Tag: junior

  • ‘ಮೇರಾ ನಾಮ್ ಜೋಕರ್’ ಚಿತ್ರ ಖ್ಯಾತಿಯ ನಟ ನಿಧನ

    ‘ಮೇರಾ ನಾಮ್ ಜೋಕರ್’ ಚಿತ್ರ ಖ್ಯಾತಿಯ ನಟ ನಿಧನ

    ಬಾಲಿವುಡ್ (Bollywood) ನ ಹೆಸರಾಂತ ಪೋಷಕ ನಟ, ಮೇರಾ ನಾಮ್ ಜೋಕರ್ ಖ್ಯಾತಿಯ ಜೂನಿಯರ್ ಮೆಹಮೂದ್ (Junior Mehmood) ನಿಧನರಾಗಿದ್ದಾರೆ. ಅವರು ಮಾರಕ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಅದಕ್ಕಾಗಿ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೊಹಮೂದ್ ಇಹಲೋಕ (passed away) ತ್ಯಜಿಸಿದ್ದಾರೆ.

    ಐದು ದಶಕಗಳಿಂದಲೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದ ಇವರು, ಇನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 67ರ ವಯಸ್ಸಿನ ಮೊಹಮೂದ್, 4ನೇ ಹಂತದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ಕುರಿತಂತೆ ನಟರ ಪುತ್ರರೇ ಮಾತನಾಡಿದ್ದು, ಮಧ್ಯರಾತ್ರಿ ಮನೆಯಲ್ಲೇ ಕೊನೆಯುಸಿರು ಎಳೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

     

    ದೋ ಔರ್ ದೋ ಪಾಂಚ್ ಸೇರಿದಂತೆ ಸಾಕಷ್ಟು ಹಿಟ್ ಚಿತ್ರಗಳಲ್ಲಿ ನಟಿಸಿರುವ ಇವರ ನಿಧನಕ್ಕೆ ಬಾಲಿವುಡ್ ನ ಸಾಕಷ್ಟು ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ. ಇಂದು ಮಧ್ಯಾಹ್ನ ಅವರ ಅಂತ್ಯ ಸಂಸ್ಕಾರ ಮುಂಬೈ ಸಾಂತಾಕ್ರೂಜ್ ವೆಸ್ಟ್ ನಲ್ಲಿರುವ ಜುಹು ಮುಸ್ಲಿಂ ಸ್ಮಶಾನದಲ್ಲಿ ನಡೆಯಲಿದೆ.

  • ಅಧಿಕೃತವಾಗಿ ದಕ್ಷಿಣದ ಸಿನಿಮಾಗಳಿಗೆ ಎಂಟ್ರಿ ಕೊಟ್ಟ ಶ್ರೀದೇವಿ ಪುತ್ರಿ

    ಅಧಿಕೃತವಾಗಿ ದಕ್ಷಿಣದ ಸಿನಿಮಾಗಳಿಗೆ ಎಂಟ್ರಿ ಕೊಟ್ಟ ಶ್ರೀದೇವಿ ಪುತ್ರಿ

    ಬಾಲಿವುಡ್ (Bollywood) ಖ್ಯಾತ ನಟಿ ಶ್ರೀದೇವಿ (Sridevi) ಪುತ್ರಿ ಜಾನ್ವಿ ಕಪೂರ್ (Janhvi Kapoor) ದಕ್ಷಿಣದ ಸಿನಿಮಾ ರಂಗಕ್ಕೆ ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿಯಿತ್ತು. ಅದರಲ್ಲೂ ತೆಲುಗು ಮತ್ತು ತಮಿಳು ಸಿನಿಮಾ ರಂಗದ ನಟರ ಚಿತ್ರಗಳಿಗೆ ಜಾನ್ವಿ ಆಯ್ಕೆಯಾಗಲಿದ್ದಾರೆ ಎನ್ನುವ ಸುದ್ದಿ ಹಲವು ತಿಂಗಳಿಂದ ಹರಿದಾಡುತ್ತಿತ್ತು. ಅದೀಗ ನಿಜವಾಗಿದೆ. ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ (Junior N.T.R) ಹೊಸ ಸಿನಿಮಾಗೆ ಜಾನ್ವಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

