ಶನಿವಾರ ರಾತ್ರಿ 2:30ರ ಸುಮಾರಿಗೆ ಕೊಲೆ ನಡೆದಿದೆ. ಆರೋಪಿ ತನ್ನ ತಂದೆಗೆ ಕೈನಿಂದ ಹೊಡೆದು, ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ. ತಂದೆ ಸ್ಟ್ರಿಕ್ಟ್ ಅಂತ ಆರೋಪಿ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.
ಬೆಂಗಳೂರು: 2013ರ ಕೆಜಿಎಫ್ ಗಲಾಟೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ಸಚಿವ ಕೆ.ಹೆಚ್ ಮುನಿಯಪ್ಪ (K.H. Muniyappa) ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (Court) ಜಾಮೀನು ಮಂಜೂರು ಮಾಡಿದೆ.
2013ರ ವಿಧಾನಸಭಾ ಚುನಾವಣೆಯ ವೇಳೆ ಕೆಜಿಎಫ್‍ನ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವಿ.ಶಂಕರ್ ಅವರ ಮೇಲೆ, ಆಗ ಸಂಸದರಾಗಿದ್ದ ಮುನಿಯಪ್ಪ ಹಾಗೂ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಹಲ್ಲೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಮುನಿಯಪ್ಪ ಅವರು ಹಾಜರಾಗದೇ ಇದ್ದಿದ್ದಕ್ಕೆ, ವಿಚಾರಣೆಗೆ ಹಾಜರಾಗದಿದ್ದರೆ ಬಂಧನ ವಾರೆಂಟ್ ಹೊರಡಿಸುವುದಾಗಿ ನ್ಯಾಯಮೂರ್ತಿ ಗಜಾನನ ಭಟ್ ಎಚ್ಚರಿಕೆ ನೀಡಿದರು. ಬಳಿಕ ಲಕ್ಷ್ಮೀ ನಾರಾಯಣ್ ಮತ್ತು ಮುನಿಯಪ್ಪ ಇಬ್ಬರೂ ನ್ಯಾಯಾಲಯಕ್ಕೆ ಹಾಜರಾದರು.
ವಿಚಾರಣೆ ವೇಳೆ ನ್ಯಾಯಾಧೀಶರು, ಕಾನೂನಿನ ದೃಷ್ಟಿಯಲ್ಲಿ ಜಾಮೀನು ಕೊಡೋಕೆ ಆಗಲ್ಲ. ಕಸ್ಟಡಿಗೆ ಕೊಡೋಣ ಎಂದರು. ಆದರೆ ಜಾಮೀನು ಮಂಜೂರು ಮಾಡುವಂತೆ ವಕೀಲರು ಮನವಿ ಮಾಡಿದರು. ಇದಕ್ಕೆ ನ್ಯಾಯಮೂರ್ತಿಗಳು ಕಾನೂನಿನಲ್ಲಿ ಅವಕಾಶ ಇದ್ದರೆ ಹೇಳಿ ಎಂದು ಪ್ರಶ್ನಿಸಿದರು. ಅಲ್ಲದೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದೀರಿ. ಮ್ಯಾಜಿಸ್ಟ್ರೇಟ್ ಮುಂದೆ ಹಾಕಿದ ಹಾಗೆ ಅರ್ಜಿ ಹಾಕಿದ್ದೀರಿ ಎಂದು ವಕೀಲರಿಗೆ ತರಾಟೆ ತೆಗೆದುಕೊಂಡರು. ಬಳಿಕ ಮುನಿಯಪ್ಪ ಅವರಿಗೆ, 50 ಸಾವಿರ ರೂ. ಶ್ಯೂರಿಟಿಯೊಂದಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಪ್ರಕರಣದ ಮತ್ತೋರ್ವ ಆರೋಪಿ ಲಕ್ಷ್ಮೀ ನಾರಾಯಣ್‌ಗೆ ಕಸ್ಟಡಿಗೆ ನೀಡಿ ಆದೇಶ ಹೊರಡಿಸಲಾಗಿದೆ.
