Tag: Junior Chiru

  • ಮೂರು ತಿಂಗಳ ನಂತರ ಅದ್ಧೂರಿ ನಾಮಕರಣ – ಜೂನಿಯರ್ ಚಿರುಗೆ ಎರಡು ನಿಕ್ ನೇಮ್

    ಮೂರು ತಿಂಗಳ ನಂತರ ಅದ್ಧೂರಿ ನಾಮಕರಣ – ಜೂನಿಯರ್ ಚಿರುಗೆ ಎರಡು ನಿಕ್ ನೇಮ್

    ಬೆಂಗಳೂರು: ನಟಿ ಮೇಘನಾ ರಾಜ್ ಸರ್ಜಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮೂರು ತಿಂಗಳ ನಂತರ ಅದ್ಧೂರಿಯಾಗಿ ನಾಮಕರಣ ಮಾಡಲಾಗುವುದು ಎಂದು ಮೇಘನಾ ತಂದೆ ಸುಂದರ್ ರಾಜ್ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಸುಂದರ್ ರಾಜ್, ತಿರುಪತಿ ತಿಮ್ಮಪ್ಪನ ಹರಕೆಯಿಂದ ನನ್ನ ಮೊಮ್ಮಗ ಹುಟ್ಟಿದ್ದಾನೆ. ಕನ್ನಡದ ನೆಲದಲ್ಲಿ ದಸರಾ ಹಬ್ಬದ ವೇಳೆ ಮೊಮ್ಮಗು ಹುಟ್ಟಿರೋದು ಶುಭ ಸೂಚಕ. ನವೆಂಬರ್ 1 ರಂದು ಮೇಘನಾ ರಾಜ್ ಎಲ್ಲರ ಜೊತೆ ಮಾತನಾಡುತ್ತಾರೆ. ಕೊರೊನಾ ಕಾಲದಿಂದಾಗಿ ಮೇಘನಾ ರಾಜ್ ಹೊರಗೆ ಬರುವಂತಿಲ್ಲ ಎಂದರು. ಇದನ್ನೂ ಓದಿ: ಜೂನಿಯರ್ ಚಿರುಗೆ ಬೆಳ್ಳಿ ತೊಟ್ಟಿಲು, ಚಿನ್ನದ ಬಟ್ಟಲು ಖರೀದಿಸಿದ ಧ್ರುವ ಸರ್ಜಾ

    ಅರ್ಜುನ್ ಸರ್ಜಾ ಫೋನ್ ಮಾಡಿ ಮಗುವನ್ನ ಬರಮಾಡಿಕೊಳ್ಳುವದರ ಕುರಿತು ಮಾತಾನಾಡಿದ್ರು. ಅರ್ಜುನ್ ಸರ್ಜಾ ಜೆಂಟಲ್‍ಮ್ಯಾನ್, ಧೃವ ಸರ್ಜಾ ಸೂಪರ್ ಶೋ ಮ್ಯಾನ್. ಮಗು ಹುಟ್ಟಿದ ತಕ್ಷಣ ಎಲ್ಲರಿಗೂ ತೋರಿಸಿ ಸಂಭ್ರಮಿಸಿದರು. ಆದ್ರೆ ತಂದೆ ಮಗಳನ್ನು ನೋಡಿಕೊಳ್ಳುವವನು ವಾಚ್ ಮ್ಯಾನ್. ಆ ಕೆಲಸವನ್ನ ಕೊನೆಯವರೆಗೂ ನಾನು ನಿರ್ವಹಿಸುತ್ತೇನೆ. ಚಿರಂಜೀವಿ ಸರ್ಜಾ ಇಲ್ಲ ಅನ್ನೋದನ್ನ ನಂಬಲು ಆಗುತ್ತಿಲ್ಲ. ಮದುವೆಯಾದ ಎರಡೇ ವರ್ಷದಲ್ಲಿ ಚಿರಂಜೀವಿ ನಮ್ಮನ್ನ ಅಗಲಿ ಹೋದ ಎಂದು ಹೇಳುತ್ತಾ ಭಾವುಕರಾದರು. ಇದನ್ನೂ ಓದಿ: ಮೇಘನಾ, ಜ್ಯೂನಿಯರ್ ಚಿರು ನೋಡಲು ಆಸ್ಪತ್ರೆಗೆ ಬಂದ ಮಲಯಾಳಂ ಸ್ಟಾರ್ ಜೋಡಿ

    ಮಗಳನ್ನ ಕೊಟ್ಟು ಮದುವೆ ಮಾಡಿ ಜವಾಬ್ದಾರಿ ಮುಗಿತು ಅಂದುಕೊಳ್ಳವಾಗಲೇ ಚಿರು ಹೋಗಿ ಬಿಟ್ಟ. ಮದ್ವೆ ಆಗದೆ ಇದ್ರೆ ಯೋಚನೆ ಇರ್ತಾಯಿರಲಿಲ್ಲ. ಈ ರೀತಿಯಾಗಿ ಮಗಳನ್ನು ನೋಡೋಕೆ ಕಷ್ಟ ಆಗುತ್ತದೆ. ಆ ಕುಟುಂಬಕ್ಕೆ ಮಗನ ಕಳೆದುಕೊಂಡ ನೋವಿದೆ, ನಮಗೆ ಅಳಿಯನ ಕಳೆದುಕೊಂಡ ದುಃಖವಿದೆ. ದೇವರು ಸುಂದರವಾದ ಮಗಳನ್ನ ಕೊಟ್ಟ. ಆದ್ರೆ ಆಕೆಗೆ ಸುಂದರವಾದ ಜೀವನ ಕೊಡಲಿಲ್ಲ. ಮಗು ಬೆಳೆಯುವವರೆಗೂ ನನಗೆ ಆಯಸ್ಸು ಕೊಡು ಅಂತ ಕೇಳುತ್ತೇನೆ ಎಂದು ದೇವರಲ್ಲಿ ಪ್ರಾರ್ಥಿಸಿದರು. ಇದನ್ನೂ ಓದಿ: ಥೇಟ್ ಚಿರು ಮೂಗಿನಂತೆ ಮಗುವಿನ ಮೂಗಿದೆ: ಐಶ್ವರ್ಯಾ ಸರ್ಜಾ

    ಎರಡು ನಿಕ್‍ನೇಮ್: ಮಗುವಿಗೇ ಮೇಘನಾಳೇ ತಂದೆ-ತಾಯಿಯಾಗಿದ್ದಾಳೆ. ನಾನು ಪ್ರೀತಿಯಿಂದ ಮಗುವಿಗೆ ಚಿಂಟೂ ಎಂದು ಕರೆಯಬೇಕೆಂದುಕೊಂಡಿದ್ದೇನೆ. ಚಿಂಟೂ ಅಂದ್ರೆ ಚಿಂತೆಯನ್ನ ದೂರ ಮಾಡಲಿ ಅನ್ನೋದಕ್ಕೆ ಆ ಹೆಸರು ಆಯ್ಕೆ ಮಾಡಿದ್ದೇನೆ. ಆದ್ರೆ ಮೇಘನಾ ಮಗುವನ್ನ ಪಾಪು ಎಂದು ಕರೆಯುತ್ತಾಳೆ ಎಂದು ಹೇಳಿದರು. ಇದನ್ನೂ ಓದಿ: ಮೇಘನಾ ಆಸೆಯಂತೆ ಹುಟ್ಟಿದ ತಕ್ಷಣ ಚಿರುಗೆ ಮಗು ತೋರ್ಸಿದ್ದೇವೆ: ಲಕ್ಷ್ಮಿ ಅಮ್ಮ

    ಚಿರು ಪರವಾಗಿ ಮನೆಗೆ ಬಂದ ಅವನ ಮಗನನ್ನ ಗೋದೂಳಿ ಮುಹೂರ್ತದಲ್ಲಿ ಮನೆಗೆ ಕರೆದುಕೊಂಡು ಬಂದಿದ್ದೇವೆ. ನಾವು ಈ ಮಹೂರ್ತವನ್ನ ನೋಡಿ ಮಗುವನ್ನು ತೋರಿಸಿಬೇಕು ಅಂದು ಕೊಂಡಿದ್ದೇವೆ. ಮೊದಲಿಗೆ ಮಗುವನ್ನ ಪತ್ನಿ ಪರಿಮಳ ಅವರು ನೋಡಿದ್ರು. ಆ ನಂತರ ನಮಗೆ ಮಗು ತೋರಿಸಲಾಯ್ತು. ಆಸ್ಪತ್ರೆಗೆ ಬಂದ ವೀರಾಂಜನೇಯ ಧ್ರುವ ಸರ್ಜಾ, ಸಂಜೀವಿನಿ ಬೆಟ್ಟ ಹಿಡಿದಂತೆ ಮಗು ಹಿಡಿದು ಎಲ್ಲರಿಗೂ ತೋರಿಸಿದನು. ಇದನ್ನೂ ಓದಿ: ಚಿರು ಮಗನನ್ನ 20 ವರ್ಷದ ನಂತ್ರ ನಾನೇ ಲಾಂಚ್ ಮಾಡ್ತೀನಿ: ಅರ್ಜುನ್ ಸರ್ಜಾ

    ಈ ಮಗು ಸರ್ಜಾ ಕುಟುಂಬದ ಕುಡಿ. ಚಿರು ಅನುಪಸ್ಥಿತಿಯಲ್ಲಿಯೇ ಮಗುವನ್ನ ನೋಡಿಕೊಳ್ಳುವುದು ತಾಯಿಯ ಕರ್ತವ್ಯ. ಈ ಸ್ಥಿತಿಯಲ್ಲಿ ಮಗಳನ್ನ ಆರೈಕೆ ಮಾಡೋದು ನಮ್ಮ ಕರ್ತವ್ಯ. ಹಾಗಾಗಿ ಜೂನಿಯರ್ ಚಿರು ನಮ್ಮ ಮನೆಯಲ್ಲಿಯೇ ಬೆಳೆಯಲಿದ್ದಾನೆ. ಮಗು ಇಲ್ಲಿಯೂ ಇರುತ್ತೆ, ಅಲ್ಲಿಯೂ ಇರಬೇಕು. ಎರಡೂ ಕುಟುಂಬಗಳ ಆರೈಕೆಯಲ್ಲಿ ಮಗು ಬೆಳೆಯಲಿದೆ. ಮಗುವಿನ ಮೂಗು ತುಂಬಾನೇ ಚೆನ್ನಾಗಿದೆ. ಅದುವೇ ಮಗುವಿನ ಟ್ರೇಡ್ ಮಾರ್ಕ್ ಎಂದರು.

  • ಮೇಘನಾ, ಜ್ಯೂನಿಯರ್ ಚಿರು ನೋಡಲು ಆಸ್ಪತ್ರೆಗೆ ಬಂದ ಮಲಯಾಳಂ ಸ್ಟಾರ್ ಜೋಡಿ

    ಮೇಘನಾ, ಜ್ಯೂನಿಯರ್ ಚಿರು ನೋಡಲು ಆಸ್ಪತ್ರೆಗೆ ಬಂದ ಮಲಯಾಳಂ ಸ್ಟಾರ್ ಜೋಡಿ

    ಬೆಂಗಳೂರು: ನಟಿ ಮೇಘನಾ ರಾಜ್ ಹಾಗೂ ಜ್ಯೂನಿಯರ್ ಚಿರು ನೋಡಲು ಮಲಯಾಳಂ ಸ್ಟಾರ್ ದಂಪತಿ ಇಂದು ಆಸ್ಪತ್ರೆಗೆ ಆಗಮಿಸಿದ್ದಾರೆ.

    ಮಲಯಾಳಂ ಸೂಪರ್ ಸ್ಟಾರ್ ಫಹದ್ ಫಾಸಿಲ್ ಮತ್ತು ನಜ್ರಿಯಾ ದಂಪತಿ ಆಸ್ಪತ್ರೆಗೆ ಧಾವಿಸಿ ತಾಯಿ ಹಾಗೂ ಮಗುವಿನ ಆರೋಗ್ಯ ವಿಚಾರಿಸಿದ್ದಾರೆ. ಈ ಜೋಡಿ ಕೇರಳದಿಂದ ಕಾರಿನಲ್ಲೇ ಆಗಮಿಸಿದೆ.

    ಆಸ್ಪತ್ರೆಯಲ್ಲಿ ಮೇಘನಾ ರಾಜ್ ಮತ್ತು ಮಗು ಆರೋಗ್ಯ ವಿಚಾರಿಸಿದ ಬಳಿಕ ದಂಪತಿ ನಿರ್ದೇಶಕ ಪನ್ನಗಾಭರಣ ಜೊತೆ ಚಿರು ಸರ್ಜಾ ಸಮಾಧಿಗೆ ತೆರಳಿದ್ದಾರೆ. ಕನಕಪುರ ರಸ್ತೆಯ ಧ್ರುವ ಸರ್ಜಾ ಒಡೆತನದ ಬೃಂದಾವನ ಫಾರ್ಮ್ ಹೌಸ್ ನಲ್ಲಿರುವ ಚಿರು ಸಮಾಧಿಗೆ ತೆರಳಿ ನಮಸ್ಕರಿಸಿದ್ದಾರೆ.

    ಮೂರು ದಿನಗಳ ಹಿಂದೆಯಷ್ಟೇ ಮೇಘನಾ ರಾಜ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಿನ್ನೆ ಅರ್ಜುನಾ ಸರ್ಜಾ ಅವರ ಕುಟುಂಬ ಮಗುವನ್ನು ನೋಡಲು ಬಂದಿತ್ತು. ಈ ಸಂದರ್ಭದಲ್ಲಿ ಮಾತನಾಡಿದ್ದ ಅರ್ಜುನ್ ಸರ್ಜಾ, 20 ವರ್ಷದ ಬಳಿಕ ಬಹುಶಃ ನಾನೇ ಚಿರು ಮಗನನ್ನು ಲಾಂಚ್ ಮಾಡುತ್ತೇನೆ. ಸೀಮಂತದ ಸಮಯದಲ್ಲಿ ಹಾಟ್ರ್ಲಿ ವೆಲ್ಕಮ್ ಜೂನಿಯರ್ ಚಿರು ಅಂತ ಎಲ್ಲರೂ ಹಾಡಿದ್ವಿ. ನಮಗೂ ಗಂಡು ಮಗು ಆಗುತ್ತೆ ಅಂತ ಗೊತ್ತಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದರು.

    ಚಿರು ಅಗಲಿಕೆ ಪ್ರತಿಯೊಬ್ಬರಿಗೂ ಜೀರ್ಣಿಸಿಕೊಳ್ಳಲು ಆಗದಷ್ಟು ನೋವಾಗಿತ್ತು. ಈಗ ಎಲ್ಲರ ಮುಖದಲ್ಲಿ ಕಾಂತಿ ಬಂದಿದೆ. ಸಣ್ಣ ನಗು ಕಾಣಿಸಿಕೊಂಡಿದೆ. ಚಿರು ಈ ಸಮಯದಲ್ಲಿ ಇರಬೇಕಾಗಿತ್ತು ಈ ಸಂಭ್ರಮ ನೋಡಬೇಕಿತ್ತು ಎಂದು ಗದ್ಗದಿತರಾದರು. 36 ವರ್ಷದ ಹಿಂದೆ ಶೂಟಿಂಗ್ ನಿಲ್ಲಿಸಿ ಚಿರು ನೋಡಲು ಬೆಂಗಳೂರಿಗೆ ಬಂದಿದ್ದೆ. ಈಗ ಅವನ ಮಗನನ್ನ ನೋಡಲು ಬಂದಿದ್ದೇನೆ ಎಂದು ಅರ್ಜುನ್ ಸರ್ಜಾ ಖುಷಿ ಹಂಚಿಕೊಂಡಿದ್ದರು.

  • ಜೂನಿಯರ್ ಚಿರುಗೆ ಬೆಳ್ಳಿ ತೊಟ್ಟಿಲು, ಚಿನ್ನದ ಬಟ್ಟಲು ಖರೀದಿಸಿದ ಧ್ರುವ ಸರ್ಜಾ

    ಜೂನಿಯರ್ ಚಿರುಗೆ ಬೆಳ್ಳಿ ತೊಟ್ಟಿಲು, ಚಿನ್ನದ ಬಟ್ಟಲು ಖರೀದಿಸಿದ ಧ್ರುವ ಸರ್ಜಾ

    ಬೆಂಗಳೂರು: ಸರ್ಜಾ ಕುಟುಂಬ ಹಾಗೂ ಮೇಘನಾ ರಾಜ್ ಅವರು ಜೂನಿಯರ್ ಚಿರು ಆಗಮನದ ನಿರೀಕ್ಷೆಯಲ್ಲಿದ್ದು, ಮನೆಗೆ ಮುದ್ದಾದ ಮಗು ಬರುವ ಮುನ್ನವೇ ಧ್ರುವ ಸರ್ಜಾ ಅವರು ಬೆಳ್ಳಿ ತೊಟ್ಟಿಲು ಖರೀದಿಸಿದ್ದಾರೆ.

    ಇತ್ತೀಚೆಗೆಷ್ಟೇ ಮೇಘನಾ ಅವರಿಗೆ ಸೀಮಂತ ಸಮಾರಂಭ ನೆರವಿಸಿದ್ದ ಸರ್ಜಾ ಫ್ಯಾಮಿಲಿ ಅಕಾಲಿಕವಾಗಿ  ಕಣ್ಮರೆಯಾಗಿದ್ದ ಕನ್ನಡ ಯುವ ನಟ ಚಿರಂಜೀವಿ ಸರ್ಜಾ ಅವರು ಅಗಲಿಕೆಯ ನೋವಿನಿಂದ ಹೊರ ಬರುವ ಪ್ರಯತ್ನದಲ್ಲಿದೆ. ಇದೇ ವೇಳೆ ಆ ನೋವನ್ನು ಮರೆಸಲು ಜೂನಿಯರ್ ಚಿರುಗೆ ಸ್ವಾಗತವನ್ನು ಕೋರಲು ಸಿದ್ಧರಾಗಿದ್ದಾರೆ.

    ಮುದ್ದು ಮಗು ಮನೆಗೆ ಬರುವ ಮುನ್ನವೇ ಪ್ರೀತಿಯ ಅಣ್ಣನ ಮಗುವಿಗೆ ಭರ್ಜರಿ ಸ್ವಾಗತ ಕೋರಲು ಮುಂದಾಗಿರುವ ಧ್ರುವ ಸರ್ಜಾ, ಸುಮಾರು 10 ಲಕ್ಷ ರೂ. ಮೌಲ್ಯದ ಬೆಳ್ಳಿ ತೊಟ್ಟಲು ಖರೀದಿ ಮಾಡಿದ್ದಾರೆ. ನವರತ್ನ ಜ್ಯೂವೆಲರ್ಸ್ ನಲ್ಲಿ ಬೆಳ್ಳಿ ತೊಟ್ಟಿಲು ಖರೀದಿ ಮಾಡಲಾಗಿದ್ದು, ತೊಟ್ಟಿಲು ಜೊತೆಗೆ ಚಿನ್ನದ ಬಟ್ಟಲನ್ನು ಖರೀದಿ ಮಾಡಲಾಗಿದೆ.

    ಅಕ್ಟೋಬರ್ 17 ರಂದು ಚಿರು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಈ ವೇಳೆ ವಿಡಿಯೋ ಪೋಸ್ಟ್ ಮಾಡಿ ಶುಭ ಕೋರಿದ್ದ ಧ್ರುವ ಸರ್ಜಾ, ಹ್ಯಾಪಿ ಬರ್ತ್ ಡೇ ಚಿರು ಎಂದು ಹಾರ್ಟ್ ಸಿಂಬಲ್ ಹಾಕಿದ್ದರು. ಮೈ ಲವ್ ಫಾರ್ ಎವರ್, ಜೂನಿಯರ್ ಚಿರು ಕಮಿಂಗ್ ಸೂನ್ ಎಂದು ಬರೆದು ತೋಳುಗಳ ಎಮೋಜಿ ಹಾಕಿದ್ದರು.

    ಉಳಿದಂತೆ ಅಕ್ಟೋಬರ್ 4ರಂದು ಧ್ರುವ ಸರ್ಜಾ ಅತ್ತಿಗೆ ಮೇಘನಾ ರಾಜ್ ಅವರ ಸೀಮಂತ ಶಾಸ್ತ್ರ ನೆರವೇರಿದೆ. ಮನೆಯಲ್ಲಿಯೇ ಸರಳವಾಗಿ ಸೀಮಂತ ಕಾರ್ಯಕ್ರಮವನ್ನು ಮಾಡಲಾಗಿದೆ. ಕುಟುಂಬದವರು ಮತ್ತು ಕೆಲ ಆಪ್ತರು ಮಾತ್ರ ಸೀಮಂತ ಶಾಸ್ತ್ರಕ್ಕೆ ಆಗಮಿಸಿದ್ದರು. ಜೊತೆಗೆ ಚಿರು ಇಲ್ಲ ಎಂಬ ನೋವು ಮೇಘನಾಗೆ ಕಾಡದಿರಲಿ ಎಂದು ಚಿರು ಅವರ ದೊಡ್ಡ ಫೋಟೋವನ್ನು ಪಕ್ಕದಲ್ಲೇ ಇಟ್ಟು ಸೀಮಂತ ಮಾಡಿದ್ದು ವಿಶೇಷವಾಗಿತ್ತು. ಆ ಬಳಿಕ ಸರ್ಜಾ ಕುಟುಂಬ ಕೂಡ ವಿಶೇಷವಾಗಿ ಸೀಮಂತ ಶಾಸ್ತ್ರ ನೆರವೇರಿಸಿತ್ತು.