    ಬಾಲಿವುಡ್ ನಲ್ಲಿ ಜಾನ್ವಿಗೆ ಅಷ್ಟೇನೂ ಬೇಡಿಕೆ ಇರದೇ ಇದ್ದರೂ, ಶ್ರೀದೇವಿ ಪುತ್ರಿ ಎನ್ನುವ ಕಾರಣಕ್ಕಾಗಿ ಹೆಚ್ಚು ಡಿಮ್ಯಾಂಡ್ ನಲ್ಲಿದ್ದಾರೆ. ಅಲ್ಲದೇ, ಸೋಷಿಯಲ್ ಮೀಡಿಯಾ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಅವರು ಹೊಂದಿದ್ದಾರೆ. ಅಪ್ಪನ ಜೊತೆಯಲ್ಲಿ ಬ್ಯುಸಿನೆಸ್ ನಲ್ಲೂ ಜಾನ್ವಿ ತೊಡಗಿಕೊಂಡಿದ್ದಾರೆ. ಹೀಗಾಗಿ ಜಾನ್ವಿ ಮೇಲೆ ಸಾಕಷ್ಟು ನಿರೀಕ್ಷೆ ಕೂಡ ಇದೆ. ಇದನ್ನೂ ಓದಿ:ಬೆಸ್ಟ್ ಫ್ರೆಂಡ್ ಪತಿಯನ್ನೇ ಪಟಾಯಿಸಿದಳು ಎಂದವರಿಗೆ ನಟಿ ಹನ್ಸಿಕಾ ಸ್ಪಷ್ಟನೆ

    ಅಂದಹಾಗೆ  ಜ್ಯೂನಿಯರ್ ಎನ್.ಟಿ.ಆರ್ ನಟನೆಯ ಮುಂದಿನ ಸಿನಿಮಾವನ್ನು ಕೊರಟಾಲ ಶಿವ (Koratala Shiva) ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಜ್ಯೂನಿಯರ್ ನಟನೆಯ 30ನೇ ಸಿನಿಮಾ ಇದಾಗಿದೆ. ಇದೇ ಚಿತ್ರಕ್ಕೆ ನಾಯಕಿಯ ವಿಚಾರದಲ್ಲಿ ಈ ಹಿಂದೆ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ನಟಿಯರ ಹೆಸರು ಕೇಳಿ ಬಂದಿದ್ದವು. ಆದರೆ, ಅಂತಿಮವಾಗಿ ಜಾನ್ವಿ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಅಧಿಕೃತವಾಗಿ ಸಿನಿಮಾ ತಂಡ ಈ ಕುರಿತು ಮಾಹಿತಿ ಕೊಡದೇ ಇದ್ದರೂ, ಚಿತ್ರತಂಡದಿಂದಲೇ ಈ ಸುದ್ದಿ ಸೋರಿಕೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದರಿಂದ ಈ ಆಯ್ಕೆ ನಡೆದಿದೆ ಎಂದು ಹೇಳಲಾಗುತ್ತಿದೆ. ಕೆಲವೇ ದಿನಗಳಲ್ಲೇ ಚಿತ್ರತಂಡದಿಂದಲೇ ಅಧಿಕೃತ ಮಾಹಿತಿ ಹೊರ ಬೀಳುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವೈದ್ಯರ ನಿರ್ಲಕ್ಷ್ಯಕ್ಕೆ ಜ್ಯೂನಿಯರ್ ಆರ್ಟಿಸ್ಟ್  ಬಲಿ : ತಾಯಿಯ ಆರೋಪ

