Tag: Jumbu savari

  • ಯಶಸ್ವಿ ಜಂಬೂ ಸವಾರಿ ಮುಗಿಸಿ ರಿಲ್ಯಾಕ್ಸ್ ಮೂಡಿನಲ್ಲಿ ಗಜಪಡೆ

    ಯಶಸ್ವಿ ಜಂಬೂ ಸವಾರಿ ಮುಗಿಸಿ ರಿಲ್ಯಾಕ್ಸ್ ಮೂಡಿನಲ್ಲಿ ಗಜಪಡೆ

    ಮೈಸೂರು: ದಸರಾ ವೇಳೆ ಯಶಸ್ವಿಯಾಗಿ ಜಂಬೂ ಸವಾರಿ ಮುಗಿಸಿದ ಗಜ ಪಡೆಗಳು ಫುಲ್ ರೆಸ್ಟ್ ನಲ್ಲಿ ಇವೆ. ಮಾವುತರು, ಕಾವಾಡಿಗಳು ವಿಶ್ರಾಂತಿಯ ಮೊರೆ ಹೋಗಿದ್ದಾರೆ.

    ಗಜಪಡೆ ನಾಯಕ ಅರ್ಜುನ, ಬಲರಾಮ ಸಹಿತ ಎಲ್ಲಾ ಆನೆಗಳು ವಿಶ್ರಾಂತಿ ಪಡೆಯುತ್ತಿದ್ದು, ಆನೆಗಳಿಗೆ ಮಾವುತರು ಸ್ನಾನ ಮಾಡಿಸಿ, ಗಜಪಡೆಗಳ ಜೊತೆ ಮಾವುತರು, ಕಾವಾಡಿಗಳು ವಿಶ್ರಾಂತಿ ಪಡೆಯುತ್ತಿದ್ದಾರೆ. ಸದ್ಯ ವಿಶ್ರಾಂತಿಯಲ್ಲಿರುವ ಆನೆಗಳು ಗುರುವಾರ ಅಥವಾ ಶುಕ್ರವಾರ ಮತ್ತೆ ಅರಮನೆಯಿಂದ ಕಾಡಿಗೆ ತೆರಳಲಿದೆ. ಇದನ್ನೂ ಓದಿ:ಜಂಬೂಸವಾರಿ ವೇಳೆ ವಾಲಿದ ಅಂಬಾರಿ- ಕೈಸನ್ನೆ ಮಾಡಿದ ಪ್ರಮೋದಾದೇವಿ

    ಮಂಗಳವಾರ ನಡೆದ ಅದ್ಧೂರಿ ಜಂಬೂ ಸವಾರಿಯಲ್ಲಿ 750 ಕೆಜಿ ತೂಕದ ಅಂಬಾರಿಯಲ್ಲಿ ಚಾಮುಂಡಿದೇವಿಯನ್ನು ಹೊತ್ತುಕೊಂಡು ನಾಯಕ ಅರ್ಜುನ ಗಜಪಡೆ ಜೊತೆ ಹೆಜ್ಜೆ ಹಾಕಿ ದಸರಾವನ್ನು ಯಶಸ್ವಿಯಾಗಿದ್ದಾನೆ. ಅರಮನೆ ಉತ್ತರ ದ್ವಾರವಾದ ಬಲರಾಮ ದ್ವಾರದಲ್ಲಿ ಮಧ್ಯಾಹ್ನ 2.09ಕ್ಕೆ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ಸಂಜೆ 4.17ರ ಶುಭ ಕುಂಬ ಲಗ್ನದಲ್ಲಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದ್ದರು. ಇದನ್ನೂ ಓದಿ:ಅರ್ಜುನನಿಗೆ ಇನ್ನೂ 10 ವರ್ಷ ಅಂಬಾರಿ ಹೊರುವ ತಾಕತ್ತಿದೆ- ಮಾವುತ ವಿನು

    ಜಂಬೂ ಸವಾರಿಯಲ್ಲಿ 8ನೇ ಬಾರಿಗೆ ಅರ್ಜುನ 750 ಕೆಜಿ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಿರುವ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತು ರಾಜ ಗಾಂಭೀರ್ಯದಿಂದ ಸಾಗಿದ್ದನು. ಈ ಜಂಬೂಸವಾರಿಯಲ್ಲಿ 39 ಸ್ತಬ್ಧ ಚಿತ್ರಗಳು, ವಿವಿಧ ಜಾನಪದ ಕಲಾತಂಡಗಳು, 100ಕ್ಕೂ ಹೆಚ್ಚು ಕಲಾ ತಂಡಗಳು, ಉತ್ತರ ಭಾರತದ ವಿವಿಧ ರಾಜ್ಯಗಳ 5 ಕಲಾ ತಂಡ, 1,675 ಕಲಾವಿದರು ಸೇರಿದಂತೆ ಒಟ್ಟು 2 ಸಾವಿರ ಮಂದಿ ಭಾಗಿಯಾಗಿದ್ದವು.

    ಸಂಜೆ 4.30ಕ್ಕೆ ಹೊರಟ ಅಂಬಾರಿ ಸಂಜೆ 7 ಗಂಟೆಗೆ ಬನ್ನಿ ಮಂಟಪ ತಲುಪಿ, ಇತ್ತ ರಾತ್ರಿ 7.30ಕ್ಕೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತಿನ ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಂಜನ್ನು ಹಿಡಿದು ಸಾಹಸ ಪ್ರದರ್ಶಿಸಿದರು. ಈ ಪಂಜಿನ ಕವಾಯತಿನ ಬಳಿಕ ರಾತ್ರಿ 10 ಗಂಟೆಗೆ ಪಟಾಕಿ ಸಿಡಿಸೋ ಮೂಲಕ ದಸರಾ ಯಶಸ್ವಿ ತೆರೆಕಂಡಿದೆ.

    https://www.youtube.com/watch?v=xz6CgKrcUOs

  • ಶಕ್ತಿಧಾಮದ ಮಕ್ಕಳೊಂದಿಗೆ ಸಿಹಿ ಹಂಚಿಕೊಂಡ ಶಿವಣ್ಣ!

    ಶಕ್ತಿಧಾಮದ ಮಕ್ಕಳೊಂದಿಗೆ ಸಿಹಿ ಹಂಚಿಕೊಂಡ ಶಿವಣ್ಣ!

    ಮೈಸೂರು: ಸ್ಯಾಂಡಲ್‍ವುಡ್ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕುಟುಂಬದ ಸದಸ್ಯರು ಮೈಸೂರಿನ ಶಕ್ತಿಧಾಮಕ್ಕೆ ಭೇಟಿ ನೀಡಿದ್ದಾರೆ.

    ಶುಕ್ರವಾರ ದಸರಾ ವೀಕ್ಷಣೆಗೆ ಮೈಸೂರಿಗೆ ತೆರಳಿದ್ದ ಶಿವರಾಜ್ ಕುಮಾರ್ ಅವರು ಇಂದು ಶಕ್ತಿಧಾಮಕ್ಕೆ ಭೇಟಿ ಕೊಟ್ಟಿದ್ದಾರೆ. ಅವರ ಜೊತೆಗೆ ಅವರ ಕುಟುಂಬದ ಸದಸ್ಯರಾದ ಪತ್ನಿ ಗೀತಾ ಅವರು ಮತ್ತು ಮಗಳು ಹಾಗೂ ಸಿನಿಮಾದ ಸದಸ್ಯರು ಕೂಡ ಹೋಗಿದ್ದರು.

    ಹಬ್ಬದ ಪ್ರಯುಕ್ತ ಶಿವರಾಜ್ ಕುಮಾರ್ ಮತ್ತು ಕುಟುಂಬದವರು ಶಕ್ತಿಧಾಮಕ್ಕೆ ತೆರಳಿ ಮಕ್ಕಳಿಗೆ ಸಿಹಿ ಹಂಚಿ ಜೊತೆಯಲ್ಲಿ ಸಮಯ ಕಳೆದರು. ಅಷ್ಟೇ ಅಲ್ಲದೇ ನಿರ್ದೇಶಕರಾದ ರಘು ರಾಮ್ ಅವರು ಕೂಡ ಜೊತೆಗೆ ಹೋಗಿದ್ದು, ಅವರು ಮಕ್ಕಳಿಗೆ ಕಥೆಗಳು ಪದ್ಯಗಳನ್ನು ಹೇಳಿಕೊಡುವ ಮೂಲಕ ಅವರೊಂದಿಗೆ ಸಿಹಿ ಕ್ಷಣಗಳನ್ನು ಕಳೆದಿದ್ದಾರೆ.

    ಶುಕ್ರವಾರ ನಡೆದ ಜಂಬೂ ಸವಾರಿ ವೀಕ್ಷಿಸಲು ಶಿವಣ್ಣ ಹಾಗೂ ಅವರ ಕುಟುಂಬ ಮೈಸೂರಿಗೆ ಭೇಟಿ ನೀಡಿದ್ದರು. ಈ ವೇಳೆ ಹೈವೇ ವೃತ್ತದ ಬಳಿ ರಸ್ತೆ ಬದಿ ಖಾಸಗಿ ಹೋಟೆಲ್ ಒಂದರ ಮುಂಭಾಗ ರಸ್ತೆ ಬದಿ ಚೇರ್‍ನಲ್ಲಿ ಶಿವರಾಜ್‍ಕುಮಾರ್ ದಂಪತಿ ಹಾಗೂ ರಘು ರಾಮ್ ಅವರ ಕುಟುಂಬಸ್ಥರು ಕುಳಿತು ವೀಕ್ಷಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇತಿಹಾಸದಲ್ಲೇ ಮೊದಲು- ಈ ವರ್ಷ ಮೈಸೂರಿನಲ್ಲಿ 2 ಬಾರಿ ಜಂಬೂ ಸವಾರಿ

    ಇತಿಹಾಸದಲ್ಲೇ ಮೊದಲು- ಈ ವರ್ಷ ಮೈಸೂರಿನಲ್ಲಿ 2 ಬಾರಿ ಜಂಬೂ ಸವಾರಿ

    ಮೈಸೂರು: ದಸರಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನೀವು ಎರಡು ಬಾರಿ ದಸರಾ ಜಂಬೂ ಸವಾರಿಯನ್ನು ಕಣ್ತುಂಬಿ ಕೊಳ್ಳಬಹುದು. ಇಷ್ಟು ದಿನ ವಿಜಯದಶಮಿ ದಿನ ಮಾತ್ರ ನಡೆಯುತ್ತಿದ್ದ ಜಂಬೂ ಸವಾರಿ ಈ ಬಾರಿ ಎರಡು ಬಾರಿ ನಡೆಯಲಿದೆ.

    ಪ್ರತಿ ವರ್ಷವೂ ದಸರಾ ಪಂಜಿನ ಕವಾಯತು ಎರಡು ಬಾರಿ ನಡೆಯುತ್ತಿದೆ. ಕಾರ್ಯಕ್ರಮಕ್ಕೆ ಎರಡು ದಿನ ಮುಂಚೆ ರಿಹರ್ಸಲ್ ರೂಪದಲ್ಲಿ ಪಂಚಿನ ಕವಾಯತು ನಡೆಯುತ್ತದೆ. ಈ ಬಾರಿ ಜಂಬೂ ಸವಾರಿಯೂ ಕೂಡ ರಿಹರ್ಸಲ್ ನಡೆಯುವ ಕಾರಣ ಎರಡು ಬಾರಿ ಜನರು ಜಂಬೂ ಸವಾರಿ ನೋಡಬಹುದಾಗಿದೆ.

    ಅಕ್ಟೋಬರ್ 17 ರಂದು ಜಂಬೂ ಸವಾರಿ ರಿಹರ್ಸಲ್ ನಡೆಯಲಿದೆ. ಮೈಸೂರಿನ ಅರಮನೆಯಿಂದ ಬನ್ನಿಮಂಟಪದವರೆಗೂ ರಿಹರ್ಸಲ್‍ನ ಮೆರವಣಿಗೆ ಸಾಗಲಿದೆ. ಸ್ಥಬ್ಧ ಚಿತ್ರ ಹೊರತು ಪಡಿಸಿ ಎಲ್ಲಾ ಕಲಾ ತಂಡಗಳು ಮತ್ತು ಜಂಬೂ ಸವಾರಿ ದಿನ ಪಾಲ್ಗೋಳುವುದಕ್ಕೆ ಅವಕಾಶ ಸಿಗದ ಕಲಾ ತಂಡಗಳು ರಿಹರ್ಸಲ್‍ನಲ್ಲಿ ಭಾಗಿಯಾಗಲಿವೆ.

    ಕ್ಯಾಪ್ಟನ್ ಅರ್ಜುನ ನೇತೃತ್ವದ ಎಲ್ಲಾ ಆನೆಗಳು ಮೆರವಣಿಗೆಯಲ್ಲಿ ಸಾಗಲಿವೆ. ಆದರೆ ಅರ್ಜುನನಿಗೆ ಚಿನ್ನದ ಅಂಬಾರಿ ಹೊರಿಸಬೇಕೆ ಅಥವಾ ಮರದ ಅಂಬಾರಿಯನ್ನು ಮಾತ್ರ ಹೊರಿಸಬೇಕೆ ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಇದನ್ನು ಹೊರತು ಪಡಿಸಿ ಜಂಬೂ ಸವಾರಿ ಹೇಗೆ ನಡೆಯುತ್ತೋ ಅದೇ ರೀತಿ ರಿಹರ್ಸಲ್ ಕೂಡ ನಡೆಯುತ್ತದೆ. ಜಂಬೂ ಸವಾರಿ ದಿನ ಬಹುತೇಕರಿಗೆ ಮೆರವಣಿಗೆ ವೀಕ್ಷಿಸಲು ಆಗುವುದಿಲ್ಲ. ಅಂತವರಿಗೆ ಇದೊಂದು ಅವಕಾಶವಾಗಿದೆ. ಮೆರವಣಿಗೆ ದಿನಕ್ಕೆ ಹೆಚ್ಚಿನ ಜನರನ್ನು ಮೈಸೂರಿನತ್ತ ಸೆಳೆಯುವ ಉದ್ದೇಶದಿಂದ ಕೂಡ ಈ ರಿಹರ್ಸಲ್ ಸಹಕಾರಿ ಅನ್ನೋದು ಜಿಲ್ಲಾಡಳಿತದ ಲೆಕ್ಕಚಾರವಾಗಿದೆ ಎಂದು ಜಿಲ್ಲಾಧಿಕಾರಿಗಳು ಅಭಿರಾಮ್ ಜಿ. ಶಂಕರ್ ಹೇಳಿದ್ದಾರೆ.

    ಖುದ್ದು ಸಿಎಂ ಎಚ್.ಡಿ. ಕುಮಾರಸ್ವಾಮಿ, ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಜಂಬೂ ಸವಾರಿ ರಿಹರ್ಸಲ್ ನಡೆಸುವಂತೆ ಸೂಚನೆ ಕೊಟ್ಟಿದ್ದಾರೆ. ಈ ರಿಹರ್ಸಲ್ ಯಶಸ್ವಿಯಾಗಿ ನಡೆದರೆ ಜಂಬೂ ಸವಾರಿ ರಿಹರ್ಸಲ್ ಅನ್ನೋದು ದಸರಾದಲ್ಲಿ ಖಾಯಂ ಆಗಿ ಉಳಿಯುತ್ತದೆ ಎಂದು ಶಂಕರ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv