Tag: juhi chawla

  • ಪ್ರೇಮಲೋಕ 2: ಅಂದು ಜೂಹಿ, ಇಂದು ತಮಿಳಿನ ತೇಜು

    ಪ್ರೇಮಲೋಕ 2: ಅಂದು ಜೂಹಿ, ಇಂದು ತಮಿಳಿನ ತೇಜು

    ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತೊಂದು ಪ್ರೇಮಲೋಕ ಹಾಡಲು ಸಜ್ಜಾಗಿರುವ ವಿಷಯ ಗೊತ್ತೇ ಇದೆ. ಮೊದಲ ಪ್ರೇಮಲೋಕಕ್ಕೆ ರವಿಮಾಮ ಬಾಲಿವುಡ್ ನಿಂದ ಜೂಹಿ ಚಾವ್ಲಾ ಅವರನ್ನು ಕರೆತಂದಿದ್ದರು. ಪ್ರೇಮಲೋಕ 2 ಚಿತ್ರಕ್ಕೆ ತಮಿಳು ನಟಿಗೆ ಬಲೆಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ತಮಿಳು ನಟ ತೇಜು ಅಶ್ವಿನಿ (Teju Ashwini) ಈ ಸಿನಿಮಾದ ನಾಯಕಿ ಎನ್ನುವುದು ಸದ್ಯಕ್ಕಿರುವ ವರ್ತಮಾನ.

    ಈ ನಡುವೆ ಪ್ರೇಮಲೋಕ 2 ಸಿನಿಮಾ ಕುರಿತಂತೆ ಅನೇಕ ವಿಶೇಷಗಳು ಆಚೆ ಬರುತ್ತಿವೆ. ಅದರಲ್ಲಿ ರವಿಮಾಮ ಮಕ್ಕಳ ಸುದ್ದಿಯೂ ಸೇರಿಕೊಂಡಿದೆ. ಈ ಸಿನಿಮಾದಲ್ಲಿ ತಮ್ಮ ಇಬ್ಬರೂ ಮಕ್ಕಳಿಗೆ ಪಾತ್ರ ಕೊಟ್ಟಿದ್ದಾರೆ. ಆ ಪಾತ್ರಕ್ಕಾಗಿ ತಯಾರಿ ಕೂಡ ಮಾಡಿಸುತ್ತಿದ್ದಾರೆ.

    ಪ್ರೇಮಲೋಕ 2 ಚಿತ್ರಕ್ಕಾಗಿ ಡಾನ್ಸ್ ಮತ್ತು ಮೈ ಹುರಿಗೊಳಿಸಿಕೊಳ್ಳುತ್ತಿರುವೆ. ಅಪ್ಪನೇ ಮಾರ್ಗದರ್ಶನ ಮಾಡುತ್ತಿದ್ದಾರೆ. ಪ್ರೇಮಲೋಕ ಸಿನಿಮಾದ ಹೆಸರೇ ದೊಡ್ಡದು. ಹಾಗಾಗಿ ನಿರೀಕ್ಷೆ ಇದ್ದೇ ಇರುತ್ತದೆ. ಹಾಗಾಗಿ ಸಾಕಷ್ಟು ತಯಾರಿ ಮಾಡಿಕೊಂಡು ಕ್ಯಾಮೆರಾ ಮುಂದೆ ನಿಲ್ಲುತ್ತೇನೆ ಎನ್ನುತ್ತಾರೆ (Manoranjan) ಮನೋರಂಜನ್.

    ರವಿಚಂದ್ರನ್ (Ravichandran) ಕೆರಿಯರ್ ಬದಲಿಸಿದ ಸಿನಿಮಾ ಅಂದರೆ 1987ರಲ್ಲಿ ತೆರೆಕಂಡ ಪ್ರೇಮಲೋಕ. ತಾವೇ ನಿರ್ದೇಶಿಸಿ, ನಟಿಸಿ ಗೆದ್ದಿದ್ದರು. ಈಗ ಪ್ರೇಮಲೋಕ ಪಾರ್ಟ್ 2  ಸಿನಿಮಾ ಮಾಡೋಕೆ ಮುಂದಾಗಿದ್ದಾರೆ. ಮೇ 30ರಿಂದ ಶೂಟಿಂಗ್ ಕೂಡ ಶುರುವಾಗಲಿದೆ. ಕಾರ್ಯಕ್ರವೊಂದರಲ್ಲಿ ಅತಿಥಿಯಾಗಿ ರವಿಚಂದ್ರನ್ ಭಾಗವಹಿಸಿದ್ದರು. ‘ಪ್ರೇಮಲೋಕ 2’ ಬಗ್ಗೆ ಮಾಹಿತಿ ನೀಡಿದ್ದಾರೆ. ಮೇ 30ರಂದು ‘ಪ್ರೇಮಲೋಕ 2’ (Premaloka 2) ಸಿನಿಮಾವನ್ನು ಆರಂಭಿಸುತ್ತೇನೆ. ನನ್ನ ದೊಡ್ಡ ಮಗ ಮನೋರಂಜನ್ ಅದರಲ್ಲಿ ನಟಿಸುತ್ತಾನೆ. ಚಿಕ್ಕ ಮಗ ವಿಕ್ರಮ್ ಚಿಕ್ಕ ಪಾತ್ರ ನಟಿಸುತ್ತಾನೆ. ನಾನು ತಂದೆ ಪಾತ್ರದಲ್ಲಿ ನಟಿಸುತ್ತಿದ್ದೇನೆ ಎಂದು ಕ್ರೇಜಿ ಸ್ಟಾರ್ ತಿಳಿಸಿದ್ದಾರೆ.

     

    ‘ಪ್ರೇಮಲೋಕ 2’ ಸಿನಿಮಾದಲ್ಲಿ ಬರೀ 20-25 ಹಾಡುಗಳು ಇರುತ್ತೆದೆ ಅಷ್ಟೇ. ಆದರೆ ಜೀವನಪೂರ್ತಿ ಇಡೀ ಸಿನಿಮಾ ಚಿಕ್ಕವರಿಂದಿಡಿದು ದೊಡ್ಡವರ ತನಕ ಎಲ್ಲರಿಗೂ ಕಾಡುತ್ತದೆ. ಈ ಸಿನಿಮಾದಲ್ಲಿ ಪ್ರೀತಿ ಇದೆ, ಜಾತಿ ಇಲ್ಲ. ಭೇದ ಭಾವ ಇಲ್ಲ, ಹಣದ ಕುರಿತು ಇಲ್ಲ. ಇದೇ ಬೇರೆ ಥರದ ಕಥೆ ಇರುವ ಸಿನಿಮಾ. ನನಗೆ ಪ್ರೀತಿ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ ಎಂದು ರವಿಚಂದ್ರನ್ ಹೇಳಿದ್ದಾರೆ.