    ವೈದ್ಯರ ನಿರ್ಲಕ್ಷ್ಯಕ್ಕೆ ಜ್ಯೂನಿಯರ್ ಆರ್ಟಿಸ್ಟ್ ಬಲಿ : ತಾಯಿಯ ಆರೋಪ

    ವೈದ್ಯರ (Doctor) ನಿರ್ಲಕ್ಷ್ಯ ಕಾರಣದಿಂದಾಗಿ ಜ್ಯೂನಿಯರ್ ಆರ್ಟಿಸ್ಟ್ (Junior Artist)ಒಬ್ಬರು ಬಲಿಯಾದ ಪ್ರಕರಣ ಬೆಂಗಳೂರಿನ ಬಗಲಗುಂಟೆಯಲ್ಲಿ ನಡೆದಿದೆ. ಹದಿನೈದರ ವಯಸ್ಸಿನ ಸಿಂಚನಾ (Sinchana) ಕನ್ನಡ ಸಿನಿಮಾ ಮತ್ತು ಕಿರುತೆರೆಯಲ್ಲಿ ಸಹ ಕಲಾವಿದೆಯಾಗಿ ಕೆಲಸ ಮಾಡುತ್ತಿದ್ದರು. ಕಳೆದ ಎರಡು ದಿನಗಳಿಂದ ಅವರು ವಾಂತಿ ಬೇಧಿಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಮನೆಯ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರ ನಿರ್ಲಕ್ಷ್ಯ ಕಾರಣದಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಸಿಂಚನಾ ತಾಯಿ ನೇತ್ರಾವತಿ (Netravati) ಆರೋಪಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ‘ಎರಡು ದಿನಗಳಿಂದ ನನ್ನ ಮಗಳು ವಾಂತಿ ಬೇಧಿಯಿಂದ ಬಳಲುತ್ತಿದ್ದಳು. ಮೊದಲು ಕ್ಲಿನಿಕ್ ನಲ್ಲಿ ತೋರಿಸಿದ್ದೆವು. ತುಂಬಾ ಸುಸ್ತಾಗಿದ್ದರಿಂದ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸಲಹೆ ನೀಡಿದರು. ಮನೆಯ ಸಮೀಪದಲ್ಲೇ ಇದ್ದ ಖಾಸಗಿ ಆಸ್ಪತ್ರೆಗೆ ಮಗಳನ್ನು ದಾಖಲಿಸಲಾಯಿತು. ಆದರೆ, ಅವಳಿಗೆ ಸರಿಯಾದ ವೇಳೆಗೆ ಚಿಕಿತ್ಸೆ ದೊರೆಯಲಿಲ್ಲ. ಇದೇ ನನ್ನ ಮಗಳ ಸಾವಿಗೆ ಕಾರಣವಾಗಿದೆ’ ಎನ್ನುತ್ತಾರೆ ಸಿಂಚನಾ ತಾಯಿ.

    ಮುಂದುವರೆದು ಮಾತನಾಡಿದ ಅವರು, ‘ಸಿಂಚನಾಗೆ ಕತ್ತಿನ ಭಾಗಕ್ಕೆ ಇಂಜೆಕ್ಷನ್ ನೀಡಿದ್ದರು. ಕತ್ತಿನಲ್ಲಿ ರಕ್ತಸ್ರಾವ ಹೆಚ್ಚಾಯಿತು. ಅದನ್ನು ವೈದ್ಯರ ಗಮನಕ್ಕೆ ತಂದರೂ, ಅವರು ಅದನ್ನು ಗಂಭೀರವಾಗಿ ತಗೆದುಕೊಳ್ಳಲಿಲ್ಲ. ತರಬೇತಿ ವೈದ್ಯರು ನನ್ನ ಮಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ನುರಿತ ವೈದ್ಯರನ್ನು ಕರೆಯಿಸುವಂತೆ ಬೇಡಿಕೊಂಡರೂ, ಅವರು ಕೇಳಲಿಲ್ಲ. ಹಾಗಾಗಿ ನನ್ನ ಮಗಳನ್ನು ಕಳೆದುಕೊಳ್ಳಬೇಕಾಯಿತು’ ನೇತ್ರಾವತಿ. ಇದನ್ನೂ ಓದಿ:ಬಾಲಿವುಡ್‌ನ `ಸಿಟಾಡೆಲ್’ ಸೀರಿಸ್ ಒಪ್ಪಿಕೊಂಡಿದ್ಯಾಕೆ? ಕಾರಣ ಬಿಚ್ಚಿಟ್ಟ ಸಮಂತಾ

    ಈ ಸಾವಿನ ಕುರಿತಂತೆ ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಗತ್ಯ ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕ್ರಮ ತಗೆದುಕೊಳ್ಳುವ ಕುರಿತು ಪೊಲೀಸರು ಆಶ್ವಾಸನೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಎರಡು ವರ್ಷ ಮೊದಲೇ 30ನೇ ಸಿನಿಮಾದ ರಿಲೀಸ್ ಡೇಟ್ ಘೋಷಣೆ ಮಾಡಿದ ಜ್ಯೂ.ಎನ್.ಟಿ.ಆರ್

