Tag: Junior N.T.R

  • ಕನ್ನಡಕ್ಕೆ ಡಬ್ ಆಗಿ ಬರಲಿದೆ ಜ್ಯೂನಿಯರ್ ನಟನೆಯ ‘ದೇವರ’ ಸಿನಿಮಾ

    ಕನ್ನಡಕ್ಕೆ ಡಬ್ ಆಗಿ ಬರಲಿದೆ ಜ್ಯೂನಿಯರ್ ನಟನೆಯ ‘ದೇವರ’ ಸಿನಿಮಾ

    ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ ನಟನೆಯ ದೇವರ (Devara) ಸಿನಿಮಾ ಟೀಮ್ ನಿಂದ ಮತ್ತೊಂದು ಅಪ್ ಡೇಟ್ ಸಿಕ್ಕಿದೆ. ಮುಂದಿನ ವರ್ಷ ಏಪ್ರಿಲ್ 5ಕ್ಕೆ ರಿಲೀಸ್ ಆಗುವ ಈ ಸಿನಿಮಾವನ್ನು ಕನ್ನಡಕ್ಕೂ ಡಬ್ ಮಾಡಿ ರಿಲೀಸ್ ಮಾಡಲಾಗುತ್ತಿದೆ. ತಮ್ಮ ಪಾತ್ರಕ್ಕೆ ಕನ್ನಡದಲ್ಲಿ ಜ್ಯೂನಿಯರ್ ಅವರೇ ಡಬ್ ಮಾಡುವ ಸಾಧ್ಯತೆ ಇದೆ.

    ಆರ್ ಆರ್ ಆರ್ ಚಿತ್ರದ ನಂತರ ಎನ್ಟಿಆರ್ (Jr NTR) ಅವರು ಕೊರಟಾಲ ಶಿವ (Koratala Shiva) ನಿರ್ದೇಶನದ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜ್ಯೂನಿಯ್ ಹುಟ್ಟು ಹಬ್ಬಕ್ಕೆ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಆ ಪೋಸ್ಟರ್ನಲ್ಲಿ ಜ್ಯೂನಿಯರ್ ಎನ್.ಟಿ.ಆರ್ ಕಪ್ಪು ಬಣ್ಣದ ಲುಂಗಿ ಮತ್ತು ಶರ್ಟ್ ತೊಟ್ಟು,  ಸಮುದ್ರದ ಬಂಡೆಗಳ ಮೇಲೆ ಕೊಡಲಿ ಹಿಡಿದು ನಿಂತು ತೀಕ್ಷ್ಣವಾಗಿ ನೋಡುತ್ತಿದ್ದಾರೆ. ಕಳೆಗೆ ಹೆಣಗಳ ರಾಶಿ ಇದೆ. ಪಕ್ಕದಲ್ಲಿ ಮುರಿದು ಬಿದ್ದ ದೋಣಿಯೊಂದನ್ನೂ ಕಾಣಬಹುದು. ಈ ಪೋಸ್ಟರ್ ಈಗಾಗಲೇ ಜ್ಯೂನಿಯರ್ ಎನ್.ಟಿ.ಆರ್ ಅವರ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ತೀವ್ರ ಕುತೂಹಲ ಮೂಡಿಸಿದ್ದು, ಅವರ ಮಾಸ್ ಲುಕ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು.

    ‘ದೇವರ ಚಿತ್ರದ ಮೂಲಕ ಶ್ರೀದೇವಿ ಮಗಳು ಜಾಹ್ನವಿ ಕಪೂರ್ (Jahnavi Kapoor) ಇದೇ ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಜೊತೆಗೆ ಬಾಲಿವುಡ್ನ ಖ್ಯಾತ ನಟ ಸೈಫ್ ಅಲಿ ಖಾನ್ ಸಹ ಖಳನಟನಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ ಪ್ರಕಾಶ್ ರೈ, ಶ್ರೀಕಾಂತ್ ಮುಂತಾದ ಪ್ರತಿಭಾವಂತ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಯುವಸುಧಾ ಆರ್ಟ್ಸ್ ಮತ್ತು ಎನ್ಟಿಆರ್ ಆರ್ಟ್ಸ್ನಡಿ ಮಿಕ್ಕಿಲಿನೇನಿ ಸುಧಾಕರ್ ಮತ್ತು ಹರಿಕೃಷ್ಣ ನಿರ್ಮಿಸುತ್ತಿರುವ ಈ ಚಿತ್ರವನ್ನು ಖ್ಯಾತ ನಟ ನಂದಮೂರಿ ಕಲ್ಯಾಣರಾಮ್ ನಿರ್ಮಿಸುತ್ತಿದ್ದಾರೆ.

     

    2024ರ ಏಪ್ರಿಲ್ 06ಕ್ಕೆ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಅನಿರುದ್ಧ್ ಸಂಗೀತ, ರತ್ನವೇಲು ಛಾಯಾಗ್ರಹಣ ಮತ್ತು ಶ್ರೀಕರ್ ಪ್ರಸಾದ್ ಅವರ ಸಂಕಲನವಿದೆ.

  • ಅಧಿಕೃತವಾಗಿ ದಕ್ಷಿಣದ ಸಿನಿಮಾಗಳಿಗೆ ಎಂಟ್ರಿ ಕೊಟ್ಟ ಶ್ರೀದೇವಿ ಪುತ್ರಿ

    ಅಧಿಕೃತವಾಗಿ ದಕ್ಷಿಣದ ಸಿನಿಮಾಗಳಿಗೆ ಎಂಟ್ರಿ ಕೊಟ್ಟ ಶ್ರೀದೇವಿ ಪುತ್ರಿ

    ಬಾಲಿವುಡ್ (Bollywood) ಖ್ಯಾತ ನಟಿ ಶ್ರೀದೇವಿ (Sridevi) ಪುತ್ರಿ ಜಾನ್ವಿ ಕಪೂರ್ (Janhvi Kapoor) ದಕ್ಷಿಣದ ಸಿನಿಮಾ ರಂಗಕ್ಕೆ ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿಯಿತ್ತು. ಅದರಲ್ಲೂ ತೆಲುಗು ಮತ್ತು ತಮಿಳು ಸಿನಿಮಾ ರಂಗದ ನಟರ ಚಿತ್ರಗಳಿಗೆ ಜಾನ್ವಿ ಆಯ್ಕೆಯಾಗಲಿದ್ದಾರೆ ಎನ್ನುವ ಸುದ್ದಿ ಹಲವು ತಿಂಗಳಿಂದ ಹರಿದಾಡುತ್ತಿತ್ತು. ಅದೀಗ ನಿಜವಾಗಿದೆ. ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ (Junior N.T.R) ಹೊಸ ಸಿನಿಮಾಗೆ ಜಾನ್ವಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

    ಬಾಲಿವುಡ್ ನಲ್ಲಿ ಜಾನ್ವಿಗೆ ಅಷ್ಟೇನೂ ಬೇಡಿಕೆ ಇರದೇ ಇದ್ದರೂ, ಶ್ರೀದೇವಿ ಪುತ್ರಿ ಎನ್ನುವ ಕಾರಣಕ್ಕಾಗಿ ಹೆಚ್ಚು ಡಿಮ್ಯಾಂಡ್ ನಲ್ಲಿದ್ದಾರೆ. ಅಲ್ಲದೇ, ಸೋಷಿಯಲ್ ಮೀಡಿಯಾ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಅವರು ಹೊಂದಿದ್ದಾರೆ. ಅಪ್ಪನ ಜೊತೆಯಲ್ಲಿ ಬ್ಯುಸಿನೆಸ್ ನಲ್ಲೂ ಜಾನ್ವಿ ತೊಡಗಿಕೊಂಡಿದ್ದಾರೆ. ಹೀಗಾಗಿ ಜಾನ್ವಿ ಮೇಲೆ ಸಾಕಷ್ಟು ನಿರೀಕ್ಷೆ ಕೂಡ ಇದೆ. ಇದನ್ನೂ ಓದಿ:ಬೆಸ್ಟ್ ಫ್ರೆಂಡ್ ಪತಿಯನ್ನೇ ಪಟಾಯಿಸಿದಳು ಎಂದವರಿಗೆ ನಟಿ ಹನ್ಸಿಕಾ ಸ್ಪಷ್ಟನೆ

    ಅಂದಹಾಗೆ  ಜ್ಯೂನಿಯರ್ ಎನ್.ಟಿ.ಆರ್ ನಟನೆಯ ಮುಂದಿನ ಸಿನಿಮಾವನ್ನು ಕೊರಟಾಲ ಶಿವ (Koratala Shiva) ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಜ್ಯೂನಿಯರ್ ನಟನೆಯ 30ನೇ ಸಿನಿಮಾ ಇದಾಗಿದೆ. ಇದೇ ಚಿತ್ರಕ್ಕೆ ನಾಯಕಿಯ ವಿಚಾರದಲ್ಲಿ ಈ ಹಿಂದೆ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ನಟಿಯರ ಹೆಸರು ಕೇಳಿ ಬಂದಿದ್ದವು. ಆದರೆ, ಅಂತಿಮವಾಗಿ ಜಾನ್ವಿ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಅಧಿಕೃತವಾಗಿ ಸಿನಿಮಾ ತಂಡ ಈ ಕುರಿತು ಮಾಹಿತಿ ಕೊಡದೇ ಇದ್ದರೂ, ಚಿತ್ರತಂಡದಿಂದಲೇ ಈ ಸುದ್ದಿ ಸೋರಿಕೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದರಿಂದ ಈ ಆಯ್ಕೆ ನಡೆದಿದೆ ಎಂದು ಹೇಳಲಾಗುತ್ತಿದೆ. ಕೆಲವೇ ದಿನಗಳಲ್ಲೇ ಚಿತ್ರತಂಡದಿಂದಲೇ ಅಧಿಕೃತ ಮಾಹಿತಿ ಹೊರ ಬೀಳುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k