Tag: k j jeorge

  • ಸಿಎಂ ಸಭೆಯಿಂದ ಅರ್ಧಕ್ಕೆ ಜಾರ್ಜ್ ನಿರ್ಗಮನ – ಕಬ್ಬು ಬೆಳೆಗಾರರ ಆಕ್ರೋಶ

    ಸಿಎಂ ಸಭೆಯಿಂದ ಅರ್ಧಕ್ಕೆ ಜಾರ್ಜ್ ನಿರ್ಗಮನ – ಕಬ್ಬು ಬೆಳೆಗಾರರ ಆಕ್ರೋಶ

    ಬೆಂಗಳೂರು: ಬಾಕಿ ಹಣ ಪಾವತಿಸುವಂತೆ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಂಬಂಧಿಸಿದಂತೆ ಇಂದು ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಸಭೆ ಕರೆದಿದ್ದರು. ಆದ್ರೆ ಬೃಹತ್ ಕೈಗಾರಿಕೆ ಸಚಿವ ಕೆ.ಜೆ ಜಾರ್ಜ್ ಅವರು ಸಭೆಯಿಂದ ಅರ್ಧದಲ್ಲೇ ನಿರ್ಗಮಿಸಿರುವುದು ಇದೀಗ ರೈತರ ಕೋಪ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ.

    ರೈತರ ಸಮಸ್ಯೆಗಿಂತ ಜಾರ್ಜ್ ಸಾಹೇಬ್ರಿಗೆ ಬ್ಯುಸಿನೆಸ್ಸೇ ಹೆಚ್ಚಾಯ್ತು. ಕಬ್ಬು ಬೆಳೆಗಾರರ ಬವಣೆಗಿಂತ ಟೆಕ್ ಸಮ್ಮಿಟ್‍ನ ಊಟವೇ ಹೆಚ್ಚಾಯ್ತು ಅಂತ ಸಚಿವರ ಬೇಜವಾಬ್ದಾರಿತನದ ವಿರುದ್ಧ ರೈತರು ಕಿಡಿಕಾರಿದ್ದಾರೆ.

    ಟೆಕ್ಕಿಗಳ ಜೊತೆ ಊಟಕ್ಕೆ ಬಂದಾಗ ಪಬ್ಲಿಕ್ ಟಿವಿ ಕ್ಯಾಮೆರಾ ಕಂಡು ಜಾರ್ಜ್ ಸಿಡಿಮಿಡಿಗೊಂಡಿದ್ದಾರೆ. ಅಲ್ಲದೇ ಏನ್ ಸಾರ್.. ಎಂದು ಪ್ರಶ್ನೆ ಕೇಳೋ ಮುನ್ನವೇ ಜಾರ್ಜ್ ಸಾಹೇಬ್ರು ಫುಲ್ ಗರಂ ಆಗಿದ್ರು. ರೈತರ ಸಭೆಯಲ್ಲಿ ಸಿಎಂ ಇಲ್ವೇನ್ರಿ.. ನಂದು ಪೂರ್ವನಿಗದಿತ ಕಾರ್ಯಕ್ರಮವಾಗಿದೆ. ಊಟಕ್ಕೆ ಅಂತಾ ಬಂದೆ ಎಂದು ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ. ಈ ವಿಚಾರ ಪ್ರಸಾರವಾಗುತ್ತಿದ್ದಂತೆಯೇ ಜಾರ್ಜ್ ಮತ್ತೆ ರೈತರ ಸಭೆಗೆ ದೌಡಾಯಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್‍ನಿಂದ ಧರ್ಮ ರಾಜಕಾರಣ?- ದಲಿತರಿಗೆ ಸಿಗದ ಜಾಗ ಕ್ರಿಶ್ಚಿಯನ್ ರಿಗೆ ಸಿಕ್ತು

    ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್‍ನಿಂದ ಧರ್ಮ ರಾಜಕಾರಣ?- ದಲಿತರಿಗೆ ಸಿಗದ ಜಾಗ ಕ್ರಿಶ್ಚಿಯನ್ ರಿಗೆ ಸಿಕ್ತು

    ಬೆಂಗಳೂರು: ಚುನಾವಣೆ ಹತ್ತಿರ ಆಗುತ್ತಿದ್ದಂತೆಯೇ ಕಾಂಗ್ರೆಸ್ ಓಟ್ ಬ್ಯಾಂಕ್ ರಾಜಕಾರಣ ಶುರುಮಾಡಿದೆ. ರಾಜ್ಯ ಸರ್ಕಾರ ಬೆಂಗಳೂರಿನ ಯಲಹಂಕದ ಮೇಡಿ ಅಗ್ರಹಾರದ ಸರ್ವೇ ನಂಬರ್ 24ರಲ್ಲಿ ಎರಡು ಎಕರೆ ಗೋಮಾಳ ಜಮೀನನ್ನು ಕ್ರಿಶ್ಚಿಯನ್ನರ ಸ್ಮಶಾನಕ್ಕೆ ಅಂತ ಮಂಜೂರು ಮಾಡಿದೆ.

    2013 ರಿಂದಲೂ ದಲಿತರಿಗೆ ಮನೆ ಕಟ್ಟಿಕೊಳ್ಳಲು ಜಾಗವಿಲ್ಲ. ಹೀಗಾಗಿ ಜಾಗ ಕೊಡಿ ಅಂತ ದಲಿತ ಯುವಕರ ಸೇವಾದಳ ಮನವಿ ಸಲ್ಲಿಸಿದಾಗ, ನಮ್ಮ ಬಳಿ ಜಾಗವಿಲ್ಲ ಅಂತ ಉತ್ತರ ನೀಡಿದ್ದ ತಹಶೀಲ್ದಾರ್ ಈಗ ಸಂಸದ ವೀರಪ್ಪ ಮೊಯ್ಲಿ, ಬೆಂಗಳೂರು ಅಭಿವೃದ್ಧಿ ಸಚಿವ ಕೆಜೆ ಜಾರ್ಜ್, ಮುಖ್ಯ ಸಚೇತಕ ಐವಾನ್ ಡಿಸೋಜಾ ಪತ್ರ ಬರೆದ ಮೇಲೆ ಕ್ರಿಶ್ಚಿಯನ್ನರಿಗೆ ಜಮೀನು ಮಂಜೂರು ಮಾಡಿದ್ದಾರೆ.

    ಕ್ರಿಶ್ಚಿಯನ್ನರ ಸ್ಮಶಾನಕ್ಕೆ ಜಾಗ ಕೊಡಿ ಅಂತ 2017ರ ನವೆಂಬರ್ 11ರಂದು ಸಂಸದ ವೀರಪ್ಪ ಮೊಯ್ಲಿ, ಡಿಸೆಂಬರ್ 12ರಂದು ಮುಖ್ಯ ಸಚೇತಕ ಐವಾನ್ ಡಿಸೋಜ, 2018ರ ಫೆಬ್ರವರಿ 09ರಂದು ಸಚಿವ ಕೆಜೆ ಜಾರ್ಜ್ ಪತ್ರ ಬರೆದು ಒತ್ತಡ ಹೇರಿದ್ದರು. ಇವರ ಒತ್ತಡಕ್ಕೆ ಮಣಿದು ಜಿಲ್ಲಾಧಿಕಾರಿ ಶಂಕರ್ ಸೂಚನೆ ಮೇರೆಗೆ ತಹಶೀಲ್ದಾರ್ ಮಂಜುನಾಥ್ ಎರಡು ಎಕರೆ ಗೋಮಾಳ ಜಮೀನನ್ನು ಕ್ರಿಶ್ಚಿಯನ್ನರ ಸ್ಮಶಾನಕ್ಕೆ ಮಂಜೂರು ಮಾಡಿದ್ದಾರೆ ಎಂದು ತಿಳಿದುಬಂದಿದೆ.

  • ಮಗ ತಪ್ಪು ಮಾಡಿದ್ರೆ ಅಪ್ಪನ ಮೇಲೆ ಕ್ರಮ ತೆಗೆದುಕೊಳ್ಳಬೇಕು ಅಂತ ಯಾವ ಐಪಿಸಿ ಸೆಕ್ಷನ್ ನಲ್ಲಿದೆ- ಸಚಿವ ಜಾರ್ಜ್ ಪ್ರಶ್ನೆ

    ಮಗ ತಪ್ಪು ಮಾಡಿದ್ರೆ ಅಪ್ಪನ ಮೇಲೆ ಕ್ರಮ ತೆಗೆದುಕೊಳ್ಳಬೇಕು ಅಂತ ಯಾವ ಐಪಿಸಿ ಸೆಕ್ಷನ್ ನಲ್ಲಿದೆ- ಸಚಿವ ಜಾರ್ಜ್ ಪ್ರಶ್ನೆ

    ಬೆಂಗಳೂರು: ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ವಿಚಾರಕ್ಕಿಂತ ಸಂತೋಷ್ ವಿಚಾರದ ಬಗ್ಗೆ ಬಿಜೆಪಿಯವರು ಮಾತನಾಡಲಿ. ಮಗ ತಪ್ಪು ಮಾಡಿದ್ರೆ ಅಪ್ಪನ ಮೇಲೆ ಕ್ರಮ ತಗೆದುಕೊಳ್ಳಬೇಕು ಅಂತ ಯಾವ ಐಪಿಸಿ ಸೆಕ್ಷನ್ ನಲ್ಲಿದೆ ಎಂದು ಪ್ರಶ್ನಿಸಿ ಬಿಜೆಪಿ ನಾಯಕರ ವಿರುದ್ಧ ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಕಿಡಿಕಾರಿದ್ದಾರೆ.

    ವಿಧಾನಸೌಧದದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ಸ್ವತಃ ವಿನಯ್ ಹಲ್ಲೆಗೊಳಗಾಗಿದ್ದಾರೆ. ಅವರ ಪತ್ನಿ ಪತ್ರ ಬರೆದರೂ ಬಿಎಸ್ ವೈ ಪ್ರತಿಕ್ರಿಯೆ ಕೊಟ್ಟಿಲ್ಲ. ಊರೆಲ್ಲ ಸುತ್ತುವ ಇವರಿಗೆ ಠಾಣೆಗೆ ಬರಲು ವಯಸ್ಸಿನ ಸಮಸ್ಯೆ. ಮೊದಲು ಸಂತೋಷ್ ಪ್ರಕರಣದ ಬಗ್ಗೆ ಬಿಜೆಪಿಯವರು ಮಾತನಾಡಲಿ. ಮಗ ತಪ್ಪು ಮಾಡಿದ್ರೆ ಅಪ್ಪನ ಮೇಲೆ ಕ್ರಮ ತೆಗೆದುಕೊಳ್ಳಬೇಕು ಅಂತ ಯಾವ ಐಪಿಸಿ ಸೆಕ್ಷನ್ ನಲ್ಲಿದೆ ಅಂತ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ಕೆಆರ್ ಪುರಂ  ಬಿಬಿಎಂಪಿ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಪೆಟ್ರೋಲ್ ಸುರಿದ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಬಿಜೆಪಿ ಎನ್ನುವ ಪ್ರಶ್ನೆ ಇಲ್ಲ. ತಪ್ಪು ಯಾರೇ ಮಾಡಿದ್ರೂ ತಪ್ಪೇ. ಪೊಲೀಸರು ಆ ಬಗ್ಗೆ ಕ್ರಮ ತೆಗೆದುಕೊಳ್ತಾರೆ ಎಂದರು.

    ರಾಜ್ಯ ಸರ್ಕಾರ ಶೇ.10 ಪರ್ಸೆಂಟ್ ಗಿಂತ ಹೆಚ್ಚಿನ ಕಮೀಷನ್ ಸರ್ಕಾರ ಎಂಬ ಪ್ರಧಾನಿ ಮೋದಿ ಆರೋಪದ ವಿಚಾರದ ಕುರಿತು ಮಾತನಾಡಿದ ಅವರು, ಮೋದಿಯವರು ಬಿಜೆಪಿಯ ಪ್ರಧಾನಿ ಅಲ್ಲ. ಬದಲಾಗಿ ಅವರು ದೇಶದ ಪ್ರಧಾನಿ. ಪ್ರಧಾನಿ ಹುದ್ದೆಯಲ್ಲಿದ್ದುಕೊಂಡು ಈ ರೀತಿ ಹೇಳಿಕೆ ನೀಡಿದ್ದು ಸರಿ ಅಲ್ಲ. ನೋಟ್ ಬ್ಯಾನ್ ನಂತಹ ಜನರಿಗೆ ತೊಂದರೆ ಕೊಡುವ ಕಾರ್ಯಕ್ರಮ ಮಾಡಿದ್ರು ಹೊರತು ಬೇರೆ ಇಲ್ಲ. ಗುಜರಾತಿನಲ್ಲಿ ಪೆಟ್ರೋ ಕೆಮಿಕಲ್ಸ್ ಯೋಜನೆಯಿಂದ 20 ಸಾವಿರ ಕೋಟಿ ರೂ. ನಷ್ಟವಾಯಿತು. ಇದಕ್ಕೆ ಹೊಣೆ ಯಾರು? ಈ ನಷ್ಟವನ್ನು ಮೋದಿಯವರು ಕೇಂದ್ರ ಸರಕಾರದ ಸಬ್ಸಿಡಿಯಿಂದ ಭರ್ತಿ ಮಾಡ್ಕೋತಿದ್ದಾರೆ. ಪ್ರಧಾನಿಯಾಗಿ ಅವರು 4 ವರ್ಷ ಸಾಧನೆ ಮಾಡಿಲ್ಲ. ಅದಕ್ಕಾಗಿ ಮೋದಿಯವರು ರಾಜ್ಯ ಸರಕಾರದ ಮೇಲೆ ಸುಳ್ಳು ಆರೋಪ ಮಾಡ್ತಿದ್ದಾರೆ. ಎಲ್ಲ ರಾಜ್ಯಗಳಿಗೂ ಬಂದು ಸುಳ್ಳು ಆರೋಪಗಳ ಮೂಲಕ ಮೋದಿಯವರು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬರುವಂತೆ ಮಾತಾಡುವುದು ಸರಿಯಲ್ಲ ಅಂತ ಹೇಳಿದ್ರು.

    ಮೈಸೂರಿನಿಂದ ಬೆಂಗಳೂರಿಗೆ ಬಂದ ಸಿದ್ದರಾಮಯ್ಯ ದಾರಿತಪ್ಪಿದ್ದಾರೆ ಎನ್ನುವ ಮೋದಿ ಹೇಳಿಕೆಗೆ, ಮೈಸೂರಿಂದ ಬಂದ ಹಲವರು ರಾಜಕಾರಣದಲ್ಲಿ ಸಾಧನೆ ಮಾಡಿದ್ದಾರೆ. ಆ ವಿಷಯ ಮೋದಿಯವರಿಗೆ ಗೊತ್ತಿಲ್ಲ ಎಂದು ಹೇಳಿದರು.

    ವಿದ್ವತ್- ಹಲ್ಲೆಗೊಳಗಾದ ಯುವಕ.

  • ಕಾಚರಕನಹಳ್ಳಿಯಲ್ಲಿ ಇಂದಿರಾ ಕ್ಯಾಂಟೀನೇ ಇಲ್ಲ, ಆದ್ರೂ ಆಹಾರ ಪೂರೈಕೆ ಆಗ್ತಿದ್ಯಂತೆ!- ಸಚಿವ ಜಾರ್ಜ್ ಕ್ಷೇತ್ರದಲ್ಲಿ ಭಾರೀ ಅಕ್ರಮ

    ಕಾಚರಕನಹಳ್ಳಿಯಲ್ಲಿ ಇಂದಿರಾ ಕ್ಯಾಂಟೀನೇ ಇಲ್ಲ, ಆದ್ರೂ ಆಹಾರ ಪೂರೈಕೆ ಆಗ್ತಿದ್ಯಂತೆ!- ಸಚಿವ ಜಾರ್ಜ್ ಕ್ಷೇತ್ರದಲ್ಲಿ ಭಾರೀ ಅಕ್ರಮ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಇಂದಿರಾ ಕ್ಯಾಂಟೀನ್ ಕೂಡಾ ಒಂದು. ಬೆಂಗಳೂರಿಗೆ ಸೀಮಿತವಾಗಿದ್ದ ಈ ಯೋಜನೆ ಚುನಾವಣೆ ಹೊತ್ತಲ್ಲಿ ಜಿಲ್ಲಾ ಕೇಂದ್ರಗಳು, ತಾಲೂಕು ಕೇಂದ್ರಗಳಿಗೂ ವಿಸ್ತರಣೆಗೊಳ್ಳುತ್ತಿದೆ. ಆದ್ರೆ ಬಡವರ ಹೊಟ್ಟೆ ತುಂಬಿಸಬೇಕಿದ್ದ ಯೋಜನೆಯಲ್ಲಿ ಆರಂಭದಲ್ಲೇ ಹಗರಣ ನಡೆದಿರೋದು ಬೆಳಕಿಗೆ ಬಂದಿದೆ.

    ಇಂದಿರಾ ಕ್ಯಾಂಟೀನ್ ಇಲ್ಲದೇ ಹೋದರೂ ಅನ್ನಾಹಾರ ಪೂರೈಸಿದ್ದೇವೆ ಅಂತ ಸುಳ್ಳು ಹೇಳಿ ದುಡ್ಡು ಹೊಡೆದಿರೋದು ಬಯಲಾಗಿದೆ. ಬೆಂಗಳೂರು ಅಭಿವೃದ್ಧಿ ಸಚಿವ ಕೆಜೆ ಜಾರ್ಜ್ ಸ್ವಕ್ಷೇತ್ರ ಸರ್ವಜ್ಞನಗರದ ಕಾಚರಕನಹಳ್ಳಿಯಲ್ಲಿ ಇಂದಿರಾ ಕ್ಯಾಂಟೀನ್ ಇಲ್ಲ, ಮೊಬೈಲ್ ಕ್ಯಾಂಟೀನೂ ಇಲ್ಲ. ಆದ್ರೆ ಜನವರಿ 1ರಿಂದಲೇ ಊಟ ಪೂರೈಸಲಾಗ್ತಿದೆ ಅಂತ ದಾಖಲೆಗಳಲ್ಲಿ ತೋರಿಸಲಾಗಿದೆ.

    ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಪ್ರತಿನಿಧಿಸೋ ವಾರ್ಡ್‍ನಲ್ಲಾಗಿರೋ ದೋಖಾದ ಬಗ್ಗೆ ಕರ್ನಾಟಕ ಕಾರ್ಮಿಕ ವೇದಿಕೆಯ ಅಧ್ಯಕ್ಷ ನಾಗೇಶ್ ದಾಖಲೆ ಸಂಗ್ರಹಿಸಿದ್ದಾರೆ. ಈ ಕುರಿತು ಎಸಿಬಿಗೂ ದೂರು ನೀಡಲಿದ್ದಾರೆ. ಇಲ್ಲದ ಇಂದಿರಾ ಕ್ಯಾಂಟೀನ್ ಹೆಸರಿನಲ್ಲಾಗಿರೋ ಅಕ್ರಮದ ಬಗ್ಗೆ ಪದ್ಮನಾಭ್ ರೆಡ್ಡಿ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ.

  • ಮತ್ತೊಮ್ಮೆ ತಂದೆಯ ಅಧಿಕಾರ ದುರುಪಯೋಗಪಡಿಸಲು ಮುಂದಾದ ಸಚಿವ ಕೆ.ಜೆ ಜಾರ್ಜ್ ಪುತ್ರ!

    ಮತ್ತೊಮ್ಮೆ ತಂದೆಯ ಅಧಿಕಾರ ದುರುಪಯೋಗಪಡಿಸಲು ಮುಂದಾದ ಸಚಿವ ಕೆ.ಜೆ ಜಾರ್ಜ್ ಪುತ್ರ!

    ಬೆಂಗಳೂರು: ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಪುತ್ರ ರಾಣಾ ಜಾರ್ಜ್, ತಮ್ಮ ತಂದೆಯ ಅಧಿಕಾರ ದುರುಪಯೋಗ ಮಾಡಿಕೊಳ್ಳಲು ಮುಂದಾಗಿದ್ದಾರೆ.