    ಎರಡು ವರ್ಷ ಮೊದಲೇ 30ನೇ ಸಿನಿಮಾದ ರಿಲೀಸ್ ಡೇಟ್ ಘೋಷಣೆ ಮಾಡಿದ ಜ್ಯೂ.ಎನ್.ಟಿ.ಆರ್

    ಭಿಮಾನಿಗಳ ಜೊತೆ ಸಂಭ್ರಮವನ್ನು ಹಂಚಿಕೊಳ್ಳುವುದರಲ್ಲಿ ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ ಯಾವತ್ತಿಗೂ ಮುಂದು. ಸಮಯ ಸಿಕ್ಕಾಗೆಲ್ಲ ಒಂದಲ್ಲ ಒಂದು ವಿಷಯದ ಬಗ್ಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಯಾವತ್ತಿಗೂ ಅವರು ಸಮಯಪಾಲನೆ ಮಾಡುತ್ತಾರೆ. ಈ ಹೊಸ ವರ್ಷಕ್ಕೂ ಅವರು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದು, ಎರಡು ವರ್ಷ ಮೊದಲೇ ತಮ್ಮ 30ನೇ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ್ದಾರೆ.

    ಆ ಹೊಸ ಸಿನಿಮಾದ ಶೂಟಿಂಗ್ ಇನ್ನೂ ಶುರುವಾಗಿಲ್ಲ, ಚಿತ್ರಕ್ಕೆ ಟೈಟಲ್ ಕೂಡ ಇಟ್ಟಿಲ್ಲ. ಮುಂದಿನ ತಿಂಗಳಿಂದ ಚಿತ್ರೀಕರಣ ಆರಂಭ ಮಾಡುವುದಾಗಿ ಅಷ್ಟೇ ಹೇಳಿದ್ದಾರೆ. ಆದರೂ, ಆ ಸಿನಿಮಾವನ್ನು 5 ಏಪ್ರಿಲ್ 2024ಕ್ಕೆ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಪಕ್ಕಾ ತಯಾರಿ ಮಾಡಿಕೊಂಡೇ ಸಿನಿಮಾದ ಶೂಟಿಂಗ್ ನಲ್ಲಿ ತೊಡಗುವುದರಿಂದ ಅಂದುಕೊಂಡ ದಿನಾಂಕದಂದೇ ಆ ಸಿನಿಮಾವನ್ನು ರಿಲೀಸ್ ಮಾಡುವುದಾಗಿಯೂ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಸಾನ್ಯ ಮನೆಯಿಂದ ಮದುವೆ ಪ್ರಪೋಸಲ್ ಬಂದರೆ ರೂಪೇಶ್ ಶೆಟ್ಟಿ ಹೇಳೋದೇನು?

    ಅಂದಹಾಗೆ ಈ ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದಾರೆ. ವಿಭಿನ್ನ ಚಿತ್ರಗಳನ್ನು ಮಾಡುವುದರಲ್ಲಿ ಶಿವ ಎತ್ತಿದ ಕೈ. ಅದರಲ್ಲೂ ಮಾಸ್ ಸಿನಿಮಾಗಳನ್ನು ಮಾಡುವುದರಲ್ಲಿ ಸಿದ್ಧಹಸ್ತರು. ಹಾಗಾಗಿ ಜ್ಯೂನಿಯರ್ ನಟನೆಯ 30ನೇ ಸಿನಿಮಾ ಕೂಡ ಪಕ್ಕಾ ಮಾಸ್ ಎಂಟರ್ ಟೈನರ್ ಎಂದು ಹೇಳಲಾಗುತ್ತಿದೆ. ಭರ್ಜರಿ ಸಾಹಸ ಸನ್ನಿವೇಶಗಳನ್ನೂ ಈ ಚಿತ್ರ ಒಳಗೊಂಡಿರಲಿದೆ ಎನ್ನುವುದು ಸದ್ಯಕ್ಕಿರುವ ವರ್ತಮಾನ.

