Tag: Justin Trudeau

  • ಭಾರತ ವಿರೋಧಿ ಸ್ನೇಹಿತರು ಟ್ರುಡೊರನ್ನು ರಕ್ಷಿಸಬಹುದು: ಇದು ಕರ್ಮ ಎಂದ ಸಿಂಘ್ವಿ

    ಭಾರತ ವಿರೋಧಿ ಸ್ನೇಹಿತರು ಟ್ರುಡೊರನ್ನು ರಕ್ಷಿಸಬಹುದು: ಇದು ಕರ್ಮ ಎಂದ ಸಿಂಘ್ವಿ

    ನವದೆಹಲಿ: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಅವರನ್ನು ‘ಭಾರತ ವಿರೋಧಿ ಸ್ನೇಹಿತರು’ ರಕ್ಷಿಸಬಹುದು ಎಂದು ನಾನು ಭಾವಿಸಿದ್ದೇನೆ. ಕೆನಡಾ ಪ್ರಧಾನಿ ಈಗ ತಮ್ಮ ದೇಶದಲ್ಲೇ ರಕ್ಷಣೆಗಾಗಿ ರಹಸ್ಯ ಸ್ಥಳಕ್ಕೆ ಸ್ಥಳಾಂತರವಾಗಿದ್ದಾರೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ (Abhishek Manu Singhvi) ಟ್ವೀಟ್ ಮಾಡಿ ಚರ್ಚೆಗೆ ಗ್ರಾಸವಾಗಿದ್ದಾರೆ.

    ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿ ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಕಾಂಗ್ರೆಸ್ ಜೊತೆಗೆ ಕೆನಡಾ ಪ್ರಧಾನಿ ಕೂಡ ಬೆಂಬಲ ಸೂಚಿಸಿದ್ದರು. ಆ ಮೂಲಕ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಪರೋಕ್ಷವಾಗಿ ಮಾತನಾಡಿದ್ದರು. ಆದರೆ ಕಾಂಗ್ರೆಸ್ ಹಿರಿಯ ನಾಯಕರೊಬ್ಬರೇ ಈಗ ಕೆನಡಾ ಪ್ರಧಾನಿ ಹೇಳಿಕೆ ಉಲ್ಲೇಖಿಸಿ ಟೀಕಿಸಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಹಾಗಾದರೆ ಸಿಂಘ್ವಿ ಅವರ ಮುಂದಿನ ರಾಜಕೀಯ ನಡೆ ಏನು ಎಂಬ ಪ್ರಶ್ನೆ ವ್ಯಕ್ತವಾಗಿದೆ. ಇದನ್ನೂ ಓದಿ: ಫೆಬ್ರವರಿಯಲ್ಲಿ 12 ದಿನ ಬ್ಯಾಂಕುಗಳಿಗೆ ರಜೆ

    ಕೆನಡಾದಲ್ಲಿ ಕೋವಿಡ್ ವ್ಯಾಕ್ಸಿನ್ ವಿರೋಧಿ ಪ್ರತಿಭಟನೆಯು ತೀವ್ರಗೊಂಡಿದ್ದು, ರಕ್ಷಣೆಗಾಗಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ರಹಸ್ಯ ಸ್ಥಳದಲ್ಲಿ ತಲೆಮರೆಸಿಕೊಂಡಿದ್ದಾರೆ. ಇದನ್ನು ಭಾರತದ ರೈತರ ಪ್ರತಿಭಟನೆಗೆ ತಳಕು ಹಾಕಿ ನೋಡಿರುವ ಕಾಂಗ್ರೆಸ್‌ನ ಅಭಿಷೇಕ್ ಸಿಂಘ್ವಿ, ‘ಭಾರತ ವಿರೋಧಿ ಸ್ನೇಹಿತರು’ ಟ್ರುಡೊರನ್ನು ರಕ್ಷಿಸಬಹುದು ಎಂದು ನಾನು ಭಾವಿಸಿದ್ದೇನೆ. ಭಾರತದ ಆಂತರಿಕ ವಿಷಯಗಳಿಗೆ ಮೂಗು ತೂರಿಸುವ ಮೊದಲು ತಮ್ಮ ದೇಶದಲ್ಲಿನ ಕಠಿಣ ಪರಿಸ್ಥಿತಿಗಳ ಬಗ್ಗೆ ಅರಿಯಬೇಕು ಎಂದು ಟ್ವೀಟ್ ಮಾಡಿ ಕುಟುಕಿದ್ದಾರೆ.

    ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ೨೦೨೦ರಿಂದ ಸತತ ಒಂದು ವರ್ಷಗಳ ಕಾಲ ರೈತರು ದೆಹಲಿಯ ಗಡಿಭಾಗಗಳಲ್ಲಿ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಕಾಂಗ್ರೆಸ್ ಸೇರಿದಂತೆ ವಿಶ್ವದ ಅನೇಕ ರಾಜಕೀಯ ಪಕ್ಷಗಳು ಹಾಗೂ ನಾಯಕರು ಬೆಂಬಲ ಸೂಚಿಸಿದ್ದರು. ಈ ವೇಳೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಕೂಡ ಭಾರತದ ರೈತರ ಪರವಾಗಿ ಮಾತನಾಡಿದ್ದರು. ಇದನ್ನೂ ಓದಿ: ಸಚಿವ ಸ್ಥಾನಕ್ಕೆ ಲಾಬಿ ಆರಂಭಿಸಿದ ವಲಸಿಗ ಶಾಸಕರು

    ಕಾಂಗ್ರೆಸ್‌ನಲ್ಲಿ ಸೂಕ್ತ ಗೌರವ ಸಿಗದ ಕಾರಣ ಅಭಿಷೇಕ್ ಮನು ಸಿಂಘ್ವಿ ಅವರು ಪಕ್ಷ ತೊರೆಯಲಿದ್ದಾರೆ ಎಂಬ ಸುದ್ದಿಗಳು ಇತ್ತೀಚೆಗೆ ಹರಿದಾಡಿದ್ದವು. ನಾನು ಪಕ್ಷ ತೊರೆಯುವ ಮಾತು ಸುಳ್ಳು ಎಂದು ಸಿಂಘ್ವಿ ಅಲ್ಲಗಳೆದಿದ್ದರು.

  • ಕೋವಿಡ್‌ ಲಸಿಕೆ ನೀಡುವಂತೆ ಮೋದಿಗೆ ಕೆನಡಾ ಪ್ರಧಾನಿ ಕರೆ

    ಕೋವಿಡ್‌ ಲಸಿಕೆ ನೀಡುವಂತೆ ಮೋದಿಗೆ ಕೆನಡಾ ಪ್ರಧಾನಿ ಕರೆ

    ನವದೆಹಲಿ: ರೈತರ ಪ್ರತಿಭಟನೆಗೆ ಬೆಂಬಲ ನೀಡಿ ಭಾರತೀಯರ ಟೀಕೆಗೆ ಗುರಿಯಾಗಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಕೋವಿಡ್‌ ಲಸಿಕೆ ನೀಡಬೇಕೆಂದು ಕೇಳಿದ್ದಾರೆ.

    ಈ ಸಂಬಂಧ ಕೆನಡಾ ಪ್ರಧಾನಿಗೆ ಧನ್ಯವಾದ ತಿಳಿಸಿದ ಮೋದಿ, ನನ್ನ ಸ್ನೇಹಿತ ಜಸ್ಟಿನ್ ಟ್ರುಡೊ ಅವರಿಂದ ಕರೆ ಸ್ವೀಕರಿಸಲು ಸಂತೋಷವಾಗಿದೆ. ಕೆನಡಾ ಕೇಳಿದಷ್ಟು ಕೋವಿಡ್ ಲಸಿಕೆಗಳನ್ನು ಪೂರೈಸಲು ಭಾರತ ಪ್ರಯತ್ನ ಮಾಡಲಿದೆ ಎಂದು ಭರವಸೆ ನೀಡಿದ್ದೇನೆ. ಹವಾಮಾನ ಬದಲಾವಣೆ ಮತ್ತು ಜಾಗತಿಕ ಆರ್ಥಿಕ ಚೇತರಿಕೆಯಂತಹ ಇತರ ಪ್ರಮುಖ ವಿಷಯಗಳ ಬಗ್ಗೆ ಸಹಯೋಗವನ್ನು ಮುಂದುವರಿಸಲು ನಾವು ಒಪ್ಪಿದ್ದೇವೆ ಎಂದು ಟ್ವೀಟ್‌ ಮಾಡಿದ್ದಾರೆ.

    ಡಿಸೆಂಬರ್‌ನಲ್ಲಿ ಟ್ರುಡೋ ರೈತರ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಭಾರತ ಬಲವಾಗಿ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಘಟನೆಯ ಬಳಿಕ ಭಾರತ ಮತ್ತು ಕೆನಡಾದ ಸಂಬಂಧಗಳು ಹಾಳಾಗಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿತ್ತು.

    ಕರೆ ಮಾಡಿದ್ದು ಯಾಕೆ?
    ಕೆನಡಾ ಫೈಝರ್‌ ಸೇರಿದಂತೆ ಹಲವು ಲಸಿಕೆ ತಯಾರಿಕಾ ಕಂಪನಿಗಳ ಜೊತೆ ಮಾತುಕತೆ ನಡೆಸಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಲಸಿಕೆ ಸಿಕ್ಕಿರಲಿಲ್ಲ. ಈ ಸಂಬಂಧ ವಿರೋಧ ಪಕ್ಷಗಳು ಮತ್ತು ಮಾಧ್ಯಮಗಳು ಸರ್ಕಾರವನ್ನು ಟೀಕಿಸಿದ್ದವು. ಈ ನಡುವೆ ಕೆನಡಾದ ವಿರೋಧ ಪಕ್ಷದ ಸದಸ್ಯೆ ಮಿಚೆಲ್ ರೆಂಪೆಲ್ ಗಾರ್ನರ್ ಅವರು ಸರ್ಕಾರವನ್ನು ಪ್ರಶ್ನಿಸಿ ಕೋವಿಡ್‌ ಲಸಿಕೆ ಸಂಬಂಧ ಭಾರತದ ಪ್ರಧಾನಿಗೆ ಕರೆ ಹೋಗಿದ್ಯಾ ಎಂದು ಪ್ರಶ್ನಿಸಿದ್ದರು. ಈ ಬಗ್ಗೆ ಸರ್ಕಾರ ಯಾವುದೇ ಉತ್ತರ ನೀಡಿರಲಿಲ್ಲ. ಈ ಎಲ್ಲ ವಿದ್ಯಮಾನಗಳು ನಡೆದ ಬಳಿಕ ಟ್ರುಡೊ ಮೋದಿಗೆ ಕರೆ ಮಾಡಿದ್ದಾರೆ.

  • ಕೆನಡಾ ಪ್ರಧಾನಿ ಟ್ರುಡೊ ಪತ್ನಿ ಕೊರೊನಾದಿಂದ ಗುಣಮುಖ

    ಕೆನಡಾ ಪ್ರಧಾನಿ ಟ್ರುಡೊ ಪತ್ನಿ ಕೊರೊನಾದಿಂದ ಗುಣಮುಖ

    ಒಟ್ಟಾವಾ: ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಪತ್ನಿ ಸೋಫಿ ಗೊಗ್ರೊಯಿರ್ ಕೊರೊನಾ ಸೋಂಕುವಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ.

    ಈ ಸಂಬಂಧ ಇನ್‍ಸ್ಟಾ ಗ್ರಾಮ್ ನಲ್ಲಿ ವಿಡಿಯೋ ಸ್ಟೇಟಸ್ ಅಪ್ ಡೇಟ್ ಮಾಡಿ, ನನ್ನ ಆರೋಗ್ಯ ಬಹಳ ಸುಧಾರಿಸಿದೆ. ಒಟ್ಟಾವಾ ಸಾರ್ವಜನಿಕ ಆಸ್ಪತ್ರೆಯಿಂದ ನಾನು ಗುಣಮುಖನಾಗಿದ್ದನ್ನು ವೈದ್ಯರು ಖಚಿತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

    ಮಾರ್ಚ್ 12 ರಂದು ಜಸ್ಟಿನ್ ಟ್ರುಡೊ ಅವರ ಕಚೇರಿ ಸೋಫಿ ಗೊಗ್ರೊಯಿರ್ ಅವರಿಗೆ ಕೊರೊನಾ ಸೋಂಕು ತಗಲಿರುವುದು ಖಚಿತವಾಗಿತ್ತು. ಲಂಡನ್ ನಿಂದ ಮರಳಿ ಬಳಿಕ ಇವರ ಆರೋಗ್ಯ ಹದಗೆಟ್ಟಿತ್ತು.

    ಪತ್ನಿಗೆ ಕೊರೊನಾ ಬಂದ ನಂತರ ಟ್ರುಡೊ ಮನೆಯಲ್ಲೇ ಪ್ರತ್ಯೇಕವಾಗಿದ್ದರು. ಮೂವರು ಮಕ್ಕಳಿಗೂ ಕೊರೊನಾ ಸೋಂಕು ಬಂದಿಲ್ಲ.

    ಕೆನಡಾದಲ್ಲಿ 5,607 ಮಂದಿಗೆ ಕೊರೊನಾ ಬಂದಿದ್ದು 61 ಮಂದಿ ಮೃತಪಟ್ಟಿದ್ದಾರೆ. ಒಂಟ್ಟು ಈಗ 5,067 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, 479 ಮಂದಿ ಗುಣಮುಖರಾಗಿದ್ದಾರೆ.

    ಕೊರೊನಾ ಗುಣಪಡಿಸಲಾಗದ ಕಾಯಿಲೆ ಅಲ್ಲ. ಸ್ವಚ್ಛತೆಯ ಜೊತೆಗೆ ವೈದ್ಯರು ನೀಡಿದ ಔಷಧಿಯನ್ನು ಸರಿಯಾಗಿ ಸೇವಿಸಿದರೆ ಕೊರೊನಾ ಗುಣವಾಗುತ್ತದೆ.