Tag: Jyoti Malhotra

  • ಪಾಕ್ ಬೇಹುಗಾರ್ತಿಗೆ ಕೇರಳ ಸರ್ಕಾರ ಧನಸಹಾಯ – ಸರ್ಕಾರದ ಖರ್ಚಿನಲ್ಲಿ ವ್ಲಾಗರ್ ಜ್ಯೋತಿ ಪ್ರವಾಸ

    ಪಾಕ್ ಬೇಹುಗಾರ್ತಿಗೆ ಕೇರಳ ಸರ್ಕಾರ ಧನಸಹಾಯ – ಸರ್ಕಾರದ ಖರ್ಚಿನಲ್ಲಿ ವ್ಲಾಗರ್ ಜ್ಯೋತಿ ಪ್ರವಾಸ

    ನವದೆಹಲಿ: ಪಾಕಿಸ್ತಾನದ ಪರ ಬೇಹುಗಾರಿಕೆ (Pakistan Spy) ಮಾಡಿದ ಆರೋಪ ಎದುರಿಸುತ್ತಿರುವ ಹರಿಯಾಣ ಮೂಲದ ವ್ಲಾಗರ್ ಜ್ಯೋತಿ ಮಲ್ಹೋತ್ರಾ (Jyoti Malhotra) ಕೇರಳ ಸರ್ಕಾರದ ಧನಸಹಾಯದಲ್ಲಿ ಪ್ರವಾಸ ಕೈಗೊಂಡಿದ್ದರು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

    ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾದ ಅರ್ಜಿಯ ಮೂಲಕ ಒದಗಿಸಲಾದ ದಾಖಲೆಗಳ ಪ್ರಕಾರ, ಜನವರಿ 2024 ಮತ್ತು ಮೇ 2025ರ ನಡುವೆ ಜ್ಯೋತಿ ಮಲ್ಹೋತ್ರಾ ಕೇರಳದ ಕೊಚ್ಚಿ, ತಿರುವನಂತಪುರಂ ಮತ್ತು ಇತರ ಕೆಲವು ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಈ ಭೇಟಿಯನ್ನು ಸಾಂಸ್ಕೃತಿಕ ಅಧ್ಯಯನ ಅಥವಾ ಸಂಶೋಧನೆಯ ಭಾಗವೆಂದು ವರ್ಗೀಕರಿಸಲಾಗಿತ್ತು. ಈ ಭೇಟಿಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ಸರ್ಕಾರಿ ಯೋಜನೆಯಡಿ ಭರಿಸಲಾಗಿದೆ. ಆದರೆ, ಈ ಯೋಜನೆಯ ನಿಖರ ಸ್ವರೂಪ ಮತ್ತು ಜ್ಯೋತಿಯ ಚಟುವಟಿಕೆಗಳ ಕುರಿತು ಸ್ಪಷ್ಟ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. ಇದನ್ನೂ ಓದಿ: ಯಾರ ಕೈಗೂ ಸಿಗದೇ ಸರಳವಾಗಿ ಹುಟ್ಟುಹಬ್ಬ ಆಚರಿಸಿದ ರಿಷಬ್ ಶೆಟ್ಟಿ

    ಇನ್ನೂ ವಿದೇಶಿ ಗೂಢಚರ್ಯೆ ಆರೋಪಿತ ವ್ಯಕ್ತಿಯೊಬ್ಬರು ಸರ್ಕಾರಿ ಧನಸಹಾಯದ ಮೂಲಕ ರಾಜ್ಯಕ್ಕೆ ಭೇಟಿ ನೀಡಿರುವುದು, ಗೂಢಚರ್ಯೆಗೆ ಸಂಬಂಧಿಸಿದ ಶಂಕೆಗಳನ್ನು ಹೆಚ್ಚಿಸಿದೆ. ಕೇರಳದ ಸೂಕ್ಷ್ಮ ಭೌಗೋಳಿಕ ಸ್ಥಾನ ಮತ್ತು ರಾಜಕೀಯ ವಾತಾವರಣವನ್ನು ಗಮನಿಸಿದಾಗ, ಈ ಘಟನೆ ಇನ್ನಷ್ಟು ಗಂಭೀರವಾಗಿದೆ. ಈ ಆರೋಪದ ಕುರಿತು ಸಂಪೂರ್ಣ ತನಿಖೆಗೆ ಒತ್ತಾಯ ಕೇಳಿಬಂದಿದೆ. ಇದನ್ನೂ ಓದಿ: ಶಾಲೆ ಬಳಿ ಇದ್ದ ನೇರಳೆ ತಿಂದು 7 ವಿದ್ಯಾರ್ಥಿಗಳು ಅಸ್ವಸ್ಥ – ಆಸ್ಪತ್ರೆಗೆ ದಾಖಲು

  • ಜ್ಯೋತಿ ಮಲ್ಹೋತ್ರಾ ಮೊಬೈಲ್, ಲ್ಯಾಪ್‌ಟಾಪ್‌ನಿಂದ 12,000 ಜಿಬಿ ಡಾಟಾ ರಿಟ್ರೀವ್ – ಸ್ಫೋಟಕ ರಹಸ್ಯಗಳು ಬಯಲಿಗೆ!

    ಜ್ಯೋತಿ ಮಲ್ಹೋತ್ರಾ ಮೊಬೈಲ್, ಲ್ಯಾಪ್‌ಟಾಪ್‌ನಿಂದ 12,000 ಜಿಬಿ ಡಾಟಾ ರಿಟ್ರೀವ್ – ಸ್ಫೋಟಕ ರಹಸ್ಯಗಳು ಬಯಲಿಗೆ!

    – ತಾನು ಮಾತಾಡ್ತಿರೋದು ಐಎಸ್‌ಐ ಅಧಿಕಾರಿಗಳ ಜೊತೆ ಅಂತ ಜ್ಯೋತಿ ಗೊತ್ತಿತ್ತು

    ನವದೆಹಲಿ: ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಯೂಟ್ಯೂಬರ್‌ ಜ್ಯೋತಿ ಮಲ್ಹೋತ್ರಾ (Jyoti Malhotra) ಕುರಿತು ಒಂದಾದಮೇಲೊಂದು ಸ್ಫೋಟಕ ವಿಚಾರಗಳು ಬೆಳಕಿಗೆ ಬರುತ್ತಿವೆ. 33 ವರ್ಷದ ಯೂಟ್ಯೂಬರ್‌ನ ಡಿಜಿಟಲ್‌ ಸಾಧನಗಳನ್ನು ಪರಿಶೀಲಿಸಿದ ಹರಿಯಾಣ ಪೊಲೀಸರು (Haryana Police) ಹಲವು ರಹಸ್ಯಗಳನ್ನು ಬಯಲಿಗೆಳೆದಿದ್ದಾರೆ.

    ಪೊಲೀಸ್‌ ಮೂಲಗಳು ಹೇಳುವಂತೆ, ಜ್ಯೋತಿ‌ ನಾಲ್ವರು ಪಾಕಿಸ್ತಾನಿ ಗುಪ್ತಚರ (Pakistani Intelligence) ಏಜೆಂಟ್‌ಗಳೊಂದಿಗೆ ಸಂಪರ್ಕದಲ್ಲಿದ್ದರು ನಾಲ್ವರ ಜೊತೆಗೂ ಪ್ರತ್ಯೇಕವಾಗಿ ಮಾತನಾಡುತ್ತಿದ್ದರು. ನಾಲ್ವರ ಪೈಕಿ ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನ ಡ್ಯಾನಿಶ್, ಅಹ್ಸಾನ್ ಮತ್ತು ಶಾಹಿದ್ ಸೇರಿದ್ದಾರೆ. ಸದ್ಯ ಪಾಕಿಸ್ತಾನ ಭದ್ರತಾ ಸಂಸ್ಥೆಯೊಳಗಿನ ಈ ಏಜೆಂಟರ ಹುದ್ದೆಗಳು ಮತ್ತು ಉದ್ಯೋಗ ಶೀರ್ಷಿಕೆಗಳನ್ನು ದೃಢೀಕರಿಸಲು ತನಿಖಾಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಇದನ್ನೂ ಓದಿ: 6 ಗನ್‌ಮ್ಯಾನ್‌ಗಳೊಂದಿಗೆ ಪಾಕ್ ಬೀದಿಯಲ್ಲಿ ಜ್ಯೋತಿ ಸುತ್ತಾಟ- ಸ್ಫೋಟಕ ವಿಡಿಯೋ ಔಟ್

    ಇದಕ್ಕೂ ಮುನ್ನವೇ ಜ್ಯೋತಿ ಮಲ್ಹೋತ್ರಾಳಾ ಲ್ಯಾಪ್‌ಟಾಪ್‌, ಫೋನ್‌ ಸೇರಿದಂತೆ ಹಲವು ಡಿಜಿಟಲ್‌ ಉಪಕರಣಗಳನ್ನು ವಶಪಡಿಸಿಕೊಂಡಿದ್ದರು. ಇದರಲ್ಲಿ ಅನೇಕ ಸಂದೇಶಗಳನ್ನ ಅಳಿಸಿದ ಹೊರತಾಗಿಯೂ 12 ಟಿಬಿ (12 ಸಾವಿರ ಜಿಬಿ) ಡೇಟಾವನ್ನು ರಿಟ್ರೀವ್‌ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪಾಕ್‌ ಜೊತೆಗಿನ ಇನ್ನಷ್ಟು ಸುಳಿವುಗಳನ್ನು ಪತ್ತೆಹಚ್ಚಲು ಡೇಟಾಗಳನ್ನ ಪರಿಶೀಲಿಸಲಾಗುತ್ತಿದೆ. ಇದನ್ನೂ ಓದಿ: ಪಾಕ್‌ ಪರ ಬೇಹುಗಾರಿಕೆ ನಡೆಸುತ್ತಿದ್ದ CRPF ಸಿಬ್ಬಂದಿ ಅರೆಸ್ಟ್ – ಜೂ.6ರ ವರೆಗೆ NIA ಕಸ್ಟಡಿಗೆ

    ಇನ್ನೂ ಈ ಡೇಟಾಗಳ ಪ್ರಕಾರ, ಯೂಟ್ಯೂಬರ್ ಜ್ಯೋತಿಗೆ ತಾನು ಮಾತಾಡ್ತಿರೋದು ಐಎಸ್‌ಐ ಅಧಿಕಾರಿಗಳ ಜೊತೆ ಎಂದು ಗೊತ್ತಿತ್ತು, ಆದರೂ ಭಯ ಇಲ್ಲದಂತೆ ಅವರೊಂದಿಗಿನ ಸಂಪರ್ಕವನ್ನು ಮುಂದುವರಿಸಿದ್ದಳು ಅನ್ನೋದು ತಿಳಿದುಬಂದಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರ ಶುರುವಾದ ಅರ್ಧ ಗಂಟೆಯ ನಂತರವೇ ಪಾಕಿಸ್ತಾನಕ್ಕೆ ಮಾಹಿತಿ ನೀಡಿದ್ದೆವು: ಜೈಶಂಕರ್

    Jyoti Malhotra was walking through Pakisan streets with 6 men armed with AK 47 rifles

    ಇನ್ನೂ ಪಾಕಿಸ್ತಾನ ಪ್ರವಾಸದ ಸಮಯದಲ್ಲಿ ಜ್ಯೋತಿ ಮಲ್ಹೋತ್ರಾಗೆ ನೀಡಿದ ವಿಐಪಿ ಸ್ವಾಗತದ ಬಗ್ಗೆ ಈಗ ಭಾರೀ ಅನುಮಾನ ಮೂಡಿದೆ. ಪಾಕ್‌ನ ಭದ್ರತಾ ಮತ್ತು ಗುಪ್ತಚರ ಅಧಿಕಾರಿಗಳು ಭಾಗವಹಿಸಿದ್ದ ಉನ್ನತ ಮಟ್ಟದ ಪಾರ್ಟಿಗಳಿಗೆ ಆಕೆಯನ್ನೂ ಆಹ್ವಾನಿಸಲಾಗಿತ್ತು ಎಂದು ವರದಿಯಾಗಿದೆ.

    ಸದ್ಯ ಹರಿಯಾಣದ ಹಿಸ್ಸಾರ್‌ ಪೊಲೀಸರ ಕಸ್ಟಡಿಯಲ್ಲಿ ಜ್ಯೋತಿ ಇದ್ದಾಳೆ.  ಇದನ್ನೂ ಓದಿ: ಆಪರೇಷನ್ ಸಿಂಧೂರವನ್ನ ಕ್ಯಾಮೆರಾ ಮುಂದೆಯೇ ಮಾಡಲಾಯ್ತು ಆದ್ದರಿಂದ ಯಾರೂ ಪುರಾವೆ ಕೇಳಲ್ಲ: ವಿಪಕ್ಷಗಳಿಗೆ ತಿವಿದ ಮೋದಿ

  • 6 ಗನ್‌ಮ್ಯಾನ್‌ಗಳೊಂದಿಗೆ ಪಾಕ್ ಬೀದಿಯಲ್ಲಿ ಜ್ಯೋತಿ ಸುತ್ತಾಟ- ಸ್ಫೋಟಕ ವಿಡಿಯೋ ಔಟ್

    6 ಗನ್‌ಮ್ಯಾನ್‌ಗಳೊಂದಿಗೆ ಪಾಕ್ ಬೀದಿಯಲ್ಲಿ ಜ್ಯೋತಿ ಸುತ್ತಾಟ- ಸ್ಫೋಟಕ ವಿಡಿಯೋ ಔಟ್

    ನವದೆಹಲಿ: ಭಾರತದ (India) ವಿರುದ್ಧ ಬೇಹುಗಾರಿಕೆ ಮಾಡಿದ ಆರೋಪದ ಬಂಧನಕ್ಕೆ ಒಳಗಾಗಿರುವ ಜ್ಯೋತಿ ಮಲ್ಹೋತ್ರಾ (Jyoti Malhotra) ಗನ್‌ ಮ್ಯಾನ್‌ಗಳ ಸಹಾಯದಿಂದ ಪಾಕಿಸ್ತಾನದ (Pakistan) ವ್ಲಾಗ್‌ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

    ಹೌದು. ಪಾಕಿಸ್ತಾನದಲ್ಲಿ ಮಹಿಳೆಯರಿಗೆ ಗೌರವ ಕಡಿಮೆ ಇದೆ. ಅಷ್ಟೇ ಅಲ್ಲದೇ ಭಾರತೀಯರಿಗೆ ಸುರಕ್ಷಿತ ದೇಶ ಅಲ್ಲ. ಹೀಗಿರುವ ಜೋತಿ ಅಷ್ಟು ಧೈರ್ಯವಾಗಿ ವಿಡಿಯೋ ಮಾಡಿದ್ದು ಹೇಗೆ ಎಂಬ ಪ್ರಶ್ನೆಯನ್ನು ಎತ್ತಿ ಹಲವು ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದರು. ಈ ಪ್ರಶ್ನೆ, ಅನುಮಾನಗಳಿಗೆ ಸ್ಕಾಟಿಷ್ ಯೂಟ್ಯೂಬರ್ ಕ್ಯಾಲಮ್ ಮಿಲ್ ಅವರ ವಿಡಿಯೋದಲ್ಲಿ ಉತ್ತರ ಸಿಕ್ಕಿದೆ.

    ʼಕ್ಯಾಲಮ್ ಅಬ್ರಾಡ್ʼ ಹೆಸರಿನಲ್ಲಿ ಚಾನೆಲಿನಲ್ಲಿ ಅವರು ತನ್ನ ಪಾಕ್‌ ಪ್ರವಾಸದ ವಿಡಿಯೋವನ್ನು ಅಪ್ಲೋಡ್‌ ಮಾಡಿದ್ದು ಜ್ಯೋತಿಯನ್ನು ಮಾತನಾಡಿಸಿದ್ದಾರೆ. ಲಾಹೋರಿನ ಅನಾರ್ಕಲಿ ಬಜಾರ್‌ನಲ್ಲಿ ಕ್ಯಾಲಮ್ ಮಿಲ್ ಸುತ್ತಾಡುತ್ತಿದ್ದಾಗ ಜ್ಯೋತಿ ಎದುರಾಗಿದ್ದಾಳೆ. ಈ ವೇಳೆ ಇಬ್ಬರ ನಡುವೆ ಸಣ್ಣ ಮಾತುಕತೆ ನಡೆದಿದೆ. ವಿಡಿಯೋದಲ್ಲಿ ಜ್ಯೋತಿಯನ್ನು ಅರು ಮಂದಿ ಶಸ್ತ್ರಸಜ್ಜಿತ ವ್ಯಕ್ತಿಗಳು ಸುತ್ತುವರೆದಿರುವುದನ್ನು ಕಾಣಬಹುದು. ಇದನ್ನೂ ಓದಿ: ಭಾರತ ಕೊಟ್ಟ ಏಟಿಗೆ ಡಿಆರ್‌ಎಸ್‌ ನಿಯಮವನ್ನೇ ಕೈಬಿಟ್ಟ ಪಿಎಸ್‌ಎಲ್‌!

    ಮಾತುಕತೆಯ ವೇಳೆ ನಾನು ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಬಂದಿದ್ದೇನೆ ಎಂದು ಜ್ಯೋತಿ ಹೇಳಿದ್ದರೆ ಕ್ಯಾಲಮ್ ತಾನು ಐದು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾಗಿ ಹೇಳಿದ್ದಾರೆ. ಪಾಕಿಸ್ತಾನ ಆತಿಥ್ಯ ಅದ್ಭುತವಾಗಿದೆ ಎಂದು ಜ್ಯೋತಿ ಹೊಗಳಿದ್ದಾಳೆ. ಜ್ಯೋತಿ ಮುಂದೆ ಹೋಗುತ್ತಿದ್ದಂತೆ ಆಕೆಯ ಹಿಂದೆ ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿ ಹಿಂದೆ ಹೋಗುತ್ತಿರುವುದನ್ನು ನೋಡಬಹುದು.

    ವಿಡಿಯೋದಲ್ಲಿ ಕ್ಯಾಲಮ್, ಆಕೆಯ ಸುತ್ತಲೂ ಬಂದೂಕುಧಾರಿಗಳು ಇದ್ದಾರೆ. ಈ ರೀತಿ ಭದ್ರತೆ ನೀಡಿದಾಗ ಈ ಪ್ರದೇಶ ಅಸುರಕ್ಷಿತವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇದನ್ನೂ ಓದಿ: ಮುನೀರ್‌ಗೆ ಬೆಂಕಿ ಫೋಟೋ ಗಿಫ್ಟ್‌ ನೀಡಿ ಜಗತ್ತಿನ ಮುಂದೆ ಮತ್ತೆ ಬೆತ್ತಲಾದ ಪಾಕ್‌!

    ಪಾಕಿಸ್ತಾನ ಪ್ರವಾಸದ ಸಮಯದಲ್ಲಿ ಜ್ಯೋತಿ ಮಲ್ಹೋತ್ರಾಗೆ ನೀಡಿದ ವಿಐಪಿ ಸ್ವಾಗತದ ಬಗ್ಗೆ ಈಗ ಭಾರೀ ಅನುಮಾನ ಮೂಡಿದೆ. ಪಾಕ್‌ನ ಭದ್ರತಾ ಮತ್ತು ಗುಪ್ತಚರ ಅಧಿಕಾರಿಗಳು ಭಾಗವಹಿಸಿದ್ದ ಉನ್ನತ ಮಟ್ಟದ ಪಾರ್ಟಿಗಳಿಗೆ ಆಕೆಯನ್ನು ಆಹ್ವಾನಿಸಲಾಗಿತ್ತು ಎಂದು ವರದಿಯಾಗಿದೆ.

    ಸದ್ಯ ಹರ್ಯಾಣದ ಹಿಸ್ಸಾರ್‌ ಪೊಲೀಸರ ಕಸ್ಟಡಿಯಲ್ಲಿ ಜ್ಯೋತಿ ಇದ್ದಾಳೆ. ಆಕೆಯಿಂದ ಮೂರು ಮೊಬೈಲ್ ಫೋನ್‌ಗಳು, ಒಂದು ಲ್ಯಾಪ್‌ಟಾಪ್ ಮತ್ತು ಇತರ ಕೆಲವು ಎಲೆಕ್ಟ್ರಾನಿಕ್ ಸಾಧನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

  • ಜ್ಯೋತಿಗೆ ಒಡಿಶಾ ಲಿಂಕ್ – ‘ಪಾಕ್‌ನಲ್ಲಿ ಒಡಿಶಾ ಹುಡುಗಿ’ ವೀಡಿಯೋ ಮಾಡಿದ್ದ ಯೂಟ್ಯೂಬರ್ ವಿಚಾರಣೆ

    ಜ್ಯೋತಿಗೆ ಒಡಿಶಾ ಲಿಂಕ್ – ‘ಪಾಕ್‌ನಲ್ಲಿ ಒಡಿಶಾ ಹುಡುಗಿ’ ವೀಡಿಯೋ ಮಾಡಿದ್ದ ಯೂಟ್ಯೂಬರ್ ವಿಚಾರಣೆ

    ಭುವನೇಶ್ವರ: ಪಾಕಿಸ್ತಾನಕ್ಕೆ (Pakistan) ಗೂಢಚರ್ಯೆ ನಡೆಸಿದ್ದಕ್ಕಾಗಿ ಟ್ರಾವೆಲ್ ವ್ಲಾಗರ್ ಜ್ಯೋತಿ ಮಲ್ಹೋತ್ರಾ (Jyoti Malhotra) ಜೊತೆ ಒಡಿಶಾ ಯೂಟ್ಯೂಬರ್ (Odisha Youtuber) ಪ್ರಿಯಾಂಕಾ ಸೇನಾಪತಿ ಸಂಪರ್ಕದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಗಡಿಯಾಚೆಗಿನ ಬೇಹುಗಾರಿಕೆ ಸಂಪರ್ಕಗಳ ಕುರಿತು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಪ್ರಿಯಾಂಕಾಳ ಬ್ಯಾಂಕ್ ಖಾತೆ ಮತ್ತು ಕಳೆದ ವಾರ ಹರಿಯಾಣದಲ್ಲಿ ಬಂಧಿಸಲ್ಪಟ್ಟ ಮಲ್ಹೋತ್ರಾ ಜೊತೆಗಿನ ಸಂಪರ್ಕದ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ನನ್ನನ್ನು ಮದುವೆಯಾಗು: ಪಾಕ್‌ ಅಧಿಕಾರಿ ಮುಂದೆ ಆಸೆ ವ್ಯಕ್ತಪಡಿಸಿದ್ದ ಜ್ಯೋತಿ

    ವಿಚಾರಣೆಯಲ್ಲಿ ಪ್ರಿಯಾಂಕಾ ನನ್ನ ಸ್ನೇಹಿತೆ, ಯೂಟ್ಯೂಬ್‌ನಲ್ಲಿ ಸಂಪರ್ಕಕ್ಕೆ ಬಂದಳೆಂದು ಜ್ಯೋತಿ ತಿಳಿಸಿದ ಬೆನ್ನಲ್ಲೇ ಪೊಲೀಸರು ಆಕೆಯ ತನಿಖೆಗೆ ಮುಂದಾಗಿದ್ದಾರೆ.

    ಟ್ರಾವೆಲ್ ವ್ಲೋಗರ್ ತನ್ನ ಸ್ನೇಹಿತೆ ಮತ್ತು ಅವರು ಯೂಟ್ಯೂಬ್‌ನಲ್ಲಿ ಸಂಪರ್ಕಕ್ಕೆ ಬಂದರು ಎಂದು ಅವರು ಸ್ಪಷ್ಟೀಕರಣ ನೀಡಿದ ಕೆಲವು ದಿನಗಳ ನಂತರ ಇದು ಬಂದಿದೆ. ‘ಆಕೆ ವಿರುದ್ಧದ ಗಂಭೀರ ಆರೋಪಗಳ ಬಗ್ಗೆ ನನಗೇನೂ ಗೊತ್ತಿಲ್ಲ. ಶತ್ರು ದೇಶಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದಾಳೆಂದು ನನಗೆ ತಿಳಿದಿದ್ದರೆ, ನಾನು ಆಕೆಯೊಂದಿಗೆ ಯಾವುದೇ ಸಂಪರ್ಕ ಇಟ್ಟುಕೊಳ್ಳುತ್ತಿರಲಿಲ್ಲ’ ಎಂದು ಪ್ರಿಯಾಂಕಾ ಪೊಲೀಸರಿಗೆ ತಿಳಿಸಿದ್ದಾಳೆ. ಇದನ್ನೂ ಓದಿ: ಪಹಲ್ಗಾಮ್ ದಾಳಿಗೂ ಮುಂಚೆಯೇ ಪಾಕ್ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೆ – ತಪ್ಪೊಪ್ಪಿಕೊಂಡ ಜ್ಯೋತಿ ಮಲ್ಹೋತ್ರಾ

    ಪೊಲೀಸರು ಇಬ್ಬರು ಮಹಿಳೆಯರ ನಡುವಿನ ಸಂವಹನವನ್ನು ಸಹ ಪರಿಶೀಲಿಸುತ್ತಿದ್ದಾರೆ. ಪ್ರಿಯಾಂಕಾಳ ಎಲ್ಲಾ ಸಾಮಾಜಿಕ ಮಾಧ್ಯಮ ಖಾತೆಗಳನ್ನು ತನಿಖೆ ಮಾಡಲಾಗುತ್ತಿದೆ. ಆಕೆ ಕುಟುಂಬ ಕೂಡ ಕುಟುಂಬವು ಹಲವು ಸುತ್ತಿನ ವಿಚಾರಣೆಗಳನ್ನು ಎದುರಿಸಿದೆ. ಮಲ್ಹೋತ್ರಾ ಜೊತೆಗಿನ ಸಂಬಂಧ ಮತ್ತು ಇಬ್ಬರ ನಡುವೆ ಹಂಚಿಕೊಂಡ ವೈಯಕ್ತಿಕ ಅಥವಾ ಸ್ಥಳೀಯ ಗುಪ್ತಚರ ಮಾಹಿತಿಯ ಬಗ್ಗೆ ಪೊಲೀಸರು ವಿಚಾರಿಸಿದ್ದಾರೆ.

    ಪ್ರಿಯಾಂಕಾ ತಂದೆ ರಾಜ್‌ಕಿಶೋರ್ ಸೇನಾಪತಿ, ನನ್ನ ಮಗಳು ಸಾಮಾಜಿಕ ಮಾಧ್ಯಮದ ಮೂಲಕ ಮಲ್ಹೋತ್ರಾ ಅವರ ಸಂಪರ್ಕಕ್ಕೆ ಬಂದಳು. 2024 ರಲ್ಲಿ ಸುಮಾರು ಏಳೆಂಟು ತಿಂಗಳ ಹಿಂದೆ ಪುರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಸಹಾಯ ಮಾಡಿದ್ದಳು. ಪ್ರಿಯಾಂಕಾ ನಾಲ್ಕು ತಿಂಗಳ ಹಿಂದೆ ಪಾಕಿಸ್ತಾನದ ಕರ್ತಾರ್‌ಪುರಕ್ಕೆ ಭೇಟಿ ನೀಡಿದ್ದಳು. ‘ಪಾಕ್ ನೆಲದಲ್ಲಿ ಒಡಿಶಾ ಹುಡುಗಿ’ ಅಂತ ಶೀರ್ಷಿಕೆ ಕೊಟ್ಟು ವೀಡಿಯೋ ಮಾಡಿದ್ದಳು. ಅದರ ವೀಡಿಯೊವನ್ನು ಮಾರ್ಚ್ 25 ರಂದು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಳು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಕ್ಫ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ, ಅದು ದಾನಧರ್ಮವಲ್ಲದೆ ಬೇರೇನೂ ಅಲ್ಲ – ಸುಪ್ರೀಂ ಮುಂದೆ ಕೇಂದ್ರದ ವಾದ

  • ಪಾಕಿಸ್ತಾನದಲ್ಲಿ ನನ್ನನ್ನು ಮದುವೆಯಾಗು: ಪಾಕ್‌ ಅಧಿಕಾರಿ ಮುಂದೆ ಆಸೆ ವ್ಯಕ್ತಪಡಿಸಿದ್ದ ಜ್ಯೋತಿ

    ಪಾಕಿಸ್ತಾನದಲ್ಲಿ ನನ್ನನ್ನು ಮದುವೆಯಾಗು: ಪಾಕ್‌ ಅಧಿಕಾರಿ ಮುಂದೆ ಆಸೆ ವ್ಯಕ್ತಪಡಿಸಿದ್ದ ಜ್ಯೋತಿ

    ನವದೆಹಲಿ: ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ (Jyoti Malhotra) ಮತ್ತು ಪಾಕಿಸ್ತಾನಿ ಗುಪ್ತಚರ ಅಧಿಕಾರಿಯ ನಡುವಿನ ಸಂಭಾಷಣೆ ತನಿಖೆಯಿಂದ ಬೆಳಕಿಗೆ ಬಂದಿದೆ. ಪಾಕಿಸ್ತಾನದಲ್ಲಿ ನನ್ನನ್ನು ಮದುವೆಯಾಗಿ ಎಂದು ಪಾಕ್‌ ಅಧಿಕಾರಿಯನ್ನು ಜ್ಯೋತಿ ಕೇಳಿರುವುದು ಸಂಭಾಷಣೆಯಲ್ಲಿದೆ.

    ಚಾಟ್‌ವೊಂದರಲ್ಲಿ ಜ್ಯೋತಿ, ಹಸನ್‌ಗೆ ‘ನನ್ನನ್ನು ಪಾಕಿಸ್ತಾನದಲ್ಲಿ ಮದುವೆಯಾಗು’ ಎಂದು ತಮ್ಮ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಇದು ಇಸ್ಲಾಮಾಬಾದ್‌ನೊಂದಿಗಿನ ಅವರ ಭಾವನಾತ್ಮಕ ಸಂಬಂಧವನ್ನು ಸೂಚಿಸುತ್ತದೆ. ಇದನ್ನೂ ಓದಿ: ಪಹಲ್ಗಾಮ್ ದಾಳಿಗೂ ಮುಂಚೆಯೇ ಪಾಕ್ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೆ – ತಪ್ಪೊಪ್ಪಿಕೊಂಡ ಜ್ಯೋತಿ ಮಲ್ಹೋತ್ರಾ

    ವರದಿಗಳ ಪ್ರಕಾರ, ವಾಟ್ಸಾಪ್ ಚಾಟ್‌ಗಳು ಇಬ್ಬರ ನಡುವಿನ ಹಲವಾರು ಗುಪ್ತ ಸಂಭಾಷಣೆಗಳನ್ನು ಬಹಿರಂಗಪಡಿಸಿವೆ. ನಿರ್ದಿಷ್ಟವಾಗಿ ಭಾರತದ ರಹಸ್ಯ ಕಾರ್ಯಾಚರಣೆಗಳಿಗೆ ಸಂಬಂಧಿಸಿದ್ದಾಗಿವೆ.

    ತನಿಖೆಯ ಸಮಯದಲ್ಲಿ, ಪೊಲೀಸರು ಮಲ್ಹೋತ್ರಾ ಅವರಿಗೆ ಸೇರಿದ ನಾಲ್ಕು ಬ್ಯಾಂಕ್ ಖಾತೆಗಳ ಬಗ್ಗೆ ಮಾಹಿತಿಯನ್ನು ಕಂಡುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಒಂದು ಖಾತೆಯಲ್ಲಿ ದುಬೈನಿಂದ ಮಾಡಿದ ವಹಿವಾಟುಗಳು ಸಹ ಕಂಡುಬಂದಿವೆ. ಆಕೆಗೆ ಎಲ್ಲಿಂದ ಹಣ ಬರುತ್ತಿದೆ ಎಂಬುದನ್ನು ಕಂಡುಹಿಡಿಯಲು ಏಜೆನ್ಸಿಗಳು ಈಗ ಆಕೆಯ ಎಲ್ಲಾ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುತ್ತಿವೆ. ಇದನ್ನೂ ಓದಿ: 3 ದಿನಗಳಲ್ಲಿ 11 ಪಾಕ್ ಸ್ಪೈಗಳ ಬಂಧನ – ವ್ಲಾಗರ್, ವಿದ್ಯಾರ್ಥಿ, ಉದ್ಯಮಿ, ಗಾರ್ಡ್‌ಗಳಾಗಿದ್ದವರು ಬೇಹುಗಾರರಾಗಿ ಕೆಲಸ

    ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಮಲ್ಹೋತ್ರಾ, ಎರಡು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಅವರು ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನ ಅಧಿಕಾರಿ ರಹೀಮ್‌ನನ್ನು ಸಂಪರ್ಕಿಸಿದ್ದರು. ನಂತರ ರಹೀಮ್‌ ಈಕೆಯನ್ನು ಪಾಕಿಸ್ತಾನಿ ಗುಪ್ತಚರ ಅಧಿಕಾರಿಗಳಿಗೆ ಪರಿಚಯಿಸಿದ್ದ.

    ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿರುವ ಆರೋಪದ ಮೇಲೆ ಭಾರತದ ಪೊಲೀಸರು ಯೂಟ್ಯೂಬರ್ ವಿರುದ್ಧ ತನಿಖೆ ಮುಂದುವರಿಸಿದ್ದಾರೆ. ಹರಿಯಾಣದ ಹಿಸಾರ್‌ನಲ್ಲಿ ವಾಸಿಸುತ್ತಿದ್ದ ಮತ್ತು ‘ಟ್ರಾವೆಲ್ ವಿತ್ ಜೋ’ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ಮಲ್ಹೋತ್ರಾ ಅವರನ್ನು ಕಳೆದ ವಾರ ಬಂಧಿಸಲಾಯಿತು. ಪಾಕಿಸ್ತಾನದ ಗೂಢಚಾರ ಸಂಸ್ಥೆ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಗಾಗಿ ಕೆಲಸ ಮಾಡುತ್ತಿದ್ದ ಅಲಿ ಹಸನ್ ಜೊತೆ ಈಕೆ ನಿರಂತರ ಸಂಪರ್ಕದಲ್ಲಿದ್ದರು ಎಂದು ಮೂಲಗಳು ಸೂಚಿಸುತ್ತವೆ. ಇದನ್ನೂ ಓದಿ: ಪಾಕ್‌ಗೆ ಪುರಿ ಜಗನ್ನಾಥ ದೇವಾಲಯದ ಫೋಟೋ, ವಿಡಿಯೋ ಸೋರಿಕೆ ­- ಜ್ಯೋತಿ ಸಂಪರ್ಕದಲ್ಲಿದ್ದ ಮತ್ತೊಬ್ಬ ಯೂಟ್ಯೂಬರ್‌ಗೆ IB ಡ್ರಿಲ್‌

  • ಪಹಲ್ಗಾಮ್ ದಾಳಿಗೂ ಮುಂಚೆಯೇ ಪಾಕ್ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೆ – ತಪ್ಪೊಪ್ಪಿಕೊಂಡ ಜ್ಯೋತಿ ಮಲ್ಹೋತ್ರಾ

    ಪಹಲ್ಗಾಮ್ ದಾಳಿಗೂ ಮುಂಚೆಯೇ ಪಾಕ್ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೆ – ತಪ್ಪೊಪ್ಪಿಕೊಂಡ ಜ್ಯೋತಿ ಮಲ್ಹೋತ್ರಾ

    ನವದೆಹಲಿ: ಪಾಕ್ (Pakistan) ಪರ ಬೇಹುಗಾರಿಕೆ ಆರೋಪದ ಮೇಲೆ ಬಂಧಿಸಲಾಗಿದ್ದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ (Jyoti Malhotra), ಪಹಲ್ಗಾಮ್ ದಾಳಿಗೂ (Pahalgam Terrorist Attack) ಮುಂಚೆಯೇ ಪಾಕ್ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾಳೆ ಎಂದು ಮೂಲಗಳು ತಿಳಿಸಿವೆ.

    ಮೇ 17ರಂದು ಪಾಕಿಸ್ತಾನದ ಪರ ಬೇಹುಗಾರಿಕೆ ಮಾಡಿದ ಆರೋಪದ ಮೇಲೆ ಹರಿಯಾಣ ಮೂಲದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಸೇರಿ ಇಬ್ಬರನ್ನು ಎನ್‌ಐಎ (NIA) ಅಧಿಕಾರಿಗಳು ಬಂಧಿಸಿದ್ದರು. ಬಳಿಕ ತನಿಖೆ ಆರಂಭಿಸಿದ್ದ ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಪಾಕಿಸ್ತಾನಿ ಗುಪ್ತಚರ ಏಜೆಂಟ್‌ಗಳೊಂದಿಗೆ ಸಂಪರ್ಕ ಹೊಂದಿರುವುದಾಗಿ ಹಾಗೂ ಪಾಕಿಸ್ತಾನಿ ಹೈಕಮಿಷನ್ ಅಧಿಕಾರಿ ಡ್ಯಾನಿಶ್ ಅವರೊಂದಿಗೆ ನಿಯಮಿತ ಸಂಪರ್ಕದಲ್ಲಿದ್ದೆ ಎಂದು ಹೇಳಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.ಇದನ್ನೂ ಓದಿ: ‘ಕಿರಾತಕ’ನ ಗೆಟಪ್‌ನಲ್ಲಿ ಮೋಹನ್ ಲಾಲ್- ‘ಕಣ್ಣಪ್ಪ’ ಚಿತ್ರದ ಪೋಸ್ಟರ್ ಔಟ್

    ವರದಿಗಳ ಪ್ರಕಾರ, ವಿಚಾರಣೆ ವೇಳೆ ಜ್ಯೋತಿ, 2023ರಲ್ಲಿ ಪಾಕಿಸ್ತಾಕ್ಕೆ ತೆರಳಲು ವೀಸಾಕ್ಕಾಗಿ ದೆಹಲಿಯ ಪಾಕ್ ಹೈಕಮಿಷನ್‌ಗೆ ಭೇಟಿ ನೀಡಿದಾಗ ಮೊದಲು ಡ್ಯಾನಿಶ್ ಅಲಿಯಾಸ್ ಎಹ್ಸರ್ ದಾರ್ ಅವರನ್ನು ಸಂರ್ಪಕಿಸಿದ್ದೆ. ಬಳಿಕ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾಗ ಡ್ಯಾನಿಶ್ ಪರಿಚಯಸ್ಥ ಅಲಿ ಹಸನ್ ಅವರ ಪರಿಚಯವಾಗಿತ್ತು. ಅದಲ್ಲದೇ ಅಲಿ ಹಸನ್ ಅವರು ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳನ್ನು ಪರಿಚಯಿಸಿದ್ದರು. ಅದಾದ ನಂತರ 2023ರ ನವೆಂಬರ್‌ನಿಂದ 2025ರ ಮಾರ್ಚ್ರವರೆಗೆ ಡ್ಯಾನಿಶ್ ಜೊತೆ ಸಂಪರ್ಕದಲ್ಲಿದ್ದೆ ಎಂದು ಬಹಿರಂಗಪಡಿಸಿದ್ದಾಳೆ.

    ಪ್ರಾಥಮಿಕ ತನಿಖೆಯ ಪ್ರಕಾರ, ಟ್ರಾವೆಲ್ ವಿತ್ ಜೋ ಯೂಟ್ಯೂಬ್ ನಡೆಸುತ್ತಿದ್ದ ಜ್ಯೋತಿ ತನ್ನ ಯೂಟ್ಯೂಬ್ ಚಾನಲ್‌ನಲ್ಲಿ ಪಾಕಿಸ್ತಾನ ಪರ ಇರುವ ವಿಷಯಗಳನ್ನು ಅಪ್ಲೋಡ್ ಮಾಡುತ್ತಿದ್ದಳು. ಅಲ್ಲದೇ ವಾಟ್ಸಾಪ್, ಟೆಲಿಗ್ರಾಮ್ ಮತ್ತು ಸ್ನ್ಯಾಪ್‌ಚಾಟ್‌ನಂತಹ ಪ್ಲಾಟ್‌ಫಾರ್ಮ್ಗಳಲ್ಲಿ ಶಕೀರ್ ಅಲಿಯಾಸ್ ರಾಣಾ ಶಹಬಾಜ್ ಸೇರಿದಂತೆ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದಳು ಎಂದು ತಿಳಿದುಬಂದಿದೆ.ಇದನ್ನೂ ಓದಿ: Anekal | ಸೂಟ್‌ಕೇಸ್‌ನಲ್ಲಿ ಅಪರಿಚಿತ ಬಾಲಕಿ ಶವ ಪತ್ತೆ

     

  • 3 ದಿನಗಳಲ್ಲಿ 11 ಪಾಕ್ ಸ್ಪೈಗಳ ಬಂಧನ – ವ್ಲಾಗರ್, ವಿದ್ಯಾರ್ಥಿ, ಉದ್ಯಮಿ, ಗಾರ್ಡ್‌ಗಳಾಗಿದ್ದವರು ಬೇಹುಗಾರರಾಗಿ ಕೆಲಸ

    3 ದಿನಗಳಲ್ಲಿ 11 ಪಾಕ್ ಸ್ಪೈಗಳ ಬಂಧನ – ವ್ಲಾಗರ್, ವಿದ್ಯಾರ್ಥಿ, ಉದ್ಯಮಿ, ಗಾರ್ಡ್‌ಗಳಾಗಿದ್ದವರು ಬೇಹುಗಾರರಾಗಿ ಕೆಲಸ

    – ಪಹಲ್ಗಾಮ್‌ ದಾಳಿಯಲ್ಲಿ ಭದ್ರತಾ ಪಡೆಗಳದ್ದೇ ವೈಫಲ್ಯ ಅಂದಿದ್ದ ಜ್ಯೋತಿ ಮಲ್ಹೋತ್ರಾಳ ವಿಡಿಯೋ ಲಭ್ಯ

    ನವದೆಹಲಿ: ಭಾರತದಲ್ಲಿದ್ದುಕೊಂಡೇ ಪಾಕಿಸ್ತಾನದ ಕಿವಿಯಲ್ಲಿ ದೇಶದ ಗುಟ್ಟು ಪಿಸುಗುಡುತ್ತಿರುವ ಬೇಹುಗಾರರ (Pakistani Spy) ಬಂಧನ ಸಂಖ್ಯೆ 11ಕ್ಕೆ ಏರಿದೆ.

    ಎನ್‌ಐಎ, ಹರಿಯಾಣ, ಪಂಜಾಬ್ ಪೊಲೀಸರು (Punjab Police) ಒಟ್ಟು 8 ಜನರನ್ನು ಬಂಧಿಸಿದ್ರು.. ಈ ಬೆನ್ನಲ್ಲೇ ಪಾಕ್ ಪರ ಬೇಹುಗಾರಿಕೆ ಮಾಡುತ್ತಿದ್ದ ಮತ್ತೋರ್ವ ವ್ಯಕ್ತಿಯನ್ನ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ತಾನದ ಐಎಸ್‌ಐ ಪರ ಬೇಹುಗಾರಿಕೆ ನಡೆಸುತ್ತಿದ್ದ ಶೆಹಜಾದ್ ಎಂಬಾತನನ್ನು ಯುಪಿ ಪೊಲೀಸರು ಬಂಧಿಸಿದ್ದಾರೆ.

    ಈತ ಭಾರತದಲ್ಲಿರುವ ಪಾಕ್ ಏಜೆಂಟ್‌ಗಳಿಗೆ ಹಣ ರವಾನಿಸುತ್ತಿದ್ದ.. ಭಾರತದ ಸಿಮ್ ಕೊಡಿಸಲು ಸಹಕಾರ ನೀಡ್ತಿದ್ದ ಎನ್ನಲಾಗಿದೆ. ಇತ್ತ ಪಾಕಿಸ್ತಾನ ಹೈಕಮಿಷನ್‌ನ ಇಬ್ಬರು ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದ ತಾರೀಫ್ ಎಂಬಾತನನ್ನು ಹರಿಯಾಣದ ನುಹ್‌ನಲ್ಲಿ ಬಂಧಿಸಲಾಗಿದೆ. ಈತ ವಾಟ್ಸಪ್‌ ಮೂಲಕ ಭಾರತೀಯ ಮಿಲಿಟರಿ ಚಟುವಟಿಕೆಯ ಗೌಪ್ಯ ಮಾಹಿತಿಯನ್ನು ಪಾಕ್ ಹೈಕಮಿಷನ್ ಏಜೆಂಟ್‌ಗಳಿಗೆ ರವಾನಿಸುತ್ತಿದ್ದಿದ್ದು ಬಯಲಾಗಿದೆ.

    ಇನ್ನೂ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಇನ್‌ಸ್ಟಾಗ್ರಾಮ್‌ ಖಾತೆಯನ್ನ ನಿರ್ಬಂಧಿಸಲಾಗಿದೆ. ಈ ಬೆನ್ನಲ್ಲೇ ಆಕೆಯ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಪಹಲ್ಗಾಮ್ ದಾಳಿಯಲ್ಲಿ ನಮ್ಮ ಭದ್ರತಾ ವೈಫಲ್ಯ ಇದೆ… ನಮ್ಮ ಸರ್ಕಾರದ್ದೇ ತಪ್ಪು ಎಂದಿದ್ದ ಜ್ಯೋತಿ ವಿಡಿಯೋ ಸಹ ಸಿಕ್ಕಿದೆ. ಪಹಲ್ಗಾಮ್ ಉಗ್ರದಾಳಿಯಲ್ಲಿ ಪಾಕ್‌ನ ಇಬ್ಬರು ಸೇನಾ ಕಮಾಂಡರ್‌ಗಳು ಶಾಮೀಲಾಗಿದ್ದರು ಅಂತ ತಿಳಿದು ಬಂದಿದೆ.

    ಈ ಮಧ್ಯೆ, ಹೈದ್ರಾಬಾದ್‌ನಲ್ಲಿ ಬಾಂಬ್ ಬ್ಲಾಸ್ಟ್ ಮಾಡಲು ಸಂಚು ರೂಪಿಸಿದ್ದ ಇಬ್ಬರು ಭಯೋತ್ಪಾದಕರನ್ನು ತೆಲಂಗಾಣ, ಆಂಧ್ರಪ್ರದೇಶ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ, ವಿಜಯನಗರದ ಸಿರಾಜ್ ಮತ್ತು ಹೈದರಾಬಾದ್‌ನ ಸಮೀರ್ ಎಂಬವರನ್ನ ಬಂಧಿಸಿದ್ದಾರೆ.

  • ಪಾಕ್‌ಗೆ ಪುರಿ ಜಗನ್ನಾಥ ದೇವಾಲಯದ ಫೋಟೋ, ವಿಡಿಯೋ ಸೋರಿಕೆ ­- ಜ್ಯೋತಿ ಸಂಪರ್ಕದಲ್ಲಿದ್ದ ಮತ್ತೊಬ್ಬ ಯೂಟ್ಯೂಬರ್‌ಗೆ IB ಡ್ರಿಲ್‌

    ಪಾಕ್‌ಗೆ ಪುರಿ ಜಗನ್ನಾಥ ದೇವಾಲಯದ ಫೋಟೋ, ವಿಡಿಯೋ ಸೋರಿಕೆ ­- ಜ್ಯೋತಿ ಸಂಪರ್ಕದಲ್ಲಿದ್ದ ಮತ್ತೊಬ್ಬ ಯೂಟ್ಯೂಬರ್‌ಗೆ IB ಡ್ರಿಲ್‌

    ನವದೆಹಲಿ: ಭಾರತದ ಸೇನಾ ರಹಸ್ಯಗಳು, ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನಕ್ಕೆ (Pakistan) ಹಂಚಿಕೆ ಮಾಡಿದ ಆರೋಪದಡಿ ಬಂಧಿತಳಾಗಿರುವ ಹರಿಯಾಣ ಮೂಲದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಳ (Jyoti Malhotra) ಮತ್ತಷ್ಟು ದೇಶದ್ರೋಹ ಕೃತ್ಯ ಬಯಲಾಗ್ತಿದೆ.

    ಈ ನಡುವೆ ಪುರಿ ಮೂಲದ ಯೂಟ್ಯೂಬರ್ ಪ್ರಿಯಾಂಕಾ ಜೊತೆಗೂ ಜ್ಯೋತಿ ನಂಟಿದೆ ಎನ್ನುವ ರಹಸ್ಯ ಈಗ ಬೆಳಕಿಗೆ ಬಂದಿದೆ. ಒಡಿಶಾದ ಪ್ರಿಯಾಂಕಾ ಸೇನಾಪತಿ (Priyanka Senapati) ಜೊತೆ ಪುರಿ ದೇಗುಲದ ಸಮಗ್ರ ವಿಡಿಯೋ ಕೂಡ ಮಾಡಿದ್ದಾಳೆ. ಹೀಗಾಗಿ, ಗುಪ್ತ ಇಲಾಖೆ ಅಧಿಕಾರಿಗಳು ಪ್ರಿಯಾಂಕಾಳನ್ನೂ ವಿಚಾರಣೆ ನಡೆಸಿದ್ದಾರೆ ಅಂತ ತಿಳಿದು ಬಂದಿದೆ. ಇದನ್ನೂ ಓದಿ: ಪಾಕ್‌ ಹೈಕಮಿಷನ್‌ ಅಧಿಕಾರಿ ಜೊತೆ ಜ್ಯೋತಿ ಫೋಟೊ ರಿವೀಲ್ – ಪಾಕಿಸ್ತಾನಕ್ಕೆ ಬರ್ತೀನಿ ಎನ್ನುತ್ತಿದ್ದ ಯೂಟ್ಯೂಬರ್‌

    ಪುರಿ ಜಗನ್ನಾಥ ದೇವಾಲಯದ ಮಾಹಿತಿ ಸೋರಿಕೆ:
    ಮೂಲಗಳ ಪ್ರಕಾರ, ಜ್ಯೋತಿ ಮಲ್ಹೋತ್ರಾ 2024ರ ಸೆಪ್ಟೆಂಬರ್‌ನಲ್ಲಿ ಪುರಿಗೆ ಭೇಟಿ ನೀಡಿದ್ದಳು. ಈ ಸಮಯದಲ್ಲಿ ಜಗನ್ನಾಥ ದೇವಾಲಯ ಮತ್ತು ಅದರ ಸುತ್ತಲಿನ ಸರ್ಕಾರಿ ಆವರಣದ ಫೋಟೋ ಮತ್ತು ವಿಡಿಯೋಗಳನ್ನು ಸೆರೆಹಿಡಿದಿದ್ದಳು. ಜೊತೆಗೆ ಈ ಸ್ಥಳಗಳ ಮಾಹಿತಿ ಸಂಗ್ರಹಿಸಿ ಸೋಷಿಯಲ್‌ ಮೀಡಿಯಾಗಳ ಮೂಲಕ ಪಾಕಿಸ್ತಾನದ ಕಾರ್ಯಕರ್ತರಿಗೆ ಕಳುಹಿಸಿದ್ದಾಳೆ ಎಂದು ಗುಪ್ತಚರ ಸಂಸ್ಥೆ ಶಂಕಿಸಿದೆ. ಇದೇ ಸಂದರ್ಭದಲ್ಲಿ ಜ್ಯೋತಿ ಪ್ರಿಯಾಂಕಾ ಸೇನಾಪತಿಯನ್ನ ಭೇಟಿಯಾಗಿದ್ದಾಳೆ. ಆಗಿನಿಂದಲೂ ಪ್ರಿಯಾಂಕ ಜೊತೆಗೆ ಸಂಪರ್ಕ ಬೆಳೆದಿತ್ತು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಪಹಲ್ಗಾಮ್‌ಗೂ ಭೇಟಿ ನೀಡಿದ್ದಳು ಯೂಟ್ಯೂಬರ್‌ ಜ್ಯೋತಿ ಮಲ್ಹೋತ್ರಾ!

    ಇವರಿಬ್ಬರ ಪರಿಚಯ ಭಾರೀ ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿ ಅನುಮಾನಗೊಂಡ ಗುಪ್ತಚರ ಸಂಸ್ಥೆ ಹಾಗೂ ಪುರಿ ಪೊಲೀಸರು ಪ್ರಿಯಾಂಕಾ ಸೇನಾಪತಿಯ ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಬೀದಿಯಲ್ಲಿ ಬಿದ್ದಿದ್ದ ಮಗು ತಂದು ಸಾಕಿದ್ದ ತಾಯಿ – 13 ವರ್ಷಕ್ಕೆ ಅದೇ ಮಗಳಿಂದ ಹೋಯ್ತು ಜೀವ!

    ಪ್ರಿಯಾಂಕಾ ಸ್ಪಷ್ಟನೆ ಏನು?
    ಪೊಲೀಸರ ವಿಚಾರಣೆ ಎದುರಿಸಿದ ಬಳಿಕ ಸೋಷಿಯಲ್‌ ಮೀಡಿಯಾ ಲೈವ್‌ನಲ್ಲಿ ಪ್ರಿಯಾಂಕಾ ಸ್ಪಷ್ಟನೆ ನೀಡಿದ್ದಾರೆ. ಜ್ಯೋತಿ ನನ್ನ ಸ್ನೇಹಿತೆ ಅಷ್ಟೇ, ಹೊರತಾಗಿ ಅವಳ ಯಾವುದೇ ಕೃತ್ಯಗಳ ಬಗ್ಗೆ ನನಗೆ ತಿಳಿದಿರಲಿಲ್ಲ. ಶತ್ರು ದೇಶಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದಾಳೆಂಬುದು ಗೊತ್ತದ್ದರೆ, ಮಾತೇ ಆಡುತ್ತಿರಲಿಲ್ಲ. ಅವಳ ಬಗ್ಗೆ ಕೇಳಿ ನಾನೇ ಆಘಾತಕ್ಕೊಳಗಾಗಿದ್ದೇನೆ. ಪೊಲೀಸರಿಗೆ ನಾನು ಎಲ್ಲ ರೀತಿಯಲ್ಲೂ ತನಿಖೆಗೆ ಸಹಕರಿಸಲು ಸಿದ್ಧಳಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

    ಜ್ಯೋತಿ ಬಂಧನ ಮತ್ತು ಪ್ರಿಯಾಂಕಾ ವಿಚಾರಣೆ ಬೆನ್ನಲ್ಲೇ, ಗುಪ್ತಚರ ಸಂಸ್ಥೆಗಳು ಪುರಿ ದೇವಾಲಯದ ಆವರಣದಲ್ಲಿ ಅನುಮಾನಾಸ್ಪದ ಜನರ ಓಡಾಟದ ಬಗ್ಗೆ ನಿಗಾ ವಹಿಸಿವೆ. ಇದನ್ನೂ ಓದಿ: ಕಾಲೇಜಿನ ನಾಲ್ಕನೇ ಮಹಡಿಯಿಂದ ಬಿದ್ದು ಏರೋಸ್ಪೇಸ್ ಎಂಜಿನಿಯರ್ ಸಾವು

  • ಪಾಕ್‌ ಹೈಕಮಿಷನ್‌ ಅಧಿಕಾರಿ ಜೊತೆ ಜ್ಯೋತಿ ಫೋಟೊ ರಿವೀಲ್ – ಪಾಕಿಸ್ತಾನಕ್ಕೆ ಬರ್ತೀನಿ ಎನ್ನುತ್ತಿದ್ದ ಯೂಟ್ಯೂಬರ್‌

    ಪಾಕ್‌ ಹೈಕಮಿಷನ್‌ ಅಧಿಕಾರಿ ಜೊತೆ ಜ್ಯೋತಿ ಫೋಟೊ ರಿವೀಲ್ – ಪಾಕಿಸ್ತಾನಕ್ಕೆ ಬರ್ತೀನಿ ಎನ್ನುತ್ತಿದ್ದ ಯೂಟ್ಯೂಬರ್‌

    – ಭಾರತೀಯ ಸೇನೆಯ ಮಾಹಿತಿ ಸೋರಿಕೆ ಮಾಡಿ ದೇಶದಿಂದ ಹೊರಹಾಕಲ್ಪಟ್ಟ ಅಧಿಕಾರಿ ಜೊತೆ ನಂಟು

    ನವದೆಹಲಿ: ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ್ದಕ್ಕಾಗಿ ಬಂಧನಕ್ಕೊಳಗಾಗಿರುವ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ (Jyoti Malhotra), ಕಳೆದ ವರ್ಷ ನವದೆಹಲಿಯ ಪಾಕಿಸ್ತಾನ ಹೈಕಮಿಷನ್‌ನಲ್ಲಿ (Pakistan High Commission) ಇಫ್ತಾರ್ ಔತಣಕೂಟದಲ್ಲಿ ಭಾಗವಹಿಸಿದ್ದ ವಿಚಾರ ಬೆಳಕಿಗೆ ಬಂದಿದೆ.

    ಇಫ್ತಾರ್‌ ಕೂಟದಲ್ಲಿನ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾಡಿದ್ದ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಪಾಕಿಸ್ತಾನಕ್ಕೆ ಭೇಟಿ ನೀಡುವ ಆಸಕ್ತಿಯನ್ನು ಪದೇ ಪದೇ ವ್ಯಕ್ತಪಡಿಸಿದ್ದಾರೆ. ತಾನು ಭೇಟಿಯಾದ ಬಹುತೇಕ ಎಲ್ಲರನ್ನೂ ಪಾಕ್‌ ವೀಸಾ ಪಡೆಯಲು ಸಹಾಯ ಮಾಡುವಂತೆ ಕೇಳಿದ್ದರೆಂಬ ವಿಚಾರವೂ ತಿಳಿದುಬಂದಿದೆ. ಇದನ್ನೂ ಓದಿ: ಪಹಲ್ಗಾಮ್‌ಗೂ ಭೇಟಿ ನೀಡಿದ್ದಳು ಯೂಟ್ಯೂಬರ್‌ ಜ್ಯೋತಿ ಮಲ್ಹೋತ್ರಾ!

    ‘ಟ್ರಾವೆಲ್ ವಿತ್ ಜೋ’ ಎಂಬ ಪ್ರಯಾಣ ಯೂಟ್ಯೂಬ್ ಖಾತೆಯನ್ನು ಹೊಂದಿರುವ 33 ವರ್ಷದ ಜ್ಯೋತಿ, ಪಾಕಿಸ್ತಾನದ ಹೈಕಮಿಷನ್ ಅಧಿಕಾರಿ ಎಹ್ಸಾನ್-ಉರ್-ರಹೀಮ್ ಅಲಿಯಾಸ್ ಡ್ಯಾನಿಶ್‌ನನ್ನು ಭೇಟಿಯಾಗಿರುವ ವೀಡಿಯೊ ಕೂಡ ಇದೆ.

    ಬೇಹುಗಾರಿಕೆ ಮತ್ತು ಭಾರತೀಯ ಸೇನೆಯ ಚಲನವಲನಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿದ್ದಕ್ಕಾಗಿ ಡ್ಯಾನಿಶ್‌ನನ್ನು 24 ಗಂಟೆಗಳ ಒಳಗೆ ಭಾರತವನ್ನು ತೊರೆಯುವಂತೆ ಸೂಚಿಸಲಾಗಿತ್ತು. ಮಲ್ಹೋತ್ರಾ, ರಹೀಮ್ ಪತ್ನಿಯನ್ನು ಸಹ ಭೇಟಿಯಾಗಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ಪರ ಬೇಹುಗಾರಿಕೆ – ಭಾರತದ ಯೂಟ್ಯೂಬರ್ ಬಂಧನ

    ಕಳೆದ ವರ್ಷ ಮಾರ್ಚ್ 30 ರಂದು ಪೋಸ್ಟ್ ಮಾಡಲಾದ ಈ ವೀಡಿಯೊ, ಮಲ್ಹೋತ್ರಾ ತನ್ನನ್ನು ಇಫ್ತಾರ್ ಕೂಟಕ್ಕೆ ಆಹ್ವಾನಿಸಲಾಗಿದೆ ಎಂದು ಹೇಳುವ ಮೂಲಕ ಪ್ರಾರಂಭವಾಗುತ್ತದೆ. ನಂತರ ಹೈಕಮಿಷನ್‌ಗೆ ಪ್ರವೇಶಿಸಿ, ಅಲಂಕಾರವನ್ನು “ಅದ್ಭುತ” ಎಂದು ಬಣ್ಣಿಸುತ್ತಾರೆ.

  • ಪಹಲ್ಗಾಮ್‌ಗೂ ಭೇಟಿ ನೀಡಿದ್ದಳು ಯೂಟ್ಯೂಬರ್‌ ಜ್ಯೋತಿ ಮಲ್ಹೋತ್ರಾ!

    ಪಹಲ್ಗಾಮ್‌ಗೂ ಭೇಟಿ ನೀಡಿದ್ದಳು ಯೂಟ್ಯೂಬರ್‌ ಜ್ಯೋತಿ ಮಲ್ಹೋತ್ರಾ!

    ನವದೆಹಲಿ: ಪಾಕಿಸ್ತಾನ (Pakistan) ಗುಪ್ತಚರ ಅಧಿಕಾರಿಗಳಿಗೆ ಭಾರತದ ಸೇನಾ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ಆರೋಪದಲ್ಲಿ ಬಂಧನಕ್ಕೆ ಒಳಗಾದ ಹರ್ಯಾಣದ ಯೂಟ್ಯೂಬರ್‌ ಜ್ಯೋತಿ ಮಲ್ಹೋತ್ರಾ (Jyoti Malhotra) ಕಾಶ್ಮೀರದ ಪಹಲ್ಗಾಮ್‌ಗೂ (Pahalgam) ತೆರಳಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

    ಜ್ಯೋತಿ ಇನ್‌ಸ್ಟಾದಲ್ಲಿ ಜನವರಿ ತಿಂಗಳಿನಲ್ಲಿ ಪಹಲ್ಗಾಮ್‌ಗೆ ತೆರಳಿದ್ದ ವಿಡಿಯೋ ಅಪ್ಲೋಡ್‌ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಜ್ಯೋತಿ ವಿಡಿಯೋಗಳು ಈಗ ವೈರಲ್‌ ಆಗಿದೆ.

    ಸರ್ಕಾರಿ ರಹಸ್ಯ ಕಾಯ್ದೆ ಮತ್ತು ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮೇ 16ರಂದು ಎಫ್‌ಐಆರ್‌ ದಾಖಲಾಗಿದೆ. ನ್ಯಾಯಾಲಯ 5 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿದೆ. ನೆಟ್ಟಿಗರು ಈಕೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: Operation Sindoor – 1 ಬ್ರಹ್ಮೋಸ್‌ ಕ್ಷಿಪಣಿಯ ದರ ಎಷ್ಟು? ಸ್ಪೀಡ್‌ ಎಷ್ಟಿರುತ್ತೆ?

    ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ ಕಚೇರಿಯ ಸಿಬ್ಬಂದಿ ಎಹ್ಸಾನ್‌ ಉರ್‌ ರಹೀಮ್‌ ಅಲಿಯಾಸ್‌ ಡ್ಯಾನಿಷ್‌ ಜೊತೆ ಜ್ಯೋತಿ ಸಂಪರ್ಕ ಹೊಂದಿದ್ದಳು. ಭಾರತದ ಕುರಿತು ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಡ್ಯಾನಿಷ್‌ನನ್ನು ಕೇಂದ್ರ ಸರ್ಕಾರವು ಇದೇ ಮೇ 13ರಂದು ಗಡೀಪಾರು ಮಾಡಿತ್ತು.

    2023ರಲ್ಲಿ ಪಾಕ್‌ಗೆ ಹೋಗಿದ್ದ ಜ್ಯೋತಿ ಪಾಕ್ ಡ್ಯಾನಿಶ್ ಜೊತೆ ನಿಕಟ ಸಂಬಂಧ ಬೆಳೆಸಿದ್ದಳು. ಅಲ್ಲದೇ ಪಾಕ್ ಗುಪ್ತಚರ ಏಜೆಂಟ್‌ಗಳೊಂದಿಗೆ ಸಹ ಸಂಪರ್ಕ ಹೊಂದಿದ್ದಳು. ‘ಟ್ರಾವೆಲ್ ವಿತ್ ಜೋ’ ಯೂಟ್ಯೂಬ್ ನಡೆಸುತ್ತಿದ್ದ ಜ್ಯೋತಿ ತನ್ನ ಯೂಟ್ಯೂಬ್‌ ಚಾನಲ್‌ನಲ್ಲಿ ಪಾಕಿಸ್ತಾನ ಪರ ಇರುವ ವಿಷಯಗಳನ್ನು ಅಪ್ಲೋಡ್‌ ಮಾಡುತ್ತಿದ್ದಳು. ಅಲ್ಲದೇ ವಾಟ್ಸಾಪ್, ಟೆಲಿಗ್ರಾಮ್ ಮತ್ತು ಸ್ನ್ಯಾಪ್‌ಚಾಟ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಶಕೀರ್ ಅಲಿಯಾಸ್ ರಾಣಾ ಶಹಬಾಜ್ ಸೇರಿದಂತೆ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದ ವಿಚಾರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: ಪಾಕ್ ವಿರುದ್ಧ ವಿದೇಶಗಳಿಗೆ ಸರ್ವಪಕ್ಷ ನಿಯೋಗ – ಯಾವ ದೇಶಕ್ಕೆ ಯಾರು ಹೋಗ್ತಾರೆ?