    ಈ ಸಿನಿಮಾ ಮುಗಿಸುತ್ತಿದ್ದಂತೆಯೇ ಜ್ಯೂನಿಯರ್ ಎನ್.ಟಿ.ಆರ್ ಮತ್ತೊಂದು ಸಿನಿಮಾಗೆ ತಯಾರಿ ಮಾಡಿಕೊಳ್ಳಬೇಕಿದೆ. ಈ ಸಿನಿಮಾವನ್ನು ಕನ್ನಡದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿದ್ದಾರೆ. ಅಲ್ಲದೇ, ಈ ಸಿನಿಮಾದಲ್ಲಿ ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ಕೂಡ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೊಂದು ಫ್ಯಾಂಟಸಿ ಕಥೆಯನ್ನು ಆಧರಿಸಿದ ಸಿನಿಮಾ ಎಂದು ಹೇಳಲಾಗುತ್ತಿದೆ. ಈ ಚಿತ್ರದ ಕುರಿತು ಅಷ್ಟೇನೂ ಮಾಹಿತಿಯನ್ನು ಜ್ಯೂನಿಯರ್ ಇನ್ನೂ ಹಂಚಿಕೊಂಡಿಲ್ಲ. ಇದು ಅವರ 31ನೇ ಸಿನಿಮಾ ಆಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಬ್ರಹ್ಮಾಸ್ತ್ರ ಇವೆಂಟ್ ಕ್ಯಾನ್ಸಲ್: ನಟ ಜ್ಯೂ.ಎನ್.ಟಿ.ಆರ್ ಗೆ ಈಗಿನಿಂದಲೇ ಅಡ್ಡಗಾಲು ಹಾಕುತ್ತಿದ್ದಾರಾ ತೆಲಂಗಾಣ ಸಿಎಂ ಕೆಸಿಆರ್

    ಬ್ರಹ್ಮಾಸ್ತ್ರ ಇವೆಂಟ್ ಕ್ಯಾನ್ಸಲ್: ನಟ ಜ್ಯೂ.ಎನ್.ಟಿ.ಆರ್ ಗೆ ಈಗಿನಿಂದಲೇ ಅಡ್ಡಗಾಲು ಹಾಕುತ್ತಿದ್ದಾರಾ ತೆಲಂಗಾಣ ಸಿಎಂ ಕೆಸಿಆರ್

    ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ವಿರುದ್ಧ ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ ಫ್ಯಾನ್ಸ್ ಗರಂ ಆಗಿದ್ದಾರೆ. ತಮ್ಮ ನೆಚ್ಚಿನ ನಟನಿಗೆ ಕೆಸಿಆರ್ ಸುಖಾಸುಮ್ಮನೆ ತೊಂದರೆ ಕೊಡುತ್ತಿದ್ದಾರೆ ಎಂದು ಫ್ಯಾನ್ಸ್ ಆರೋಪ ಮಾಡಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧದ ಚರ್ಚೆ ಕೂಡ ನಡೆದಿದ್ದು, ಕೆಸಿಆರ್ ನಡೆಯನ್ನು ವ್ಯಾಪಕವಾಗಿ ಖಂಡಿಸುತ್ತಿದ್ದಾರೆ. ಜ್ಯೂನಿಯರ್ ಫ್ಯಾನ್ಸ್ ಸಿಎಂ ಮೇಲೆ ಗರಂ ಆಗಿರುವುದಕ್ಕೆ ಕಾರಣವೂ ಇದೆ.

    ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಕಾಂಬಿನೇಷನ್ ನ ಬ್ರಹ್ಮಾಸ್ತ್ರ ಸಿನಿಮಾದ ಬೃಹತ್ ಇವೆಂಟ್ ಹೈದರಾಬಾದ್ ನಲ್ಲಿ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಜ್ಯೂನಿಯರ್ ಎನ್.ಟಿ.ಆರ್ ಆಗಮಿಸಬೇಕಿತ್ತು. ಜ್ಯೂನಿಯರ್ ಫ್ಯಾನ್ಸ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ತುದಿಗಾಲಲ್ಲಿ ನಿಂತಿದ್ದರು. ಈ ಕಾರ್ಯಕ್ರಮದಿಂದ ಜ್ಯೂನಿಯರ್ ಗೆ ಮತ್ತಷ್ಟು ಪ್ರಚಾರ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಪೊಲೀಸರನ್ನು ಬಳಸಿಕೊಂಡು ಇವೆಂಟ್ ಕ್ಯಾನ್ಸಲ್ ಮಾಡಿಸಿದ್ದಾರಂತೆ ಸಿಎಂ. ಹಾಗಂತ ಅಭಿಮಾನಿಗಳು ಆರೋಪ ಮಾಡುತ್ತಿದ್ದಾರೆ. ಇದನ್ನೂ ಓದಿ: ಜಶ್ವಂತ್‍ನಿಂದ ನಂದಿನಿ ಅಂತರ ಕಾಯ್ದುಕೊಳ್ಳುತ್ತಿರುವುದ್ಯಾಕೆ..?

