Tag: Juvenile

  • 1988ರ ರೇಪ್ ಕೇಸ್‌ಗೆ ಶಿಕ್ಷೆ ಪ್ರಕಟಿಸಿದ ಸುಪ್ರೀಂ – 53 ವರ್ಷದ ವ್ಯಕ್ತಿ ಈಗ ಬಾಲಾಪರಾಧಿ

    1988ರ ರೇಪ್ ಕೇಸ್‌ಗೆ ಶಿಕ್ಷೆ ಪ್ರಕಟಿಸಿದ ಸುಪ್ರೀಂ – 53 ವರ್ಷದ ವ್ಯಕ್ತಿ ಈಗ ಬಾಲಾಪರಾಧಿ

    ಜೈಪುರ: 37 ವರ್ಷದ ಹಿಂದೆ 11 ವರ್ಷದ ಬಾಲಕಿ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ (Supreme Court) ಇಂದು (ಜು.24) ಶಿಕ್ಷೆ ಪ್ರಕಟಿಸಿದೆ.

    1988ರ ನವೆಂಬರ್‌ನಲ್ಲಿ ರಾಜಸ್ಥಾನದ ಅಜ್ಮೀರ್ ಜಿಲ್ಲೆಯಲ್ಲಿ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು. ಈ ಪ್ರಕರಣ ಸಂಬಂಧ ಭಾರತದ ಮುಖ್ಯ ನ್ಯಾ.ಬಿ.ಆರ್. ಗವಾಯಿ ಮತ್ತು ನ್ಯಾ.ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠವು ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದೆ. ತೀರ್ಪಿನಲ್ಲಿ 53 ವರ್ಷದ ವ್ಯಕ್ತಿಯನ್ನು ಬಾಲಾಪರಾಧಿ ಎಂದು ಘೋಷಿಸಿದೆ.

    ಈ ಕುರಿತು ವಾದ ಮಂಡಿಸಿದ ಆರೋಪಿಯ ಪರ ವಕೀಲರು, 37 ವರ್ಷದ ಹಿಂದೆ ಅತ್ಯಾಚಾರ ನಡೆದಾಗ ವ್ಯಕ್ತಿಯು ಅಪ್ರಾಪ್ತನಾಗಿದ್ದ. ರಾಜಸ್ಥಾನ ಹೈಕೋರ್ಟ್ ಆರೋಪಿಯನ್ನು ಸೆಕ್ಷನ್ 342, ಸೆಕ್ಷನ್ 376 ಅಡಿಯಲ್ಲಿ ಅಪರಾಧಿಯೆಂದು ಘೋಷಿಸಿ, ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿತ್ತು ಎಂದು ತಿಳಿಸಿದ್ದಾರೆ.

    ಬಳಿಕ ಕೋರ್ಟ್, ಅತ್ಯಾಚಾರ ಎಸಗಿದ್ದಾಗ ಅಪ್ರಾಪ್ತನಾಗಿದ್ದ ಅಂಶವನ್ನು ಪರಿಗಣಿಸಿ, ಬಾಲ ನ್ಯಾಯ ಮಂಡಳಿಯು ವ್ಯಕ್ತಿಯನ್ನು ಗರಿಷ್ಠ ಮೂರು ವರ್ಷಗಳ ಕಾಲ ವಿಶೇಷ ಗೃಹಕ್ಕೆ ಕಳುಹಿಸಬಹುದು ಎಂದು ತಿಳಿಸಿದೆ.

  • ಮಿದುಳು ಜ್ವರದಿಂದ ಬಳಲುತ್ತಿದ್ದ ಬಾಲಕ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಶಿಫ್ಟ್

    ಮಿದುಳು ಜ್ವರದಿಂದ ಬಳಲುತ್ತಿದ್ದ ಬಾಲಕ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಶಿಫ್ಟ್

    ಬೆಳಗಾವಿ: ಮಿದುಳು ಜ್ವರದಿಂದ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಬಾಲಕನನ್ನು ಬೆಳಗಾವಿಯ ಯಶ್ ಆಸ್ಪತ್ರೆಗೆ ಕರೆತರಲಾಗಿದೆ.

    ಪಬ್ಲಿಕ್ ಟಿವಿಯ ಕಳಕಳಿಯ ಸುದ್ದಿಗೆ ಸ್ಪಂದಿಸಿರುವ ಬೆಳಗಾವಿ ಫೇಸ್‍ಬುಕ್ ಫ್ರೆಂಡ್ಸ್ ಸರ್ಕಲ್ ತಂಡದವರು ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯ ವೆಚ್ಚವನ್ನು ಭರಿಸಿದ್ದಾರೆ. ಈಗಾಗಲೇ ಬಾಲಕನನ್ನು ನಗರದ ಯಶ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅಂಬರಡಾ ಗ್ರಾಮದ ಶೈಲೇಶ್(8)ಗೆ ಮಿದುಳು ಜ್ವರ ಬಂದು ಕೋಮಾದಲ್ಲಿದ್ದನು. ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದನು. ಇತ್ತ ಮಗನನ್ನು ಉಳಿಸಿಕೊಳ್ಳಲು ತಂದೆ-ತಾಯಿ ಆಸ್ಪತ್ರೆಗಳಿಗೆ ಅಲೆದಾಡಿ ಕೊನೆಗೆ ದೇವರ ಮೊರೆ ಹೋಗಿದ್ದರು. ಈ ಕುರಿತು ಪಬ್ಲಿಕ್ ಟಿವಿ ಇಂದು ಬೆಳಗ್ಗೆ ಮಾನವೀಯ ಸುದ್ದಿಯನ್ನು ಪ್ರಕಟಿಸಿತ್ತು. ಇದನ್ನೂ ಓದಿ: ನನ್ನ ಮಗನನ್ನು ಉಳಿಸು ದೇವರೇ – ಶಿಲುಬೆ ಮುಂದೆ ಕಂದನನ್ನು ಮಲಗಿಸಿದ ದಂಪತಿ 

    ಪಬ್ಲಿಕ್ ಟಿವಿ ಸುದ್ದಿಯನ್ನು ಗಮನಿಸಿದ ಫೇಸ್‍ಬುಕ್ ಫ್ರೆಂಡ್ ಸರ್ಕಲ್ ಯುವಕರು ಕೋಮಾದಲ್ಲಿದ್ದ ಬಾಲಕನನ್ನು ಖಾನಾಪೂರ ತಾಲೂಕಿನ ನಂದಗಡ ಗ್ರಾಮದಿಂದ ಬೆಳಗಾವಿಯ ಯಶ್ ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ಕರೆದುಕೊಂಡು ಬಂದಿದ್ದಾರೆ. ಸದ್ಯ ಯಶ್ ಆಸ್ಪತ್ರೆಯಲ್ಲಿ ಶೈಲೇಶ್ ಆರೋಗ್ಯವನ್ನ ವೈದ್ಯರು ತಪಾಸಣೆ ಮಾಡುತ್ತಿದ್ದಾರೆ.

    ಯಶ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಎಸ್.ಕೆ.ಪಾಟೀಲ್ ಅವರಿಂದ ಚಿಕಿತ್ಸೆ ಪ್ರಾರಂಭಿಸಲಾಗಿದೆ. ಬಾಲಕನನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಆಸ್ಪತ್ರೆಗೆ ಬೆಳಗಾವಿ ಡಿಎಚ್‍ಓ ಅವರು ಭೇಟಿ ನೀಡಿ ಮಗುವಿನ ಆರೋಗ್ಯವನ್ನ ಪರಿಶೀಲನೆ ನಡೆಸಿದ್ದಾರೆ. ಮಗವಿನ ಚಿಕಿತ್ಸೆಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ಕೊಟ್ಟಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ ಮುಂದಿನ 4 ದಿನ ಭಾರೀ ಮಳೆ – 18 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ 

    ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಕೂಡ ಮಗುವಿನ ಆರೋಗ್ಯ ತಪಾಸಣೆಗೆ ಬೇಕಾದ ಅಗತ್ಯ ಖರ್ಚುವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದಾರೆ.

    Live Tv

  • ಲಿಫ್ಟ್ ನೀಡುವ ನೆಪದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ – ಕೆಲವೇ ಗಂಟೆಗಳಲ್ಲಿ ಆರೋಪಿ ಅರೆಸ್ಟ್

    ನವದೆಹಲಿ: ಶನಿವಾರ ತಡರಾತ್ರಿಯಲ್ಲಿ ಲಿಫ್ಟ್ ನೀಡುವ ನೆಪದಲ್ಲಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ವ್ಯಕ್ತಿಯನ್ನು ದೆಹಲಿಯ ದ್ವಾರಕಾ ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ.

    ಶನಿವಾರ ತಡರಾತ್ರಿ, ದ್ವಾರಕಾ ಸೆಕ್ಟರ್ 23 ರಿಂದ ಪೊಲೀಸರಿಗೆ ಪಿಸಿಆರ್ ಕರೆ ಬಂದಿತ್ತು. ಕರೆ ಮಾಡಿದ ವ್ಯಕ್ತಿಯೊಬ್ಬರು ಹುಡುಗಿ ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಳು. ನಂತರ ಕರೆಯನ್ನು ಮಹಿಳಾ ಪೊಲೀಸ್ ಅಧಿಕಾರಿ ಬೀನಾಗೆ ವರ್ಗಾಯಿಸಲಾಯಿತು. ಅವರು ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿದ್ದಾರೆ. ಲಿಫ್ಟ್ ನೀಡುವ ನೆಪದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಇದನ್ನೂ ಓದಿ: ಸಿನಿಮೀಯ ರೀತಿ ದರೋಡೆಕೋರನನ್ನೇ ಹಿಡಿದ ಮನೆಯವರು

    ಆರೋಪಿಯು ಹಸಿರು ಬಣ್ಣದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಹೊಂದಿದ್ದಾನೆ ಎಂದು ಬಾಲಕಿ ಆರೋಪಿಸಿದ್ದಾಳೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಕರೆ ಸ್ವೀಕರಿಸಿದ ಸಬ್ ಇನ್ಸ್‌ಪೆಕ್ಟರ್ ಬಾಲು ರಾಮ್, ಕರೆ ಮಾಡಿದ ವ್ಯಕ್ತಿ ಲೈಂಗಿಕ ದೌರ್ಜನ್ಯದ ಬಗ್ಗೆ ಮಾಹಿತಿ ನೀಡಿದ ತಕ್ಷಣವೇ ನಮ್ಮ ತಂಡ ಸ್ಥಳಕ್ಕೆ ಧಾವಿಸಿದೆ. ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಇದನ್ನೂ ಓದಿ: ಅಗೌರವ ತೋರಿದ ಅಧಿಕಾರಿಗಳಿಗೆ ನಡುರಸ್ತೆಯಲ್ಲೇ ತರಾಟೆ ತೆಗೆದುಕೊಂಡ ಮೇಯರ್ 

    ಪೊಲೀಸ್ ತಂಡವು ದೂರುದಾರರು ಲಿಫ್ಟ್ ತೆಗೆದುಕೊಂಡ ಸ್ಥಳದ ಬಳಿ ಅಳವಡಿಸಲಾದ ವಿವಿಧ ಕ್ಯಾಮೆರಾಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದರು. ಇತರ ರಸ್ತೆಗಳಲ್ಲಿ ಅಳವಡಿಸಲಾಗಿರುವ ಕ್ಯಾಮೆರಾಗಳನ್ನು ಸಹ ಪರಿಶೀಲಿಸಿದ್ದಾರೆ. ಈ ವೇಳೆ ಕೆಲವೇ ಗಂಟೆಗಳಲ್ಲಿ ಪೊಲೀಸರು ಹಸಿರು ಬಣ್ಣದ ಸ್ಕೂಟಿಯನ್ನು ಗುರುತಿಸಿದ ಕ್ಲಿಪ್ ಅನ್ನು ಕಂಡುಹಿಡಿದರು. ಅದರಲ್ಲಿ ದೂರುದಾರರು ಆರೋಪಿಯ ಹಿಂದೆಯೇ ನಿಂತಿದ್ದರು.

    ಪೊಲೀಸರು ವಿವಿಧ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿ ಕೆಲವೇ ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು, ಆತನ ಬಳಿಯಿದ್ದ ಹಸಿರು ಬಣ್ಣದ ಸ್ಕೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ.

  • ಬಾಲಕನ ಕಣ್ಣಿಗೆ ಮೊಳೆ ಹೊಡೆದು ವಿಚಿತ್ರವಾಗಿ ಸಾಯಿಸಿದ ಕ್ರೂರಿಗಳು!

    ಬಾಲಕನ ಕಣ್ಣಿಗೆ ಮೊಳೆ ಹೊಡೆದು ವಿಚಿತ್ರವಾಗಿ ಸಾಯಿಸಿದ ಕ್ರೂರಿಗಳು!

    ಲಕ್ನೋ: ಕಾನ್ಪುರದ ನರ್ವಾಲ್ ಪ್ರದೇಶದ ಜಮೀನಿನಲ್ಲಿ 10 ವರ್ಷದ ಬಾಲಕನ ದೇಹ ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತ ದೇಹವನ್ನು ಕಾನ್ಪುರ ಪೊಲೀಸರು ಮಂಗಳವಾರ ವಶಪಡಿಸಿಕೊಂಡಿದ್ದಾರೆ.

    ಕಾನ್ಪುರ ನರ್ವಾಲ್ ಜಿಲ್ಲೆಯ ಬೆಹ್ತಾ ಗ್ರಾಮದ ನಿವಾಸಿಯಾಗಿರುವ ಬಾಲಕ ಸೋಮವಾರದಿಂದ ನಾಪತ್ತೆಯಾಗಿದ್ದನು. ಅದಕ್ಕೆ ಪೋಷಕರು ಬಾಲಕನನ್ನು ಪತ್ತೆ ಮಾಡಿ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದರು. ಪ್ರಕರಣದ ತನಿಖೆ ಪ್ರಾರಂಭಿಸಿದ ಪೊಲೀಸರಿಗೆ ಬಾಲಕನ ದೇಹ ಸಿಕ್ಕಿದ್ದು, ಚಿತ್ರಹಿಂಸೆ ಕೊಟ್ಟು ಸಾಯಿಸಿರುವುದು ಪತ್ತೆಯಾಗಿದೆ. ಇದನ್ನೂ ಓದಿ: ಬೆಳಗಾವಿಯ ಮೂವರು ಯುವತಿಯರು ನಾಪತ್ತೆ!

    Mutilated body of a 12-year-old boy found in UP's Kasganj village, one of three accused arrested- Edexlive

    ಘಟನೆ ವಿವರ:
    ಪೊಲೀಸರು ಬಾಲಕ ಶವವನ್ನು ಪತ್ತೆ ಮಾಡಿದಾಗ ಆತನ ಶವವೂ ವಿರೂಪಗೊಂಡ ಸ್ಥಿತಿಯಲ್ಲಿ ಸಿಕ್ಕಿದೆ. ಪರಿಣಾಮ ಪೊಲೀಸರು ಬಾಲಕನ ಶವದ ಬಗ್ಗೆ ವಿವರಿಸಿದ್ದು, ಬಾಲಕನ ಕಣ್ಣಿಗೆ ಮೊಳೆ ಹೊಡೆದಂತೆ ತೋರುತ್ತಿದ್ದು, ಆತನ ಮುಖವನ್ನು ಸಿಗರೇಟ್‍ನಿಂದ ಸುಡಲಾಗಿದೆ ಎಂದು ವಿಧಿವಿಜ್ಞಾನ ತಜ್ಞರು ಹೇಳಿದ್ದಾರೆ. ದೇಹದ ಕುತ್ತಿಗೆ ಮೇಲೆ ಆಗಿರುವ ಕಲೆಗಳನ್ನು ನೋಡಿದರೆ ಬಾಲಕನನ್ನು ಕೊಲೆ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತೆ. ಅಲ್ಲದೆ ಬಾಲಕನನ್ನು ಉಸಿರುಗಟ್ಟಿಸಿ ಸಾಯಿಸಲಾಗಿದೆ. ಪ್ರಸ್ತುತ ಬಾಲಕನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

    ಮರಣೋತ್ತರ ಪರೀಕ್ಷೆ ವರದಿಯಿಂದ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಸಿಒ ಸದರ್ ರಿಷಿಕೇಶ್ ಯಾದವ್ ಹೇಳಿದ್ದಾರೆ. ಪ್ರಸ್ತುತ ಕೆಲವು ಶಂಕಿತರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಕಾನ್ಪುರ ಹೊರಾಂಗಣ ಎಸ್‍ಪಿ ಅಜಿತ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ. ಇದನ್ನೂ ಓದಿ: ಧರ್ಮನಿಂದನೆ ಆರೋಪ – ಹಿಂದೂ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಪಾಕ್!

  • 86 ವರ್ಷದ ವೃದ್ಧನಿಗೆ 6 ಕೋಟಿ ಪಂಗನಾಮ ಹಾಕಿದ ಅಪ್ರಾಪ್ತ

    86 ವರ್ಷದ ವೃದ್ಧನಿಗೆ 6 ಕೋಟಿ ಪಂಗನಾಮ ಹಾಕಿದ ಅಪ್ರಾಪ್ತ

    – ಶಾಲೆ ಬಿಟ್ಟ 17 ವರ್ಷದವನಿಂದ ಕೃತ್ಯ
    – 35 ಬ್ಯಾಂಕ್ ಖಾತೆ ತೆರೆದಿದ್ದ ಗ್ಯಾಂಗ್
    – ವಿಮಾ ಕಂಪನಿ ಏಜೆಂಟ್‍ನಂತೆ ವರ್ತಿಸಿ ವಂಚನೆ

    ನವದೆಹಲಿ: 86 ವರ್ಷದ ವೃದ್ಧನಿಗೆ ಶಾಲೆ ಬಿಟ್ಟ 17 ವರ್ಷದ ಹುಡುಗನೊಬ್ಬ ಬರೋಬ್ಬರಿ 6 ಕೋಟಿ ರೂ.ಗಳನ್ನು ವಂಚಿಸಿರುವ ಆಘಾತಕಾರಿ ಘಟನೆ ನಡೆದಿದೆ.

    ದೆಹಲಿಯ ಆರ್ಥಿಕ ಅಪರಾಧಗಳ ವಿಭಾಗ(ಇಒಡಬ್ಲ್ಯು)ದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 17 ವರ್ಷದ ಶಾಲೆ ತೊರೆದ ಹುಡುಗನನ್ನು ಬಂಧಿಸಿದ್ದಾರೆ. ವಿಮಾ ಕಂಪನಿ ಏಜೆಂಟ್ ಎಂದು ಹೇಳಿಕೊಂಡು 86 ವರ್ಷದ ವೃದ್ಧನಿಗೆ ಬರೋಬ್ಬರಿ 6 ಕೋಟಿ ರೂ.ಗಳನ್ನು ವಂಚಿಸಿದ್ದಾನೆ.

    ಆರೋಪಿ ವೃದ್ಧನ ಬ್ಯಾಂಕ್ ಖಾತೆಯಿಂದ ತಾನು ನಕಲಿ ದಾಖಲೆಗಳನ್ನು ನೀಡಿ ತೆರೆದ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನಿಡಿದ್ದಾರೆ.

    ಅಪ್ರಾಪ್ತ ಹಾಗೂ ಆತನ ಸಹಚರರು ನಕಲಿ ದಾಖಲೆಗಳನ್ನು ಸೃಷ್ಟಿಸಿ ವಿಮಾ ಸಂಸ್ತೆಯನ್ನೇ ಸೆಟ್ ಮಾಡಿದ್ದಾರೆ. ವಿಮಾ ಹಣವನ್ನು ಕೊಡೊಸಲು ಸಹಾಯ ಮಾಡುವ ನೆಪದಲ್ಲಿ ವೃದ್ಧನನ್ನು ಸಂಪರ್ಕಿಸಿದ್ದು, ನಂತರ ವೃದ್ಧನಿಂದ ಬ್ಯಾಂಕ್ ಖಾತೆಯ ವಿವರಗಳನ್ನು ಪಡೆಯುವ ಕುರಿತು ಮನವೊಲಿಸಿದ್ದಾನೆ. ಈತನನ್ನು ನಂಬಿದ ವೃದ್ಧ ಆರೋಪಿ ಖಾತೆಗೆ ಹಣವನ್ನು ವರ್ಗಾಯಿಸಿದ್ದಾನೆ.

    ಆರೋಪಿಯು ಪ್ರಕರಣದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವಾಗಲೇ ಗ್ಯಾಂಗ್‍ನ ಇತರ ಸದಸ್ಯರನ್ನು ಇತ್ತೀಚೆಗೆ ಬಂಧಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಆರ್ಥಿಕ ಅಪರಾಧಗಳ ವಿಭಾಗ ಈ ಕುರಿತು ಟ್ವೀಟ್ ಮಾಡಿದ್ದು, ಅಪ್ರಾಪ್ತನಾಗಿದ್ದರೂ ವಯಸ್ಕ ಎಂದು ಹೇಳಿಕೊಂಡು ಬಾಲಾಪರಾಧಿ ಬ್ಯಾಂಕ್ ಖಾತೆ ತೆರೆದಿದ್ದ. ಈ ಟೆಲಿಫೋನಿಕ್ ವಿಮಾ ವಂಚನೆ ದಂಧೆಯನ್ನು ಇಒಡಬ್ಲ್ಯು ಹಾಗೂ ದೆಹಲಿ ಪೊಲೀಸರು ಬೇಧಿಸಿದ್ದು, ಹಿರಿಯ ನಾಗರಿಕನಿಗೆ 6 ಕೋಟಿ ರೂ. ಮೋಸ ಮಾಡಿದ ತಂಡವನ್ನು ಪತ್ತೆ ಹಚ್ಚಲಾಗಿದೆ. ಈ ತಂಡವು ಖಾಸಗಿ ವಿಮಾ ಕಂಪನಿಗಳಿಗೆ ಕಾಲ್ ಸೆಂಟರ್ ನಡೆಸುತ್ತಿದೆ ಎಂದು ಟ್ವೀಟ್‍ನಲ್ಲಿ ತಿಳಿಸಲಾಗಿದೆ.


    ಇಒಡಬ್ಲ್ಯುನ ಪೊಲೀಸ್ ಜಂಟಿ ಆಯುಕ್ತ ಒ.ಪಿ.ಮಿಶ್ರಾ ಅವರು ಈ ಕುರಿತು ಮಾಹಿತಿ ನೀಡಿದ್ದು, ಕೇಂದ್ರ ದೆಹಲಿಯ ನಿವಾಸಿ ಅಪ್ರಾಪ್ತ ರಿತ್ವಿಕ್ ಬನ್ಸಾಲ್ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದಿದ್ದ. ಸಂತ್ರಸ್ತ ವೃದ್ಧನ ಖಾತೆಯಿಂದ ತನ್ನ ಖಾತೆಗೆ ಹಣ ವರ್ಗಾವಣೆಯಾಗುತ್ತಿದ್ದಂತೆ ಎಟಿಎಂ ಮೂಲಕ ಹಣ ಬಿಡುಗಡೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

    ಈ ಗ್ಯಾಂಗ್‍ನ ಸದಸ್ಯರು ಬರೋಬ್ಬರಿ 35 ಬ್ಯಾಂಕ್ ಖಾತೆಗಳನ್ನು ತೆರೆದಿದ್ದರು. ಈ ಗ್ಯಾಂಗ್‍ನಲ್ಲಿ ಇನ್ನೂ ಹೆಚ್ಚಿನ ಜನರಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

  • ರಿಮ್ಯಾಂಡ್ ಹೋಮ್‍ನಲ್ಲಿ ನೇಣಿಗೆ ಶರಣಾದ ಬಾಲಾಪರಾಧಿ!

    ರಿಮ್ಯಾಂಡ್ ಹೋಮ್‍ನಲ್ಲಿ ನೇಣಿಗೆ ಶರಣಾದ ಬಾಲಾಪರಾಧಿ!

    ಧಾರವಾಡ: ರಿಮ್ಯಾಂಡ್ ಹೋಮ್‍ನಲ್ಲಿದ್ದ ಬಾಲಾಪರಾಧಿಯೋರ್ವ ಅಲ್ಲಿನ ಅಧಿಕಾರಿಗಳ ನೀಡುತ್ತಿದ್ದ ಕಿರುಕುಳ ತಾಳಲಾರದೇ ನೇಣಿಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.

    ಇರ್ಫಾನ್(17) ಎಂಬ ಬಾಲಾಪರಾಧಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅತ್ಯಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿಗೆ ಸಹಕಾರಿಸಿದ್ದಾನೆ ಎಂದು ಇರ್ಫಾನ್‍ನನ್ನು ನಗರದ ಹಿಂದಿ ಪ್ರಚಾರ ಸಭಾ ಬಳಿ ಇರುವ ರಿಮ್ಯಾಂಡ್ ಹೋಮ್ ನಲ್ಲಿ ಇರಿಸಲಾಗಿತ್ತು. ಆದರೆ ಅಲ್ಲಿನ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತ ಇರ್ಫಾನ್ ಶುಕ್ರವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ನಿನ್ನೆ ಈ ಘಟನೆ ನಡೆದಿದ್ದರೂ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿಲ್ಲ. ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಕೂಡಾ ನಡೆದಿದೆ. ಮಗನಿಗೆ ಇಬ್ಬರು ಅಧಿಕಾರಿಗಳು ಕಿರುಕುಳ ಕೊಟ್ಟಿದ್ದಾರೆ ಎಂದು ಬಾಲಾಪರಾಧಿಯ ತಾಯಿ ಆರೋಪಿಸಿದ್ದಾರೆ.

    ಮಗನ ಸಾವಿಗೆ ತಾಯಿ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಗಂಭೀರ ಆರೋಪ ಮಾಡಿದ ಬಳಿಕ ಸದ್ಯ ಉಪನಗರ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಸಹೋದರನ ಜೊತೆ ಅತ್ತಿಗೆಯನ್ನು ಕೊಂದ ಅಪ್ರಾಪ್ತ ನಾದಿನಿ ಅರೆಸ್ಟ್: ಈಗ ಪೊಲೀಸರ ವಿರುದ್ಧ ದೂರು

    ಸಹೋದರನ ಜೊತೆ ಅತ್ತಿಗೆಯನ್ನು ಕೊಂದ ಅಪ್ರಾಪ್ತ ನಾದಿನಿ ಅರೆಸ್ಟ್: ಈಗ ಪೊಲೀಸರ ವಿರುದ್ಧ ದೂರು

    ಲಕ್ನೋ: ಸಹೋದರನ ಜೊತೆ ಸೇರಿಕೊಂಡು ಅತ್ತಿಗೆಯನ್ನು ಕೊಲೆ ಮಾಡಿರುವ ಆರೋಪದಲ್ಲಿ ಸಹೋದರಿಯನ್ನು ಉತ್ತರಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಆದರೆ ಈಗ ಈ ಪ್ರಕರಣದಲ್ಲಿ ಪೊಲೀಸರ ವಿರುದ್ಧವೇ ದೂರು ದಾಖಲಾಗಿದೆ.

    ಬಂಧನಕ್ಕೆ ಒಳಗಾದವಳು ಈಗ ಅಪ್ರಾಪ್ತೆ ಹೌದೋ ಅಲ್ಲವೋ ಎನ್ನುವ ಬಗ್ಗೆ ವಿವಾದ ಎದ್ದಿದ್ದು ಪೊಲೀಸರು ಆಕೆ ಅಪ್ರಾಪ್ತೆಯಲ್ಲ ಎಂದು ಹೇಳಿದರೆ, ಆರ್‍ಟಿಐ ಕಾರ್ಯಕರ್ತರೊಬ್ಬರು ಆಕೆ ಅಪ್ರಾಪ್ತೆ ಎಂದು ಹೇಳಿ ಪೊಲೀಸರ ವಿರುದ್ಧವೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.

    ಏನಿದು ಪ್ರಕರಣ?
    ವರದಕ್ಷಿಣೆ ಕಿರುಕುಳ ನೀಡಿ ಮಗಳನ್ನು ಬೆಂಕಿ ಹಚ್ಚಿ ಹತ್ಯೆ ಮಾಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಪೋಷಕರು ಪತಿ ಮತ್ತು ಆತನ ಸಹೋದರಿಯ ವಿರುದ್ಧ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಬಂಧಿಸಿದ ಬಳಿಕ ಪತಿಯ ಸಹೋದರಿಯನ್ನು ಪೊಲೀಸರು 12 ದಿನಗಳ ಕಾಲ ತಮ್ಮ ವಶದಲ್ಲಿ ಇಟ್ಟುಕೊಂಡು ಸೋಮವಾರ ಕೋರ್ಟ್ ಗೆ ಹಾಜರು ಪಡಿಸಿ ಜೈಲಿಗೆ ಅಟ್ಟಿದ್ದಾರೆ.

    ವಿವಾದ ಆಗಿದ್ದು ಯಾಕೆ?
    ಅಪ್ರಾಪ್ತ ವಯಸ್ಸಿನವರು ಅಪರಾಧಗಳನ್ನು ಎಸಗಿದರೆ ಅವರನ್ನು ಪೊಲೀಸರು 24 ಗಂಟೆಗಿಂತ ಹೆಚ್ಚು ಹೊತ್ತು ಲಾಕಪ್ ನಲ್ಲಿ ಇರಿಸುವಂತಿಲ್ಲ. ಬಾಲನ್ಯಾಯ ಕಾಯ್ದೆಯ ಪ್ರಕಾರ ಅಪ್ರಾಪ್ತರನ್ನು ಬಂಧಿಸಿ ಅವರನ್ನು ಬಾಲಾಪರಾಧಿ ಪುನರ್ ವಸತಿ ಕೇಂದ್ರಕ್ಕೆ ಕಳುಹಿಸಬೇಕು. ಅದರಲ್ಲೂ ಬಾಲಕಿ ಆಗಿದ್ದರೆ, ಆಕೆಯನ್ನು ನಾರಿ ನಿಕೇತನ್ ಕೇಂದ್ರಕ್ಕೆ ಕಳುಹಿಸಬೇಕು. ಆದರೆ ಪೊಲೀಸರು ಅಪ್ರಾಪ್ತೆಯನ್ನು ತಮ್ಮ ವಶದಲ್ಲಿ 12 ದಿನಗಳ ಕಾಲ ಇಟ್ಟುಕೊಂಡು ಈಗ ಜೈಲಿಗೆ ಕಳುಹಿಸಿದ್ದಾರೆ ಎಂದು ಆರ್‍ಟಿಐ ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ.

    ಬಂಧನಕ್ಕೆ ಒಳಗಾದ ಬಾಲಕಿಗೆ 15 ವರ್ಷವಾಗಿದ್ದು ಆಕೆಯನ್ನು ಪೊಲೀಸರು ತಮ್ಮ ವಶದಲ್ಲಿ ಇಟ್ಟುಕೊಂಡಿರುವುದು ಬಾಲನ್ಯಾಯ ಕಾಯ್ದೆಯ ಪ್ರಕಾರ ಅಪರಾಧ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಕೀಲ ಮತ್ತು ಆರ್‍ಟಿಐ ಕಾರ್ಯಕರ್ತ ಪ್ರತೀಕ್ ಚೌಧರಿ ಎಂಬವರು ಕೇಂದ್ರ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.

    ಪೊಲೀಸರು ಹೇಳೋದು ಏನು?
    ಆಕೆಗೆ 15 ವರ್ಷವಲ್ಲ, ಪ್ರಾಪ್ತ ವಯಸ್ಸಾಗಿದ್ದು ನಾವು ಯಾವುದೇ ಲೋಪ ಎಸಗಿಲ್ಲ. ಪ್ರಾಪ್ತಳಾಗಿರುವ ಕಾರಣ ಆಕೆಯನ್ನು ನಾವು ಜೈಲಿಗೆ ಕಳುಹಿಸಿದ್ದೇವೆ. ಒಂದು ವೇಳೆ ಆಕೆ ಅಪ್ರಾಪ್ತಳು ಎಂದು ಕೋರ್ಟ್ ನಲ್ಲಿ ಸಾಬೀತಾದರೆ ಆಕೆ ಕಾನೂನಿನ ಲಾಭವನ್ನು ಪಡೆದುಕೊಳ್ಳುತ್ತಾಳೆ ಎಂದು ಗಂಗೇರಿ ಪೊಲೀಸ್ ಠಾಣೆಯ ಸ್ಟೇಷನ್ ಅಧಿಕಾರಿ ರಾಮ್ ವಲ್ಲಭ ಶರ್ಮಾ ಹೇಳಿದ್ದಾರೆ.

    ಬೆಳಕಿಗೆ ಬಂದಿದ್ದು ಹೇಗೆ?
    ಭಾನುವಾರ ಸಂಜೆ ಠಾಣೆಯಲ್ಲಿ ಆಕೆ ಅಳುತ್ತಾ ಕುಳಿತ್ತಿದ್ದನ್ನು ಕೆಲ ಮಾಧ್ಯಮ ಪ್ರತಿನಿಧಿಗಳು ಗಮನಕ್ಕೆ ಬಂದ ಬಳಿಕ ಆಕೆ ಅಪ್ರಾಪ್ತಳು ಎನ್ನುವ ವಿಚಾರ ಬಳಕಿಗೆ ಬಂದಿದೆ. ಈ ವಿಚಾರ ಸುದ್ದಿಯಾಗುತ್ತಿದ್ದಂತೆ ಸ್ಮಾರ್ಟ್ ವಿಲೇಜ್ ಫೌಂಡೇಶನ್ ಹೆಸರಿನ ಸಂಘಟನೆಯೊಂದು ಆಕೆಯ ಸಹಾಯಕ್ಕೆ ಬಂದಿದ್ದು ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ದೂರು ನೀಡಿದೆ.

  • ನಿರ್ಭಯಾ ಪ್ರಕರಣದ ಬಾಲಾಪರಾಧಿ ಈಗ ಎಲ್ಲಿದ್ದಾನೆ, ಏನು ಮಾಡ್ತಿದ್ದಾನೆ? ಈ ಸುದ್ದಿ ಓದಿ

    ನಿರ್ಭಯಾ ಪ್ರಕರಣದ ಬಾಲಾಪರಾಧಿ ಈಗ ಎಲ್ಲಿದ್ದಾನೆ, ಏನು ಮಾಡ್ತಿದ್ದಾನೆ? ಈ ಸುದ್ದಿ ಓದಿ

    ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ 2012ರ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಸುಪ್ರೀಂ ಕೋರ್ಟ್ ಶುಕ್ರವಾರದಂದು ತೀರ್ಪು ಪ್ರಕಟಿಸಿದೆ. ಆದ್ರೆ ದೇಶದಾದ್ಯಂತ ಆಕ್ರೋಶ ಭುಗಿಲೇಳಲು ಕಾರಣವಾಗಿದ್ದ ಈ ಪ್ರಕರಣದಲ್ಲಿ ಮತ್ತೊಬ್ಬ ಬಾಲಾಪರಾಧಿ ಭಾಗಿಯಾಗಿದ್ದ. ಯುವತಿಯ ಕರುಳನ್ನೇ ಕಿತ್ತುಹಾಕಿದ್ದ ಎಂದು ಈತನ ಮೇಲೆ ಆರೋಪವಿತ್ತು. ಮೂರು ವರ್ಷಗಳ ಕಾಲ ಬಾಲಮಂದಿರದಲ್ಲಿ ಕಳೆದ ಈಗ ನಂತರ ಡಿಸೆಂಬರ್ 2015ರಲ್ಲಿ ಬಿಡುಗಡೆಯಾಗಿದ್ದು ಈಗ ಈತನನ್ನು ಸರ್ಕಾರೇತರ ಸಂಸ್ಥೆಯೊಂದು ನೋಡಿಕೊಳ್ಳುತ್ತಿದೆ.

    ಆಗ ಬಾಲಾಪರಾಧಿಯಾಗಿದ್ದವನಿಗೆ ಈಗ 23 ವರ್ಷ ವಯಸ್ಸು. ಸಣ್ಣ ಹೋಟೆಲ್‍ವೊಂದರಲ್ಲಿ ಆತ ಈಗ ಅಡುಗೆ ಮಾಡುವ ಕೆಲಸಕ್ಕೆ ಸೇರಿದ್ದಾನೆಂದು ಎನ್‍ಜಿಓದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೆಹಲಿಯಲ್ಲಿ ಬಾಲಾಪರಾಧಿಗಳ ವೀಕ್ಷಣಾಲಯದಲ್ಲಿದ್ದಾಗ ಈತ ಅಡುಗೆ ಮಾಡುವುದನ್ನು ಕಲಿತಿದ್ದ ಎನ್ನಲಾಗಿದೆ.

    ಇದನ್ನೂ ಓದಿ: ನಿರ್ಭಯಾ ಗ್ಯಾಂಗ್‍ರೇಪ್: ಅಪರಾಧಿಗಳಿಗೆ ಗಲ್ಲು ಕಾಯಂ

    ಆತ ಈಗ ಹೊಸ ಜೀವನ ನಡೆಸುತ್ತಿದ್ದಾನೆ. ಆತನ ಹೆಸರೂ ಕೂಡ ಈಗ ಬದಲಾಗಿದೆ ಎಂದು ಎನ್‍ಜಿಓ ಅಧಿಕಾರಿ ಹೇಳಿದ್ದಾರೆ.

    ಇಡೀ ದೇಶವನ್ನೇ ಸ್ತಬ್ಧವಾಗಿಸಿ, ಯುವಕ ಯುವತಿಯರು ರಸ್ತೆಗಿಳಿದು ಪ್ರತಿಭಟನೆ ಮಾಡುವಂತೆ ಮಾಡಿದ್ದ ಈ ಪ್ರಕರಣದಲ್ಲಿ ಅತ್ಯಂತ ಕ್ರೂರವಾಗಿ ವರ್ತಸಿದವನು ಎಂದೇ ಆರೋಪಿಸಲಾಗಿದ್ದ ಬಾಲಾಪರಾಧಿಗೆ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅಂದ್ರೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಯಾವುದೇ ಮಾಹಿತಿ ಇಲ್ಲವಂತೆ.

    ಆತ ಹೊಸ ಜೀವನ ಪ್ರಾರಂಭಿಸಬೇಕು ಎನ್ನುವ ಸಲುವಾಗಿ, ಜನರು ಆತನನ್ನು ಪತ್ತೆ ಹಚ್ಚಬಾರದೆಂದು ನಾವು ರಾಷ್ಟ್ರರಾಜಧಾನಿಯಿಂದ ಆತನನ್ನು ದೂರ ಕಳಿಸಬೇಕಾಯ್ತು. ಆತನೀಗ ದಕ್ಷಿಣ ಕರಾವಳಿಯಲ್ಲಿ ಎಲ್ಲೋ ಅಡುಗೆ ಕೆಲಸ ಮಾಡಿಕೊಂಡಿದ್ದಾನೆ. ಆತನಿಗೆ ಕೆಲಸ ಕೊಟ್ಟಿರುವ ಮಾಲೀಕನಿಗೂ ಅವನ ನಿಜವಾದ ಹೆಸರು ಹಾಗೂ ಪೂರ್ವಾಪರಗಳ ಬಗ್ಗೆ ಗೊತ್ತಿಲ್ಲ. ಆತನನ್ನು ಯಾರೂ ಪತ್ತೆ ಹಚ್ಚಬಾರದು ಎಂಬ ಕಾರಣಕ್ಕೆ ನಾವು ಆತನನ್ನ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕಳಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

    ಬಾಲಾಪರಾಧಿಗಳ ನ್ಯಾಯ ಮಂಡಳಿಯು ಈತನ ವಿಚಾರಣೆ ನಡೆಸುವ ಸಂದರ್ಭದಲ್ಲಿ ಹಾಜರಿದ್ದ ಎನ್‍ಜಿಓದ ಅಧಿಕಾರಿ ಮಾಧ್ಯಮಗಳನ್ನ ದೂರಿದ್ದಾರೆ. ಯಾವುದೇ ಆಧಾರವಿಲ್ಲದೆ ಈ ಅಪ್ರಾಪ್ತನನ್ನು ಮೃಗದಂತೆ ಚಿತ್ರಿಸಿದ್ರು ಎಂದು ಆರೋಪ ಮಾಡಿದ್ದಾರೆ.

    ಈ ಬಾಲಾಪರಾಧಿಯು ಪ್ರಕರಣದಲ್ಲಿ ಭಾಗಿಯಾಗಿದ್ದು ನಿಜ. ಆದ್ರೆ ಇಡೀ ಪ್ರಕರಣದಲ್ಲಿ ಈತನಿಂದಲೇ ಹೆಚ್ಚಿನ ಹಾನಿಯಾಗಿದ್ದು, ಈತನೇ ಕ್ರೂರವಾಗಿ ವರ್ತಿಸಿದ್ದು ಎಂಬುದಕ್ಕೆ ಯಾವುದೇ ಸಾಕ್ಷಿ ಆಧಾರಗಳಿಲ್ಲ ಎಂದು 2013ರಲ್ಲಿ ಬಾಲಾಪರಾಧಿಗಳ ನ್ಯಾಯ ಮಂಡಳಿ ಹೇಳಿತ್ತು ಎಂದು ವರದಿಯಾಗಿದೆ.

    ಬಾಲಾಪರಾಧಿಗಳ ನ್ಯಾಯ ಮಂಡಳಿ ಅಥವಾ ಕೋರ್ಟ್‍ಗಳ ಆಹ್ವಾನದ ಮೇಲೆ ಬಾಲಾಪರಾಧಿಗಳ ಕೌನ್ಸೆಲಿಂಗ್ ಮಡುವ ಹೆಚ್‍ಎಕ್ಯೂ ಸೆಂಟರ್ ಆಫ್ ಚೈಲ್ಡ್ ರೈಟ್ಸ್ ನ ಇನಾಕ್ಷಿ ಗಂಗೂಲಿ ಈ ಬಗ್ಗೆ ಹೇಳಿಕೆ ನೀಡಿದ್ದು, ಈ ಪ್ರಕರಣದ ತನಿಖಾಧಿಕಾರಿಗಳೂ ಕೂಡ ಅಪರಾಧಿಯು ಅತ್ಯಂತ ಕ್ರೂರಿ ಎಂದು ತೋರಿಸಲು ಯಾವುದೇ ಸಾಕ್ಷಿಯಿಲ್ಲ ಎಂದು ದಾಖಲಿಸಿರುವುದಾಗಿ ತಿಳಿಸಿದ್ದಾರೆ.

    2013ರಲ್ಲಿ ಜೈಲಿನ ಸೆಲ್‍ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ ಅಪರಾಧಿ ರಾಮ್ ಸಿಂಗ್ ಬಳಿ ಈ ಬಾಲಾಪರಾಧಿ ಸ್ವಲ್ಪ ಕಾಲ ಕೆಲಸ ಮಾಡಿದ್ದ. ರಾಮ್ ಸಿಂಗ್ ಆತನಿಗೆ 8 ಸಾವಿರ ರೂ. ಹಣ ಕೊಡಬೇಕಿತ್ತು. ಹಣ ಕೊಡುವಂತೆ ಬಾಲಾಪರಾಧಿ ಪದೇ ಪದೇ ಕೇಳುತ್ತಲೇ ಇದ್ದ. ಯುವತಿ ಮೇಲೆ ಗ್ಯಾಂಗ್ ರೇಪ್ ನಡೆದ ರಾತ್ರಿ ಆತ ಹಣವನ್ನು ಪಡೆಯಲು ಹೋಗಿದ್ದರಿಂದ ಈ ಕೃತ್ಯದ ಭಾಗವಾದ ಎಂದು ಎನ್‍ಜಿಓ ಅಧಿಕಾರಿ ಹೇಳಿದ್ದಾರೆ.

    ಅತ್ಯಂತ ಬಡ ಕುಟುಂಬದವನಾದ ಈತ ಸಣ್ಣವನಿರುವಾಗಲೇ ಉತ್ತರಪ್ರದೇಶದ ತನ್ನ ಗ್ರಾಮವನ್ನು ಬಿಟ್ಟು ದೆಹಲಿಗೆ ಓಡಿಬಂದಿದ್ದ ಎಂದು ವರದಿಯಾಗಿದೆ.

    ಕಾಯ್ದೆಗೆ ತಿದ್ದುಪಡಿ: ಈ ಪ್ರಕರಣದ ಬಳಿಕ ದೇಶದೆಲ್ಲೆಡೆ ಪ್ರತಿಭಟನೆಗಳು ನಡೆದು ಬಾಲಾಪರಾಧಿಯನ್ನು ಅಪರಾಧಿಯನ್ನಾಗಿಸಬೇಕೆಂಬ ಕೂಗು ಎದ್ದಿತ್ತು. ಇದಾದ ಬಳಿಕ ಕೇಂದ್ರ ಸರ್ಕಾರ ಬಾಲಾಪರಾಧ ಕಾಯ್ದೆಗೆ ತಿದ್ದುಪಡಿ ತಂದಿದ್ದು ಹದಿನಾರರಿಂದ ಹದಿನೆಂಟು ವರ್ಷದ ಮಧ್ಯೆ ಇರುವವರು ಕ್ರೂರ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡರೆ ಅವರನ್ನು ವಯಸ್ಕರು ಎಂದೇ ಈಗ ಪರಿಗಣಿಸಲಾಗುತ್ತದೆ.