Tag: Jyotiraditya Scindia

  • ಆಗಸ್ಟ್ 31 ರಿಂದ ವಿಮಾನ ಪ್ರಯಾಣ ದುಬಾರಿ – ಶುಲ್ಕ ಮುಕ್ತಗೊಳಿಸಿದ ಸರ್ಕಾರ

    ಆಗಸ್ಟ್ 31 ರಿಂದ ವಿಮಾನ ಪ್ರಯಾಣ ದುಬಾರಿ – ಶುಲ್ಕ ಮುಕ್ತಗೊಳಿಸಿದ ಸರ್ಕಾರ

    ನವದೆಹಲಿ: ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ವಿಮಾನ ಪ್ರಯಾಣ ದರದ ಮೇಲಿನ ಮಿತಿಗಳನ್ನು ಇದೀಗ ಸರ್ಕಾರ ಕೊನೆಗೊಳಿಸಲು ನಿರ್ಧರಿಸಿದ್ದು, ಆಗಸ್ಟ್ 31 ರಿಂದ ಪ್ರಯಾಣಿಕರಿಗೆ ಶುಲ್ಕ ವಿಧಿಸಲು ವಿಮಾನಯಾನ ಸಂಸ್ಥೆಗಳಿಗೆ ಮುಕ್ತ ಅವಕಾಶ ಕಲ್ಪಿಸಿಕೊಡಲು ಕೇಂದ್ರ ವಿಮಾನಯಾನ ಸಚಿವಾಲಯ ನಿರ್ಧರಿಸಿದೆ.

    ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ದೈನಂದಿನ ಬೇಡಿಕೆ ಮತ್ತು ವಿಮಾನ ಇಂಧನ (ಎಟಿಎಫ್) ಬೆಲೆಗಳನ್ನು ಎಚ್ಚರಿಕೆಯಿಂದ ವಿಶ್ಲೇಷಿಸಿದ ನಂತರ ವಿಮಾನ ಪ್ರಯಾಣ ದರದ ಮೇಲಿನ ಮಿತಿಯನ್ನು ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನಿಧಾನವಾಗಿ ವಿಮಾನಗಳಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆ ಕಾಣುತ್ತಿದೆ. ದೇಶೀಯ ಸಂಚಾರಕ್ಕೆ ವಿಮಾನಗಳು ಸಿದ್ಧವಾಗಿದೆ ಎಂದು ನಮಗೆ ವಿಶ್ವಾಸವಿದೆ. ಹಾಗಾಗಿ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಶುಲ್ಕ ವಿಧಿಸಲು ಮುಕ್ತ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಜಗತ್ತಿನಲ್ಲಿ 5 ವರ್ಷ ಕದನ ವಿರಾಮಕ್ಕೆ ಮೋದಿ ಸಮಿತಿ ರಚಿಸಿ: ಮೆಕ್ಸಿಕೋ ಅಧ್ಯಕ್ಷ

    ವಿಮಾನಗಳ ದೇಶೀಯ ಕಾರ್ಯಾಚರಣೆಗಳ ಪ್ರಸ್ತುತ ಸ್ಥಿತಿಯನ್ನು ಗಮನಿಸಿದ ಬಳಿಕ 2022ರ ಆಗಸ್ಟ್ 31 ರಿಂದ ಅನ್ವಯವಾಗುವಂತೆ ಶುಲ್ಕದ ಮಿತಿಯನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ ಎಂದು ವಿಮಾನಯಾನ ಸಚಿವಾಲಯ ಬುಧವಾರ ಆದೇಶಿಸಿದೆ. ಕೊರೊನಾ ಆರಂಭಗೊಂಡು ವಿಮಾನಯಾನ ನಿರ್ಬಂಧದ ಬಳಿಕ 2020ರ ಮೇ 25 ರಂದು ವಿಮಾನಯಾನ ಸಂಸ್ಥೆಗಳು ಪುನರಾರಂಭಗೊಂಡಾಗ ವಿಮಾನಯಾನದ ಅವಧಿಯನ್ನು ಅವಲಂಬಿಸಿ ಸಚಿವಾಲಯವು ದೇಶೀಯ ವಿಮಾನ ದರಗಳ ಮೇಲೆ ಕಡಿತ ಮತ್ತು ಮಿತಿಗಳನ್ನು ವಿಧಿಸಿತ್ತು. ಇದನ್ನೂ ಓದಿ: 4 ವರ್ಷಗಳಿಂದ ಸ್ಥಗಿತವಾಗಿದ್ದ ಮೈ ಶುಗರ್‌ ಕಾರ್ಖಾನೆ ಇಂದಿನಿಂದ ಆರಂಭ

    Live Tv
    [brid partner=56869869 player=32851 video=960834 autoplay=true]

  • ಅಬ್ಬಾಸ್ ರಾಜೀನಾಮೆ ಬೆನ್ನಲ್ಲೇ ಸ್ಮೃತಿ ಇರಾನಿ, ಜೋತಿರಾಧಿತ್ಯ ಸಿಂಧಿಯಾ ಹೆಗಲಿಗೆ ಜವಾಬ್ದಾರಿ

    ಅಬ್ಬಾಸ್ ರಾಜೀನಾಮೆ ಬೆನ್ನಲ್ಲೇ ಸ್ಮೃತಿ ಇರಾನಿ, ಜೋತಿರಾಧಿತ್ಯ ಸಿಂಧಿಯಾ ಹೆಗಲಿಗೆ ಜವಾಬ್ದಾರಿ

    ನವದೆಹಲಿ: ರಾಜ್ಯಸಭೆ ಅವಧಿ ಅಂತ್ಯದ ಬೆನ್ನಲ್ಲೇ ಕೇಂದ್ರ ಸಚಿವ ಸ್ಥಾನಕ್ಕೆ ಮುಖ್ತಾರ್ ಅಬ್ಬಾಸ್ ನಖ್ವಿ ರಾಜೀನಾಮೆ ನೀಡಿದ್ದು, ಅಲ್ಪಸಂಖ್ಯಾತ ವ್ಯವಹಾರಗಳ ಖಾತೆಯನ್ನು ಸ್ಮೃತಿ ಇರಾನಿ ಅವರಿಗೆ ನೀಡಲಾಗಿದೆ.