    ರಾಣಾ ಜಾರ್ಜ್ ಕಾಡಿನಲ್ಲಿ ಸುತ್ತಾಡಿಕೊಂಡು ಮಜಾ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದು, ಕಾಡಿನ ರಾಜನಾಗಿ ಮೆರದಾಡುತ್ತಿದ್ದ ವಿಚಾರ ಈ ಹಿಂದೆ ಸುದ್ದಿಯಾಗಿತ್ತು. ಇದೀಗ ಮತ್ತೆ ಅರಣ್ಯದೊಳಗೆ ತನ್ನ ರೇಂಜ್ ರೋವರ್ ಕಾರಿನಲ್ಲಿ ಸವಾರಿ ಮಾಡೋಕೆ ಅನುಮತಿ ಕೇಳಿದ್ದಾರೆ. ಜೊತೆಗೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ಹೈ ಇನ್ ಪ್ಲ್ಯೂಯೆನ್ಸ್ ಮಾಡಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಬೆಂಗಳೂರಿಗೆ ಸಚಿವ ಕೆ.ಜೆ. ಜಾರ್ಜ್ ರಾಜನಾದ್ರೆ, ಮಗ ಕಾಡಿಗೆ ರಾಜ!

    ಸ್ವಂತ ವಾಹನದಲ್ಲಿ ಪರ್ಮನೆಂಟ್ ಆಗಿ ಸಂಚಾರ ಮಾಡಲು ಅನುಮತಿ ನೀಡಬೇಕು ಅಂತ ಅರಣ್ಯ ಇಲಾಖೆಗೆ ಕೋರಿರುವ ಪತತಿದೀಗ ಪಬ್ಲಿಕ್ ಟಿವಿಗೆ ಲಭಿಸಿದೆ. ಅರಣ್ಯ ಇಲಾಖೆಯ ಬೋರ್ಡ್ ಮೆಂಬರ್ ಆಗಿರುವ ರಾಣಾ, ಈ ಹಿಂದೆ ಸ್ನೇಹಿತರ ಜೊತೆ ಕಾಡಿನೊಳಗೆ ಹೋಗಿ ಎಣ್ಣೆ ಪಾರ್ಟಿ ಮಾಡಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

    ಇದಕ್ಕೂ ಮೊದಲು ಜಾರ್ಜ್ ಗೃಹಸಚಿವರಾಗಿದ್ದಾಗ ರಾಣಾ ತನ್ನ ತಂದೆ ಮಿನಿಸ್ಟರ್ ಅನ್ನೋ ದರ್ಪದಿಂದ ತನ್ನ ತಾಯಿ ಹಾಗೂ ಸ್ನೇಹಿತರೊಂದಿಗೆ ಬಂಡೀಪುರ ಅರಣ್ಯದೊಳಗೆ ಸ್ವಂತ ವಾಹನ ನುಗ್ಗಲು ಯತ್ನಿಸಿದ್ರು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಇವ್ರ ಮಾತಿಗೆ ಸೊಪ್ಪು ಹಾಕಿರಲಿಲ್ಲ. ಆ ವೇಳೆ ಅಧಿಕಾರಿಗಳ ಬಳಿ ಚಾಲೆಂಜ್ ಮಾಡಿದ್ದ ರಾಣಾ ಜಾರ್ಜ್, ನನ್ನನ್ನೇ ಬಿಡಲ್ಲ ಅಂತೀರಾ, ಮುದೊಂದು ದಿನ ನಿಮ್ಮ ಕಣ್ಣೆದುರೇ ನನ್ನ ವಾಹನದಲ್ಲಿ ಸವಾರಿ ಮಾಡ್ತೀನಿ ನೋಡ್ತಾ ಇರಿ ಅಂತಾ ತೊಡೆ ತಟ್ಟಿ ಬಂದಿದ್ದಾರೆ ಎಂಬುದಾಗಿ ತಿಳಿದುಬಂದಿದೆ.