    ಇತ್ತೀಚೆಗಷ್ಟೇ ಜ್ಯೂನಿಯರ್ ಎನ್.ಟಿ.ಆರ್ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಈ ಸಮಯದಲ್ಲಿ ಅಮಿತ್ ಶಾ ಕೂಡ ಜ್ಯೂನಿಯರ್ ಬಗ್ಗೆ ಹಾಡಿ ಹೊಗಳಿದ್ದರು. ರಾಜಕೀಯ ಕುಟುಂಬದ ಹಿನ್ನೆಲೆಯಿಂದಲೇ ಬಂದಿರುವ ಜ್ಯೂನಿಯರ್ ಬಿಜೆಪಿ ಸೇರುತ್ತಾರೆ ಎನ್ನುವ ಸುದ್ದಿ ಕೂಡ ತೆಲಂಗಾಣದಲ್ಲಿ ಜೋರಾಗಿದೆ. ಇದು ತೆಲಂಗಾಣ ಸಿಎಂ ಕೆಸಿಆರ್ ಅವರನ್ನು ನಿದ್ದೆಗೆಡಿಸಿದೆ ಎಂದು ಹೇಳಲಾಗುತ್ತಿದೆ. ಬ್ರಹ್ಮಾಸ್ತ್ರ ಸಿನಿಮಾದ ಇವೆಂಟ್ ಗೆ ಸಿಲ್ಲಿ ಕಾರಣ ಕೊಟ್ಟು ಕ್ಯಾನ್ಸಲ್ ಆಗುವಂತೆ ಮಾಡಲಾಗಿದೆ.

    ಸದ್ಯ ಗಣಪತಿ ಹಬ್ಬವೂ ಇರುವುದರಿಂದ, ಹೆಚ್ಚಿನ ಸಂಖ್ಯೆಯಲ್ಲಿ ಭದ್ರತೆ ಅವಶ್ಯಕತೆಯಿದ್ದು, ಲಕ್ಷಾಂತರ ಜನರು ಸೇರುವ ಬ್ರಹ್ಮಾಸ್ತ್ರ ಸಿನಿಮಾದ ಇವೆಂಟ್ ಗೆ ಭದ್ರತೆ ನೀಡುವುದು ಕಷ್ಟ. ಹಾಗಾಗಿ ಕಾರ್ಯಕ್ರಮವನ್ನು ಕ್ಯಾನ್ಸಲ್ ಮಾಡಿಕೊಳ್ಳಿ ಎಂದು ಪೊಲೀಸರು ಸೂಚಿಸಿದ್ದಾರೆ. ಇವೆಂಟ್ ಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದ ತಂಡಕ್ಕೆ ಈ ನಡೆಯಿಂದ ಬೇಸರವುಂಟಾಗಿದೆ.

    Live Tv
    [brid partner=56869869 player=32851 video=960834 autoplay=true]

  • ದಿಂಬಿನೊಂದಿಗೆ ಸೆಕ್ಸ್ ಮಾಡುವಂತೆ ಒತ್ತಾಯ – ರ‍್ಯಾಗಿಂಗ್ ಭಯಾನಕ ಸ್ಟೋರಿ ಬಿಚ್ಚಿಟ್ಟ ಜ್ಯೂನಿಯರ್

    ದಿಂಬಿನೊಂದಿಗೆ ಸೆಕ್ಸ್ ಮಾಡುವಂತೆ ಒತ್ತಾಯ – ರ‍್ಯಾಗಿಂಗ್ ಭಯಾನಕ ಸ್ಟೋರಿ ಬಿಚ್ಚಿಟ್ಟ ಜ್ಯೂನಿಯರ್

    ಭೋಪಾಲ್: ಮಧ್ಯಪ್ರದೇಶದ ಪ್ರಸಿದ್ಧ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಸೀನಿಯರ್ ವಿದ್ಯಾರ್ಥಿಗಳ ಗುಂಪೊಂದು ಜ್ಯೂನಿಯರ್ಸ್ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದು, ಅವಾಚ್ಯ ಶಬ್ಧದಿಂದ ನಿಂದಿಸಿದ್ದಾರೆ. ಜೊತೆಗೆ ದಿಂಬಿನೊಂದಿಗೆ ಸೆಕ್ಸ್ ಮಾಡಲು ಒತ್ತಾಯಿಸಿದ್ದಾರೆ ಎಂದು ಕಿರಿಯ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

    ಹೌದು, ಇಂದೋರ್‌ನ ಎಂಜಿಎಂ ಮೆಡಿಕಲ್ ಕಾಲೇಜಿನಲ್ಲಿ ಹಿರಿಯ ವೈದ್ಯಕೀಯ ಪದವಿ ಮತ್ತು ಬ್ಯಾಚುಲರ್ ಆಫ್ ಸರ್ಜರಿ ವಿದ್ಯಾರ್ಥಿಗಳು ಕೆಲವು ಕಿರಿಯ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಮಾಡಿರುವ ಆರೋಪವನ್ನು ಎದುರಿಸುತ್ತಿದೆ. ಈ ಕುರಿತಂತೆ ಕಿರಿಯ ವಿದ್ಯಾರ್ಥಿಯೋರ್ವ ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ಯುಜಿಸಿ) ಆ್ಯಂಟಿ ರ‍್ಯಾಗಿಂಗ್ ಸಹಾಯವಾಣಿಗೆ ಕರೆ ಮಾಡಿ ತಮಗಾದ ಕಹಿ ಘಟನೆ ಬಗ್ಗೆ ವಿವರಿಸಿದ್ದಾರೆ. ಹಿರಿಯ ಎಂಬಿಬಿಎಸ್ ವಿದ್ಯಾರ್ಥಿಗಳು ಫ್ಲ್ಯಾಟ್‍ಗಳಲ್ಲಿ ದಿಂಬಿನ ಜೊತೆಗೆ ಸೆಕ್ಸ್ ಮಾಡುವಂತೆ ಮತ್ತು ಮತ್ತು ಬ್ಯಾಚ್‍ಮೇಟ್‍ಗಳಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುವಂತೆ, ಅಲ್ಲದೇ ಬಲವಂತವಾಗಿ ಪರಸ್ಪರ ಕಪಾಳಮೋಕ್ಷ ಮಾಡಿಸಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: 3,419 ಕೋಟಿ ರೂ. ವಿದ್ಯುತ್ ಬಿಲ್ ಕಂಡು ಮಹಿಳೆಗೆ ಶಾಕ್ – ಮಾವ ಆಸ್ಪತ್ರೆಗೆ ದಾಖಲು

    ರ‍್ಯಾಗಿಂಗ್ ಮೂಲಕ ವಿದ್ಯಾರ್ಥಿಗಳಿಗೆ ಮುಜುಗರವನ್ನುಂಟು ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಇದೀಗ ಪೊಲೀಸರು ಆರೋಪಿಗಳ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಈ ಬಗ್ಗೆ ತನಿಖೆ ಮುಂದುವರೆಸಿದ್ದಾರೆ ಎಂದು ಸ್ಥಳೀಯ ಪೊಲೀಸ್ ಠಾಣೆ ಪ್ರಭಾರಿ ತೆಹಜೀಬ್ ಖಾಜಿ ಹೇಳಿದ್ದಾರೆ.  ಇದನ್ನೂ ಓದಿ: ಹಿಂದೂ, ಬಿಜೆಪಿ ಕಾರ್ಯಕರ್ತರನ್ನು ಹೆದರಿಸುವ ಷಡ್ಯಂತ್ರ – ತನಿಖೆ ನಡೆಸಿ ಉಗ್ರ ಶಿಕ್ಷೆಯಾಗಬೇಕು: ಶೋಭಾ ಕರಂದ್ಲಾಜೆ

    Live Tv
    [brid partner=56869869 player=32851 video=960834 autoplay=true]

  • ಪ್ರೀತಿ ತಂದಿಟ್ಟ ಆಪತ್ತು- ಒಂದು ಹುಡುಗಿಗಾಗಿ ಇಬ್ಬರ ಕಿತ್ತಾಟ..!

