Tag: K.B Koliwada

  • ಕೇಂದ್ರದಿಂದ ದುರುಪಯೋಗ ತಡೆಯಲು ಸಿಬಿಐಗೆ ಕೊಟ್ಟಿದ್ದ ಅನುಮತಿ ವಾಪಸ್ ಪಡೆದಿದ್ದೇವೆ: ಚಲುವರಾಯಸ್ವಾಮಿ

    ಕೇಂದ್ರದಿಂದ ದುರುಪಯೋಗ ತಡೆಯಲು ಸಿಬಿಐಗೆ ಕೊಟ್ಟಿದ್ದ ಅನುಮತಿ ವಾಪಸ್ ಪಡೆದಿದ್ದೇವೆ: ಚಲುವರಾಯಸ್ವಾಮಿ

    ಬೆಂಗಳೂರು: ಕೇಂದ್ರ ಸರ್ಕಾರದಿಂದ (Central Government) ದುರುಪಯೋಗ ಆಗುವುದನ್ನು ತಡೆಯಲು ಸಿಬಿಐಗೆ (CBI) ಕೊಟ್ಟಿದ್ದ ಅನುಮತಿ ವಾಪಸ್ ಪಡೆದಿದ್ದೇವೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ (Cheluvarayaswamy) ತಿಳಿಸಿದ್ದಾರೆ.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಎಲ್ಲರ ಮೇಲೆ ಮುಗಿಬೀಳ್ತಿದೆ. ಕೇಂದ್ರ ಸರ್ಕಾರ ತನ್ನ ಕೆಲಸ ಮಾಡಬೇಕು. ಇದು ಒಕ್ಕೂಟ ವ್ಯವಸ್ಥೆ. ಸಿಬಿಐ ತರಹದ ಸಂಸ್ಥೆಗಳ ದುರುಪಯೋಗ ಆಗ್ತಿದೆ. ಹೀಗಾಗಬಾರದು ಎನ್ನುವ ಕಾರಣಕ್ಕೆ ಸಿಬಿಐಗೆ ಕೊಟ್ಟಿದ್ದ ಅನುಮತಿ ವಾಪಸ್ ಪಡೆದಿದ್ದೇವೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ದುರ್ಗಾ ಪೂಜೆಯಂದು ರಜೆ ನೀಡಬಾರದು, ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸಬಾರದು: ಬಾಂಗ್ಲಾ ಹಿಂದೂಗಳಿಗೆ ಎಚ್ಚರಿಕೆ

    ಕೋಳಿವಾಡ (K.B Koliwada) ಹೇಳಿಕೆ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ (Congress) ಇದ್ದಾಗ ತನಿಖಾ ಸಂಸ್ಥೆಗಳ ದುರುಪಯೋಗ ಆಗಿರಲಿಲ್ಲ, ಈಗ ಆಗ್ತಿದೆ. ಕೋಳಿವಾಡ ಅವರು ಯಾಕೆ ಆ ರೀತಿ ಹೇಳಿದರು ಎನ್ನುವುದನ್ನು ಅವರೇ ಹೇಳಬೇಕು. ಎಲ್ಲರನ್ನೂ ಕಂಟ್ರೋಲ್ ಮಾಡಕ್ಕಾಗಲ್ಲ. ಸಿದ್ದರಾಮಯ್ಯ ಜತೆ ನಮ್ಮ ಸಚಿವರು, ಶಾಸಕರು, ಹೈಕಮಾಂಡ್‌ವರು ಇದ್ದಾರೆ. ಸಿದ್ದರಾಮಯ್ಯ (CM Siddaramaiah) ರಾಜೀನಾಮೆ ಪ್ರಶ್ನೆಯೇ ಇಲ್ಲ. ಸಿಎಂ ರಾಜೀನಾಮೆ ಕೊಡಲ್ಲ, ಅವರೇ ಮುಂದುವರೀತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಇದೇ ವೇಳೆ ಪರಿಷತ್ ಸದಸ್ಯ ಸಲೀಂ ಅಹಮದ್ (Saleem Ahmed) ಮಾತನಾಡಿ, ರಾಜ್ಯಪಾಲರಿಗೆ ಸಂಪುಟದಲ್ಲೇ ಚರ್ಚಿಸಿ ಉತ್ತರ ಕೊಡಬೇಕು. ಈ ತೀರ್ಮಾನ ಒಳ್ಳೆಯದು, ಸ್ವಾಗತಾರ್ಹ. ಯಾವುದೇ ಕಾರಣಕ್ಕೂ ಸಿಎಂ ರಾಜೀನಾಮೆ ಕೊಡಲ್ಲ, ಕೊಡಲೂಬಾರದು. ಕೋಳಿವಾಡ ಹೇಳಿಕೆ ಅವರ ವೈಯಕ್ತಿಕವಾದ ಹೇಳಿಕೆಯಾಗಿದೆ. ಆದರೆ ನಮ್ಮ ನಾಯಕರು, ಕಾರ್ಯಕರ್ತರು ಸಿಎಂ ಪರ ಒಟ್ಟಾಗಿ ಇದ್ದೀವಿ ಎಂದರು.ಇದನ್ನೂ ಓದಿ: ಸ್ವಚ್ಛ ಭಾರತ್ ಮಿಷನ್ ಯೋಜನೆ – ಕೋಲಾರ ನಗರಸಭೆಯಲ್ಲಿ ಭಾರಿ ಗೋಲ್‌ಮಾಲ್!

  • ಮಗ ಪ್ರಕಾಶ್ ಕೋಳಿವಾಡಗೆ ಟಿಕೆಟ್ ಕೊಡುವಂತೆ ಹೈಕಮಾಂಡ್‍ಗೆ ಕೇಳಿದ್ದೇನೆ: ಕೆ.ಬಿ ಕೋಳಿವಾಡ

    ಮಗ ಪ್ರಕಾಶ್ ಕೋಳಿವಾಡಗೆ ಟಿಕೆಟ್ ಕೊಡುವಂತೆ ಹೈಕಮಾಂಡ್‍ಗೆ ಕೇಳಿದ್ದೇನೆ: ಕೆ.ಬಿ ಕೋಳಿವಾಡ

    ಹಾವೇರಿ: ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆ ಎಲ್ಲರಿಗೂ ಇದೆ. ಒಕ್ಕಲಿಗರ ಮತಗಳನ್ನು ಸೆಳೆಯಲು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ನನಗೂ ಅವಕಾಶವಿದೆ. ಒಕ್ಕಲಿಗರೆಲ್ಲ ಕಾಂಗ್ರೆಸ್ ಗೆ ಬನ್ನಿ ಅನ್ನೋ ಕರೆ ಕೊಟ್ಟಿದ್ದಾರೆ. ಡಿಕೆಶಿಯವರ ಮೂಲ ಉದ್ದೇಶ ಜೆಡಿಎಸ್ ಅನ್ನು ಬಿಟ್ಟು ಒಕ್ಕಲಿಗರೆಲ್ಲ ಕಾಂಗ್ರೆಸ್ ಬನ್ನಿ ಅನ್ನೋದು. ಮುಖ್ಯಮಂತ್ರಿ ಆಗಬೇಕು ಅನ್ನೋದು ಎಲ್ಲರಿಗೂ ಆಸೆ ಇರುತ್ತೆ ಎಂದು ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಹೇಳಿದ್ದಾರೆ.

    ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ನಿವಾಸದಲ್ಲಿ ಮಾತನಾಡಿದ ಅವರು, ಸಿಎಂ ಆಗಬೇಕು ಅನ್ನೋದು ಶಿವಕುಮಾರ್, ಸಿದ್ದರಾಮಯ್ಯ, ಪರಮೇಶ್ವರ್‍ಗೆ ಆಸೆ ಇದ್ದರೆ ತಪ್ಪಿಲ್ಲ. ಆಗಬೇಕು ಅಂತಿದೆ ಪಕ್ಷ ಅಧಿಕಾರಕ್ಕೆ ಬರಬೇಕು, ಬಹುಮತ ಬರಬೇಕು. ಒಕ್ಕಲಿಗರ ಮತಗಳನ್ನು ಜೆಡಿಎಸ್ ನಿಂದ ಕಸಿದುಕೊಳ್ಳಬೇಕು. ಒಕ್ಕಲಿಗರ ಮತಗಳೆಲ್ಲ ಕಾಂಗ್ರೆಸ್ ಬರಬೇಕು ಅಂದಿದ್ದಾರೆ. ಎಲ್ಲರೂ ಕೂಡಿ ಪ್ರಯತ್ನ ಮಾಡೋಣ ಎಂದರು.

    ಶಿಕಾರಿಪುರವನ್ನು ಬಿಎಸ್ ವೈ ಮಗನಿಗೆ ಬಿಟ್ಟುಕೊಟ್ಟ ವಿಚಾರ, ಮೊದಲು ಎಂಎಲ್‍ಸಿ ಚುನಾವಣೆಗೆ ಟಿಕೆಟ್ ಕೊಡಬೇಕು ಅಂತಾ ಹೈಕಮಾಂಡ್ ಗೆ ಶಿಫಾರಸ್ಸು ಮಾಡಿದ್ದರು. ಹೈಕಮಾಂಡ್ ಅದನ್ನು ತಿರಸ್ಕಾರ ಮಾಡಿತ್ತು. ಇವತ್ತು ಯಡಿಯೂರಪ್ಪನವರು ಹೇಳಿದ್ದಾರೆ. ಅವರ ಅಭಿಪ್ರಾಯಕ್ಕೆ ಅವರ ಹೈಕಮಾಂಡ್ ಸಹಮತ ವ್ಯಕ್ತಪಡಿಸಿದರೆ ಶಿಕಾರಿಪುರ ನಿಲ್ಲುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೂರು ತಲೆಮಾರಿಗಾಗುವಷ್ಟು ಲೂಟಿ ಮಾಡಿದ್ದೇವೆಂದಿರೋ ರಮೇಶ್ ಕುಮಾರ್ ಸತ್ಯವಂತರು :ಜೋಶಿ ಲೇವಡಿ

    ರಾಣೆಬೆನ್ನೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ವಾತಾವರಣವಿದೆ. ನಾನು ರಾಜ್ಯದಲ್ಲಿನ ಚುನಾವಣೆಗೆ ನಿಲ್ಲೋದಿಲ್ಲ.ನನ್ನ ಮಗ ಪ್ರಕಾಶ್ ಕೋಳಿವಾಡಗೆ ಟಿಕೆಟ್ ಕೊಡುವಂತೆ ಹೈಕಮಾಂಡ್ ಗೆ ಕೇಳಿದ್ದೇನೆ. ಅವರು ಕೊಟ್ಟರೆ ಖಂಡಿತ ಪ್ರಕಾಶ್ ಆರಿಸಿ ಬರುತ್ತಾರೆ. ಹೈಕಮಾಂಡ್ ನವರೇ ನನಗೆ ಮಗನನ್ನು ನಿಲ್ಲಿಸುವಂತೆ ಹೇಳಿದ್ದಾರೆ. ಹೈಕಮಾಂಡ್ ನವರು ಎಲ್ಲರೂ ಹೇಳಿದ್ದರಿಂದ ನಾನು ಒಪ್ಪಿಕೊಂಡಿದ್ದೇನೆ. ರಾಜ್ಯದ ಚುನಾವಣಾ ಕ್ಷೇತ್ರದಿಂದ ಹಿಂದಕ್ಕೆ ಸರಿದು ನನ್ನ ಮಗನನ್ನು ಮುಂದಕ್ಕೆ ತರಲು ಪ್ರಯತ್ನ ಮಾಡುತ್ತಿದ್ದೇನೆ. ಹೈಕಮಾಂಡ್ ನಿಂದಲೆ ಆ ಪ್ರಪೋಸಲ್ ಬಂದಿದೆ ಎಂದು ಹೇಳಿದರು.

    ಲೋಕಸಭೆ, ರಾಜ್ಯಸಭೆ ಯಾವುದೇ ಬಂದರೂ ಪಕ್ಷ ಹೇಳಿದರೆ ನಾನು ನಿಲ್ಲುತ್ತೇನೆ. ಪಕ್ಷ ಟಿಕೆಟ್ ಕೊಟ್ಟರೆ ನಾನು ನಿಲ್ಲುತ್ತೇನೆ.ಅವಕಾಶ ಬಂದರೆ ನಾನೂ ಕೇಳುತ್ತೇನೆ, ಅವರು ಕೊಟ್ಟರೆ ನಿಲ್ಲುತ್ತೇನೆ. ರಾಜ್ಯದ ರಾಜಕಾರಣದಿಂದ ನಾನು ನಿವೃತ್ತಿ ಆಗಿದ್ದೇನೆ.ಹೈಕಮಾಂಡ್ ನವರು ಕೊಟ್ಟರೆ ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದು ಮಾಜಿ ಸ್ಟೀಕರ್ ಕೆ.ಬಿ.ಕೋಳಿವಾಡ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೊನೆಯ ಚುನಾವಣೆ ಎಂದ ಕೋಳಿವಾಡಗೆ ಭಾರೀ ಮುಖಭಂಗ – ರಾಣೇಬೆನ್ನೂರಲ್ಲಿ ಬಿಜೆಪಿ ಮೇಲುಗೈ

    ಕೊನೆಯ ಚುನಾವಣೆ ಎಂದ ಕೋಳಿವಾಡಗೆ ಭಾರೀ ಮುಖಭಂಗ – ರಾಣೇಬೆನ್ನೂರಲ್ಲಿ ಬಿಜೆಪಿ ಮೇಲುಗೈ

    ಹಾವೇರಿ: ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಚ್ಚರಿಯ ಗೆಲುವು ಸಾಧಿಸಿದ್ದು, ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡಗೆ ಭಾರೀ ಮುಖಭಂಗವಾಗಿದೆ. ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಅಚ್ಚರಿಯ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಐದು ದಶಕದ ರಾಜಕೀಯ ಧುರೀಣ ಕೆ.ಬಿ ಕೋಳಿವಾಡ ಪರಾಜಿತಗೊಂಡಿದ್ದು, ಮುಖಭಂಗವಾಗಿದೆ. ರಾಣೆಬೆನ್ನೂರು ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ ಇತ್ತು. ಆದರೆ, ಮತದಾರ ಪ್ರಭುಗಳು ಅಂತಿಮವಾಗಿ ಬಿಜೆಪಿಯ ಅರುಣ್ ಅವರ ಭವಿಷ್ಯ ಬರೆದಿದ್ದಾರೆ. ಕೋಳಿವಾಡ ಇನ್ನೇನು ಗೆದ್ದೇ ಬಿಡ್ತಾರೆ ಅನ್ನೋ ಲೆಕ್ಕಾಚಾರದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಅರವಿಂದ ಬೆಲ್ಲದ ಅಖಾಡಕ್ಕೆ ದುಮುಕಿ ಇಡೀ ಚಿತ್ರಣವನ್ನೇ ಬದಲಾಯಿಸಿದ್ದರು.

    ರಾಣೇಬೆನ್ನೂರು ಅಂದರೆ ಕೋಳಿವಾಡ, ಕೋಳಿವಾಡ ಅದರೆ ರಾಣೇಬೆನ್ನೂರು ಅಂತ ಇದ್ದ ವಾತಾವರಣವನ್ನ ಬೊಮ್ಮಾಯಿ ಅವರು ಅಚ್ಚುಕಟ್ಟಾಗಿ ಬಿಜೆಪಿ ತೆಕ್ಕೆಗೆ ತಂದುಕೊಂಡರು. ಅರುಣ್ ಪಂಚಮಸಾಲಿ ಸಮಾಜಕ್ಕೆ ಸೇರಿದವರು. ಮತ ಕ್ಷೇತ್ರದಲ್ಲಿ ಲಿಂಗಾಯತ ಮತಗಳು ಅಧಿಕವಾಗಿದ್ದು, ಯಡಿಯೂರಪ್ಪ ಅವುಗಳನ್ನ ಯಶಸ್ವಿಯಾಗಿ ಬಳಸಿಕೊಂಡರು. ಇನ್ನು ಕುರುಬ ಸಮುದಾಯದ ಮತಗಳೇ ನಿರ್ಣಾಯಕ ಅನ್ನೋ ಲೆಕ್ಕಾಚಾರ ರಾಜಕೀಯ ವಲಯದಲ್ಲಿದ್ದರೂ ಬೊಮ್ಮಾಯಿ ಆಂಡ್ ಟೀಂ ಕುರುಬ ಮತಬೇಟೆಗೆ ಸಖತ್ ಪ್ಲಾನ್ ಮಾಡಿದ್ದರು. ಹೇಗಿದ್ದರು ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ, ಒಂದು ವೇಳೆ ಬಂದರೂ ಸಿದ್ದರಾಮಯ್ಯ ಸಿಎಂ ಆಗೋದಿಲ್ಲ, ಕುರುಬ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಇರೋದಿಲ್ಲ. ಅದೇ ಬಿಜೆಪಿ ಅಧಿಕಾರಕ್ಕೆ ಬಂದರೆ ಕುರುಬ ಸಮುದಾಯದ ನಾಲ್ವರು ಸಚಿವರಾಗ್ತಾರೆ ಅನ್ನೋ ಬ್ರಹ್ಮಾಸ್ತ್ರ ಬಿಜೆಪಿಗೆ ವರವಾಗಿದೆ.

    ಈ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಕೋಳಿವಾಡ ಸೋತ ತಕ್ಷಣ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದರು. ಅಲ್ಲದೆ ಲೋಕಸಭಾ ಚುನಾವಣೆಯಲ್ಲಿ ಎಐಸಿಸಿ ಕಾರ್ಯದರ್ಶಿ ಸಲೀಂ ಅಹಮದ್‍ಗೆ ಟಿಕೆಟ್ ತಪ್ಪಿಸಿದ್ದು ಮುಸ್ಲಿಂ ಸಮುದಾಯಕ್ಕೆ ಬೇಸರ ಉಂಟುಮಾಡಿತ್ತು. ಅದೇ ಕಾರಣಕ್ಕೆ ಕುರುಬ ಸಮುದಾಯದ ಹೆಚ್ಚು ಮತಗಳಿರುವ ಮೆಡ್ಲೇರಿ ಮತ್ತು ತುಮ್ಮಿನಕಟ್ಟೆ ಕಾಂಗ್ರೆಸ್‍ಗೆ ಕೈಎತ್ತಿ ಕಮಲ ಹಿಡಿದಿದೆ.

    ಕೋಳಿವಾಡರ 4 ದಶಕದ ರಾಜಕೀಯ ನೋಡಿದ್ದ ಕ್ಷೇತ್ರದ ಜನ ಯುವ ನಾಯಕ ಅರುಣ್‍ಗೆ ಒಂದು ಅವಕಾಶ ಕೊಟ್ಟು ನೋಡೋಣ ಅಂತ ಕಮಲದ ಕೈ ಹಿಡಿದಿದ್ದಾರೆ. ಬಸವರಾಜ ಬೊಮ್ಮಾಯಿ, ಅರವಿಂದ ಬೆಲ್ಲದ, ಬಸನಗೌಡ ಪಾಟೀಲ್ ಯತ್ನಾಳ್, ಗೋವಿಂದ ಕಾರಜೋಳ ಆದಿಯಾಗಿ ಹಾಲಿ, ಮಾಜಿ ಸಚಿವರು, ಶಾಸಕರು, ಅಕ್ಕಪಕ್ಕದ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಟೀಂ ವರ್ಕ್ ಮಾಡಿದ್ದರ ಪರಿಣಾಮ ಬಿಜೆಪಿ ನಿರೀಕ್ಷೆಗೂ ಮೀರಿದ ಮತ ಗಳಿಕೆ ಮಾಡಿದೆ.

    ರಾಣೇಬೆನ್ನೂರು ಕ್ಷೇತ್ರದಲ್ಲಿ ಅರುಣ್ ಕುಮಾರ್ ಅಚ್ಚರಿಯ ಅಭ್ಯರ್ಥಿಯಾಗಿ ಅಚ್ಚರಿಯ ಫಲಿತಾಂಶವನ್ನು ಕಂಡಿದ್ದಾರೆ. ಚುನಾವಣೆ ಉಸ್ತುವಾರಿ ವಹಿಸಿಕೊಂಡಿದ್ದ ಬಸವರಾಜ ಬೊಮ್ಮಾಯಿ ತಮ್ಮ ಅಭ್ಯರ್ಥಿಯನ್ನ ಗೆಲ್ಲಿಸಿಕೊಂಡು ಸಿಎಂ ಯಡಿಯೂರಪ್ಪನವರ ಸರ್ಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

  • ಉಪಚುನಾವಣೆಯ ನಂತರ ಕೋಳಿವಾಡ ರಾಜಕೀಯ ನಿವೃತ್ತಿ

    ಉಪಚುನಾವಣೆಯ ನಂತರ ಕೋಳಿವಾಡ ರಾಜಕೀಯ ನಿವೃತ್ತಿ

    ಹಾವೇರಿ: ರಾಜ್ಯದಲ್ಲಿ ಒಂದೆಡೆ ಉಪಚುನಾವಣೆ ಕಣ ರಂಗೇರಿದ್ದರೆ, ಇನ್ನೊಂದೆಡೆ ಉಪಸಮರದ ನಂತರ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ ಹೇಳಿದ್ದಾರೆ.

    ರಾಣೇಬೆನ್ನೂರಿನ ತಮ್ಮ ನಿವಾಸದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಮುಂದಿನ ಉತ್ತರಾಧಿಕಾರಿಯಾಗಿ ಪುತ್ರ ಪ್ರಕಾಶ ಕೋಳಿವಾಡ ಕಣಕ್ಕೆ ಇಳಿಯುತ್ತಾನೆ. ಇನ್ನು ಮುಂದೆ ನಾನು ಚುನಾವಣೆಗೂ ನಿಲ್ಲುವುದಿಲ್ಲ. ನಾನು ನಿವೃತ್ತಿ ತೆಗೆದುಕೊಳ್ಳುತ್ತೇನೆ, ಸಾಕು ನಂಗೆ ಎಂದರು. ಅದರೆ ರಾಜಕೀಯದಿಂದ ದೂರ ಹೋಗುವ ಮುನ್ನ ಒಂದು ಸಾರಿ ಗೆಲವು ಕಾಣಬೇಕು. ಹೀಗಾಗಿ ಇದೊಂದು ಬಾರಿ ನನ್ನನ್ನು ಗೆಲ್ಲಿಸಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.

    ಐವತ್ತು ವರ್ಷದ ರಾಜಕೀಯ ಜೀವನದಲ್ಲಿ ಈ ಥರ ಎಲೆಕ್ಷನ್ ಮಾಡಿಲ್ಲ. ಆರ್. ಶಂಕರ್ ಆಯಾ ರಾಮ್ ಗಯಾ ರಾಮ್ ಏನೇನೂ ಕೆಲಸ ಮಾಡಿದ್ದಾರೆ ಅಂತ ಎರಡು ವರ್ಷದಲ್ಲಿ ನೋಡಿದ್ದಿರಲ್ಲ. ಹೀಗಾಗಿ ಕೊನೆಯ ಬಾರಿ ನನ್ನನ್ನು ಗೆಲ್ಲಿಸಿ ಬೀಳ್ಕೊಡುಗೆ ನೀಡಿ ಎಂದು ಕಾರ್ಯಕರ್ತರಲ್ಲಿ ಕೋರಿಕೊಂಡರು.