ನವದೆಹಲಿ: ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್ ಮುನಿಯಪ್ಪ ಅವರು (K.H. Muniyappa) ನವದೆಹಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಅವರನ್ನು ಭೇಟಿಯಾಗಿದ್ದಾರೆ. ಬಳಿಕ, ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಕೈಗಾರಿಕೆ ಬೇಡಿಕೆ ಆಧಾರಿತ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಮಂಜೂರು ಮಾಡುವಂತೆ ಮನವಿ ಮಾಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನಲ್ಲಿ ಉದ್ಯಮ ಪೋರ್ಟಲ್ ಅಡಿಯಲ್ಲಿ 45,000 MSME ಘಟಕಗಳು ನೋಂದಣಿಯಾಗಿದ್ದು, ಅಂದಾಜು ನಾಲ್ಕು ಲಕ್ಷ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯು ನುರಿತ ಮತ್ತು ಕೌಶಲ್ಯ ರಹಿತ ಯುವಕರನ್ನು ಒಳಗೊಂಡಂತೆ ಗಮನಾರ್ಹ ಕಾರ್ಯಪಡೆಯನ್ನು ಹೊಂದಿದೆ ಎಂದು ಕೇಂದ್ರ ಸಚಿವರ ಗಮನಕ್ಕೆ ತಂದಿದ್ದಾರೆ.
ಬೇಡಿಕೆ ಆಧಾರಿತ ಕೌಶಲ್ಯ ತರಬೇತಿ ಕಾರ್ಯಕ್ರಮಗಳ ಮೂಲಕ ಈ ಉದ್ಯಮಗಳಲ್ಲಿ ಪರಿಣಾಮಕಾರಿಯಾಗಿ ಉದ್ಯೋಗ ಮಾಡಬಹುದು. ಅಂತಹ ತರಬೇತಿಯನ್ನು ನೀಡುವ ಮೂಲಕ, ನಾವು ಉದ್ಯಮದ ಅವಶ್ಯಕತೆಗಳು ಮತ್ತು ಲಭ್ಯವಿರುವ ಮಾನವ ಸಂಪನ್ಮೂಲಗಳ ನಡುವಿನ ಅಂತರವನ್ನು ಕಡಿಮೆ ಮಾಡಬಹುದಾಗಿದೆ ಎಂದು ಚರ್ಚಿಸಿದ್ದಾರೆ.
ಈ ನಿಟ್ಟಿನಲ್ಲಿ ದೇವನಹಳ್ಳಿ ತಾಲೂಕಿಗೆ ಎನ್‌ಎಸ್‌ಐಸಿ ತಾಂತ್ರಿಕ ಸೇವಾ ಕೇಂದ್ರ/ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಮಂಜೂರು ಮಾಡುವಂತೆ ವಿನಂತಿಸಿದರು. ರಸ್ತೆ, ವಿದ್ಯುತ್, ನೀರು ಸರಬರಾಜು ಸೇರಿದಂತೆ ಅಗತ್ಯವಿರುವ ಭೂಮಿ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಿದೆ. ಬಹು ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆಗೆ ಅನುಕೂಲವಾಗುವಂತೆ ಈ ಯೋಜನೆಗೆ ಶೀಘ್ರವೇ ಮಂಜೂರಾತಿ ನೀಡಿಲು ಸಚಿವರಲ್ಲಿ ಮನವಿ ಮಾಡಿದ್ದಾರೆ.
ಬೆಂಗಳೂರು: ಹೈಕಮಾಂಡ್‌ನಲ್ಲಿ ಆಗಿರುವ ತೀರ್ಮಾನದ ವಿಚಾರ ಅವರಿಬ್ಬರಿಗೆ ಗೊತ್ತು ಎಂದು ಸಿಎಂ ಮತ್ತು ಡಿಸಿಎಂ ಕುರಿತು ಸಚಿವ ಕೆ.ಹೆಚ್.ಮುನಿಯಪ್ಪ (K.H.Muniyappa) ಹೇಳಿದರು.