    ಪ್ರೀತಿ ತಂದಿಟ್ಟ ಆಪತ್ತು- ಒಂದು ಹುಡುಗಿಗಾಗಿ ಇಬ್ಬರ ಕಿತ್ತಾಟ..!

    ಮಡಿಕೇರಿ: ಲವ್ ವಿಚಾರದಲ್ಲಿ ಸೀನಿಯರ್-ಜೂನಿಯರ್ ನಡುವೆ ನಡೆಯುತ್ತಿದ್ದ ಜಗಳ ಈಗ ಒಬ್ಬನ ಜೀವಕ್ಕೆ ಕುತ್ತು ತಂದಿಟ್ಟಿದೆ. ಒಂದು ಹುಡುಗಿಗಾಗಿ ಇಬ್ಬರು ಕಿತ್ತಾಡಿ, ಈಗ ಓರ್ವ ಆಸ್ಪತ್ರೆ ಸೇರಿ ಸಾವು ನೋವಿನ ಮಧ್ಯೆ ಹೋರಾಡುತ್ತಿದ್ದಾನೆ.

    ಮೈಸೂರಿನ ಎಸ್‍ಬಿಐ ಬ್ಯಾಂಕ್‍ನಲ್ಲಿ ಯೂನಿಟ್ ಮ್ಯಾನೇಜರ್ ಆಗಿರೋ ರಾಕೇಶ್ (26) ಹಲ್ಲೆಗೊಳಗಾದ ಯುವಕ. ಸೋಮವಾರಪೇಟೆ ತಾಲೂಕಿನ ಊರುಬೆಟ್ಟ ಗ್ರಾಮದ 17 ವರ್ಷದ ಅಪ್ರಾಪ್ತ, ರಾಕೇಶ್ ಮೇಲೆ ದೊಣ್ಣೆಯಿಂದ ಭಯಾನಕವಾಗಿ ಹಲ್ಲೆ ಮಾಡಿದ್ದಾನೆ. ಸೋಮವಾರಪೇಟೆ ತಾಲೂಕಿನ ಗ್ರಾಮವೊಂದರ ಹುಡುಗಿ ಹಾಗೂ ರಾಕೇಶ್ ಪ್ರೀತಿಸುತ್ತಿದ್ದರು.

    ಆದ್ರೆ ಇವರಿಬ್ಬರ ಪ್ರೀತಿಗೆ ಅಪ್ರಾಪ್ತ ಎಂಟ್ರಿ ಕೊಟ್ಟಿದ್ದ. ಇದರಿಂದ ರಾಕೇಶ್ ಹಾಗೂ ಅಪ್ರಾಪ್ತ ಮಧ್ಯೆ ಕಳೆದ ಒಂದು ವರ್ಷದಿಂದಲೂ ಶೀತಲ ಸಮರ ನಡೆಯುತ್ತಲೇ ಇತ್ತು. ಮೊದಲೆಲ್ಲಾ ಫೋನ್‍ನಲ್ಲಿ ರಾಕೇಶ್ ಆ ಬಾಲಕನಿಗೆ ಬುದ್ದಿ ಹೇಳಿದ್ದ. ಆದ್ರೆ ಯಾವುದಕ್ಕೂ ಬಾಲಕ ಹೆದರದೇ ತನ್ನ ಹಳೇ ಚಾಳಿಯನ್ನೇ ಮುಂದುವರಿಸಿದ್ದನು.

    ಈ ಬಾಲಕನಿಗೆ ನೇರವಾಗಿ ಬುದ್ಧಿ ಹೇಳೋಣಾ ಎಂದು ಮಕ್ಕಳಗುಡಿ ಬೆಟ್ಟಕ್ಕೆ ರಾಕೇಶ್ ತೆರಳಿದ್ದನು. ಅಲ್ಲಿ ಬಾಲಕ ದೊಣ್ಣೆಯಿಂದ ರಾಕೇಶ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಈ ಹಲ್ಲೆಯಿಂದ ರಾಕೇಶ್‍ಗೆ ಗಂಭೀರ ಗಾಯಗಳಾಗಿದ್ದು ಆತ ಸಾವು ಬದುಕಿನ ಮಧ್ಯೆ ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv