Tag: Junior NTR

  • ರುಕ್ಮಿಣಿ ಸೆಲ್ಫಿ `ಟೈಗರ್’ ಪ್ರಿಂಟ್ ಶರ್ಟ್ ಸೀಕ್ರೆಟ್ ರಿವೀಲ್! ಜೂ.ಎನ್‌ಟಿಆರ್‌ಗೆ ನಾಯಕಿ?

    ರುಕ್ಮಿಣಿ ಸೆಲ್ಫಿ `ಟೈಗರ್’ ಪ್ರಿಂಟ್ ಶರ್ಟ್ ಸೀಕ್ರೆಟ್ ರಿವೀಲ್! ಜೂ.ಎನ್‌ಟಿಆರ್‌ಗೆ ನಾಯಕಿ?

    ಪ್ರಶಾಂತ್ ನೀಲ್ ಹಾಗೂ ಜೂ.ಎನ್‌ಟಿಆರ್ (Junior NTR) ಜಂಟಿಯ ಇನ್ನೂ ಹೆಸರಿಡದ ಚಿತ್ರ ಭಾರೀ ಸೌಂಡ್ ಮಾಡುತ್ತಿದೆ. ಕರ್ನಾಟಕದ ಕರಾವಳಿಯ ಭಾಗದ ಕುಂದಾಪುರದಲ್ಲೇ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಸದ್ಯಕ್ಕೀಗ ಈ ಬಿಗ್ ಪ್ರಾಜೆಕ್ಟ್‌ಗೆ ʻಎನ್‌ಟಿಆರ್ 31ʼ ಎಂದು ಹೆಸರಿಡಲಾಗಿದೆ.

     

    View this post on Instagram

     

    A post shared by Rukmini Vasanth (@rukmini_vasanth)

    ಚಿತ್ರಕ್ಕೆ ಸಂಬಂಧಿಸಿದ ಸಕಲ ಮಾಹಿತಿಯನ್ನೂ ರಹಸ್ಯವಾಗಿಡೋದು ಪ್ರಶಾಂತ್ ನೀಲ್ (Prashanth Neel) ಶೈಲಿ. ಹೀಗಾಗಿ ಎಂದಿನಂತೆ ನೀಲ್ ಗೌಪ್ಯತೆ ಕಾಪಾಡಿಕೊಂಡಿದ್ದಾರೆ. ಚಿತ್ರದ ನಾಯಕಿ ಕುರಿತು ಹಲವು ಹೆಸರುಗಳು ಚಾಲ್ತಿಯಲ್ಲಿತ್ತು. ಆ ಪಟ್ಟಿಯಲ್ಲಿ ರುಕ್ಮಿಣಿ ವಸಂತ್ ಹೆಸರೂ ಇತ್ತು. ಇದೀಗ ನಟಿ ರುಕ್ಮಿಣಿ ವಸಂತ್ (Rukhmini Vasanth) ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಒಂದು ಸೆಲ್ಫಿ ಚಿತ್ರದ ನಾಯಕಿಯ ಅನುಮಾನಕ್ಕೆ ಪುಷ್ಠಿ ಕೊಡುವಂತಿದೆ. ಇದನ್ನೂ ಓದಿ: ಮೋಹದ ಬಣ್ಣ ನೀಲಿ: ಯೋಗರಾಜ್ ಭಟ್ಟರ ಹೊಸ ಪ್ರಯೋಗ

    ರುಕ್ಮಿಣಿ ವಸಂತ್ ಇದೀಗ ವೈಟ್ ಶರ್ಟ್ ಮೇಲೆ ಟೈಗರ್ ಪ್ರಿಂಟ್ ಇರುವ ಉಡುಗೆ ಧರಿಸಿ ಫೋಟೋ ಪೋಸ್ಟ್ ಮಾಡಿದ್ದಾರೆ. ಇಷ್ಟೇ ಅಲ್ಲದೇ ʻಟೈಗರ್ ಟೈಗರ್ ಬರ್ನಿಂಗ್ ಬ್ರೈಟ್ʼ ಎಂದು ಫೋಟೋಗೆ ಕ್ಯಾಪ್ಷನ್ ಕೊಟ್ಟಿದ್ದಾರೆ. ಹೀಗಾಗಿ ಈ ಸೆಲ್ಫಿಗೆ ʻಎನ್‌ಟಿಆರ್ 31ʼ (NTR 31) ಚಿತ್ರಕ್ಕೆ ರುಕ್ಮಿಣಿಯೇ ನಾಯಕಿ ಎಂಬ ವದಂತಿಯನ್ನ ತಾಳೆ ಹಾಕಲಾಗುತ್ತಿದೆ. ಕಾರಣ ಜೂ.ಎನ್‌ಟಿಆರ್‌ಗೆ ʻಯಂಗ್ ಟೈಗರ್ʼ ಎಂಬ ಬಿರುದಿದೆ. ಹೀಗಾಗೇ ಟೈಗರ್ ಪ್ರಿಂಟ್‌ವುಳ್ಳ ಉಡುಗೆಯಲ್ಲಿ ರುಕ್ಮಿಣಿ ಪೋಸ್ ಕೊಟ್ಟಿರಬಹುದೇ ಎಂದು ಊಹಿಸುತ್ತಿದ್ದಾರೆ ಅವರ ಫಾಲೋವರ್ಸ್. ಈ ಕುರಿತು ಅವರ ಪೋಸ್ಟ್‌ಗೆ ಕಾಮೆಂಟ್ಸ್‌ಗಳೂ ಕೂಡ ಬರುತ್ತಿದೆ. ಇದನ್ನೂ ಓದಿ: ಮಾಜಿ ಪತಿಯ ಅಂತ್ಯಕ್ರಿಯೆ ನೆರವೇರಿಸಿದ ಕರಿಷ್ಮಾ ಕಪೂರ್

    ಪ್ರತಿ ಸಿನಿಮಾದಲ್ಲೂ ಪ್ರಶಾಂತ್ ನೀಲ್ ಹಂತ ಹಂತವಾಗೇ ಕಲಾವಿದರ ಹಾಗೂ ಇನ್ನಿತರ ಮಾಹಿತಿಯನ್ನ ರಿವೀಲ್ ಮಾಡ್ತಾರೆ. ಅದರಂತೆ ಜೂ.ಎನ್‌ಟಿಆರ್ ಚಿತ್ರಕ್ಕೂ ಪ್ರಶಾಂತ್ ನೀಲ್ ಇದುವರೆಗೂ ಶೀರ್ಷಿಕೆಯನ್ನೂ ಘೋಷಿಸಿಲ್ಲ. ಡ್ರ್ಯಾಗನ್‌ ಸೇರಿದಂತೆ ಕೆಲವು ಶೀರ್ಷಿಕೆ ಗುಲ್ಲಾಗಿದೆ. ಆದರೆ ಯಾವುದೂ ಅಧಿಕೃತ ಘೋಷಣೆಯಾಗಿಲ್ಲ. ಇನ್ನು ನಾಯಕಿಯ ಆಯ್ಕೆ ನಡೆದಿದೆ ಎನ್ನಲಾಗಿದ್ದು ಯಾರು ಅನ್ನೋದನ್ನ ಸಿನಿಮಾ ಟೀಮ್ ಇಂದಿಗೂ ರಿವೀಲ್ ಮಾಡಿಲ್ಲ. ಇದೀಗ ರುಕ್ಮಿಣಿ ವಸಂತ್ ಹಾಕಿರುವ ಪೋಸ್ಟ್‌ನಿಂದಾಗಿ ಎನ್‌ಟಿಆರ್31 ಚಿತ್ರಕ್ಕೆ ರುಕ್ಮಿಣಿ ನಾಯಕಿ ಅನ್ನೋ ವದಂತಿಗೆ ಜೀವ ಬಂದಿದೆ. ಇದನ್ನೂ ಓದಿ: ಮಹಿಳೆಗೆ ಕಾರು ಡಿಕ್ಕಿ ಹೊಡೆದಿದ್ದಕ್ಕೆ ಕ್ಷಮೆ ಕೇಳಿದ ಯುವ ರಾಜ್‌ಕುಮಾರ್

