Tag: K B Chandrashekhar

  • ಮಾಜಿ ಶಾಸಕ ಕೆ.ಬಿ ಚಂದ್ರಶೇಖರ್ ಸಹೋದರರಿಂದ ಪಿಎಸ್‍ಐಗೆ ಬೆದರಿಕೆ

    ಮಾಜಿ ಶಾಸಕ ಕೆ.ಬಿ ಚಂದ್ರಶೇಖರ್ ಸಹೋದರರಿಂದ ಪಿಎಸ್‍ಐಗೆ ಬೆದರಿಕೆ

    ಮಂಡ್ಯ: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಮಾಜಿ ಶಾಸಕನ ಸಹೋದರರು ಪಿಎಸ್‍ಐಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ಕೆ.ಆರ್ ಪೇಟೆ ಕಾಂಗ್ರೆಸ್ ಮಾಜಿ ಶಾಸಕ ಕೆ.ಬಿ ಚಂದ್ರಶೇಖರ್ ಅವರ ಸಹೋದರರಾದ ಕೆ.ಬಿ ರವಿ ಹಾಗೂ ಕೆ.ಬಿ ಈಶ್ವರ್ ಪ್ರಸಾದ್ ಕೆ.ಆರ್ ಪೇಟೆ ಪಟ್ಟಣ ಪೊಲೀಸ್ ಠಾಣೆಯ ಪಿಎಸ್‍ಐ ಬ್ಯಾಟರಾಯಗೌಡರಿಗೆ ಬೆದರಿಕೆ ಹಾಕಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಹಲ್ಲೆಗೆ ಮುಂದಾಗಿದ್ದರು ಎಂದು ಈ ಇಬ್ಬರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಮಧ್ಯರಾತ್ರಿ 2:15ರ ಸುಮಾರಿಗೆ ರವಿ ಹಾಗೂ ಈಶ್ವರ್ ಪ್ರಸಾದ್‍ಗೆ ಪಾರ್ಟಿ ಮುಗಿಸಿ ಮನೆಗೆ ತೆರಳುವಂತೆ ಪಿಎಸ್‍ಐ ಬ್ಯಾಟರಾಯಗೌಡ ಅವರು ಹೇಳಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿ ಇದ್ದ ರವಿ ಹಾಗೂ ಈಶ್ವರ್ ಪ್ರಸಾದ್ ಪಿಎಸ್‍ಐ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿದ್ದಾರೆ.

    ಜನವರಿ 1ರಂದು ಈ ಇಬ್ಬರ ಮೇಲೂ ಕೆ.ಆರ್ ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪಿಎಸ್‍ಐಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಬೆದರಿಕೆ ಒಡ್ಡಿ ಕರ್ತವ್ಯಕ್ಕೆ ಅಡ್ಡಿ ಆರೋಪದ ಅಡಿ ದೂರು ದಾಖಲಿಸಿದ್ದು ಎಫ್‍ಐಆರ್ ದಾಖಲಾಗಿದೆ. ಸದ್ಯ ರವಿ ಪರಾರಿಯಾಗಿದ್ದು, ಈಶ್ವರ್ ಪ್ರಸಾದ್ ಪೊಲೀಸರ ವಶದಲ್ಲಿ ಇದ್ದಾರೆ. ಈ ಬಗ್ಗೆ ಗುರುವಾರ ಜಾಮೀನಿಗೆ ಆರೋಪಿಗಳು ಅರ್ಜಿ ಸಲ್ಲಿಸಿದ್ದು, ಸೆಷನ್ ಕೋರ್ಟ್ ಅರ್ಜಿಯನ್ನು ನಿರಾಕರಿಸಿದೆ.

  • ಸಿಎಂ ಕುಮಾರಸ್ವಾಮಿಗೆ ಮತ ಹಾಕಿದ ಜನ ಉಗಿಯುತ್ತಿದ್ದಾರೆ: ಏಕವಚನದಲ್ಲೇ ಕೆಬಿ ಚಂದ್ರಶೇಖರ್ ವಾಗ್ದಾಳಿ

    ಸಿಎಂ ಕುಮಾರಸ್ವಾಮಿಗೆ ಮತ ಹಾಕಿದ ಜನ ಉಗಿಯುತ್ತಿದ್ದಾರೆ: ಏಕವಚನದಲ್ಲೇ ಕೆಬಿ ಚಂದ್ರಶೇಖರ್ ವಾಗ್ದಾಳಿ

    ಮಂಡ್ಯ: ಸಿಎಂ ಕುಮಾರಸ್ವಾಮಿಗೆ ಮತ ಹಾಕಿದ್ದ ಜನ ಈಗ ಉಗುಯುತ್ತಿದ್ದಾರೆ ಎಂದು ಹಿರಿಯ ಕೈ ಮುಖಂಡ ಹಾಗೂ ಕೆ.ಆರ್.ಪೇಟೆ ಕ್ಷೇತ್ರದ ಪರಾಜಿತ ಅಭ್ಯರ್ಥಿಯಾದ ಕೆ.ಬಿ.ಚಂದ್ರಶೇಖರ್ ಹೇಳಿದ್ದಾರೆ.

    ಜಿಲ್ಲೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಅವರು, ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡ್ತಾರೆ ಅಂತ ಜನ ಮತ ಹಾಕಿದ್ದರು. ಆದರೆ ಸಿಎಂ ಆದ ಮೇಲೆ ಕುಮಾರಸ್ವಾಮಿ ಏನು ಅನ್ನೋದು ಜನಕ್ಕೆ ಗೊತ್ತಾಗಿದೆ. ಬಹಳ ಜನ ಮಹಿಳೆಯರು ಸಾಲ ಮನ್ನಾ ಆಗುತ್ತೆ ಎಂದು ಕುಮಾರಸ್ವಾಮಿಗೆ ಮತ ಹಾಕಿದ್ದರು. ಈಗ ಕುಮಾರಸ್ವಾಮಿ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

    ಅಲ್ಲದೇ ಚುನಾವಣೆ ಸಂದರ್ಭದಲ್ಲಿ ನನ್ನ ಕ್ಷೇತ್ರದ ಕೆಲ ಬೂತ್ ನಲ್ಲಿ ಜೆಡಿಎಸ್ ಏಜೆಂಟ್ ಗಳೇ ಇರಲಿಲ್ಲ. ಪ್ರತಿ ಬೂತ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು 50 ರಿಂದ 100 ಮಂದಿ ಇದ್ದರು. ಆದರೆ ಜೆಡಿಎಸ್ ಕೇವಲ ಇಬ್ಬರು, ಮೂರು ಮಂದಿ ಮಾತ್ರ ಇದ್ದರು ಎಂದು ವ್ಯಂಗ್ಯಮಾಡಿದ್ದಾರೆ.