Tag: Justice For Madhu

  • ಮಧು ಪತ್ತಾರ್ ಪ್ರಕರಣ ಸಿಐಡಿಗೆ – ರಾಜ್ಯಾದ್ಯಂತ ಹೋರಾಟಕ್ಕೆ ತೀವ್ರಗೊಂಡ ತನಿಖೆ

    ಮಧು ಪತ್ತಾರ್ ಪ್ರಕರಣ ಸಿಐಡಿಗೆ – ರಾಜ್ಯಾದ್ಯಂತ ಹೋರಾಟಕ್ಕೆ ತೀವ್ರಗೊಂಡ ತನಿಖೆ

    ರಾಯಚೂರು: ನಗರದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಸಾವು ಪ್ರಕರಣವನ್ನು ಸರ್ಕಾರ ಸಿಐಡಿಗೆ ಒಪ್ಪಿಸಿದೆ.

    ರಾಜ್ಯಾದ್ಯಂತ ವಿದ್ಯಾರ್ಥಿಗಳು ಹಾಗೂ ವಿವಿಧೆಡೆಯಿಂದ ಆಕ್ರೋಶ ಹೆಚ್ಚಾದ ಹಿನ್ನೆಲೆಯಲ್ಲಿ ಕೊಲೆ ಮತ್ತು ಅತ್ಯಾಚಾರ ಪ್ರಕರಣ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಆಂದೋಲನ ತೀವ್ರ ಸ್ವರೂಪ ಪಡೆಯುತ್ತಿರುವುದರಿಂದ ರಾಯಚೂರು ಡಿವೈಎಸ್‍ಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಈಗ ಸಿಐಡಿಗೂ ಒಪ್ಪಿಸಲಾಗಿದೆ.

    ಮಾಜಿ ಸಿಎಂ ಸಿದ್ದರಾಮಯ್ಯ ರಾಯಚೂರಿನಲ್ಲಿ ಮೃತಳ ಪೋಷಕರನ್ನು ಭೇಟಿ ಮಾಡಿದಾಗ ಪೋಷಕರು ನ್ಯಾಯ ಕೊಡಿಸುವಂತೆ ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿದ ಸಿದ್ದರಾಮಯ್ಯ ಗೃಹ ಸಚಿವ ಎಂ.ಬಿ ಪಾಟೀಲ್ ಗೆ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವರ ಸೂಚನೆ ಮೇರೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ್ದಾರೆ.

    ಸಿಐಡಿ ತಂಡ ಇಂದು ರಾಯಚೂರಿಗೆ ಆಗಮಿಸಿ ಮಾಹಿತಿ ಕಲೆ ಹಾಕುವ ಸಾಧ್ಯತೆಯಿದೆ. ಜೊತೆಗೆ ಮರಣೋತ್ತರ ಪರೀಕ್ಷಾ ವರದಿ ಕೂಡ ಇಂದು ಪೊಲೀಸರ ಕೈ ಸೇರುವ ಸಾಧ್ಯತೆಯಿದೆ. ಈ ಮೂಲಕ ವಿದ್ಯಾರ್ಥಿನಿ ಸಾವು ಪ್ರಕರಣದ ತನಿಖೆ ಚುರುಕುಗೊಂಡಿದೆ.

  • ಮಧು ಅನುಮಾನಾಸ್ಪದ ಸಾವು – ಮೃತಳ ಕುಟುಂಬಕ್ಕೆ ನಟನಟಿಯರು ಸಾಂತ್ವನ

    ಮಧು ಅನುಮಾನಾಸ್ಪದ ಸಾವು – ಮೃತಳ ಕುಟುಂಬಕ್ಕೆ ನಟನಟಿಯರು ಸಾಂತ್ವನ

    ರಾಯಚೂರು: ನಗರದ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಮಧು ಅನುಮಾನಾಸ್ಪದ ಸಾವು ಪ್ರಕರಣದ ಹಿನ್ನೆಲೆಯಲ್ಲಿ ಇಂದು ನಟ ಭುವನ್, ನಟಿ ಹರ್ಷಿಕಾ ಪೂಣಚ್ಚ ರಾಯಚೂರಿಗೆ ಭೇಟಿ ನೀಡಿ ಮಧು ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

    ಈ ವೇಳೆ ಮಾತನಾಡಿದ ನಟ ಭುವನ್, “ಈ ಕೇಸಿನ ತನಿಖೆ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಕೇಸ್ ಮೊದಲು ಆತ್ಮಹತ್ಯೆ ಎಂದು ಪ್ರಕರಣ ದಾಖಲಾಗಿತ್ತು. ಬಳಿಕ ಇದು ರೇಪ್ ಹಾಗೂ ಮರ್ಡರ್ ಎಂದು ಹೇಳಲಾಗಿತ್ತು. ಈ ರೇಪ್ ಹಾಗೂ ಮರ್ಡರ್ ಕೇಸ್ ಸೂಸೈಡ್ ಆಗಬೇಕೆಂದೆರೆ ಇದರ ಹಿಂದೆ ತುಂಬಾ ಶಕ್ತಿಯಿರುವ ಜನರ ಕೈವಾಡವಿದೆ ಎನ್ನುವ ಶಂಕೆ ಎಲ್ಲರಲ್ಲೂ ಇದೆ” ಎಂದರು.

    ಇಡೀ ಕರ್ನಾಟಕಕ್ಕೆ ಇಲ್ಲಿ ನಡೆಯುತ್ತಿರುವ ಅನ್ಯಾಯದ ಬಗ್ಗೆ ತಿಳಿಯಬೇಕು. ಹೆಣ್ಣು ಮಗು ಹಾಗೂ ಆಕೆಯ ಅಪ್ಪ- ಅಮ್ಮನಿಗೆ ನ್ಯಾಯ ಸಿಗಬೇಕು. ಚುನಾವಣೆ ದೊಡ್ಡ ವಿಷಯ. ಇಡೀ ಭಾರತದ ವಿಷಯನೇ. ಆದರೆ ಅಪ್ಪ-ಅಮ್ಮ ತಮ್ಮ ಮಗಳನ್ನು ಕಳೆದುಕೊಂಡ ನೋವು ಯಾರಿಗೂ ಅರ್ಥವಾಗಲ್ಲ. ಹಾಗಾಗಿ ಇಡೀ ಕರ್ನಾಟಕಕ್ಕೆ ಈ ವಿಷಯ ಗೊತ್ತಾಗಿ ಆ ಹೆಣ್ಣು ಮಗುವಿನ ಆತ್ಮಕ್ಕೆ ಶಾಂತಿ ಸಿಗಬೇಕು ಎಂಬುದು ನನ್ನ ಆಶಯ. ಮಗಳ ಹುಟ್ಟುಹಬ್ಬದ ದಿನ ಮಗಳ ಚಿತೆಗೆ ಬೆಂಕಿ ಹಚ್ಚಬೇಕು ತುಂಬಾ ನೋವಾಗುತ್ತೆ ಎಂದು ಭುವನ್ ತಿಳಿಸಿದರು.

    ಇದೇ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಹರ್ಷಿಕಾ ಪೂಣಚ್ಚ, “ರಾಯಚೂರು ವಿದ್ಯಾರ್ಥಿಗಳಿಂದ ನನಗೆ ಈ ವಿಷಯ ತಿಳಿಯಿತು. ಸಾಮಾಜಿಕ ಜಾಲತಾಣದಲ್ಲಿ ನಾನು ಆಕ್ಟೀವ್ ಆಗಿರುತ್ತೇನೆ. ಎಲ್ಲರು ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ನಮ್ಮ ಜಿಲ್ಲೆಯ ಮಧು ಎನ್ನುವ ಯುವತಿಯ ಬರ್ಬರವಾಗಿ ಕೊಲೆ ಮಾಡಿದ್ದಾರೆ ನೋಡಿ ಎಂದು ಮೆಸೇಜ್ ಮಾಡಿ ಫೋಟೋ ಕಳುಹಿಸಿದ್ದರು. ನನಗೆ ಆ ಫೋಟೋ ನೋಡಿ ಶಾಕ್ ಆದೆ. ಈಗಲೂ ಆ ಫೋಟೋ ನೋಡಿದರೆ ನನಗೆ ಶಾಕ್ ಆಗುತ್ತದೆ” ಎಂದರು.

    ಕಾಲೇಜಿಗೆ ಹೋಗುವ ಚಿಕ್ಕ ಯುವತಿಯನ್ನು ಕೊಲೆ ಮಾಡಬೇಕೆಂದರೆ ಅವರಿಗೆ ಯಾವ ಮಟ್ಟದಲ್ಲಿ ದ್ವೇಷ ಇರಬಹುದು ಎಂದು ಊಹಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ಕೆಲವೊಂದು ವಿಷಯಗಳು ಫೇಕ್ ಆಗಿರುತ್ತೆ. ನಾವು ತಕ್ಷಣ ನಂಬುವುದಕ್ಕೆ ಆಗಲ್ಲ. ಎಡಿಟ್ ಮಾಡಿರುವ ಫೋಟೋವೇ ಎಂದು ಪರಿಶೀಲಿಸಿದ್ದಾಗ ಕಾಲೇಜು ವಿದ್ಯಾರ್ಥಿಗಳು ನಿರಂತರವಾಗಿ ಮೆಸೇಜ್ ಮಾಡುತ್ತಿದ್ದರು. ಆಗ ಈ ವಿಷಯ ನಿಜ ಎಂದು ನನಗೆ ತಿಳಿಯಿತು ಎಂದರು.

    ನಾನು ವಿದ್ಯಾರ್ಥಿಗಳ ಹೋರಾಟದಲ್ಲಿ ಭಾಗಿಯಾಗುತ್ತಿದ್ದೇನೆ. ಇದು ಕೇವಲ ಮಧು ಪತ್ತಾರ್ ವಿಷಯ ಅಲ್ಲ. ಹೆಣ್ಣು ಮಕ್ಕಳ ಏನೂ ಶೋಷಣೆ ಆಗುತ್ತಿದೆ ಅದು ನಿಲ್ಲಬೇಕು. ಇನ್ಮೇಲೆ ಆ ರೀತಿ ರೇಪ್, ಕಿರುಕುಳ ಎಂದು ಯೋಚಿಸಿದರೆ ನಡುಕ ಹುಟ್ಟಬೇಕು. ಆ ಮಟ್ಟಕ್ಕೆ ಹೋರಾಟ ನಡೆಯಬೇಕು. ರಾಯಚೂರು ಶಾಂತಿಯುತ ಜಿಲ್ಲೆ. ಇಂತಹ ಜಾಗದಲ್ಲಿ ಈ ರೀತಿ ಆಗಿದೆ ಎಂದರೆ, ಎಂತಹ ಕ್ರೂರ ಮನೋಭಾವದವರು ಇದ್ದಾರೆ ಅಂದರೆ ಅವರನ್ನು ಅಲ್ಲಿಯೇ ನಾಶ ಮಾಡಬೇಕು. ಯಾರು ಅವರ ತರ ಬೆಳೆಯಬಾರದು ಎಂದರು.