ಅಧಿಕಾರ ಹಂಚಿಕೆ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಹೈಕಮಾಂಡ್ ಕಾಲಕಾಲಕ್ಕೆ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ. ಹೈಕಮಾಂಡ್‌ನಲ್ಲಿ ಆಗಿರುವ ತೀರ್ಮಾನದ ವಿಚಾರ ಅವರಿಬ್ಬರಿಗೆ ಗೊತ್ತು. ಎಲ್ಲವನ್ನ ಕೇಳಬೇಕಿರೋದು, ಮುಖ್ಯಮಂತ್ರಿಗಳು, ಅಧ್ಯಕ್ಷರನ್ನ ಮಾತ್ರ. ಬೇರೆ ಯಾರನ್ನೂ ಕೇಳಬೇಡಿ ಎಂದರು. ಇದನ್ನೂ ಓದಿ: ಅಧಿಕಾರ ಹಂಚಿಕೆ ಒಪ್ಪಂದ ನಡೆದಿದೆ, ಡಿಕೆಶಿ ಹೇಳಿದ್ದು ಸರಿ: ಮುನಿಯಪ್ಪ
ನಾನು ಹೇಳಿದ್ದಕ್ಕೆ ವಿರುದ್ಧವಾಗಿ ಬರೆಯಲಾಗಿದೆ. ಅಧ್ಯಕ್ಷರು ಬಂಡೆ ಇದ್ದ ಹಾಗೇ ಕಡೆಯವರೆಗೂ ನಿಮ್ಮ ಜೊತೆ ಇರ್ತೀವಿ ಅಂತ ಹೇಳಿದ್ರು. ಅದು ಸರಿ ಅಂತ ನಾನು ಹೇಳಿದ್ದೆ. ಆದರೆ, ಅದಕ್ಕೆ ವಿರುದ್ಧವಾಗಿ ಬರೆಯಲಾಗಿದೆ. ಈಗ ಅದರ ಬಗ್ಗೆ ಮತ್ತೆ ಮಾತನಾಡುವುದು ಬೇಡ. ಹೈಕಮಾಂಡ್ ತೀರ್ಮಾನದಂತೆ ಹೋಗೋಣ ಎಂದು ಸ್ಪಷ್ಟಪಡಿಸಿದರು.
ಹೈಕಮಾಂಡ್ ಏನ್ ಮಾಡಿದ್ರು ಬದ್ಧವಾಗಿರುತ್ತೇವೆ. ನಾವು ಹೈಕಾಮಾಂಡ್ ಜೊತೆ ಡಿಸಿಪ್ಲೀನ್ ಕಮಿಟಿಯಲ್ಲಿದ್ದವನು. ಕೇಂದ್ರದಲ್ಲಿ 30 ವರ್ಷ ಕೆಲಸ ಮಾಡಿದವನು. ನಾನು ಡಿಸಿಪ್ಲೀನ್ ಸೋಲ್ಜರ್ ಆಗಿ ಕೆಲಸ ಮಾಡಿದ್ದೀನಿ ಎಂದು ತಿಳಿಸಿದರು. ಇದನ್ನೂ ಓದಿ: ಬಾಣಂತಿಯರ ಸಾವಿನಲ್ಲಿ ಕರ್ನಾಟಕ ನಂ.1 ಆಗಿದೆ – ಆರ್. ಅಶೋಕ್
ಹಾಸನ: ಸಚಿವ ಕೆ.ಹೆಚ್. ಮುನಿಯಪ್ಪ (K.H Muniyappa) ಅವರ ಕಾರಿಗೆ (Car) ಮತ್ತೊಂದು ಕಾರು ಡಿಕ್ಕಿಯಾದ (Accident) ಘಟನೆ ಹಾಸನದ ಶಾಂತಿ ಗ್ರಾಮದ ಬಳಿಯ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ.