  • ಗಿಡನೆಟ್ಟು ಮಗಳ ಹುಟ್ಟು ಹಬ್ಬ ಆಚರಿಸಿದ ಪ್ರೇಮಲೋಕದ ನಟಿ

    ಗಿಡನೆಟ್ಟು ಮಗಳ ಹುಟ್ಟು ಹಬ್ಬ ಆಚರಿಸಿದ ಪ್ರೇಮಲೋಕದ ನಟಿ

    ವಿಚಂದ್ರನ್ ನಿರ್ದೇಶಿಸಿ, ನಟಿಸಿರುವ ಪ್ರೇಮಲೋಕ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದ, ಬಾಲಿವುಡ್ ನಟಿ ಜೂಹಿ ಚಾವ್ಲಾ ನಾಡು ಮೆಚ್ಚುವಂಥ ಕೆಲಸ ಮಾಡಿದ್ದಾರೆ. ಪುತ್ರಿ ಜಾಹ್ನವಿಯ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿರುವ ಜೂಹಿ, ಸಾವಿರ ಗಿಡಗಳನ್ನು ನೆಡುವ ಮೂಲಕ ಮಗಳ ಹುಟ್ಟುಹಬ್ಬ ಆಚರಿಸಿದ್ದಾರೆ.

    ಜಾಹ್ನವಿಗೆ 23 ವರ್ಷದ ಹುಟ್ಟು ಹಬ್ಬ ಸಂಭ್ರಮ. ಇದಕ್ಕೆ ಉಡುಗೊರೆಯಾಗಿ ಸಾವಿರ ಸಸಿಗಳನ್ನು ಜೂಹಿ ನೀಡಿದ್ದಾರೆ. ಅವುಗಳನ್ನು ಬೆಳೆಸುವ ಗುರಿಯನ್ನೂ ಅವರು ಹೊಂದಿದ್ದಾರೆ. ಈ ನಡೆ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಎಲ್ಲರೂ ಇದೇ ಮಾದರಿಯನ್ನು ಅನುಸರಿಸುವಂತೆ ಅಭಿಮಾನಿಗಳು ಹೇಳಿದ್ದಾರೆ.

    ಜೂಹಿ ಚಾವ್ಲಾ ಅದ್ಭುತ ನಟಿ. ಕನ್ನಡದಲ್ಲೂ ಅವರು ನಟಿಸಿದ್ದಾರೆ. ಜೊತೆಗೆ ಬಾಲಿವುಡ್ ನ ಸಾಕಷ್ಟು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

  • ರಿಕ್ವೆಸ್ಟ್‌ ಮಾಡಿ ಕೊಹ್ಲಿ ಕೈಹಿಡಿದು ಡಾನ್ಸ್‌ ಮಾಡಿಸಿದ ಬಾದ್‌ ಷಾ – ಚಾಂಪಿಯನ್ಸ್‌ ಆಗೋಣ ಎಂದ ಜೂಹಿ ಚಾವ್ಲಾ

    ರಿಕ್ವೆಸ್ಟ್‌ ಮಾಡಿ ಕೊಹ್ಲಿ ಕೈಹಿಡಿದು ಡಾನ್ಸ್‌ ಮಾಡಿಸಿದ ಬಾದ್‌ ಷಾ – ಚಾಂಪಿಯನ್ಸ್‌ ಆಗೋಣ ಎಂದ ಜೂಹಿ ಚಾವ್ಲಾ

    ಕೋಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್‌ನಲ್ಲಿ ಗುರುವಾರ ಆರ್‌ಸಿಬಿ (RCB) ಮತ್ತು ಕೋಲ್ಕತ್ತಾ ನೈಟ್‌ರೈಡರ್ಸ್(KKR) ನಡುವೆ ನಡೆದ ಪಂದ್ಯದಲ್ಲಿ ಕೆಕೆಆರ್‌ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿ ಭರ್ಜರಿ ಜಯ ಸಾಧಿಸಿತು.

    ಪಂದ್ಯ ವೀಕ್ಷಣೆಗೆ ಆಗಮಿಸಿದ್ದ ನಟ ಶಾರೂಖ್‌ ಖಾನ್‌ (Shah Rukh Khan) ಪಂದ್ಯ ಮುಗಿದ ಬಳಿಕ ತಮ್ಮ ತಂಡದ ಆಟಗಾರರನ್ನ ಭೇಟಿಯಾದರು. ಇದೇ ವೇಳೆ ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿಯನ್ನೂ (Virat Kohli) ಭೇಟಿಯಾದರು. ಕಂಡೊಡನೆ ಕೊಹ್ಲಿಯನ್ನ ಅಪ್ಪಿಕೊಂಡ ಶಾರೂಖ್‌ ಖಾನ್‌ ರಿಕ್ವೆಸ್ಟ್‌ ಮಾಡಿ ʻಪಠಾಣ್‌ʼ ಸಿನಿಮಾದ (Pathaan Cinema) ʻಜೂಮೆ ಜೋ ಪಠಾಣ್‌ʼ ಹಾಡಿಗೆ ಡಾನ್ಸ್‌ ಮಾಡಿಸಿದರು. ಸ್ವತಃ ತಾವೇ ಕೊಹ್ಲಿ ಕೈ ಹಿಡಿದು ಹೇಳಿಕೊಟ್ಟು ಡಾನ್ಸ್‌ ಮಾಡಿಸಿದರು.

    ಈ ವೀಡಿಯೋ ತುಣುಕು ಜಾಲತಾಣದಲ್ಲಿ ಹರಿದಾಡುತ್ತಿದ್ದು, ಲಕ್ಷಾಂತರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಿಂಗ್‌ ಕೊಹ್ಲಿ, ಬಾಲಿವುಡ್‌ ಬಾದ್‌ ಷಾ ಇಬ್ಬರನ್ನ ಒಂದೇ ವೇದಿಕೆಯಲ್ಲಿ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಸೋದೇಕೆ ಗೊತ್ತಾ – ಚಿಯರ್‌ ಗರ್ಲ್ಸ್‌ ಸಂಭಾವನೆ ಕೇಳಿದ್ರೆ ಶಾಕ್‌ ಆಗ್ತೀರಾ

    ಶಾರುಖ್ ಖಾನ್ ಪಠಾಣ್ ಸಿನಿಮಾ ಥಿಯೇಟರ್ ನಲ್ಲಿ ಈಗಾಗಲೇ ದಾಖಲೆ ಬರೆದಿದ್ದು, OTTಯಲ್ಲೂ ಭರ್ಜರಿ ಪ್ರದರ್ಶನ ಕಾಣ್ತಿದೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಆಕ್ಷನ್ ಭರಿತ ಬಾಲಿವುಡ್ ಬ್ಲಾಕ್ ಬಸ್ಟರ್ ಪಠಾಣ್ ಚಿತ್ರ ಅಮೆಜಾನ್ ಪ್ರೈಮ್ ವೀಡಿಯೋ ಪ್ಲಾಟ್‌ಫಾರ್ಮ್ ನಲ್ಲಿ ಸ್ಟ್ರೀಮ್ ಆಗುತ್ತಿದೆ. ಇದನ್ನೂ ಓದಿ: IPL 2023: ಬ್ಯೂಸಿ ಶೆಡ್ಯೂಲ್‌ನಲ್ಲೂ ತವರಿನಲ್ಲಿ ಐಪಿಎಲ್ ವೀಕ್ಷಿಸಿದ ಬಾಲಿವುಡ್ ಬಾದ್ ಷಾ

    ಚಾಂಪಿಯನ್ಸ್‌ ಆಗೋಣ: ಕೆಕೆಆರ್‌ ಗೆಲುವಿನ ಕುರಿತು ಪ್ರತಿಕ್ರಿಯೆ ನೀಡಿದ ನಟಿ ಜೂಹಿ ಚಾವ್ಲಾ (Juhi Chawla), ನಮ್ಮ ತಂಡದ ಪ್ರದರ್ಶನದಿಂದ ನನಗೆ ತುಂಬಾ ಸಂತೋಷವಾಗಿದೆ. ನಮ್ಮ ಎಲ್ಲಾ ಪಂದ್ಯಗಳು ಹೀಗೆಯೇ ಕೊನೆಗೊಳ್ಳಲಿ ಎಂದು ನಾನು ಭಾವಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ. ಈ ವರ್ಷ ಫೈನಲ್‌ಗೆ ಬರೋಣ, ನಾವು ಚಾಂಪಿಯನ್‌ಗಳಾಗೋಣ ಎಂದು ಕೆಕೆಆರ್‌ ಆಟಗಾರರಿಗೆ‌ ಸ್ಫೋರ್ತಿ ತುಂಬಿದ್ದಾರೆ.

  • IPL 2023: ಬ್ಯೂಸಿ ಶೆಡ್ಯೂಲ್‌ನಲ್ಲೂ ತವರಿನಲ್ಲಿ ಐಪಿಎಲ್ ವೀಕ್ಷಿಸಿದ ಬಾಲಿವುಡ್ ಬಾದ್ ಷಾ

    IPL 2023: ಬ್ಯೂಸಿ ಶೆಡ್ಯೂಲ್‌ನಲ್ಲೂ ತವರಿನಲ್ಲಿ ಐಪಿಎಲ್ ವೀಕ್ಷಿಸಿದ ಬಾಲಿವುಡ್ ಬಾದ್ ಷಾ

    – ಕೆಕೆಆರ್ ಉತ್ಸಾಹಕ್ಕೆ ಇವರೇ ಕಾರಣ ಅಂದ್ರು ಫ್ಯಾನ್ಸ್

    ಕೋಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ಸ್ನಲ್ಲಿ ಗುರುವಾರ ಆರ್‌ಸಿಬಿ ಮತ್ತು ಕೋಲ್ಕತ್ತಾ ನೈಟ್‌ರೈಡರ್ಸ್ (KKR) ನಡುವೆ ನಡೆದ ಪಂದ್ಯ ವೀಕ್ಷಣೆ ಮಾಡಲು ಬಾಲಿವುಡ್ ತಾರೆಯರು ಆಗಮಿಸಿ, ಕೆಕೆಆರ್ ತಂಡಕ್ಕೆ ಬಲ ತುಂಬಿದರು.

    ಬಾಲಿವುಡ್ ಬಾದ್ ಷಾ ಖ್ಯಾತಿಯ ಶಾರುಖ್ ಖಾನ್ (Shah Rukh Khan), ಅವರ ಪುತ್ರಿ ಸುಹಾನಾ ಖಾನ್, ಜೂಹಿ ಚಾವ್ಲಾ (Juhi Chawla) ಸೇರಿದಂತೆ ಅನೇಕರು ಐಪಿಎಲ್ ವೀಕ್ಷಣೆ ಮಾಡಿ ಸಂಭ್ರಮಿಸಿದರು.

    ಶಾರುಖ್ ಖಾನ್ ಪಠಾಣ್ ಸಿನಿಮಾ ಥಿಯೇಟರ್ ನಲ್ಲಿ ಈಗಾಗಲೇ ದಾಖಲೆ ಬರೆದಿದ್ದು, ಒಟಿಟಿಯಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಆಕ್ಷನ್ ಭರಿತ ಬಾಲಿವುಡ್ ಬ್ಲಾಕ್ ಬಸ್ಟರ್ ಪಠಾಣ್ ಚಿತ್ರ ಅಮೆಜಾನ್ ಪ್ರೈಮ್ ವೀಡಿಯೋ ಪ್ಲಾಟ್‌ಫಾರ್ಮ್ ನಲ್ಲಿ ಸ್ಟ್ರೀಮ್ ಆಗುತ್ತಿದೆ.

    ಸದಾ ಸಿನಿ ಜರ್ನಿ ಬ್ಯೂಸಿಯಲ್ಲಿರುವ ಶಾರೂಖ್ ಖಾನ್, ಜೂಹಿ ಚಾವ್ಲಾ ಗುರುವಾರ ಕ್ರಿಕೆಟ್ ಅಂಗಳಕ್ಕೆ ಬಂದು ತಮ್ಮ ತಂಡಕ್ಕೆ ಉತ್ಸಾಹ ತುಂಬಿದ್ದಾರೆ. ಇದರೊಂದಿಗೆ ಶಾರೂಖ್ ಪುತ್ರಿ ಸುಹಾನ ಸಹ ಹಾಟ್‌ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

    ಕೆಕೆಆರ್ ಸಹ ತವರಿನಲ್ಲಿ ಅಭಿಮಾನಿಗಳ ನಿರೀಕ್ಷೆ ಹುಸಿಯಾಗದಂತೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಆರ್‌ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಆರಂಭದಲ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾದರೂ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 204 ರನ್ ಗಳಿಸುವಲ್ಲಿ ಯಶಸ್ವಿಯಾಗಿದೆ.

  • ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿತ: ಬಾಲಿವುಡ್ ಸಿಲಿಬ್ರಿಟಿಗಳನ್ನು ಎಚ್ಚರಿಸಿದ ಪ್ರಕಾಶ್ ರೈ

    ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿತ: ಬಾಲಿವುಡ್ ಸಿಲಿಬ್ರಿಟಿಗಳನ್ನು ಎಚ್ಚರಿಸಿದ ಪ್ರಕಾಶ್ ರೈ

    ರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಧೋರಣೆಗಳ ಬಗ್ಗೆ ಈವರೆಗೂ ಪ್ರಶ್ನೆ ಮಾಡುತ್ತಲೇ ಬಂದಿರುವ ಬಹುಭಾಷಾ ನಟ ಪ್ರಕಾಶ್ ರೈ, ಈ ಬಾರಿ ಬಾಲಿವುಡ್ ನಟ ನಟಿಯರಿಗೆ ಪ್ರಶ್ನೆ ಮಾಡಿದ್ದಾರೆ. ಅವರ ದೇಶಭಕ್ತಿಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಡಾಲರ್ ಮುಂದೆ ನಿರಂತರವಾಗಿ ಕುಸಿಯುತ್ತಿರುವ ರೂಪಾಯಿ ಮೌಲ್ಯದ ಬಗ್ಗೆ ಟ್ವಿಟ್ ಮಾಡಿರುವ ಪ್ರಕಾಶ್ ರೈ, ಈ ಹಿಂದಿನ ಕೇಂದ್ರ ಸರಕಾರವಿದ್ದಾಗ ರೂಪಾಯಿ ಮೌಲ್ಯ ಕುಸಿದ ಸಂದರ್ಭದಲ್ಲಿ ಟ್ವಿಟ್ ಮಾಡಿದ್ದ ಬಾಲಿವುಡ್ ಸಿಲಿಬ್ರಿಟಿಗಳ ನಡೆಯನ್ನು ನೆನಪಿಸಿದ್ದಾರೆ.

    ಕಾಂಗ್ರೆಸ್ ಸರಕಾರ ಇದ್ದಾಗಲೂ ರೂಪಾಯಿ ಮೌಲ್ಯ ಕುಸಿದಿದೆ. ಆ ಸಂದರ್ಭದಲ್ಲಿ ಬಾಲಿವುಟ್ ಸಿಲೆಬ್ರಿಟಿಗಳಾದ ಅಮಿತಾಭ್ ಬಚ್ಚನ್, ಜೂಹಿ ಚಾವ್ಲಾ, ಅನುಪಮ್ ಖೇರ್, ಶಿಲ್ಪಾ ಶೆಟ್ಟಿ, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸೇರಿದಂತೆ ಹಲವರು ಟ್ವಿಟ್ ಮಾಡಿದ್ದರು. ಅದರಲ್ಲೂ ಜೂಹಿ ಚಾವ್ಲಾ ರೂಪಾಯಿ ಮೌಲ್ಯದ ಕುಸಿತವನ್ನು ಒಳ ಉಡುಪಿಗೆ ಹೋಲಿಸಿದ್ದರು. ಈಗ ಅದೆಲ್ಲ ಟ್ವಿಟ್ ಅನ್ನು ಒಟ್ಟುಗೂಡಿಸಿ ಮತ್ತೆ ಅವರಿಗೆ ನೆನಪಿಸಿದ್ದಾರೆ. ಇದನ್ನೂ ಓದಿ: ಈ ಪ್ರಕರಣದಿಂದ ಮುಕ್ತನಾಗಿ ಬರುತ್ತೇನೆ ಎಂದು ಮೊದಲೇ ಗೊತ್ತಿತ್ತು: ಪತ್ನಿ, ಪುತ್ರನಿಗೆ ಸಿಹಿ ತಿನಿಸಿ ಈಶ್ವರಪ್ಪ ಸಂಭ್ರಮಾಚರಣೆ

    ಈ ಸಿಲಿಬ್ರಿಟಿಗಳೆಲ್ಲ ಹಿಂದೆ ಮಾಡಿದ್ದ ಟ್ವಿಟ್ ಸ್ಕ್ರಿನ್ ಶಾಟ್ ಗಳನ್ನು ಶೇರ್ ಮಾಡಿರುವ ಪ್ರಕಾಶ್ ರಾಜ್ ‘ಆ ಒಂದು ಕಾಲದಲ್ಲಿ ನನ್ನ ದೇಶದಲ್ಲಿ ಎಂದು ಬರೆದು, ಜಸ್ಟ್ ಆಸ್ಕಿಂಗ್ ಹ್ಯಾಶ್ ಅಡಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಪ್ರಕಾಶ್ ರೈ ಈ ಟ್ವಿಟ್ ಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಅಲ್ಲದೇ, ಅಷ್ಟೇ ಜನರು ಕೂಡ ಅವರಿಗೂ ಪ್ರಶ್ನೆ ಮಾಡಿದ್ದಾರೆ. ಒಂದು ರೀತಿಯಲ್ಲಿ ಈ ಟ್ವಿಟ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದಂತೂ ಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • ಜೂಹಿ ಚಾವ್ಲಾ ದಂಡವನ್ನು 20 ಲಕ್ಷ ರೂ.ದಿಂದ 2 ಲಕ್ಷಕ್ಕೆ ಇಳಿಸಿದ ಹೈಕೋರ್ಟ್!

    ಜೂಹಿ ಚಾವ್ಲಾ ದಂಡವನ್ನು 20 ಲಕ್ಷ ರೂ.ದಿಂದ 2 ಲಕ್ಷಕ್ಕೆ ಇಳಿಸಿದ ಹೈಕೋರ್ಟ್!

    ಮುಂಬೈ: ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರ ವಿರುದ್ಧ 5ಜಿ ತಂತ್ರಜ್ಞಾನದ ಬಿಡುಗಡೆಗೆ ಸಂಬಂಧಿಸಿದಂತೆ 20 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಈಗ ಹೈಕೋರ್ಟ್ 2 ಲಕ್ಷಕ್ಕೆ ಇಳಿಸಿದೆ.

    ಭಾರತದಲ್ಲಿ 5ಜಿ ಅಳವಡಿಕೆ ವಿರುದ್ಧದ ಮೊಕದ್ದಮೆಗಾಗಿ ನಟಿ ಜೂಹಿ ಚಾವ್ಲಾ ಅವರಿಗೆ ವಿಧಿಸಲಾಗಿದ್ದ ದಂಡವನ್ನು 20 ಲಕ್ಷದಿಂದ 2 ಲಕ್ಷಕ್ಕೆ ಇಳಿಸಲು ದೆಹಲಿ ಹೈಕೋರ್ಟ್ ಮುಂದಾಗಿದೆ. ಆದರೆ ಅವರು ಸಾರ್ವಜನಿಕರಿಗಾಗಿ ಒಂದಿಷ್ಟು ಸೇವೆ ಮಾಡಬೇಕು ಎಂದು ಕೋರ್ಟ್ ಷರತ್ತು ವಿಧಿಸಿದೆ. ನ್ಯಾಯಾಂಗದ ಸಮಯವನ್ನು ವ್ಯರ್ಥ ಮಾಡಿದ್ದಕ್ಕಾಗಿ ಜೂಹಿ ಚಾವ್ಲಾ ಸೇರಿದಂತೆ ಇತರ ಇಬ್ಬರ ಮೇಲೆ ದಂಡ ವಿಧಿಸಿದೆ. ಇದನ್ನೂ ಓದಿ: 5ಜಿ ವಿರುದ್ಧ ಜೂಹಿ ಚಾವ್ಲಾ ಸಲ್ಲಿಸಿದ್ದ ಅರ್ಜಿ ವಜಾ- 20 ಲಕ್ಷ ದಂಡ ವಿಧಿಸಿದ ದೆಹಲಿ ಹೈ ಕೋರ್ಟ್

    ಏನಿದು 5ಜಿ?
    2021ರ ಜೂನ್ 4 ರಂದು, ಭಾರತದಲ್ಲಿ 5ಜಿ ತಂತ್ರಜ್ಞಾನದ ರೋಲ್ ಔಟ್ ವಿರುದ್ಧ ಜೂಹಿ ಚಾವ್ಲಾ ಅವರ ಸಿವಿಲ್ ಮೊಕದ್ದಮೆಯನ್ನು ನ್ಯಾಯಮೂರ್ತಿ ಜೆ.ಆರ್.ಮಿಧಾ ವಜಾಗೊಳಿಸಿದರು. ಈ ವೇಳೆ ಫಿರ್ಯಾದಿದಾರರ ಮೇಲೆ 20 ಲಕ್ಷ ರೂ. ದಂಡ ವಿಧಿಸಿದರು. ಪ್ರಚಾರಕ್ಕಾಗಿ ಈ ರೀತಿಯ ಮೊಕದ್ದಮೆ ಮಾಡಲಾಗಿದೆ ಎಂದು ನ್ಯಾಯಾಲಯವು ಕಳೆದ ವರ್ಷ ತಿಳಿಸಿತ್ತು.