    ರಾಯಚೂರು ಯುವಕ -ಯುವತಿಯರು ಈ ಅಭಿಯಾನವನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡಿದ್ದಾರೆ. ಇಡೀ ಭಾರತದಲ್ಲಿ ರೇಪ್ ನಿಲ್ಲಬೇಕು. ಜಸ್ಟಿಸ್ ಫಾರ್ ಮಧು ಅಭಿಯಾನ ಆ ಮಟ್ಟಕ್ಕೆ ತಲುಪಬೇಕು. ನಾನು ಮಧು ಅವರ ಪೋಷಕರನ್ನು ಭೇಟಿ ಮಾಡಿ ಸಾಂತ್ವನ ಹೇಳುವುದಕ್ಕೆ ಬಂದಿದ್ದೇನೆ. ಇಲ್ಲಿ ವಿದ್ಯಾರ್ಥಿಗಳು ಮಾಡುತ್ತಿರುವ ಅಭಿಯಾನ ದೊಡ್ಡ ಮಟ್ಟಕ್ಕೆ ಹೋಗಬೇಕು ಹಾಗೂ ಮಧು ಆತ್ಮಕ್ಕೆ ಶಾಂತಿ ಸಿಗಬೇಕು ಎಂದು ನಟಿ ಹರ್ಷಿಕಾ ಪೂಣಚ್ಚ ತಿಳಿಸಿದರು.

    https://www.youtube.com/watch?v=vpkln0JPKkc

    https://www.youtube.com/watch?v=0S-0M2EM8pc

  • ನಿಷ್ಪಕ್ಷಪಾತ ತನಿಖೆ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಸಿಎಂ ಆದೇಶ

    ನಿಷ್ಪಕ್ಷಪಾತ ತನಿಖೆ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಸಿಎಂ ಆದೇಶ

    ಬೆಂಗಳೂರು: ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಹಾಗೂ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಆದೇಶಿಸಿದ್ದಾರೆ.

    ಸಿಎಂ ಕುಮಾರಸ್ವಾಮಿ ಅವರು ರಾಯಚೂರಿನ ಎಂಜಿನಿಯರ್ ವಿದ್ಯಾರ್ಥಿನಿ ಮಧು ಪತ್ತಾರ್ ಬಗ್ಗೆ ತಮ್ಮ ಟ್ವಿಟ್ಟರಿನಲ್ಲಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಈ ಘಟನೆ ಬಗ್ಗೆ ಸರಿಯಾದ ಕ್ರಮಕೈಗೊಳ್ಳುವಂತೆ ರಾಯಚೂರಿನ ಎಸ್‍ಪಿಗೆ ತಿಳಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ರಾಯಚೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವಿನ ಪ್ರಕರಣ ಅತೀವ ನೋವು ತಂದಿದೆ. ಈ ಪ್ರಕರಣದ ಕುರಿತು ರಾಯಚೂರು ಎಸ್‍ಪಿ ಅವರಿಂದ ಮಾಹಿತಿ ಪಡೆದಿದ್ದು ಒಬ್ಬನನ್ನು ಬಂಧಿಸಿದ್ದು ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಹಾಗೂ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ. ಆಕೆಯ ಹೆತ್ತವರಿಗೆ ಭಗವಂತ ಈ ನೋವು ಭರಿಸುವ ಶಕ್ತಿ ಕೊಡಲಿ. ಹೆಣ್ಣುಮಕ್ಕಳ ಮೇಲಿನ ಇಂತಹ ಪೈಶಾಚಿಕ ಕೃತ್ಯ ಖಂಡನೀಯ.

    ಏನಿದು ಪ್ರಕರಣ?
    ಏಪ್ರಿಲ್ 16 ರಂದು ಮೃತ ಮಧು ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಪೊಲೀಸರು ಡೆತ್‍ನೋಟ್ ನೋಡಿ ಇದು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿದ್ದರು. ಬಳಿಕ ಮೃತ ಮಧು ತಾಯಿ ಇದು ಕೊಲೆಯಲ್ಲ. ನನ್ನ ಮಗಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ದೂರು ದಾಖಲಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಮೃತ ಮಧು ಗೆಳೆಯ ಸುದರ್ಶನ್‍ನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.