Tag: k 46

  • ಕಟುಮಸ್ತಾದ ದೇಹ ಪ್ರದರ್ಶಿಸಿದ ಸುದೀಪ್-‌ K 46 ಬಗ್ಗೆ ಕಿಚ್ಚ ಅಪ್‌ಡೇಟ್

    ಕಟುಮಸ್ತಾದ ದೇಹ ಪ್ರದರ್ಶಿಸಿದ ಸುದೀಪ್-‌ K 46 ಬಗ್ಗೆ ಕಿಚ್ಚ ಅಪ್‌ಡೇಟ್

    ಟಿ, ಸಂಸದೆ ಸುಮಲತಾ (Sumalatha) ಬರ್ತ್‌ಡೇ (Birthday) ಪಾರ್ಟಿಯಲ್ಲಿ ಕಿಚ್ಚ ಸುದೀಪ್- ದರ್ಶನ್ (Darshan) ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. 6 ವರ್ಷಗಳ ನಂತರ ಮುಖಾಮುಖಿಯಾದರು. ಈ ಬೆನ್ನಲ್ಲೇ ರಾತ್ರಿ ಪಾರ್ಟಿ (ಆಗಸ್ಟ್ 26) ಮಾಡಿ, ಬೆಳಿಗ್ಗೆ ಸುದೀಪ್ ದೇಹ ದಂಡಿಸಿದ್ದಾರೆ. ಕಟು ಮಸ್ತಾದ ಫೋಟೋವನ್ನ ಕಿಚ್ಚ (Kichcha Sudeep) ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ದರ್ಶನ್- ಸುದೀಪ್ ಇಬ್ಬರನ್ನು ಒಟ್ಟಿಗೆ ನೋಡಬೇಕು ಎಂಬ ಅಭಿಮಾನಿಗಳ ಆಸೆ ಇದೀಗ ಸುಮಲತಾ ಬರ್ತ್‌ಡೇ ಪಾರ್ಟಿ ಮೂಲಕ ನೆರವೇರಿದೆ. ಇಷ್ಟು ಹತ್ತಿರ ಆಗಿರುವವರು ಕೈ ಜೋಡಿಸುವ ಕಾಲ ಇನ್ನೂ ದೂರ ಇಲ್ಲ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಇನ್ನು ಇದೆಲ್ಲದರ ನಡುವೆ ಸುದೀಪ್ ಮತ್ತೆ ಸಿಕ್ಸ್‌ಪ್ಯಾಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. K 46 ಚಿತ್ರಕ್ಕಾಗಿ ಮತ್ತೆ ದೇಹ ದಂಡಿಸುತ್ತಿದ್ದಾರೆ. ಕಟು ಮಸ್ತಾದ ದೇಹ ಪ್ರದರ್ಶಿಸಿ (Workout) ಸ್ಪೆಷಲ್ ಪೋಸ್ಟ್ ಶೇರ್ ಮಾಡಿದ್ದಾರೆ. ದೇಹ ಹುರಿಗೊಳಿಸಿ ಸ್ನಾಯುಗಳನ್ನ ಬೆಳೆಸಿ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆ ಫೋಟೊಗಳು ಸಖತ್ ವೈರಲ್ ಆಗ್ತಿದೆ. ಇದನ್ನೂ ಓದಿ:‘ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ’ ಚಿತ್ರದ ಪೋಸ್ಟರ್ ರಿಲೀಸ್: ವಿ.ನಾಗೇಂದ್ರ ಪ್ರಸಾದ್ ಸಾಥ್

     

    View this post on Instagram

     

    A post shared by KicchaSudeepa (@kichchasudeepa)

    ರಾತ್ರಿಯಷ್ಟೇ (ಆಗಸ್ಟ್‌ 26) ಸುಮಲತಾ ಅಂಬರೀಶ್ (Sumalatha Ambareesh) ಬರ್ತ್‌ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದ ಸುದೀಪ್, ಬೆಳಗ್ಗೆ ಮತ್ತೆ ಜಿಮ್‌ನಲ್ಲಿ ಬೆವರಿಳಿಸಿದ್ದಾರೆ. ಸಿಕ್ಸ್‌ ಪ್ಯಾಕ್ ಫೋಟೊಗಳನ್ನು ಶೇರ್ ಮಾಡಿ ವರ್ಕೌಟ್ ನನ್ನ ಹೊಸ ಹ್ಯಾಪಿ ಸ್ಪೇಸ್ ಆಗಿದೆ. ಈ ದಿನಚರಿ ನನ್ನನ್ನು ಶಾಂತವಾಗಿ ಮತ್ತು ಫೋಕಸ್ಡ್ ಆಗಿ ಇಡುತ್ತದೆ. K 46 ಕ್ಲೈಮ್ಯಾಕ್ಸ್‌ ಫೈಟ್ ಸೀಕ್ವೆನ್ಸ್‌ಗೆ ಇನ್ನೊಂದು ತಿಂಗಳು ಬಾಕಿಯಿದೆ. ನನ್ನ ವರ್ಕೌಟ್ ಸ್ಟೇಷನ್‌ನಲ್ಲಿ ಮತ್ತಷ್ಟು ಸಾಧಿಸುವುದಿದೆ ಎಂದು ಸುದೀಪ್ ಬರೆದುಕೊಂಡಿದ್ದಾರೆ. ಈ ಮೂಲಕ ಕಿಚ್ಚ ತಮ್ಮ ಸಿನಿಮಾ ಬಗ್ಗೆ ಅಪ್‌ಡೇಟ್‌ ಹಂಚಿಕೊಂಡಿದ್ದಾರೆ.

    ತಮಿಳುನಾಡಿದ ಮಹಾಬಲಿಪುರಂ K 46 ಸಿನಿಮಾ ಚಿತ್ರೀಕರಣ ನಡೀತಿದೆ. ಒಂದು ದೊಡ್ಡ ಶೆಡ್ಯೂಲ್ ಮುಗಿಸಿ ಬಂದಿರುವ ಕಿಚ್ಚ ಮುಂದಿನ ಶೆಡ್ಯೂಲ್‌ಗಾಗಿ ಸಿದ್ಧತೆ ನಡೆಸುತ್ತಿದ್ದಾರೆ.ತಮಿಳಿನ ಕಲೈಪುಲಿ ಎಸ್. ತನು ಜೊತೆ ಸೇರಿ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. K 46 ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಎನ್ನಲಾಗ್ತಿದ್ದು ಈಗಾಗಲೇ ಟೀಸರ್ ರಿಲೀಸ್ ಆಗಿ ಹಿಟ್ ಆಗಿದೆ. ವಿಜಯ್ ಕಾರ್ತಿಕೇಯನ್ ನಿರ್ದೇಶನ ಮಾಡ್ತಿದ್ದಾರೆ. ಇನ್ನೂ ಸುದೀಪ್‌ ಹುಟ್ಟುಹಬ್ಬದಂದು (ಸೆಪ್ಟೆಂಬರ್‌ 2) ಕಿಚ್ಚನ ಸಿನಿಮಾದ ಟೈಟಲ್‌, ಹೆಚ್ಚಿನ ಅಪ್‌ಡೇಟ್‌ ಹೊರಬೀಳಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇದೇ ವರ್ಷ ಸುದೀಪ್ ನಟನೆಯ ‘KICHCHA-46’ ಸಿನಿಮಾ ರಿಲೀಸ್

    ಇದೇ ವರ್ಷ ಸುದೀಪ್ ನಟನೆಯ ‘KICHCHA-46’ ಸಿನಿಮಾ ರಿಲೀಸ್

    ಸುದೀಪ್ (Sudeep) ತಮಿಳುನಾಡಿನಲ್ಲಿ ಕನ್ನಡದ ಕಹಳೆ ಊದಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಕ್ಕೆ ಹೀರೋ ಆಗಿದ್ದರೂ ಕನ್ನಡ ನಾಡಿನ ಋಣ ತೀರಿಸಲು ಏನು ಮಾಡಬೇಕೊ ಎಲ್ಲವನ್ನೂ ಮುಗಿಸಿದ್ದಾರೆ. `ಕೆ-46′ (K-46) ಚಿತ್ರದಲ್ಲಿ ಈ ಕಾಯಕ ಮಾಡಿ ಕನ್ನಡಿಗರಿಂದ ಶಹಬ್ಬಾಶ್‌ ಗಿರಿ ಪಡೆದಿದ್ದಾರೆ.