ನಗರದಲ್ಲಿ (Hassan) ಆಯೋಜನೆಗೊಂಡಿದ್ದ ಜನಕಲ್ಯಾಣ ಸಮಾವೇಶಕ್ಕೆ ಸಚಿವರು ಆಗಮಿಸುತ್ತಿದ್ದರು. ಈ ವೇಳೆ ಶಾಂತಿ ಗ್ರಾಮದ ಶುಲ್ಕ ವಸೂಲಿ ಕೇಂದ್ರದ ಹತ್ತಿರ ಸಚಿವರ ಕಾರು ನಿಧಾನ ಆದಾಗ ಹಿಂಬದಿಯಿಂದ ವೇಗವಾಗಿ ಬಂದ ಇನ್ನೋವಾ ಕಾರು ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಹಾನಿ ಆಗಿಲ್ಲ.
ಸಚಿವರ ಕಾರಿಗೆ ಗುದ್ದಿದ ಇನ್ನೋವಾ ಕಾರಿನ ಮುಂಭಾಗ ಭಾಗಶಃ ಜಖಂಗೊಂಡಿದೆ. ಸಚಿವರ ಕಾರಿಗೂ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿದೆ. ನಂತರ ಸಚಿವರು ಬದಲಿ ಕಾರಿನಲ್ಲಿ ಸಮಾವೇಶಕ್ಕೆ ತೆರಳಿದ್ದಾರೆ.
ಬೆಂಗಳೂರು: ಬಿಪಿಎಲ್ (BPL Card) ಹಾಗೂ ಎಪಿಎಲ್ (APL Card )ಯಾವ ಕಾರ್ಡ್ ರದ್ದಾಗಲ್ಲ. ಈ ಬಗ್ಗೆ ಯಾರೂ ಭಯ ಪಡುವುದು ಬೇಡ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ (K.H Muniyappa) ಹೇಳಿದ್ದಾರೆ,
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, 20-25% ಅರ್ಹರಲ್ಲದವರು ಬಿಪಿಎಲ್ ಗೆ ಸೇರಿಕೊಂಡಿದ್ದಾರೆ. ಬಡವರಲ್ಲದವರು ಹಾಗೂ ಅರ್ಹರಲ್ಲದವರೂ ಕೂಡ ಇದರಲ್ಲಿ ಸೇರಿಕೊಂಡಿದ್ದಾರೆ. 80% ರಾಜ್ಯದಲ್ಲಿ ಬಡವರ ಪ್ರಮಾಣ ಇದೆ. ಇದು ಸಾಧ್ಯವಾ? ಕರ್ನಾಟಕ ರಾಜ್ಯದಲ್ಲಿ 80% ಬಡವರಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.
ಯಾವುದೇ ಕಾರಣಕ್ಕೂ ಬಿಪಿಎಲ್ ರದ್ದು ಮಾಡುವುದಿಲ್ಲ. ಇದಕ್ಕೆ ರಾಜಕೀಯ ಬೆರೆಸಿ ದೊಡ್ಡ ಗದ್ದಲ ಮಾಡ್ತಿದ್ದಾರೆ. ಯಾರು ಬಡತನ ರೇಖೆಗಿಂತ ಕೆಳಗಿದ್ದಾರೆ, ಯಾರು ಮೇಲಿದ್ದಾರೆ ಸತ್ಯವಾದ ಮಾಹಿತಿ ಹೊರಗೆ ಬಿಡುತ್ತೇನೆ. ಬಿಜೆಪಿಯವರು (BJP) ಸುಮ್ಮನೆ ತರಲೆ ಮಾಡ್ತಿದ್ದಾರೆ. ಬಿಪಿಎಲ್‌ನವರು ಯಾರೂ ಕೂಡ ಭಯ ಪಡಬೇಕಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ನಿಜವಾದ ಬಿಪಿಎಲ್‌ನವರಿಗೆ ಯಾರಿಗೂ ತೊಂದರೆ ಆಗುವುದಿಲ್ಲ. ಅಕಸ್ಮಾತ್ ಅರ್ಹರಿದ್ದು ಬಿಪಿಎಲ್‌ನಿಂದ ಕೈ ಬಿಟ್ಟರೆ, ಅಂತವರಿಗೆ ಪುನಃ ಬಿಪಿಎಲ್ ಕಾರ್ಡ್ ಸಿಗುವ ವ್ಯವಸ್ಥೆ ಮಾಡುತ್ತೇವೆ. 15-20 ದಿನಗಳಲ್ಲಿ ಸಂಪೂರ್ಣ ಪರಿಷ್ಕರಣೆ ಆಗುತ್ತದೆ. ಈ ಬಗ್ಗೆ ಬುಧವಾರ ಮಾತಾಡುತ್ತೇನೆ. ಈ ಬಗ್ಗೆ ಅಂಕಿ ಅಂಶ ಕೊಡುತ್ತೇನೆ. ಹೊಸ ಕಾರ್ಡ್ ಕೂಡ ಬಿಡುಗಡೆ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಕೋಲಾರ : ಎತ್ತಿನಹೊಳೆ ಯೋಜನೆಯಲ್ಲಿ (Ettinahole Scheme) ಕೋಲಾರಕ್ಕೆ ನೂರಕ್ಕೆ ನೂರರಷ್ಟು ನೀರು ಸಿಗುತ್ತದೆ. ಯೋಜನೆಗಾಗಿ ಅನೇಕ ಹೋರಾಟಗಳು ಆಗಿವೆ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.
ಕೋಲಾರದ (Kolar) ಅಂಜುಮನ್ ಸಂಸ್ಥೆಯ ಅಧ್ಯಕ್ಷ ಜಮೀರ್ ಅಹ್ಮದ್ (Jameer Ahmed) ಮನೆಗೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯಿಂದ 20 ರಿಂದ 24 ಟಿಎಂಸಿ ನೀರು ಸಿಗಲಿದ್ದು, ಸಿಎಂ ಸಹ ಆಶ್ವಾಸನೆ ನೀಡಿದ್ದಾರೆ. ಮೊದಲು ಕುಡಿಯುವ ನೀರಿಗೆ ನೀರು ಹರಿಸಿ ಎರಡನೇ ಹಂತದಲ್ಲಿ ಕೆರೆಗಳಿಗೆ ಹರಿಸುವುದಾಗಿ, ಒಂದು ವರ್ಷದಲ್ಲಿ ಕೋಲಾರದ ನಂಗಲಿಯವರೆಗೂ ನೀರು ಹರಿಯಲಿದೆ ಎಂದು ಹೇಳಿದರು. ಇದನ್ನೂ ಓದಿ: ಬೆಳ್ಳಂಬೆಳಿಗ್ಗೆ ಗ್ರಾಮದೊಳಗೆ ದೈತ್ಯಾಕಾರದ ಒಂಟಿಸಲಗ: ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಕೋಲಾರ-ಚಿಕ್ಕಬಳ್ಳಾಪುರ, ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯಲು ನೀರು ಹರಿಸಲಾಗುವುದು ಎಂದರು. ಅಲ್ಲದೆ ಹಾಸನದಿಂದ ನಮಗೆ ನೀರು ಹರಿಸಲು 16 ಟಿಎಂಸಿ ನೀರು ಸಾಕು, ಬಯಲು ಸೀಮೆಯ 7 ಜಿಲ್ಲೆಗಳಿಗೆ ಮೊದಲು ಕುಡಿಯುವ ನೀರು ಪೂರೈಕೆ, ಉಳಿದ ನೀರು ಕೆರೆಗೆ ಹರಿಸಲಾಗುವುದು, ಹೇಮಾವತಿಯಿಂದ ನೀರು ಆರಂಭವಾಗಲಿದ್ದು, ದಾರಿಯಲ್ಲಿ ಸಿಗುವ ಊರುಗಳಿಗೆ ನೀರು ಕೊಡಬೇಕಾಗಿದೆ, ಕೋಲಾರಕ್ಕೆ 3 ರಿಂದ 4 ಟಿಎಂಸಿ ನೀರು ಬರಲಿದೆ ಎಂದರು. ಇದನ್ನೂ ಓದಿ: ಟ್ರೈನಿ ವೈದ್ಯೆ ಅತ್ಯಾಚಾರ ಕೇಸನ್ನ ಆತ್ಮಹತ್ಯೆ ಅಂತ ಬಿಂಬಿಸಲು ಯತ್ನಿಸಿದ್ದರು: ಸಿಬಿಐ ರಿಮ್ಯಾಂಡ್ ಕಾಪಿಯಲ್ಲಿ ರಹಸ್ಯ ಸ್ಫೋಟ!
