್ಳೆಯದಾಗಬೇಕು ಅಂದ್ರೆ ಸಾಕಷ್ಟು ಜನರ ಆಶೀರ್ವಾದ ಬೇಕು. ಆಶೀರ್ವಾದ ಮಾಡ್ತಿದ್ದಾರೆ, ಪ್ರಸಾದ ಕೊಡ್ತಿದಾರೆ. ಪ್ರಸಾದ ಜಾಸ್ತಿ ಆದರೂ ಹೊಟ್ಟೆ ನೋವು ಬರಲ್ಲ. ನಾವು ಹಳ್ಳಿಯಿಂದ ಬಂದವರು ಎಂದಿದ್ದಾರೆ.

    ಪವರ್ ಶೇರಿಂಗ್ ಬಗ್ಗೆ ನನಗೆ ಏನು ಮಾಹಿತಿ ಇಲ್ಲ. ನಾನು ಸಾಮಾನ್ಯ ಕಾರ್ಯಕರ್ತ. ಅಧಿಕಾರ ಹಂಚಿಕೆ ಬಗ್ಗೆ ಈಗ ಚರ್ಚೆ ಯಾಕೆ? ಕುರ್ಚಿ ಖಾಲಿ ಇಲ್ಲ. ಚರ್ಚೆ ಹುಟ್ಟು ಹಾಕಿದವರು ಯಾರು? ಎಂದಿದ್ದಾರೆ. ಕೆಎಂಎಫ್ ಅಧ್ಯಕ್ಷ ಸ್ಥಾನ ಸೇರಿದಂತೆ ಯಾವುದೇ ಹುದ್ದೆಯ ಆಕಾಂಕ್ಷಿ ನಾನಲ್ಲ. ಜನ ನನ್ನನ್ನ ಸೋಲಿಸಿದ್ದಾರೆ. ರೆಸ್ಟ್ ಮಾಡ್ತಿದ್ದೀನಿ ಎಂದು ತಿಳಿಸಿದ್ದಾರೆ.