    ಇದು ಕಿಚ್ಚನ ಹೊಸ ಸಿನಿಮಾ (New Cinema). ಟೈಟಲ್ ಇನ್ನೂ ಇಟ್ಟಿಲ್ಲ. ಇದರ ಶೂಟಿಂಗ್‌ಗಾಗಿ ಚೆನ್ನೈನ (Chennai) ಮಹಾಬಲಿಪುರಂನಲ್ಲಿ ಹಾಕಿದ ಸೆಟ್‌ನಲ್ಲಿ ಕಾರ್ಯ ನಿರತರಾಗಿದ್ದಾರೆ. ಇಲ್ಲಿಂದಲೇ ಅದೊಂದು ಮಹಾ ಗುಟ್ಟು ಹೊರ ಬಿದ್ದಿದೆ. ಇದರ ನಿರ್ಮಾಪಕ ಎಸ್ ಥಾನು (S Thanu), ನಿರ್ದೇಶಕ ವಿಜಯ್ (Vijay). ಇಬ್ಬರದೂ ತಮಿಳು ಮೂಲ. ಆದರೆ ಶೂಟಿಂಗ್ ಸೆಟ್‌ನಲ್ಲಿ ಬಹುತೇಕರು ಕನ್ನಡಿಗರೇ. ಅದಕ್ಕೆ ಕಾರಣ ಸುದೀಪ್. ತಮಿಳು ಭಾಷೆಯಲ್ಲೇ ಶೂಟಿಂಗ್ ಮಾಡೋಣ ಎಂದಿದ್ದ ನಿರ್ಮಾಪಕರ ಮಾತನ್ನು ಸುದೀಪ್ ನಿರಾಕರಿಸಿದ್ದು ಮೂಲ ಹೂರಣ. ಇದನ್ನೂ ಓದಿ:‘ಸಂಜೆ ಮೇಲೆ ಸುಮ್ನೆ ಹಂಗೆ’ ಅಂತಿದ್ದಾರೆ ನೀನಾಸಂ ಸತೀಶ್: ಮ್ಯಾಟ್ನಿ ಹಾಡು ವೈರಲ್

    ‘ಮೊದಲು ಕನ್ನಡ ಭಾಷೆಯಲ್ಲೇ ಶೂಟಿಂಗ್ ಮಾಡೋಣ. ನಂತರ ಅದನ್ನು ತಮಿಳಿಗೆ ಡಬ್ ಮಾಡೋಣ’ ಹೀಗಂತ ಸುದೀಪ್ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ತಾಕೀತು ಮಾಡಿದ್ದಾರಂತೆ. ಅದೇ ರೀತಿ ಕೆಲಸ ನಡೆಯುತ್ತಿದೆ. ಕೆಲವು ಹೀರೋಗಳು ತಮಿಳು ಸಿನಿಮಾ ಸಿಕ್ಕಿದ ಮಾತ್ರಕ್ಕೆ ಹುಟ್ಟಿದ ನೆಲ ಮರೆಯುತ್ತಾರೆ. ಆದರೆ ಸುದೀಪ್ ಹಾಗೆ ಮಾಡಿಲ್ಲ. ಮಾಡುವುದೂ ಇಲ್ಲ. ಅದರ ಪರಿಣಾಮ ಕಣ್ಣ ಮುಂದಿದೆ. ಕನ್ನಡ ನಾಡಿನ ಜನರು ಕೇಕೆ ಹಾಕುವಂತೆ ಮಾಡಿದೆ.

    ಈ ಸಿನಿಮಾಗಾಗಿ ಸುದೀಪ್ ಒಂದೇ ಹಂತದ ಶೂಟಿಂಗ್ ಮಾಡಲು ತಯಾರಿ ಮಾಡಿಕೊಂಡಿದ್ದಾರಂತೆ. ಅಂದುಕೊಂಡಂತೆ ಶೂಟಿಂಗ್ ಮಾಡಿ, ಇದೇ ವರ್ಷವೇ ಸಿನಿಮಾವನ್ನು ತೆರೆಗೆ ತರಲು ಸಿದ್ದತೆ ಕೂಡ ಮಾಡಿಕೊಂಡಿದ್ದಾರಂತೆ. ಸುದೀಪ್ ಸಿನಿಮಾಗಾಗಿ ಕಾದ ಅಭಿಮಾನಿಗಳಿಗೆ ನಿಜಕ್ಕೂ ಇದೊಂದು ಗುಡ್ ನ್ಯೂಸ್.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಲ್‌ಶೀಟ್‌ ಕದನಕ್ಕೆ ಬ್ರೇಕ್‌ ಬೀಳುವ ಮುಂಚೆಯೇ ‘K46’ ಸಿನಿಮಾಗೆ ಸಜ್ಜಾದ ಕಿಚ್ಚ ಸುದೀಪ್

    ಕಾಲ್‌ಶೀಟ್‌ ಕದನಕ್ಕೆ ಬ್ರೇಕ್‌ ಬೀಳುವ ಮುಂಚೆಯೇ ‘K46’ ಸಿನಿಮಾಗೆ ಸಜ್ಜಾದ ಕಿಚ್ಚ ಸುದೀಪ್

    ಸ್ಯಾಂಡಲ್‌ವುಡ್‌ನಲ್ಲಿ ಕಿಚ್ಚ ಸುದೀಪ್(Kiccha Sudeep)- ನಿರ್ಮಾಪಕ ಕುಮಾರ್ ಕಾಲ್‌ಶೀಟ್ ಕದನಕ್ಕೆ ಪೂರ್ಣ ವಿರಾಮ ಬೀಳುವ ಮುಂಚಯೇ ಕಿಚ್ಚನ 46 ಸಿನಿಮಾಗೆ ಸಿದ್ಧತೆ ನಡೆಯುತ್ತಿದೆ. ಕುಮಾರ್ ಜೊತೆಗಿನ ಸಂಧಾನದ ಮಾತುಕತೆ ನಡೆಯುತ್ತಿದೆ. ಈ ವಾರದ ಅಂತ್ಯದಲ್ಲಿ ಎಲ್ಲದಕ್ಕೂ ಉತ್ತರ ಸಿಗಲಿದೆ. ಈ ಬೆನ್ನಲ್ಲೇ ವಿವಾದ ಬದಿಗಿಟ್ಟು ಕಾಯಕವೇ ಕೈಲಾಸ ಅಂತಾ ಸುದೀಪ್ ಹೊಸ ಸಿನಿಮಾದ ಶೂಟಿಂಗ್‌ನತ್ತ ಮುಖ ಮಾಡಿದ್ದಾರೆ.‌ ಇದನ್ನೂ ಓದಿ:‘BAD’ ಸಿನಿಮಾದಲ್ಲಿ ಪ್ರೀತಿಯ ಪ್ರತಿನಿಧಿಯಾದ ಅಪೂರ್ವ ಭಾರದ್ವಾಜ್

    ‘ವಿಕ್ರಾಂತ್ ರೋಣ’ ಸಿನಿಮಾದ ಬಳಿಕ ತನ್ನ ಜೊತೆ ಸಿನಿಮಾ ಮಾಡ್ತಾರೆ ಅಂತಾ ಮಾತುಕತೆ ಆಗಿತ್ತು. ಹಣ ಪಡೆದು ಸಾಕಷ್ಟು ಸಮಯದಿಂದ ಕಾಲ್‌ಶೀಟ್ ನೀಡದೇ ಸುದೀಪ್ ಸತಾಯಿಸುತ್ತಿದ್ದಾರೆ ಎಂದು ನಿರ್ಮಾಪಕ ಕುಮಾರ್ (Producer Kumar) ಆರೋಪಿಸಿದ್ದರು. ಇದಾದ ಬಳಿಕ ಸುದೀಪ್ ಕಾನೂನು ಸಮರ ಸಾರಿದ್ದರು. ಬಳಿಕ ರವಿಚಂದ್ರನ್ (Ravichandran) ಅವರ ಜೊತೆ ಕುಮಾರ್-ಸುದೀಪ್ ಇಬ್ಬರ ಸಂಧಾನ ಸಭೆ ನಡೆದಿತ್ತು. ಆದರೆ ಇದು ಇನ್ನೂ ಅಂತಿಮ ಹಂತಕ್ಕೆ ತಲುಪಿಲ್ಲ. ಕೊನೆಯ ಮೀಟಿಂಗ್‌ನಲ್ಲಿ ಶಿವಣ್ಣ (Shivarajkumar) ಕೂಡ ಭಾಗಿಯಾಗಲಿದ್ದಾರೆ. ಬಳಿಕ ಕಾಲ್‌ಶೀಟ್ ಕದನಕ್ಕೆ ಬ್ರೇಕ್ ಸಿಗಲಿದೆ.

    ʼವಿಕ್ರಾಂತ್ ರೋಣ’ (Vikrant Rona) ಸಿನಿಮಾ 2022ರಲ್ಲಿ ರಿಲೀಸ್ ಆಯಿತು. ಇದಾದ ಬಳಿಕ ಸುದೀಪ್ ಒಂದು ಬ್ರೇಕ್ ಪಡೆದರು. ವೃತ್ತಿ ಜೀವನದಲ್ಲಿ ಅವರು ಪಡೆದ ಮೊದಲ ಬ್ರೇಕ್ ಇದು ಅನ್ನೋದು ವಿಶೇಷ. ಈ ಸಮಯದಲ್ಲಿ ಸುದೀಪ್ ಅವರು ಕುಟುಂಬಕ್ಕೆ ಹೆಚ್ಚು ಆದ್ಯತೆ ಕೊಟ್ಟರು. ಚುನಾವಣಾ ಪ್ರಚಾರದಲ್ಲಿ ಭಾಗಿ ಆದರು. ಬಿಜೆಪಿ ಕ್ಷೇತ್ರದ ಪರ ಪ್ರಚಾರಕ್ಕೆ ಕಣಕ್ಕೆ ಇಳಿದರು. ಈಗ ಅವರು ಶೂಟಿಂಗ್ ಹೊರಡೋಕೆ ರೆಡಿ ಆಗಿದ್ದಾರೆ.

    ‘K 46’ ಚಿತ್ರದ ಶೂಟಿಂಗ್ ಆಗಸ್ಟ್ ಮೊದಲ ವಾರದಿಂದ ಪ್ರಾರಂಭ ಆಗಲಿದೆ. 55 ದಿನಗಳ ಸುದೀರ್ಘ ಶೆಡ್ಯೂಲ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಯಲಿದೆ. ಸಿನಿಮಾದ ಮೊದಲ ಝಲಕ್ ಸಂಚಲನ ಮೂಡಿಸಿದೆ. ನಾನು ಮನುಷ್ಯನಲ್ಲ ರಾಕ್ಷಸ ಎನ್ನುವ ಕಿಚ್ಚನ ಖಡಕ್ ಡೈಲಾಗ್ ಫ್ಯಾನ್ಸ್ ಕಿಕ್ ಕೊಟ್ಟಿತ್ತು. ಈಗ ಸಿನಿಮಾ ಚಿತ್ರೀಕರಣಕ್ಕೆ ಕೌಂಟ್‌ಡೌನ್ ಶುರುವಾಗಿದೆ. ವಿಜಯ್ ಕಾರ್ತಿಕೇಯ ಅವರು ‘K 46ʼ ಚಿತ್ರಕ್ಕೆ ನಿರ್ದೇಶನ ಮಾಡ್ತಿದ್ದಾರೆ. ವಿ ಕ್ರಿಯೇಷನ್ಸ್ ಅವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]