ಬೆಂಗಳೂರು: 136 ಶಾಸಕರ ಬೆಂಬಲ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನು ಇಳಿಸಬೇಕು ಎಂಬ ಪ್ರಯತ್ನ ನಡೆಯುತ್ತಿದೆ. ಆದರೆ ಅದ ಸಾಧ್ಯವಿಲ್ಲ ಎಂದು ಸಚಿವ ಕೆ.ಹೆಚ್.ಮುನಿಯಪ್ಪ (K.H.Muniyappa) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜಕೀಯವಾಗಿ ಒಂದು ಕ್ಷುಲ್ಲಕ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ತೆಗಿಬೇಕು ಅಂತಾ ಪಾದಯಾತ್ರೆ ಮಾಡ್ತಿದ್ದಾರೆ. ಪಾದಯಾತ್ರೆ ದೇಶದಲ್ಲಿ ಅಭಿವೃದ್ಧಿ ಕೆಲಸಕ್ಕೆ ಮಾಡಲಿ. ಕೇಂದ್ರದಲ್ಲಿ ಇವರನ್ನ ಸಚಿವರನ್ನಾಗಿ ಮಾಡಿದ್ದಾರೆ. ನಮ್ಮ ಕಡೆಯಿಂದ ನಾಲ್ಕು ಜನ ಸಚಿವರಿದ್ದಾರೆ. ರಾಜ್ಯದ ಅಭಿವೃದ್ಧಿ ಕಡೆ ಇವರು ಚಿಂತನೆ ಮಾಡ್ಬೇಕು ಎಂದು ರಾಜ್ಯದ ಕೇಂದ್ರ ಸಚಿವರಿಗೆ ಟಾಂಗ್ ಕೊಟ್ಟರು. ಇದನ್ನೂ ಓದಿ: ನನ್ನ, ಸಿಎಂ ನಡುವೆ ಮತಭೇದ ಇರಬಹುದು, ಮನಭೇದ ಇಲ್ಲ: ಬಿ.ಕೆ.ಹರಿಪ್ರಸಾದ್
ಜನಾದೇಶಕ್ಕೆ ನಾವು ಗೌರವ ಕೋಡೋಣ. 136 ಸೀಟ್ ಗೆದ್ದು ಜನಾದೇಶ ಪಡೆದಿರುವ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ತೆಗಿಬೇಕು ಅಂತಾ ಚಿಂತನೆ ಮಾಡಿದ್ದಾರೆ. ಇದರ ವಿರುದ್ದವಾಗಿ ನಾಳೆ ಜನಾಂದೋಲನ ಕಾರ್ಯಕ್ರಮವನ್ನ ಬೃಹತ್ ಮಟ್ಟದಲ್ಲಿ ಮಾಡ್ತೀವಿ ಎಂದು ತಿಳಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶದ ಸರ್ಕಾರವನ್ನ ಯಾವುದೇ ಕಾರಣಕ್ಕೂ ಅವರು ಬದಲಾವಣೆ ಮಾಡೋದಕ್ಕೆ ನಾವು ಬಿಡೋದಿಲ್ಲ. ಸಿದ್ದರಾಮಯ್ಯ ಅವರಿಗೆ ಈ ಕೇಸ್‌ನಲ್ಲಿ ಯಾವುದೇ ಸಂಬಂಧ ಇಲ್ಲ. ಸಿಎಂ ಅವರು ಫೋನ್ ಮಾಡಿಲ್ಲ, ಪತ್ರ ಬರೆದಿಲ್ಲ. ಸೈಟ್ ಕೊಡಿ ಎಂದು ಕೇಳಿಲ್ಲ. ಇದಕ್ಕೆ ನಾವು ಕಮಿಟಿ ಮಾಡಿದ್ದೇವೆ. ಕಮಿಟಿ ತೀರ್ಮಾನ ಕೊಡ್ಲಿ. ಅದಕ್ಕೆ ನಾನು ಬದ್ದವಾಗಿರುತ್ತೇನೆ ಎಂದರು. ಇದನ್ನೂ ಓದಿ: MUDA Scam | ಸಿದ್ದರಾಮಯ್ಯ ವಿರುದ್ಧ ಕೋರ್ಟ್‌ನಲ್ಲಿ ದೂರು ದಾಖಲು
ಬಿಜೆಪಿಯವರು ರಾಜಕೀಯಕ್ಕೆ ಇದನ್ನು ಪ್ರಾರಂಭ ಮಾಡಿದ್ದಾರೆ. ದುರದೃಷ್ಟ ಕುಮಾರಣ್ಣ ಇದಕ್ಕೆ ಕೈ ಜೋಡಿಸಬಾರದಿತ್ತು, ಕೈ ಜೋಡಿಸಿದ್ದಾರೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಕೇಂದ್ರದಲ್ಲಿ ಬಹಳ ದೊಡ್ಡ ಜವಬ್ದಾರಿಯನ್ನ ಕೊಟ್ಟಿದ್ದಾರೆ. ಸಮಗ್ರ ಅಭಿವೃದ್ಧಿಗೆ ಅವರು ತೊಡಗಿಸಿಕೊಳ್ಳಬೇಕಿತ್ತು. ಅದರೂ ಅವರು ಇದೀಗ ಕೈ ಜೋಡಿಸಿರುವುದರಿಂದ ನಾವು ಹೋರಾಟ ಮಾಡಲೇಬೇಕು ಎಂದು ಸ್ಪಷ್ಟಪಡಿಸಿದರು.
ಈ ಸಂಬಂಧ ಕಮಿಟಿ ಮಾಡಿದ್ದೇವೆ. ಕಮಿಟಿಯಿಂದ ಏನು ತೀರ್ಮಾನ ಬರುತ್ತೋ ಅದಕ್ಕೆ ನಾವು ಬದ್ದವಾಗಿರುತ್ತೇವೆ. ಈ ಸಂದರ್ಭದಲ್ಲಿ ನಾನು ಬೇರೆ ಯಾವುದನ್ನೂ ಮಾತಾಡುವುದಿಲ್ಲ. ನಾನು ಆಪೀಲ್ ಮಾಡ್ತೀನಿ. ಒಳ್ಳೆ ಕೆಲಸಕ್ಕೆ ಹೋರಾಟ ಮಾಡ್ತೀವಿ. ಇಂತಹ ಸಣ್ಣ ಕೆಲಸಗಳಿಗೆ ಇಷ್ಟು ದೊಡ್ಡಮಟ್ಟದ ಪಾದಯಾತ್ರೆ ಮಾಡಬಾರದಿತ್ತು. ನಿಮ್ಮ ಎರಡು ಪಾರ್ಟಿ ತೇಜೋವಧೆ ಆಗ್ತಿದೆ. ಈ ಕೆಲಸ ಕೈಬಿಟ್ಟು ಅಭಿವೃದ್ಧಿ ಕಡೆ ಗಮನ ಕೊಡಿ. ಜನಾದೇಶ ನಮಗೆ ಕೊಟ್ಟಿದೆ. ಸರ್ಕಾರ ನಾವು ನಡೆಸುತ್ತೇವೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮುಂದುರಿಯುತ್ತಾರೆ ಎಂದರು.
ಬೆಂಗಳೂರು: ಮಂತ್ರಿ ಅಳಿಯನಿಗೆ ಹುದ್ದೆ ಸೃಷ್ಟಿ ಮಾಡಲು ಸರ್ಕಾರ ಮುಂದಾಗಿದ್ದು, ಸರ್ಕಾರದ ತೀರ್ಮಾನದ ವಿರುದ್ಧ ವಿಧಾನಸಭಾ ಸಚಿವಾಲಯದ ಅಧಿಕಾರಿ ವರ್ಗ, ಸಿಬ್ಬಂದಿ ಹೋರಾಟಕ್ಕಿಳಿದಿದ್ದಾರೆ.
ಸರ್ಕಾರದ ಮೇಲೆ ಒತ್ತಡ ಹೇರಿ ಅಳಿಯನಿಗೆ ಕಾಯದರ್ಶಿ-2 ಹುದ್ದೆ ಸೃಷ್ಟಿ ಯತ್ನ ಆರೋಪ ಕೇಳಿಬಂದಿದೆ. ಸಚಿವ ಮುನಿಯಪ್ಪ ಅಳಿಯ ಕೆ.ಸಿ.ಶಶಿಧರ್ ಹಾಲಿ ವಿಧಾನಸಭಾ ಸಚಿವಾಲಯದಲ್ಲಿ ಗಣಕ ವಿಭಾಗದ ನಿರ್ದೇಶಕರಾಗಿದ್ದು, ನಿರ್ದೇಶಕ ಹುದ್ದೆಯಿಂದ ಕಾರ್ಯದರ್ಶಿ-2 ಹುದ್ದೆಗೆ ನಿಯೋಜನೆ ಮಾಡಲು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕನ್ನಡಿಗರಿಗೆ ಉದ್ಯೋಗ ಮೀಸಲಾತಿ – ಕ್ಯಾಬಿನೆಟ್‌ನಲ್ಲಿ ಇಂದು ಮತ್ತೆ ಚರ್ಚೆ?
ಶಶಿಧರ್ ಮನವಿಗೆ ಮಾವ ಆಗಿರುವ ಸಚಿವ ಮುನಿಯಪ್ಪ ಅವರಿಂದಲೂ ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ. ಶಶಿಧರ್ ಪರವಾಗಿ ಪತ್ನಿಯಾಗಿರುವ ಶಾಸಕಿ ರೂಪಾಕಲಾ ಅವರಿಂದಲೂ ಲಾಭಿ ಆರೋಪ ಕೇಳಿಬಂದಿದ್ದು, ನಿರ್ದೇಶಕ ಹುದ್ದೆಯಿಂದ ಕಾರ್ಯದರ್ಶಿ-2 ಹುದ್ದೆಗೆ ಮೇಲ್ದರ್ಜೆಗೆ ಏರಿಸಲು ಕಡತ ಸಿದ್ಧಗೊಳಿಸಿದ್ದಾರೆ ಎನ್ನಲಾಗಿದೆ.
ಡಿಪಿಎಆರ್ ಸಿದ್ಧಗೊಳಿಸಿರುವ ಕಡತಕ್ಕೆ ವಿಧಾನಸಭಾ ಸಚಿವಾಲಯದಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಸಚಿವಾಲಯದ ನಿರ್ಧಾರದಿಂದ ಕಂಗೆಟ್ಟ ವಿಧಾನಸಭೆಯ ಅಧಿಕಾರಿ ವರ್ಗ ಮತ್ತು ಸಿಬ್ಬಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ನಾಗೇಂದ್ರಗೆ ಮತ್ತೆ ಜೈಲೇ ಗತಿ – ಆ.3 ರವರೆಗೆ ನ್ಯಾಯಾಂಗ ಬಂಧನ
ಗಣಕ ವಿಭಾಗದ ಅಧಿಕಾರಿಯನ್ನು ಸಚಿವಾಲಯದಲ್ಲಿ ಪರಿಗಣಿಸಬಾರದು. ಸಚಿವಾಲಯದ ವಿಭಾಗದ ವೃಂದಗಳಲ್ಲೇ ಹುದ್ದೆ ಸೃಷ್ಟಿಸಿ ನೀಡಬೇಕು ಅಂತಾ ಒತ್ತಾಯಿಸಿದ್ದಾರೆ. ಸಚಿವನ ಅಳಿಯನಿಗಾಗಿ ಹುದ್ದೆ ಸೃಷ್ಟಿ ಮಾಡುವ ಪ್ರಯತ್ನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಸಿಎಂ ಸಿದ್ದರಾಮಯ್ಯ ಬಳಿ ಕಡತ ಇದೆ. ಅವರು ಸಹಿ ಹಾಕ್ತಾರಾ? ಕಾದುನೋಡಬೇಕಿದೆ.