    ಪ್ರಧಾನಿ ನರೇಂದ್ರ ಮೋದಿ ಅವರಿಂದು ಅಬ್ಬಾಸ್ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಇದನ್ನೂ ಓದಿ: ಮೋದಿ ಸಂಪುಟ ಸ್ಥಾನಕ್ಕೆ ಮುಖ್ತಾರ್‌ ಅಬ್ಬಾಸ್‌ ರಾಜೀನಾಮೆ

    ಕೇಂದ್ರ ಸಚಿವರ ರಾಜೀನಾಮೆ ಹಿನ್ನೆಲೆ ಸ್ಮೃತಿ ಇರಾನಿ ಮತ್ತು ಜೋತಿರಾಧಿತ್ಯ ಸಿಂಧಿಯಾಗೆ ಜವಾಬ್ದಾರಿ ನೀಡಲಾಗಿದೆ. ಅಲ್ಪಸಂಖ್ಯಾತ ವ್ಯವಹಾರಗಳ ಖಾತೆಯನ್ನು ಸ್ಮೃತಿ ಇರಾನಿ ಅವರ ಹೆಗಲಿಗೆ ನೀಡಲಾಗಿದ್ದು, ಸ್ಟೀಲ್ ಖಾತೆಯನ್ನು ಜೋತಿರಾಧಿತ್ಯ ಸಿಂಧಿಯಾಗೆ ಹೆಚ್ಚುವರಿ ಜವಾಬ್ದಾರಿಯಾಗಿ ಹಂಚಿಕೆ ಮಾಡಲಾಗಿದೆ. ಇದನ್ನೂ ಓದಿ: ರಾಜ್ಯಸಭೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ನಾಮ ನಿರ್ದೇಶನ: ಮೋದಿ ಟ್ವೀಟ್

    ಇತ್ತೀಚೆಗಷ್ಟೆ ನಡೆದಿದ್ದ ರಾಜ್ಯಸಭೆ ಚುನಾವಣೆಯಲ್ಲಿ ಮುಖ್ತಾರ್ ಅಬ್ಬಾಸ್ ಸ್ಪರ್ಧಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಸಭೆ ಅವಧಿ ಗುರುವಾರ ಅಂತ್ಯಗೊಳ್ಳಲಿದೆ. ಮೋದಿ ಸಂಪುಟ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನಖ್ವಿಗೆ ಕೇಂದ್ರ ಸರ್ಕಾರ ರಾಜ್ಯಪಾಲ ಹುದ್ದೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

    Live Tv
    [brid partner=56869869 player=32851 video=960834 autoplay=true]

  • ವಂಶಾಡಳಿತ ರಾಜಕಾರಣಕ್ಕೆ ಬಿಜೆಪಿಯಲ್ಲಿ ಸ್ಥಾನವಿಲ್ಲ: ಜ್ಯೋತಿರಾದಿತ್ಯ ಸಿಂಧಿಯಾ

    ವಂಶಾಡಳಿತ ರಾಜಕಾರಣಕ್ಕೆ ಬಿಜೆಪಿಯಲ್ಲಿ ಸ್ಥಾನವಿಲ್ಲ: ಜ್ಯೋತಿರಾದಿತ್ಯ ಸಿಂಧಿಯಾ

    ನವದೆಹಲಿ: ಪಕ್ಷದ ಕಾರ್ಯಕರ್ತರ ಕೆಲಸದ ಆಧಾರದ ಮೇಲೆ ಪ್ರತಿಫಲವಿದೆಯೇ ಹೊರತು ವಂಶಾಡಳಿತ ರಾಜಕಾರಣಕ್ಕೆ ಬಿಜೆಪಿಯಲ್ಲಿ ಸ್ಥಾನವಿಲ್ಲ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರಿಗೆ ಅವರ ಕೆಲಸದ ಆಧಾರದ ಮೇಲೆ ಪ್ರತಿಫಲವನ್ನು ನೀಡಬೇಕು ಮತ್ತು ಕುಟುಂಬದ ಸಂಬಂಧಗಳಿಗೆ ಅನುಗುಣವಾಗಿ ಸ್ಥಾನವನ್ನು ನೀಡಬಾರದು ಎಂದು ಪ್ರಧಾನಿ ಮೋದಿ ನಂಬಿದ್ದಾರೆ. ಅದನ್ನು ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನು ಮುಂದುವರಿಸಬೇಕು ಎಂದರು.

    ಬಿಜೆಪಿಯಲ್ಲಿ ವಂಶಾಡಳಿತ ರಾಜಕಾರಣವಿಲ್ಲ. ಪ್ರಧಾನ ಮಂತ್ರಿ ಅವರ ಚಿಂತನೆ ಮತ್ತು ಸಿದ್ಧಾಂತದ ಪ್ರಕಾರ ಕಾರ್ಮಿಕರಿಗೆ ಅವರ ಅತ್ಯುತ್ತಮ ಸೇವೆಯ ಆಧಾರದ ಮೇಲೆ ಪುರಸ್ಕಾರ ನೀಡಬೇಕು ಮತ್ತು ಅವರ ಕುಟುಂಬವನ್ನು ಆಧರಿಸಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಭಗವಂತ್ ಮಾನ್ ಅಹಂಕಾರಿಯಲ್ಲ- ಸ್ವಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಕೈ ಮುಖಂಡ ಸಿಧು

    ಗ್ವಾಲಿಯರ್-ಚಂಬಲ್ ವಿಭಾಗದಲ್ಲಿ ಕಾಂಗ್ರೆಸ್ ನಾಯಕರು ಸಭೆ ನಡೆಸುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಆ ಸಮಯದಲ್ಲಿ ಕಾಂಗ್ರೆಸ್‍ನಲ್ಲಿದ್ದಾಗ ಮತ್ತು ಈಗ ಬಿಜೆಪಿಯಲ್ಲಿರುವಾಗ ಕೆಲವರು ಹೊಟ್ಟೆಕಿಚ್ಚು ಪಡುತ್ತಿದ್ದಾರೆ. ಆದರೆ ನಾನು ಜನಸೇವೆಯ ಹಾದಿಯಲ್ಲೇ ಮುನ್ನಡೆಯುತ್ತೇನೆ. ಇದು ಪ್ರಗತಿ ಮತ್ತು ಅಭಿವೃದ್ಧಿಯ ಮಾರ್ಗವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಡಾಬಾದಲ್ಲಿ ಊಟ ಮಾಡುತ್ತಿದ್ದ ಯುವಕನಿಗೆ ಚಾಕುವಿನಿಂದ ಇರಿದು ಹತ್ಯೆ

  • ಗುಜರಾತ್-ಮುಂಬೈ ನಡುವೆ ವಿಮಾನಯಾನ ಸೇವೆ ಆರಂಭ

    ಗುಜರಾತ್-ಮುಂಬೈ ನಡುವೆ ವಿಮಾನಯಾನ ಸೇವೆ ಆರಂಭ

    ಗಾಂಧಿನಗರ: ಕೇಂದ್ರದ `ಉದೇ ದೇಶ್ ಕಾ ಅಮ್ ನಾಗರಿಕ್ (ಉಡಾನ್)’ ಕಾರ್ಯಕ್ರಮದ ಅಡಿಯಲ್ಲಿ ಇದೇ ಮೊದಲ ಬಾರಿಗೆ ಗುಜರಾತ್‌ನ ಜುನಾಗಡ ಜಿಲ್ಲೆಯ ಕೇಶೋಡ್ ಮತ್ತು ಮುಂಬೈ ನಡುವೆ ನಾಗರಿಕ ವಿಮಾನಯಾನಕ್ಕೆ ಚಾಲನೆ ನೀಡಲಾಗಿದೆ. ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ವಿಮಾನ ಯಾನಕ್ಕೆ ಚಾಲನೆ ನೀಡಿದ್ದಾರೆ.

    Capture

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರವಾಸೋದ್ಯಮದೊಂದಿಗೆ ರಾಜ್ಯದ ಅಭಿವೃದ್ಧಿಯನ್ನು ತ್ವರಿತಗೊಳಿಸಲು ಉದ್ದೇಶಿಸಿ ವಿಮಾನ ಸೇವೆ ಪ್ರಾರಂಭಿಸಲಾಗಿದೆ. ಈ ಸೌಲಭ್ಯವು ಹೆಚ್ಚು ಪ್ರಯಾಣಿಕರನ್ನು ಆಕರ್ಷಿಸಲು ಸಹಕರಿಸುತ್ತದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ಜೊತೆಗೆ ವ್ಯಾಪಾರ ಸಮೃದ್ಧಿಯ ಹೊಸ ಆಯಾಮವನ್ನೂ ನೋಡಬಹುದಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೋವಿಡ್ ಉಲ್ಬಣ – ಉತ್ತರ ಪ್ರದೇಶದಲ್ಲಿ ಹೈ ಅಲರ್ಟ್

    FLIGHT

    ಇದೇ ವೇಳೆ ಕೇಂದ್ರ ಸಚಿವರು ಹಿರಾಸರ್ ಮತ್ತು ಧೋಲೆರಾದಲ್ಲಿ ಎರಡು ಹೊಸ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳನ್ನು ಸ್ಥಾಪಿಸುವುದಾಗಿ ಘೋಷಿಸಿದರು. ನಾವು ಗುಜರಾತ್‌ಗೆ 5 ಹೊಸ ವಿಮಾನಗಳನ್ನು ನೀಡಿದ್ದು, ಅಹಮದಾಬಾದ್‌ನಿಂದ ಅಮೃತಸರ, ರಾಂಚಿ, ಆಗ್ರಾ, ಪೋರಬಂದರ್‌ನಿಂದ ಮುಂಬೈ, ರಾಜ್‌ಕೋಟ್‌ನಿಂದ ಮುಂಬೈಗೆ ಅವು ಪ್ರಯಾಣಿಸಲಿವೆ. ಇದರೊಂದಿಗೆ 1,405 ಕೋಟಿ ರೂ. ವೆಚ್ಚದಲ್ಲಿ ಹಿರಾಸರ್‌ನಲ್ಲಿ ಮತ್ತು 1305 ಕೋಟಿ ವೆಚ್ಚದಲ್ಲಿ ಧೋಲೇರಾದಲ್ಲಿ ಎರಡು ಹೊಸ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳನ್ನು ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು. ಇದನ್ನೂ ಓದಿ: ಸ್ಥಳೀಯ ಉತ್ಪನ್ನ ಮಾತ್ರ ಖರೀದಿಸಲು ಜನರನ್ನು ಪ್ರೇರೇಪಿಸಿ: ಸ್ವಾಮೀಜಿಗಳಿಗೆ ಮೋದಿ ಮನವಿ

    ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಉಪಸ್ಥಿತರಿದ್ದರು.

  • 2025ರ ವೇಳೆಗೆ ಭಾರತದಲ್ಲಿ ತಲೆ ಎತ್ತಲಿವೆ 220 ವಿಮಾನ ನಿಲ್ದಾಣ: ಸಿಂಧಿಯಾ

    2025ರ ವೇಳೆಗೆ ಭಾರತದಲ್ಲಿ ತಲೆ ಎತ್ತಲಿವೆ 220 ವಿಮಾನ ನಿಲ್ದಾಣ: ಸಿಂಧಿಯಾ

    ನವದೆಹಲಿ: ನಾಗರಿಕ ವಿಮಾನಯಾನ ಉದ್ಯಮವು ಆರ್ಥಿಕತೆಯ ಪ್ರಮುಖ ಭಾಗವಾಗಿದ್ದು, 2025ರ ವೇಳೆಗೆ ಕೇಂದ್ರ ಸರ್ಕಾರವು 220 ವಿಮಾನ ನಿಲ್ದಾಣಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆಯ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