  • ಕೊಲ್ಲೂರು ಮೂಕಾಂಬಿಕೆ ದೇಗುಲದಲ್ಲಿ ಜೂ.ಎನ್‌ಟಿಆರ್

    ಕೊಲ್ಲೂರು ಮೂಕಾಂಬಿಕೆ ದೇಗುಲದಲ್ಲಿ ಜೂ.ಎನ್‌ಟಿಆರ್

    – ರಿಷಬ್, ಪ್ರಶಾಂತ್ ನೀಲ್, ಪ್ರಮೋದ್ ಕುಟುಂಬ ಜೊತೆ ದೇವರ ದರ್ಶನ

    ಉಡುಪಿ: ಕೊಲ್ಲೂರು ಮೂಕಾಂಬಿಕೆ (Kollur Mookambika Temple) ದೇವಿಯ ದರ್ಶನಕ್ಕೆ ನಟ ಜೂ.ಎನ್‌ಟಿಆರ್ (Junior NTR) ಕುಟುಂಬ ಆಗಮಿಸಿದೆ. ಕರಾವಳಿ ಜಿಲ್ಲೆ ಉಡುಪಿ (Udupi) ಎರಡನೇ ದಿನದ ಪ್ರವಾಸದಲ್ಲಿರುವ ತಾರಕ್ ರಾಮ್ ಮಧ್ಯಾಹ್ನ ಮಹಾಪೂಜೆ ಸಂದರ್ಭಗಳಲ್ಲಿ ದೇವಸ್ಥಾನಕ್ಕೆ ಆಗಮಿಸಿ ತಾಯಿ ಕೊಲ್ಲೂರಮ್ಮನ ದರ್ಶನ ಮಾಡಿದ್ದಾರೆ.

    ಉಡುಪಿ ಜಿಲ್ಲೆಯ ಬೈಂದೂರಿನ ಕೊಲ್ಲೂರು ದೇಗುಲದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ, ಕೆಜಿಎಫ್ ಖ್ಯಾತಿಯ ಡೈರೆಕ್ಟರ್ ಪ್ರಶಾಂತ್ ನೀಲ್ ಕುಟುಂಬವೂ ಜೊತೆಯಾಯಿತು. ಲಾಫಿಂಗ್ ಬುದ್ಧ ನಟ ಪ್ರಮೋದ್ ಶೆಟ್ಟಿ ಸಹ ಜೊತೆಗೆ ಬಂದು ದೇವರ ದರ್ಶನ ಮಾಡಿದರು. ನಾಲ್ಕು ಕುಟುಂಬಗಳು ಕೊಲ್ಲೂರಿನಲ್ಲಿ ಜೊತೆಯಾಗಿ ಬಂದು ದರ್ಶನ ಪಡೆದು ಪ್ರಸಾದ ಸ್ವೀಕಾರ ಮಾಡಿದರು. ಇದನ್ನೂ ಓದಿ: ಚಿತ್ರರಂಗದಲ್ಲಿ ಬಾಲಯ್ಯ ಹಾಫ್ ಸೆಂಚುರಿ – ತಲೈವಾ ಗ್ರೇಟ್ ವಿಶ್!

    ನಾಲ್ಕು ದಶಕದ ನಂತರ ಜೂ.ಎನ್‌ಟಿಆರ್ ತಾಯಿ ಶಾಲಿನಿ ನಂದಮೂರಿ ಕರಾವಳಿಗೆ ಬಂದಿದ್ದಾರೆ. ಪತ್ನಿ ಲಕ್ಷ್ಮಿ ಪ್ರಣತಿ, ಪ್ರಗತಿ ರಿಷಬ್, ಪ್ರಶಾಂತ್ ನೀಲ್, ಲಿಖಿತಾ ನೀಲ್ ಮೂಕಾಂಬಿಕೆಯ ದರ್ಶನ ಮಾಡಿ ಪ್ರಾಂಗಣದಲ್ಲಿರುವ ಗುಡಿಗಳಿಗೆ ಭೇಟಿ ಕೊಟ್ಟು ಪ್ರಸಾದ ಸ್ವೀಕರಿಸಿದರು. ಕೊಲ್ಲೂರು ಆಡಳಿತದಿಂದ ನಟರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಇದನ್ನೂ ಓದಿ: ಕೈದಿ ನಂಬರ್‌ ಆಯ್ತು.. ಈಗ ದರ್ಶನ್‌ ಧರಿಸಿದ್ದ ಟೀ ಶರ್ಟ್‌ ಟ್ರೆಂಡ್‌

    ಈ ಸಂದರ್ಭದಲ್ಲಿ ಮಾತನಾಡಿದ ತಾರಕ್ ರಾಮ್, ಕೊಲ್ಲೂರು ದೇವಿಯ ದರ್ಶನ ತುಂಬಾ ಚೆನ್ನಾಗಿ ಆಯಿತು. ದರ್ಶನ ಮಾಡಿಸಿದ್ದಕ್ಕೆ ರಿಷಬ್‌ಗೆ ತುಂಬಾ ಧನ್ಯವಾದ. ಮುಂದಿನ ಸಿನಿಮಾ ದೇವರಾ ಬಗ್ಗೆ ದೇವಸ್ಥಾನದಲ್ಲಿ ನಾನು ಏನು ಮಾತನಾಡುವುದಿಲ್ಲ. ದೇಗುಲ ಭೇಟಿ ಬಿಟ್ಟು ದೇವಸ್ಥಾನದಲ್ಲಿ ಬೇರೇನೂ ವಿಚಾರ ಮಾತನಾಡಲು ನಾನು ಬಯಸುವುದಿಲ್ಲ ಎಂದರು. ಇದನ್ನೂ ಓದಿ: ಕೇರಳ ಚಿತ್ರರಂಗ ಆಯ್ತು, ಟಾಲಿವುಡ್‌ನಲ್ಲೂ ಕಂಪನ; ʻದಿ ವಾಯ್ಸ್ ಆಫ್ ವುಮನ್ʼ ವರದಿ ಬಹಿರಂಗಕ್ಕೆ ಸಮಂತಾ ಒತ್ತಾಯ!

