Tag: june

  • ಜೂನ್‌ನಲ್ಲಿ ಸಿಧು ಮೂಸೆವಾಲಾ ಕೊನೆಯ ಹಾಡು ಬಿಡುಗಡೆಯಾಗುವ ನಿರೀಕ್ಷೆಯಿದೆ: ಸಲೀಮ್ ಮರ್ಚೆಂಟ್

    ಜೂನ್‌ನಲ್ಲಿ ಸಿಧು ಮೂಸೆವಾಲಾ ಕೊನೆಯ ಹಾಡು ಬಿಡುಗಡೆಯಾಗುವ ನಿರೀಕ್ಷೆಯಿದೆ: ಸಲೀಮ್ ಮರ್ಚೆಂಟ್

    ಚಂಢೀಗಡ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಪಂಜಾಬ್‍ನ ಮಾನ್ಸಾ ಜಿಲ್ಲೆಯಲ್ಲಿ ದುಷ್ಕರ್ಮಿಗಳಿಂದ ಭಾನುವಾರ ಗುಂಡಿಟ್ಟು ಹತ್ಯೆಗೈಯ್ಯಲಾಗಿತ್ತು. ಅವರು ಸಾಯುವ ಮುನ್ನ ದೇಸೀ ಹಾಡೊಂದನ್ನು ಹಾಡಿದ್ದರು. ಆ ಹಾಡನ್ನು ಇದೇ ಜೂನ್‍ನಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಬಾಲಿವುಡ್‍ನ ಖ್ಯಾತ ಗಾಯಕ ಸಲೀಮ್ ಮರ್ಚೆಂಟ್ ತಿಳಿಸಿದ್ದಾರೆ.

     

    View this post on Instagram

     

    A post shared by Salim Merchant (@salimmerchant)

    ಸಿಧು ಅವರ ಹುಟ್ಟುಹಬ್ಬದ ಯೋಜನೆಗಳ ಬಗ್ಗೆ ಅವರು ಮಾತನಾಡಿ, ಸಿಧು ಸಾವಿನ ಬಗ್ಗೆ ಸಂತಾಪ ವ್ಯಕ್ತಪಡಿಸಿದರು. ಗಾಯಕ ತನ್ನ ಹುಟ್ಟುಹಬ್ಬದಂದು ಕೆಲವು ವಿಶೇಷ ಯೋಜನೆಗಳನ್ನು ಹೊಂದಿದ್ದರು. ಜೂನ್ 11 ರಂದು ಸಿಧು ಅವರ ಜನ್ಮದಿನ ಬರುತ್ತದೆ. ಈ ಬಾರಿ ಅವರು 29 ವರ್ಷಕ್ಕೆ ಕಾಲಿಡುತ್ತಿದ್ದರು. ಸದ್ಯದಲ್ಲೇ ಈ ಹಾಡಿನ ಪೋಸ್ಟರ್ ರಿಲೀಸ್ ಮಾಡುವ ಪ್ಲಾನ್ ಮಾಡಿದ್ದರು. ಆದರೆ ಅದಕ್ಕೂ ಮುನ್ನ ಇಂಥದ್ದೊಂದು ಘಟನೆ ನಡೆದಿದ್ದು, ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಸಿಧು ಮೂಸೇವಾಲಾ ಈ ಬಾರಿ ದೇಸೀ ಪಂಜಾಬಿ ಶೈಲಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸಲು ಯೋಜಿಸಿದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ಮುಖ್ಯಮಂತ್ರಿ ಚಂದ್ರು ಗುಡ್ ಬೈ

    ಸಿಧು ತುಂಬಾ ಪ್ರೀತಿಯಿಂದ ಮಾತನಾಡುವ ಗೌರವಾನ್ವಿತ ವ್ಯಕ್ತಿ. ನಾನು ಟಿಪಿಕಲ್ ಪಂಜಾಬಿ ಹಾಡೊಂದನ್ನು ಕಂಪೋಸ್ ಮಾಡಿದ್ದೆ, ಆ ನಂತರ ಸಿಧು ಮಾತ್ರ ಈ ಹಾಡನ್ನು ಚೆನ್ನಾಗಿ ಹಾಡಬಲ್ಲ ಎಂದು ನನಗೆ ಖಾತ್ರಿಯಾಗಿತ್ತು. ಆದರೆ ದೇವರ ಇಚ್ಛೆಯ ಬೇರೆಯಾಗಿತ್ತು ಎಂದರು. ಇದನ್ನೂ ಓದಿ: ಗ್ರಾಮದೇವತೆಗೆ ಉಡಿ ತುಂಬುವಾಗ ದಲಿತರಿಗೆ ಬಹಿಷ್ಕಾರ ಆರೋಪ

    ಸಿಧು ಅವರ ಹಾಡು ಇದೇ ಜೂನ್‍ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಾವು ಈ ಹಾಡನ್ನು ಬಿಡುಗಡೆ ಮಾಡಬೇಕಾಗಿತ್ತು. ಆದರೆ ಸಿಧು ಚುನಾವಣೆಯಲ್ಲಿ ಬ್ಯುಸಿಯಾದರು ಮತ್ತು ಅದರ ಬಿಡುಗಡೆಯು ಸ್ಥಗಿತಗೊಂಡಿತು. ನಂತರ ಜೂನ್‍ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದೆವು, ಆದರೆ ಅದಕ್ಕೂ ಮುನ್ನ ಈ ಅವಘಡ ಸಂಭವಿಸಿದೆ ಎಂದರು.

  • ಅನ್‌ಲಾಕ್ ಬಳಿಕ ಆರ್ಥಿಕತೆ ಸುಧಾರಣೆ – ಜಿಎಸ್‌ಟಿ ಸಂಗ್ರಹದಲ್ಲಿ ಹೆಚ್ಚಳ

    ಅನ್‌ಲಾಕ್ ಬಳಿಕ ಆರ್ಥಿಕತೆ ಸುಧಾರಣೆ – ಜಿಎಸ್‌ಟಿ ಸಂಗ್ರಹದಲ್ಲಿ ಹೆಚ್ಚಳ

    ನವದೆಹಲಿ : ಲಾಕ್‌ಡೌನ್‌ನಿಂದ ಹಳಿ ತಪ್ಪಿದ್ದ ಆರ್ಥಿಕ‌ ವ್ಯವಸ್ಥೆ ಅನ್‌ಲಾಕ್‌ ಬಳಿಕ ಮತ್ತೆ ಉತ್ತಮ ಪರಿಸ್ಥಿತಿಗೆ ವಾಪಸಾಗುತ್ತಿದೆ. ಕೇಂದ್ರ ಹಣಕಾಸು ಇಲಾಖೆ ಜಿಎಸ್‌ಟಿ ಸಂಗ್ರಹದ ಮಾಹಿತಿ ಬಿಡುಗಡೆ ಮಾಡಿದ್ದು, ಜೂನ್ ತಿಂಗಳಲ್ಲಿ ಒಟ್ಟು 90,918 ಕೋಟಿ ರೂ. ಸಂಗ್ರಹವಾಗಿದೆ ಎಂದು ಹೇಳಿದೆ.

    ಲಾಕ್‌ಡೌನ್‌ ಪರಿಣಾಮದಿಂದ ಏಪ್ರಿಲ್ ನಲ್ಲಿ 32,294 ಕೋಟಿ ರೂ. ಹಾಗೂ ಮೇ ತಿಂಗಳಿನಲ್ಲಿ 62,009 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು ಆದರೆ ಆರ್ಥಿಕ ಚಟುವಟಿಕೆಗಳು ನಿಧಾನವಾಗಿ ವೇಗ ಪಡೆದುಕೊಳ್ಳುತ್ತಿದ್ದು ಜೂನ್ ನಲ್ಲಿ ಜಿಎಸ್‌ಟಿ ಸಂಗ್ರಹ ಗಣನೀಯವಾಗಿ ಸುಧಾರಿಸಿದೆ.

    ಕೇಂದ್ರದ ಜಿಎಸ್‌ಟಿ 18,980 ಕೋಟಿ ರೂ., ರಾಜ್ಯದ ಜಿಎಸ್‌ಟಿ 23,970 ಕೋಟಿ ರೂ., ಹಾಗೂ ಆಮದು ವಸ್ತುಗಳ ಮೇಲಿನ ಜಿಎಸ್‌ಟಿ 15,709 ಕೋಟಿ ರೂ., ಒಳಗೊಂಡಂತೆ ಐಜಿಎಸ್‌ಟಿ 40,302 ಕೋಟಿ ರೂ., 7,655 ಕೋಟಿ ರೂ. ಸೆಸ್ ಸಂಗ್ರಹ ಸೇರಿ ಜೂನ್ ತಿಂಗಳಲ್ಲಿ 90,918 ಕೋಟಿ ರೂ. ಜಿಎಸ್‌ಟಿ  ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

    ಐಜಿಎಸ್‌ಟಿಯಿಂದ ಸಂಗ್ರವಾದ ತೆರಿಗೆಯಲ್ಲಿ 11, 117 ಕೋಟಿ ಹಣವನ್ನು ರಾಜ್ಯ ಸರ್ಕಾರಗಳಿಗೆ ಕೇಂದ್ರ ನೀಡಲಿದೆ. ಒಟ್ಟು ಜೂನ್ ತಿಂಗಳ ಒಟ್ಟು ವ್ಯವಹಾರದ ಬಳಿಕ ಕೇಂದ್ರ 32,305 ಕೋಟಿ ರೂ. ಹಾಗೂ ರಾಜ್ಯಗಳು 35,087 ಕೋಟಿ ರೂ. ಪಾಲು ಹೊಂದಿವೆ.

    ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆಮದುನಿಂದ ಬರುವ ಆದಾಯ ಪ್ರಮಾಣದಲ್ಲಿ ಶೇ.29 ಹಾಗೂ ದೇಶಿಯ ವಹಿವಾಟಿನ ಆದಾಯ ಶೇ. 3ರಷ್ಟು ಕುಸಿದಿದೆ. ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸಲು ಸರ್ಕಾರ ಸಮಯಾವಕಾಶ ನೀಡಿರುವ ಹಿನ್ನೆಲೆಯಲ್ಲಿ ಏಪ್ರಿಲ್, ಮಾರ್ಚ್ ಮತ್ತು ಫೆಬ್ರವರಿ ಕೆಲವು ರಿಟರ್ನ್ಸ್ ಜುಲೈನಲ್ಲಿ ಪಾವತಿಯಾಗುವ ಸಾಧ್ಯತೆಗಳಿದೆ.

    ಏಪ್ರಿಲ್ ತಿಂಗಳಿನ ಜಿಎಸ್ಟಿ ಸಂಗ್ರಹವು 32,294 ಕೋಟಿ ರೂ. ಆಗಿದ್ದು, ಇದು ಕಳೆದ ವರ್ಷದ ಅವಧಿಯಲ್ಲಿ ಸಂಗ್ರಹಿಸಿದ ಆದಾಯಕ್ಕಿಂತ ಶೇ.72 ಕಡಿಮೆಯಾಗಿದೆ. ಮೇ ತಿಂಗಳಿನ ಜಿಎಸ್ಟಿ ಸಂಗ್ರಹ 62,009 ಕೋಟಿ ರೂ. ಇದು ಕಳೆದ ವರ್ಷದ ಇದೇ ತಿಂಗಳಲ್ಲಿ ಸಂಗ್ರಹಿಸಿದ ಆದಾಯಕ್ಕಿಂತ 38% ಕಡಿಮೆಯಾಗಿದೆ ಎಂದು ಹಣಕಾಸು ಇಲಾಖೆ ಹೇಳಿದೆ.

    ಕರ್ನಾಟಕದಲ್ಲಿ 2019ರ ಜೂನ್‌ 6,659 ಕೋಟಿ ರೂ. ಸಂಗ್ರಹವಾಗಿದ್ದರೆ ಈ ವರ್ಷದ ಜೂನ್‌ನಲ್ಲಿ ಶೇ.1 ರಷ್ಟು ಹೆಚ್ಚಳವಾಗಿದ್ದು, 6,710 ಕೋಟಿ ರೂ. ಸಂಗ್ರಹವಾಗಿದೆ.

  • ಜೂನ್‍ನಲ್ಲಿ ಬೆಂಗಳೂರಿಗೆ ಬರಲಿದೆ ಮುಂಬೈ ‘ಕೊರೊನಾ’ ಎಕ್ಸ್‌ಪ್ರೆಸ್!

    ಜೂನ್‍ನಲ್ಲಿ ಬೆಂಗಳೂರಿಗೆ ಬರಲಿದೆ ಮುಂಬೈ ‘ಕೊರೊನಾ’ ಎಕ್ಸ್‌ಪ್ರೆಸ್!

    ಬೆಂಗಳೂರು: ಜೂನ್ ತಿಂಗಳಲ್ಲಿ ಸಿಲಿಕಾನ್ ಸಿಟಿಯಲ್ಲಿ ‘ಮಹಾ’ ಕೊರೊನಾ ಅಪ್ಪಳಿಸಲಿದೆ. ಈಗಾಗಲೇ ಹಿಂಡಿಹಿಪ್ಪೆ ಮಾಡಿರುವ ಮುಂಬೈ ಸೋಂಕು ಬೆಂಗಳೂರಿಗೆ ಬರಲಿದೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಕರ್ನಾಟಕದ ಗ್ರೀನ್ ಝೋನ್‍ಗೆ ದಾಳಿಯಿಟ್ಟ ಮುಂಬೈ ಬಾಂಬ್ ಜೂನ್‍ನಲ್ಲಿ ಮತ್ತೆ ಬೆಂಗಳೂರಿಗೆ ದಾಂಗುಡಿ ಇಡಲಿದೆ.  ಜೂನ್‍ನಲ್ಲಿ ಕೊರೊನಾ ಎಕ್ಸ್ ಪ್ರೆಸ್ ರೈಲು ಬೆಂಗಳೂರಲ್ಲಿ ಲ್ಯಾಂಡ್ ಆಗಲಿದ್ದು, ಮುಂಬೈನಿಂದ ಭಾರೀ ಸಂಖ್ಯೆಯಲ್ಲಿ ಕನ್ನಡಿಗರು ಸಿಲಿಕಾನ್ ಸಿಟಿಗೆ ಬರಲಿದ್ದಾರೆ.

    ಜೂನ್ 1ರಿಂದ ಮುಂಬೈ ಟು ಬೆಂಗಳೂರು ಹಾಗೂ ಮುಂಬೈ ಟು ಗದಗ ರೈಲು ಸೇವೆ ಆರಂಭವಾಗಲಿದೆ. ಹೀಗಾಗಿ ಈಗ ಬರಲು ಅವಕಾಶ ಸಿಗದವರು ಜೂನ್‍ನಲ್ಲಿ ಬರುವ ಸಾಧ್ಯತೆ ಇದೆ. ಉದ್ಯೋಗ ಅರಸಿ ಬಹುಸಂಖ್ಯೆಯ ಮುಂಬೈ ಕಾರ್ಮಿಕರು ಬೆಂಗಳೂರಿಗೆ ಬರುವ ಸಾಧ್ಯತೆ ಇದೆ. ಇದನ್ನೂ ಓದಿ: ಕರ್ನಾಟಕಕ್ಕೆ ಮೂರು ತಿಂಗಳು ಆಪತ್ತು- ತಜ್ಞರಿಂದ ಸ್ಫೋಟಕ ಸೀಕ್ರೆಟ್ ರಿವೀಲ್

    ಈ ಮೂಲಕ ಈಗಾಗಲೇ ಮುಂಬೈ ಬಾಂಬ್ ಹೊಡೆತಕ್ಕೆ ನಲುಗಿದ ಕರ್ನಾಟಕದಲ್ಲಿ ಮತ್ತೆ ಜೂನ್‍ನಲ್ಲಿ ಮತ್ತೆ ಕೊರೊನಾ ಮಹಾ ಸ್ಫೋಟವಾಗುವ ಸಂಭವವಿದೆ. ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಕ್ವಾರಂಟೈನ್ ಕೇಂದ್ರಗಳು ಈಗಾಗಲೇ ತುಂಬಿ ತುಳುಕುತ್ತಿದೆ. ಈ ಮಧ್ಯೆ ಈಗ ಮುಂಬೈ ಎಂಟ್ರಿ ಬೆಂಗಳೂರಿಗೆ ಆಘಾತ ನೀಡೋದು ಖಚಿತವಾಗಿದೆ.