Tag: Jwala Gutta

  • ಆ್ಯನಿವರ್ಸರಿ ದಿನವೇ ಹೆಣ್ಣು ಮಗುವನ್ನು ಬರಮಾಡಿಕೊಂಡ ನಟ ವಿಷ್ಣು ವಿಶಾಲ್‌, ಜ್ವಾಲಾ ಗುಟ್ಟಾ ದಂಪತಿ

    ಆ್ಯನಿವರ್ಸರಿ ದಿನವೇ ಹೆಣ್ಣು ಮಗುವನ್ನು ಬರಮಾಡಿಕೊಂಡ ನಟ ವಿಷ್ಣು ವಿಶಾಲ್‌, ಜ್ವಾಲಾ ಗುಟ್ಟಾ ದಂಪತಿ

    ‘ಲಾಲ್ ಸಲಾಮ್’ ನಟ ವಿಷ್ಣು ವಿಶಾಲ್ (Vishnu Vishal) ಪತ್ನಿ ಜ್ವಾಲಾ ಗುಟ್ಟಾ (Jwala Gutta) ಆ್ಯನಿವರ್ಸರಿ ದಿನವೇ ಹೆಣ್ಣು ಮಗುವಿಗೆ (Baby Girl) ಜನ್ಮ ನೀಡಿದ್ದಾರೆ. ಮದುವೆ ವಾರ್ಷಿಕೋತ್ಸವದ ದಿನವೇ ಮುದ್ದು ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದಾರೆ. ಇದನ್ನೂ ಓದಿ:‘ದೂರ ತೀರ ಯಾನ’ ಚಿತ್ರದ ಮೊದಲ ಪ್ರೇಮಗೀತೆಗೆ ಅಭಿಮಾನಿಗಳ ಮೆಚ್ಚುಗೆಯ ಸುರಿಮಳೆ

    ನಮಗೆ ಹೆಣ್ಣು ಮಗು ಜನಿಸಿದೆ. ನನ್ನ ಮಗ ಆರ್ಯನ್ ಈಗ ಅಣ್ಣ ಆಗಿದ್ದಾನೆ. ಇಂದು ನಮ್ಮ 4ನೇ ವಾರ್ಷಿಕೋತ್ಸವದ ಸಂಭ್ರಮ. ಇದೇ ದಿನ ನಾವು ದೇವರಿಂದ ಈ ಉಡುಗೊರೆಯನ್ನು ಸ್ವಾಗತಿಸುತ್ತಿದ್ದೇವೆ. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದ ನಮಗೆ ಬೇಕು ಎಂದು ನಟ ವಿಷ್ಣು ವಿಶಾಲ್ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಪೋಷಕರಾದ ಸಂಭ್ರಮದಲ್ಲಿರುವ ಈ ಜೋಡಿಗೆ ಫ್ಯಾನ್ಸ್‌ಗೆ ವಿಶ್ ಮಾಡುತ್ತಿದ್ದಾರೆ. ಇದನ್ನೂ ಓದಿ:ನಗದಿನ ಮೂಲಕ ಸಂಭಾವನೆ – ಮಹೇಶ್‌ ಬಾಬುಗೆ ಇಡಿ ನೋಟಿಸ್‌

     

    View this post on Instagram

     

    A post shared by Vishnu Vishal (@thevishnuvishal)

    ಅಂದಹಾಗೆ, ನಟ ಕೆ. ನಟರಾಜ್ ಪುತ್ರಿ ರಂಜನಿ ನಟರಾಜ್ ಅವರನ್ನು ಪ್ರೀತಿಸಿ 2010ರಲ್ಲಿ ವಿಷ್ಣು ಮದುವೆಯಾದರು. ಇವರ ದಾಂಪತ್ಯಕ್ಕೆ ಮಗ ಆರ್ಯನ್ ಸಾಕ್ಷಿಯಾಗಿದ್ದಾರೆ. 2018ರಲ್ಲಿ ಕೆಲ ಮನಸ್ತಾಪಗಳಿಂದ ಈ ಜೋಡಿ ಡಿವೋರ್ಸ್ ಪಡೆದರು. ಬಳಿಕ 2022ರಲ್ಲಿ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಜೊತೆ ವಿಷ್ಣು ಹೈದರಾಬಾದ್‌ನಲ್ಲಿ ಮದುವೆಯಾದರು. ಇದೀಗ ಮನೆಗೆ ಮಹಾಲಕ್ಷ್ಮಿ ಆಗಮಿಸಿದ ಖುಷಿಯಲ್ಲಿ ವಿಷ್ಣು ಕುಟುಂಬ.

  • ಗಂಡನ ಬೆತ್ತಲೆ ಫೋಟೋ ಶೂಟ್ ಮಾಡಿದ ಖ್ಯಾತ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ

    ಗಂಡನ ಬೆತ್ತಲೆ ಫೋಟೋ ಶೂಟ್ ಮಾಡಿದ ಖ್ಯಾತ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ

    ಬಾಲಿವುಡ್ ನಟ ರಣವೀರ್ ಸಿಂಗ್ ಬೆತ್ತಲೆ ಫೋಟೋ ವೈರಲ್ ಆಗುತ್ತಿದ್ದಂತೆಯೇ ಹಲವು ನಟರು ಕೂಡ ಅದೇ ದಾರಿಯಲ್ಲಿ ಸಾಗುತ್ತಿದ್ದಾರೆ. ಮೊನ್ನೆಯಷ್ಟೇ ಹಿಂದಿಯ ಕಿರುತೆರೆ ನಟನೊಬ್ಬ ಬೆತ್ತಲೆ ಫೋಟೋ ಶೂಟ್ ಮಾಡಿಸಿಕೊಂಡಿದ್ದ, ನಂತರ ರಣವೀರ್ ಗೆ ಚಾಲೇಂಜ್ ಅನ್ನುವಂತೆ ನಟಿ ಉರ್ಫಿ ಜಾವೇದ್ ಕೂಡ ಅದೇ ದಾರಿ ಹಿಡಿದಿದ್ದರು. ಇದೀಗ ತಮಿಳು ನಟ ವಿಷ್ಣು ವಿಶಾಲ್ ಕೂಡ ಬೆತ್ತಲೆಯಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೋ ಸೆರೆ ಹಿಡಿದಿರುವುದು ಭಾರತೀಯ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಎನ್ನುವುದು ವಿಶೇಷ.

    ಭಾರತೀಯ ಖ್ಯಾತ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಮತ್ತು ತಮಿಳಿನ ಖ್ಯಾತ ನಟ ವಿಷ್ಣು ವಿಶಾಲ್ 2021ರಲ್ಲಿ ಮದುವೆಯಾದವರು. ಅದಕ್ಕೂ ಮುನ್ನ ಬ್ಯಾಡ್ಮಿಂಟನ್ ಆಟಗಾರ ಚೇತನ್ ಆನಂದ್ ಜೊತೆ ಮದುವೆಯಾಗಿದ್ದರು. ಈ ಇಬ್ಬರೂ ಡಿವೋರ್ಸ್ ಪಡೆದುಕೊಂಡ ನಂತರ ವಿಷ್ಣು ವಿಶಾಲ್ ಜೊತೆ ಜ್ವಾಲಾ ಮದುವೆಯಾಗಿದ್ದಾರೆ. ಇದೀಗ ಗಂಡನ ಬೆತ್ತಲೆ ಫೋಟೋವನ್ನು ತಗೆಯುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ ಜ್ವಾಲಾ.

    ಬೆತ್ತಲೆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಷ್ಣು ವಿಶಾಲ್, ಈ ಫೋಟೋವನ್ನು ಸೆರೆ ಹಿಡಿದಿರುವುದು ತಮ್ಮ ಪತ್ನಿ ಜ್ವಾಲಾ ಗುಟ್ಟಾ ಎನ್ನುವುದನ್ನು ಅವರೇ ಬಹಿರಂಗ ಪಡಿಸಿದ್ದಾರೆ. ಈ ಫೋಟೋಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಹೆಸರಾಂತ ತಾರೆಯರು ಯಾಕೆ ಹೀಗೆ ಹುಚ್ಚಾಟ ಮಾಡುತ್ತಾರಾ ಎಂದು ಕೆಲವರು ಪ್ರಶ್ನಿಸಿದ್ದಾರೆ. ಇದರಿಂದ ಆಗುವ ಲಾಭ ಏನು ಎಂದು ಕೆಲವರು ಕಾಮೆಂಟ್ ಕೂಡ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಟ ವಿಷ್ಣು ವಿಶಾಲ್‍ರೊಂದಿಗೆ ಜ್ವಾಲಾ ಗುಟ್ಟಾ ಎಂಗೇಜ್ಮೆಂಟ್

    ನಟ ವಿಷ್ಣು ವಿಶಾಲ್‍ರೊಂದಿಗೆ ಜ್ವಾಲಾ ಗುಟ್ಟಾ ಎಂಗೇಜ್ಮೆಂಟ್

    ಹೈದರಾಬಾದ್: ಖ್ಯಾತ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ತಮಿಳು ನಟ ವಿಷ್ಣು ವಿಶಾಲ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ಇಂದು 37ನೇ ವಸಂತಕ್ಕೆ ಕಾಲಿಟ್ಟ ಜ್ವಾಲಾ ಗುಟ್ಟಾ ಅವರಿಗೆ ಅಚ್ಚರಿಯ ಬಹುಮಾನ ನೀಡಿರುವ ನಟ ವಿಷ್ಣು ವಿಶಾಲ್, ಎಂಗೇಜ್ಮೆಂಟ್ ರಿಂಗ್ ಮುಂದಿಟ್ಟು ಸಪ್ರ್ರೈಸ್ ನೀಡಿದ್ದರು. 2010ರ ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ ಜ್ವಾಲಾ ಗುಟ್ಟಾ ಅವರೊಂದಿಗೆ ನಿಶ್ಚಿತಾರ್ಥ ಆಗಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.

    ಈ ಕುರಿತು ತನ್ನ ಇನ್‍ಸ್ಟಾದಲ್ಲಿ ಬರೆದುಕೊಂಡಿರುವ ನಟ ವಿಷ್ಣು, ಜನ್ಮ ದಿನದ ಶುಭಾಶಯಗಳು ಜ್ವಾಲಾ ಗುಟ್ಟಾ, ಹೊಸ ಜೀವನ ಆರಂಭವಾಗಿದೆ. ನಮ್ಮ ಕುಟುಂಬ, ಅರ್ಯನ್ ಹಾಗೂ ನಮ್ಮ ಸುತ್ತಲಿನ ಜನರಿಗಾಗಿ ಹೊಸ ಸ್ಫೂರ್ತಿಯೊಂದಿಗೆ ಸಕಾರಾತ್ಮಕವಾಗಿ ಉತ್ತಮ ಭವಿಷ್ಯಕ್ಕಾಗಿ ಕೆಲಸ ಮಾಡೋಣ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಬೇಕಿದೆ. ನಡುರಾತ್ರಿಯಲ್ಲಿ ಉಂಗುರವನ್ನು ಏರ್ಪರಿಸಿದ್ದಕ್ಕಾಗಿ ಜೈನ್ ಬಶಂತ್ ಧನ್ಯವಾದ ಎಂದು ವಿಷ್ಣು ಪೋಸ್ಟ್ ಮಾಡಿದ್ದಾರೆ.

    ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಹೈದರಾಬಾದ್‍ನಲ್ಲೇ ಉಳಿದಿದ್ದ ಜಾಲ್ವಾ ಗುಟ್ಟಾ ಗೆಳೆಯನೊಂದಿಗೆ ದೂರವಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಈ ಕುರಿತು ಟ್ವೀಟ್ ಮಾಡಿದ್ದ ಜ್ವಾಲಾ, ಮಿಸ್ ಯೂ ಎಂದು ಬರೆದುಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ವಿಷ್ಣು, ಈ ಸಮಯದಲ್ಲಿ ಸಾಮಾಜಿಕ ಅಂತರದ ಅಗತ್ಯವಿದೆ ಎಂದಿದ್ದರು.

    ಜ್ವಾಲಾ ಗುಟ್ಟಾ ಹಾಗೂ ವಿಷ್ಣು ನಡುವಿನ ಪ್ರೇಮದ ಬಗ್ಗೆ ಈ ಹಿಂದೆಯೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆದಿತ್ತು. ಇಬ್ಬರ ಸಾಕಷ್ಟು ಫೋಟೋಗಳು ವೈರಲ್ ಆಗಿತ್ತು. ಅಲ್ಲದೇ ಜ್ವಾಲಾ ಗುಟ್ಟಾ ಪ್ರಿಯಕರಿನಿಗೆ ಕಿಸ್ ಮಾಡುತ್ತಿದ್ದ ಫೋಟೋ ಭಾರೀ ಚರ್ಚೆಗೆ ಕಾರಣವಾಗಿತ್ತು. ಉಳಿದಂತೆ ನಟ ವಿಷ್ಣು ವಿಶಾಲ್ ಕಳೆದ ವರ್ಷದ ಜೂನ್‍ನಲ್ಲಿ ತನ್ನ ಪತ್ನಿ ರಜನಿ ಅವರಿಂದ ದೂರವಾಗಿದ್ದರು. ಇವರಿಗೆ ನಾಲ್ಕು ವರ್ಷದ ಪುತ್ರನಿದ್ದಾನೆ. ಇತ್ತ ಜ್ವಾಲಾ ಗುಟ್ಟಾ ಕೂಡ ಪ್ರೀತಿಸಿ ಮದುವೆಯಾಗಿದ್ದ ಬ್ಯಾಡ್ಮಿಟನ್ ಆಟಗಾರ ಚೇತನ್ ಆನಂದ್ ಅವರಿಂದ ದೂರವಾಗಿದ್ದರು. ಅದಕ್ಕೂ ಮುನ್ನ ಜ್ವಾಲಾ ಅವರ ಹೆಸರು ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರೊಂದಿಗೆ ಸುತ್ತಾಡುತ್ತಿದ್ದಾರೆ ಎಂಬ ಸುದ್ದಿಯಾಗಿತ್ತು, ಆದರೆ ಇದನ್ನು ಇಬ್ಬರು ನಿರಾಕರಿಸಿದ್ದರು. ಸದ್ಯ ಜ್ವಾಲಾ, ವಿಷ್ಣು ಎಂಗೇಜ್ಮೆಂಟ್ ಮಾಡಿಕೊಂಡಿದ್ದು, ಶೀಘ್ರವೇ ಮದುವೆ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.