    ಈ ಹಿನ್ನೆಲೆ ನಟಿ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದ್ದು, ಮೊಕದ್ದಮೆಯನ್ನು ವಜಾಗೊಳಿಸುವ ಏಕ ಪೀಠದ ಆದೇಶವು ಸರಿಯಿಲ್ಲ ಎಂದು ಕೋರ್ಟ್ ಮೊರೆ ಹೋಗಿದ್ದರು. ಆದರೆ ಕಳೆದ ವರ್ಷ ಕೊರೊನಾ 2ನೇ ಅಲೆ ಇದ್ದ ಕಾರಣ ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯದ ತಡೆದಿತ್ತು. ಆದರೂ ಈ ವಿಚಾರಣೆಗೆ ಜೂಹಿ ಚಾವ್ಲಾ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜಾರಾಗುತ್ತಿದ್ದರು. ಇದನ್ನೂ ಓದಿ: ನಾನು 5ಜಿ ವಿರೋಧಿ ಅಲ್ಲ, ಅದರ ಸಮಸ್ಯೆಗಳನ್ನು ತಡೆಯಬೇಕು: ಜೂಹಿ ಚಾವ್ಲಾ

    ಅರ್ಜಿಯನ್ನು ವಜಾಗೊಳಿಸಿದ ನಂತರ, ಜೂಹಿ ಚಾವ್ಲಾ ಅವರು ಕೆಲವು ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವೀಡಿಯೋದಲ್ಲಿ, ನಾನು 5ಜಿ ತಂತ್ರಜ್ಞಾನದ ವಿರುದ್ಧವಲ್ಲ. ಈ ತಂತ್ರಜ್ಞಾನವು ಸುರಕ್ಷಿತವಾಗಿದೆ ಎಂದು ಸರ್ಕಾರದ ಸ್ಪಷ್ಟೀಕರಣವನ್ನು ಪಡೆಯಲು ಮಾತ್ರ ಅರ್ಜಿ ಹಾಕಲಾಗಿತ್ತು ಎಂದು ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹೇಳಿದ್ದರು.

  • ನಾನು 5ಜಿ ವಿರೋಧಿ ಅಲ್ಲ, ಅದರ ಸಮಸ್ಯೆಗಳನ್ನು ತಡೆಯಬೇಕು: ಜೂಹಿ ಚಾವ್ಲಾ

    ನಾನು 5ಜಿ ವಿರೋಧಿ ಅಲ್ಲ, ಅದರ ಸಮಸ್ಯೆಗಳನ್ನು ತಡೆಯಬೇಕು: ಜೂಹಿ ಚಾವ್ಲಾ

    ಮುಂಬೈ: ಭಾರತದಲ್ಲಿ 5ಜಿ ನೆಟ್‍ವರ್ಕ್ ಸ್ಥಾಪನೆಯ ವಿರುದ್ಧ ನಟಿ, ಪರಿಸರವಾದಿ ಜೂಹಿ ಚಾವ್ಲಾ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ಮತ್ತೆ ಜೂಹಿ ಚಾವ್ಲಾ ಈ ಕುರಿತು ಮಾತನಾಡಿದ್ದಾರೆ. ನಾನು 5ಜಿ ವಿರೋಧಿಯಲ್ಲ ಆದರೆ ಇದರಿಂದ ಆಗಬಹುದಾದ ಸಮಸ್ಯೆಗಳನ್ನು ತಡೆಯಬೇಕೆಂದು ಹೇಳಿಕೊಂಡಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ಮಾತನಾಡಿದ ಜೂಹಿ ಚಾವ್ಲಾ, ನಾನು 5ಜಿ ತಂತ್ರಜ್ಞಾನದ ವಿರೋಧಿಯಲ್ಲ. ಆದರೆ ಇದರಿಂದ ಆಗಬಹುದಾದ ಸಮಸ್ಯೆಗಳನ್ನು ತಡೆಯಬೇಕು. ಮತ್ತು ಪ್ರತೀಯೊಬ್ಬರಿಗೂ ಇದು ಸುರಕ್ಷಿತ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. 5ಜಿ ವಿಕಿರಣದಿಂದ ಮನುಷ್ಯರ ಮೇಲೆ ಹಲವು ದುಷ್ಪರಿಣಾಮಗಳಿವೆ ಎಂದು ಮತ್ತೆ ಒತ್ತಿ ಹೇಳಿದ್ದಾರೆ. ಇದನ್ನೂ ಓದಿ 5ಜಿ ನೆಟ್‍ವರ್ಕ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಜೂಹಿ ಚಾವ್ಲಾ

    ಅರ್ಜಿ ವಜಾಗೊಳಿಸಿದ್ದು ಏಕೆ?:
    5ಜಿ ತಂತ್ರಜ್ಞಾನ ಜೀವ ಸಂಕುಲಕ್ಕೆ ಅಪಾಯ ತಂದೊಡ್ಡುತ್ತದೆ ಎಂದು ಆರೋಪಿಸಿ ದೆಹಲಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ ಜೂಹಿ ಚಾವ್ಲಾ 5ಜಿ ತಂತ್ರಜ್ಞಾನ ಜಾರಿಗೆ ತಡೆ ನೀಡಬೇಕು ಎಂದು ಕೋರಿದ್ದರು. ಆದರೆ ಜೂಹಿ ಚಾವ್ಲಾ ಅವರ ಈ ಅರ್ಜಿಯನ್ನು ಪ್ರಚಾರಕ್ಕಾಗಿ ಅರ್ಜಿ ಸಲ್ಲಿಸಿದ್ದೀರಿ ಎಂದು ಕೋರ್ಟ್ ಅರ್ಜಿಯನ್ನು ವಜಾಗೊಳಿಸಿ 20 ಲಕ್ಷ ರೂ ದಂಡ ವಿಧಿಸಿತ್ತು. ಅದಲ್ಲದೇ ವೀಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಅರ್ಜಿದಾರರ ವಿಚಾರಣೆ ನಡೆಸಿದ್ದು, ಈ ವಿಚಾರಣೆಯ ಲಿಂಕ್‍ನ್ನು ಜೂಹಿ ಚಾವ್ಲಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದರಿಂದಾಗಿ ಮೂರು ಬಾರಿ ವಿಚಾರಣೆಗೆ ಅಡ್ಡಿಯಾಗಿತ್ತು. ಅದಲ್ಲದೇ ಅಭಿಮಾಯೋರ್ವ ನಟಿಯ ಹಾಡು ಹಾಡಿ ವಿಚಾರಣೆಗೆ ಅಡ್ಡಿ ಪಡಿಸಿದ್ದು, ಆತನ ವಿರುದ್ಧವು ಕಾನೂನು ಕ್ರಮ ಕೈಗೊಳ್ಳುವಂತೆ ಕೋರ್ಟ್ ಸೂಚಿಸಿತ್ತು.

    ಈ ಎಲ್ಲಾ ಬೆಳವಣಿಗೆಯಿಂದ ಜೂಹಿ ಚಾವ್ಲಾ ತೀವ್ರ ಮುಜುಗರಕ್ಕೊಳಗಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಜೂಹಿ ಚಾವ್ಲಾ ವಿರುದ್ಧ ವ್ಯಾಪಕ ಟೀಕೆ ಮತ್ತು ಟ್ರೋಲ್‍ಗಳು ಹರಿದಾಡುತ್ತಿತ್ತು. ಈ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ ಎಂದು ಹೇಳುವ ಮೂಲಕ ಮತ್ತೆ 5ಜಿ ವಿರುದ್ಧ ಸಮರ ಸಾರಿದ್ದಾರೆ. ಇದನ್ನೂ ಓದಿ: 5ಜಿ ವಿರುದ್ಧ ಜೂಹಿ ಚಾವ್ಲಾ ಸಲ್ಲಿಸಿದ್ದ ಅರ್ಜಿ ವಜಾ- 20 ಲಕ್ಷ ದಂಡ ವಿಧಿಸಿದ ದೆಹಲಿ ಹೈ ಕೋರ್ಟ್

    ದೂರಿನಲ್ಲಿ ಏನಿದೆ?
    ಭಾರತದಲ್ಲಿ 5ಜಿಯನ್ನು ಜಾರಿಗೆ ತಂದರೆ ದೇಶದಲ್ಲಿರುವ ಯಾವುದೇ ವ್ಯಕ್ತಿ, ಪ್ರಾಣಿ, ಪಕ್ಷಿ, ಕೀಟ, ಸಸ್ಯ ಪ್ರಭೇದಗಳು 5ಜಿಯ ವಿಕಿರಣದಿಂದಾಗುವ ತೊಂದರೆಗಳನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ದಿನದ 24 ಗಂಟೆ, ವರ್ಷದ 365 ದಿನ, ಈಗಿರುವ ನೆಟ್‍ವರ್ಕ್ ವಿಕಿರಣಗಳಿಂದ ರೇಡಿಯೋ ಫ್ರಿಕ್ವೆನ್ಸಿ ವಿಕಿರಣ 10x ರಿಂದ 100x ಪಟ್ಟು ಹೆಚ್ಚಾಗಿರುತ್ತದೆ.

    5ಜಿ ಯೋಜನೆಗಳಿಂದಾಗಿ ಮನುಷ್ಯರ ಮೇಲೆ ಹಲವು ದುಷ್ಪರಿಣಾಮಗಳಿದ್ದು, ಮುಂದೆ ಬದಲಾಯಿಸಲು ಸಾಧ್ಯವಾಗದ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಮನುಷ್ಯರ ಮೇಲೆ ಮಾತ್ರವಲ್ಲದೇ ಭೂಮಿಯ ಮೇಲಿರುವ ಎಲ್ಲಾ ಪರಿಸರ ವ್ಯವಸ್ಥೆಗೆ ಇದರಿಂದ ತೊಂದರೆ ಎದುರಾಗುತ್ತದೆ.

    5ಜಿಯಿಂದ ಮಾನವಕುಲದ, ಪುರುಷ, ಮಹಿಳೆ, ಮಗು, ವಯಸ್ಕ, ಶಿಶು, ಪ್ರಾಣಿ ಮತ್ತು ಎಲ್ಲಾ ವಿದಧ ಜೀವಿಗಳಿಗೂ ಇದರಿಂದ ಯಾವುದೇ ದುಷ್ಟರಿಣಾಮಗಳಿಲ್ಲ ಎಂದು ಪರೀಕ್ಷಿಸುವಂತೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಡಬೇಕೆಂದು ವಕೀಲರಾದ ದೀಪಕ್ ಖೋಸ್ಲಾ ಅವರ ಮೂಲಕ ಸಲ್ಲಿಸಲಾಗಿರುವ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

  • 5ಜಿ ವಿರುದ್ಧ ಜೂಹಿ ಚಾವ್ಲಾ ಸಲ್ಲಿಸಿದ್ದ ಅರ್ಜಿ ವಜಾ- 20 ಲಕ್ಷ ದಂಡ ವಿಧಿಸಿದ ದೆಹಲಿ ಹೈ ಕೋರ್ಟ್

    5ಜಿ ವಿರುದ್ಧ ಜೂಹಿ ಚಾವ್ಲಾ ಸಲ್ಲಿಸಿದ್ದ ಅರ್ಜಿ ವಜಾ- 20 ಲಕ್ಷ ದಂಡ ವಿಧಿಸಿದ ದೆಹಲಿ ಹೈ ಕೋರ್ಟ್

    – ಪ್ರಚಾರಕ್ಕಾಗಿ ಅರ್ಜಿ ಸಲ್ಲಿಸಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡ ಕೋರ್ಟ್

    ನವದೆಹಲಿ: ಭಾರತದಲ್ಲಿ 5ಜಿ ನೆಟ್‍ವರ್ಕ್ ಸ್ಥಾಪನೆ ವಿರುದ್ಧ ನಟಿ, ಪರಿಸರ ಹೋರಾಟಗಾರ್ತಿ ಜೂಹಿ ಚಾವ್ಲಾ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈ ಕೋರ್ಟ್ ವಜಾಗೊಳಿಸಿದೆ. ಅಲ್ಲದೆ ಅರ್ಜಿದಾರರು ‘ಕಾನೂನನ್ನು ದುರುಪಯೋಗಪಡಿಸಿಕೊಂಡಿದ್ದಾರೆ’ ಎಂದು 20 ಲಕ್ಷ ರೂ.ಗಳ ದಂಡ ವಿಧಿಸಿದೆ.

    ಜೂಹಿ ಚಾವ್ಲಾ, ಸಾಮಾಜಿಕ ಕಾರ್ಯಕರ್ತರಾದ ವೀರೇಶ್ ಮಲಿಕ್ ಹಾಗೂ ಟೀನಾ ವಚನಿ ಅವರು 5ಜಿ ತಂತ್ರಜ್ಞಾನದ ವಿರುದ್ಧ ಹೈ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. 5ಜಿ ತಂತ್ರಜ್ಞಾನದಿಂದಾಗಿ ಅಪಾಯಕಾರಿ ರೇಡಿಯೇಶನ್ ಮಾನವರ ಮೇಲೆ ಗಂಭೀರ ಪರಿಣಾಮ ಬೀರಬಹುದು. ಅಲ್ಲದೆ ಪರಿಸರ ವ್ಯವಸ್ಥೆಯನ್ನು ಶಾಶ್ವತವಾಗಿ ಹಾನಿಗೊಳಿಸಬಹುದು ಎಂದು ಅರ್ಜಿಯಲ್ಲಿ ತಿಳಿಸಿದ್ದರು. ಇದನ್ನೂ ಓದಿ: 5ಜಿ ನೆಟ್‍ವರ್ಕ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಜೂಹಿ ಚಾವ್ಲಾ

    ಅರ್ಜಿದಾರರ ವಾದವು ಅಸಹ್ಯಕರವಾಗಿದ್ದು, ಏನು ಹೇಳುತ್ತಿದ್ದಾರೆ ಎಂಬುದರ ಕುರಿತು ಅವರಿಗೇ ಜ್ಞಾನವಿಲ್ಲ. ಕೇವಲ ಪ್ರಚಾರಕ್ಕಾಗಿ ಈ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಜೆ.ಆರ್.ಮಿಧಾ ಅವರು ಚಾಟಿ ಬೀಸಿದರು.

    ನೇರವಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವ ಬದಲು ಟೆಲಿಕಾಂ ಇಲಾಖೆಯೊಂದಿಗೆ ಏಕೆ ಚರ್ಚಿಸಿಲ್ಲ ಎಂದು ನ್ಯಾಯಮೂರ್ತಿ ಮಿಧಾ ಅವರು ವಿಚಾರಣೆ ವೇಳೆ ಜೂಹಿ ಚಾವ್ಲಾ ಹಾಗೂ ಉಳಿದ ಇಬ್ಬರು ಅರ್ಜಿದಾರರನ್ನು ಪ್ರಶ್ನಿಸಿದರು. ಅಲ್ಲದೆ ನ್ಯಾಯಾಲಯಕ್ಕೆ ಬರುವ ಮೊದಲು ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು, ಚರ್ಚಿಸಿ ಎಂದು ಜೂಹಿ ಚಾವ್ಲಾ ಹಾಗೂ ಇತರ ಇಬ್ಬರು ಅರ್ಜಿದಾರರಿಗೆ ಸೂಚಿಸಿತು.

    ವೀಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಅರ್ಜಿದಾರರ ವಿಚಾರಣೆ ನಡೆಸಿದ್ದು, ಈ ವಿಚಾರಣೆಯ ಲಿಂಕ್‍ನ್ನು ಜೂಹಿ ಚಾವ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದರಿಂದಾಗಿ ಮೂರು ಬಾರಿ ವಿಚಾರಣೆಗೆ ಅಡ್ಡಿಯಾಗಿದೆ ಎಂದು ಕೋರ್ಟ್ ಹೇಳಿದೆ. ಅಲ್ಲದೆ ದೆಹಲಿ ಪೊಲೀಸರು ವ್ಯಕ್ತಿಗಳನ್ನು ಗುರುತಿಸಿ ಅಡ್ಡಿಪಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ.

    ದೂರಿನಲ್ಲಿ ಏನಿದೆ?
    ಭಾರತದಲ್ಲಿ 5ಜಿಯನ್ನು ಜಾರಿಗೆ ತಂದರೆ ದೇಶದಲ್ಲಿರುವ ಯಾವುದೇ ವ್ಯಕ್ತಿ, ಪ್ರಾಣಿ, ಪಕ್ಷಿ, ಕೀಟ, ಸಸ್ಯ ಪ್ರಭೇದಗಳು 5ಜಿಯ ವಿಕಿರಣದಿಂದಾಗುವ ತೊಂದರೆಗಳನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ದಿನದ 24 ಗಂಟೆ, ವರ್ಷದ 365 ದಿನ, ಈಗಿರುವ ನೆಟ್‍ವರ್ಕ್ ವಿಕಿರಣಗಳಿಂದ ರೇಡಿಯೋ ಫ್ರಿಕ್ವೆನ್ಸಿ ವಿಕಿರಣ 10x ರಿಂದ 100x ಪಟ್ಟು ಹೆಚ್ಚಾಗಿರುತ್ತದೆ.

    5ಜಿ ಯೋಜನೆಗಳಿಂದಾಗಿ ಮನುಷ್ಯರ ಮೇಲೆ ಹಲವು ದುಷ್ಪರಿಣಾಮಗಳಿದ್ದು, ಮುಂದೆ ಬದಲಾಯಿಸಲು ಸಾಧ್ಯವಾಗದ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಮನುಷ್ಯರ ಮೇಲೆ ಮಾತ್ರವಲ್ಲದೇ ಭೂಮಿಯ ಮೇಲಿರುವ ಎಲ್ಲಾ ಪರಿಸರ ವ್ಯವಸ್ಥೆಗೆ ಇದರಿಂದ ತೊಂದರೆ ಎದುರಾಗುತ್ತದೆ.

    5ಜಿಯಿಂದ ಮಾನವಕುಲದ, ಪುರುಷ, ಮಹಿಳೆ, ಮಗು, ವಯಸ್ಕ, ಶಿಶು, ಪ್ರಾಣಿ ಮತ್ತು ಎಲ್ಲಾ ವಿದಧ ಜೀವಿಗಳಿಗೂ ಇದರಿಂದ ಯಾವುದೇ ದುಷ್ಟರಿಣಾಮಗಳಿಲ್ಲ ಎಂದು ಪರೀಕ್ಷಿಸುವಂತೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಡಬೇಕೆಂದು ವಕೀಲರಾದ ದೀಪಕ್ ಖೋಸ್ಲಾ ಅವರ ಮೂಲಕ ಸಲ್ಲಿಸಲಾಗಿರುವ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

  • 5ಜಿ ನೆಟ್‍ವರ್ಕ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಜೂಹಿ ಚಾವ್ಲಾ

    5ಜಿ ನೆಟ್‍ವರ್ಕ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಜೂಹಿ ಚಾವ್ಲಾ

    ನವದೆಹಲಿ: ಭಾರತದಲ್ಲಿ 5ಜಿ ನೆಟ್‍ವರ್ಕ್ ಸ್ಥಾಪನೆಯ ವಿರುದ್ಧ ನಟಿ ಹಾಗೂ ಪರಿಸರವಾದಿ ಜೂಹಿ ಚಾವ್ಲಾ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 5ಜಿ ನೆಟ್‍ವರ್ಕ್‍ನಿಂದಾಗಿ ಮನುಷ್ಯರಿಗೆ, ಪ್ರಾಣಿ, ಪಕ್ಷಿ ಮತ್ತು ಸಸ್ಯ ಪ್ರಭೇದಗಳಿಗೆ ಸಮಸ್ಯೆಯಾಗುತ್ತದೆ ಎಂದು ದೂರಿದ್ದಾರೆ.

    ದೂರಿನಲ್ಲಿ ಏನಿದೆ?
    ಭಾರತದಲ್ಲಿ 5ಜಿಯನ್ನು ಜಾರಿಗೆ ತಂದರೆ ದೇಶದಲ್ಲಿರುವ ಯಾವುದೇ ವ್ಯಕ್ತಿ, ಪ್ರಾಣಿ, ಪಕ್ಷಿ, ಕೀಟ, ಸಸ್ಯ ಪ್ರಭೇದಗಳು 5ಜಿಯ ವಿಕಿರಣದಿಂದಾಗುವ ತೊಂದರೆಗಳನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ದಿನದ 24 ಗಂಟೆ, ವರ್ಷದ 365 ದಿನ, ಈಗಿರುವ ನೆಟ್‍ವರ್ಕ್ ವಿಕಿರಣಗಳಿಂದ ರೇಡಿಯೋ ಫ್ರಿಕ್ವೆನ್ಸಿ ವಿಕಿರಣ 10x ರಿಂದ 100x ಪಟ್ಟು ಹೆಚ್ಚಾಗಿರುತ್ತದೆ.ಇದನ್ನೂ ಓದಿ: ಬಂಡೀಪುರ ಪ್ರವಾಸ ಮಾಡಿ ಗಿಡ ನೆಟ್ಟ ಪ್ರೇಮಲೋಕ ಚೆಲುವೆ ಜೂಹಿ ಚಾವ್ಲಾ