    ಈ ಕುರಿತು ಅಧಿವೇಶನದಲ್ಲಿ ಮಾತನಾಡಿರುವ ಅವರು, ಕೋವಿಡ್ ಸಮಯದಲ್ಲೂ ಭಾರತ ದೇಶ-ವಿದೇಶದ ಪ್ರಯಾಣದಲ್ಲಿ ಮುನ್ನಡೆ ಸಾಧಿಸಿದೆ. ಇದು ಆರ್ಥಿಕತೆಯ ಭಾಗವೂ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಆರ್ಥಿಕತೆ ಬಲಪಡಿಸಲು 220 ವಿಮಾನ ನಿಲ್ದಾಣ ಸ್ಥಾಪನೆಯ ಗುರಿಯನ್ನು ಹೊಂದಲಾಗಿದೆ. ಜೊತೆಗೆ ಆಹಾರ ಪದಾರ್ಥಗಳ ಸಾಗಾಣಿಕೆಗೆ ಕಾರ್ಗೋ ವಿಮಾನಗಳ ಸಂಖ್ಯೆಯನ್ನು ಶೇ.30ರಷ್ಟು ಹೆಚ್ಚಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬಾಲಿವುಡ್ ಗಲ್ಲಿ ಬಾಯ್ ಖ್ಯಾತಿಯ ರಾಪರ್ ಧರ್ಮೇಶ್ ಪರ್ಮಾರ್ ಇನ್ನಿಲ್ಲ

    ವಿಶ್ವದಾದ್ಯಂತ ಎಲ್ಲ ರಾಷ್ಟ್ರಗಳಲ್ಲಿ ಒಟ್ಟು ಪೈಲಟ್‍ಗಳಲ್ಲಿ ಶೇ.5 ರಷ್ಟು ಮಾತ್ರ ಮಹಿಳೆಯರಿದ್ದಾರೆ. ಆದರೆ, ಭಾರತದಲ್ಲಿ ಶೇ.15 ರಷ್ಟು ಮಹಿಳೆಯರಿದ್ದಾರೆ. ಕಳೆದ 20-25 ವರ್ಷಗಳಲ್ಲಿ ಹೀಗೆ ಸಾಕಷ್ಟು ಬೆಳವಣಿಗೆಗಳಾಗಿವೆ. ಇದು ಮಹಿಳಾ ಸಬಲೀಕರಣಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಹಾಗಾಗಿ, ಕೇಂದ್ರ ಸರ್ಕಾರವು 33 ದೇಶಿಯ ಸರಕು ಟರ್ಮಿನಲ್‍ಗಳು, 15 ವಿಮಾನಯಾನ ತರಬೇತಿ ಶಾಲೆಗಳನ್ನು ಸ್ಥಾಪಿಸುವ ಮೂಲಕ ಮತ್ತಷ್ಟು ಉದ್ಯೋಗಾವಕಾಶ ಕಲ್ಪಿಸಲು ಮುಂದಾಗುತ್ತಿದೆ. ಇದನ್ನೂ ಓದಿ: ಕರ್ನಾಟಕದ ಗಣಿಗಾರಿಕೆ ಪ್ರಕರಣಗಳ ವಿಚಾರಣೆಗೆ ವಿಶೇಷ ಪೀಠ ರಚನೆ – ಸುಪ್ರೀಂಕೋರ್ಟ್

     

    2018-19ರಲ್ಲಿ ವಾರ್ಷಿಕ ಪ್ರಯಾಣಿಕರ ಸಂಖ್ಯೆ 34.5 ಕೋಟಿ ಇತ್ತು. 2023-24ರ ವೇಳೆಗೆ ಈ ಸಂಖ್ಯೆಯನ್ನು 40 ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಈ ಎಲ್ಲ ಉದ್ದೇಶಗಳಿಂದಾಗಿ 220 ಇಮಾನ ನಿಲ್ದಾಣಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗುತ್ತಿದೆ ಎಂದು ವಿವರಿಸಿದ್ದಾರೆ.

  • ಉಕ್ರೇನ್‍ನಲ್ಲಿರುವ ಭಾರತೀಯರನ್ನು ಭೇಟಿಯಾಗಿ ಧೈರ್ಯ ತುಂಬಿದ ಸಿಂಧಿಯಾ

    ಉಕ್ರೇನ್‍ನಲ್ಲಿರುವ ಭಾರತೀಯರನ್ನು ಭೇಟಿಯಾಗಿ ಧೈರ್ಯ ತುಂಬಿದ ಸಿಂಧಿಯಾ

    ಕೀವ್: ರಷ್ಯಾ ಹಾಗೂ ಉಕ್ರೇನ್ ನಡುವಿನ ಸಂಘರ್ಷ ಇಂದು 7ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಕೂಡ ಉಕ್ರೇನ್ ಮೇಲೆ ರಷ್ಯಾ ಸೈನಿಕರು ದಾಳಿ ಮಾಡುತ್ತಿದ್ದು, ಅಲ್ಲಿ ಸಿಲುಕಿರುವ ಭಾರತೀಯರು ಆತಂಕ ಹೊರಹಾಕುತ್ತಿದ್ದಾರೆ. ಆದಷ್ಟು ಬೇಗ ನಮ್ಮನ್ನು ತಾಯ್ನಾಡಿಗೆ ಕರೆಸಿಕೊಳ್ಳಿ ಎಂದು ಕಣ್ಣೀರಾಕುತ್ತಿದ್ದಾರೆ.

    ಇತ್ತ ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ಕ್ರಮಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸರ್ಕಾರ, 4 ಕೇಂದ್ರ ಸಚಿವರನ್ನು ನಿಯೋಜಿಸಿ ಉಕ್ರೇನ್ ನೆರೆಯ ರಾಷ್ಟ್ರಗಳಿಗೆ ಕಳುಹಿಸಿದೆ. ಅದರಂತೆ ಸಚಿವರು ಈಗಾಗಲೇ ಅಲ್ಲಿಗೆ ತೆರಳಿದ್ದು, ಆ ದೇಶದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕಳುಹಿಸಿಕೊಡುವ ಜವಾಬ್ದಾರಿ ನೀಡಲಾಗಿದೆ. ಇದನ್ನೂ ಓದಿ: ಊಟ ತರಲು ನನ್ನ ಬಳಿ ದುಡ್ಡಿಲ್ಲ, ಸ್ವಲ್ಪ ಹಣ ಹಾಕು ಅಂದ ಅದೇ ನವೀನ್‍ನ ಕೊನೆ ಮಾತು: ಶ್ರೀಕಾಂತ್

    ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ರೊಮೇನಿಯಾದ ಬುಕಾರೆಸ್ಟ್ ತಲುಪಿದ್ದಾರೆ. ಬುಧವಾರ ಅಲ್ಲಿನ ಭಾರತೀಯ ವಿದ್ಯಾರ್ಥಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಇದೇ ವೇಳೆ ಸಿಂಧಿಯಾ ಮಕ್ಕಳೊಂದಿಗೆ ನೆಲದ ಮೇಲೆ ಕುಳಿತು, ಚಿಂತೆ ಮಾಡಬೇಡಿ, ನಾನು ಎಲ್ಲರನ್ನು ಮನೆಗೆ ಕಳುಹಿಸುತ್ತೇನೆ ಎಂದು ಧೈರ್ಯ ಹೇಳಿದರು. ಇದನ್ನೂ ಓದಿ: ನೀವು ನಮ್ಮೊಂದಿಗಿದ್ದೀರಿ ಎಂಬುದನ್ನು ಸಾಬೀತುಪಡಿಸಿ: ಯೂರೋಪ್‌ ನಾಯಕರಿಗೆ ಉಕ್ರೇನ್‌ ಅಧ್ಯಕ್ಷ ಕರೆ

    ಬಳಿಕ ಈ ಬಗ್ಗೆ ಟ್ವೀಟ್ ಮಾಡಿರುವ ಸಿಂಧಿಯಾ, ಇಲ್ಲಿರುವ ಭಾರತೀಯರನ್ನು ರಕ್ಷಣೆ ಮಾಡಲು ಕೇಂದ್ರ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ದಾಳಿಯಿಂದ ತತ್ತರಿಸಿರುವ ಜನರಿಗೆ ಧೈರ್ಯ ತುಂಬಲಾಗಿದೆ. ಇವರನ್ನು ತಕ್ಷಣವೇ ಇಲ್ಲಿಂದ ಸ್ಥಳಾಂತರ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪುಟಿನ್ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕಿಡಿ

    ಇತ್ತ ಸಚಿವರಾದ ಹರ್ದೀಪ್ ಸಿಂಗ್ ಪುರಿ ಅವರು ಹಂಗೇರಿಯಲ್ಲಿ, ಕಿರಣ್ ರಿಜಿಜು ಸ್ಲೋವಾಕಿಯಾದಲ್ಲಿ, ವಿಕೆ ಸಿಂಗ್ ಪೋಲೆಂಡ್‍ನಲ್ಲಿ ಭಾರತೀಯರ ತೆರವು ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ಉಕ್ರೇನ್ ನೆರೆಯ ನಾಲ್ಕು ದೇಶಗಳಿಂದ ಮೂರು ದಿನಗಳಲ್ಲಿ ಸುಮಾರು 5000 ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರಲು ಪ್ಲ್ಯಾನ್ ಮಾಡಲಾಗುತ್ತಿದೆ. ಆಪರೇಷನ್ ಗಂಗಾ ಮಿಷನ್ ಗೆ ಸಿ 17 ವಿಮಾನ ಬಳಕೆ ಮಾಡಲಾಗುತ್ತಿದೆ. ಇಂದೇ ಎರಡು ದೇಶಗಳಿಗೆ ಸಿ 17 ವಿಮಾನ ತೆರಳು ಸಾಧ್ಯತೆ ಇದ್ದು, ಮುಂದಿನ 3-4 ದಿನಗಳಲ್ಲಿ ಬೃಹತ್ ಕಾರ್ಯಚರಣೆ ನಡೆಯಲಿದೆ. ಕಳೆದ ಆರು ದಿನಗಳಲ್ಲಿ ಕೇವಲ ಎರಡು ಸಾವಿರ ವಿದ್ಯಾರ್ಥಿಗಳ ಸ್ಥಳಾಂತರ ಮಾಡಲಾಗಿದ್ದು, ನವೀನ್ ಸಾವಿನ ಬೆನ್ನಲೆ ತುರ್ತು ಕಾರ್ಯಚರಣೆಗೆ ವಿದೇಶಾಂಗ ಇಲಾಖೆ ಇಳಿದಿದೆ.

  • ಕೊಲ್ಕತ್ತಾದಲ್ಲಿ ಏರ್‌ಪೋರ್ಟ್‌ಗೆ ಮಮತಾ ಸರ್ಕಾರ ಸಹಕರಿಸುತ್ತಿಲ್ಲ: ಜ್ಯೋತಿರಾದಿತ್ಯ ಸಿಂಧಿಯಾ

    ಕೊಲ್ಕತ್ತಾದಲ್ಲಿ ಏರ್‌ಪೋರ್ಟ್‌ಗೆ ಮಮತಾ ಸರ್ಕಾರ ಸಹಕರಿಸುತ್ತಿಲ್ಲ: ಜ್ಯೋತಿರಾದಿತ್ಯ ಸಿಂಧಿಯಾ

    ಕೊಲ್ಕತ್ತಾ: ಕೊಲ್ಕತ್ತಾಕ್ಕೆ ಎರಡನೇ ವಿಮಾನ ನಿಲ್ದಾಣ ಸೇರಿದಂತೆ ಪಶ್ಚಿಮ ಬಂಗಾಳಕ್ಕೆ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಕೇಂದ್ರವು ವಿಸ್ತೃತಗೊಳಿಸಿದೆ. ಆದರೆ ಇದಕ್ಕೆ ಮಮತಾ ಬ್ಯಾನರ್ಜಿ ಸರ್ಕಾರವು ಭೂಮಿಯನ್ನು ಒದಗಿಸಿಲ್ಲ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಆರೋಪಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಾಮರ್ಥ್ಯಕ್ಕಿಂತಲೂ ಅಧಿಕ ಜನರು ಬರುವುದನ್ನು ಗಮನಿಸಿ ಎರಡನೇ ವಿಮಾನ ನಿಲ್ದಾಣವನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದೇವೆ. ಈ ಬಗ್ಗೆ ಕಳೆದ ಆರು ತಿಂಗಳಿನಿಂದ ಮುಖ್ಯಮಂತ್ರಿಯೊಂದಿಗೆ ಮಾತುಕತೆಗೆ ಕೇಳುತ್ತಿದ್ದೇನೆ. ಆದರೆ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಕಿಡಿಕಾರಿದರು.

    ನಾವು ಕೋಲ್ಕತ್ತಾದಲ್ಲಿ ಹೊಸ ವಿಮಾನ ನಿಲ್ದಾಣವನ್ನು ನಿರ್ಮಿಸುವ ಯೋಜನೆಯನ್ನು ಹೊಂದಿದ್ದೇವೆ. ಈ ಬಗ್ಗೆ ಹಲವಾರು ವರ್ಷಗಳಿಂದ ಹೊಸ ಸೈಟ್‌ಗಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಆದರೆ ರಾಜ್ಯ ಸರ್ಕಾರ ಯಾವುದಕ್ಕೂ ಸಹಕರಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸೇಡಂ ಬಿಜೆಪಿ ಶಾಸಕ ತೇಲ್ಕೂರ್‌ಗೆ ಮಹಿಳೆ ಬ್ಲಾಕ್‍ಮೇಲ್

    ಪ್ರಸ್ತುತ ಎನ್‌ಎಸ್‌ಸಿಬಿಐ ವಿಮಾನ ನಿಲ್ದಾಣಕ್ಕೆ 700 ಕೋಟಿ ರೂ. ಹೂಡಿಕೆ ಮಾಡುತ್ತಿದ್ದೇವೆ. 300 ಕೋಟಿ ವೆಚ್ಚದಲ್ಲಿ ಹೊಸ ಟೆಕ್ನಿಕಲ್ ಬ್ಲಾಕ್ ಕಮ್ ಕಂಟ್ರೋಲ್ ಟವರ್ ಕಾರ್ಯಾರಂಭ ಮಾಡಲಾಗಿದ್ದು, 265 ಕೋಟಿ ವೆಚ್ಚದಲ್ಲಿ ಹೊಸ ಟ್ಯಾಕ್ಸಿವೇ ನಿರ್ಮಿಸಲಾಗುತ್ತಿದೆ ಜೊತೆಗೆ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡದೊಂದಿಗೆ ಮೆಟ್ರೊ ರೈಲು ಸಂಪರ್ಕ ಕಲ್ಪಿಸಲು 110 ಕೋಟಿ ರೂ. ಹೂಡಿಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

    ಈಗಿರುವ ವಿಮಾನ ನಿಲ್ದಾಣದ ಕಟ್ಟಡ 2.5 ಕೋಟಿ ಜನರು ಬರವಂತೆ ಇದೆ. ಆದರೆ ಈ ಮಹಾನಗರದಿಂದ ವಿಮಾನ ಯಾನ ಕೈಗೊಳ್ಳುವವರು, ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 3.5 ಕೋಟಿ ಜನರು ಬರಬಹುದಾದಷ್ಟು ಸಾಮರ್ಥ್ಯವುಳ್ಳ ಒಂದು ವಿಮಾನ ನಿಲ್ದಾಣದ ಅಗತ್ಯವಿದೆ ಎಂದರು. ಇದನ್ನೂ ಓದಿ: 40 ವರ್ಷಗಳ ಹಿಂದೆ ಅವರನ್ನು ಭೇಟಿಯಾಗಿದ್ದೆ- ಸಿಧು ಜೊತೆಗಿನ ಮೊದಲ ಭೇಟಿ ನೆನೆದ ರಾಗಾ

    ಈ ಪೂರ್ವ ಮಹಾನಗರಕ್ಕೆ ಮತ್ತು ಅಲ್ಲಿಂದ ಬರುವ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವುದನ್ನು ಪೂರೈಸಲು 2 ಲಕ್ಷ ಚದರ ಮೀಟರ್‌ನ ಹೊಸ ವಿಮಾನ ನಿಲ್ದಾಣವನ್ನು ನಿರ್ಮಿಸುವ ಅಗತ್ಯವಿದೆ. ಕೇಂದ್ರ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಎರಡನೇ ಏರ್‌ಪೋರ್ಟ್ ಗೆ ದಕ್ಷಿಣ 24 ಪರಗಣ ಜಿಲ್ಲೆಯ ಭಂಗಾರ್ ಕೂಡ ಒಂದು ಸಂಭವನೀಯ ಸ್ಥಳವಾಗಿದೆ ಎಂದು ಹೇಳಿದರು.

  • ದೇಶದ 5 ರಾಜ್ಯಗಳಲ್ಲಿ 16 ವಿಮಾನ ನಿಲ್ದಾಣಗಳ ನಿರ್ಮಾಣ: ಜ್ಯೋತಿರಾದಿತ್ಯ ಸಿಂಧಿಯಾ

    ದೇಶದ 5 ರಾಜ್ಯಗಳಲ್ಲಿ 16 ವಿಮಾನ ನಿಲ್ದಾಣಗಳ ನಿರ್ಮಾಣ: ಜ್ಯೋತಿರಾದಿತ್ಯ ಸಿಂಧಿಯಾ

    ನವದೆಹಲಿ: ಭಾರತದ 5 ರಾಜ್ಯಗಳಲ್ಲಿ ಹೊಸದಾಗಿ 16 ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುವುದು ಎಂದು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಘೋಷಿಸಿದ್ದಾರೆ.

    ಪ್ರಧಾನಮಂತ್ರಿ ಗತಿ ಶಕ್ತಿ ಸಮ್ಮೇಳನದಲ್ಲಿ ಮಾತನಾಡಿದ ಸಿಂಧಿಯಾ, ಮಧ್ಯಪ್ರದೇಶದ ರೇವಾ, ಛತ್ತೀಸ್‌ಗಢದ ಅಂಬಿಕಾಪುರ, ಬಿಲಾಸ್‌ಪುರ ಮತ್ತು ಜಗದಲ್‌ಪುರದಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಿದ್ದೇವೆ. ಉತ್ತರ ಪ್ರದೇಶದಲ್ಲಿ ಒಂಬತ್ತು ವಿಮಾನ ನಿಲ್ದಾಣಗಳು, ರಾಜಸ್ಥಾನದಲ್ಲಿ ಒಂದು ವಿಮಾನ ನಿಲ್ದಾಣ ಹಾಗೂ ಮಹಾರಾಷ್ಟ್ರದಲ್ಲಿ ಎರಡು ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ ತನ್ನ ಬೊಕ್ಕಸ ತುಂಬಲು ಬಡವರ ಜೇಬಿಗೆ ಕತ್ತರಿ ಹಾಕ್ತಿದೆ: ಚರಣ್ ಸಿಂಗ್ ಸಪ್ರಾ

    ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಳೆದ ವರ್ಷ ಆಗಸ್ಟ್ 15 ರಂದು ಪಿಎಂ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಪ್ರಾರಂಭಿಸಿದರು. ಸಮಗ್ರ ಯೋಜನೆ ಮತ್ತು ಮೂಲಸೌಕರ್ಯ ಸಂಪರ್ಕ ಯೋಜನೆಗಳ ಸಂಘಟಿತ ಅನುಷ್ಠಾನದ ಮೂಲಕ ಬಹು-ಮಾದರಿ ಸಂಪರ್ಕವನ್ನು ಅಭಿವೃದ್ಧಿಪಡಿಸಲು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ.

    ಪಿಎಂ ಗತಿ ಶಕ್ತಿ ಯೋಜನೆಯಿಂದ ಇಂದು ದೇಶದಲ್ಲಿ ಬಹು ಮಾದರಿ ಸಂಪರ್ಕಕ್ಕೆ ವೇಗ ದೊರಕಿದೆ. ದೇಶದಲ್ಲಿ ಹೆಚ್ಚಿನ ಹೂಡಿಕೆಯನ್ನು ತರಲು ಹಾಗೂ ಉತ್ತಮ ಉದ್ಯೋಗವನ್ನು ಸೃಷ್ಟಿಸಲು ಇದು ಸಹಾಯ ಮಾಡುತ್ತದೆ ಎಂದು ಹೇಳಿದರು. ಇದನ್ನೂ ಓದಿ: ರೈತರು ದೀರ್ಘ ಹೋರಾಟಕ್ಕೆ ಸಿದ್ಧರಾಗಿ: ರಾಕೇಶ್ ಟಿಕಾಯತ್

    ದಕ್ಷಿಣ ಏಷ್ಯಾದ ದೇಶಗಳು ಸೇರಿದಂತೆ ವಿಶ್ವದ ಹಲವು ದೇಶಗಳು ಕಳೆದ 70 ವರ್ಷಗಳಲ್ಲಿ ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆಯತ್ತ ಗಮನ ಹರಿಸಿವೆ. ಇದೀಗ ಆ ಎಲ್ಲಾ ದೇಶಗಳು ಅಭಿವೃದ್ಧಿ ಹೊಂದಿದ ದೇಶಗಳಾಗಿ ಹೊರಹೊಮ್ಮಿವೆ ಎಂದು ಸಿಂಧಿಯಾ ತಿಳಿಸಿದರು.

  • ಮೋದಿ, ಮನಮೋಹನ್ ಸಿಂಗ್ ನಡುವೆ ಹೋಲಿಕೆ ಮಾಡಲು ಸಾಧ್ಯವಿಲ್ಲ: ಜ್ಯೋತಿರಾದಿತ್ಯಾ ಸಿಂಧಿಯಾ

    ಮೋದಿ, ಮನಮೋಹನ್ ಸಿಂಗ್ ನಡುವೆ ಹೋಲಿಕೆ ಮಾಡಲು ಸಾಧ್ಯವಿಲ್ಲ: ಜ್ಯೋತಿರಾದಿತ್ಯಾ ಸಿಂಧಿಯಾ

    ನವದೆಹಲಿ: ಪ್ರಧಾನಿ ಮೋದಿ ಮತ್ತು ಮನಮೋಹನ್ ಸಿಂಗ್ ನಡುವಿನ ವ್ಯತ್ಯಾಸವೇನು ಎಂಬ ಪ್ರಶ್ನೆಗೆ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯಾ ಸಿಂಧಿಯಾ ಉತ್ತರಿಸಿದ್ದಾರೆ.

    ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೋದಿ ಮತ್ತು ಮನಮೋಹನ್ ಸಿಂಗ್ ನಡುವೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಪ್ರಧಾನಿ ಮೋದಿ ಅವರದ್ದು ಫಲಿತಾಂಶ ಆಧಾರಿತ ಕ್ರಿಯಾತ್ಮಕ ನಾಯಕ ಎಂದು ಬಣ್ಣಿಸಿದ್ದಾರೆ.

    ಪ್ರಧಾನಿಯಾಗಿ ಮೋದಿ ಮತ್ತು ಮನಮೋಹನ್ ರವರ ನಡುವಿನ ವ್ಯತ್ಯಾಸವನ್ನು ಜ್ಯೋತಿರಾದಿತ್ಯಾಗೆ ಕೇಳಿದಾಗ, ಅವರಿಬ್ಬರ ನಡುವೆ ಹೋಲಿಕೆ ಮಾಡುವುದು ಕಷ್ಟ ಎಂದು ನಾನು ಭಾವಿಸುತ್ತೇನೆ. ಇವರಿಬ್ಬರ ನಡುವೆ ಜಮೀನ್ ಆಸ್ಮಾನ್ ಕಾ ಫರಕ್ ಹೈ(ಆಕಾಶ ಮತ್ತು ಭೂಮಿ ನಡುವಿನ ಅಂತರ) ಎಂದು ಹೇಳಿದರು. ಇದನ್ನೂ ಓದಿ: ಜವಾದ್ ಚಂಡಮಾರುತದ ಅಬ್ಬರ – 14 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

    ಈ ಸಂದರ್ಭದಲ್ಲಿ ತಮ್ಮ 4 ತಿಂಗಳ ರಾಜಕೀಯ ಅನುಭವವನ್ನು ಹಂಚಿಕೊಂಡ ಅವರು, ಇದೊಂದು ಜನರು ನನಗೆ ದೊರಕಿಸಿ ಕೊಟ್ಟ ಸುವರ್ಣಾವಕಾಶವಾಗಿದ್ದು, ನಾನು ರಾಜಕೀಯಕ್ಕೆ ಬರುವ ಮೊದಲು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ ಎಂದರು.

    ಪೂರ್ವದಲ್ಲಿ ಜನತಾ ಪಕ್ಷದಲ್ಲಿರದ ಸಿಂಧಿಯಾ ಅವರು ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಇದನ್ನೂ ಓದಿ: ಇಮ್ರಾನ್‌ ಖಾನ್‌ ಸರ್ಕಾರ ಮಾನ ಹರಾಜು ಹಾಕಿದ ಪಾಕ್‌ ರಾಯಭಾರ ಕಚೇರಿ

    2020 ರಲ್ಲಿ ಜ್ಯೋತಿರಾದಿತ್ಯಾ ಸಿಂದಿಯಾ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿ, ಈ ವರ್ಷ ಜುಲೈನಿಂದ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಸಿಂದಿಯಾ  ಜೊತೆ 25 ಮಂದಿ ಬೆಂಬಲಿಗರು ರಾಜೀನಾಮೆ ನೀಡಿದ್ದರಿಂದ ಮಧ್ಯಪ್ರದೇಶದಲ್ಲಿದ್ದ ಕಾಂಗ್ರೆಸ್‌ ಸರ್ಕಾರ ಪತನಗೊಂಡಿತ್ತು.

  • ಜ್ಯೋತಿರಾದಿತ್ಯ ಸಿಂಧಿಯಾರನ್ನು ಭೇಟಿಯಾದ ಸಿಎಂ ಬೊಮ್ಮಾಯಿ

    ಜ್ಯೋತಿರಾದಿತ್ಯ ಸಿಂಧಿಯಾರನ್ನು ಭೇಟಿಯಾದ ಸಿಎಂ ಬೊಮ್ಮಾಯಿ

    ನವದೆಹಲಿ: ಸಿಎಂ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ನಾಗರಿಕ ವಿಮಾನಯಾನ ಖಾತೆಯ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಇಂದು ಭೇಟಿ ಮಾಡಿದ್ದಾರೆ.

    ದೆಹಲಿಯಲ್ಲಿ ಭೇಟಿ ಮಾಡಿರುವ ಸಿಎಂ, ಕೆಲವು ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ವೇಳೆ ಕೇಂದ್ರ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕøತಿ ಖಾತೆ ಸಚಿವರಾದ ವಿ.ಸುನೀಲ್ ಕುಮಾರ್, ಮುಖ್ಯಕಾರ್ಯದರ್ಶಿಗಳಾದ ಪಿ.ರವಿಕುಮಾರ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಪ್ರಸಾದ್ ಅವರು ಉಪಸ್ಥಿತರಿದ್ದರು. ಇದನ್ನೂ ಓದಿ:  ಯಡಿಯೂರಪ್ಪ, ವಿಜಯೇಂದ್ರ ಆಪ್ತರೇ ಟಾರ್ಗೆಟ್- ಐಟಿ ದಾಳಿ ಬಗ್ಗೆ ಸಿದ್ದರಾಮಯ್ಯ ಅನುಮಾನ

    ಈಗಾಗಲೇ ದೆಹಲಿ ಪ್ರವಾಸದಲ್ಲಿರುವ ಬೊಮ್ಮಾಯಿ ಅವರಿಗೆ ಈಗ ಸಂಪುಟ ಸಂಕಟ ಶುರುವಾಗಿದೆ. ಸಂಪುಟ ವಿಸ್ತರಣೆಗಾಗಿ ಸಿಎಂ ಮೇಲೆ ಒತ್ತಡ ಹೆಚ್ಚಾಗ್ತಿದೆ. ನವೆಂಬರ್ ಅಥವಾ ಡಿಸೆಂಬರ್ ಗೆ ಸಂಪುಟ ವಿಸ್ತರಣೆಗೆ ಬೊಮ್ಮಾಯಿ ಅವರು ಯೋಚಿಸಿದ್ದು, ದೆಹಲಿ ನಾಯಕರ ಭೇಟಿ ವೇಳೆ ಸಂಪುಟ ವಿಸ್ತರಣೆ ಅನಿವಾರ್ಯತೆಗೆ ಬಗ್ಗೆ ಮನವರಿಕೆ ಮಾಡಿಕೊಡಲು ಯತ್ನಿಸಬಹುದು ಎಂದು ಮೂಲಗಳು ತಿಳಿಸಿವೆ.

    ಈ ಬಗ್ಗೆ ಹೈಕಮಾಂಡ್ ಒಪ್ಪಿಗೆ ಕೊಡುತ್ತಾ ಅಥವಾ ಆ ಕುರಿತು ಚರ್ಚಿಸಲು ಇನ್ನೊಂದು ಸಲ ದೆಹಲಿಗೆ ಬರುವಂತೆ ಸೂಚಿಸುತ್ತಾ ಕಾದು ನೋಡಬೇಕು. ಇದನ್ನೂ ಓದಿ:  ದೆಹಲಿ ಪ್ರವಾಸದಲ್ಲಿರೋ ಬೊಮ್ಮಾಯಿಗೆ ಸಂಪುಟ ಸಂಕಟ!