    ರಿಷಬ್ ಜೊತೆ ಗೆಳೆತನ ಓಡಾಟ ಮಾಡುತ್ತಿರೋದರಿಂದ ಕಾಂತಾರ ಫ್ರೀಕ್ವೆಲ್‌ನಲ್ಲಿ ತಾರಕ್ ನಟಿಸುತ್ತಾರಾ ಎಂಬ ಪ್ರಶ್ನೆ ಓಡಾಡುತ್ತಿದೆ. ಇದಕ್ಕೆ ಉತ್ತರಿಸಿದ ಅವರು, ರಿಷಬ್ ಶೆಟ್ಟಿ ಅವರೇ ಈ ಬಗ್ಗೆ ಪ್ಲಾನ್ ಮಾಡಬೇಕು. ಅವರು ಏನು ಪ್ಲಾನ್ ಮಾಡಿದರೂ ನಾನು ರೆಡಿ ಎಂದರು. ದೇವಸ್ಥಾನದಲ್ಲಿ ಆ ವಿಚಾರ ನಾನು ಮಾತನಾಡುವುದಿಲ್ಲ. ಪ್ರಮೋದ್ ಶೆಟ್ಟಿ ನಟನೆಯ ಲಾಫಿಂಗ್ ಬುದ್ಧ ಸಿನಿಮಾ ನೋಡುತ್ತೇನೆ. ಲಾಫಿಂಗ್ ಬುದ್ಧ ಯಶಸ್ಸಿಗೆ ಪ್ರಮೋದ್ ಶೆಟ್ಟಿಗೆ ರಿಷಬ್ ಅಭಿನಂದಿಸಿದರು. ಇದನ್ನೂ ಓದಿ: ನಾನು ಪವರ್ ಗ್ರೂಪ್‌ನಲ್ಲಿಲ್ಲ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ – ಹೇಮಾ ಕಮಿಷನ್ ವರದಿಗೆ ಮೋಹನ್‌ಲಾಲ್ ರಿಯಾಕ್ಷನ್‌

    ಆಂಧ್ರ ಪ್ರದೇಶದಲ್ಲಿ ವಾಯ್ಸ್ ಆಫ್ ವುಮೆನ್ಸ್ ವರದಿ ಬಿಡುಗಡೆಗೆ ನಟಿಯರು ಆಗ್ರಹಿಸಿದ ವಿಚಾರ, ನಟ ದರ್ಶನ್ ಪ್ರಕರಣ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಜೂ.ಎನ್‌ಟಿಆರ್, ರಿಷಬ್ ಶೆಟ್ಟಿ ಹಿಂದೇಟು ಹಾಕಿದರು. ಇದನ್ನೂ ಓದಿ: ‘ದಿ ಗೋಟ್’ ಅಡ್ಡಾದಿಂದ ಧೂಳೆಬ್ಬಿಸೋ ಸಾಂಗ್ : ದಳಪತಿ ಫ್ಯಾನ್ಸ್ ದಿಲ್ ಖುಷ್

  • ಉಡುಪಿ ಶ್ರೀಕೃಷ್ಣ ಮಠಕ್ಕೆ ಜ್ಯೂ.ಎನ್‌ಟಿಆರ್, ರಿಷಬ್ ಶೆಟ್ಟಿ ಭೇಟಿ

    ಉಡುಪಿ ಶ್ರೀಕೃಷ್ಣ ಮಠಕ್ಕೆ ಜ್ಯೂ.ಎನ್‌ಟಿಆರ್, ರಿಷಬ್ ಶೆಟ್ಟಿ ಭೇಟಿ

    – ಎಲ್ಲವೂ ಭಗವಾನ್ ಶ್ರೀಕೃಷ್ಣನ ಸ್ಕ್ರೀನ್ ಪ್ಲೇ ಎಂದ ಸ್ಟಾರ್ ನಟ
    – ರಿಷಬ್ ಬಗ್ಗೆ ಜ್ಯೂ.ಎನ್‌ಟಿಆರ್ ಮೆಚ್ಚುಗೆ ಮಾತು

    ಉಡುಪಿ: ನಟರಾದ ಜ್ಯೂ.ಎನ್‌ಟಿಆರ್ (Junior NTR) ಮತ್ತು ರಿಷಬ್ ಶೆಟ್ಟಿ (Rishab Shetty) ಕುಟುಂಬ ಸಮೇತರಾಗಿ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

    ಶ್ರೀಕೃಷ್ಣ ಮಠಕ್ಕೆ (Udupi Sri Krishna Matha) ಭೇಟಿ ಕೊಟ್ಟ ಜ್ಯೂ.ಎನ್‌ಟಿಆರ್, ಕೃಷ್ಣ, ಮುಖ್ಯಪ್ರಾಣ ದೇವರ ದರ್ಶನ ಪಡೆದರು. ಈ ವೇಳೆ ನಟ ರಿಷಬ್ ಶೆಟ್ಟಿ ಹಾಗೂ ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಜೊತೆಗಿದ್ದರು. ಸ್ಟಾರ್ ನಟರು ಶ್ರಾವಣ ಮಾಸದ ಶನಿವಾರದಂದು ದೇವಾಲಯಕ್ಕೆ ಭೇಟಿ ನೀಡಿ ಕೃಷ್ಣ, ಮುಖ್ಯಪ್ರಾಣ, ಗರುಡ ದೇವರ ದರ್ಶನ ಪಡೆದರು. ಇದನ್ನೂ ಓದಿ: ವಿಪಕ್ಷಗಳ ನಾಯಕರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಒತ್ತಾಯ – ‘ಕೈ’ ನಾಯಕರಿಂದ ‘ರಾಜಭವನ ಚಲೋ’

    ದೇವರ ದರ್ಶನ ಬಳಿಕ ಸುದ್ದಿಗಾರರೊಂದಿಗೆ ಕನ್ನಡದಲ್ಲೇ ಮಾತನಾಡಿದ ಜ್ಯೂ.ಎನ್‌ಟಿಆರ್, ಎಲ್ಲವೂ ಭಗವಾನ್ ಶ್ರೀಕೃಷ್ಣನ ಸ್ಕ್ರೀನ್ ಪ್ಲೇ. 40 ವರ್ಷದಿಂದ ನನ್ನ ಅಮ್ಮನಿಗೆ ಒಂದು ಆಸೆ ಇತ್ತು. ಮಗನನ್ನೊಮ್ಮೆ ಕೃಷ್ಣ ಮಠಕ್ಕೆ ಕರೆದುಕೊಂಡು ಬರಬೇಕು ಎಂಬ ಆಸೆ ಇವತ್ತು ಈಡೇರಿದೆ. ಶ್ರಾವಣ ಮಾಸದ ವಿಶೇಷ ದಿನ ಹರಕೆ ಈಡೇರಿದ್ದು ಸಂತೋಷವಾಗಿದೆ. ರಿಷಬ್ ಶೆಟ್ಟಿ ತುಂಬಾ ಇಷ್ಟಪಟ್ಟ ದೇವರು ಕೊಟ್ಟ ಗೆಳೆಯ. ರಿಷಬ್ ಜೊತೆ ಮಠಕ್ಕೆ ಬಂದಿರುವುದು ಖುಷಿಯಾಗಿದೆ. ನಿರ್ದೇಶಕ ಪ್ರಶಾಂತ್ ನೀಲ್ ಕೂಡ ನಮ್ಮ ಜೊತೆಗಿದ್ದಾರೆ ಎಂದು ಖುಷಿ ಹಂಚಿಕೊಂಡರು.

    ನನ್ನ ಅಮ್ಮನ ಪೂರ್ವಿಕರು ಮೂಲತಃ ಕುಂದಾಪುರದವರು. ಕೃಷ್ಣಮಠಕ್ಕೆ ಭೇಟಿಕೊಟ್ಟು ಮನಃಶಾಂತಿ ಸಿಕ್ಕಿದೆ. ಸರ್ವೇ ಜನ ಸುಖಿನೋ ಭವಂತು ಎಂದು ದೇವರಲ್ಲಿ ಬೇಡಿಕೊಂಡಿದ್ದೇನೆ. ನಾನು ಮನೆಯಲ್ಲಿ ಪ್ರತಿದಿನ ಉಡುಪಿ ಊಟ ಮಾಡುತ್ತೇನೆ. ಕೃಷ್ಣಮಠದಲ್ಲಿ ಮಾಡುವ ಊಟವನ್ನು ನಾನು ಪ್ರತಿದಿನ ಮನೆಯಲ್ಲೇ ಮಾಡುತ್ತೇನೆ. ರಿಷಬ್ ಅವರ ಮುಂದಿನ ಸಿನಿಮಾ ಬಗ್ಗೆ ಎಲ್ಲರಿಗೂ ಗೊತ್ತು. ರಿಷಬ್‌ಗೆ ನ್ಯಾಷನಲ್ ಅವಾರ್ಡ್ ಬಂದಿರೋದು ನನಗೆ ತುಂಬಾ ಖುಷಿ. ಯೋಗ್ಯ ವ್ಯಕ್ತಿಗೆ ಯೋಗ್ಯ ಅವಾರ್ಡ್ ಬಂದಿದೆ ಎಂದು ಅಭಿನಂದಿಸಿದರು. ಇದನ್ನೂ ಓದಿ: BMTC ನಿರ್ವಾಹಕ ಹುದ್ದೆಗೆ ಪರೀಕ್ಷೆ, ಕಟ್ಟುನಿಟ್ಟಿನ ನಿಗಾವಹಿಸುವಂತೆ ಕ್ರಮ – ಕೆಇಎ

  • ಜ್ಯೂನಿಯರ್ ಹುಟ್ಟುಹಬ್ಬಕ್ಕೆ ‘ದೇವರ’ ಚಿತ್ರದ ಫಿಯರ್ ಸಾಂಗ್

    ಜ್ಯೂನಿಯರ್ ಹುಟ್ಟುಹಬ್ಬಕ್ಕೆ ‘ದೇವರ’ ಚಿತ್ರದ ಫಿಯರ್ ಸಾಂಗ್

    ಜ್ಯೂನಿಯರ್  ಎನ್‌ಟಿಆರ್‌ (Junior NTR) ಅಭಿನಯದ ‘ದೇವರ’ (Devara) ಚಿತ್ರದ ಕೆಲಸಗಳು ಬಲು ಜೋರಾಗಿ ಸಾಗುತ್ತಿವೆ. ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರ ಈಗಾಗಲೇ ದೊಡ್ಡ ಮಟ್ಟದ ಹೈಪ್‌ ಕ್ರಿಯೇಟ್‌ ಮಾಡಿದೆ. ಬಾಲಿವುಡ್‌ ನಟಿ ಜಾಹ್ನವಿ ಕಪೂರ್‌ ನಾಯಕಿಯಾಗಿ ನಟಿಸಿದರೆ, ಸೈಫ್‌ ಅಲಿ ಖಾನ್‌ ವಿಲನ್‌ ಆಗಿದ್ದಾರೆ. ವಿಶೇಷ ಏನೆಂದರೆ, ಈ ಚಿತ್ರವು ಎರಡು ಭಾಗಗಳಲ್ಲಿ ತಯಾರಾಗುತ್ತಿದ್ದು, ಮೊದಲ ಪಾರ್ಟ್‌ ಅಕ್ಟೋಬರ್ 10 ರಂದು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆ ಆಗಲಿದೆ.

    ಇದೀಗ NTR ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಮೊದಲ ಹಾಡು ಫಿಯರ್‌ ಸಾಂಗ್‌ ಬಿಡುಗಡೆ ಆಗಿದೆ. ತೆಲುಗಿನಲ್ಲಿ ಸರಸ್ವತಿ ಪುತ್ರ ರಾಮಜೋಗಯ್ಯ ಶಾಸ್ತ್ರಿ, ತಮಿಳಿನಲ್ಲಿ ವಿಷ್ಣು ಎಡವನ್, ಹಿಂದಿಯಲ್ಲಿ ಮನೋಜ್ ಮುಂತಶಿರ್, ಕನ್ನಡದಲ್ಲಿ ವರದರಾಜ್ ಮತ್ತು ಮಲಯಾಳಂನಲ್ಲಿ ಮಂಕೊಂಬು ಗೋಪಾಲಕೃಷ್ಣನ್ ಈ ಹಾಡಿಗೆ ಸಾಹಿತ್ಯ ಒದಗಿಸಿದ್ದಾರೆ. ಅನಿರುದ್ಧ ಈ ಹಾಡಿಗೆ ಧ್ವನಿಯಾಗಿದ್ದಾರೆ.

    ಈ ಹಾಡು ಇತರ ಭಾಷೆಗಳಲ್ಲಿಯೂ ಅಷ್ಟೇ ಶಕ್ತಿಶಾಲಿ ಮತ್ತು ಅದ್ಭುತವಾಗಿದೆ. ಲಿರಿಕಲ್ ವೀಡಿಯೋದಲ್ಲಿ ಅನಿರುದ್ಧ್ ರವಿಚಂದರ್ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಹಾಡಿದ್ದರೆ, ಸಂತೋಷ್ ವೆಂಕಿ ಕನ್ನಡ ಮತ್ತು ಮಲಯಾಳಂನಲ್ಲಿ ಧ್ವನಿ ನೀಡಿದ್ದಾರೆ. ಈ ಮೂಲಕ ದೇವರ ಚಿತ್ರದ ಪ್ರಚಾರಕ್ಕೆ ಈ ಹಾಡಿನ ಮೂಲಕ ಆರಂಭ ಸಿಕ್ಕಿದೆ.

    ದೇವರ ಚಿತ್ರದಲ್ಲಿ ಶೀರ್ಷಿಕೆ ಪಾತ್ರದಲ್ಲಿ ಎನ್‌ಟಿಆರ್‌ ನಟಿಸಿದರೆ, ಇನ್ನುಳಿದಂತೆ ಪ್ರಕಾಶ್ ರಾಜ್, ಶ್ರೀಕಾಂತ್, ಶೈನ್ ಟಾಮ್ ಚಾಕೊ ಮತ್ತು ನರೇನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಎನ್‌ಟಿಆರ್ ಆರ್ಟ್ಸ್ ಮತ್ತು ಯುವಸುಧಾ ಆರ್ಟ್ಸ್‌ನ ಬ್ಯಾನರ್‌ನಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.  ನಂದಮೂರಿ ಕಲ್ಯಾಣ್ ರಾಮ್ ಈ ಬಹು ನಿರೀಕ್ಷಿತ ಚಿತ್ರವನ್ನು ಪ್ರಸೆಂಟ್‌ ಮಾಡುತ್ತಿದ್ದಾರೆ. ಮಿಕ್ಕಿಲಿನೇನಿ ಸುಧಾಕರ್ ಮತ್ತು ಹರಿಕೃಷ್ಣ ಕೆ ಈ ಚಿತ್ರದ ನಿರ್ಮಾಪಕರು. ಶ್ರೀಕರ್ ಪ್ರಸಾದ್ ಸಂಕಲನ, ಆರ್.ರತ್ನವೇಲು ಛಾಯಾಗ್ರಹಣ ಚಿತ್ರಕ್ಕಿದೆ.

  • ಜ್ಯೂನಿಯರ್ ಎನ್.ಟಿ.ಆರ್ ನಟನೆಯ ‘ದೇವರ’ ಚಿತ್ರದ ರಿಲೀಸ್ ಡೇಟ್ ಫಿಕ್ಸ್

    ಜ್ಯೂನಿಯರ್ ಎನ್.ಟಿ.ಆರ್ ನಟನೆಯ ‘ದೇವರ’ ಚಿತ್ರದ ರಿಲೀಸ್ ಡೇಟ್ ಫಿಕ್ಸ್

    ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ ನಟನೆಯ ದೇವರ ಸಿನಿಮಾ 2024ರ ಏಪ್ರಿಲ್ 06ಕ್ಕೆ ಐದು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ ಎಂದು ಹೇಳಲಾಗಿತ್ತು. ಇದೀಗ ಆ ದಿನಾಂಕ ಬದಲಾಗಿದೆ. ಅಕ್ಟೋಬರ್ 10 ರಂದು ದೇವರ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಈ ಮೂಲಕ ಜ್ಯೂನಿಯರ್ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದೆ.

    ದೇವರ (Devara) ಸಿನಿಮಾ ಟೀಮ್ ನಿಂದ ಮತ್ತೊಂದು ಅಪ್ ಡೇಟ್ ಸಿಕ್ಕಿದ್ದು, ಈ ಸಿನಿಮಾವನ್ನು ಕನ್ನಡಕ್ಕೂ ಡಬ್ ಮಾಡಿ ರಿಲೀಸ್ ಮಾಡಲಾಗುತ್ತಿದೆ. ತಮ್ಮ ಪಾತ್ರಕ್ಕೆ ಕನ್ನಡದಲ್ಲಿ ಜ್ಯೂನಿಯರ್ ಅವರೇ ಡಬ್ ಮಾಡುವ ಸಾಧ್ಯತೆ ಇದೆ ಎನ್ನುವ ಮಾಹಿತಿಯೂ ಹರಿದಾಡುತ್ತಿದೆ.

    ಆರ್ ಆರ್ ಆರ್ ಚಿತ್ರದ ನಂತರ ಎನ್ಟಿಆರ್ (Jr NTR) ಅವರು ಕೊರಟಾಲ ಶಿವ (Koratala Shiva) ನಿರ್ದೇಶನದ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜ್ಯೂನಿಯ್ ಹುಟ್ಟು ಹಬ್ಬಕ್ಕೆ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಆ ಪೋಸ್ಟರ್ನಲ್ಲಿ ಜ್ಯೂನಿಯರ್ ಎನ್.ಟಿ.ಆರ್ ಕಪ್ಪು ಬಣ್ಣದ ಲುಂಗಿ ಮತ್ತು ಶರ್ಟ್ ತೊಟ್ಟು,  ಸಮುದ್ರದ ಬಂಡೆಗಳ ಮೇಲೆ ಕೊಡಲಿ ಹಿಡಿದು ನಿಂತು ತೀಕ್ಷ್ಣವಾಗಿ ನೋಡುತ್ತಿದ್ದಾರೆ. ಕಳೆಗೆ ಹೆಣಗಳ ರಾಶಿ ಇದೆ. ಪಕ್ಕದಲ್ಲಿ ಮುರಿದು ಬಿದ್ದ ದೋಣಿಯೊಂದನ್ನೂ ಕಾಣಬಹುದು. ಈ ಪೋಸ್ಟರ್ ಈಗಾಗಲೇ ಜ್ಯೂನಿಯರ್ ಎನ್.ಟಿ.ಆರ್ ಅವರ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ತೀವ್ರ ಕುತೂಹಲ ಮೂಡಿಸಿದ್ದು, ಅವರ ಮಾಸ್ ಲುಕ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು.

     

    ‘ದೇವರ ಚಿತ್ರದ ಮೂಲಕ ಶ್ರೀದೇವಿ ಮಗಳು ಜಾಹ್ನವಿ ಕಪೂರ್ (Jahnavi Kapoor) ಇದೇ ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಜೊತೆಗೆ ಬಾಲಿವುಡ್ನ ಖ್ಯಾತ ನಟ ಸೈಫ್ ಅಲಿ ಖಾನ್ ಸಹ ಖಳನಟನಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ ಪ್ರಕಾಶ್ ರೈ, ಶ್ರೀಕಾಂತ್ ಮುಂತಾದ ಪ್ರತಿಭಾವಂತ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಯುವಸುಧಾ ಆರ್ಟ್ಸ್ ಮತ್ತು ಎನ್ಟಿಆರ್ ಆರ್ಟ್ಸ್ನಡಿ ಮಿಕ್ಕಿಲಿನೇನಿ ಸುಧಾಕರ್ ಮತ್ತು ಹರಿಕೃಷ್ಣ ನಿರ್ಮಿಸುತ್ತಿರುವ ಈ ಚಿತ್ರವನ್ನು ಖ್ಯಾತ ನಟ ನಂದಮೂರಿ ಕಲ್ಯಾಣರಾಮ್ ನಿರ್ಮಿಸುತ್ತಿದ್ದಾರೆ.

  • ‘ದೇವರ’ ಸಿನಿಮಾದಲ್ಲಿಲ್ಲ ಸಾಯಿ ಪಲ್ಲವಿ : ಚಿತ್ರತಂಡ ಸ್ಪಷ್ಟನೆ

    ‘ದೇವರ’ ಸಿನಿಮಾದಲ್ಲಿಲ್ಲ ಸಾಯಿ ಪಲ್ಲವಿ : ಚಿತ್ರತಂಡ ಸ್ಪಷ್ಟನೆ

    ಜ್ಯೂನಿಯರ್ ಎನ್.ಟಿ.ಆರ್ ನಟನೆಯ ‘ದೇವರ’ ಸಿನಿಮಾದಲ್ಲಿ ಪ್ರತಿಭಾವಂತ ನಟಿ ಸಾಯಿ ಪಲ್ಲವಿ (Sai Pallavi) ನಟಿಸಲಿದ್ದಾರೆ ಎಂದು ಸುದ್ದಿಯಾಗಿತ್ತು. ಸಾಯಿ ಪಲ್ಲವಿ ಮತ್ತು ಜ್ಯೂ.ಎನ್.ಟಿ.ಆರ್ ಅಭಿಮಾನಿಗಳು ಈ ವಿಷಯವನ್ನು ಸಂಭ್ರಮಿಸಿದ್ದರು. ಈ ಜೋಡಿ ತೆರೆಯ ಮೇಲೆ ಮೋಡಿ ಮಾಡಲಿದೆ ಎಂದು ಖುಷಿ ಪಟ್ಟಿದ್ದರು. ಆದರೆ, ಆ ಖುಷಿಯು ಠುಸ್ ಪಟಾಕಿಯಾಗಿದೆ. ಈ ಚಿತ್ರದಲ್ಲಿ ಸಾಯಿ ಪಲ್ಲವಿ ನಟಿಸುತ್ತಿಲ್ಲ ಎಂದು ಸ್ವತಃ ಚಿತ್ರತಂಡವೇ ಸ್ಪಷ್ಟನೆ ನೀಡಿದೆ.

    ರ್ ಆರ್ ಆರ್ ಚಿತ್ರದ ನಂತರ ಜ್ಯೂನಿಯರ್ ಎನ್ಟಿಆರ್ (Jr NTR) ಕೊರಟಾಲ ಶಿವ (Koratala Shiva) ನಿರ್ದೇಶನದ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜ್ಯೂನಿಯರ್ ಎನ್ಟಿಆರ್ ಅವರ ಹುಟ್ಟುಹಬ್ಬದಂದು ಚಿತ್ರದ ಹೆಸರನ್ನು ಘೋಷಿಸಲಾಗಿತ್ತು. ಚಿತ್ರಕ್ಕೆ ‘ದೇವರ’ (Devara) ಎಂಬ ಶೀರ್ಷಿಕೆ ಇಡಲಾಗಿದ್ದು, ಚಿತ್ರದ ಫಸ್ಟ್ಲುಕ್ ಪೋಸ್ಟರ್ ಸಹ ಅದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ:ಕಿಚ್ಚನ ಮುಂದಿನ ಚಿತ್ರಕ್ಕೆ ಹೊಸ ನಿರ್ದೇಶಕ: ಅವರನ್ನ ಬಿಟ್ಟು ಇವರಾರು?

    ಈ ಪೋಸ್ಟರ್ನಲ್ಲಿ ಜ್ಯೂನಿಯರ್ ಎನ್.ಟಿ.ಆರ್ ಕಪ್ಪು ಬಣ್ಣದ ಲುಂಗಿ ಮತ್ತು ಶರ್ಟ್ ತೊಟ್ಟು,  ಸಮುದ್ರದ ಬಂಡೆಗಳ ಮೇಲೆ ಕೊಡಲಿ ಹಿಡಿದು ನಿಂತು ತೀಕ್ಷ್ಣವಾಗಿ ನೋಡುತ್ತಿರುವ ಪೋಸ್ಟರ್ ಅದಾಗಿತ್ತು. ಕೆಳೆಗೆ ಹೆಣಗಳ ರಾಶಿ ಇದೆ. ಪಕ್ಕದಲ್ಲಿ ಮುರಿದು ಬಿದ್ದ ದೋಣಿಯೊಂದನ್ನೂ ಕಾಣಬಹುದಾಗಿದೆ. ಜ್ಯೂನಿಯರ್ ಎನ್.ಟಿ.ಆರ್ ಅವರ ಅಭಿಮಾನಿಗಳು ಅವರ ಮಾಸ್ ಲುಕ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

    ಈ ಸಿನಿಮಾದ ನಾಯಕಿ ಕುರಿತು ಹೊಸ ಅಪ್ ಡೇಟ್ ಸಿಕ್ಕಿದ್ದು, ದೇವರ ಚಿತ್ರದ ಮೂಲಕ ಶ್ರೀದೇವಿ ಮಗಳು ಜಾಹ್ನವಿ ಕಪೂರ್ (Jahnavi Kapoor) ಇದೇ ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಜೊತೆಗೆ ಬಾಲಿವುಡ್ನ ಖ್ಯಾತ ನಟ ಸೈಫ್ ಅಲಿ ಖಾನ್ ಸಹ ಖಳನಟನಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ ಪ್ರಕಾಶ್ ರೈ, ಶ್ರೀಕಾಂತ್ ಮುಂತಾದ ಪ್ರತಿಭಾವಂತ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಯುವಸುಧಾ ಆರ್ಟ್ಸ್ ಮತ್ತು ಎನ್ಟಿಆರ್ ಆರ್ಟ್ಸ್ನಡಿ ಮಿಕ್ಕಿಲಿನೇನಿ ಸುಧಾಕರ್ ಮತ್ತು ಹರಿಕೃಷ್ಣ ನಿರ್ಮಿಸುತ್ತಿರುವ ಈ ಚಿತ್ರವನ್ನು ಖ್ಯಾತ ನಟ ನಂದಮೂರಿ ಕಲ್ಯಾಣರಾಮ್ ನಿರ್ಮಿಸುತ್ತಿದ್ದಾರೆ.

    2024ರ ಏಪ್ರಿಲ್ 06ಕ್ಕೆ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಅನಿರುದ್ಧ್ ಸಂಗೀತ, ರತ್ನವೇಲು ಛಾಯಾಗ್ರಹಣ ಮತ್ತು ಶ್ರೀಕರ್ ಪ್ರಸಾದ್ ಅವರ ಸಂಕಲನವಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎನ್‌ಟಿಆರ್ ಅಭಿಮಾನಿ ಆತ್ಮಹತ್ಯೆ: ಪವನ್ ಫ್ಯಾನ್ಸ್ ವಿರುದ್ಧ ಗರಂ

    ಎನ್‌ಟಿಆರ್ ಅಭಿಮಾನಿ ಆತ್ಮಹತ್ಯೆ: ಪವನ್ ಫ್ಯಾನ್ಸ್ ವಿರುದ್ಧ ಗರಂ

    ವನ್ ಕಲ್ಯಾಣ್ (Pawan Kalyan) ಹಾಗೂ ಜೂ.ಎನ್‌ಟಿಆರ್ ಫ್ಯಾನ್ಸ್ ನಡುವೆ ಮತ್ತೆ ಯುದ್ಧ ಶುರುವಾಗಿದೆ. ಸೋಷಿಯಲ್ ಮೀಡಿಯಾದಲ್ಲಂತೂ ಇಬ್ಬರ ಬಳಗದ್ದೇ ಜಗಳ. ಇದೀಗ್ ಎನ್‌ಟಿಆರ್ ಅಭಿಮಾನಿ  ಶ್ಯಾಮ್ ಎನ್ನುವವರು  ಆತ್ಮಹತ್ಯೆ ಮಾಡಿಕೊಂಡಿದ್ದ ವಿಷಯಕ್ಕೆ ಕೊಲೆ (Murder) ಹಣೆಪಟ್ಟಿ ಕಟ್ಟಲಾಗಿದೆ. ಇದನ್ನು ಪವನ್ ಫ್ಯಾನ್ಸ್ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.

    ಜೂ.ಎನ್‌ಟಿಆರ್‌ (Junior NT) ಗೆ ಅತಿ ಹೆಚ್ಚು ಅಭಿಮಾನಿ ಬಳಗ ಇದೆ. `ಎನ್‌ಟಿಆರ್ ಗ್ಲೋಬಲ್ ಸ್ಟಾರ್’ ಹೀಗಂತ ಮೊನ್ನೆ ಪವನ್ ಹೇಳಿದ್ದರು. ಅದರ ಹಿಂದೆಯೇ ಎನ್‌ಟಿಆರ್ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಇದು ಆತ್ಮಹತ್ಯೆ ಅಲ್ಲ, ಪವನ್ ಫ್ಯಾನ್ಸ್ (Fans) ಕೊಲೆ ಮಾಡಿದ್ದಾರೆ ಎಂದು ಎನ್‌ಟಿಆರ್ ಫ್ಯಾನ್ಸ್ ಹೇಳುತ್ತಿದ್ದಾರೆ. ಇದನ್ನೂ ಓದಿ:ಹೊಸ ಸಿನಿಮಾ ಮುನ್ನ ಫ್ಯಾಮಿಲಿ ಜೊತೆ ರಾಜಮೌಳಿ ಟ್ರಿಪ್

    `ಪವನ್‌ಗಿಂತ ಎನ್‌ಟಿಆರ್‌ಗೆ ಹೆಚ್ಚು ಬಳಗ ಇದೆ’ ಎಂದು ಆತ್ಮಹತ್ಯೆ ಮಾಡಿಕೊಂಡಿರುವ ಶಾಮ್ ಸೋಶಿಯಲ್ ಮೀಡಿಯಾದಲ್ಲಿ ಬರೆದಿದ್ದರು. ಅದಕ್ಕೆ ಕೊಲೆ ಮಾಡಲಾಗಿದೆ ಎನ್ನುವ ಮಾತು ಹಬ್ಬಿದೆ. ಸತ್ತಿರುವ ಎನ್‌ಟಿಆರ್ ಅಭಿಮಾನಿ ಕೊರಳಿನಲ್ಲಿ ಗಾಯದ ಗುರುತು, ಜೇಬಲ್ಲಿ ನಶೆ ಪದಾರ್ಥದ ಕವರ್ ಸಿಕ್ಕಿವೆ. ಆತ್ಮಹತ್ಯೆ ಎಂದು ಬಿಂಬಿಸಲು ಹೀಗೆ ಮಾಡಿದ್ದಾರೆ. ಹೀಗಂತ ಎನ್‌ಟಿಆರ್ ಫ್ಯಾನ್ಸ್ ಚರ್ಚಿಸುತ್ತಿದ್ದಾರೆ.

    ಈ ಹಿಂದೆ ಅನೇಕ ಬಾರಿ ಫ್ಯಾನ್ಸ್ ನಡುವೆ ಗಲಾಟೆ ನಡೆದಿವೆ. ಅತ್ತ ಪವನ್ ಹಾಗೂ ಎನ್‌ಟಿಆರ್ ತಮ್ಮ ಕಾಯಕದಲ್ಲಿ ಬಿಜಿಬಿಜಿ. ಈ ಫ್ಯಾನ್ಸ್ ವಾರ್‌ಗೆ ಯಾವಾಗ ಮುಕ್ತಿಯೋ ಗೊತ್ತಿಲ್ಲ. ಒಂದಂತೂ ಸತ್ಯ. ಸ್ಟಾರ್ಸ್ ಆರಾಮಾಗಿರುತ್ತಾರೆ. ಫ್ಯಾನ್ಸ್ ಹೊಡೆದಾಡಿಕೊಂಡು ಸಾಯುತ್ತಾರೆ. ಇದೇ ಸತ್ಯ, ಅದೇ ನಿತ್ಯ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೇಕೆ ರಕ್ತದಿಂದ ನಟನ ಕಟೌಟ್‌ಗೆ ಅಭಿಷೇಕ: ಕೆಜಿಎಫ್‌ನಲ್ಲಿ 9 ಮಂದಿ ಅರೆಸ್ಟ್

    ಮೇಕೆ ರಕ್ತದಿಂದ ನಟನ ಕಟೌಟ್‌ಗೆ ಅಭಿಷೇಕ: ಕೆಜಿಎಫ್‌ನಲ್ಲಿ 9 ಮಂದಿ ಅರೆಸ್ಟ್

    ಜ್ಯೂನಿಯರ್ ಎನ್.ಟಿ. ಆರ್ (Junior NTR) ಮೊನ್ನೆಯಷ್ಟೇ ತಮ್ಮ 40ನೇ ಹುಟ್ಟುಹಬ್ಬವನ್ನು (Birthday) ಆಚರಿಸಿಕೊಂಡಿದ್ದಾರೆ. ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅಭಿಮಾನಿಗಳು ಕೂಡ ನಾನಾ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ. ಆದರೆ ಕರ್ನಾಟಕದ ಕೆಜಿಎಫ್ (KGF) ಸಮೀಪದ ರಾಬರ್ಟ್ ಸನ್ ಪೇಟ್ ನಲ್ಲಿ ಮಾತ್ರ ಹುಟ್ಟುಹಬ್ಬ ಆಚರಿಸಿ ಜೈಲು ಪಾಲಾಗಿದ್ದಾರೆ.

    ಮೇ 20 ರಂದು ಜ್ಯೂನಿಯರ್ ಎನ್.ಟಿ.ಆರ್ ಅವರ ಹುಟ್ಟು ಹಬ್ಬವನ್ನು ಆಚರಿಸಲು ಕೆಲ ಅಭಿಮಾನಿಗಳು ಕೆಜಿಎಫ್ ಬಳಿಯ ರಾಬರ್ಟ್ ಸನ್ ಪೇಟ್ ಬಳಿ ಇರುವ ಚಿತ್ರ ಮಂದಿರಕ್ಕೆ ಬಂದಿದ್ದರು. ಅಂದು ಜ್ಯೂನಿಯರ್ ಅವರ ಸಿನಿಮಾ ಕೂಡ ಪ್ರದರ್ಶನವಾಗುತ್ತಿತ್ತು. ಥಿಯೇಟರ್ ಮುಂದೆ ಹಾಕಿದ್ದ ಪೋಸ್ಟರ್ ಮುಂದೆ ಎರಡು ಕುರಿಗಳನ್ನು ತಂದು ಕತ್ತರಿಸಿದ್ದಾರೆ ಅಭಿಮಾನಿಗಳು. ನಂತರ ರಕ್ತದಿಂದ ಪೋಸ್ಟರ್ ಗೆ ಅಭಿಷೇಕ ಮಾಡಿದ್ದಾರೆ. ಇದನ್ನೂ ಓದಿ:ಶಿವಣ್ಣ ನಟನೆಯ ‘ಬೈರತಿ ರಣಗಲ್‌’ ಸಿನಿಮಾದ ಬಿಗ್‌ ಅಪ್‌ಡೇಟ್

    ಈ ಮಾಹಿತಿ ಪೊಲೀಸರಿಗೆ ಸಿಗುತ್ತಿದ್ದಂತೆಯೇ ಅಭಿಮಾನಿಗಳ ಬಂಧನಕ್ಕೆ (Arrest) ಬಲೆ ಬೀಸಿದ್ದರು. ಇದೀಗ ಅಭಿಮಾನಿಗಳ ಬಂಧನವಾಗಿದ್ದು, ಅವರನ್ನು ಜೈಲಿಗೆ ಕಳುಹಿಸಲಾಗಿದೆ. ನಾಗಭೂಷಣಂ, ಶಿವನಾಗ ರಾಜು, ಅನಿಲ್ ಕುಮಾರ್, ಶಿವ, ನಾಗೇಶ್ವರ ರಾವ್ ಸೇರಿದಂತೆ 9 ಜನ ಅಭಿಮಾನಿಗಳನ್ನು ಪೊಲೀಸರು ಬಂಧಿಸಿದ್ದಾರೆ.

  • ಜ್ಯೂ.ಎನ್‌ಟಿಆರ್‌ಗೆ ಜೋಡಿಯಾದ ಆಲಿಯಾ ಭಟ್

    ಜ್ಯೂ.ಎನ್‌ಟಿಆರ್‌ಗೆ ಜೋಡಿಯಾದ ಆಲಿಯಾ ಭಟ್

    ಆರ್‌ಆರ್‌ಆರ್ ಸೂಪರ್ ಸಕ್ಸಸ್ ಬೆನ್ನಲ್ಲೇ ಜ್ಯೂ.ಎನ್‌ಟಿಆರ್ (Junior Ntr) ಕೊರಟಾಲ ಶಿವ (Kortala Shiva) ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ಬಾಲಿವುಡ್ (Bollywood) ಚಿತ್ರಕ್ಕೆ ಜ್ಯೂ.ಎನ್‌ಟಿಆರ್- ಆಲಿಯಾ ಭಟ್ (Alia Bhatt) ಜೋಡಿಯಾಗಿ ಬರುತ್ತಿದ್ದಾರೆ ಎಂಬ ಸಿಹಿಸುದ್ದಿ ಸಿಕ್ಕಿದೆ. ಇದನ್ನೂ ಓದಿ:ಖುಷ್ಬೂ ಮೊದಲ ಸಂಬಂಧದ ಬಗ್ಗೆ ಶಾಕಿಂಗ್‌ ಹೇಳಿಕೆ ನೀಡಿದ ತೆಲುಗು ನಟಿ

    ತಾರಕ್- ಜ್ವಾನಿ ಕಪೂರ್ ಜೋಡಿಯಾಗಿ ನಟಿಸುತ್ತಿರುವ ‘ಎನ್‌ಟಿಆರ್ 30’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. RRR ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ತಾರಕ್ ಸದ್ಯ ಹೃತಿಕ್ ರೋಷನ್ (Hrithik Roshan) ಜೊತೆ ತೆರೆ ಹಂಚಿಕೊಳ್ಳಲು ಓಕೆ ಎಂದಿದ್ದಾರೆ.

    ವಾರ್ ಪಾರ್ಟ್ 1 ಗಲ್ಲಾಪೆಟ್ಟಿಗೆಯಲ್ಲಿ ಸಕ್ಸಸ್ ಕಂಡಿತ್ತು. ಈಗ ‘ವಾರ್ 2’ ಸಿನಿಮಾ ಮಾಡಲು ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ‘ವಾರ್ 2’ಗಾಗಿ (War 2) ಹೃತಿಕ್ ರೋಷನ್- ಜ್ಯೂ.ಎನ್‌ಟಿಆರ್ ಒಟ್ಟಿಗೆ ನಟಿಸುತ್ತಿದ್ದಾರೆ. ತಾರಕ್ ಜೋಡಿಯಾಲಿ ಬಾಲಿವುಡ್ ರಾಧೆ ಆಲಿಯಾ ಭಟ್ ಕಾಣಿಸಿಕೊಳ್ತಿದ್ದಾರೆ ಎಂಬ ಬಿಟೌನ್ ಗಲ್ಲಿಯಲ್ಲಿ ಹರಿದಾಡುತ್ತಿದೆ.

    RRR ಸಿನಿಮಾದಲ್ಲಿ ತಾರಕ್- ರಾಮ್ ಚರಣ್ (Ram Charan) ಜೊತೆ ಆಲಿಯಾ ಭಟ್ ನಟಿಸಿದ್ದರು. ಈ ಚಿತ್ರ ಸೂಪರ್ ಡೂಪರ್ ಸಕ್ಸಸ್ ಕಂಡಿತ್ತು. ರಾಮ್ ಚರಣ್‌ಗೆ ನಾಯಕಿಯಾಗಿ ಆಲಿಯಾ ಮಿಂಚಿದ್ದರು. ಈಗ ತಾರಕ್‌ಗೆ ಆಲಿಯಾ ನಾಯಕಿಯಾಗಲಿದ್ದಾರೆ.

  • ಜ್ಯೂನಿಯರ್ ಎನ್.ಟಿ.ಆರ್ ಸಿನಿಮಾ ಮೂಲಕ ಜಾಹ್ನವಿ ಕಪೂರ್ ದಕ್ಷಿಣಕ್ಕೆ ಎಂಟ್ರಿ

    ಜ್ಯೂನಿಯರ್ ಎನ್.ಟಿ.ಆರ್ ಸಿನಿಮಾ ಮೂಲಕ ಜಾಹ್ನವಿ ಕಪೂರ್ ದಕ್ಷಿಣಕ್ಕೆ ಎಂಟ್ರಿ

    ‘ಜನತಾ ಗ್ಯಾರೇಜ್​’ ನಂತರ ತೆಲುಗಿನ ಸ್ಟಾರ್​ ನಟ ಜ್ಯೂನಿಯರ್​ ಎನ್​.ಟಿ.ಆರ್ (Junior NTR)​ ಮತ್ತು ನಿರ್ದೇಶಕ ಕೊರಟಾಲ ಶಿವ (Koratala Shiva) ಹೊಸ ಚಿತ್ರವೊಂದಕ್ಕೆ ಕೈ ಜೋಡಿಸಿದ್ದು, ಆ ಚಿತ್ರದ ಮುಹೂರ್ತ ಮಾರ್ಚ್​ ಅಂತ್ಯದ ಹೊತ್ತಿಗೆ ನೆರವೇರಲಿದೆ. ಈ ಚಿತ್ರ ಘೋಷಣೆಯಾದಾಗಿನಿಂದಲೂ, ಹೊಸ ಹೊಸ ಅಪ್​ಡೇಟ್​ ಕೊಡುವಂತೆ ಅಭಿಮಾನಿಗಳು ಬೇಡಿಕೆ ಇಡುತ್ತಲೇ ಇದ್ದಾರೆ. ಸೋಮವಾರ ಚಿತ್ರತಂಡದವರು ಒಂದು ಸಂತೋಷದ ವಿಷಯವನ್ನು ಹಂಚಿಕೊಂಡಿದ್ದು, ಈ ಚಿತ್ರಕ್ಕೆ ನಾಯಕಿಯಾಗಿ ಬಾಲಿವುಡ್​ ನಟಿ ಜಾಹ್ನವಿ ಕಪೂರ್​ (Janhvi Kapoor) ಆಯ್ಕೆಯಾಗಿದ್ದಾರೆ.

    ಸೋಮವಾರ, ಜಾಹ್ನವಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಆಕೆಗೆ ಶುಭಾಶಯ ಕೋರುವ ಪೋಸ್ಟರ್​ವೊಂದನ್ನು ಚಿತ್ರತಂಡದವರು ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಆಕೆಯನ್ನು ಚಿತ್ರತಂಡಕ್ಕೆ ಬರಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಭಾವಿ ಪತ್ನಿ ಬರ್ತ್‌ಡೇಗೆ ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ ಅಭಿಷೇಕ್

    ಜ್ಯೂನಿಯರ್​ ಎನ್​.ಟಿ.ಆರ್​ ಜತೆಗೆ ನಟಿಸಬೇಕು ಎಂಬ ಆಸೆಯನ್ನು ಜಾಹ್ನವಿ ಕೆಲವು ದಿನಗಳ ಹಿಂದೆ ಹೇಳಿಕೊಂಡಿದ್ದರು. ಆ ಆಸೆ ಈಗ ‘ಎನ್.ಟಿ.ಆರ್​ 30’ ಮೂಲಕ ಈಡೇರಲಿದೆ. ಈ ಚಿತ್ರವು ಬರೀ ಆಕ್ಷನ್​ ಚಿತ್ರವಷ್ಟೇ ಅಲ್ಲ, ಒಂದು ಅದ್ಭುತ ಸೆಂಟಿಮೆಂಟ್​ ಚಿತ್ರವಾಗಿರಲಿದೆ ಎಂದು ಚಿತ್ರತಂಡದವರು ಅಭಿಪ್ರಾಯ ಪಟ್ಟಿದ್ದಾರೆ.

    ಯುವಸುಧಾ ಆರ್ಟ್ಸ್​ ಮತ್ತು ಎನ್​.ಟಿ.ಆರ್​ ಆರ್ಟ್ಸ್​ ಸಂಸ್ಥೆಗಳಡಿ ಮಿಕ್ಕಿಲಿನೇನಿ ಸುಧಾಕರ್​ ಮತ್ತು ಹರಿಕೃಷ್ಣ ಕೆ ನಿರ್ಮಿಸುತ್ತಿರುವ ಈ ಚಿತ್ರವನ್ನು ನಂದಮೂರಿ ಕಲ್ಯಾಣ್ ರಾಮ್​ ಅರ್ಪಿಸುತ್ತಿದ್ದಾರೆ. ರತ್ನವೇಲು ಛಾಯಾಗ್ರಹಣ, ‘ರಾಕ್​ಸ್ಟಾರ್​’ ಅನಿರುದ್ಧ್​ ಸಂಗೀತ ಮತ್ತು ಶ್ರೀಕರ್​ ಪ್ರಸಾದ್​ ಅವರ ಸಂಕಲನವಿರುವ ಈ ಚಿತ್ರದ ಬಗ್ಗೆ ಅಭಿಮಾನಿಗಳು ಅಪಾರ ನಿರೀಕ್ಷೆಯನ್ನಿಟ್ಟುಕೊಂಡಿದ್ದು, ಈ ಚಿತ್ರ 2024ರ ಏಪ್ರಿಲ್​ 05ರಂದು ಬಿಡುಗಡೆಯಾಗುತ್ತಿದೆ.