    5ಜಿ ಯೋಜನೆಗಳಿಂದಾಗಿ ಮನುಷ್ಯರ ಮೇಲೆ ಹಲವು ದುಷ್ಪರಿಣಾಮಗಳಿದ್ದು, ಮುಂದೆ ಬದಲಾಯಿಸಲು ಸಾಧ್ಯವಾಗದ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಮನುಷ್ಯರ ಮೇಲೆ ಮಾತ್ರವಲ್ಲದೇ ಭೂಮಿಯ ಮೇಲಿರುವ ಎಲ್ಲಾ ಪರಿಸರ ವ್ಯವಸ್ಥೆಗೆ ಇದರಿಂದ ತೊಂದರೆ ಎದುರಾಗುತ್ತದೆ.

    5ಜಿಯಿಂದ ಮಾನವಕುಲದ, ಪುರುಷ, ಮಹಿಳೆ, ಮಗು, ವಯಸ್ಕ, ಶಿಶು, ಪ್ರಾಣಿ ಮತ್ತು ಎಲ್ಲಾ ವಿದಧ ಜೀವಿಗಳಿಗೂ ಇದರಿಂದ ಯಾವುದೇ ದುಷ್ಟರಿಣಾಮಗಳಿಲ್ಲ ಎಂದು ಪರೀಕ್ಷಿಸುವಂತೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಡಬೇಕೆಂದು ವಕೀಲರಾದ ದೀಪಕ್ ಖೋಸ್ಲಾ ಅವರ ಮೂಲಕ ಸಲ್ಲಿಸಲಾಗಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಭೂಮಿ ರಹಿತ ರೈತರ ಸಹಾಯಕ್ಕೆ ಮುಂದಾದ ಜೂಹಿ ಚಾವ್ಲಾ

    ಈ ಅರ್ಜಿಯನ್ನು ಪರಿಗಣಿಸಿದ ನ್ಯಾಯಮೂರ್ತಿ ಸಿ.ಹರಿಶಂಕರ್ ಅವರು ಮತ್ತೊಂದು ನ್ಯಾಯಪೀಠಕ್ಕೆ ವರ್ಗಾಯಿಸಿದ್ದು ಮಂಗಳವಾರ ವಿಚಾರಣೆ ನಡೆಯಲಿದೆ.

  • ನಟಿ ಜೂಹಿ ಚಾವ್ಲಾ ವಜ್ರದ ಕಿವಿಯೋಲೆ ಹುಡುಕಿ ಕೊಟ್ಟವ್ರಿಗೆ ಸಿಗಲಿದೆ ಭರ್ಜರಿ ಗಿಫ್ಟ್!

    ನಟಿ ಜೂಹಿ ಚಾವ್ಲಾ ವಜ್ರದ ಕಿವಿಯೋಲೆ ಹುಡುಕಿ ಕೊಟ್ಟವ್ರಿಗೆ ಸಿಗಲಿದೆ ಭರ್ಜರಿ ಗಿಫ್ಟ್!

    ಮುಂಬೈ: ಸದ್ಯ ಸಿನಿಮಾಗಳಿಂದ ದೂರ ಉಳಿದಿರುವ ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ಅವರ ವಜ್ರದ ಕಿವಿಯೋಲೆಯೊಂದು ಕಳೆದು ಹೋಗಿದ್ದು, ಹುಡುಕಿ ಕೊಡಬೇಕಾಗಿ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

    ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಕಿವಿಯೋಲೆಯೊಂದಿಗೆ ಪತ್ರವೊಂದನ್ನು ಹಂಚಿಕೊಂಡಿರುವ ‘ಪ್ರೇಮಲೋಕ’ ಸುಂದರಿ, ನನ್ನ ಡೈಮಂಡ್ ಕಿವಿಯೋಲೆಯೊಂದು ಭಾನುವಾರ ಕಳೆದು ಹೋಗಿದ್ದು, ಹುಡುಕಿ ಕೊಟ್ಟವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಈ ಕಿವಿಯೋಲೆಯನ್ನು ಕಳೆದ 15 ವರ್ಷಗಳಿಂದ ಧರಿಸುತ್ತಿರುವುದಾಗಿ ಉಲ್ಲೇಖ ಕೂಡ ಮಾಡಿದ್ದಾರೆ.

    ನಟಿ ಬರೆದುಕೊಂಡಿದ್ದೇನು..?
    ಇಂದು(ಭಾನುವಾರ) ಬೆಳಗ್ಗೆ ನಾನು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಲ್ಲೋ ನನ್ನ ವಜ್ರದ ಕಿವಿಯೋಲೆ ಬಿದ್ದಿದೆ. ಅದನ್ನು ಹುಡುಕಲು ಯಾರಾದರೂ ನನಗೆ ಸಹಾಯ ಮಾಡಿದರೆ ನಾನು ಖುಷಿಯಾಗುತ್ತೇನೆ. ಕಳೆದ 15 ವರ್ಷಗಳಿಂದ ಈ ಕಿವಿಯೋಲೆಯನ್ನು ನಾನು ಧರಿಸುತ್ತಿದ್ದೇನೆ. ಹೀಗಾಗಿ ಈ ಕಿವಿಯೋಲೆಯೊಂದಿಗೆ ನನಗೆ ಭಾವನಾತ್ಮಕ ವಿಚಾರವಿದೆ. ಹೀಗಾಗಿ ನನಗೆ ದಯವಿಟ್ಟು ಸಹಾಯ ಮಾಡಿ. ಅಲ್ಲದೆ ಡೈಮಂಡ್ ಕಿವಿಯೋಲೆ ಮತ್ತೆ ನನ್ನ ಕೈಸೇರಿದರೆ, ಅದನ್ನು ಹುಡುಕಿಕೊಟ್ಟವರಿಗೆ ಬಹುಮಾನವನ್ನು ನೀಡುವುದಾಗಿ ಜೂಹಿ ಘೋಷಿಸಿದ್ದಾರೆ.

    ಜೂಹಿ ಚಾವ್ಲಾ ಅವರು ಶಾಂತಿ ಕ್ರಾಂತಿ, ಪುಷ್ಪಕ ವಿಮಾನ, ರಣಧೀರ್ ಹಾಗೂ ಪ್ರೇಮಲೋಕ ಹೀಗೆ ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸುವ ಮೂಲಕ ಸ್ಯಾಂಡಲ್‍ವುಡ್ ನಲ್ಲೂ ಪ್ರಸಿದ್ಧಿ ಪಡೆದಿದ್ದಾರೆ. ಹಿಂದಿ, ಬಂಗಾಳಿ, ಪಂಜಾಬಿ, ಮಲಯಾಳಂ, ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸಿರುವ ಜೂಹಿ ಚಾವ್ಲಾ ಸದ್ಯ ಗಂಡ, ಮಕ್ಕಳ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ.