Tag: k h miniyappa

  • ಸ್ವಂತ ಕಾರು ಇದ್ದವರಿಗೆ BPL Card ಡೌಟ್- ರಾಜ್ಯ ಸರ್ಕಾರ ಗಂಭೀರ ಚಿಂತನೆ

    ಸ್ವಂತ ಕಾರು ಇದ್ದವರಿಗೆ BPL Card ಡೌಟ್- ರಾಜ್ಯ ಸರ್ಕಾರ ಗಂಭೀರ ಚಿಂತನೆ

    ಬೆಂಗಳೂರು: ಕಾಂಗ್ರೆಸ್ ಸರ್ಕಾರ (Congress Government) ಮತ್ತೊಂದು ವಿವಾದವನ್ನ ಮೈಮೇಲೆ ಎಳೆದುಕೊಂಡಿದೆ. ಕಾರು ಇರುವವರ ಬಿಪಿಎಲ್ ಕಾರ್ಡ್ (BPL Card) ರದ್ದಿಗೆ ಚಿಂತನೆ ಮಾಡ್ತಿದ್ದು, ಸ್ವಂತ ಕಾರು ಇರುವವರಿಗೆ ಉಚಿತ ಅಕ್ಕಿ ಬೇಕಾ ಅಂತ ಸಚಿವರು ಪ್ರಶ್ನೆ ಕೇಳಿ ಅನುಮಾನ ಹುಟ್ಟು ಹಾಕಿದ್ದಾರೆ.

    ಬಿಪಿಎಲ್ ಕಾರ್ಡ್ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೊಂದು ವಿವಾದ ಸೃಷ್ಟಿ ಮಾಡಿದೆ. ಕಾರು ಇರುವವರಿಗೆ ಬಿಪಿಎಲ್ ಕಾರ್ಡ್‍ನಲ್ಲಿ ಉಚಿತ ಅಕ್ಕಿ ಬೇಕಾ ಎಂಬ ಪ್ರಶ್ನೆ ಹುಟ್ಟು ಹಾಕಿದ್ದಾರೆ. ಈ ಮೂಲಕ ಸ್ವಂತ ಕಾರು ಇರುವವರ ಬಿಪಿಎಲ್ ಕಾರ್ಡ್ ರದ್ದು ಮಾಡುವ ಸುಳಿವನ್ನ ಆಹಾರ ಸಚಿವ ಮುನಿಯಪ್ಪ ಕೊಟ್ಟಿದ್ದಾರೆ. ಇದನ್ನೂ ಓದಿ: ಅಣ್ಣ ಹೇಳಿದ್ದಾರೆ ತಮ್ಮ ಕೇಳುತ್ತಿರಬೇಕು: ಹೆಚ್‌ಡಿಕೆಗೆ ಡಿಕೆಶಿ ಟಾಂಗ್‌

    ಕಾರು ಇರುವವರ ಕಾರ್ಡ್ ರದ್ದು ಮಾಡುವಂತೆ ಹಿಂದಿನ ಸರ್ಕಾರ ಕಳೆದ ವರ್ಷ ಆದೇಶ ಹೊರಡಿಸಿತ್ತು. ವಿವಾದ ಆದ ಬಳಿಕ ಅ ಆದೇಶಕ್ಕೆ ತಡೆ ಕೊಟ್ಟಿತ್ತು. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಯೆಲ್ಲೋ ಬೋರ್ಡ್ ಕಾರು ಇರುವವರ ಬಿಪಿಎಲ್ ಕಾರ್ಡ್ ರದ್ದು ಮಾಡುವುದಿಲ್ಲ. ಅವರು ಜೀವನಕ್ಕಾಗಿ ಅದನ್ನ ಬಳಕೆ ಮಾಡುತ್ತಾರೆ. ಆದರೆ ಸ್ವಂತ ಕಾರು, ವೈಟ್ ಬೋರ್ಡ್ ಇರೋರಿಗೆ ಉಚಿತ ಅಕ್ಕಿ ಅವಶ್ಯಕತೆ ಇದೆಯಾ ಅಂತ ಚರ್ಚೆ ಮಾಡಬೇಕು ಅಂದರು. ಈ ಮೂಲಕ ವೈಟ್ ಬೋರ್ಡ್ ಕಾರು ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದು ಮಾಡೋ ಸುಳಿವು ಕೊಟ್ಟರು. ಅಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಅನಗತ್ಯವಾಗಿ ಬಿಪಿಎಲ್ ಕಾರ್ಡ್ ಹೊಂದಿರುವವರ ಕುರಿತು ತನಿಖೆ ಮಾಡೋದಾಗಿ ತಿಳಿಸಿದರು.

    ಹಿಂದಿನ ಬಿಜೆಪಿ ಸರ್ಕಾರ (BJP Government) ಇದ್ದಾಗ ಇದೇ ನಿಯಮ ಜಾರಿಗೆ ತರಲು ಹೊರಟಾಗ ಕಾಂಗ್ರೆಸ್ ವಿರೋಧ ಮಾಡಿತ್ತು. ಈಗ ಕಾಂಗ್ರೆಸ್ ಸರ್ಕಾರ ಈ ನಿಯಮ ಜಾರಿಗೆ ಮುಂದಾಗಿದ್ದು, ಜನರ ರಿಯಾಕ್ಷನ್ ಏನು ಕಾದು ನೋಡಬೇಕು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೋಲಾರ ಎಂಟ್ರಿ ಬೆನ್ನಲ್ಲೇ ಗುಂಪು ರಾಜಕೀಯ- ಸಿದ್ದರಾಮಯ್ಯ ಮೇಲೆ ಮುನಿಯಪ್ಪ ಮುನಿಸು

    ಕೋಲಾರ ಎಂಟ್ರಿ ಬೆನ್ನಲ್ಲೇ ಗುಂಪು ರಾಜಕೀಯ- ಸಿದ್ದರಾಮಯ್ಯ ಮೇಲೆ ಮುನಿಯಪ್ಪ ಮುನಿಸು

    ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂದು ಕೋಲಾರ ಜಿಲ್ಲೆಗೆ ಭೇಟಿ ನಿಡಿದ್ದು, ಈ ಬೆನ್ನಲ್ಲೇ ಕೋಲಾರ ಕಾಂಗ್ರೆಸ್‍ (Congress) ನಲ್ಲಿ ಗುಂಪು ರಾಜಕೀಯ ಶುರುವಾಗಿದೆ.

    ಸಿದ್ದರಾಮಯ್ಯ ಮೇಲೆ ಕೆ.ಹೆಚ್. ಮುನಿಯಪ್ಪ (K H Muniyappa) ಮುನಿಸು ಮುಂದುವರಿಸಿದ್ದಾರೆ. ಮಾಜಿ ಸಿಎಂ ಕೋಲಾರಕ್ಕೆ ಬಂದರೂ ಮುನಿಯಪ್ಪ ಅಂತರಕಾಯ್ದುಕೊಂಡಿದ್ದಾರೆ. ಕೆ.ಹೆಚ್.ಮುನಿಯಪ್ಪ ಹಾಗೂ ಮಗಳು ರೂಪ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಈ ಮೂಲಕ ಕೆ.ಹೆಚ್. ಮುನಿಯಪ್ಪ ಬೆಂಬಲಿಗರು ಅಂತರ ಕಾಯ್ದುಕೊಂಡಿರುವುದನ್ನು ಗಮನಿಸಬಹುದಾಗಿದೆ.

    ಇತ್ತ ಮುನಿಯಪ್ಪ ಅವರು ಗುಜರಾತ್ ಚುನಾವಣಾ (Gujrat Election) ಪ್ರಚಾರಕ್ಕೆ ತೆರಳಿರುವುದಾಗಿ ಸಂದೇಶ ರವಾನಿಸಿದ್ದಾರೆ. ಮುನಿಯಪ್ಪ ಜೊತೆ ಬಿಕೆ ಹರಿಪ್ರಸಾದ್ ಕೂಡಾ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸೇರಿದಂತೆ ಗುಜರಾತ್ ಕೈ ನಾಯಕರ ಜತೆ ಮುನಿಯಪ್ಪ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಚುನಾವಣಾ ಪ್ರಚಾರಕ್ಕಾಗಿ ಸಿದ್ದರಾಮಯ್ಯಗೆ ಸಿದ್ಧವಾಯ್ತು ಹೈಫೈ ಪ್ರಚಾರದ ಬಸ್

    ಸಿದ್ದರಾಮಯ್ಯ ಕೋಲಾರಕ್ಕೆ ಬಂದರೂ, ಅಂತರ ಕಾಯ್ದಕೊಂಡ ಬಗ್ಗೆ ಪ್ರತಿಕ್ರಿಯಿಸಿರೋ ಮುನಿಯಪ್ಪ ಪುತ್ರಿ ಶಾಸಕಿ ರೂಪಾ ಶಶಿಧರ್, ಭಿನ್ನಾಭಿಪ್ರಾಯ ಇದೆ ಅನ್ನೋದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ತುಂಬಾ ಭಿನ್ನಾಭಿಪ್ರಾಯಗಳಿದ್ದರೂ, ಎಲ್ಲದಕ್ಕಿಂತ ಮುಖ್ಯ ಪಕ್ಷ. ಸಿದ್ದರಾಮಯ್ಯ ಭಗೀರಥರ ರೀತಿ ಕೋಲಾರ ಜಿಲ್ಲೆಗೆ ಕೊಡುಗೆ ಕೊಟ್ಟಿದ್ದಾರೆ. ಈ ದಿನದ ಕಾರ್ಯಕ್ರಮ ಬಹಳ ಕಡಿಮೆ ಸಮಯದಲ್ಲಿ ನಮಗೆ ಗೊತ್ತಾಯ್ತು. ಮೊದಲೇ ನಾವು ಕಾರ್ಯಕ್ರಮಗಳನ್ನು ನಿಗದಿ ಮಾಡಿಕೊಂಡಿರೋದ್ರಿಂದ ಇಂದು ಭೇಟಿಯಾಗಿಲ್ಲ. ಇಂದು ನಾನು ಯಾಕೆ ಬರೋಕೆ ಆಗ್ತಿಲ್ಲ ಅನ್ನೋದನ್ನು ಸಿಎಲ್‍ಪಿ ನಾಯಕರನ್ನು ಭೇಟಿಯಾಗಿಯೇ ತಿಳಿಸಿದ್ದೇನೆ ಎಂದರು.

    ನನ್ನ ತಂದೆಯವರನ್ನು ಎಐಸಿಸಿ ನಾಯಕರು ಗುಜರಾತ್‍ಗೆ ಕಳುಹಿಸಿದ್ದಾರೆ. ಈ ಬಗ್ಗೆ ರಾಜ್ಯ ನಾಯಕರಿಗೂ ಎರಡು ದಿನದ ಮುಂಚೆಯೇ ಮಾಹಿತಿ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಿದ್ರೆ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಸಿಎಲ್‍ಪಿ ನಾಯಕರು ರಾಜ್ಯದಲ್ಲಿ ಎಲ್ಲಿ ನಿಲ್ತೀವಿ ಅಂದ್ರು ಸ್ವಾಗತ ಮಾಡೋದು ನಮ್ಮ ಜವಾಬ್ದಾರಿ ಅಂತಾ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]